28 ಸೆಪ್ಟೆಂಬರ್ 2024 ರ ಪ್ರಚಲಿತ ವಿದ್ಯಮಾನಗಳು & ಪ್ರಮುಖ ರಸಪ್ರಶ್ನೆಗಳು
28th September 2024 Kannada Daily Current Affairs Question Answers Quiz For All Competitive Exams
28 ಸೆಪ್ಟೆಂಬರ್ 2024 ರ ಪ್ರಚಲಿತ ವಿದ್ಯಮಾನಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿವೆ. ಈ ಪ್ರಚಲಿತ ವಿದ್ಯಮಾನಗಳ ಕ್ವಿಜ್ ಅಥವಾ ರಸಪ್ರಶ್ನೆಗಳ ಬಹು ಆಯ್ಕೆಯ ಪ್ರಶ್ನೋತ್ತರಗಳು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಅತೀ ನಿರ್ಣಾಯಕವಾದ ಪಾತ್ರವನ್ನು ನಿರ್ವಹಿಸುತ್ತವೆ. ಈ ಪ್ರಚಲಿತ ವಿದ್ಯಮಾನಗಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ, ನೀವು ಇತ್ತೀಚಿನ ಪ್ರಮುಖ ಪ್ರಚಲಿತ ವಿದ್ಯಮಾನಗಳ ಕುರಿತು ಹಾಗೂ ಪ್ರಮುಖ ಜಾಗತಿಕ ಘಟನೆಗಳ ಕುರಿತು ಹೆಚ್ಚಿನ ಜ್ಞಾನವನ್ನು ಪಡೆಯಬಹುದು.
28 ಸೆಪ್ಟೆಂಬರ್ 2024 ರ ಪ್ರಚಲಿತ ವಿದ್ಯಮಾನಗಳ ರಸಪ್ರಶ್ನೆಯೊಂದಿಗೆ ಉತ್ತಮವಾಗಿ ರಚಿಸಲಾದ ಪ್ರಪಂಚದ ಪ್ರಮುಖ ಘಟನೆಗಳ ಅರಿವು ಹೊಂದುವ ಮೂಲಕ ನೀವುಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮವಾಗಿ ತಯಾರಾಗಬಹುದು.
28 ಸೆಪ್ಟೆಂಬರ್ 2024 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು
- ವಿಶ್ವ ಪರಿಸರ ಆರೋಗ್ಯ ದಿನ: ಪರಿಸರ ಆರೋಗ್ಯದ ಪ್ರಾಮುಖ್ಯತೆ ಮತ್ತು ಮಾನವ ಯೋಗಕ್ಷೇಮದ ಮೇಲೆ ಅದರ ಪ್ರಭಾವವನ್ನು ಒತ್ತಿಹೇಳುವ ವಿಶ್ವ ಪರಿಸರ ಆರೋಗ್ಯ ದಿನವನ್ನು ಸೆಪ್ಟೆಂಬರ್ 26 ರಂದು ಆಚರಿಸಲಾಗುತ್ತದೆ.
- ದೀಪಕ್ ಸಿ ಮೆಹ್ತಾ: ಕ್ರಿಕೆಟ್‌ಗೆ ಅವರ ಮಹತ್ವದ ಕೊಡುಗೆಗಳಿಗಾಗಿ ಐಸಿಸಿ ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್ 2023 ನೀಡಿ ಗೌರವಿಸಲಾಗಿದೆ.
- ಎಸ್. ಪಿ. ಧಾರ್ಕರ್: ವಾಯುಪಡೆಯ ಮುಂದಿನ ಉಪ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ.
- ಗಿರಿರಾಜ್ ಸಿಂಗ್: ಡಿಜಿಟಲ್ ಆಡಳಿತ ಮತ್ತು AI ಏಕೀಕರಣವನ್ನು ಹೆಚ್ಚಿಸಲು ವೆಬ್ ಪೋರ್ಟಲ್ 'ಪರಿಧಿ 24×25' ಮತ್ತು AI ಟಕ್ಸಾನಮಿ ಇ-ಪುಸ್ತಕವನ್ನು ಪ್ರಾರಂಭಿಸಿದರು.
- ಭಾರತ-ಈಜಿಪ್ಟ್ ಜಂಟಿ ವ್ಯಾಪಾರ ಸಮಿತಿ: ಆರನೇ ಅಧಿವೇಶನವು ನವದೆಹಲಿಯಲ್ಲಿ ನಡೆಯಿತು. ಇದು ಎರಡು ರಾಷ್ಟ್ರಗಳ ನಡುವಿನ ವ್ಯಾಪಾರ ಸಂಬಂಧಗಳು ಮತ್ತು ಆರ್ಥಿಕ ಸಹಕಾರವನ್ನು ಬಲಪಡಿಸುತ್ತದೆ.
- ತ್ರಿಪುರಾದಲ್ಲಿ CM-SATH ಯೋಜನೆ: ಅರ್ಹ ವಿದ್ಯಾರ್ಥಿಗಳನ್ನು ಬೆಂಬಲಿಸಲು, ರಾಜ್ಯದಲ್ಲಿ ಶೈಕ್ಷಣಿಕ ಉತ್ಕೃಷ್ಟತೆಯನ್ನು ಉತ್ತೇಜಿಸಲು ಪುರಾದಲ್ಲಿ CM-SATH ಯೋಜನೆ ಪ್ರಾರಂಭಿಸಲಾಗಿದೆ.
- CSIR ಸಂಸ್ಥಾಪನಾ ದಿನ: ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿಯ 83 ನೇ ಸಂಸ್ಥಾಪನಾ ದಿನವನ್ನು ಸೆಪ್ಟೆಂಬರ್ 26 ರಂದು ಆಚರಿಸಲಾಯಿತು. ಇದು ದಶಕಗಳ ವೈಜ್ಞಾನಿಕ ಆವಿಷ್ಕಾರ ಮತ್ತು ಸಂಶೋಧನೆಯನ್ನು ಗುರುತಿಸುತ್ತದೆ.
- ಬಿಹಾರದ ವನ್ಯಜೀವಿ ನಿರ್ವಹಣೆ: ಕೃಷಿ ಕಾಳಜಿಯನ್ನು ಪರಿಹರಿಸಲು, ಬೆಳೆಗಳನ್ನು ಹಾನಿಯಿಂದ ರಕ್ಷಿಸಲು ನೀಲಗಾಯ್ ಮತ್ತು ಕಾಡುಹಂದಿಗಳನ್ನು ಕೊಲ್ಲಲು ರಾಜ್ಯ ಸರ್ಕಾರ ನಿರ್ಧರಿಸಿದೆ.
- ಕಮಲ್ ಚಾವ್ಲಾ: ಸ್ನೂಕರ್‌ನಲ್ಲಿ ತಮ್ಮ ಅಸಾಧಾರಣ ಕೌಶಲ್ಯಗಳನ್ನು ಪ್ರದರ್ಶಿಸುವ ಮೂಲಕ ಉಲಾನ್‌ಬಾತರ್‌ನಲ್ಲಿ IBSF ವಿಶ್ವ 6-RED ಚಾಂಪಿಯನ್‌ಶಿಪ್ ನ್ನು ಕಮಲ್ ಚಾವ್ಲಾ ಅವರು ಗೆದ್ದರು.
- ಭಾರತದ ಆರ್ಥಿಕ ಬೆಳವಣಿಗೆಯ ಪ್ರಕ್ಷೇಪಣ: S&P ಗ್ಲೋಬಲ್ ರೇಟಿಂಗ್ 2024-25 ರ ಆರ್ಥಿಕ ವರ್ಷದಲ್ಲಿ ಭಾರತದ ಆರ್ಥಿಕ ಬೆಳವಣಿಗೆಯನ್ನು 6.8% ಎಂದು ಅಂದಾಜಿಸಿದೆ, ಇದು ಸಕಾರಾತ್ಮಕ ಆರ್ಥಿಕ ದೃಷ್ಟಿಕೋನವನ್ನು ಪ್ರತಿಬಿಂಬಿಸುತ್ತದೆ.
- ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್: ಮಧ್ಯಪ್ರದೇಶದ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕಗೊಂಡಿದ್ದು, ಅವರ ನ್ಯಾಯಾಂಗ ಪರಿಣತಿಯನ್ನು ರಾಜ್ಯಕ್ಕೆ ತರಲಾಗಿದೆ.
- ಮಧ್ಯಪ್ರದೇಶದಲ್ಲಿ ಪೇಪರ್ ಲೆಸ್ ಚುನಾವಣೆ: ದೇಶದ ಮೊದಲ ಪೇಪರ್ ಲೆಸ್ ಚುನಾವಣೆಯನ್ನು ರಾಜ್ಯ ನಡೆಸಿದೆ.
- ನ್ಯೂಯಾರ್ಕ್‌ನಲ್ಲಿ ವೈಎಸ್ ಜೈಶಂಕರ್: ಎಲ್-69 ಮತ್ತು ಸಿ-10 ರಾಷ್ಟ್ರಗಳ ಗುಂಪುಗಳ ಮೊದಲ ಜಂಟಿ ಸಚಿವರ ಸಭೆಯಲ್ಲಿ ಭಾಗವಹಿಸಿ, ಜಾಗತಿಕ ಸಹಕಾರ ಮತ್ತು ನೀತಿಯನ್ನು ವೈಎಸ್ ಜೈಶಂಕರ್ ಅವರು ಚರ್ಚಿಸಿದರು.
- ಶಾ ಆಲಂ ಸ್ಟೇಡಿಯಂ ಡೆಮಾಲಿಷನ್: ಮಲೇಷ್ಯಾದ ಐಕಾನಿಕ್ ಸ್ಟೇಡಿಯಂ ಅನ್ನು ಕೆಡವಲಾಯಿತು, ಇದು ಕ್ರೀಡಾ ಸ್ಥಳದ ಯುಗವನ್ನು ಕೊನೆಗೊಳಿಸಿತು.
- ಜಾಗತಿಕ ಸೂಚ್ಯಂಕ 2024 ರಲ್ಲಿ ಸ್ವಿಟ್ಜರ್ಲೆಂಡ್ ಅಗ್ರಸ್ಥಾನದಲ್ಲಿದೆ: ಇತ್ತೀಚೆಗೆ ಬಿಡುಗಡೆಯಾದ ಗ್ಲೋಬಲ್ ಇಂಡೆಕ್ಸ್ 2024 ರಲ್ಲಿ ಸ್ವಿಟ್ಜರ್ಲೆಂಡ್ ಮೊದಲ ಸ್ಥಾನದಲ್ಲಿದೆ, ವಿವಿಧ ಕ್ಷೇತ್ರಗಳಲ್ಲಿ ಅದರ ಶ್ರೇಷ್ಠತೆಯನ್ನು ಎತ್ತಿ ತೋರಿಸುತ್ತದೆ.
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ 28 ಸೆಪ್ಟೆಂಬರ್ 2024 ಪ್ರತಿದಿನದ ಟಾಪ್ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆ ಕ್ವಿಜ್
28 ಸೆಪ್ಟೆಂಬರ್ 2024 ಪ್ರತಿದಿನದ ಟಾಪ್ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆ ಕ್ವಿಜ್ :
28 ಸೆಪ್ಟೆಂಬರ್ 2024 ಕನ್ನಡದಲ್ಲಿ ಪ್ರತಿದಿನದ ಪ್ರಚಲಿತ ವಿದ್ಯಮಾನಗಳು:
28 ಸೆಪ್ಟೆಂಬರ್ 2024 ಪ್ರತಿದಿನದ ಟಾಪ್ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆ ಕ್ವಿಜ್
28 ಸೆಪ್ಟೆಂಬರ್ 2024 ಪ್ರತಿದಿನದ ಟಾಪ್ ಪ್ರಚಲಿತ ವಿದ್ಯಮಾನಗಳ ಪ್ರಶ್ನೋತ್ತರಗಳ ರಸಪ್ರಶ್ನೆ ಕ್ವಿಜ್
Total Questions: 15
you'll have 60 second to answer each question.
Quiz Result
Total Questions:
Attempt:
Correct:
Wrong:
Percentage:
Quiz Answers
1. ಇತ್ತೀಚೆಗೆ ಯಾವ ದಿನದಂದು 'ವಿಶ್ವ ಪರಿಸರ ಆರೋಗ್ಯ ದಿನ' ಆಚರಿಸಲಾಯಿತು?
26 ಸೆಪ್ಟೆಂಬರ್
2. ಕೆಳಗಿನವರಲ್ಲಿ ಯಾರಿಗೆ ICC ಲೈಫ್ ಟೈಮ್ ಅಚೀವ್‌ಮೆಂಟ್ ಅವಾರ್ಡ್ 2023 ನೀಡಲಾಗಿದೆ?
ದೀಪಕ್ ಸಿ ಮೆಹ್ತಾ
3. ಕೆಳಗಿನವರಲ್ಲಿ ಯಾರು ವಾಯುಪಡೆಯ ಮುಂದಿನ ಉಪ ಮುಖ್ಯಸ್ಥರಾಗಿ ನೇಮಕಗೊಂಡಿದ್ದಾರೆ?
ಎಸ್. ಪಿ. ಧಾರ್ಕರ್
4. ಕೆಳಗಿನ ಯಾವ ಕೇಂದ್ರ ಸಚಿವರು ವೆಬ್ ಪೋರ್ಟಲ್ 'ಪರಿಧಿ 24×25' ಮತ್ತು AI ಟ್ಯಾಕ್ಸಾನಮಿ ಇ-ಪುಸ್ತಕವನ್ನು ಪ್ರಾರಂಭಿಸಿದ್ದಾರೆ?
ಗಿರಿರಾಜ್ ಸಿಂಗ್
5. ಈ ಕೆಳಗಿನ ಯಾವ ದೇಶವು ಭಾರತದ ನಡುವಿನ ಜಂಟಿ ವ್ಯಾಪಾರ ಸಮಿತಿಯ ಆರನೇ ಅಧಿವೇಶನವು ನವದೆಹಲಿಯಲ್ಲಿ ನಡೆಯಿತು?
ಈಜಿಪ್ಟ್
6. ಕೆಳಗಿನ ಯಾವ ರಾಜ್ಯದಲ್ಲಿ, CM-SATH ಯೋಜನೆಯನ್ನು ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬೆಂಬಲ ನೀಡಲು ಪ್ರಾರಂಭಿಸಲಾಗಿದೆ?
ತ್ರಿಪುರ
7. ಇತ್ತೀಚೆಗೆ, CSIR (ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ) ಯ 83ನೇ 'ಸ್ಥಾಪನಾ ದಿನ'ವನ್ನು ಈ ಕೆಳಗಿನ ಯಾವ ದಿನದಂದು ಆಚರಿಸಲಾಯಿತು?
26 ಸೆಪ್ಟೆಂಬರ್
8. ಈ ಕೆಳಗಿನ ಯಾವ ರಾಜ್ಯ ಸರ್ಕಾರವು ಬೆಳೆಗಳನ್ನು ಹಾನಿ ಮಾಡುವ ನೀಲಗಾಯ್ ಮತ್ತು ಕಾಡುಹಂದಿಗಳನ್ನು ಕೊಲ್ಲುತ್ತದೆ?
ಬಿಹಾರ
9. ಕೆಳಗಿನವರಲ್ಲಿ ಯಾರು ಉಲಾನ್‌ಬಾತರ್‌ನಲ್ಲಿ 'IBSF ವರ್ಲ್ಡ್ 6-RED ಚಾಂಪಿಯನ್‌ಶಿಪ್ ಗೆದ್ದಿದ್ದಾರೆ?
ಕಮಲ್ ಚಾವ್ಲಾ
10. S&P ಗ್ಲೋಬಲ್ ರೇಟಿಂಗ್ ಭಾರತದ ಆರ್ಥಿಕ ಬೆಳವಣಿಗೆಯನ್ನು 2024-25 ರ ಆರ್ಥಿಕ ವರ್ಷದಲ್ಲಿ ಈ ಕೆಳಗಿನವುಗಳಲ್ಲಿ ಎಷ್ಟು ಶೇಕಡಾ ಎಂದು ಅಂದಾಜಿಸಿದೆ?
6.8%
11. ಇತ್ತೀಚೆಗೆ ನ್ಯಾಯಮೂರ್ತಿ 'ಸುರೇಶ್ ಕುಮಾರ್ ಕೈಟ್' ಅವರು ಈ ಕೆಳಗಿನ ಯಾವ ರಾಜ್ಯಗಳ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದಾರೆ?
ಮಧ್ಯಪ್ರದೇಶ
12. ಈ ಕೆಳಗಿನ ಯಾವ ರಾಜ್ಯದಲ್ಲಿ ದೇಶದ ಮೊದಲ ಕಾಗದರಹಿತ ಚುನಾವಣೆಯನ್ನು ನಡೆಸಲಾಗಿದೆ?
ಮಧ್ಯಪ್ರದೇಶ
13. L-69 ಮತ್ತು C-10 ರಾಷ್ಟ್ರ ಗುಂಪುಗಳ ಮೊದಲ ಜಂಟಿ ಸಚಿವರ ಸಭೆಯಲ್ಲಿ ಈ ಕೆಳಗಿನ ಯಾವ ವಿದೇಶಾಂಗ ಸಚಿವ ವೈಎಸ್ ಜೈಶಂಕರ್ ಭಾಗವಹಿಸಿದ್ದಾರೆ?
ನ್ಯೂಯಾರ್ಕ್
14. ಈ ಕೆಳಗಿನ ಯಾವ ದೇಶದ "ಶಾ ಆಲಂ ಸ್ಟೇಡಿಯಂ" ಅನ್ನು ಕೆಡವಲಾಗಿದೆ?
ಮಲೇಷ್ಯಾ
15. ಈ ಕೆಳಗಿನ ಯಾವ ದೇಶವು ಇತ್ತೀಚೆಗೆ ಬಿಡುಗಡೆಯಾದ ಜಾಗತಿಕ ಸೂಚ್ಯಂಕ 2024 ರಲ್ಲಿ ಅಗ್ರಸ್ಥಾನದಲ್ಲಿದೆ?
ಸ್ವಿಟ್ಜರ್ಲೆಂಡ್
No comments:
Post a Comment
If you have any doubts please let me know