123 ಬೋಧಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ NCERT: NCERT Jobs
ಆತ್ಮೀಯ ಸ್ನೇಹತರೇ
ಎಲ್ಲರಿಗೂ ನಮಸ್ಕಾರ. ಸರ್ಕಾರಿ ಉದ್ಯೋಗದ ನಿರೀಕ್ಷೆಯಲ್ಲಿರುವ ಎಲ್ಲಾ ಅಭ್ಯರ್ಥಿಗಳಿಗೆ ಇಲ್ಲಿದೆ
ಸಿಹಿ ಸುದ್ದಿ. 123 ಬೋಧಕ ಹುದ್ದೆಗಳ
ನೇಮಕಾತಿಗಾಗಿ ಎನ್.ಸಿ.ಇ.ಆರ್.ಟಿ ಅರ್ಜಿ ಆಹ್ವಾನಿಸಿದ್ದು, ನಿಗದಿತ ವಿದ್ಯಾರ್ಹತೆ ಹೊಂದಿರುವ ಆಸಕ್ತ ಅಭ್ಯರ್ಥಿಗಳು ಅರ್ಜಿ
ಸಲ್ಲಿಸಬಹುದು. ಈ ಉದ್ಯೋಗಕ್ಕೆ ಅರ್ಜಿ ಸಲ್ಲಿಸಿ ಆಯ್ಕೆಯಾಗುವ ಅಭ್ಯರ್ಥಿಗಳು Rs.57,700 ದಿಂದ 1,44,200 ವರೆಗೆ ವೇತನ ಪಡೆಯಲಿದ್ದಾರೆ.
ಈಗಾಗಲೇ ತಿಳಿಸಿದಂತೆ
ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಿ, ಉದ್ಯೋಗಕ್ಕೆ
ಸೇರಿಕೊಳ್ಳುವ ಅಭ್ಯರ್ಥಿಗಳು ಮಾಸಿಕ Rs.57,700 - Rs.1,44,200 ವರೆಗೆ ವೇತನ ಶ್ರೇಣಿಯ ವೇತನವನ್ನು ಮತ್ತು ಕಾಲಕಾಲಕ್ಕೆ ನೀಡಲಾಗುವ
ಎಲ್ಲಾ ಭತ್ಯೆಗಳನ್ನು ಪಡೆಯಲು ಅರ್ಹರಾಗುತ್ತಾರೆ.
ಸದರಿ ಬೋಧಕ
ಹುದ್ದೆಗಳಲ್ಲಿ ಕಾರ್ಯನಿರ್ವಹಿಸಲು ಆಸಕ್ತರಿರುವ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ
ಸಲ್ಲಿಸಬಹುದಾಗಿದ್ದು. ಸದರಿ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸಮಗ್ರ ಮಾಹಿತಿಯನ್ನು
ಸಂಗ್ರಹಿಸಿ ನಾವಿಲ್ಲಿ ನೀಡುತ್ತಿದ್ದೇವೆ.
123 ಬೋಧಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ NCERT ಉದ್ಯೋಗದ ಹೈಲೈಟ್ಸ್:
ಎನ್‌ಸಿಇಆರ್‌ಟಿ ಇಂದ
ಜಾಬ್ ಆಫರ್.
Rs.57,700 - Rs.1,44,200 ವರೆಗೆ ವೇತನ ನೀಡಲಾಗುವ ಅಕಾಡೆಮಿಕ್ ಪೋಸ್ಟ್‌ಗಳ ನೇಮಕ.
ಒಟ್ಟು 123 ಹುದ್ದೆಗಳಿವೆ.
ರಾಷ್ಟ್ರೀಯ ಶಿಕ್ಷಣ
ಸಂಶೋಧನೆ ಮತ್ತು ತರಬೇತಿ ಮಂಡಳಿ (ಎನ್‌ಸಿಇಆರ್‌ಟಿ) ವಿವಿಧ ಬೋಧಕ ಹುದ್ದೆಗಳ ನೇಮಕಾತಿಗೆ
ನೋಟಿಫಿಕೇಶನ್ ಬಿಡುಗಡೆ ಮಾಡಿದೆ. ವಿವಿಧ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಜತೆಗೆ ಎನ್‌ಇಟಿ,
ಎಸ್‌ಎಲ್‌ಇಟಿ, ಪಿಹೆಚ್‌ಡಿ ಅರ್ಹತೆ ಪಡೆದಿರುವವರು ಸರ್ಕಾರಿ ಸಂಸ್ಥೆಗಳಲ್ಲಿ ಉದ್ಯೋಗ
ಮಾಡಲು ಒಂದು ಸದಾವಕಾಶಕ್ಕಾಗಿ ಕಾಯುತ್ತಿದ್ದರೆ ಈಗಲೇ ನೀವು ಅರ್ಜಿ ಸಲ್ಲಿಸಿ. ಹುದ್ದೆಗಳ ಕುರಿತ
ಇನ್ನಷ್ಟು ಡೀಟೇಲ್ಸ್ ಕೆಳಗಿನಂತಿದೆ ನೋಡಿ.
ನೇಮಕಾತಿ ಮಾಡುವ
ಸಂಸ್ಥೆ : ಸದರಿ ಹುದ್ದೆಗಳಿಗೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯು ನೇಮಕಾತಿ
ಪ್ರಾಧಿಕಾರವಾಗಿದೆ.
ಹುದ್ದೆಗಳ ಹೆಸರು :
ಪ್ರೊಫೆಸರ್, ಅಸೋಸಿಯೇಟ್
ಪ್ರೊಫೆಸರ್, ಅಸಿಸ್ಟಂಟ್
ಪ್ರೊಫೆಸರ್
ಒಟ್ಟು ಹುದ್ದೆಗಳ
ಸಂಖ್ಯೆ : 123
ಎನ್‌ಸಿಇಆರ್‌ಟಿ ಖಾಲಿ ಬೋಧಕ ಹುದ್ದೆಗಳ ವಿವರ
ಪ್ರೊಫೆಸರ್ - 33
ಅಸೋಸಿಯೇಟ್
ಪ್ರೊಫೆಸರ್ - 58
ಅಸಿಸ್ಟಂಟ್
ಪ್ರೊಫೆಸರ್ - 32
ಈ ಹುದ್ದೆಗಳನ್ನು
ನವದೆಹಲಿ, ಅಜ್ಮೀರ್, ಭೂಪಾಲ್, ಭುವನೇಶ್ವರ್,
ಮೈಸೂರು, ಶಿಲ್ಲಾಂಗ್, ಮಂಡಳಿಯ ಇತರೆ ಘಟಕಗಳಲ್ಲಿ ನೇಮಕ ಮಾಡಲಾಗುತ್ತದೆ.
ಸದರಿ ಬೋಧಕ ಹುದ್ದೆಗಳ
ಪೈಕಿ ಈ ಕೆಳಗಿನ ಪ್ರಮುಖ ವಿಷಯಗಳಲ್ಲಿ ವಿಶೇಷ ಪರಿಣತಿ ಹೊಂದಿರುವ ಅಭ್ಯರ್ಥಿಗಳನ್ನು ಆಯ್ಕೆ
ಮಾಡಿಕೊಳ್ಳಲಾಗುತ್ತದೆ. ಉದಾಹರಣೆಗೆ ಇತಿಹಾಸ, ಸಮಾಜಶಾಸ್ತ್ರ, ರಾಜ್ಯಶಾಸ್ತ್ರ,
ಶಿಕ್ಷಣ, ಉರ್ದು, ಜನಸಂಖ್ಯಾ ಅಧ್ಯಯನ,
ಭೂಗೋಳಶಾಸ್ತ್ರ, ಹಾಸ್ಪಿಟಾಲಿಟಿ, ಟ್ರಾವೆಲ್ ಮತ್ತು ಟೂರಿಸಂ, ಆಹಾರ ತಂತ್ರಜ್ಞಾನ
ಮತ್ತು ಸಂಸ್ಕರಣೆ, ಸಿವಿಲ್
ಇಂಜಿನಿಯರಿಂಗ್, ಮನಃಶಾಸ್ತ್ರ,
ಹಿಂದಿ, ಅರ್ಥಶಾಸ್ತ್ರ, ಬಾಟನಿ, ಕೆಮಿಸ್ಟ್ರಿ, ಮಕ್ಕಳ ಅಭಿವೃದ್ಧಿ, ಇಂಗ್ಲಿಷ್, ಭಾಷಾ ಶಿಕ್ಷಣ,
ಭೌತಶಾಸ್ತ್ರ, ಕಲೆ, ಕೃಷಿ, ಗಣಿತ, ಗೃಹ ವಿಜ್ಞಾನ ಸೇರಿದಂತೆ ರೀತಿ ಹಲವಾರು
ವಿಷಯಗಳಲ್ಲಿ ವಿಶೇಷವಾದ ಶೈಕ್ಷಣಿಕ ವಿದ್ಯಾರ್ಹತೆಯನ್ನು ಹೊಂದಿರುವ ಅಭ್ಯರ್ಥಿಗಳ ನೇಮಕ
ಮಾಡಲಾಗುತ್ತದೆ.
123 ಬೋಧಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ NCERT: ಎನ್‌ಸಿಇಆರ್‌ಟಿ ಬೋಧಕ ಹುದ್ದೆಗಳ ವೇತನ ಶ್ರೇಣಿ ವಿವರ
ಪ್ರೊಫೆಸರ್
ಹುದ್ದೆಗೆ Rs.1,44,200 (ಪೇ ಲೆವೆಲ್ 14)
ಅಸೋಸಿಯೇಟ್
ಪ್ರೊಫೆಸರ್ ಹುದ್ದೆಗೆ Rs.1,31,400 (ಪೇ ಲೆವೆಲ್ 13)
ಅಸಿಸ್ಟಂಟ್
ಪ್ರೊಫೆಸರ್ ಹುದ್ದೆಗೆ Rs.57,700. (ಅಕಾಡೆಮಿಕ್ ಪೇ
ಲೆವೆಲ್ 10)
123 ಬೋಧಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ NCERT : ಎನ್‌ಸಿಇಆರ್‌ಟಿ ಬೋಧಕ ಹುದ್ದೆಗಳ ವಿದ್ಯಾರ್ಹತೆ ವಿವರ
ಹುದ್ದೆ ಖಾಲಿ ಇರುವ
ಬೋಧಕ ವಿಷಯದಲ್ಲಿ ಸ್ನಾತಕೋತ್ತರ ಪದವಿ ಜತೆಗೆ ಪಿಹೆಚ್‌ಡಿ, ಎನ್‌ಇಟಿ, ಎಸ್‌ಎಲ್‌ಇಟಿ ಪಾಸ್
ಆಗಿರಬೇಕೆಂಬ ನಿಯಮವಿದೆ.
ಜತೆಗೆ ರಾಷ್ಟ್ರೀಯ
ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿ ನಿಗದಿಪಡಿಸಿದ ಇನ್ನಿತರೆ ಕಾರ್ಯಾನುಭವ ಹಾಗೂ ವಯಸ್ಸಿನ
ಅರ್ಹತೆಗಳನ್ನು ಹೊಂದಿರಬೇಕು.
123 ಬೋಧಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ NCERT: ಅರ್ಜಿ ಶುಲ್ಕದ ವಿವರ
ಸಾಮಾನ್ಯ ಅರ್ಹತೆಯ
(ಜನರಲ್ ಮೆರಿಟ್) ಅಭ್ಯರ್ಥಿಗಳಿಗೆ ರೂ.1000.
ಇತರೆ ಹಿಂದುಳಿದ
ವರ್ಗಗಳ ಅಭ್ಯರ್ಥಿಗಳಿಗೆ ರೂ.1000.
ಸದರಿ ಹುದ್ದೆಗಳ
ನೇಮಕಾತಿಗೆ ಅರ್ಜಿ ಸಲ್ಲಿಸುವ ಎಸ್.ಸಿ ಮತ್ತು ಎಸ್.ಟಿ ಅಭ್ಯರ್ಥಿಗಳಿಗೆ ಶುಲ್ಕದಿಂದ ವಿನಾಯತಿ
ನೀಡಲಾಗಿದೆ.
123 ಬೋಧಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ NCERT: ಅರ್ಜಿ ಸಲ್ಲಿಸುವ ದಿನಾಂಕಗಳ ಮಾಹಿತಿ:
ಎನ್‌ಸಿಇಆರ್‌ಟಿ ಬೋಧಕ
ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕೊನೆ ದಿನಾಂಕ: 27-08-2024 ರ ಸಂಜೆ 05-00 ಗಂಟೆವರೆಗೆ ನಿಗದಿಪಡಿಸಲಾಗಿದೆ. ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಅರ್ಜಿ
ಸಲ್ಲಿಸಬಹುದಾಗಿದೆ.
123 ಬೋಧಕ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿದ NCERT: ಆಯ್ಕೆ ವಿಧಾನ ಕುರಿತಾದ ಮಾಹಿತಿ ಇಲ್ಲಿದೆ:
ಸದರಿ 123 ಬೋಧಕ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸುವ
ವಿಧಾನವು ಬಹಳಷ್ಟು ಸುಲಭವಾಗಿದ್ದು, ಅಭ್ಯರ್ಥಿಗಳು
ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಮತ್ತು ತರಬೇತಿ ಮಂಡಳಿಯ ವೆಬ್ ಪೋರ್ಟಲ್ ವಿಳಾಸ https://ncertrec.samarth.edu.in/
ಗೆ ಭೇಟಿ ನೀಡುವ ಮೂಲಕ, ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಬೇಕು.
ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್ ಮಾಡಿ: Click here to Apply
ಹೆಚ್ಚಿನ ಉದ್ಯೋಗ ಸುದ್ದಿಗಳಿಗೆ ಪ್ರತಿದಿನ ಭೇಟಿ ನೀಡಿ: Visit
No comments:
Post a Comment
If you have any doubts please let me know