6,128 ಐಬಿಪಿಎಸ್ ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆ ಪ್ರವೇಶ ಪತ್ರ ಡೌನ್‌ಲೋಡ್ ಮಾಡಿಕೊಳ್ಳಿ
ಆತ್ಮೀಯ ಸ್ನೇಹಿತರೇ 2025-26ನೇ ಸಾಲಿನಲ್ಲಿ ಖಾಲಿ ಆಗಲಿರುವ ವಿವಿಧ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿನ ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ಜೂನ್ ತಿಂಗಳಲ್ಲಿ ಅಧಿಸೂಚನೆ ಹೊರಡಿಸಿತ್ತು. ಸದರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳುವ ಸಲುವಾಗಿ ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ಆಯ್ಕೆ ಪ್ರಕ್ರಿಯೆಯ ಮೊದಲ ಹಂತವಾದ ಪ್ರಿಲಿಮ್ಸ್ ಪರೀಕ್ಷೆಗೆ ಅಡ್ಮಿಟ್ ಕಾರ್ಡ್ (ಪ್ರವೇಶ ಪತ್ರವನ್ನು) ಅನ್ನು ಬಿಡುಗಡೆ ಮಾಡಿದೆ. ಅರ್ಜಿ ಹಾಕಿರುವವರು ಇಂದಿನಿಂದ ಡೌನ್‌ಲೋಡ್ ಮಾಡಿಕೊಳ್ಳಬಹುದು. ಡೌನಲೋಡ್ ಮಾಡಿಕೊಳ್ಳುವ ಲಿಂಕ್ ನ್ನು ಈ ಮುಂದೆ ನೀಡಲಾಗಿದೆ.
ಇವತ್ತಿನ ಸುದ್ದಿಯ ಹೈಲೈಟ್ಸ್ ಇಲ್ಲಿದೆ:
- ಐಬಿಪಿಎಸ್ ಕ್ಲರ್ಕ್ ಪರೀಕ್ಷೆಯ ದಿನಾಂಕ ನಿಗದಿ.
- ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ ಮಾಡಿದ ಐಬಿಪಿಎಸ್.
- ಒಟ್ಟಾರೆ 6128 ಹುದ್ದೆಗೆ ಪರೀಕ್ಷೆ ನಡೆಯಲಿದೆ.
ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ 2025-26ನೇ ಸಾಲಿನಲ್ಲಿ ಖಾಲಿ ಆಗಲಿರುವ 6,128 ಕ್ಲರ್ಕ್ ಹುದ್ದೆಗಳ ಭರ್ತಿಗೆ ಐಬಿಪಿಎಸ್ ನೇಮಕಾತಿ ಪರೀಕ್ಷಾ ಅಧಿಸೂಚನೆ ಬಿಡುಗಡೆ ಮಾಡಿತ್ತು. ಇದೀಗ ಸದರಿ ಹುದ್ದೆಗಳಿಗೆ ಅರ್ಜಿ ಹಾಕಿರುವ ಅಭ್ಯರ್ಥಿಗಳಿಗೆ ಆಯ್ಕೆ ಪ್ರಕ್ರಿಯೆಯ ಮೊದಲ ಹಂತ ಪ್ರಿಲಿಮ್ಸ್ ಪರೀಕ್ಷೆ ನಡೆಸಲು ದಿನಾಂಕ ನಿಗದಿ ಮಾಡಿದ್ದು, ಅಭ್ಯರ್ಥಿಗಳ ಪ್ರವೇಶ ಪತ್ರವನ್ನು ಸಹ ಬಿಡುಗಡೆ ಮಾಡಲಾಗಿದೆ. ಪರೀಕ್ಷೆ ತೆಗೆದುಕೊಂಡವರು ಇಂದಿನಿಂದ ಆಗಸ್ಟ್ 31, 2024 ರವರೆಗೆ ಕರೆ ಪತ್ರ ಡೌನ್‌ಲೋಡ್ ಮಾಡಿಕೊಳ್ಳಬಹುದು.
ವಿವಿಧ ಬ್ಯಾಂಕ್ ಗಳಲ್ಲಿ ಸೇವೆ ಸಲ್ಲಿಸುವ ಸಲುವಾಗಿ ಬ್ಯಾಂಕಿಂಗ್ ನೇಮಕಾತಿ ಸಂಸ್ಥೆಯು ಈ ಬಾರಿ ಒಟ್ಟಾರೆ 6,128 ಐಬಿಪಿಎಸ್ ಕ್ಲರ್ಕ್ ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನಿಸಿತ್ತು. ಈ 6,128 ಐಬಿಪಿಎಸ್ ಕ್ಲರ್ಕ್ ಹುದ್ದೆಗಳ ಪೈಕಿ ಒಟ್ಟು 457 ಹುದ್ದೆಗಳನ್ನು ಕರ್ನಾಟಕದ ವಿವಿಧ ಬ್ಯಾಂಕ್ ಗಳಿಗೆ ಮೀಸಲಿಡಲಾಗಿದೆ. ಕರ್ನಾಟಕದ ಹಾಗೂ ದೇಶಾದ್ಯಂತ ಈ ಹುದ್ದೆಗೆ ಅರ್ಜಿ ಸಲ್ಲಿಸಿರುವ ಲ್ಲಾ ಅಭ್ಯರ್ಥಿಗಳು ಈ ಕೆಳಗೆ ವಿವರಿಸಿರುವ ವಿಧಾನದ ಮೂಲಕ ತಮ್ಮ ಪ್ರವೇಶ ಪತ್ರವನ್ನು ಡೌನಲೋಡ್ ಮಾಡಿಕೊಳ್ಳಬಹುದಾಗಿದೆ.
ಈಗಾಗಲೇ ತಿಳಿಸಿದಂತೆ ಐಬಿಪಿಎಸ್ ಕ್ಲರ್ಕ್ ಪ್ರಿಲಿಮ್ಸ್ ಪರೀಕ್ಷೆಯನ್ನು ಆಗಸ್ಟ್ 24 ರಿಂದ 31, 2024 ರವರೆಗೆ ನಡೆಸಲಾಗುತ್ತದೆ. ಆದಕಾರಣ ಅಭ್ಯರ್ಥಿಗಳು ಈ ಕೂಡಲೇ ತಮ್ಮ ಪ್ರವೇಶಪತ್ರವನ್ನು ಡೌನಲೋಡ್ ಮಾಡಿಕೊಳ್ಳುವಂತೆ ಕೋರಲಾಗಿದೆ.
ಐಬಿಪಿಎಸ್ ಕ್ಲರ್ಕ್ ಪ್ರವೇಶ ಪತ್ರ ಡೌನ್‌ಲೋಡ್ ಹೇಗೆ? ಇಲ್ಲಿದೆ ಮಾಹಿತಿ
- ಐಬಿಪಿಎಸ್ ವೆಬ್‌ಸೈಟ್ https://www.ibps.in/ ಗೆ ಭೇಟಿ ನೀಡಿ.
- 'Recent Updates' ಎಂದಿರುವಲ್ಲಿ ಗಮನಿಸಿ.
- 'Online Preliminary Exam Call Letter for CRP-Clerk -XIV' ಎಂದಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಮತ್ತೊಂದು ವೆಬ್‌ಪೇಜ್ ತೆರೆಯುತ್ತದೆ. ಇಲ್ಲಿ ಅದೇ ಹೆಸರಿನ ಲಿಂಕ್ ಮೇಲೆ ಮತ್ತೊಮ್ಮೆ ಕ್ಲಿಕ್ ಮಾಡಿ.
- ನಂತರ ಮತ್ತೊಂದು ಪುಟವು ತೆರೆದುಕೊಳ್ಳುತ್ತದೆ.
- ತೆರೆದ ವೆಬ್‌ಪೇಜ್‌ನಲ್ಲಿ ನಿಮ್ಮ ರಿಜಿಸ್ಟರ್ ನಂಬರ್/ರೋಲ್ ನಂಬರ್ ಹಾಗೂ ಪಾಸ್‌ವರ್ಡ್ (ಜನ್ಮ ದಿನಾಂಕ ಮಾಹಿತಿ) ನೀಡಿ ಲಾಗಿನ್ ಆಗಿ.
- ನಂತರ ಪ್ರವೇಶ ಪತ್ರ ಪ್ರದರ್ಶಿತವಾಗುತ್ತದೆ.
- ಸದರಿ ಪ್ರವೇಶಪತ್ರವನ್ನು ಡೌನ್‌ಲೋಡ್ ಮಾಡಿಕೊಂಡು ಪ್ರಿಂಟ್ ತೆಗೆದುಕೊಳ್ಳಿ.
ಅಭ್ಯರ್ಥಿಗಳು ಪ್ರವೇಶ ಪತ್ರದಲ್ಲಿ ನೀಡಲಾದ ಸೂಚನೆಗಳನ್ನು ಓದಿಕೊಂಡು, ಸೂಚನೆಗಳನ್ನು ಪಾಲಿಸಬೇಕು. ಹಾಗೂ ಇದರ ಜತೆಗೆ ಅಧಿಕೃತ ಸರ್ಕಾರಿ ಗುರುತಿನ ಚೀಟಿಯನ್ನು ತೆಗೆದುಕೊಂಡು ಹಾಜರಾಗುವುದು ಕಡ್ಡಾಯ.
ಕರ್ನಾಟಕದ ಅಭ್ಯರ್ಥಿಗಳಿಗೆ ಪರೀಕ್ಷೆ ಪತ್ರಿಕೆಯ ಮಾಧ್ಯಮ ಕನ್ನಡ ಹಾಗೂ ಕೊಂಕಣಿಯಲ್ಲಿಯೂ ಲಭ್ಯವಿದೆ.
IBPS ಕ್ಲರ್ಕ್ ನೇಮಕಾತಿಗಾಗಿ ನಡೆಯುವ ಪ್ರಿಲಿಮ್ಸ್ ಪರೀಕ್ಷೆಯ ಮುಖ್ಯ ಸೆಕ್ಷನ್‌ಗಳು ಮತ್ತು ಅಂಕಗಳ ಮಾಹಿತಿ ಇಲ್ಲಿದೆ:
IBPS ಕ್ಲರ್ಕ್ ನೇಮಕಾತಿಗಾಗಿ ನಡೆಯುವ ಪ್ರಿಲಿಮ್ಸ್ ಪರೀಕ್ಷೆಯ ಹಲವಾರು ವಿಷಯಗಳ ಜ್ಞಾನವನ್ನು ಪರೀಕ್ಷಿಸಲಾಗುತ್ತದೆ. ಅವುಗಳಲ್ಲಿ ಮುಖ್ಯವಾಗಿ:
ಇಂಗ್ಲಿಷ್ ಭಾಷೆಯ 30 ಪ್ರಶ್ನೆಗಳಿಗೆ 30 ಅಂಕ ಇರುತ್ತವೆ.
ಸಂಖ್ಯಾತ್ಮಕ ಸಾಮರ್ಥ್ಯದ 35 ಪ್ರಶ್ನೆಗಳಿಗೆ 35 ಅಂಕಗಳನ್ನು ನೀಡಲಾಗುತ್ತದೆ.
ರೀಸನಿಂಗ್ ಎಬಿಲಿಟಿ ಅಥವಾ ಕಾರಣೀಕರಿಸುವ ಸಾಮರ್ಥ್ಯದ 35 ಅಂಕಗಳಿಗೆ 35 ಪ್ರಶ್ನೆಗಳನ್ನು ನೀಡಲಾಗಿರುತ್ತದೆ.
ಒಟ್ಟಾರೆ IBPS ಕ್ಲರ್ಕ್ ನೇಮಕಾತಿಗಾಗಿ ನಡೆಯುವ ಪ್ರಿಲಿಮ್ಸ್ ಪರೀಕ್ಷೆಯಲ್ಲಿ ಒಟ್ಟು 100 ಅಂಕಗಳ ಪ್ರಶ್ನೆ ಪತ್ರಿಕೆಗೆ ಅಭ್ಯರ್ಥಿಗಳು 1 ಗಂಟೆ ಅವಧಿಯಲ್ಲಿ ಆನ್‌ಲೈನ್ ಪರೀಕ್ಷೆಯನ್ನು ಬರೆಯಬೇಕಿರುತ್ತದೆ. ಅಂದರೆ ಒಟ್ಟಾರೆ 1 ಗಂಟೆಯ ಅವಧಿಯಲ್ಲಿ ಅಭ್ಯರ್ಥಿಗಳು 100 ಪ್ರಶ್ನೆಗಳಿಗೆ ಆನ್ಲೈನ್ ನಲ್ಲಿ ಉತ್ತರಿಸಬೇಕು. ಈ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳನ್ನು ಗಳಿಸಲು ಹೇಗೆಲ್ಲಾ ಸಾಧ್ಯವಾಗುತ್ತದೋ ಆ ಎಲ್ಲಾ ಮಾರ್ಗಗಳನ್ನು ಅನುಸರಿಸಿದರೆ ಮಾತ್ರ ಉದ್ಯೋಗ ನಿಮ್ಮದಾಗಲಿದೆ.
ಇನ್ನು ಈ ಪರೀಕ್ಷೆಗೆ ಸಂಬಂಧಿಸಿದಂತೆ ಇಂಗ್ಲಿಷ್ ಭಾಷಾ ವಿಭಾಗಕ್ಕೆ ಸಂಬಂಧಿಸಿದಂತೆ ಸಾಮಾನ್ಯವಾಗಿ ನಮ್ಮಲ್ಲಿ ಅತೀ ಹೆಚ್ಚಿನ ಇಂಗ್ಲೀಷ್ ಶಬ್ದ ಸಂಗ್ರಹ ಇರಲೇಬೇಕು, ಇದರ ಜೊತೆಗೆ ಬೇಸಿಕ್ ಇಂಗ್ಲಿಷ್ ವ್ಯಾಕರಣ, ಕಾಂಪ್ರೆಹೆನ್ಷನ್, ತಪ್ಪುಗಳ ತಿದ್ದುವಿಕೆ, ಕ್ಲೋಜ್ ಟೆಸ್ಟ್ ಇತ್ಯಾದಿ ವಿಷಯಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡಿದ್ದರೆ ಒಳ್ಳೆಯದು.
ಇನ್ನು ಪ್ರಶ್ನೆಪತ್ರಿಕೆಯ ಕಠಿಣತೆಯ ವಿಚಾರಕ್ಕೆ ಬಂದರೆ ಸಾಮಾನ್ಯವಾಗಿ ಸಂಖ್ಯಾತ್ಮಕ ಸಾಮರ್ಥ್ಯ ಸೆಕ್ಷನ್, ಐಬಿಪಿಎಸ್‌ನಲ್ಲಿ ಹೆಚ್ಚು ಕಷ್ಟಕರವಾದ ಸೆಕ್ಷನ್ ಇದು. ನಮಗೆಲ್ಲಾ ತಿಳಿದಿರುವಂತೆ ಅಸಂಖ್ಯಾತ ಸೂತ್ರಗಳ ಅನ್ವಯಗಳನ್ನು ಈ ವಿಭಾಗವು ಒಳಗೊಂಡಿರುವುದರಿಂದ ಇದು ಸಹಜವಾಗಿಯೇ ಕಠಿಣ ಎನಿಸಿಬಿಡುತ್ತದೆ. ಗಣಿತ ವಿಷಯದಲ್ಲಿ ಹಿಡಿತ ಹೊಂದಿರುವ ಅಭರ್ಥಿಗಳಿಗೆ ಇದು ಕಬ್ಬಿಣದ ಕಡಲೆ ಎನಿಸುವುದಿಲ್ಲ. ಒಟ್ಟಾರೆ ಅಭ್ಯಾಸ ಮಾಡಿರುವವರಿಗೆ ಇದು ಹೆಚ್ಚು ಸ್ಕೋರ್ ಮಾಡಲು ಸಹಾಯಕವು ಹೌದು. ಇಂತಹ ವಿಷಯಗಳ ಮೇಲೆ ಹೆಚ್ಚು ಗಮನರಿಸಿದರೆ ಯಶಸ್ಸು ನಿಮ್ಮದಾಗುತ್ತದೆ.
ರೀಸನಿಂಗ್ ಅಂದರೆ ಕಾರಣೀಕರಿಸುವ ಸಾಮರ್ಥ್ಯಕ್ಕೆ ಬಂದರೆ ಅತೀ ಹೆಚ್ಚು ಸ್ಕೋರ್ ಮಾಡಲು ಇರುವ ಇನ್ನೊಂದು ವಿಭಾಗವೇ ಸರಿ. ಆದರೆ ಈ ವಿಭಾಗದಲ್ಲಿ ಪ್ರತಿ ಟಾಪಿಕ್‌ನ ಹಿಂದಿರುವ ಲಾಜಿಕ್ ಗಳನ್ನು ಗ್ರಹಿಸುವ ಸಾಮರ್ಥ್ಯ ನಮ್ಮಲಿರಲೇಬೇಕು. ಮತ್ತು ಈ ಕುರಿತು ಹೆಚ್ಚಿನ ಅಭ್ಯಾಸ ನಮಗೆ ಯಶಸ್ಸನ್ನು ತಂದುಕೊಡುತ್ತದೆ.
ಒಟ್ಟಾರೆ ಐಬಿಪಿಎಸ್ ಕ್ಲರ್ಕ್ ಹುದ್ದೆಗಳನ್ನು ಇಂಡಿಯನ್ ಓವರ್ಸೀಸ್ ಬ್ಯಾಂಕ್, ಯುಸಿಒ ಬ್ಯಾಂಕ್, ಬ್ಯಾಂಕ್ ಆಫ್ ಇಂಡಿಯಾ, ಬ್ಯಾಂಕ್ ಆಫ್ ಬರೋಡಾ, ಕೆನಾರಾ ಬ್ಯಾಂಕ್, ಬ್ಯಾಂಕ್ ಆಫ್ ಮಹಾರಾಷ್ಟ್ರ, ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ, ಇಂಡಿಯನ್ ಬ್ಯಾಂಕ್, ಪಂಜಾಬ್ ನ್ಯಾಷನಲ್ ಬ್ಯಾಂಕ್, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಪಂಜಾಬ್ ಅಂಡ್ ಸಿಂದ್ ಬ್ಯಾಂಕ್‌ಗಳಲ್ಲಿ ನೇಮಕಾತಿ ಮಾಡಲಿದೆ.
No comments:
Post a Comment
If you have any doubts please let me know