Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Wednesday, 14 August 2024

ಆಗಸ್ಟ್ 15 ರಂದು ಭಾರತದ ಜೊತೆಗೆ ಈ ದೇಶಗಳು ಕೂಡ ಸ್ವಾತಂತ್ರ್ಯ ದಿನ ಆಚರಿಸುತ್ತವೆ

ಆಗಸ್ಟ್ 15 ರಂದು ಭಾರತದ ಜೊತೆಗೆ ಈ ದೇಶಗಳು ಕೂಡ ಸ್ವಾತಂತ್ರ್ಯ ದಿನ ಆಚರಿಸುತ್ತವೆ.

ಆಗಸ್ಟ್ 15 ರಂದು ಭಾರತದ ಜೊತೆಗೆ ಈ ದೇಶಗಳು ಕೂಡ ಸ್ವಾತಂತ್ರ್ಯ ದಿನ ಆಚರಿಸುತ್ತವೆ. Along with India, these countries also celebrate Independence Day on August 15.

ಆತ್ಮೀಯ ಸ್ನೇಹಿತರೇ ನಾಳೆ ಅಂದರೆ ಆಗಸ್ಟ್ 15, 2024 ರಂದು ನಾವುಗಳು 78ನೇ ಸ್ವಾತಂತ್ರ್ಯ ದಿನೋತ್ಸವವನ್ನು ಆಚರಿಸುತ್ತಿದ್ದೇವೆ. ಭಾರತವು ಬ್ರಿಟೀಷ್ ಆಳ್ವಿಕೆಯಿಂದ ಮುಕ್ತಗೊಂಡ ಈ ದಿನವನ್ನು ದೇಶಾದ್ಯಂತ ಸ್ವಾತಂತ್ರ್ಯ ಸಂಭ್ರಮವೆಂದೇ ಆಚರಿಸುತ್ತೇವೆ. ಈ ದಿನದಂದು ಅಂದರೆ ಆಗಸ್ಟ್ ಹದಿನೈದರಂದು ಭಾರತ ದೇಶವನ್ನು ಹೊರತುಪಡಿಸಿ ಪ್ರಪಂಚದ ಹಲವು ದೇಶಗಳೂ ಕೂಡ ಸ್ವಾತಂತ್ರ್ಯ ದಿನವನ್ನು ಆಚರಿಸುತ್ತವೆ. ಅಂತಹ ವಿಶ್ವದ ಕೆಲವು ದೇಶಗಳ ಪಟ್ಟಿಯನ್ನು ಈ ಮುಂದೆ ನೀಡಿದ್ದೇವೆ. 


ಆಗಸ್ಟ್ 15 ರಂದು ಸ್ವಾತಂತ್ರ್ಯ ದಿನ ಆಚರಿಸುವ ವಿಶ್ವದ ಪ್ರಮುಖ ದೇಶಗಳ ಪಟ್ಟಿ ಇಲ್ಲಿದೆ:


ಬ್ರಿಟೀಷ್ ಆಳ್ವಿಕೆಯಿಂದ ಮುಕ್ತಿ ಪಡೆದ ದೇಶವು ಆಗಸ್ಟ್ 14 ರಂದು ಸ್ವಾತಂತ್ರ್ಯ ಪಡೆದು ಪ್ರತಿ ವರ್ಷದ ಆಗಸ್ಟ್ 15 ರಂದು ದೇಶವು ಸ್ವಾತಂತ್ರ್ಯ ದಿನಾಚರಣೆಯನ್ನು 1947 ರಿಂದ ಆಚರಿಸಿಕೊಂಡು ಬರುತ್ತಿದೆ. ಭಾರತದ ಸಾಂಸ್ಕೃತಿಕ ಇತಿಹಾಸದಲ್ಲಿ ಆಗಸ್ಟ್ 15 ಅತೀ ವಿಶೇಷವಾದ ದಿನವೆಂದೇ ಪರಿಗಣಿಸಲ್ಪಟ್ಟಿದೆ. ದೇಶದ ಎಲ್ಲಾ ಭಾಗಗಳಲ್ಲಿಯೂ ಈ ದಿನವನ್ನು ಅತೀ ಸಂತಸದಿಂದ ಸಂಭ್ರಮಿಸಲಾಗುತ್ತದೆ. ಶಾಲೆ ಕಾಲೇಜುಗಳು, ಸರ್ಕಾರಿ ಕಛೇರಿಗಳು ಸೇರಿದಂತೆ ಎಲ್ಲಾ ಕಡೆಗಳಲ್ಲಿಯೂ ಧ್ವಜಾರೋಣ ಮಾಡುವ ಮೂಲಕ  ದಿನದಂದು ಸಿಹಿ ಹಂಚುವ ಮೂಲಕ ಸಂಭ್ರಮಿಸಲಾಗುತ್ತದೆ.

ನಿಮಗಿದು ನೆನಪಿರಲಿ: ಆಗಸ್ಟ್ 15 ರಂದು ಕೇವಲ ಭಾರತ ದೇಶ ಮಾತ್ರ ಸ್ವಾತಂತ್ರ್ಯ ಸಂಭ್ರಮವನ್ನು ಆಚರಿಸಿಕೊಳ್ಳುವುದಿಲ್ಲ. ಬದಲಾಗಿ ಈ ದಿನದಂದು ವಿಶ್ವದ ಹಲವಾರು ದೇಶಗಳೂ ಕೂಡ ಈ ದಿನದಂದು ತಮ್ಮ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಿಕೊಳ್ಳುತ್ತವೆ. ಹಾಗಾದರೆ ಇವತ್ತಿನ ಈ ಲೇಖನದಲ್ಲಿ ನಾವುಗಳೂ ಪ್ರಪಂಚದ ಯಾವೆಲ್ಲ ದೇಶಗಳು ಸ್ವಾತಂತ್ರ್ಯವನ್ನು ಆಚರಿಸಿಕೊಳ್ಳುತ್ತವೆ ಎಂಬ ಕುತೂಹಲ ನಿಮ್ಮಲ್ಲಿದೆಯಲ್ಲವೇ? ಬನ್ನಿ ಹಾಗಾದರೆ ಪ್ರಪಂಚದ ಯಾವೆಲ್ಲ ದೇಶಗಳು ಸ್ವಾತಂತ್ರ್ಯ ದಿನವನ್ನು ಆಚರಿಸಕೊಳ್ಳುತ್ತವೆ ಎಂಬ ವಿಷಯವನ್ನು ತಿಳಿದುಕೊಳ್ಳೋಣ.


ಜಪಾನ್ ದೇಶದ ಇತಿಹಾಸ:

ಆಗಸ್ಟ್ 15 ರಂದು ಜಪಾನ್ ದೇಶವು ಸ್ವಾತಂತ್ರ್ಯ ದಿನವನ್ನು ಆಚರಿಸುವುದಿಲ್ಲವಾದರೂ ಜಪಾನ್ ದೇಶದ ಇತಿಹಾಸದಲ್ಲಿ ಆಗಸ್ಟ್ 15 ಅತೀ ಮಹತ್ವದ ದಿನವಾಗಿದೆ. ಜಪಾನ್ ಇತಿಹಾಸದ ಪ್ರಕಾರ 1945 ರಲ್ಲಿ ಎರಡನೇ ಮಹಾಯುದ್ಧದ ಸಂದರ್ಭದಲ್ಲಿ ಜಪಾನ್ ದೇಶದ ಚಕ್ರವರ್ತಿಯಾದ ಹಿರೋಹಿಟೊ ಎರಡನೇ ಮಹಾಯುದ್ಧದಲ್ಲಿ ಜಪಾನ್ ದೇಶದ ಶರಣಾಗತಿಯನ್ನು ಆಗಸ್ಟ್-15 ರಂದು ಘೋಷಿಸಿದರು. ಹೀಗಾಗಿ ಆಗಸ್ಟ್-15 ಜಪಾನ್ ಇತಿಹಾಸದಲ್ಲಿ ಮಹತ್ವದ ಸ್ಥಾನವನ್ನು ಹೊಂದಿದೆ.

ಅದಾದ ನಂತರ ಆ ಕಾಲದ ಯುದ್ಧಗಳು ಮುಕ್ತಾಯಗೊಂಡವು. ಇದೇ ಕಾರಣದಿಂದಲೇ ಈ ದಿನವನ್ನು ಯುದ್ಧದ ಅಂತ್ಯವೆಂದು ಆಚರಿಸಲಾಗುತ್ತದೆ. ಜಪಾನ್ ನಲ್ಲಿ ಇದನ್ನು 'ಯುದ್ಧದ ಸ್ಮಾರಕ ದಿನ' ಎಂದು ಸಹ ಕರೆಯಲಾಗುತ್ತದೆ.

ದಕ್ಷಿಣ ಕೊರಿಯಾ ಇತಿಹಾಸ

ನಮಗೆಲ್ಲ ತಿಳಿದಿರುವಂತೆ ದಕ್ಷಿಣ ಕೊರಿಯಾವನ್ನು ಅಧಿಕೃತವಾಗಿ ‘ರಿಪಬ್ಲಿಕ್ ಆಫ್ ಕೊರಿಯಾ’ ಎಂದೇ ಕರೆಯಲಾಗುತ್ತದೆ. ದಕ್ಷಿಣ ಕೊರಿಯಾ ದೇಶವೂ ಸಹ ಆಗಸ್ಟ್ 15 ರಂದು ತನ್ನ ವಿಮೋಚನಾ ದಿನವನ್ನು ಆಚರಿಸುತ್ತದೆ. ಇದನ್ನು ‘ಗ್ವಾಂಗ್‌ಬೊಕ್ಜಿಯೋಲ್’ ಎಂದೂ ಸಹ ಕರೆಯಲಾಗುತ್ತದೆ. ಆಗಸ್ಟ್-15, 1945 ರಲ್ಲಿ ಜಪಾನಿನ ಆಳ್ವಿಕೆಯಿಂದ ಕೊರಿಯಾವನ್ನು ವಿಮೋಚನೆಗೊಳಿಸುವುದನ್ನು ನೆನಪಿಸುತ್ತದೆ. ಆದ್ದರಿಂದ ದಕ್ಷಿಣ ಕೊರಿಯಾ ಇತಿಹಾಸದಲ್ಲಿಯೂ ಆಗಸ್ಟ್-15 ರಂದು ವಿಶೇಷವಾದ ಮಹತ್ವವನ್ನು ಹೊಂದಿದೆ. ದಕ್ಷಿಣ ಕೊರಿಯಾದಲ್ಲಿ ಈ ವಿಶೇಷ ದಿನದಂದು ವಿವಿಧ ಸಮಾರಂಭಗಳು, ಮೆರವಣಿಗೆಗಳು ಹಾಗೂ ಸಾಂಸ್ಕೃತಿಕ ಪ್ರದರ್ಶನಗಳು ಸೇರಿದಂತೆ ವಿವಿಧ ಆಚರಣೆಗಳನ್ನೂ ಸಹ ಏರ್ಪಡಿಸುವ ಮೂಲಕ ದಕ್ಷಿಣ ಕೊರಿಯಾ ವಿಶೇಷವಾದ ಆಚರಣೆಯನ್ನು ಮಾಡುತ್ತದೆ.



ಉತ್ತರ ಕೊರಿಯಾ ಇತಿಹಾಸದಲ್ಲಿ ಆಗಸ್ಟ್-15 ರ ವಿಶೇಷ

ದಕ್ಷಿಣ ಕೊರಿಯಾ ದೇಶದಂತೆಯೇ ಉತ್ತರ ಕೊರಿಯಾ ದೇಶವೂ ಕೂಡ ಆಗಸ್ಟ್ 15 ರಂದು ತನ್ನ ವಿಮೋಚನಾ ದಿನವನ್ನಾಗಿ ಆಚರಿಸುತ್ತದೆ. ‘ಚೋಗುಖೇಬಾಂಗ್'ಇಲ್’ ಎಂದು ಕರೆಯಲ್ಪಡುವ ಈ ದಿನವೂ ಸಹ ಜಪಾನ್ ದೇಶದ ಆಕ್ರಮಣದಿಂದ ಉತ್ತರ ಕೊರಿಯಾದ ವಿಮೋಚನೆಯನ್ನು ನೆನಪಿಸುತ್ತದೆ. ಉತ್ತರ ಕೊರಿಯಾ ಇತಿಹಾಸದಲ್ಲಿ ಆಗಸ್ಟ್-15 ನೇ ದಿನವು ದೇಶದ ಸ್ವಾತಂತ್ರ್ಯ ಹೋರಾಟದ ನೆನಪಾಗಿ ಪ್ರತಿಧ್ವನಿಸುತ್ತದೆ. ನಮ್ಮ ದೇಶದಲ್ಲಿ ನಡೆಯುವಂತೆಯೇ ಉತ್ತರ ಕೊರಿಯಾದಲ್ಲಿಯೂ ಸಹ ಆಗಸ್ಟ್ 15 ರಂದು ಭಾಷಣಗಳು, ಮಿಲಿಟರಿ ಮೆರವಣಿಗೆಗಳು ಮತ್ತು ಇತರ ದೇಶಭಕ್ತಿಯ ಚಟುವಟಿಕೆಗಳನ್ನು ಮಾಡಲಾಗುತ್ತದೆ. 

ಕಾಂಗೋ ಆಚರಣೆ:

ವಿಶ್ವದ ಪ್ರಮುಖ ದೇಶವಾದ ಕಾಂಗೋ ಗಣರಾಜ್ಯವೂ ಸಹ ಆಗಸ್ಟ್ 15 ರಂದು ಕಾಂಗೋಲೀಸ್ ನ್ಯಾಷನಲ್ ಡೇ ಆಚರಿಸಲಾಗುತ್ತದೆ. ಕಾಂಗೋ ದೇಶದಲ್ಲಿ ಇದನ್ನು ಸಾಮಾನ್ಯವಾಗಿ 'ಕಾಂಗೋಲೀಸ್ ನ್ಯಾಷನಲ್ ಡೇ' ಎಂದು ಸಹ ಉಲ್ಲೇಖಿಸಲಾಗುತ್ತದೆ. ಕಾಂಗೋ ದಲ್ಲಿ ಆಗಸ್ಟ್-15 ರಂದು ವಿಶೇಷವಾದ ಮೆರವಣಿಗೆಗಳು, ಸಾಂಸ್ಕೃತಿಕ ಪ್ರದರ್ಶನಗಳು ಮತ್ತು ಭಾಷಣಗಳು ಸೇರಿದಂತೆ ರಾಷ್ಟ್ರದಾದ್ಯಂತ ವಿವಿಧ ಕಾರ್ಯಕ್ರಮಗಳೊಂದಿಗೆ ದಿನವನ್ನು ಅತೀ ವಿಜೃಂಭಣೆಯಿಂದ ಸಂಭ್ರಮಿಸಲಾಗುತ್ತದೆ. ವಿಶೇಷವಾಗಿ ಕಾಂಗೋಲೀಸ್ ಜನರು ತಮ್ಮ ಇತಿಹಾಸವನ್ನು ಆಗಸ್ಟ್-15 ರಂದು ನೆನಪಿಸಕೊಳ್ಳುವ ಒಂದು ವಿಶೇಷ ದಿನವಾಗಿದೆ.


ಲಿಚ್ಟೆನ್‌ಸ್ಟೈನ್ ರಾಷ್ಟ್ರೀಯ ದಿನ:

ಪ್ರಮುಖ ದೇಶವಾದ ಲಿಚ್ಟೆನ್‌ಸ್ಟೈನ್ ಆಗಸ್ಟ್-15 ರಂದು ರಾಷ್ಟ್ರೀಯ ದಿನವನ್ನು ಆಚರಿಸುತ್ತದೆ. ಆಗಸ್ಟ್-15 ರಂದು ಈ ದೇಶದಲ್ಲಿ ಧಾರ್ಮಿಕ ರಜಾದಿನವಾಗಿ ಆಚರಿಸಲಾಗುತ್ತದೆ. ಇದು ಲಿಚ್ಟೆನ್‌ಸ್ಟೈನ್ ದೇಶದ ಸ್ವತಂತ್ರ ದಿನವಲ್ಲದಿದ್ದರೂ, ಲಿಚ್ಟೆನ್‌ಸ್ಟೈನ್‌ನ ರಾಷ್ಟ್ರೀಯ ದಿನವು ದೇಶದ ಸಾರ್ವಭೌಮತ್ವ ಮತ್ತು ಗುರುತಿನ ವಾರ್ಷಿಕ ಆಚರಣೆಯನ್ನು ಸೂಚಿಸುತ್ತದೆ.

ಬಹ್ರೇನ್ ದೇಶದ ಸ್ವಾತಂತ್ರ್ಯ ದಿನೋತ್ಸವ:

ಭಾರತ ದೇಶದಂತೆ ಬಹ್ರೇನ್ ದೇಶವು ಕೂಡ ಯುನೈಟೆಡ್ ಕಿಂಗ್ಡಮ್ ನ ದುರಾಡಳಿತದಿಂದ ಆಗಸ್ಟ್ 15, 1971 ಸ್ವಾತಂತ್ರ್ಯವನ್ನು ಗಳಿಸಿತು. ಹಾಗಾಗಿ ಬಹ್ರೇನ್ ದೇಶದಲ್ಲಿಯೂ ಕೂಡ ಆಗಸ್ಟ್-15 ರಂದು ಸ್ವಾತಂತ್ರ್ಯದ ದಿನವನ್ನಾಗಿ ಆಚರಿಸಲಾಗುತ್ತದೆ. ಆಗಸ್ಟ್ 14 ಅನ್ನು ಸಾಮಾನ್ಯವಾಗಿ ಸ್ವಾತಂತ್ರ್ಯದ ದಿನಾಂಕವೆಂದು ಉಲ್ಲೇಖಿಸಲಾಗುತ್ತದೆ, ಆದರೆ ದೇಶವು ಅಧಿಕೃತವಾಗಿ ಆಗಸ್ಟ್ 15 ಅನ್ನು ತನ್ನ ಸ್ವಾತಂತ್ರ್ಯ ದಿನವಾಗಿ ಆಚರಿಸುತ್ತದೆ ಎಂಬುದನ್ನು ಯಾರೂ ಮರೆಯುವಂತಿಲ್ಲ.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads