20 ಆಗಸ್ಟ್ 2024 ರ ಪ್ರಚಲಿತ ವಿದ್ಯಮಾನಗಳು & ಪ್ರಮುಖ ರಸಪ್ರಶ್ನೆಗಳು
20 ಆಗಸ್ಟ್ 2024 ರ ಪ್ರಚಲಿತ ವಿದ್ಯಮಾನಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗಿವೆ. ಈ ಪ್ರಚಲಿತ ವಿದ್ಯಮಾನಗಳ ಕ್ವಿಜ್ ಅಥವಾ ರಸಪ್ರಶ್ನೆಗಳ ಬಹು ಆಯ್ಕೆಯ ಪ್ರಶ್ನೋತ್ತರಗಳು ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗೆ ಅತೀ ನಿರ್ಣಾಯಕವಾದ ಪಾತ್ರವನ್ನು ನಿರ್ವಹಿಸುತ್ತವೆ. ಈ ಪ್ರಚಲಿತ ವಿದ್ಯಮಾನಗಳ ಪ್ರಶ್ನೆಗಳಿಗೆ ಉತ್ತರಿಸುವ ಮೂಲಕ, ನೀವು ಇತ್ತೀಚಿನ ಪ್ರಮುಖ ಪ್ರಚಲಿತ ವಿದ್ಯಮಾನಗಳ ಕುರಿತು ಹಾಗೂ ಪ್ರಮುಖ ಜಾಗತಿಕ ಘಟನೆಗಳ ಕುರಿತು ಹೆಚ್ಚಿನ ಜ್ಞಾನವನ್ನು ಪಡೆಯಬಹುದು.
20 ಆಗಸ್ಟ್ 2024 ರ ಪ್ರಚಲಿತ ವಿದ್ಯಮಾನಗಳ ರಸಪ್ರಶ್ನೆಯೊಂದಿಗೆ ಉತ್ತಮವಾಗಿ ರಚಿಸಲಾದ ಪ್ರಪಂಚದ ಪ್ರಮುಖ ಘಟನೆಗಳ ಅರಿವು ಹೊಂದುವ ಮೂಲಕ ನೀವುಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಅತ್ಯುತ್ತಮವಾಗಿ ತಯಾರಾಗಬಹುದು.
ಈ ಲೇಖನಲ್ಲಿ ನಾವುಗಳು ಮುಂಬರುವ ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವಂತಹ ಹಾಗೂ ಪ್ರಮುಖ ಪ್ರಚಲಿತ ವಿದ್ಯಮಾನಗಳ ಮಹತ್ವದ ಸಂಗತಿಗಳನ್ನು ಸೇರಿಸಿ ನಿಮಗಿಲ್ಲಿ ನೀಡುತ್ತಿದ್ದೇವೆ.
20 ಆಗಸ್ಟ್ 2024 ರ ಪ್ರಮುಖ ಪ್ರಚಲಿತ ವಿದ್ಯಮಾನಗಳು: ಕರೆಂಟ್ ಅಫೇರ್ಸ್ ಒನ್ ಲೈನರ್
- ವಿಶ್ವ ಛಾಯಾಗ್ರಹಣ ದಿನ (ಆಗಸ್ಟ್ 19): ವಿಶ್ವ ಛಾಯಾಗ್ರಹಣ ದಿನವನ್ನು ಆಗಸ್ಟ್ 19 ರಂದು ಆಚರಿಸಲಾಯಿತು.
- ನೂತನ ಆರೋಗ್ಯ ಕಾರ್ಯದರ್ಶಿ ನೇಮಕ: ನೂತನ ಆರೋಗ್ಯ ಕಾರ್ಯದರ್ಶಿಯಾಗಿ ಪುಣ್ಯ ಸಲಿಲ ಶ್ರೀವಾಸ್ತವ ಅವರನ್ನು ನೇಮಕ ಮಾಡಲಾಗಿದೆ.
- ಸಂಶೋಧನೆಗಾಗಿ BHU ನೊಂದಿಗೆ ಅಕಾಡೆಮಿ ಒಪ್ಪಂದ: ಭಾಷೆ, ಸಾಹಿತ್ಯ, ಸಂಸ್ಕೃತಿ ಮತ್ತು ತತ್ತ್ವಶಾಸ್ತ್ರದ ಸಂಶೋಧನೆಗಾಗಿ ನೇಪಾಳದ ಅಕಾಡೆಮಿ BHU ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದೆ.
- ISRO ಉಪಗ್ರಹ ಉಡಾವಣೆ: ISRO EOS-08 ಉಪಗ್ರಹವನ್ನು ಉಡಾವಣೆ ಮಾಡಿದೆ.
- ವಿದೇಶಾಂಗ ಸಚಿವ ಎಸ್ ಜೈಶಂಕರ್ ಕುವೈತ್ ಗೆ ಅಧಿಕೃತ ಭೇಟಿ: ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಕುವೈತ್ ಗೆ ಅಧಿಕೃತ ಭೇಟಿಗೆ ತೆರಳಿದ್ದಾರೆ.
- ರಾಜನಾಥ್ ಸಿಂಗ್ ಅವರಿಂದ ಹೊಸ ಕಡಲ ಸೌಲಭ್ಯಗಳ ಉದ್ಘಾಟನೆ: ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಯ ಹೊಸ ಕಡಲ ಸೌಲಭ್ಯಗಳನ್ನು ರಾಜನಾಥ್ ಸಿಂಗ್ ಉದ್ಘಾಟಿಸಿದರು.
- ಬಾಂಗ್ಲಾದೇಶದ ಮೇಲೆ UN ಮಾನವ ಹಕ್ಕುಗಳ ತನಿಖೆ: ವಿಶ್ವಸಂಸ್ಥೆಯ ಮಾನವ ಹಕ್ಕುಗಳ ತಂಡವು ಬಾಂಗ್ಲಾದೇಶದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯನ್ನು ತನಿಖೆ ಮಾಡುತ್ತದೆ.
- ರಾಂಚಿಯಲ್ಲಿ NSSHO ನ ಇ-ಟೆಂಡರಿಂಗ್ ಮತ್ತು ಕ್ರೆಡಿಟ್ ಬೆಂಬಲ ಕಾರ್ಯಕ್ರಮ: NSSHO ರಾಂಚಿಯಲ್ಲಿ ಇ-ಟೆಂಡರಿಂಗ್ ಮತ್ತು ಕ್ರೆಡಿಟ್ ಬೆಂಬಲ ಕಾರ್ಯಕ್ರಮವನ್ನು ಆಯೋಜಿಸಿದೆ.
- ಚೀನಾದಲ್ಲಿ ಬ್ಯಾಡ್ಮಿಂಟನ್ ಜೂನಿಯರ್ ಚಾಂಪಿಯನ್‌ಶಿಪ್ 2024: ಬ್ಯಾಡ್ಮಿಂಟನ್ ಜೂನಿಯರ್ ಚಾಂಪಿಯನ್‌ಶಿಪ್ 2024 ಚೀನಾದಲ್ಲಿ ನಡೆಯಲಿದೆ.
- ಶ್ರೀಲಂಕಾ ಮತ್ತು ಭಾರತದ ನಡುವೆ "ಯಾತ್ರಾ ದೋಣಿ ಸೇವೆ" ಪುನರಾರಂಭ: ಶ್ರೀಲಂಕಾ ಮತ್ತು ಭಾರತದ ನಡುವೆ "ಯಾತ್ರಾ ಫೆರ್ರಿ ಸೇವೆ" ಪುನರಾರಂಭವಾಗಿದೆ.
- ವಿಜಯ್ ಫಿಕ್ಸೆಡ್ ಡೆಪಾಸಿಟ್‌ನ RBL ಬ್ಯಾಂಕಿನ ಪ್ರಕಟಣೆ: RBL ಬ್ಯಾಂಕ್ ತನ್ನ ಗ್ರಾಹಕರಿಗೆ ಹೊಸ ಠೇವಣಿ ಯೋಜನೆಯಾದ “ವಿಜಯ್ ಫಿಕ್ಸೆಡ್ ಡೆಪಾಸಿಟ್” ಅನ್ನು ಪರಿಚಯಿಸಿದೆ.
- ಚುನಾವಣಾ ಆಯೋಗವು ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣದಲ್ಲಿ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದೆ: ಚುನಾವಣಾ ಆಯೋಗವು ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣ ಎರಡರಲ್ಲೂ ಚುನಾವಣಾ ದಿನಾಂಕಗಳನ್ನು ಪ್ರಕಟಿಸಿದೆ.
- ನೇಪಾಳದಿಂದ ಭಾರತಕ್ಕೆ ವಿದೇಶಾಂಗ ಸಚಿವ ಅರ್ಜು ರಾಣಾ ದೇವುಬಾ ಭೇಟಿ: ನೇಪಾಳದ ವಿದೇಶಾಂಗ ಸಚಿವ ಅರ್ಜು ರಾಣಾ ದೇವುಬಾ ಅವರು ಐದು ದಿನಗಳ ಭಾರತ ಪ್ರವಾಸಕ್ಕೆ ಬಂದಿದ್ದಾರೆ.
No comments:
Post a Comment
If you have any doubts please let me know