Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Saturday, 13 April 2024

ಗುರಿ ನಿರ್ಧರಿಸುವ ಮುನ್ನ ಯೋಚಿಸಿ

ಗುರಿ ನಿರ್ಧರಿಸುವ ಮುನ್ನ ಯೋಚಿಸಿ

ಗುರಿ‌ ನಿರ್ಧರಿಸುವ ಮುನ್ನ ಯೋಚಿಸಿ, ಸ್ಪರ್ಧಾರ್ಥಿಗಳಿಗೆ ಸಲಹೆಗಳು,


ನಮ್ಮ ಜೀವನದ ಪ್ರತಿಯೊಂದು ತಿರುವುಗಳಲ್ಲೂ ಗುರಿ ನಿರ್ಧಾರ ಬಹಳ‌ ಮಹತ್ವವಾದುದು. ಗುರಿಯ ನಿರ್ಧಾರ ಅದೆಷ್ಟು ಪ್ರಮುಖವಾದುದೆಂದರೆ ಗುರಿ ಇಲ್ಲದ ಜೀವನ ದಿಕ್ಸೂಚಿ ಇಲ್ಲದ ಹಡಗಿನಂತೆ. ಈ ಕುರಿತು Fitzhugh Dodson ಹೀಗೆ ಹೇಳುತ್ತಾರೆ:- "Without goals and plans to reach them, you are like a ship that has set sail with no destination."


ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಗುರಿಯನ್ನು ನಿರ್ಧರಿಸುವ ಮೊದಲು ಆ ಸಾಧನೆಯ ಹಿಂದಿನ ಉದ್ದೇಶ ಒಳ್ಳೆಯದಾಗಿರಬೇಕು. ಆ ಗುರಿಯನ್ನು ತಲುಪಲು ಆಯ್ದುಕೊಳ್ಳುವ ಮಾರ್ಗದ ಬಗ್ಗೆ ಸ್ಪಷ್ಟತೆ ಇರಬೇಕು. 


ಅದರಲ್ಲೂ ಸ್ಪರ್ಧಾತ್ಮಕ ಜಗತ್ತಿನ ಈ ಯುಗದಲ್ಲಿ ವಿದ್ಯಾರ್ಥಿಗಳು ಯಾವುದೇ ಪರೀಕ್ಷೆ ಬರೆಯುವ ಮುನ್ನ ತಯಾರಿ ನಡೆಸುವ ಕುರಿತು ಸೂಕ್ತ ಯೋಜನೆ‌ ಮೊದಲೇ ರೂಪಿಸಿಕೊಂಡಿರಬೇಕು. ಯಾವುದೇ ತಯಾರಿ ಇಲ್ಲದೇ ಪರೀಕ್ಷೆಗೆ ಕುಳಿತುಕೊಳ್ಳುವುದು ತರಬೇತಿ ಇಲ್ಲದೇ ಯುದ್ಧಕ್ಕೆ ಧುಮುಕಿದಂತೆ ಎಂಬುದನ್ನು ಎಂದೂ ಮರೆಯಬಾರದು. ಯುದ್ಧದಲ್ಲಿ ಕಡಿಮೆ ರಕ್ತ ಹರಿಯಬೇಕೆಂದರೆ ತರಬೇತಿಯ ಅವಧಿಯಲ್ಲಿ ಅತೀ ಹೆಚ್ಚು ಬೆವರು ಹರಿಯಲೇಬೇಕು. ಅಂದರೆ ತರಬೇತಿಯ ಅವಧಿಯಲ್ಲಿ ಅತ್ಯುತ್ಕೃಷ್ಟವಾದ ಯುದ್ಧಕಲೆಗಳನ್ನು ಕಲಿತಾಗಲೇ ನಿಜಯುದ್ಧದಲ್ಲಿ ಎದುರಾಗುವ ಯುದ್ಧಕಲಿಗಳನ್ನು ಎದುರಿಸಲು ಸಾಧ್ಯವಾಗುತ್ತದೆ.


ಆದ್ದರಿಂದ ಯಾವುದೇ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸವಾಗ ಪ್ರತಿಯೊಬ್ಬ ಅಭ್ಯರ್ಥಿಗಳೂ ಸಹ ಆ ಪರೀಕ್ಷೆಯ ಸಿಲಬಸ್ ಗೆ ತಕ್ಕಂತೆ ಸಿದ್ಧವಾಗುವುದು ಉಚಿತ. ಇದರ ಜೊತೆಗೆ ಪ್ರಚಲಿತ ಘಟನೆಗಳ ಕುರಿತು‌ ಅಪ್‌ಡೇಟ್‌ ಆಗುತ್ತಾ ಇರಬೇಕು. ಅಧ್ಯಯನಕ್ಕೆ ಮುಖ್ಯವಾಗಿದ್ದನ್ನು‌ ಬರೆದಿಟ್ಟುಕೊಳ್ಳಬೇಕು. ಹಿಂದಿನ ಸಾಧಕರ, ಬ್ಯಾಂಕ್ ಹೋಲ್ಡರ್‌ಗಳ ಅಧ್ಯಯನ ಶೈಲಿಯನ್ನು ಅನುಸರಿಸಬೇಕು. 


ಇದೆಲ್ಲಕ್ಕಿಂತ‌ ಮುಖ್ಯವಾಗಿ ಪ್ರತಿಯೊಂದರಲ್ಲಿಯೂ ಹಿನ್ನಡೆ, ಮುನ್ನಡೆ ಎಂಬುದು ಇದ್ದೇ ಇರುತ್ತದೆ. ಕರ್ಮಣ್ಯೇವಾಧಿಕಾರಸ್ತೆ ಮಾಫಲೇಷುಕದಾಚನ ಎನ್ನುವಂತೆ ಕೇವಲ ಪ್ರಾಮಾಣಿಕ ಪ್ರಯತ್ನ ನೀವು ಮಾಡಿ, ಅದರ ಪ್ರತಿಫಲಗಳ ಕುರಿತು ಚಿಂತಿಸದಿರಿ ಎನ್ನುವಂತೆ. ಅದರ ಫಲಿತಾಂಶಗಳ ಕುರಿತು ಗಮನ ಹರಿಸದೆ, ಗೆಲುವಿಗಾಗಿ ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂಬ ಆತ್ಮವಿಶ್ವಾಸ ನಮಗಿರಬೇಕು.


ಇಷ್ಟಿದ್ದರೆ ಸಾಕು, ನಮ್ಮ ಪ್ರಾಮಾಣಿಕ ಪ್ರಯತ್ನ ಮತ್ತು ಪರಿಶ್ರಮಕ್ಕೆ ಒಂದು ಒಳ್ಳೆಯ ಸಮಯ ಬಂದೇ ಬರುತ್ತದೆ. ಕಾರಣ ಎಲ್ಲರೂ ಯೋಗ್ಯವಾದೊಂದು ಗುರಿಯನ್ನು ನಿರ್ಧರಿಸಿಕೊಳ್ಳಿ..!! ಇಂದೇ ಆ ಜೀವನಕ್ಕೆ ಮುನ್ನುಡಿ ಬರೆಯಿರಿ. ನಿರಂತರ ಪ್ರಾಮಾಣಿಕ ಪರಿಶ್ರಮ ಒಂದಿಲ್ಲೊಂದು ದಿನ ಫಲಿಸಿಯೇ ಫಲಿಸುತ್ತದೆ. ಎಲ್ಲರಿಗೂ ಶುಭವಾಗಲಿ..!!


No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads