ಸಾವಿತ್ರಿಬಾಯಿ ಫುಲೆ ಜನ್ಮದಿನ : ಜನವರಿ - 03
ಭಾರತದಲ್ಲಿ ಅಕ್ಷರಕ್ರಾಂತಿ ಆರಂಭಿಸಿದ ಭಾರತದ ಮೊದಲ ಮಹಿಳಾ ಶಿಕ್ಷಕಿಯಾದ “ಸಾವಿತ್ರಿಬಾಯಿ ಫುಲೆ” ಅವರ 192ನೇ ಜನ್ಮದಿನವಾಗಿದೆ.
- ಜನನ : ಜನವರಿ 3, 1831
- ಜನ್ಮಸ್ಥಳ : ಮಹಾರಾಷ್ಟ್ರದ ಸತಾರಾ ಜಿಲ್ಲೆಯ ನೈಗಾಂನ್
ಸಾವಿತ್ರಿಬಾಯಿ ಫುಲೆ ಅವರಿಗೆ ಮನೆಯೇ ಮೊದಲು ಪಾಠಶಾಲೆ ಪತಿ ಜ್ಯೋತಿಬಾ ಫುಲೆ ಅವರೇ ಗುರುಗಳು 1847 ರಲ್ಲಿ ಸಾವಿತ್ರಿಬಾಯಿ ಶ್ರೀಮತಿ ಮಿಚಲ್ ಅವರ ನಾರ್ಮಲ್ ಶಾಲೆಯಲ್ಲಿ ಶಿಕ್ಷಕಿಯ ತರಬೇತಿ ಪಡೆದರು.
ಉನ್ನತ ಪ್ರಶಸ್ತಿಗಳ ಸ್ಥಾಪನ ದಿನ ಜನವರಿ 02
- 1848 ರಿಂದ 1852 ರ ಅವಧಿಯಲ್ಲಿ ಫುಲೆ ದಂಪತಿಗಳು 18 ಪಾಠಶಾಲೆಗಳನ್ನು ತೆರೆದರು.
- ಇವರು ಸಮಾಜದ ಅನಿಷ್ಟ ಪದ್ಧತಿಗಳಾದ ಬಾಲ್ಯ ವಿವಾಹ ಸತಿ ಸಹಗಮನ ಪದ್ಧತಿ, ಕೇಶಮುಂಡನೆ ವಿರುದ್ಧ ಹೋರಾಟ ಮಾಡಿ ಮಹಿಳೆಯರಿಗೋಸ್ಕರ ಪ್ರಥಮವಾಗಿ ಶಾಲೆಗಳು ಮತ್ತು ಅಬಲಾಶ್ರಮ ಸ್ಥಾಪನೆ ಮಾಡಿದ ಕೀರ್ತಿ ಇವರಿಗೆ ಸಲ್ಲುತ್ತದೆ.
- ಸಾವಿತ್ರಿಬಾಯಿ ಫುಲೆಯವರು ಸಾಹಿತ್ಯ ಕ್ಷೇತ್ರಕ್ಕೂ ತಮ್ಮದೇ ಆದಂತಹ ಕೊಡುಗೆಯನ್ನು ನೀಡಿದ್ದಾರೆ. ಅವರು 1854 ರಲ್ಲಿ “ಕಾವ್ಯಪೂಜೆ” ಕವನ ಸಂಕಲನವನ್ನು ಪ್ರಕಟಿಸಿದರು.
- ಅವರು ಈ ಕೃತಿಯನ್ನು “ಅಭಂಗ” ಶೈಲಿಯಲ್ಲಿ ರಚಿಸಿದ್ದಾರೆ ಮತ್ತು 1891 ರಲ್ಲಿ “ಭಾವನ ಸುಭೋದ ರತ್ನಾಕರ” ಮತ್ತು 1892 ರಲ್ಲಿ ಕರ್ಜೆ (ಸಾಲ) ಕೃತಿಯನ್ನು ಸಹ ರಚಿಸಿದ್ದಾರೆ.
- ಬ್ರಿಟೀಷ್ ಸರ್ಕಾರ “ಇಂಡಿಯಾಸ್ ಫಸ್ಟ್ ಲೇಡಿ ಟೀಚರ್” ಎಂದು ಸಾವಿತ್ರಿಬಾಯಿ ಅವರಿಗೆ ಗೌರವ ಸಲ್ಲಿಸಿತ್ತು.
- 1998 ರಲ್ಲಿ ಅವರ ಗೌರವಾರ್ಥವಾಗಿ ಭಾರತ ಸರ್ಕಾರ “ಅಂಚೆ ಚೀಟಿ” ಬಿಡುಗಡೆ ಮಾಡಿದೆ.
- 2015 ರಲ್ಲಿ ಪುಣೆ ವಿಶ್ವವಿದ್ಯಾಲಯಕ್ಕೆ “ಸಾವಿತ್ರಿಬಾಯಿ ಫುಲೆ ವಿಶ್ವವಿದ್ಯಾಲಯ” ಎಂದು ಮರುನಾಮಕರಣ ಮಾಡಲಾಯಿತು.
- ಮಹಾರಾಷ್ಟ್ರ ಸರ್ಕಾರ ಸಾವಿತ್ರಿಬಾಯಿ ಅವರ ಜನ್ಮ ಶತಮಾನೋತ್ಸವವನ್ನು ಆಚರಿಸಿ ಪ್ರತಿವರ್ಷ ಅವರ ಜನ್ಮದಿನದಂದು “ಸಾವಿತ್ರ ಉತ್ಸವ” ಆಚರಿಸಲು ನಿರ್ಧರಿಸಿದೆ.
ಜ್ಯೋತಿಭಾ ಫುಲೆ :
- ಮಹಾತ್ಮ ಜ್ಯೋತಿಭಾ ಫುಲೆ ಅವರಿಂದ ಮಹಾರಾಷ್ಟ್ರದಲ್ಲಿ ಬ್ರಾಹ್ಮಣೇತರ ಚಳುವಳಿ ಆರಂಭವಾಯಿತು.
- 1873 ರಲ್ಲಿ ಮಹಾರಾಷ್ಟ್ರದ ಪುಣೆಯಲ್ಲಿ “ಸತ್ಯಶೋಧಕ ಸಮಾಜ” ಸ್ಥಾಪಿಸಿದರು.
- ಇವರ ಪ್ರಸಿದ್ಧ ಕೃತಿ - “ಗುಲಾಮಗಿರಿ”
No comments:
Post a Comment
If you have any doubts please let me know