24 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು24th January 2024 Daily Top-10 General Knowledge Questions and Answers
24 ಜನವರಿ 2024 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
24th January 2024 Daily Top-10 General Knowledge Questions and Answers
1. ಮರಾಠರ ಮೊಟ್ಟ ಮೊದಲ ಪೇಶ್ವೆಯ ಹೆಸರೇನು?
- ಮೋರೋಪಂಥ್ ಪಿಂಗ್ಲೆ
2. ಆಲಂಗೀರ್ ಎಂಬುದು ಯಾವ ಮೊಘಲ್ ದೊರೆಯ ಬಿರುದಾಗಿತ್ತು?
- ಔರಂಗಜೇಬ್
3. ಅಬ್ದುಲ್ ಹಮೀದ್ ಲಾಹೋರಿ ಯಾರು?
- ಷಹಜಹಾನ್ ಆಳ್ವಿಕೆಯಲ್ಲಿ ಅವನ ಅಧಿಕೃತ ಚರಿತ್ರಕಾರನಾಗಿದ್ದನು.
4. ಪರಿಸರ ಸಂರಕ್ಷಣೆ ಮತ್ತು ವನ್ಯಜೀವಿ ರಕ್ಷಣೆ ಕುರಿತು ತಿಳಿಸುವ ಸಂವಿಧಾನದ ವಿಧಿ ಯಾವುದು?
- 48ಎ ವಿಧಿ
5. ಆಧುನಿಕ ವಿಜ್ಞಾನದ ಪಿತಾಮಹ ಎಂದು ಯಾರನ್ನು ಕರೆಯಲಾಗುತ್ತದೆ?
- ಗೆಲಿಲಿಯೋ ಗೆಲಿಲಿ
6. ದಿ ಬ್ಲೂ ಅಂಬ್ರೆಲ್ಲಾ ಎಂಬುದು ಯಾರ ಕಾದಂಬರಿ?
- ರಸ್ಕಿನ್ ಬಾಂಡ್
7. ಪ್ರಸಿದ್ಧ ಜೈನ ಪಂಡಿತನಾದ ಜಿನಸೇನನು ಯಾವ ದೊರೆಯ ಆಸ್ಥಾನದಲ್ಲಿ ಇದ್ದನು?
- ಅಮೋಘವರ್ಷ
8. ನೊಳಂಬವಾಡಿಗೊಂಡ ಎಂಬ ಬಿರುದನ್ನು ಯಾವ ದೊರೆಯು ಹೊಂದಿದ್ದನು?
- ಹೊಯ್ಸಳರ ಪ್ರಸಿದ್ಧ ಅರಸ ವಿಷ್ಣುವರ್ಧನ
9. ಭಾರತದ ಸುಪ್ರೀಂ ಕೋರ್ಟ್ ಯಾವಾಗ ಕಾರ್ಯ ಆರಂಭಿಸಿತು?
- 28 ಜನವರಿ 1950
10. ರಾಜ್ಯಸಭೆಯ ರಚನೆಯ ಕುರಿತು ಸಂವಿಧಾನದ ಯಾವ ವಿಧಿಯು ವಿವರಣೆ ನೀಡುತ್ತದೆ?
- 80ನೇ ವಿಧಿ
No comments:
Post a Comment
If you have any doubts please let me know