ಪಿಯುಸಿ ಮತ್ತು ಪದವಿ ಪಾಸಾದ ಅಭ್ಯರ್ಥಿಗಳಿಗಿವೆ ಯುಪಿಎಸ್‌ಸಿ ಯಲ್ಲಿ 857 ಹುದ್ದೆಗಳು ಸಂಪೂರ್ಣ ಮಾಹಿತಿ ಇಲ್ಲಿದೆ
UPSC Jobs 2024 : ಉದ್ಯೋಗಕ್ಕಾಗಿ ಹುಡುಕುತ್ತಿರುವ ಪಿಯುಸಿ ಮತ್ತು ಪದವಿ ಪಾಸಾದ ಅಭ್ಯರ್ಥಿಗಳೇ ನಿಮಗಿದೆ ಇಲ್ಲಿ ಗುಡ್ ನ್ಯೂಸ್. ಹೌದು ಕೇಂದ್ರ ಸರ್ಕಾರಿ ಹುದ್ದೆಗೆ ಸೇರಬೇಕು. ಅದರಲ್ಲೂ ರಕ್ಷಣಾ ಇಲಾಖೆಗಳಲ್ಲಿ ಕೆಲಸ ಪಡೆಯಬೇಕು ಎಂದುಕೊಂಡ ನಿರುದ್ಯೋಗಿ ಯುವಕರಿಗೆ ಇಲ್ಲಿದೆ ಭರ್ಜರಿ ಶುಭ ಸುದ್ದಿ. ಕೇಂದ್ರ ಲೋಕಸೇವಾ ಆಯೋಗ (ಯುಪಿಎಸ್‌ಸಿ) ದ ಮೂಲಕ ನೇಮಕ ಮಾಡಲಾಗುವ ಕಂಬೈನ್ಡ್ ಡಿಫೆನ್ಸ್ ಸರ್ವೀಸ್, ನೇವಲ್ ಅಕಾಡೆಮಿ, ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಹುದ್ದೆಗಳಿಗೆ ಅರ್ಜಿ ಆಹ್ವಾನಿಸಲಾಗಿದೆ. ಈ ನೇಮಕ ಪ್ರಕ್ರಿಯೆಗಳನ್ನು ವರ್ಷದಲ್ಲಿ ಎರಡು ಬಾರಿ ನಡೆಸಲಾಗುತ್ತದೆ. ಆದ್ದರಿಂದ ಆಸಕ್ತರು ಸದರಿ ಹುದ್ದೆಗಳಿಗೆ ಅರ್ಜಿ ಸಲ್ಲಿಸಬಹುದು.
ಪ್ರಸ್ತುತ ಉದ್ಯೋಗದ ಹೈಲೈಟ್ಸ್ ಇಲ್ಲಿವೆ:
- ರಕ್ಷಣಾ ಇಲಾಖೆಯಲ್ಲಿ ಭರ್ಜರಿ 857 ಹುದ್ದೆಗಳು
- ಕೇಂದ್ರ ರಕ್ಷಣಾ ಇಲಾಖೆಯಲ್ಲಿ ಉದ್ಯೋಗಾವಕಾಶ.
- ಯುಪಿಎಸ್‌ಸಿ ಮೂಲಕ ನಡೆಯಲಿದೆ ನೇಮಕಾತಿ
- ಪದವಿ, ಪಿಯು ಅರ್ಹತೆಯುಳ್ಳವರಿಗೆ ಸಿಗಲಿದೆ ಉದ್ಯೋಗ
- upsc jobs 2024
- upsc jobs for puc and degree passed candidates in 2024
ಕೇಂದ್ರ ರಕ್ಷಣಾ ಇಲಾಖೆಯಲ್ಲಿನ ಅಕಾಡೆಮಿಗಳಲ್ಲಿ ಖಾಲಿ ಇರುವ ಸೀಟುಗಳಿಗೆ, ರಕ್ಷಣಾ ಸೇವೆಗಳಿಗೆ ಪ್ರತಿವರ್ಷವು ಕೇಂದ್ರ ಲೋಕಸೇವಾ ಆಯೋಗ ಎರಡು ಬಾರಿ ಪರೀಕ್ಷೆ ನಡೆಸಿ, ಅಗತ್ಯ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಳುಹಿಸುತ್ತದೆ. ಇಲ್ಲಿ ವಿವಿಧ ಗ್ರೇಡ್‌ನ ಹುದ್ದೆಗಳಿದ್ದು, ಪದವಿ ಹಾಗೂ ದ್ವಿತೀಯ ಪಿಯುಸಿ ಪಾಸಾದವರು ಅರ್ಜಿ ಸಲ್ಲಿಸಬಹುದು. ಆ ಹುದ್ದೆಗಳಿಗೆ ಆಕರ್ಷಕ ಸಂಬಳ ನೀಡಲಾಗುತ್ತದೆ. ಇವು ಖಾಯಂ ಹುದ್ದೆಗಳಾಗಿದ್ದು, ಲಿಖಿತ ಪರೀಕ್ಷೆ, ದೈಹಿಕ ಸಾಮರ್ಥ್ಯ ಪರೀಕ್ಷೆ, ದೈಹಿಕ ಸಹಿಷ್ಣುತೆ ಪರೀಕ್ಷೆ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ. ಸದರಿ ಹುದ್ದೆಗಳ ವಿವರಗಳನ್ನು ಈ ಕೆಳಗಿನಂತೆ ನೀಡಲಾಗಿದೆ
ಕಂಬೈನ್ಡ್ ಡಿಫೆನ್ಸ್ ಸರ್ವೀಸ್ ಹುದ್ದೆಗಳು-2024
ಯುಪಿಎಸ್‌ಸಿ ಸಿಡಿಎಸ್ ಪರೀಕ್ಷೆ I, 2024 ಅಧಿಸೂಚನೆ ಪ್ರಕಟಿಸಿದೆ. ಈ ಪರೀಕ್ಷೆಗೆ ಯಾವುದೇ ಪದವಿ, ಬಿಇ, ಬಿ.ಟೆಕ್, ಇತರೆ ಟೆಕ್ನಿಕಲ್ ಕೋರ್ಸ್‌ಗಳನ್ನು ಪಾಸ್ ಮಾಡಿದವರು ಅರ್ಜಿ ಸಲ್ಲಿಸಬಹುದು. 20-24 ರ ವಯೋಮಾನದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಲಿಖಿತ ಪರೀಕ್ಷೆ, ಪಿಇಟಿ, ಪಿಎಸ್‌ಟಿ, ವೈದ್ಯಕೀಯ ಪರೀಕ್ಷೆ ನಡೆಸುವ ಮೂಲಕ 400 ಅಭ್ಯರ್ಥಿಗಳ ಆಯ್ಕೆ ನಡೆಸಲಾಗುತ್ತದೆ. ಅರ್ಹರನ್ನು ಭಾರತೀಯ ವಾಯುಪಡೆ ಅಕಾಡೆಮಿ, ಭಾರತೀಯ ನೌಕಾಪಡೆ ಅಕಾಡೆಮಿ, ಮಿಲಿಟರಿ ಅಕಾಡೆಮಿ ಮತ್ತು ಆಫೀಸರ್ಸ್ ಟ್ರೈನಿಂಗ್ ಅಕಾಡೆಮಿ ಗಳಿಗೆ ನಿಯೋಜನೆ ಮಾಡಲಾಗುತ್ತದೆ. ಆರಂಭಿಕ ಸಂಬಳ ರೂ.56,100 ಇರುತ್ತದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಕಂಪ್ಲೀಟ್ ವಿದ್ಯಾರ್ಹತೆ, ವಯಸ್ಸಿನ ಅರ್ಹತೆ, ಆಯ್ಕೆ ಪ್ರಕ್ರಿಯೆ, ಪ್ರಮುಖ ದಿನಾಂಕಗಳು, ಇತರೆ ಮಾಹಿತಿಗಳನ್ನು ಕೆಳಗೆ ನೀಡಲಾಗಿದೆ.
ಎನ್‌ಡಿಎ, ಎನ್‌ಎ ಅಕಾಡೆಮಿ ಹುದ್ದೆಗಳು
ಕೇಂದ್ರ ಲೋಕಸೇವಾ ಆಯೋಗವು ಪ್ರತಿ ವರ್ಷವು ನ್ಯಾಷನಲ್ ಡಿಫೆನ್ಸ್ ಅಕಾಡೆಮಿ ಮತ್ತು ನೇವಲ್ ಅಕಾಡೆಮಿಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಲು ಎರಡು ಬಾರಿ ಪರೀಕ್ಷೆ ನಡೆಸುತ್ತದೆ. ಇದೀಗ ಇದರ ಅಧಿಸೂಚನೆ ಬಿಡುಗಡೆ ಮಾಡಿದೆ. 2024 ನೇ ಸಾಲಿನ ಮೊದಲ ಪರೀಕ್ಷೆಯನ್ನು ಏಪ್ರಿಲ್ ತಿಂಗಳಲ್ಲಿ ನಡೆಸುತ್ತದೆ. ಆದರೆ ಇಂದಿನಿಂದಲೇ ರಿಜಿಸ್ಟ್ರೇಷನ್ ಆರಂಭವಾಗಿದೆ. ಈ ಅಕಾಡೆಮಿಗಳಿಗೆ ಆಯ್ಕೆಯಾಗಲು ಅರ್ಜಿ ಸಲ್ಲಿಸಲು ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ಓದಿರಬೇಕು. ಈ ಪರೀಕ್ಷೆ ಮೂಲಕ 400 ಅಭ್ಯರ್ಥಿಗಳು ಮೊದಲ ಪರೀಕ್ಷೆಯಲ್ಲಿ ಆಯ್ಕೆ ಮಾಡಿ ನೇಮಕ ಮಾಡಲಿದೆ. ಈ ಹುದ್ದೆಗಳಿಗೂ ಸಹ ಆರಂಭಿಕ ವೇತನ ರೂ.56,100 ಇರಲಿದೆ. ಆಸಕ್ತರು ಅರ್ಜಿ ಸಲ್ಲಿಸಲು ಬೇಕಾದ ಕಂಪ್ಲೀಟ್ ಮಾಹಿತಿಗಳನ್ನು ಕೆಳಗಿನ ಲಿಂಕ್ ಕ್ಲಿಕ್ ಮಾಡಿ ಓದಿಕೊಳ್ಳಿ.
ವಿಶೇಷ ದಿನಾಂಕಗಳು
ವಿವರ | ದಿನಾಂಕ/ಸಮಯ |
---|---|
ಅರ್ಜಿ ಸಲ್ಲಿಸಲು ಆರಂಭ ದಿನಾಂಕ | 09-01-2024, ಸಂಜೆ 06 ಗಂಟೆವರೆಗೆ |
ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ (ಆಫ್‌ಲೈನ್) | 08-01-2024, ಸಂಜೆ 06 ಗಂಟೆವರೆಗೆ |
ಅರ್ಜಿ ಶುಲ್ಕ ಪಾವತಿಗೆ ಕೊನೆ ದಿನಾಂಕ (ಆನ್‌ಲೈನ್) | 09-01-2024, ಸಂಜೆ 06 ಗಂಟೆವರೆಗೆ |
ಆನ್‌ಲೈನ್ ಅಪ್ಲಿಕೇಶನ್ ತಿದ್ದುಪಡಿಗೆ ಅವಕಾಶ | 2024 ರ ಜನವರಿ 10 ರಿಂದ 16 ರವರೆಗೆ |
ಕಂಬೈನ್ಡ್ ಡಿಫೆನ್ಸ್ ಸರ್ವೀಸೆಸ್ ಪರೀಕ್ಷೆ ದಿನಾಂಕ | 21-04-2024 |
ಎನ್‌ಡಿಎ, ಎನ್‌ಎ ಪರೀಕ್ಷೆ ದಿನಾಂಕ | 21-04-2024 |
ಸಿಡಿಎಸ್, ಎನ್‌ಡಿಎ, ಎನ್‌ಎ ಪರೀಕ್ಷೆಗೆ ರಿಜಿಸ್ಟ್ರೇಷನ್ ವಿಧಾನ
- ಯೂನಿಯನ್ ಪಬ್ಲಿಕ್ ಸರ್ವೀಸ್ ಕಮಿಷನ್ ಅಫೀಶಿಯಲ್ ವೆಬ್‌ಸೈಟ್ upsc.gov.in ಗೆ ಭೇಟಿ ನೀಡಿ.
-ತೆರೆದ ವೆಬ್‌ಪುಟದಲ್ಲಿ 'UPSC CDS, NDA, NA I Examination 2024' ಗೆ ಸಂಬಂಧಿಸಿದ ಲಿಂಕ್ ಕ್ಲಿಕ್ ಮಾಡಿ. ಅಥವಾ
- https://upsconline.nic.in ವೆಬ್‌ಸೈಟ್‌ಗೆ ಭೇಟಿ ನೀಡಿ.
- ಈ ವೆಬ್‌ಪುಟದಲ್ಲಿ ' One Time Registration' ಲಿಂಕ್ ಕ್ಲಿಕ್ ಮಾಡಿ, ರಿಜಿಸ್ಟ್ರೇಷನ್ ಪಡೆಯಿರಿ.
- ನಂತರ ನೀವು ಅರ್ಹತೆಯುಳ್ಳ ಪರೀಕ್ಷೆ ಆಯ್ಕೆ ಮಾಡಿ, ಅರ್ಜಿ ಸಲ್ಲಿಸಿ.
No comments:
Post a Comment
If you have any doubts please let me know