Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Tuesday, 10 October 2023

ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ಪೀಠಿಕೆ ನೋಟ್ಸ್ ಪ್ರಶ್ನೋತ್ತರಗಳು

ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ಪೀಠಿಕೆ ನೋಟ್ಸ್ ಪ್ರಶ್ನೋತ್ತರಗಳು

ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ಪೀಠಿಕೆ ನೋಟ್ಸ್ ಪ್ರಶ್ನೋತ್ತರಗಳು, 2nd Puc History Chapter 1 Notes Question Answer Mcq Pdf in Kannada Medium 2024 Introduction in India in Kannada Notes ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ ಭಾರತದ ಇತಿಹಾಸದ ಮೂಲಾಧಾರಗಳು ನೋಟ್ಸ್ 2nd Puc History Peetike Notes Answers, Karnataka 2nd PUC History Complete Notes in Kannada For All Competitive Exams

ದ್ವಿತೀಯ ಪಿ.ಯು.ಸಿ ಇತಿಹಾಸ ಅಧ್ಯಾಯ-1 ಪೀಠಿಕೆ ನೋಟ್ಸ್ ಪ್ರಶ್ನೋತ್ತರಗಳು, 2nd Puc History Chapter 1 Notes Question Answer Mcq Pdf in Kannada Medium 2024 Introduction in India in Kannada Notes ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ ಭಾರತದ ಇತಿಹಾಸದ ಮೂಲಾಧಾರಗಳು ನೋಟ್ಸ್ 2nd Puc History Peetike Notes Answers, Karnataka 2nd PUC History Complete Notes in Kannada For All Competitive Exams:

ಕರ್ನಾಟಕ ದ್ವಿತೀಯ ಪಿಯುಸಿ ಅಧ್ಯಾಯ-1 ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ-ಭಾರತದ ಇತಿಹಾಸದ ಮೂಲಾಧಾರಗಳು ಅಧ್ಯಾಯದ ಪ್ರಶ್ನೋತ್ತರಗಳು & ಸಂಪೂರ್ಣ ನೋಟ್ಸ್

I. ಈ ಕೆಳಗಿನ ಪ್ರಶ್ನೆಗಳಿಗೆ ಒಂದು ಪದ ಅಥವಾ ವಾಕ್ಯದಲ್ಲಿ ಉತ್ತರಿಸಿ:

ಉತ್ತರ: ನ್ಯಾಚುರಲ್ ಹಿಸ್ಟೋರಿಯಾ.

ಉತ್ತರ: ಪರ್ಷಿಯನ್ ಭಾಷೆಯಿಂದ ಬಂದಿದೆ.

ಉತ್ತರ: ಶ್ರೀ ವಿಜಯನ ಕವಿರಾಜಮಾರ್ಗ.

ಉತ್ತರ: ಆಯಾ ಕಾಲದಲ್ಲಿ ಚಾಲನೆಯಲ್ಲಿದ್ದ ನಾಣ್ಯಗಳ ಸಹಾಯದಿಂದ ಇತಿಹಾಸವನ್ನು ತಿಳಿಯುವುದೇ ನಾಣ್ಯಶಾಸ್ತ್ರವಾಗಿದೆ.

ಉತ್ತರ: ಮೂಲಾಧಾರಗಳನ್ನು ಹೆಕ್ಕಿ ತೆಗೆಯಲು ಕೈಗೊಳ್ಳುವ ವೈಜ್ಞಾನಿಕ ಭೂ ಅಗೆತವನ್ನು ಉತ್ಪನನ ಎನ್ನುವರು.

ಉತ್ತರ: ಇಮ್ಮಡಿ ಮಲಿಕೇಶಿಯ ಸಾಧನೆಗಳನ್ನು ವಿವರಿಸುತ್ತದೆ.

ಉತ್ತರ: “ಬುದ್ಧಚರಿತ’ ವನ್ನು ಬರೆದವರು ಅಶ್ವಘೋಷ

ಕರ್ನಾಟಕ ದ್ವಿತೀಯ ಪಿಯುಸಿ ಅಧ್ಯಾಯ-1 ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ-ಭಾರತದ ಇತಿಹಾಸದ ಮೂಲಾಧಾರಗಳು II. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ ಎರಡು ಪದ ಅಥವಾ ವಾಕ್ಯಗಳಲ್ಲಿ ಉತ್ತರಿಸಿ:

ಉತ್ತರ: * ಮೌಂಟ್ ಎವರೆಸ್ಟ್ ಮತ್ತು * ಕಾಂಚನಜುಂಗ,

ಉತ್ತರ: ಜೈನಧರ್ಮ ಮತ್ತು ಬೌದ್ಧ ಧರ್ಮ.

ಉತ್ತರ: ರಾಜಸ್ಥಾನದ ಗಿರಿದುರ್ಗಗಳು ಮತ್ತು ಹಂಪಿ

ಉತ್ತರ: ಖೈಬರ್ ಮತ್ತು ಬೋಲಾನ್ ಕಣಿವೆ.

ಉತ್ತರ: ಸಾಗರದಿಂದ ಉತ್ತರಕ್ಕೆ ಮತ್ತು ಹಿಮಾಲಯದಿಂದ ದಕ್ಷಿಣಕ್ಕೆ ಇರುವ ಪ್ರದೇಶವೇ ಭಾರತದ ವ್ಯಾಪ್ತಿ.

ಉತ್ತರ: ಹಿಂದೂಸ್ತಾನ, ಇಂಡಿಯಾ

ಉತ್ತರ: ಉತ್ತರಕ್ಕೆ ಹಿಮಾಲಯ, ದಕ್ಷಿಣಕ್ಕೆ ಸಾಗರಗಳು, ಪಶ್ಚಿಮದ ಮರುಭೂಮಿಗಳು, ದಖನ್ ಪ್ರಸ್ಥಭೂಮಿಗಳು.

ಉತ್ತರ: ನಳಂದಾ ಮತ್ತು ವಿಕ್ರಮಶೀಲಾ ವಿಶ್ವವಿದ್ಯಾನಿಲಯಗಳು.

ಉತ್ತರ: ಮೌರ್ಯರು ಮತ್ತು ಗುಪ್ತರು,

ಉತ್ತರ: ವರ್ಧನರು ಮತ್ತು ರಾಷ್ಟ್ರಕೂಟರು.

ಉತ್ತರ: ಇತಿಹಾಸವು ಗತಿಸಿಹೋದ ಘಟನೆಗಳ ವೈಜ್ಞಾನಿಕ ವಿಶ್ಲೇಶಣೆಯಾದ್ದರಿಂದ ಆಧಾರಗಳು ಅತ್ಯಗತ್ಯ, ಆದ್ದರಿಂದ ಆಧಾರವಿಲ್ಲದೆ ಇತಿಹಾಸವಿಲ್ಲ.

ಉತ್ತರ: ಲಿಖಿತ ಮೂಲಾಧಾರಗಳು ಲಭ್ಯವಿಲ್ಲದ ಕಾಲವೇ ಇತಿಹಾಸದ ಪೂರ್ವಕಾಲ. ಲಿಖಿತ ಮೂಲಾಧಾರಗಳೂ ಲಭ್ಯವಿರುವ ಕಾಲವೇ ಇತಿಹಾಸ ಕಾಲ

ಉತ್ತರ: * ನಾಣ್ಯಗಳು, ಕಾಲ, ರಾಜವಂಶ, ಆರ್ಥಿಕ ಸ್ಥಿತಿಗಳ ಬಗ್ಗೆ ತಿಳಿಸುತ್ತವೆ.

* ಕಲಾಕೌಶಲ್ಯ, ವ್ಯಾಪಾರ ಸಂಬಂಧದ ಬಗ್ಗೆ ಬೆಳಕು ಚೆಲ್ಲುತ್ತವೆ.

ಉತ್ತರ: ದಕ್ಷಿಣಕ್ಕೆ ಕಾವೇರಿ ನದಿಯಿಂದ ಉತ್ತರಕ್ಕೆ ಗೋದಾವರಿ ನದಿಯವರೆವಿಗೂ ಹಬ್ಬಿತ್ತು.

ಉತ್ತರ: ಬಾದಾಮಿ ಚಾಲುಕ್ಯರು ಮತ್ತು ಹೊಯ್ಸಳರು.

ಉತ್ತರ: ಕಡಲತೀರಗಳು ಮತ್ತು ಪಶ್ಚಿಮ ಘಟ್ಟಗಳು ( ಸಹ್ಯಾದಿ ) ಮಲೆನಾಡು ಹಾಗೂ ಉತ್ತರ ದಕ್ಷಿಣದ ಬಯಲುಗಳು

ಉತ್ತರ: * ಅವು ಸಾಮಾನ್ಯವಾಗಿ ಸಮಕಾಲೀನವಾಗಿರುತ್ತವೆ.

* ಮೌಲ್ಯಯುತ, ಪ್ರಮಾಣಬದ್ದ, ನೇರ ಆಧಾರಗಳಾಗಿವೆ.

ಉತ್ತರ: ಪ್ರಾಚೀನ ಮಾನವರ ಜೀವನ ಮತ್ತು ಚಟುವಟಿಕೆಗಳ ಅವಶೇಷಗಳೇ ಪ್ರಾಕ್ತನ ಅಥವಾ ಪುರಾತತ್ವ ಆಧಾರಗಳು.

ಉತ್ತರ: * ದೇಶೀಯ ಸಾಹಿತ್ಯ

* ವಿದೇಶಿಯರ ಬರವಣಿಗೆಗಳು

ಉತ್ತರ: ರಾಮಾಯಣ ಮತ್ತು ಮಹಾಭಾರತ,

ಉತ್ತರ: 21. ಆರ್ಯಭಟನ ಕೃತಿಗಳನ್ನು ಹೆಸರಿಸಿ.

ಉತ್ತರ: ಹೂಯಾನ್‌ತ್ಸಾಂಗ್ ಮತ್ತು ಫಾಹಿಯಾನ್.

ಉತ್ತರ: ಇಟಲಿಯ ನಿಕಲೋಕಾಂಟಿ ಮತ್ತು ಪರ್ಷಿಯಾದ ಅಬ್ದುಲ್ ರಜಾಕ್.

ಕರ್ನಾಟಕ ದ್ವಿತೀಯ ಪಿಯುಸಿ ಅಧ್ಯಾಯ-1 ಭಾರತದ ಇತಿಹಾಸದ ಮೇಲೆ ಭೂಗೋಳದ ಪ್ರಭಾವ-ಭಾರತದ ಇತಿಹಾಸದ ಮೂಲಾಧಾರಗಳು ಅಧ್ಯಾಯದ ಪ್ರಶ್ನೋತ್ತರಗಳು : III. ಈ ಕೆಳಗಿನ ಪ್ರತಿಯೊಂದು ಪ್ರಶ್ನೆಗಳಿಗೂ 15-20 ವಾಕ್ಯಗಳಲ್ಲಿ ಉತ್ತರಿಸಿ:

ಉತ್ತರ:

ಭಾರತದ ಭೌಗೋಳಿಕ ಲಕ್ಷಣಗಳಾದ ಹಿಮಾಲಯ ಪರ್ವತಗಳು, ಉತ್ತರದ ಬಯಲುಗಳು, ಮರುಭೂಮಿ, ಪರ್ವತಗಳು, ನದಿಗಳು, ದಕ್ಷಿಣದ ಪ್ರಸ್ತಭೂಮಿ ಮತ್ತು ಕರಾವಳಿ ತೀರಗಳು ಭಾರತದ ಸಾಂಸ್ಕೃತಿಕ ಮತ್ತು ರಾಜಕೀಯ ಇತಿಹಾಸದ ಮೇಲೆ ತನ್ನದೇ ಪ್ರಭಾವವನ್ನು ಬೀರಿದೆ.

ಹಿಮಾಲಯ ಪರ್ವತವು ಭಾರತವನ್ನು ಏಷ್ಯಾದ ಇನ್ನುಳಿದ ಭಾಗಗಳಿಂದ ಪ್ರತ್ಯೇಕಿಸಿದ್ದು ಇದು ಭಾರತಕ್ಕೆ ನೈಸರ್ಗಿಕ ತಡೆಗೋಡೆಯಂತಿದೆ. ಸದಾಕಾಲ ಹರಿಯುವ ನದಿಗಳಿಗೆ ಜನ್ಮ ನೀಡಿದೆ.

ಈ ನದಿಗಳು ಉತ್ತರದ ಫಲವತ್ತಾದ ಬಯಲುಗಳನ್ನು ನಿರ್ಮಿಸಿದ್ದು ಇವು ನಾಗರೀಕತೆ ಮತ್ತು ಸಾಮ್ರಾಜ್ಯಗಳ ತೊಟ್ಟಿಲುಗಳಾಗಿವೆ.

ಉತ್ತರದ ಕಣಿವೆಗಳಾದ ಖೈಬರ್ ಮತ್ತು ಬೋಲಾನ್ ಮುಂತಾದವು ವಿದೇಶಿಯರೊಂದಿಗೆ ವಾಣಿಜ್ಯ ಮತ್ತು ಸಾಂಸ್ಕೃತಿಕ ಸಂಬಂಧವನ್ನು ಬೆಳೆಸಲು ಮತ್ತು ವಿದೇಶಿ ದಾಳಿಗೆ ಕಾರಣವಾಗಿದೆ.

ಪಶ್ಚಿಮದ ಮರುಭೂಮಿ ಮತ್ತು ದಕ್ಷಿಣದ ಪ್ರಸ್ತಭೂಮಿಯ ದಟ್ಟ ಕಾಡುಗಳು ಜನರನ್ನು ಕಠಿಣ ಪರಿಶ್ರಮಿ ಮತ್ತು ಯುದ್ಧಪ್ರಿಯರನ್ನಾಗಿಸಿವೆ.

ದಕ್ಷಿಣದ ಸಮುದ್ರಗಳು ಒಂದು ಕಾಲದಲ್ಲಿ ತಡೆಬೇಲಿಗಳಾಗಿದ್ದವು.

ನಂತರದಲ್ಲಿ ಜಗತ್ತಿನ ಇತರ ಭಾಗಗಳಿಗೆ ಸಂಪರ್ಕ ಬೆಳೆಸಲು ಸಾಧನಗಳಾದವು.

ಉತ್ತರ ಮತ್ತು ದಕ್ಷಿಣದ ನದಿ ಬಯಲುಗಳು ಅತಿ ಪುರಾತನ ಕಾಲದಿಂದ ಈ ದೇಶವನ್ನು ಕೃಷಿಪ್ರಧಾನ ದೇಶವನ್ನಾಗಿಸಿವೆ.

ಇಲ್ಲಿನ ಅನೇಕ ವಿಧದ ಖನಿಜಗಳು, ಬಂಡೆಗಳು, ಮರಳುಕಲ್ಲು, ಗ್ರಾನೈಟ್ ಮತ್ತು ಅಮೃತ ಶಿಲೆಯಂತಹ

ಶಿಲೆಗಳ ಲಭ್ಯತೆಯು ಅರಮನೆಗಳು, ದುರ್ಗಗಳು, ಕೋಟೆ, ಆಯುಧಗಳು, ಮತ್ತು ವಾಸ್ತುಶಿಲ್ಪದ ಸಿರಿವಂತಿಕೆಗೆ ಸಾಕ್ಷಿಯಾಗಿವೆ.

ಉತ್ತರ:

ಭಾರತವು ವಿಸ್ತೀರ್ಣದಲ್ಲಿ ಜಗತ್ತಿನ ಏಳನೇ ದೊಡ್ಡ ರಾಷ್ಟ್ರವಾಗಿದ್ದು ಜನಸಂಖ್ಯೆಯಲ್ಲಿ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.

ಇದು ಚೀನಾದ ಹಾಗೆ ಸುಮಾರು ನಾಲ್ಕು ಸಾವಿರ ವರ್ಷಗಳ ನಿರಂತರ ಇತಿಹಾಸವನ್ನು ಹೊಂದಿದೆ.

ಸಿಂಧೂ ನಾಗರೀಕತೆಯಿಂದ ವೈದಿಕ ನಾಗರೀಕತೆ, ಹೊಸ ಮತಗಳ ಉದಯಕ್ಕೆ, ಮುಸ್ಲಿಂ ಮತ್ತು ಕ್ರೈಸ್ತ ಧರ್ಮದ ಅಭಿವೃದ್ಧಿಗೆ ಸರಬದ್ಧ ವಿಕಾಸವನ್ನು ರೂಪಿಸಿದೆ.

ಗ್ರೀಕರು, ಪರ್ಶಿಯನ್ನರು, ಹೂಣರು, ಶಕರು, ಅರಬ್ಬರು, ಟರ್ಕರು, ಕುಶಾನರು, ಆಫ್ಘನ್ನರು ಹೀಗೆ ವಿದೇಶೀಯರ ದಾಳಿಗೆ ಒಳಗಾದರೂ ಭಾರತೀಯ ಸಂಸ್ಕೃತಿಗೆ ಕಲೆ, ಮತ್ತು ವಾಸ್ತುಶಿಲ್ಪಕ್ಕೆ ಅಗಾಧ ಕೊಡುಗೆಗಳನ್ನು ನೀಡಿದ್ದಾರೆ.

ಹಿಂದೂ, ಜೈನ, ಬೌದ್ಧ, ಸಿಖ್, ಮುಸ್ಲಿಂ, ಕ್ರೈಸ್ತ, ಪಾರಸೀ ಹಾಗು ವಿವಿಧ ಬುಡಕಟ್ಟು ಧರ್ಮ ಮತ್ತು ಆಚರಣೆಗಳ ತವರಾಗಿದೆ.

ಭಾರತವು ಜಗತ್ತಿಗೆ ಸಾಹಿತ್ಯ, ತತ್ವಶಾಸ್ತ್ರ, ಸಂಗೀತ, ನೃತ್ಯ, ಕಲೆ, ವಾಸ್ತುಶಿಲ್ಪ, ಮೂರ್ತಿಕಲೆ, ವಿಜ್ಞಾನ, ಯೋಗ, ವೈದ್ಯಕೀಯ, ಗಣಿತ, ಖಗೋಳಶಾಸ್ತ್ರ ಶಿಕ್ಷಣ ಮುಂತಾದ ಕ್ಷೇತ್ರಗಳಿಗೆ ತನ್ನದೇ ಆದ ಕೊಡುಗೆಯನ್ನು ನೀಡಿದೆ.

ವಿಶೇಷವಾದ ಭೌಗೋಳಿಕ ರಚನೆಯನ್ನು ಹೊಂದಿದ್ದು ವಿದೇಶಿಯರ ಆಕರ್ಷಣೆಯ ಕೇಂದ್ರವಾಗಿದೆ.

ವಿವಿಧತೆಯಲ್ಲಿ ಏಕತೆಯನ್ನು ರೂಪಿಸಿದೆ.

ಉತ್ತರ:

ಭಾರತವು ಭೌಗೋಳಿಕ ವೈವಿಧ್ಯತೆಯೊಂದಿಗೆ ಮಾನವ ಚಟುವಟಿಕೆಯ ಪ್ರತಿಯೊಂದು ರಂಗದಲ್ಲಿಯೂ ವೈವಿದ್ಯತೆಯನ್ನು ಹೊಂದಿದೆ.

ಭೌಗೋಳಿಕ ವೈವಿಧ್ಯತೆ- ಮರುಭೂಮಿಗಳು, ಹಿಮಾಲಯ ಪರ್ವತಗಳು, ಪ್ರಸ್ತಭೂಮಿಗಳು, ಕಡಲತೀರಗಳು ವೈವಿಧ್ಯಮಯವಾದ ಜೀವಸಂಕುಲಕ್ಕೆ ಆಶೆಯವಾಗಿದ್ದು ಏಕತೆಯನ್ನು ಹೊಂದಿದೆ.

ದ್ರಾವಿಡ, ನೀಗ್ರೋ, ಮಂಗೋಲಿಯನ್, ಅಲ್ಪಾಯಿನ್ ಮುಂತಾದ ಜನಾಂಗಗಳು, ವಿವಿಧ ಜಾತಿ ಜನಾಂಗದವರು ವಿವಿಧ ಭಾಷಿಗರು ವಾಸವಾಗಿದ್ದು ಸಾಮರಸ್ಯದೊಂದಿಗೆ ಸಹಬಾಳ್ವೆ ನಡೆಸುತ್ತಿದ್ದಾರೆ.

ಸಂಪನ್ಮೂಲಗಳು ಅಸಮಾನವಾಗಿ ಹಂಚಿಕೆಯಾಗಿದ್ದು, ಬಡವರು ಮತ್ತು ಶ್ರೀಮಂತರು ಎಂಬ ಎರಡು ವರ್ಗಗಳಿದ್ದರೂ, ಕೆಲವು ಪ್ರದೇಶಗಳು ಅಭಿವೃದ್ಧಿಶೀಲ, ಕೆಲವು ಪ್ರದೇಶಗಳು ಅನಭಿವೃದ್ಧಿ ಹೊಂದಿವೆ.

ಹಲವಾರು ರಾಜ್ಯಗಳು ವಿಭಿನ್ನತೆಯನ್ನು ಹೊಂದಿದ್ದರೂ ಏಕೀಕರಿಸಿ ನಮ್ಮದೇ ಸಂವಿಧಾನವನ್ನು ರೂಪಿಸಿ ಏಕತೆ ಸ್ಥಾಪಿಸಲಾಗಿದೆ.

ಏಕರೂಪ ಶಿಕ್ಷಣ ಮತ್ತು ಸಾಹಿತ್ಯ ಮುಂತಾದ ಮಾರ್ಪಾಡುಗಳೊಂದಿಗೆ ವಿವಿಧತೆಯಲ್ಲಿ ಏಕತೆಯನ್ನು ಸ್ಥಾಪಿಸಲಾಗಿದೆ.

ಉತ್ತರ:

ಭಾರತವು ತನ್ನ ವಿಶೇಷವಾದ ಆಕರ್ಷಣೆಯಿಂದಾಗಿ ವಿದೇಶೀಯರನ್ನು ತನ್ನತ್ತ ಸೆಳೆಯಿತು. ಅವರಲ್ಲಿ ಅನೇಕರು ತಮ್ಮ ಅನುಭವ ಅಭಿಪ್ರಾಯಗಳನ್ನು ಬರೆದಿಟ್ಟಿದ್ದಾರೆ. ಅವುಗಳೇ ವಿದೇಶಿ ಬರವಣಿಗೆಗಳು. ಇವುಗಳು ಭಾರತದ ಇತಿಹಾಸ ತಿಳಿಯಲು ಸಹಕಾರಿಯಾಗಿವೆ.

ಗ್ರೀಕ್ ರಾಯಭಾರಿ ಮೆಗಾಸ್ತನೀಸನ ‘ಇಂಡಿಕಾ’ ಗ್ರಂಥದಿಂದ ಮೌರ್ಯರ ಕಾಲವನ್ನು ತಿಳಿದು ಕೊಳ್ಳಬಹುದು.

ಟಾಲಮಿಯ ‘ಜಿಯಾಗ್ರಫಿ’ ಗ್ರಂಥದಿಂದ ಪ್ರಾಚೀನ ಭಾರತದ ವಾಣಿಜ್ಯ ಸಂಬಂಧದ ಬಗ್ಗೆ ತಿಳಿದು ಕೊಳ್ಳಬಹುದು.

ಪ್ಲಿನಿಯ ನ್ಯಾಚುರಲ್ ಹಿಸ್ಟೋರಿಯಾದಿಂದ ಭಾರತ ರೋಮ್ ಸಂಬಂಧ ಮತ್ತು ಅಂದಿನ ಭಾರತದ ರಾಜಕೀಯ ಸ್ಥಿತಿಯ ಬಗ್ಗೆ ತಿಳಿದುಕೊಳ್ಳಬಹುದು.

ಚೀನಿ ಯಾತ್ರಿಕರಾದ ಫಾಹಿಯಾನ್ ಮತ್ತು ನ್ಯೂಯಾನ್ ತ್ಸಾಂಗ್‌ರ ಗ್ರಂಥಗಳಿಂದ ಮೌರ್ಯರ, ವರ್ಧನರ, ಬಾದಾಮಿ ಚಾಲುಕ್ಯರ ಇತಿಹಾಸವನ್ನು ತಿಳಿದುಕೊಳ್ಳಬಹುದು.

ಇಟಲಿಯ ನಿಕಲೋಕಾಂಟಿ, ಫರ್ಷಿಯಾದ ಅಬ್ದುಲ್ ರಜಾಕ್, ಪೋರ್ಚುಗಲ್‌ನ ಬಾಸಾ, ಡೋಮಿಂ ಗೋಪೇಸ್, ರಷ್ಯಾದ ನಿಕಟಿನ್ ಮುಂತಾದವರ ಬರಹಗಳಿಂದ ವಿಜಯನಗರ ಮತ್ತು ಬಹುಮನಿಗಳ ಇತಿಹಾಸದ ಬಗ್ಗೆ ತಿಳಿದುಕೊಳ್ಳಬಹುದು.

ಉತ್ತರ:

ಪ್ರಾಕ್ತನ ಅಥವಾ ಪುರಾತತ್ವ ಮೂಲಾಧಾರಗಳೂ ಪ್ರಾಚೀನ ಮಾನವರ ಜೀವನ ಮತ್ತು ಚಟುವಟಿಕೆಗಳ ಅವಶೇಷಗಳಾಗಿದ್ದು ಇವು ಇತಿಹಾಸದ ಪುನರ್ ರಚನೆಗೆ ಅಮೂಲ್ಯ ಮತ್ತು ಉಪಯುಕ್ತ ಮಾಹಿತಿಯನ್ನು ನೀಡುತ್ತವೆ.

ಉತ್ಪನನಗಳು – ಮೂಲಾಧಾರಗಳನ್ನು ಹೆಕ್ಕಿ ತೆಗೆಯಲು ಕೈಗೊಳ್ಳುವ ವೈಜ್ಞಾನಿಕ ಭೂ ಅಗತ್ಯವೇ ಉತ್ಪನನ. ಭಾರತದ ಇತಿಹಾಸ ಪೂರ್ವಕಾಲವನ್ನು ಉತ್ಪನ ನಗಳ ಆಧಾರದಿಂದಲೇ ಬರೆಯಲಾಗಿದೆ. ಸಿಂಧೂ ನಾಗರೀಕತೆಯ ಅಧ್ಯಯನಕ್ಕೆ ಉತ್ಪನನಗಳೇ ಆಧಾರ, ಕಾಂಬೋಡಿಯಾ, ಜಾವಾ, ತಕ್ಷಶಿಲಾ, ಗಯಾ, ಪಾಟಲೀಪುತ್ರ ಹಂಪಿ ಮುಂತಾದ ಕಡೆ ನಡೆಸಿದ ಉತ್ಪನನಗಳಿಂದಾಗಿ ಭಾರತದ ಇತಿಹಾಸವನ್ನು ಅರಿಯಲು ಸಹಾಯಕವಾಗಿವೆ.

ಸ್ಮಾರಕಗಳು: ಇವು ಐತಿಹಾಸಿಕ ಮಹತ್ವದ ನಿವೇಶನಗಳು ಮತ್ತು ರಚನೆಗಳಾಗಿವೆ. ಕೋಟೆಗಳು, ಅರಮನೆಗಳು, ಗುಹೆಗಳು, ಗುಡಿಗಳು, ಬಸದಿಗಳು, ಮೂರ್ತಿಗಳು, ಸ್ತೂಪಗಳು ಮುಂತಾದವುಗಳಾಗಿವೆ.

ನಾಣ್ಯಗಳು: ನಾಣ್ಯಗಳು ಕಾಲ, ರಾಜವಂಶ, ಆರ್ಥಿಕಸ್ಥಿತಿ, ಧರ್ಮ ಲಿಪಿ ಮತ್ತು ಭಾಷೆಗಳನ್ನು ತಿಳಿಯಲು ಸಹಾಯ ಮಾಡುತ್ತವೆ.

ವರ್ಣಚಿತ್ರಗಳು: ವಿವಿಧ ಕಾಲಗಳ ವರ್ಣಚಿತ್ರಗಳು ನಮಗೆ ಅಂದಿನ ಕಾಲದ ಸಾಮಾಜಿಕ, ಸಾಂಸ್ಕೃತಿಕ ಮತ್ತು ಧಾರ್ಮಿಕ ವಿಷಯಗಳನ್ನು ಕಣ್ಣಿಗೆ ಕಟ್ಟುವಂತೆ ತಿಳಿಸುತ್ತದೆ.

ಶಾಸನಗಳು: ಶಾಸನಗಳು ಇತಿಹಾಸ ರಚನೆಯಲ್ಲಿ ನಂಬಲಾರ್ಹ ಆಧಾರಗಳು, ಶಾಸನಗಳನ್ನು, ಶಿಲೆಗಳು, ಬಂಡೆಗಳು, ಗೋಡೆಗಳು, ಮಣ್ಣಿನ ಮುದ್ರಿಕೆಗಳು, ಕಬ್ಬಿಣದ ಕಂಬಗಳು, ತಾಮ್ರಪಟಗಳ ಮೇಲೆ ಕೆತ್ತಲಾಗಿದ್ದು ಭಾರತದಲ್ಲಿ ಈವರೆವಿಗೆ ಸುಮಾರು 75,000 ಶಾಸನಗಳು ದೊರೆತಿದ್ದು ಇವು ಇತಿಹಾಸದ ಅಧ್ಯಯನಕ್ಕೆ ಬೆಳಕು ಚೆಲ್ಲಿವೆ.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads