09th September 2023 Daily General Knowledge Question Answers Quiz in Kannada For All Competitive Exams
General Knowledge Quiz in Kannada For All Competitive Exams
Daily General Knowledge (GK) Question Answers Quiz in Kannada For All Competitive Exams:
ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಸಾಮಾನ್ಯ ಜ್ಞಾನದ ಟಾಪ್-20 ಪ್ರಶ್ನೋತ್ತರಗಳ ರಸಪ್ರಶ್ನೆ ಕ್ವಿಜ್
ಹಿಂದಿನ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕೇಳಿರುವ ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳ ರಸಪ್ರಶ್ನೆ ಕ್ವಿಜ್ ಸಂಗ್ರಹ:
ಸಾಮಾನ್ಯ ಜ್ಞಾನದ ಟಾಪ್-10 ವಿವರಣೆ ಸಹಿತ ಪ್ರಶ್ನೋತ್ತರಗಳು
01. ಯಾರು ಸಪ್ತಾಂಗ ಥಿಯರಿ ಆಫ್ ಸ್ಟೇಟ್ ಪ್ರತಿಪಾದಿಸಿದರು?
Answer: a) ಅರ್ಥಶಾಸ್ತ್ರದಲ್ಲಿ ಕೌಟಿಲ್ಯ
Explanation: ಅರ್ಥಶಾಸ್ತ್ರದಲ್ಲಿ ಕೌಟಿಲ್ಯ: ಭಾರತೀಯ ಅರ್ಥಶಾಸ್ತ್ರದ ಪಿತಾಮಹ ಎನಿಸಿದ ಕೌಟಿಲ್ಯ ಅಥವಾ ಚಾಣಕ್ಯ ಅಥವಾ ವಿಷ್ಣುಗುಪ್ತ ಬರೆದ ಪ್ರಸಿದ್ಧ ಕೃತಿ ಅರ್ಥಶಾಸ್ತ್ರದಲ್ಲಿ ಸಪ್ತಾಂಗ ಥಿಯರಿ ಆಫ್ ಸ್ಟೇಟ್ಸ್ ಅನ್ನು ಪ್ರತಿಪಾದಿಸಿದ್ದಾರೆ.
2. ಎರಡನೇ ದುಂಡು ಮೇಜಿನ ಪರಿಷತ್ತಿನ ಸಮಯದಲ್ಲಿ ಬ್ರಿಟನ್ ಪ್ರಧಾನ ಮಂತ್ರಿ ಯಾರಾಗಿದ್ದರು?
Answer: a) ರಾಮ್ಸೆ ಮ್ಯಾಕ್ ಡೊನಾಲ್ಡ್
Explanation: ರಾಮ್ಸೆ ಮ್ಯಾಕ್ ಡೊನಾಲ್ಡ್: 1930 ರಿಂದ 1932ರವರೆಗೆ ಪ್ರತಿವರ್ಷ ಲಂಡನ್ ನಲ್ಲಿ ಮೂರು ದುಂಡು ಮೇಜಿನ ಸಮ್ಮೇಳನಗಳು ನಡೆದವು ಈ ಮೂರು ಸಮ್ಮೇಳನದ ಅಧ್ಯಕ್ಷತೆಯನ್ನು ಇಂಗ್ಲೆಂಡಿನ ಪ್ರಧಾನ ಮಂತ್ರಿ ರಾಮ್ಸೆ ಮ್ಯಾಕ್ಡೊನಾಲ್ಡ್ ವಹಿಸಿದ್ದರು.
3. ಸಚಿವ ಸಂಪುಟದ (ಕ್ಯಾಬಿನೆಟ್ ಮಿಷನ್) ರಾಯಭಾರಿಗಳು ಭಾರತಕ್ಕೆ ಬಂದಿದ್ದು ಯಾವಾಗ?
Answer: c) 1946
Explanation: 1946ರಲ್ಲಿ ಜನವರಿ 22ರಂದು ಕ್ಯಾಬಿನೆಟ್ ಆಯೋಗವನ್ನು ಇಂಗ್ಲೆಂಡಿನಲ್ಲಿ ಲೇಬರ್ ಪಕ್ಷದ ಕ್ಲೈಮಂಟ್ ಅಟ್ಲಿ ಭಾರತಕ್ಕೆ ಕಳುಹಿಸಿದ್ದರು ಇದು ಭಾರತಕ್ಕೆ ಸಂವಿಧಾನ ರಚಿಸಿಕೊಳ್ಳುವಂತೆ ತಿಳಿಸಿತು.
4. ಕಾರಾಗೃಹದಲ್ಲಿ ಯಾವ ಸ್ವಾತಂತ್ರ್ಯ ಹೋರಾಟಗಾರ ಅನ್ನ ಸತ್ಯಾಗ್ರಹ ಮಾಡಿ ಮೃತಪಟ್ಟನು?
Answer: d) ಜತಿನ್ ದಾಸ್
Explanation: ಜತಿನ್ ದಾಸ್: 1929ರಲ್ಲಿ ಜತಿನ್ ದಾಸ್ ಭಾರತೀಯ ಕೈದಿಗಳಿಗೆ ಲಾಹೋರ್ ಜೈಲಿನಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಉಪವಾಸ ಮೂಲಕ ಸತ್ಯಾಗ್ರಹ ಕೈಗೊಂಡು ಮರಣ ಹೊಂದಿದರು.
5. ದಕ್ಷಿಣ ತೀರದ ರೈಲ್ವೆ ಜೋನ್ ಮುಖ್ಯ ಕೇಂದ್ರ ಇರುವುದು?
Answer: b) ವಿಶಾಖಪಟ್ಟಣಂ
Explanation: ವಿಶಾಖಪಟ್ಟಣಂ:ಭಾರತದಲ್ಲಿ ರೈಲ್ವೆ ಸಾರಿಗೆಯನ್ನು 18 ವಲಯಗಳಾಗಿ ವಿಭಾಗಿಸಲಾಗಿದೆ ಇವುಗಳಲ್ಲಿ ದಕ್ಷಿಣ ತೀರಿದ ರೈಲ್ವೆ ವಲಯವು 2019ರಲ್ಲಿ ರಚನೆಯಾದ ವಲಯವಾಗಿದೆ ಇದರ ಕೇಂದ್ರ ಕಚೇರಿಯು ಆಂಧ್ರಪ್ರದೇಶದ ವಿಶಾಖಪಟ್ಟಣಂ ನಲ್ಲಿದೆ.
6. ಮೋಹಿನಿ ಅಟ್ಟಂ ಈ ನೃತ್ಯ ಸ್ವರೂಪವು __________ ರಾಜ್ಯದಿದೆ?
Answer: d) ಕೇರಳ
Explanation: ಕೇರಳ: ಮೋಹಿನಿ ಅಟ್ಟಂ ಎಂಬುದು ಕೇರಳ ರಾಜ್ಯದ ಮಹಿಳೆಯರ ನೃತ್ಯವಾಗಿದೆ.
7. ನಿವೃತ್ತ ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಅವರನ್ನು ರಾಜ್ಯಪಾಲ ಗವರ್ನರ್ ಎಂದು ನೇಮಕಾತಿ ಮಾಡಲಾಗಿದೆ?
Answer: a) ಪುದುಚೇರಿ
Explanation: ಪುದುಚೇರಿ: ದೇಶದ ಮೊದಲ ಐಪಿಎಸ್ ಅಧಿಕಾರಿನೇಯಾದ ಕಿರಣ್ ಬೇಡಿ ಅವರು ಪುದುಚೇರಿ ಕೇಂದ್ರಾಡಳಿತ ಪ್ರದೇಶದ ಲೆಫ್ಟಿನೆಂಟ್ ಗವರ್ನರ್ ಆಗಿ 2016 ಮೇ 28 ರಿಂದ 2021 ಫೆಬ್ರವರಿ 16ರವರೆಗೆ ಸೇವೆ ಸಲ್ಲಿಸಿದ್ದಾರೆ.
8. 24 ಗಂಟೆಗಳಲ್ಲಿ ಗಡಿಯಾರದ ಕೈಗಳು ಎಷ್ಟು ಬಾರಿ ಒಂದು ಆಗುತ್ತದೆ?
Answer: c) 22
Explanation: aaaaaaaaaಒಂದು ದಿನಕ್ಕೆ 24 ಗಂಟೆಗಳಿದ್ದು ಗಂಟೆ ಮತ್ತು ನಿಮಿಷದ ಮುಳ್ಳುಗಳು 12 ಗಂಟೆಯಿಂದ ಒಂದು ಗಂಟೆಗೆ ಚಲಿಸುವಾಗ ಸಂಧಿಸುವುದಿಲ್ಲ ಈ ರೀತಿ ಸಮಯ ದಿನದಲ್ಲಿ ಎರಡು ಬಾರಿ ಸಂಭವಿಸುತ್ತದೆ.aaaaaaaaaaaaa
9. ಈ ಕೆಳಗಿನವುಗಳಲ್ಲಿ ವಸತಿ ಪ್ರದೇಶಗಳಿಗೆ ಕೇಂದ್ರ ಮಾಲಿನ್ಯ ಮಂಡಳಿಯ ಸಲಹೆಯ ಪ್ರಕಾರ ಧ್ವನಿಮಿತಿಯು.
Answer: a) 55 ಡೆಸಿಬಲ್
Explanation: ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿಯು ದ್ವನಿಮಿತಿಯನ್ನು ವಸತಿ ಪ್ರದೇಶಗಳಲ್ಲಿ 55 ಡೆಸಿಬಲ್ ಎಂದು ನಿರ್ಧರಿಸಿದೆ ಇದು ಹಗಲಿನಲ್ಲಿ 55 ಡೆಸಿಬಲ್ ಹಾಗೂ ರಾತ್ರಿ ವೇಳೆ 45 ಡೆಸಿಬಲ್ ಆಗಿರುತ್ತದೆ.
10. ರಕ್ತವು ಯಾವ ದ್ರವ ಮಾಧ್ಯಮವನ್ನು ಹೊಂದಿರುತ್ತದೆ?
Answer: b) ಪ್ಲಾಸ್ಮಾ
Explanation: ಪ್ಲಾಸ್ಮ: ಈ ದ್ರವವನ್ನು ರಕ್ತವು ಹೊಂದಿರುತ್ತದೆ ರಕ್ತವು ದ್ರವ ಭಾಗ ಮತ್ತು ಘನ ಭಾಗಗಳನ್ನು ಹೊಂದಿದೆ ದ್ರವ ಭಾಗವು ಶೇಕಡ 55ರಷ್ಟಿದ್ದು ಪ್ಲಾಸ್ಮ ದಿಂದ ಕೂಡಿದೆ ಪ್ಲಾಸ್ಮಾದಲ್ಲಿ 90ರಷ್ಟು ನೀರು ಮತ್ತು ಶೇ 10 ರಷ್ಟು ಪ್ರೋಟಿನ್ ಇರುತ್ತದೆ.
No comments:
Post a Comment
If you have any doubts please let me know