Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Tuesday, 8 August 2023

Top-10 Important History Multiple Choice Question Answers Wth Detailed Explaination in Kannada

Top-10 Important History Multiple Choice Question Answers Wth Detailed Explaination in Kannada

ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಇತಿಹಾಸದ ಟಾಪ್-10 ಪ್ರಶ್ನೋತ್ತರಗಳು 08-08-2023

Top-10 Important History Multiple Choice Question Answers Wth Detailed Explaination in Kannada ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಇತಿಹಾಸದ ಟಾಪ್-1

ಇತಿಹಾಸದ ಟಾಪ್-10 ಪ್ರಶ್ನೆಗಳು:

[ಪ್ರಶ್ನೆಗಳ ಉತ್ತರ ಮತ್ತು ವಿವರಣೆ ಕೊನೆಯಲ್ಲಿವೆ.]


1. ಮೊಘಲ್ ಚಕ್ರವರ್ತಿಗಳು ಹೊಂದಿದ್ದ 'ಬಾದ್ ಷಾ'ಎಂಬ ಬಿರುದಾವಳಿಗಳನ್ನು ಮೊದಲು ಆರಂಭಿಸಿದ ಅರಸ.
ಎ) ಬಾಬರ್
ಬಿ) ಹುಮಾಯುನ್
ಸಿ) ಅಕ್ಬರ್
ಡಿ) ಶಹಜಹಾನ್


2. ಆತನ ಹೆಸರಿನ ಅರ್ಥ 'ಅದೃಷ್ಟವಂತ' ಎಂದು, ಆದರೆ ಇದು ಒಂದು ಸ್ವಲ್ಪವೂ ಅವನಿಗೆ ಅನ್ವಯಿಸುತ್ತಿರಲಿಲ್ಲ. ಈ ಹೇಳಿಕೆ ಯಾವ ಮೊಘಲ್ ರಾಜನಿಗೆ ಸಂಬಂಧಿಸಿದೆ?
ಎ) ಷಹಜಹಾನ್
ಬಿ) ಬಾಬರ್
ಸಿ) ಹುಮಾಯೂನ್
ಡಿ) ಅಕ್ಬರ್

3. ಮಧ್ಯಕಾಲೀನ ಹಿಂದೂ ದೇಶದಲ್ಲಿ ನಾನು ಅಲ್ಲ ಮತ್ತು ರಾಮನ ಪುತ್ರ ಎಂದು ಸಾರಿದ ಭಕ್ತಿಯ ಪ್ರತಿಪಾದಕರು
ಎ) ತುಳಸಿದಾಸರು
ಬಿ) ಕಬೀರದಾಸರು
ಸಿ) ದಾದೂದಯಾಳ್
ಡಿ) ಗುರುನಾನಕರು

4. "ಮೊದಲು ಓರ್ವ ವರ್ತಕ, ನಂತರ ಓರ್ವ ಸೈನಿಕ ಮತ್ತು ತದನಂತರ ಓರ್ವ ರಾಜಕಾರಣಿ." ಈ ವ್ಯಕ್ತಿಯು.
ಎ) ಡೂಪ್ಲೆ
ಬಿ) ಲಾರ್ಡ್ ಕರ್ಜನ್
ಸಿ) ಕರ್ನಲ್ ಬರ್ಗೋಯ್ನ್
ಡಿ) ರಾಬರ್ಟ್‌ ಕ್ಲೈವ್


5. ವಿಜಯನಗರ ಸಾಮ್ರಾಜ್ಯದ ಕೆಳಗಿನ ಯಾವ ಅರಸರು ಶ್ರೀಲಂಕಾದ ಮೇಲೆ ನೌಕಾದಾಳಿಯನ್ನು ನಡೆಸಿದರು?
ಎ) ಕೃಷ್ಣದೇವರಾಯ
ಬಿ) ಒಂದನೇ ಹರಿಹರ
ಸಿ) ಒಂದನೇ ದೇವರಾಯ
ಡಿ) ಎರಡನೇ ದೇವರಾಯ

6. ಈ ಕೆಳಕಂಡ ನಿರೂಪಣೆಯನ್ನು ಗಮನಿಸಿ. "ರಸ್ತೆಯ ಪಥಿಕನಾಗಿ ಸುಮಾರು 30 ವರ್ಷಗಳ ಕಾಲ ಸಂಚರಿಸುತ್ತ, ಆತ ಇಡೀ ಪೂರ್ವಾರ್ಧಗೋಳವನ್ನೆಲ್ಲ ಸುತ್ತಿದ. ಈಗಿನ ಸುಮಾರು 44 ದೇಶಗಳಿಗೆ ಸಮಾನವಾದಷ್ಟು ಪ್ರದೇಶಗಳಿಗೆ ಭೇಟಿ ನೀಡಿದ. ಹೀಗೆ ಸುಮಾರು 73,000 ಮೈಲುಗಳಷ್ಟು ದೂರವನ್ನು ಆತ ಕ್ರಮಿಸಿದ." ಆಧುನಿಕ ಪೂರ್ವ ಯುಗದ ಅತಿ ದೊಡ್ಡ ಪ್ರವಾಸಿಗ ಎನಿಸಿಕೊಂಡ ಯಾರಿಗೆ ಈ ನಿರೂಪಣೆ ಅನ್ವಯಿಸುತ್ತದೆ.
ಎ) ಮೆಗಾಸ್ತನೀಸ್
ಬಿ) ಪಾಹಿಯಾನ್
ಸಿ) ಮಾರ್ಕೊಫೋಲೊ
ಡಿ) ಇಬನ್ ಬಟೂಟ

7. ಮೈಸೂರಿನ ಆಧುನೀಕರಣವನ್ನು ಮೈಸೂರಿನ ಒಡೆಯರಲ್ಲಿ ಒಬ್ಬರು ಪ್ರಾರಂಭಿಸಿದರು ಎಂಬುದಾಗಿ ಹೇಳಲಾಗುತ್ತದೆ ಅವರು ಯಾರು?
ಎ) ಕಂಠೀರವ ನರಸರಾಜ ಒಡೆಯರು
ಬಿ) ಐದನೆಯ ಚಾಮರಾಜ ಒಡೆಯರು
ಸಿ) ಚಿಕ್ಕದೇವರಾಜ ಒಡೆಯರು
ಡಿ) ದೊಡ್ಡ ಕೃಷ್ಣರಾಜ ಒಡೆಯರ್

8. ಸಾಂಚಿ ಸ್ತೂಪವನ್ನು ಯಾರ ಆಳ್ವಿಕೆಯ ಕಾಲದಲ್ಲಿ ನಿರ್ಮಿಸಲಾಯಿತು?
ಎ) ಅಶೋಕ
ಬಿ) ಚಂದ್ರಗುಪ್ತ
ಸಿ) ಕನಿಷ್ಕ
ಡಿ) ಪುಷ್ಯಮಿತ್ರ ಶುಂಗ

9. ಮೂರನೇ ಕರ್ನಾಟಿಕ್ ಯುದ್ಧಕ್ಕೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಲ್ಲ?
ಎ) ಆಂಗ್ಲ ಸೈನ್ಯಕ್ಕೆ ಐರ್ ಕೂಟ್ ಹಾಗೂ ಫ್ರೆಂಚ್ ಸೈನ್ಯಕ್ಕೆ ಬುಸ್ಸಿ ಸೇನಾನಿಯಾಗಿದ್ದರು.
ಬಿ) ವಾಂಡಿವಾಷ್ ಎಂಬಲ್ಲಿ ಒಂದು ಯುದ್ಧವಾಯಿತು.
ಸಿ) ಯುದ್ಧ ಮುಗಿದಾಗ ಫ್ರೆಂಚರು ಭಾರತದಲ್ಲಿ ತಮ್ಮ ಪ್ರಭಾವವನ್ನು ಸ್ಥಿರವಾಗಿ ಸ್ಥಾಪಿಸಿದ್ದರು.
ಡಿ) ಫ್ರೆಂಚರು ಪಾಂಡಿಚೇರಿ ಮತ್ತು ಚಂದ್ರನಾಗೂರುಗಳ ಮೇಲೆ ಹಿಡಿತ ಉಳಿಸಿಕೊಂಡರು.

10. ರಾಷ್ಟ್ರೀಯ ಹೋರಾಟದ ಅಂಗವಾಗಿ ಅನಿಬೆಸೆಂಟರು ಆರಂಭಿಸಿದ ಪತ್ರಿಕೆಯ ಹೆಸರು-
ಎ) ಯಂಗ್ ಇಂಡಿಯಾ
ಬಿ) ನ್ಯೂ ಇಂಡಿಯಾ
ಸಿ) ಸ್ವರಾಜ್
ಡಿ) ಇಂಡಿಯನ್ ಸ್ಪೆಕ್ಟೇಟರ್

ಇತಿಹಾಸದ ಟಾಪ್-10 ಪ್ರಶ್ನೆಗಳ ಉತ್ತರ ಮತ್ತು ವಿವರಣೆ

ಪ್ರಶ್ನೆ 1) ಸರಿಯಾದ ಉತ್ತರ: ಎ) ಬಾಬರ್
ವಿವರಣೆ:
  • ಬಾಬರ್ ಮೊಘಲ್ ಸಾಮ್ರಾಜ್ಯದ ಸ್ಥಾಪಕ ಹಾಗೂ ಮೊಘಲ್ ಸಾಮ್ರಾಜ್ಯದ ಪ್ರಥಮ ಅರಸ.
  • ಟರ್ಕಿ ಭಾಷೆಯಲ್ಲಿ ಬಾಬರ್ ಎಂದರೆ ಹುಲಿ.
  • ಬಾಬರ್ ನು ಟರ್ಕಿಯ ಚಗಟಾಯ್ ಪಂಗಡಕ್ಕೆ ಸೇರಿದವನು.
  • ಬಾಬರನ ಮೂಲಸ್ಥಾನ ಕಾಬೂಲ್.
  • ಮೊಘಲ್ ಚಕ್ರವರ್ತಿಗಳು ಹೊಂದಿದ್ದ ಬಾದುಷಾ ಎಂಬ ಬಿರುದಾವಳಿಗಳನ್ನು ಮೊದಲು ಆರಂಭಿಸಿದ ಅರಸ ಬಾಬರ್.
  • ಹಾಗೂ ಮೊದಲ ಬಾದ್ ಷಾ ಎಂಬ ಬಿರುದು ಹೊಂದಿದ್ದವನು ಬಾಬರ್
  • ಬಾದ್ಷಾ ಎಂದರೆ ಆತ ಭೂಮಿಯ ಮೇಲಿನ ದೇವರ ಪ್ರತಿನಿಧಿ ಅಥವಾ ಪ್ರತಿ ಛಾಯೆ (ಜಿಲ್ಲಾ ಇಲಾಯಿ) ಎಂದು ನಂಬಲಾಗಿತ್ತು.
  • ಬಾಬರ್ ಭಾರತದಲ್ಲಿ ಪ್ರಥಮ ಬಾರಿಗೆ ಪಿರಂಗಿ ಪಡೆ/ ಬಾಂಬು ತೋಪು ಮತ್ತು ತುಪಾಕಿಗಳನ್ನು ಪರಿಚಯಿಸಿದನು ಹಾಗೂ ತುಲುಘಾಮ (ಮಧ್ಯೆ ಏಷ್ಯಾದ ಉಜ್ ಬೇಗರಿಂದ ಕಲಿತಿದ್ದನು ಎಂಬ ಯುದ್ಧ ತಂತ್ರವನ್ನು ಅನುಸರಿಸಿದನು.

ಪ್ರಶ್ನೆ 2) ಸರಿಯಾದ ಉತ್ತರ: ಸಿ) ಹುಮಾಯೂನ್
ವಿವರಣೆ:
  • ಹುಮಾಯುನ್ ಎಂದರೆ ಅದೃಷ್ಟವಂತ ಎಂದು ಅರ್ಥ. ಆದರೆ ಅವನಷ್ಟು ನತದೃಷ್ಟ ರಾಜ ಮತ್ತೊಬ್ಬನಿರಲಿಲ್ಲ. ಕಾರಣ ಅವನ ಬದುಕು ದುರಂತಗಳ ಸರಮಾಲೆಗಳಿಂದ ಕೂಡಿತ್ತು. ಅವನು ವ್ಯಕ್ತಿಯಾಗಿ ಯಶಸ್ಸು ಕಂಡರೂ ರಾಜನಾಗಿ ವಿಫಲನಾಗಿದ್ದನು. ಒಬ್ಬ ರಾಜನಿಗೆ ಇರಬೇಕಾದ ರಾಜ ತಾಂತ್ರಿಕ ನೈಪುಣ್ಯತೆ, ವಿವೇಚನೆ, ಸೈನಿಕ ಪ್ರತಿಭೆ ಯಾವವು ಅವನಲ್ಲಿ ಇರಲಿಲ್ಲ.
  • 20 ಜನವರಿ 1556 ರಂದು ತನ್ನ ಅರಮನೆಯ ಗ್ರಂಥಾಲಯದ ಮಹಡಿಯಿಂದ ಎಳೆಯುವಾಗ ಕಾಲು ಜಾರಿ ಬಿದ್ದು ಸಾವಿಗೀಡಾದನು.
  • ಲೇನ್ ಪೋಲ್: "ಅವನು ಜೀವನದ ಉದ್ದಕ್ಕೂ ಎಡವಿದ್ದೆ ಆಯಿತು ಕೊನೆಗೊಮ್ಮೆ ಬದುಕಿನಿಂದಲೇ ಎಡವಿ ಸತ್ತನು."
  • •ಅನೇಕ ಇತಿಹಾಸಕಾರರು ಹುಮಾಯುನನು ಅಕ್ಬರನಿಗೆ ಜನ್ಮ ನೀಡಿದ್ದೆ ಅವನ ಗಣ ಸಾಧನೆ ಎಂದಿದ್ದಾರೆ.
  • ಭಾರತದ ಅರಸನಾಗಿ ಹುಮಾಯುನನ ಜೀವನ ಅನೇಕ ತಪ್ಪು ನಿರ್ಧಾರಗಳಿಂದ ಕೂಡಿತ್ತು. ಅವನು ಖುಷಿ ಕೊಡುವ ಅಭ್ಯಾಸಗಳನ್ನೇ ಹೊಂದಿ ತನ್ನ ಬಹು ಸಮಯ ಮತ್ತು ಶಕ್ತಿಯನ್ನು ಇಂದ್ರಿಯ ಸುಖಕ್ಕೆ ಮೀಸಲಿಟ್ಟನು ಎಂದು ಹೇಳಲಾಗುತ್ತದೆ.
  • ಹುಮಾಯೂನ್ ನಿಗೆ ಖಗೋಳ ವಿಜ್ಞಾನ ಮತ್ತು ಭೌಗೋಳಿಕತೆ ತುಂಬಾ ಇಷ್ಟವಾಗಿತ್ತು. ಹುಮಾಯೂನ್ ಇಂಪಿರಿಯಲ್ ಗ್ರಂಥಾಲಯಕ್ಕಾಗಿ ಹೆಚ್ಚಿನ ಸಂಖ್ಯೆಯ ಪುಸ್ತಕಗಳನ್ನು ಸಂಗ್ರಹಿಸಿದನು.
  • ಹುಮಾಯುನ್ ತನ್ನ ಮಿಲಿಟರಿ ಕಾರ್ಯಾಚರಣೆಯ ಸಮಯದಲ್ಲಿ ಕೆಲವು ಆಯ್ದ ಪುಸ್ತಕಗಳನ್ನು ತನ್ನ ಬಳಕೆಗಾಗಿ ತೆಗೆದುಕೊಳ್ಳುತ್ತಿದ್ದ ಹಾಗೆ ಹುಮಾಯುನ್ ತತ್ವಶಾಸ್ತ್ರ ಗಣಿತಶಾಸ್ತ್ರ ಯುದ್ಧ ವಿದ್ಯಾ ಪರ್ಷಿಯನ್ ಭಾಷೆ ಆಡಳಿತ ಭಾಷೆಗಳಲ್ಲಿ ಉತ್ತಮ ಪಾಂಡಿತ್ಯವನ್ನು ಪಡೆದಿದ್ದನು.

ಪ್ರಶ್ನೆ 3) ಸರಿಯಾದ ಉತ್ತರ: ಬಿ) ಕಬೀರದಾಸರು
ವಿವರಣೆ:
  • ಸಂತ ಕಬೀರದಾಸರು ಭಕ್ತಿ ಪಂಥ ಚಳುವಳಿಯಲ್ಲಿ ಹಿಂದೂ ಮುಸ್ಲಿಮರ ಐಕ್ಯತೆಯನ್ನು ಪ್ರತಿಪಾದಿಸಿದವರಲ್ಲಿ ಪ್ರಮುಖರು.
  • ಕಬೀರ ದಾಸರು ಒಬ್ಬ ಬ್ರಾಹ್ಮಣ ವಿಧವೆಗೆ ಜನಿಸಿದಾಗ ಸಮಾಜದ ನಿಂಡನೆಗೆ ಹೆದರಿ ಅವಳು ಆ ಮಗುವನ್ನು ಲಹರತಲ ಎಂಬ ಕೊಳದ ಬಳಿ ಬಿಟ್ಟು ಬಂದಳು.
  • ಆಗ ಬನಾರಸಿನಲ್ಲಿ ನೇಯ್ಗೆ ಮಾಡುತ್ತಿದ್ದ ನೀರು ಮತ್ತು ನಿಮಾ ಎಂಬ ಮುಸ್ಲಿಂ ದಂಪತಿಗಳಿಗೆ ಆ ಮಗು ದೊರೆಯಿತು.
  • ಮಕ್ಕಳಿಲ್ಲದ ಈ ದಂಪತಿ ಆ ಮಗುವನ್ನು ಸಾಕಿದರು.
  • ಭಕ್ತಿ ಪಂಥ ಚಳುವಳಿಯಲ್ಲಿ ಹಿಂದೂ ಮುಸ್ಲಿಮರ ಐಕ್ಯತೆಯನ್ನು ಪ್ರತಿಪಾದಿಸುತ್ತಾ ಹಿಂದೂ ದೇಶದಲ್ಲಿ ನಾನು ಅಲ್ಲ ಮತ್ತು ರಾಮನ ಪುತ್ರ ಎಂದು ಸಾರಿದ ಭಕ್ತಿ ಪಂಥದ ಪ್ರವರ್ತಕ ಸಂತ ಕಬೀರದಾಸರು.
  • ರಾಮನ ಭಕ್ತರಾದ ಕಬೀರದಾಸರನ್ನು ನಿರ್ಗುಣ ತತ್ವದ ಸುಧಾರಕನೆಂದು, ವಿಠೋಭ ಪಂಥವನ್ನು ಜನಪ್ರಿಯಗೊಳಿಸಿದ ಭಕ್ತಿ ಚಳುವಳಿಯ ಸಂತನೆಂದು ಕರೆಯಲಾಗುತ್ತದೆ.
  • ತುಳಸಿದಾಸರು- ಇವರು ಅಕ್ಬರನ ಆಸ್ಥಾನದ ಒಬ್ಬ ರಾಮಭಕ್ತರಾಗಿದ್ದು ವಿಷ್ಣುವಿನ ಕರುಣೆಗೆ ಜ್ಞಾನ ಭಕ್ತಿ ಪೂಜೆಗಳಿಗೆ ಒತ್ತು ನೀಡಿದರು ರಾಮಚರಿತ ಮಾನಸ ಗೀತಾ ವಳಿ ಕವಿತಾ ವಳಿ ವಿನಯ ಪತ್ರಿಕೆ ತುಳಸಿದಾಸರ ಪ್ರಮುಖ ಕೃತಿಗಳು.
  • ದಾದುದಯಾಳ್- ಇವರು ಕಬೀರರ ಅನುಯಾಯಿ ಬ್ರಹ್ಮ ಸಂಪ್ರದಾಯ ಪಂಥವನ್ನು ಸ್ಥಾಪಿಸಿ ವಿವಿಧ ಧಾರ್ಮಿಕ ನಂಬಿಕೆಗಳನ್ನು ಒಂದುಗೂಡಿಸಿದರು.
  • ಗುರುನಾನಕ್- ಸಿಖ್ ಧರ್ಮದ ಸ್ಥಾಪಕರು. ಗುರುನಾನಕರ ಬೋಧನೆಗಳನ್ನು ಆದಿ ಗ್ರಂಥ ಅಥವಾ ಗುರು ಗ್ರಂಥ ಸಾಹೇಬ್ ನಲ್ಲಿ ಕಾಣಬಹುದು.

ಪ್ರಶ್ನೆ 4) ಸರಿಯಾದ ಉತ್ತರ: ಡಿ) ರಾಬರ್ಟ್‌ ಕ್ಲೈವ್
ವಿವರಣೆ:
  • ರಾಬರ್ಟ್ ಕ್ಲೈವ್ ಕಂಪನಿಯ ಸೇವೆಗೆ ಒಬ್ಬ ಗುಮಾಸ್ತನಾಗಿ ಸೇರಿ ಭಾರತಕ್ಕೆ ಬಂದ, ಕ್ರಮೇಣ ಮೇಲೇರಿ ಬಂಗಾಲದಲ್ಲಿ ಕಂಪನಿಯ ಗವರ್ನರ್ ಆದ ಕ್ಲೈವ್ ನನ್ನು ಬ್ರಿಟಿಷ್ ಆಳ್ವಿಕೆಯ ಸ್ಥಾಪಕ ಎಂದು ಹೇಳುವುದರಲ್ಲಿ ಯಾವುದೇ ಸಂದೇಹವಿಲ್ಲ.
  • ಪ್ಲಾಸಿ ಕದನದಲ್ಲಿ ಇಂಗ್ಲೀಷರ ವಿಜಯ ನವಾಬೀರ್ ಜಾಫರ್ ನನ್ನು ಕಂಪನಿಯು ಕೈಗೊಂಬೆಯ ಮಟ್ಟಕ್ಕೆ ಇಳಿಸಿದ್ದು ರಾಬರ್ಟ್ ಕ್ಲೈವ್ ನೇ ಇದಕ್ಕೆಲ್ಲ ಮುಖ್ಯ ಕಾರಣ.
  •  1765 ರಲ್ಲಿ ಬಂಗಾಳದಲ್ಲಿ ದ್ವಿ ಸರ್ಕಾರ ಪದ್ಧತಿ ಜಾರಿಯಲ್ಲಿ ತಂದನು.
  •  ರಾಬರ್ಟ್ ಕ್ಲೈವ್ ನನ್ನು ಭಾರತದ ಬ್ರಿಟಿಷ್ ಅಧಿಪತ್ಯದ ನಿಜವಾದ ಸ್ಥಾಪಕ ಎಂದು ಕರೆಯಲಾಗಿದೆ.
  •  ಒಂದು ವಾಣಿಜ್ಯ ಕಂಪನಿಯಾಗಿ ಭಾರತವನ್ನು ಪ್ರವೇಶಿಸಿದ್ದ ಈಸ್ಟ್ ಇಂಡಿಯಾ ಕಂಪನಿಯನ್ನು, ವಾಣಿಜ್ಯ ಕಂಪನಿಯಿಂದ ಒಂದು ಪ್ರಾದೇಶಿಕ ಆಡಳಿತ ಶಕ್ತಿಯನ್ನಾಗಿ ಬೆಳೆಸಿದ್ದ ಕೀರ್ತಿ ಕೂಡ ರಾಬರ್ಟ್ ಕ್ಲೈವ್ ನಿಗೆ ಸಲ್ಲುತ್ತದೆ.
  • ಭಾರತದ (ಬಂಗಾಳ) ದ ಮೊದಲ ಗವರ್ನರ್ ಜನರಲ್ ವಾರನ್ ಹೆಸ್ಟಿಂಗ್ಸ್
  • "ಕಾಂಗ್ರೆಸ್ ಪತನದ ಹಾದಿಯತ್ತ ಸಾಗುತ್ತಿದೆ ಮತ್ತು ನಾನು ಭಾರತದಲ್ಲಿರುವಾಗ ನನ್ನ ಮಹದಾಕಾಂಕ್ಷೆ ಎಂದರೆ ಅದರ ಶಾಂತಿಯುತ ಅಂತ್ಯಕ್ಕೆ ಸಹಾಯ ಮಾಡುವುದು." ಎಂದು ಲಾರ್ಡ್ ಕರ್ಜನ್ ಹೇಳುತ್ತಾನೆ.
  • ಗೋಪಾಲಕೃಷ್ಣ ಗೋಖಲೆ ಅವರು ಲಾರ್ಡ್ ಕರ್ಜನನನ್ನು ಬ್ರಿಟಿಷರ ಔರಂಗಜೇಬ ಎಂದು ವರ್ಣಿಸಿದ್ದಾರೆ.
  • ಕರ್ಜನ್ 194 ರಲ್ಲಿ ಭಾರತೀಯ ವಿಶ್ವವಿದ್ಯಾಲಯಗಳ ಕಾಯ್ದೆ ಮಾಡಿ ವಿಶ್ವವಿದ್ಯಾಲಯಗಳ ಮೇಲೆ ಸರ್ಕಾರದ ನಿಯಂತ್ರಣವನ್ನು ಬಲಪಡಿಸಿದನು.

ಪ್ರಶ್ನೆ 5) ಸರಿಯಾದ ಉತ್ತರ: ಡಿ) ಎರಡನೇ ದೇವರಾಯ
ವಿವರಣೆ:
  • ವಿಜಯನಗರ ಸಾಮ್ರಾಜ್ಯದ ಸಂಗಮ ವಂಶದ ಇಮ್ಮಡಿ ದೇವರಾಯ (ಎರಡನೇ ದೇವರಾಯ) ನ ಸೇನಾಧಿಪತಿಯಾದ ಲಕ್ಕಣ್ಣ ದಂಡೇಶನ ನೇತೃತ್ವದಲ್ಲಿ ಶ್ರೀಲಂಕಾ ಮೇಲೆ ದಾಳಿ ಮಾಡಲು ನೌಕಾಸೇನೆಯನ್ನು ಕಳುಹಿಸಿದನು.
  • ಈ ಯುದ್ಧದಲ್ಲಿ ವಿಜಯನಗರ ಸೇನೆ ಗೆದ್ದು ಅಲ್ಲಿಯ ಅರಸ ಕಪ್ಪ ಕಾಣಿಕೆಯನ್ನು ಕೊಡಲು ಒಪ್ಪಿದನು.
  • ಈ ವಿಜಯದ ನೆನಪಿಗಾಗಿ ಲಕ್ಕಣ್ಣ ದಂಡೇಶನಿಗೆ ದೇವರಾಯನು "ದಕ್ಷಿಣ ಸಮುದ್ರಾಧಿಪತಿ" ಎಂಬ ಬಿರುದನ್ನು ನೀಡಿದನು.
  • ಹಾಗೂ ಈ ವಿಜಯದ ತರುವಾಯ ತಾನು ದಕ್ಷಿಣ ಪಥದ ಚಕ್ರವರ್ತಿ ಎಂಬ ಬಿರುದನ್ನು ಪಡೆದನು.
  • ಎರಡನೆಯ ದೇವರಾಯನು 'ಗಜ-ವೇಟಕಾರ' ಎಂಬ ನಾಣ್ಯಗಳನ್ನು ಬಿಡುಗಡೆ ಮಾಡಿದನು.
  • ಎರಡನೆಯ ದೇವರಾಯನಿಗೆ ವೀರಪ್ರತಾಪ ದೇವರಾಯ ಮಹಾರಾಯ ಗಜಬೇಂಟೆಕಾರ ಎಂಬ ಮೊದಲಾದ ಬಿರುದುಗಳಿದ್ದವು.
  • ಗಜಬೇಂಟೆಕಾರ ಎಂಬ ಬಿರುದು ಆನೆಗಳ ಬೇಟೆಯಾಡುವ ಆಸಕ್ತಿಯ ದ್ಯೋತಕವಾಗಿದೆ.
  • ಎರಡನೆಯ ದೇವರಾಯನು ಬಹಮನಿ ಸಾಮ್ರಾಜ್ಯದ ಸೇನೆಯನ್ನು ಎದುರಿಸುವ ಸಲುವಾಗಿ ತನ್ನ ಸೇನೆಯಲ್ಲಿ 10,000 ಮುಸ್ಲಿಂ ಸೈನಿಕರನ್ನು ನೇಮಿಸಿಕೊಂಡು, ಅವರಿಗೆ ಭೂಮಿಯನ್ನು ಕೊಟ್ಟಿದ್ದನು ಮಸೀದಿಯನ್ನು ನಿರ್ಮಿಸಿದನು ಹಾಗೂ ತನ್ನ ಸಿಂಹಾಸನದ ಮುಂದೆ ಕುರಾನ್ ಅನ್ನು ಇಟ್ಟುಕೊಂಡಿದ್ದನು.
  • ತುಳುವ ವಂಶದ ಶ್ರೀ ಕೃಷ್ಣದೇವರಾಯನು ಮೊಘಲ್ ಅರಸ ಬಾಬರ್ ನ ಸಮಕಾಲೀನ.
  • ಶ್ರೀ ಕೃಷ್ಣದೇವರಾಯನು ಆಂಧ್ರಭೋಜ, ಅಭಿನವ ಭೋಜ (ಅಷ್ಟದಿಗ್ಗಜರೆಂಬ ಜನ ಕವಿಗಳನ್ನು ಹೊಂದಿದ್ದರಿಂದ) ಗಜ ಬೇಟೆಗಾರ, ಯವನ ರಾಜ್ಯ ಪ್ರತಿಷ್ಠಾಪನಾಚಾರ್ಯ, ಕನ್ನಡ ರಾಜ್ಯದ ರಮಾರಮಣ, ಕವಿಪುಂಗವ, ಕರ್ನಾಟಕಾಂಧ್ರಭೋಜ ಎಂಬ ಬಿರುದುಗಳನ್ನು ಹೊಂದಿದ್ದನು.
  • ಕೃಷ್ಣದೇವರಾಯನು ತೆಲುಗು ಭಾಷೆಯಲ್ಲಿ ಅಮುಕ್ತ ಮೌಲ್ಯದ ಎಂಬ ಹಾಗೂ ಜಾಂಬವತಿ ಕಲ್ಯಾಣ ಎಂಬ ಸಂಸ್ಕೃತ ನಾಟಕವನ್ನು ರಚಿಸಿದ್ದಾನೆ.
ಪ್ರಶ್ನೆ 6) ಸರಿಯಾದ ಉತ್ತರ: ಸಿ) ಮಾರ್ಕೊಫೋಲೊ
ವಿವರಣೆ:
  • ಮಾರ್ಕೊ ಪೋಲೊ ವೆನಿಶಿಯನ್ ರಿಪಬ್ಲಿಕ್ ನ ವ್ಯಾಪಾರಿಯಾಗಿದ್ದ.
  • ಮಧ್ಯಕಾಲೀನ  ರಸ್ತೆಯಲ್ಲಿ ಪ್ರಯಾಣಿಸಿದ ಅತ್ಯಂತ ಪ್ರಸಿದ್ಧ ಯುರೋಪಿಯನ್ನರಲ್ಲಿ ಈತನು ಒಬ್ಬನು.
  • ಲಿವ್ರೆಸ್ ಡೆಸ್ ಮೆರ್ವಿಲ್ಲೆಸ್ ಡು ಮಾಂಡೆ ಎನ್ನುವುದು ಈತನ ಪ್ರಸಿದ್ಧ ಪುಸ್ತಕ.
  • 1271ರಲ್ಲಿ ವ್ಯಾಪಾರ ಪ್ರಯಾಣವನ್ನು ಪ್ರಾರಂಭಿಸಿದ ಮಾರ್ಕೊ ಪೋಲೊ ಸುಮಾರು 33 ವರ್ಷಗಳ ಕಾಲ ಇಡಿ ಪೂರ್ವಾರ್ಧಗೋಳವನ್ನೆಲ್ಲ ಸುತ್ತಿದನು.
  • ಮೆಗಾಸ್ತನೀಸ್- ಗ್ರೀಸ್ನ ಸೆಲ್ಯೂಕಸ್ನ ರಾಯಭಾರಿಯಾಗಿ ಮೌರ್ಯ ಸಾಮ್ರಾಜ್ಯದ ಚಂದ್ರಗುಪ್ತ ಮೌರ್ಯನ ಆಸ್ಥಾನಕ್ಕೆ ಬಂದ ಈತ ಐದು ವರ್ಷಗಳ ಕಾಲ ಇಲ್ಲೇ ಇದ್ದನು. ಈತ ಇಂಡಿಕಾ ಎಂಬ ಗ್ರಂಥವನ್ನು ರಚಿಸಿದ್ದಾನೆ.
  • ಪಾಹಿಯಾನ್: ಪಾಹಿ ಅಂಡ್ ಚೀನಾದ ಭೂತ ಯಾತ್ರಿಕ ಗುಪ್ತರ ಅರಸ ಎರಡನೇ ಚಂದ್ರಗುಪ್ತ ವಿಕ್ರಮಾದಿತ್ಯನ ಆಸ್ಥಾನದಲ್ಲಿ ಕ್ರಿಸ್ತಶಕ 399 ರಿಂದ 414 ರ ವರೆಗೆ ಇದ್ದನು. ಘೋ-ಕೋ-ಕಿ ಈತನ ಪ್ರಸಿದ್ಧ ಕೃತಿ.
  • ಇಬನ್ ಬಟೂಟ- 1325 ರಲ್ಲಿ ಇವನ್ ಬಟೂಟನ್ನು ಆಫ್ರಿಕಾದಿಂದ ಪ್ರಯಾಣ ಆರಂಭಿಸಿ ವಿವಿಧ ದೇಶಗಳಲ್ಲಿ ಸಂಚರಿಸಿ 1333 ರಲ್ಲಿ ಭಾರತದ ಸಿಂಧ ಪ್ರದೇಶವನ್ನು ತಲುಪಿದನು. ಭಾರತದಲ್ಲಿ 14 ವರ್ಷಗಳ ಕಾಲ ವಾಸಿಸಿದ್ದ ಈತನನ್ನು ಮಹಮ್ಮದ್ ಬಿನ್ ತುಘಲಕನು ದೆಹಲಿಯ ಖಾಜಿ/ನ್ಯಾಯಾಧೀಶನನ್ನಾಗಿ ನೇಮಿಸಿದ್ದನು. ನಂತರ ಇವನನ್ನು ಚೀನಾದ ರಾಯಭಾರಿಯನ್ನಾಗಿ ಕಳುಹಿಸಿದನು.
  • ಇಬನ್ ಬಟೂಟನ ಪ್ರಸಿದ್ಧ ಕೃತಿ ತಾರಿಖ್-ಇ-ರೆಹ್ಲಾ (ಪ್ರವಾಸಗಳು)
  • ಇಬನ್ ಬಟೂಟನು ಮೆಕ್ಕಾ ಯಾತ್ರೆಯಿಂದ ಆರಂಭಿಸಿ ಪರಶಿಯ ಮೆಸಪಟೋಮಿಯ ಅರೇಬಿಯಾ ಆಫ್ರಿಕಾದ ಪೂರ್ವ ಕರಾವಳಿ ಏಷ್ಯಾ ಮೈನರ್ ಕ್ಯಾಸ್ಪಿಯನ್ ಪ್ರದೇಶ ಸೇರಿದಂತೆ ಭಾರತ ಸಿಂಹದ ಸುಮತ್ರ ಚೀನಾ ಟಿಂಬಕ್ಟರಿಗಳನ್ನು ಸಂದರ್ಶನ ಮಾಡಿದನು.
  •  ಹೀಗೆ ಇಬನ್ ಬಟೂಟನು 75,000 ಮೈಲಿಗಳಷ್ಟು ಪ್ರವಾಸ ಮಾಡಿದನು.

ಪ್ರಶ್ನೆ 7) ಸರಿಯಾದ ಉತ್ತರ: ಸಿ) ಚಿಕ್ಕದೇವರಾಜ ಒಡೆಯರು
ವಿವರಣೆ:
  • ಚಿಕ್ಕದೇವರಾಜ ಒಡೆಯರನ್ನು ಮೈಸೂರಿನ ಮೊದಲ ಅರಸರಲ್ಲಿ ಪ್ರಮುಖರೆಂದು ಪರಿಗಣಿಸಲಾಗಿದೆ.
  • ಪ್ರಥಮ ಬಾರಿಗೆ ಮೈಸೂರಿನಲ್ಲಿ ಅಂಚೆ ಮತ್ತು ಪೊಲೀಸ್ ಪದ್ಧತಿಗಳನ್ನು ಜಾರಿಗೆ ತಂದರು.
  • ಇವರಿಗಿದ್ದ ಬಿರುದುಗಳು- ನವಕೋಟಿ ನಾರಾಯಣ, ಶ್ರೀ ವೈಷ್ಣವ ಮತ ಪ್ರತಿಷ್ಠಾಪಕ, ಸತ್ ಶ್ರೀ ವೈಷ್ಣವ ಪ್ರಿಯ, ಮಹಾರಾಷ್ಟ್ರ ಭೂಪಾಲ ಜಾಲರಿಪು, ಕರ್ನಾಟಕ ಚಕ್ರವರ್ತಿ,
  • ಚಿಕ್ಕದೇವರಾಜ ಒಡೆಯರು ಮೊಘಲರ ಮಾದರಿಯಲ್ಲಿ 18 ಇಲಾಖೆಗಳನ್ನು ಹೊಂದಿದ್ದ ಆಡಳಿತ ವಿಭಾಗವಾದ ಆಕಾರ ಕಚೇರಿಯನ್ನು ಮೈಸೂರಿನಲ್ಲಿ ಸ್ಥಾಪಿಸಿದರು.
  • ಮೊಘಲ್ ಸೇನಾನಿ ಖಾಸಿಂಖಾನನಿಂದ 3 ಲಕ್ಷ ರೂಪಾಯಿಗಳಿಗೆ 1687 ರಲ್ಲಿ ಬೆಂಗಳೂರನ್ನು ಖರೀದಿಸಿದರು.
ಪ್ರಶ್ನೆ 8) ಸರಿಯಾದ ಉತ್ತರ: ಎ) ಅಶೋಕ 
ವಿವರಣೆ:
  • ಮೌರ್ಯ ಸಾಮ್ರಾಜ್ಯದ ಅತ್ಯಂತ ಪ್ರಮುಖ ಅರಸ ಅಶೋಕ ಈತನನ್ನು ಎರಡನೆಯ ಬುದ್ಧ ಎಂದು ಕರೆಯಲಾಗುತ್ತದೆ.
  • ಮಧ್ಯಪ್ರದೇಶದ ಭೂಪಾಲ್ ದಿಂದ 46 km ದೂರದಲ್ಲಿರುವ ಸಾಂಚಿಯ ಮಹಾಸ್ಪವನ್ನು ಅಶೋಕ ಚಕ್ರವರ್ತಿಯು ನಿರ್ಮಿಸಿದನು.
  • ಗ್ರೇಟ್ ಸ್ತೂಪ ಸಾಂಚಿಯಲ್ಲಿ ಪ್ರಾಚೀನ ಕಾಲದಲ್ಲಿ ಕಟ್ಟಲಾಗಿದ್ದು ಚಕ್ರವರ್ತಿ ಅಶೋಕನು ಮೂರನೇ ಶತಮಾನದಲ್ಲಿ ಇದನ್ನು ಕಟ್ಟಿಸಿದನು.
  • ಕನಿಷ್ಕ- ಕನಿಷ್ಕ ಕುಶಾನರ ಅತ್ಯಂತ ಪ್ರಮುಖ ಅರಸ.
  • ಈತನು ಪೇಶಾವರಿನಲ್ಲಿ ಕಟ್ಟಿಸಿದ ಸುಪ್ರಸಿದ್ಧ ಚೈತ್ಯವು 13 ಅಂತಸ್ತುಗಳಿಂದ ಕೂಡಿದ್ದು 400 ಅಡಿ ಎತ್ತರದ ಮರದ ಗೋಪುರ ಕೃತಿ ಹೊಂದಿದ ಕಟ್ಟಡವಾಗಿತ್ತು.
  • ಕನಿಷ್ಕನ ಆಸ್ಥಾನದಲ್ಲಿ ಎಜಿಸಿಲಾಸ್ ಎಂಬ ಶ್ರೇಷ್ಠ ಗ್ರೀಕ್ ಶಿಲ್ಪಿ ಇದ್ದನು.
  • ಕನಿಷ್ ಕಣೋ ಕಾಶ್ಮೀರದಲ್ಲಿ ತನ್ನ ಹೆಸರಿನ ಕಾಣಿಕಪುರ ಎಂಬ ಹೊಸನಗರವನ್ನು ನಿರ್ಮಿಸಿದನು.
  • ಕನಿಷ್ಕಣ ಕಾಲಾವಧಿಯಲ್ಲಿ ಗಾಂಧಾರ ಶಿಲ್ಪ ಕಲೆಯು ಬೆಳವಣಿಗೆ ಕೊಂಡಿತು.
  • ಕನಿಷ್ಕನು ಅನೇಕ ಬುದ್ಧನ ವಿಗ್ರಹಗಳನ್ನು ಕೆತ್ತಿಸಿ ಮಹಾಯಾನ ಪಂಥದ ಪ್ರಸಾರಕ್ಕಾಗಿ ಹಲವು ಕ್ರಮಗಳನ್ನು ಕೈಗೊಂಡನು. ಆದ್ದರಿಂದ ಈತನನ್ನು ಎರಡನೆಯ ಅಶೋಕ ಎಂದು ಕರೆಯಲಾಗುತ್ತದೆ.
  • ಪುಷ್ಯ ಮಿತ್ರ ಶುಂಗ- ಈತನು ಶುಂಗ ರಾಜವಂಶದ ಸ್ಥಾಪಕ.
ಪ್ರಶ್ನೆ 9) ಸರಿಯಾದ ಉತ್ತರ: ಸಿ) ಯುದ್ಧ ಮುಗಿದಾಗ ಫ್ರೆಂಚರು ಭಾರತದಲ್ಲಿ ತಮ್ಮ ಪ್ರಭಾವವನ್ನು ಸ್ಥಿರವಾಗಿ ಸ್ಥಾಪಿಸಿದ್ದರು. 
ವಿವರಣೆ:
  • ಬ್ರಿಟಿಷ್ ಮತ್ತು ಫ್ರೆಂಚರ ನಡುವೆ ಮೂರು ಕರ್ನಾಟಿಕ್ ಯುದ್ಧಗಳು ನಡೆದವು.
  • ಮೊದಲ ಕರ್ನಾಟಿಕ್ ಯುದ್ಧವು ಎಕ್ಸ್-ಲಾ-ಚಾಪೆಲ್ ಒಪ್ಪಂದದೊಂದಿಗೆ ಮುಕ್ತಾಯವಾಯಿತು.
  • ಎರಡನೆಯ ಕರ್ನಾಟಿಕ್ ಯುದ್ಧವು ಪಾಂಡಿಚೆರಿ ಒಪ್ಪಂದದೊಂದಿಗೆ ಅಂತ್ಯವಾಯಿತು.
  • ಫ್ರೆಂಚ್ ಸರ್ಕಾರ ಇಂಗ್ಲಿಷರ ಪ್ರಾಬಲ್ಯವನ್ನು ಮುರಿಯಲು ಭಾರತಕ್ಕೆ ಕೌಂಟ್-ಡಿ-ಲಾಲೆಯನ್ನು ಗವರ್ನರ್ ಆಗಿ ಕಳಿಸಿತು.
  • ಕೌಂಟ್ ಡಿ ಲಾಲೆ ಬ್ರಿಟಿಷರ ಪೂರ್ವ ಕರಾವಳಿಯಲ್ಲಿದ್ದ ಪೋರ್ಟ್ ಸೈಂಟ್ ಡೇವಿಡ್ ಕೋಟೆಯನ್ನು ವಶಪಡಿಸಿಕೊಂಡು, ಮದ್ರಾಸಿಗೆ ಮುತ್ತಿಗೆ ಹಾಕಲು ನಿಶ್ಚಯಿಸಿದನು. ಅವನು ಹೈದರಾಬಾದಿನ ಉತ್ತರ ಭಾಗದಲ್ಲಿದ್ದ ಫ್ರೆಂಚ್ ನ ದಂಡನಾಯಕ ಕ್ಯಾಪ್ಟನ್ ಬುಸ್ಸಿಯನ್ನು ಹಿಂದಕ್ಕೆ ಕರೆಸಿಕೊಂಡನು.
  • ಇದು ಅವನ ತಪ್ಪು ನಿರ್ಧಾರವಾಗಿದ್ದು ತಕ್ಷಣವೇ ಇಂಗ್ಲೀಷ್ರು ಹೈದರಾಬಾದಿಗೆ ಸೇನೆ ಕಳಿಸಿ ಅದನ್ನು ವಶಪಡಿಸಿಕೊಂಡು ಅಲ್ಲಿದ್ದ ಫ್ರೆಂಚರನ್ನು ಓಡಿಸಿದರು.
  • ಆದರೆ ಅಂತಿಮವಾಗಿ 1760ರಲ್ಲಿ ಇಂಗ್ಲೀಷರ ಸೇನಾನಿ ಐರ ಕೂಟನಿಗೂ ಮತ್ತು ಫ್ರೆಂಚರ ಬುಸ್ಸಿಗೂ ಪಾಂಡಿಚೇರಿ ಸಮೀಪ ವಾಂಡಿವಾಷ್ ನಲ್ಲಿ ಈ ಯುದ್ಧವು ನಡೆಯಿತು.
  • ಈ ಯುದ್ಧದಲ್ಲಿ ಇಂಗ್ಲೀಷರು ವಿಜಯ ಸಾಧಿಸಿ ಬಸ್ಸಿಯನ್ನು ಸೆರೆಹಿಡಿದರು.
  • 1761 ರಲ್ಲಿ ಕೌಂಟ್ ಡಿ ಲ್ಯಾಲಿಯು ಪಾಂಡಿಚೆರಿಯಲ್ಲಿ ಇಂಗ್ಲೀಷರಿಗೆ ಶರಣಾಗನು ಯುರೋಪಿನಲ್ಲಿ ಈ ವೇಳೆಗೆ ಸಪ್ತ ವಾರ್ಷಿಕ ಯುದ್ಧಗಳು ಕೊನೆಗೊಂಡು ಪ್ಯಾರಿಸ್ ಒಪ್ಪಂದವಾಯಿತು. ಅದರ ನಿಬಂಧನೆಗಳ ಮೇರೆಗೆ ಇಂಗ್ಲೀಷರು ಪಾಂಡಿಚೇರಿ ಮತ್ತು ಚಂದ್ರನಾಗೂರು ಮತ್ತಿತರ ಪ್ರದೇಶಗಳನ್ನು ಹಿಂದಿರುಗಿಸಿದರು ಈ ಯುದ್ಧವು ಭಾರತದಲ್ಲಿ ಫ್ರೆಂಚರು ಸಾಮ್ರಾಜ್ಯ ಕಟ್ಟುವ ಕನಸನ್ನು ನುಚ್ಚುನೂರು ಮಾಡಿತು.

ಪ್ರಶ್ನೆ 10) ಸರಿಯಾದ ಉತ್ತರ: ಬಿ) ನ್ಯೂ ಇಂಡಿಯಾ 
ವಿವರಣೆ:

  • ಯಂಗ್ ಇಂಡಿಯಾ: ಇದು 1919 ರಿಂದ 1931ರವರೆಗೆ ಮೋಹನ್ ದಾಸ್ ಕರಮಚಂದ ಗಾಂಧಿ ಪ್ರಕಟಿಸಿದ ಇಂಗ್ಲೀಷ್ ವಾರಪತ್ರಿಕೆ ಅಥವಾ ಜರ್ನಲ್ ಆಗಿತ್ತು.
  • ನ್ಯೂ ಇಂಡಿಯಾ: 1914 ರಲ್ಲಿ ಡಾ. ಅನಿಬೆಸೆಂಟ್ ರವರು ಇಂಗ್ಲೀಷ್ ಭಾಷೆಯಲ್ಲಿ ಪ್ರಾರಂಭಿಸಿದರು.
  • ಸ್ವರಾಜ್: 1921 ರಲ್ಲಿ ಸುಭಾಷ್ ಚಂದ್ರ ಬೋಸ್ ರವರು ಸ್ವರಾಜ್ ಎಂಬ ಪತ್ರಿಕೆಯನ್ನು ಪ್ರಾರಂಭಿಸಿದರು.
  • ಇಂಟಿಯನ್ ಸ್ಪೆಕ್ಟೇಟರ್: 1836 ಮತ್ತು 1859ರ ನಡುವೆ ಮದ್ರಾಸಿನಿಂದ ಪ್ರಕಟವಾದ ಇಂಗ್ಲಿಷ್ ಭಾಷೆಯ ಪತ್ರಿಕೆ. ಇದು ನಗರದಿಂದ ಪ್ರಕಟವಾದ ಮೊದಲ ದೈನಂದಿನ ಪತ್ರಿಕೆಯಾಗಿದೆ.
  • ಭಾರತದ ರಾಷ್ಟ್ರೀಯ ಕಾಂಗ್ರೆಸ್ಸಿನ ಪ್ರಥಮ ಐರೋಪ್ಯ ಚುನಾಯಿತ ಅಧ್ಯಕ್ಷ - ಜಾರ್ಜ್ ಯೂಲ್
  • ಡಾಕ್ಟರ್ ಅನಿಬೆಸೆಂಟ್ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ನ ಮೊದಲ ಮಹಿಳಾ ಅಧ್ಯಕ್ಷ.
Click the Below Provided Link to Watch Live Class:


Click Here to Download the PDF: Download

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads