Step-by-Step Guide to Apply Online For Karnataka Free Electricity Gruha Jyoti Scheme
"ಗೃಹ ಜ್ಯೋತಿ" ಯೋಜನೆಗೆ ಬೇಗನೇ ನೊಂದಾಯಿಸಿ , ನಿಮ್ಮ ಸ್ಮಾರ್ಟ್ ಫೋನ್, ಕಂಪ್ಯೂಟರ್/ ಲ್ಯಾಪ್‌ಟಾಪ್ ಗಳಿಂದ ನೊಂದಾಯಿಸುವ ಸುಲಭ ಮಾರ್ಗ,
ಯಾವುದೇ ದಾಖಲೆ ಅಪ್ಲೋಡ್ ಮಾಡುವ ಅವಶ್ಯಕತೆ ಇಲ್ಲ
1) ವಿದ್ಯುತ್ ಬಿಲ್
2) ಆಧಾರ್ ಸಂಖ್ಯೆ
3) ಆಧಾರ್ ಕಾರ್ಡ್ ನಲ್ಲಿರುವ ಪೋನ್ ಸಂಖ್ಯೆಯಿರುವ ಮೊಬೈಲ್..
ಈ ಮೂರು ಇದ್ದರೆ ಸಾಕು..
ಸೈಬರ್ ಸೆಂಟರ್, ನಾಡ ಕಚೇರಿ- ಕರ್ನಾಟಕ ಒನ್, ಎಸ್ಕಾಂ ಕಚೇರಿಗಳಿಗೆ ಹೋಗುವ ಅವಶ್ಯಕತೆಯೂ ಇಲ್ಲ..
ಗೃಹ ಜ್ಯೋತಿ ಯೋಜನೆಗೆ ಅರ್ಜಿ ಸಲ್ಲಿಸುವಾಗ ಈ ಕ್ರಮಗಳನ್ನು ಅನುಸರಿಸಿ:-
ಹಂತ - 1 sevasindhugs.karnataka.gov.in ವೆಬ್‌ಸೈಟ್‌ಗೆ ಹೋಗಿ:
ನೀವು ಮಾಡಬೇಕಿರುವುದು ಇಷ್ಟೇ ಮೊದಲು ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಗೂಗಲ್ ಕ್ರೋಮ್ ಅಥವಾ ಫೈರ್‌ಫಾಕ್ಸ್ ಬ್ರೌಸರ್ ಅನ್ನು ಓಪನ್ ಮಾಡಿ. ಅಲ್ಲಿನ ಯುಆರ್‌ಎಲ್ ಬಾರ್‌ನಲ್ಲಿ ಗ್ಯಾರಂಟಿ ಯೋಜನೆಗಳಿಗಾಗಿಯೇ ರೂಪಿಸಲಾದ ಸೇವಾಸಿಂಧು ಪೋರ್ಟಲ್‌ನ ಪ್ರತ್ಯೇಕ ವೆಬ್‌ಸೈಟ್ sevasindhugs.karnataka.gov.in ಎಂದು ಟೈಪ್ ಮಾಡಿ ಸರ್ಚ್ ಮಾಡಿ. ಅದಾದ ಬಳಿಕ ನಿಮಗೆ ಈ ರೀತಿ ವೆಬ್‌ಪೇಜ್ ಒಪನ್ ಆಗುತ್ತದೆ. ಇಲ್ಲಿ ಅನ್ನಭಾಗ್ಯ ಹೊರತುಪಡಿಸಿ ಉಳಿದ ನಾಲ್ಕು ಗ್ಯಾರಂಟಿ ಯೋಜನೆಗಳಾದ ಗೃಹಲಕ್ಷ್ಮೀ, ಗೃಹಜ್ಯೋತಿ, ಶಕ್ತಿ ಹಾಗೂ ಯುವನಿಧಿ ಯೋಜನೆಗಳಿಗೆ ನೀವು ಅರ್ಜಿ ಸಲ್ಲಿಸಬಹುದು. ಸದ್ಯ ಗೃಹಜ್ಯೋತಿಗೆ ಮಾತ್ರ ಅರ್ಜಿ ಸಲ್ಲಿಸುವ ಆಯ್ಕೆ ಇದೆ.
ಹಂತ - 2 ಬಳಿಕ ಗೃಹಜ್ಯೋತಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ.
ಹಂತ - 2 ಹಾಗಾಗಿ ಗೃಹಜ್ಯೋತಿ ಟ್ಯಾಬ್ ಮೇಲೆ ಕ್ಲಿಕ್ ಮಾಡಿ. ಗೃಹಜ್ಯೋತಿ ಟ್ಯಾಬ್ ಅನ್ನು ಕ್ಲಿಕ್ ಮಾಡಿದ ಬಳಿಕ ನಿಮಗೆ ಗೃಹಜ್ಯೋತಿ ಯೋಜನೆಗೆ ನೋಂದಣಿ ಮಾಡಿಕೊಳ್ಳುವ ಅರ್ಜಿ ತೆರೆದುಕೊಳ್ಳುತ್ತದೆ. ಅಲ್ಲಿ ನೀವು ಹಲವು ಮಾಹಿತಿಯನ್ನು ನಮೂದಿಸಬೇಕಾಗುತ್ತದೆ.
ಹಂತ 3 - ಮೊದಲು ನಿಮ್ಮ ಭಾಷೆಯನ್ನು ಆಯ್ಕೆ ಮಾಡಿಕೊಳ್ಳಿ.
ಹಂತ 4 - ಎಸ್ಕಾಂ ಅನ್ನು ಆಯ್ಕೆ
ಅದಾದ ಬಳಿಕ ನಿಮ್ಮ ವ್ಯಾಪ್ತಿಯ ಎಸ್ಕಾಂ ಅನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಆರು ಎಸ್ಕಾಂಗಳು ಇದ್ದು, BESCOM, CHESCOM, HESCOM, GESCOM, MESCOM ಹಾಗೂ ಹುಕ್ಕೇರಿ ಸೊಸೈಟಿ ಎಂಬ ಆಯ್ಕೆಗಳು ಇವೆ. ಅದರಲ್ಲಿ ನಿಮ್ಮ ಎಸ್ಕಾಂ ಅನ್ನು ಆಯ್ಕೆ ಮಾಡಿಕೊಳ್ಳಬೇಕು.
ಹಂತ 5 - ನಿಮ್ಮ ಅಕೌಂಟ್ ನಂಬರ್ ನಮೂದಿಸಿ!
ಬೆಸ್ಕಾಂ ಆಯ್ಕೆ ಮಾಡಿಕೊಂಡ ತಕ್ಷಣ ನಿಮ್ಮ ವಿದ್ಯುತ್ ಮೀಟರ್‌ಮ ಅಕೌಂಟ್ ನಂಬರ್ ಅನ್ನು ನಮೂದಿಸಿ. ಆರ್‌ಆರ್ ಸಂಖ್ಯೆಯನ್ನು ನೀವು ಇಲ್ಲಿ ನಮೂದಿಸಬಾರದು. ಆರ್‌ಆರ್ ಸಂಖ್ಯೆಯೇ ಬೇರೆ, ಅಕೌಂಟ್ ಸಂಖ್ಯೆಯೇ ಬೇರೆ. ಈ ಸಂಖ್ಯೆ ನಿಮ್ಮ ಕರೆಂಟ್ ಬಿಲ್‌ನಲ್ಲಿ ಆರ್‌ಆರ್ ಸಂಖ್ಯೆಯ ಕೆಳಗಡೆ ಇರುತ್ತದೆ. ನೀವು ಅಕೌಂಟ್ ನಂಬರ್ ನಮೂದಿಸಿದ ಬಳಿಕ ವಿದ್ಯುತ್ ಮೀಟರ್ ಯಾರ ಹೆಸರಿನಲ್ಲಿದೆಯೋ ಅವರ ಹೆಸರು ಹಾಗೂ ವಿಳಾಸ ಆಟೋಮ್ಯಾಟಿಕ್ ಆಗಿ ಅಪ್‌ಡೇಟ್ ಆಗಲಿದೆ.
ಹಂತ 6 - ಬಾಡಿಗೆದಾರರೋ ಅಥವಾ ಮನೆ ಮಾಲೀಕರೋ ಆಯ್ಕೆ ಮಾಡಿ!
ನಂತರ ನೀವು ಬಾಡಿಗೆದಾರರೋ ಅಥವಾ ಮನೆ ಮಾಲೀಕರೋ ಎಂಬುದನ್ನು ಆಯ್ಕೆ ಮಾಡಿಕೊಳ್ಳಬೇಕು. ಅಲ್ಲಿ ಎರಡು ಆಯ್ಕೆಗಳಿದ್ದು, ನಿಮಗೆ ಸರಿ ಹೊಂದಿಸುವ ಆಯ್ಕೆಯನ್ನು ಕ್ಲಿಕ್ ಮಾಡಿ.
ಹಂತ 7 - ಬಳಿಕ ನಿಮ್ಮ ಆಧಾರ್ ಸಂಖ್ಯೆಯನ್ನು ನಮೂದಿಸಿ.
ಆಧಾರ್ ಸಂಖ್ಯೆಯನ್ನು ನಮೂದಿಸಿದ ಬಳಿಕ ನಿಮಗೆ ಆಧಾರ್ ದೃಢೀಕರಣದ ಆಯ್ಕೆಗಳು ಕಾಣುತ್ತವೆ. ಆಧಾರ್ ದೃಢೀಕರಣ ಆಯ್ಕೆ ಮೇಲೆ ಕ್ಲಿಕ್ ಮಾಡಿ. ಒಂದು ವೇಳೆ ಈಗಾಗಲೇ ಆಧಾರ್ ದೃಢೀಕರಣ ಆಗಿದ್ದರೆ, ನೀವು ಆಧಾರ್ ಸಂಖ್ಯೆ ನಮೂದಿಸಿದ ತಕ್ಷಣ ನಿಮ್ಮ ಹೆಸರು ಕೂಡ ಅಲ್ಲಿ ಆಟೋಮ್ಯಾಟಿಕ್ ಆಗಿ ಬರಲಿದೆ.
ಹಂತ 8 - ಮೊಬೈಲ್ ನಂಬರ್ ನಮೂದಿಸಿ!
ಆಧಾರ್ ದೃಢೀಕರಣದ ಬಳಿಕ ನಿಮ್ಮ 10 ಅಂಕಿಯ ಮೊಬೈಲ್ ನಂಬರ್ ಅನ್ನು ನಮೂದಿಸಿ. ಇದಾದ ಬಳಿಕ ನಿಮ್ಮ ಮೊಬೈಲ್‌ಗೆ ಒಂದು ಒಟಿಪಿ ಬರಲಿದೆ. ಆ ಒಟಿಪಿಯನ್ನು ನಮೂದಿಸಿ.
ಹಂತ - 9 ಡಿಕ್ಲರೇಷನ್
ಒಟಿಪಿ ನಮೂದಿಸಿದ ಬಳಿಕ ಕೆಳಗಡೆ ಡಿಕ್ಲರೇಷನ್ ಎಂಬ ವಿಭಾಗ ಇದ್ದು, ಅಲ್ಲಿ ಐ ಅಗ್ರಿ ಎಂಬ ಟಿಕ್ ಬಾಕ್ಸ್ ಅನ್ನು ಕ್ಲಿಕ್ ಮಾಡಬೇಕು. ಅದಾದ ನಂತರ ವರ್ಡ್ ವೆರಿಫಿಕೇಷನ್ ಕೇಳುತ್ತದೆ. ಅಲ್ಲಿರುವ ಸಂಖ್ಯೆಯನ್ನು ನೀವು ಕೊಟ್ಟಿರುವ ಬಾಕ್ಸ್‌ನಲ್ಲಿ ಸರಿಯಾಗಿ ನಮೂದಿಸಬೇಕು.
ಹಂತ 10 - ಅರ್ಜಿಯನ್ನು ಸಬ್ಮಿಟ್ ಮಾಡಿ!
ಬಳಿಕ ಕೆಳಗಡೆ ಸಬ್ಮಿಟ್ , ಕ್ಯಾನ್ಸಲ್ ಹಾಗೂ ಕ್ಲೋಸ್ ಎಂಬ ಮೂರು ಆಯ್ಕೆಗಳಿದ್ದು, ಸಬ್ಮಿತ್ ಬಟನ್ ಅನ್ನು ಕ್ಲಿಕ್ ಮಾಡಿ. ಇದರ ಬಳಿಕ ಮತ್ತೊಂದು ವೆಬ್‌ಪೇಜ್‌ಗೆ ನೀವು ಹೋಗ್ತೀರಿ. ಅಲ್ಲಿ ನೀವು ನಮೂದಿಸಿರುವ ಮಾಹಿತಿಯನ್ನು ಮತ್ತೊಂದು ಸಲ ವೆಬ್‌ಸೈಟ್ ತೋರಿಸುತ್ತದೆ. ಎಲ್ಲ ಸರಿ ಇದೆ ಎಂದು ಖಚಿತಪಡಿಸಿಕೊಂಡ ಬಳಿಕ ನೀವು ಮತ್ತೊಂದು ಸಲ ಸಬ್ಮಿತ್ ಬಟನ್ ಅನ್ನು ಕ್ಲಿಕ್ ಮಾಡಬೇಕು. ಎಡಿಟ್ ಮಾಡಲು ಕೂಡ ಅವಕಾಶ ಇದೆ.
ಹಂತ - 11 ಫೈನಲ್ ಸಬ್ಮಿಷನ್, ಸ್ವೀಕೃತಿ ಪತ್ರ ಪಡೆಯಿರಿ
ಕೊನೆಗೆ ಸಬ್ಮಿಟ್ ಬಟನ್ ಕ್ಲಿಕ್ ಮಾಡಿದ ಬಳಿಕ ನಿಮಗೆ ಒಂದು ಸ್ವೀಕೃತಿ ಪತ್ರ ಅಥವಾ ಅಕ್ನಾಲೇಜ್‌ಮೆಂಟ್ ಬರಲಿದೆ. ಅದನ್ನು ನೀವು ಎಕ್ಸ್‌ಪೋರ್ಟ್ ಪಿಡಿಎಫ್ ಎಂದು ಆಯ್ಕೆ ಕೊಟ್ಟರೆ ಸ್ವೀಕೃತಿ ಪತ್ರ ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿ ಸೇವ್ ಆಗಲಿದೆ. ಮುಂದೆ ಅರ್ಜಿಯನ್ನು ಪರಿಶೀಲಿಸಲಿರುವ ಸರ್ಕಾರ ನಿಮಗೆ ಉಚಿತವಾಗಿ ವಿದ್ಯುತ್ ಅನ್ನು ನೀಡಲಿದೆ. ಸದ್ಯಕ್ಕೆ ಯಾವುದೇ ರೀತಿಯ ದಾಖಲೆಗಳನ್ನು ಅಪ್‌ಲೋಡ್ ಮಾಡುವಂತಿಲ್ಲ. ಮುಂದೆ ದಾಖಲೆಗಳನ್ನು ಪರಿಶೀಲಿಸುವ ಸಾಧ್ಯತೆ ಇದೆ.
ಇನ್ನೊಂದು ಸರಳ ವಿಧಾನ ಇಲ್ಲಿದೆ
1) ಈ ಲಿಂಕ್ ನಲ್ಲಿ ತೆರೆಯಿರಿ..👇🏻👇🏻
2) ನಿಮ್ಮದು ಯಾವ ಎಸ್ಕಾಂ- ESCOM ಅಂತ ಟಿಕ್ 🔘 ಮಾಡಿ
3) ನಂತರ ನಿಮ್ಮ ವಿದ್ಯುತ್ ಬಿಲ್ ನಲ್ಲಿರುವ 10 ಸಂಖ್ಯೆಯ Account ID ಟೈಪ್ ಮಾಡಿ..
ಮನೆ ವಿಳಾಸ ತಾನಾಗೆ ಮೂಡುತ್ತದೆ..(ವಿಳಾಸ ಬರುವವರೆಗೆ ತಾಳಿ)
4) ಮುಂದೆ ಸ್ವಂತ ಮನೆನಾ ಅಥವಾ ಬಾಡಿಗೆ ಮನೆನಾ ಅಂತ ಟಿಕ್ 🔘ಮಾಡಿ
5) ಅರ್ಜಿದಾರರ ಮನೆಯ ಯಜಮಾನ/ ಯಜಮಾನಿಯ( ಬಾಡಿಗೆ ಇದ್ದರೆ ಬಾಡಿಗೆಯವರು) ಆಧಾರ್ ಕಾರ್ಡ್ ನ 12 ಸಂಖ್ಯೆ ಟೈಪಿಸಿ..
6) ನಂತರ ಆಧಾರ್ e - KYC ಕೇಳುತ್ತದೆ.. OK ಮಾಡಿದರೆ ಹೊಸ ಪೇಜ್ ತೆರೆದುಕೊಳ್ಳುತ್ತದೆ..
ಅಲ್ಲಿ OK ಅಂತ ಟಿಕ್ ಮಾಡಿ.. ಆಧಾರ್ ಕಾರ್ಡ್'ನಲ್ಲಿ ಇರುವ ಫೋನ್ ನಂಬರ್'ಗೆ OTP( ಒಟಿಪಿ) ಸಂಖ್ಯೆ ಬರುತ್ತದೆ.. ಅದನ್ನ ಟೈಪಿಸಿ OK ಮಾಡಿ, e - KYC ಮುಗಿಯಿತು..
7) ನಂತರ ಮುಂದಿನ ಬಾಕ್ಸ್' ನಲ್ಲಿ ಸಂಪರ್ಕಕ್ಕಾಗಿ ಫೋನ್ ಸಂಖ್ಯೆ ಟೈಪಿಸಿ.. ಈ ಸಂಖ್ಯೆಗೆ ಮತ್ತೊಂದು OTP (ಒಟಿಪಿ) ಬರುತ್ತದೆ..
ಅದನ್ನ ಟೈಪಿಸಿ OK ಮಾಡಿ..
8) ಕೆಳಗೆ I agree ಅಂತ ಇರುವ ಡಿಕ್ಲೆರೇಶನ್'ಗೆ right tick mark ✅ ಮಾಡಿ..
9) ಕೆಳಗೆ Word verification ಅಂತ ತೋರಿಸುವ 6 ಸಂಖ್ಯೆಯನ್ನ, ಅಲ್ಲಿನ ಬಾಕ್ಸ್'ನಲ್ಲಿ ಟೈಪ್ ಮಾಡಿ submit ಮಾಡಿ..
10) ನಿಮ್ಮ ಅರ್ಜಿಯ ಒಟ್ಟು ಮಾಹಿತಿಯ ಹೊಸ ಪೇಜ್ ತೆರೆದುಕೊಳ್ಳುತ್ತದೆ, ಮತ್ತೆ submit ಅಂತ ಕೊಡಿ..
11) ನಿಮ್ಮ ಅರ್ಜಿಯ ಸಂಖ್ಯೆಯೊಂದಿಗೆ ಸ್ವೀಕೃತಿ ಪ್ರತಿಯ ಪಿಡಿಎಫ್ ಬರುತ್ತದೆ.. ಅದನ್ನ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.. ಇಲ್ಲಿಗೆ ಅರ್ಜಿ ಹಾಕುವ ಪ್ರಕ್ರಿಯೆ ಮುಗಿಯಿತು..
ಎರಡು- ಮೂರು ಸಲ ಪ್ರಯತ್ನ ಮಾಡಿದರೆ ಸಾಕು, ಸುಲಭವಾಗಿ ಅರ್ಜಿ ನೊಂದಾಯಿಸಬಹುದು.. ಸರ್ವರ್ ಸಮಸ್ಯೆ ಇರುವುದರಿಂದ ಅರ್ಜಿ ನೊಂದಾಯಿಸಲು ಕೊನೆಯ ದಿನಾಂಕ ಇಲ್ಲ ,
No comments:
Post a Comment
If you have any doubts please let me know