6ನೇ ತರಗತಿ ಸಮಾಜ ವಿಜ್ಞಾನ ಘಟಕ-03 ಕುಷಾಣರು ಸಂಪೂರ್ಣ ನೋಟ್ಸ್
6ನೇ ತರಗತಿ ಸಮಾಜ ವಿಜ್ಞಾನ ಘಟಕ-03 ಕುಷಾಣರು ಸಂಪೂರ್ಣ ನೋಟ್ಸ್
- 2000 ವರ್ಷಗಳ ಹಿಂದೆ ಗಾಂಧಾರ (ಈಗಿನ ಅಫಘಾನಿಸ್ತಾನ) ಪ್ರದೇಶದಲ್ಲಿ ಕುಷಾಣ ಎಂಬ ರಾಜವಂಶವು ಆಳ್ವಿಕೆ ನಡೆಸುತ್ತಿತ್ತು.
- ಕುಷಾಣರ ರಾಜಧಾನಿ – ಪುರುಷಪುರ (ಪೇಶಾವರ)
- ಕುಷಾಣರ ಪ್ರಸಿದ್ಧ ಅರಸ ಕನಿಷ್ಕ
- ಕನಿಷ್ಕನು ಬೌದ್ಧಮತ ಅನುಯಾಯಿ ಆಗಿದ್ದನು.
- ಕಾಶ್ಮೀರದಲ್ಲಿ ಬೌದ್ಧ ಮಹಾಸಭೆಯನ್ನು ನಡೆಸಿದನು.
- ಕನಿಷ್ಕನು ಅನೇಕ ಸ್ತೂಪಗಳನ್ನು ನಿರ್ಮಿಸಿದನು.
- ಪುರುಷಪುರ (ಪೇಶಾವರ) ದಲ್ಲಿ ಕಟ್ಟಿಸಿದ ಸ್ತೂಪಕ್ಕೆ 13 ಅಂತಸ್ತುಗಳ ಗೋಪುರ ಮತ್ತು 400 ಅಡಿ ಎತ್ತರವಿತ್ತು.
- ಕನಿಷ್ಕನ ಕಾಲಾವಧಿಯಲ್ಲಿ ಗಾಂಧಾರ & ಮಥುರಾ ಎಂಬ ಹೊಸ ಶೈಲಿಗಳು ಹುಟ್ಟಿಕೊಂಡವು.
- ಮಥುರೆಯಲ್ಲಿ ಕನಿಷ್ಕನ ಕಲ್ಲಿನ ವಿಗ್ರಹ ದೊರಕಿದೆ.
- ಕನಿಷ್ಕನ ಆಸ್ಥಾನದಲ್ಲಿ ಸಾಹಿತ್ಯ ರತ್ನ ಎಂದು ಬಿರುದಾಂಕಿತನಾದ ಅಶ್ವಘೋಷ ಪ್ರಮುಖನು.
- ಅಶ್ವಘೋಷನು ಬುದ್ಧಚರಿತ ಎಂಬ ಸಂಸ್ಕೃತ ಕೃತಿಯನ್ನು ರಚಿಸಿದ್ದಾನೆ.
- ನಾಗಾರ್ಜುನ (ಭಾರತದ ಐನಸ್ಟೀನ್) ಎಂಬ ಶ್ರೇಷ್ಠ ತತ್ವಜ್ಞಾನಿ ಹಾಗೂ ವಿಜ್ಞಾನಿ ಇದ್ದನು.
- ವಸುಮಿತ್ರ ಎಂಬ ವಿದ್ವಾಂಸನು ಇದ್ದನು. ಈತ ಬೌದ್ಧ ಮಹಾಸಭೆಯ ಅಧ್ಯಕ್ಷನಾಗಿದ್ದನು.
- ಚರಕ ಎಂಬುವವನು ಕನಿಷ್ಕನ ವೈದ್ಯನಾಗಿದ್ದನು. (ಪಿಎಸ್ಐ)
- ಚರಕನು ‘ಚರಕ ಸಂಹಿತೆ’ ಎಂಬ ಆಯುರ್ವೇದ ಗ್ರಂಥವನ್ನು ರಚಿಸಿದ್ದಾನೆ.
- ಆಯುರ್ವೇದವು ಪ್ರಾಚೀನ ಭಾರತೀಯ ವೈದ್ಯಕೀಯ ಪದ್ಧತಿಯಾಗಿದೆ.
6ನೇ ತರಗತಿ ಸಮಾಜ ವಿಜ್ಞಾನ ಘಟಕ-03 ಕುಷಾಣರು: ಹೆಚ್ಚುವರಿ ಮಾಹಿತಿ:
- ಕುಷಾಣರು ಯೂಚಿ ಪಂಗಡಕ್ಕೆ ಸೇರಿದವರು.
- ಯೂಚಿ ಜನಾಂಗ ಮಧ್ಯ ಏಷ್ಯಾದಿಂದ ವಲಸೆ ಬಂದ ಅಲೆಮಾರಿ ಜನಾಂಗ.
- ಮಧ್ಯ ಏಷ್ಯಾದಲ್ಲಿ ಕುಷಾಣರನ್ನು ಕಿ-ಷಾಂಗ್ ಎಂಬ ಹೆಸರಿನಿಂದ ಕರೆಯುತ್ತಿದ್ದರು.
- ಕುಷಾಣರು ಶಕ ಪಾರ್ಥಿಯನ್ನರನ್ನು ಸೋಲಿಸಿ ಗಾಂಧಾರ ಪ್ರದೇಶದಲ್ಲಿ ನೆಲೆಸಿದ್ದರು.
- ಕುಷಾಣ ಸಂತತಿಯ ಮೊದಲ ದೊರೆ – ಕುಜುಲ ಕಡ್ ಫೀಸಸ್ (1 ನೇ ಕಡ್ ಫೀಸಸ್, ಕುಸುಲಕ)
- ಭಾರತದಲ್ಲಿ ಮೊದಲ ಬಾರಿಗೆ ಚಿನ್ನದ ನಾಣ್ಯಗಳನ್ನು ಬಳಕೆಗೆ ತಂದ ಮೊದಲ ಕುಷಾಣ ದೊರೆ- ವೀಮ ಕಡ್ ಫೀಸಸ್ (2ನೇ ಕಡ್ ಫೀಸಸ್)
- ಕುಷಾಣ ಅರಸರನ್ನು ‘ದೇವಪುತ್ರರು’ ಎಂದು ಕರೆಯಲಾಗುತ್ತದೆ.
- ಕನಿಷ್ಕನ ರಾಜಧಾನಿಯಾಗಿದ್ದ ನಗರ – ಪುರುಷಪುರ (ಪೇಶಾವರ)
- ಕನಿಷ್ಕನ ಆಳ್ವಿಕೆಯ ಬಗ್ಗೆ ತಿಳಿಸುವ ಶಾಸನ – ಸಾರಾನಾಥ ಶಾಸನ
- ಭಾರತಕ್ಕೆ ಪ್ರಥಮ ಬಾರಿಗೆ ಬೂಟುಗಳನ್ನು ಹಾಕಿಕೊಂಡು ಬಂದ ಮೊದಲ ವ್ಯಕ್ತಿ - ಕನಿಷ್ಕ
- ಕನಿಷ್ಕನು ಕಾಶ್ಮೀರದ ಕುಂಡಲವನದಲ್ಲಿ ಅಶ್ವಘೋಷ & ವಸುಮಿತ್ರ ಅವರ ನೇತೃತ್ವದಲ್ಲಿ 4ನೇ ಬೌದ್ಧ ಸಮ್ಮೇಳನವನ್ನು ನಡೆಸಿದನು.
- ಅಶೋಕ ನಂತರ ಬೌದ್ಧಧರ್ಮಕ್ಕೆ ಅತಿ ಹೆಚ್ಚು ಪ್ರೋತ್ಸಾಹ ನೀಡಿದ್ದ ಕುಷಾಣರ ಪ್ರಸಿದ್ಧ ಅರಸನಾದ ಕನಿಷ್ಕನನ್ನು ಎರಡನೇ ಅಶೋಕ ಎಂದು ಕರೆಯಲಾಗುತ್ತದೆ.
- ಕನಿಷ್ಕನು ನಾಣ್ಯಗಳ ಮೇಲೆ ಬುದ್ಧನ ಚಿತ್ರಗಳನ್ನು ಟಂಕಿಸಿದನು.
- ಬೌದ್ಧಧರ್ಮದ ರಕ್ಷಣೆಗಾಗಿ ಕನಿಷ್ಕನು ಮಹಾಕ್ಷತ್ರಪರು ಎಂಬ ಅಧಿಕಾರಿಗಳನ್ನು ನೇಮಿಸಿದ್ದನು.
- ಶಕ ವರ್ಷ ಆರಂಭವಾಗಿದ್ದು – ಕ್ರಿ.ಶ 78 ರಲ್ಲಿ (ಕನಿಷ್ಕ ಪಟ್ಟಕ್ಕೆ ಬಂದ ವರ್ಷ)
- ಶಕ ವರ್ಷವನ್ನೇ ಆಧಾರವಾಗಿಟ್ಟುಕೊಂಡು 21, 22 ಮಾರ್ಚ್ 1957 ರಂದು ನಮ್ಮ ರಾಷ್ಟ್ರೀಯ ಪಂಚಾಂಗವನ್ನು ಅಳವಡಿಸಿಕೊಳ್ಳಲಾಗಿದೆ.
- ಕುಷಾಣರ ಕಾಲದಲ್ಲಿ ಪ್ರಚುರಗೊಂಡ ಕಲಾಶೈಲಿ – ಗಾಂಧಾರ (ಇಂಡೋ+ಗ್ರೀಕ್ ಶೈಲಿ)
- ಕನಿಷ್ಕನು ಕನಿಷ್ಕಪುರ ಎಂಬ ನಗರವನ್ನು ಕಟ್ಟಿಸಿದನು.
- ಕನಿಷ್ಕನ ಆಸ್ಥಾನದಲ್ಲಿದ್ದ ಗಾಂಧಾರ ಕಲೆಯ ಪ್ರಸಿದ್ಧ ಗ್ರೀಕ್ ಶಿಲ್ಪಿ – ಏಜಿಸಿಲಾನ್ (ಅಜಶಿಲ)
- ರೋಮ್ ದೇಶಕ್ಕೆ ರಫ್ತಾಗುತ್ತಿದ್ದ ಭಾರತದ ಸರಕುಗಳು – ಹತ್ತಿ ಬಟ್ಟೆ, ರೇಷ್ಮೆ, ವಜ್ರ, ಸಾಂಬಾರ ಪದಾರ್ಥಗಳು
- ರೋಮನ್ ಸಂಪತ್ತು ಭಾರತಕ್ಕೆ ಪ್ರವಾಹದ ರೂಪದಲ್ಲಿ ಹರಿಯುತ್ತಿದೆ ಎಂದ ವಿದ್ವಾಂಸ – ಪ್ಲೀನಿ.
- ಅಶ್ವಘೋಷನ ಬುದ್ಧ ಚರಿತೆಯನ್ನು ಕನ್ನಡದಕ್ಕೆ ಅನುವಾದಿಸಿದ ಸಾಹಿತಿ – ಎಲ್. ಬಸವರಾಜು
- ಅಶ್ವಘೋಷನ ಇತರ ಕೃತಿಗಳು: ವಜ್ರಸೂಚಿ, ನಾದ್ರಾನಂದ, ಸೂತ್ರಾಲಂಕಾರ.
- ಬೌದ್ಧ ಧರ್ಮದ ವಿಶ್ವಕೋಶ ಎಂದೇ ಪ್ರಸಿದ್ಧಿ ಪಡೆದ ಮಹಾಭಾಷ್ಯ ಕೃತಿಯನ್ನು ವಸುಮಿತ್ರ ರಚಿಸಿದ್ದಾನೆ.
- ಕುಷಾಣರ ಕಾಲಾವಧಿಯಲ್ಲಿದ್ದ ಸುಶ್ರತನು ‘ಸುಶ್ರುತ ಸಂಹಿತೆ’ ಎಂಬ ಕೃತಿ ರಚಿಸಿದ್ದು, ಇದು ಪ್ಲಾಸ್ಟಿಕ್ ಸರ್ಜರಿಯ ಕುರಿತು ತಿಳಿಸುತ್ತದೆ.
- ಕನಿಷ್ಕನ ಆಳ್ವಿಕೆಯ ಕಾಲವನ್ನು ಸಂಸ್ಕೃತ ಸಾಹಿತ್ಯದ ಮುನ್ನಡೆ ಎನ್ನುವರು.
No comments:
Post a Comment
If you have any doubts please let me know