6ನೇ ತರಗತಿ ಸಮಾಜ ವಿಜ್ಞಾನ ಘಟಕ-03 ಮೌರ್ಯರು ಸಂಪೂರ್ಣ ನೋಟ್ಸ್
➡ ಪ್ರಜೆಗಳೆಲ್ಲರೂ ತನ್ನ ಮಕ್ಕಳಿದ್ದಂತೆ ಈ ಮಾತನ್ನು ಹೇಳಿದ ಚಕ್ರವರ್ತಿ ಅಶೋಕ ಸಾಮ್ರಾಟ.
ಚಂದ್ರಗುಪ್ತ ಮೌರ್ಯ
➡ ಮೌರ್ಯ ಸಾಮ್ರಾಜ್ಯವನ್ನು ಸ್ಥಾಪಿಸಿದ ಕೀರ್ತಿ ಚಂದ್ರಗುಪ್ತನಿಗೆ ಸಲ್ಲುತ್ತದೆ.
➡ ತಂದೆಯನ್ನು ಕಳೆದುಕೊಂಡಿದ್ದ ಚಂದ್ರಗುಪ್ತನಿಗೆ ವಿಷ್ಣುಗುಪ್ತ (ಕೌಟಿಲ್ಯ, ಚಾಣಕ್ಯ) ತಕ್ಷಶಿಲಾ ನಗರಕ್ಕೆ ಕರೆದೊಯ್ದು ಯೋಗ್ಯ ಶಿಕ್ಷಣವನ್ನು ಕೊಡಿಸಿದನು.
➡ ಭಾರತದ ವಾಯುವ ಭೂಭಾಗವನ್ನು ಗ್ರೀಕರ ಆಳ್ವಿಕೆಯಿಂದ ಮುಕ್ತಗೊಳಿಸುವುದು ಮತ್ತು ದುಷ್ಟ ರಾಜನಾದ ಮಗಧ ರಾಜನ ಆಡಳಿತವನ್ನು ಕಿತ್ತೊಗೆಯುವುದು ಕೌಟಿಲ್ಯನ ಗುರಿಯಾಗಿತ್ತು.
➡ ಮೌರ್ಯರ ರಾಜಧಾನಿ ಪಾಟಲಿಪುತ್ರ (ಪಟ್ನಾ)
➡ ಬುದ್ಧನು ಉಪದೇಶ ನೀಡಿದ ಮೊದಲ ಸ್ಥಳ- ಸಾರಾನಾಥ
➡ ಚಂದ್ರಗುಪ್ತ ಮೌರ್ಯ ಗ್ರೀಕರೊಡನೆ ಹೋರಾಡಿ ಅವರನ್ನು ಭಾರತದ ನೆಲದಿಂದ ಹೊರಹಾಕಿದನು.
➡ ಮಗಧ ರಾಜನನ್ನು ಸಂಹಾರ ಮಾಡಿ ಉತ್ತರ ಭಾರತದಲ್ಲಿ ಸಾಮ್ರಾಜ್ಯವೊಂದನ್ನು ಸ್ಥಾಪಿಸಿದನು ಅದೇ ಮೌರ್ಯ ಸಾಮ್ರಾಜ್ಯ.
➡ ಭಾರತದ ಮೇಲೆ ದಂಡೆತ್ತಿ ಬಂದಂತಹ ಸೆಲ್ಯೂಕಸ್ ಎಂಬ ಗ್ರೀಕ್ ಅಧಿಕಾರಿಯನ್ನು ಚಂದ್ರಗುಪ್ತ ಮೌರ್ಯ ಹೀನಾಯವಾಗಿ ಸೋಲಿಸಿದನು.
➡ ಸೆಲ್ಯೂಕಸ್ ಶಾಂತಿ ಒಪ್ಪಂದ ಮಾಡಿಕೊಂಡು ಅಫ್ಘಾನಿಸ್ತಾನ & ಬಲೂಚಿಸ್ತಾನದ ಭೂಭಾಗಗಳನ್ನು ಚಂದ್ರಗುಪ್ತನಿಗೆ ಬಿಟ್ಟಿಕೊಟ್ಟನು.
➡ ಇದಕ್ಕೆ ಪ್ರತಿಯಾಗಿ ಚಂದ್ರಗುಪ್ತ ತರಬೇತಿ ಪಡೆದ 500 ಆನೆಗಳನ್ನು ಉಡುಗೊರೆಯಾಗಿ ಸೆಲ್ಯೂಕಸ್ ನಿಗೆ ಕೊಟ್ಟನು.
➡ ಜೊತೆಗೆ ತನ್ನ ರಾಯಭಾರಿಯಾಗಿ ಮೆಗಸ್ತನೀಸ್ ಎಂಬುವವನನ್ನು ಚಂದ್ರಗುಪ್ತನ ಆಸ್ಥಾನಕ್ಕೆ ಕಳಿಸಿದನು.
➡ ಮೆಗಾಸ್ತನೀಸ್ ಮೌರ್ಯರ ಕಾಲದ ಭಾರತದ ಸ್ಥಿತಿಗತಿಗಳ ಬಗ್ಗೆ ಬರೆದಿಟ್ಟ ಪುಸ್ತಕವೇ ಇಂಡಿಕಾ.
🌼 ಕೌಟಿಲ್ಯನ ಅರ್ಥಶಾಸ್ತ್ರ:
➡ ರಾಜ್ಯದ ಆಡಳಿತಗಾರರಿಗೆ ಮಾರ್ಗದರ್ಶನ ನೀಡುವ ಉತ್ತಮ ಕೃತಿಯಾದ ಅರ್ಥಶಾಸ್ತ್ರವನ್ನು ಚಂದ್ರಗುಪ್ತ ಮೌರ್ಯನ ಮಂತ್ರಿಯಾಗಿದ್ದ ಕೌಟಿಲ್ಯನು ರಚಿಸಿದನು.
🔊 ಅಶೋಕ ಚಕ್ರವರ್ತಿ:
➡ ಚಂದ್ರಗುಪ್ತನ ನಂತರ ಆತನ ಮಗನಾದ ಬಿಂದುಸಾರನು ಸಿಂಹಾಸನವನ್ನೇರಿದನು.
➡ ಬಿಂದುಸಾರನ ನಂತರ ಅಧಿಕಾರಕ್ಕೆ ಬಂದ ಅಶೋಕನು ತನ್ನ ಆದರ್ಶಗಳಿಂದ ಜಗತ್ತಿನಲ್ಲಿ ವಿಶಿಷ್ಟ ಸ್ಥಾನ ಪಡೆದ ಚಕ್ರವರ್ತಿಯಾಗಿದ್ದಾನೆ.
🔊 ಮೌರ್ಯರ ಆಡಳಿತ ಪದ್ಧತಿ:
➡ ರಾಜನೇ ಆಡಳಿತದ ಮುಖ್ಯಸ್ಥನಾಗಿದ್ದನು.
➡ ಆಡಳಿತದ ವಿಭಾಗಗಳನ್ನು ನೋಡಿಕೊಳ್ಳಲು ಉನ್ನತ ಅಧಿಕಾರಿಗಳಿದ್ದರು.
➡ ಧರ್ಮಮಹಾಮಾತ್ರರು ಎಂಬ ವಿಶೇಷ ಅಧಿಕಾರಿಗಳು ಜನರಲ್ಲಿ ಉತ್ತಮ ನೀತಿ ನಡತೆಯನ್ನು ಪ್ರಚಾರ ಮಾಡುತ್ತಿದ್ದರು.
➡ ಗ್ರಾಮ ಆಡಳಿತ: ಗ್ರಾಮ ಆಡಳಿತದ ಮುಖ್ಯಸ್ಥ ಗ್ರಾಮಿಕ.
🔊 ವಾಸ್ತು ಮತ್ತು ಮೂರ್ತಿಶಿಲ್ಪ:
➡ ಅಶೋಕನ ಕಾಲದ ಸ್ತೂಪ ಮಧ್ಯ ಪ್ರದೇಶದ ಸಾಂಚಿ ಎಂಬಲ್ಲಿದೆ.
➡ ಸ್ತಂಭದ ಮೇಲು ಭಾಗದಲ್ಲಿ (ಬೋದಿಗೆ) ಗೂಳಿ ಮತ್ತು ನಾಲ್ಕು ಸಿಂಹಗಳ ವಿಗ್ರಹವಿದೆ.
➡ ಸಾರನಾಥದ ವಸ್ತು ಸಂಗ್ರಹಾಲಯದಲ್ಲಿ ಸಿಂಹ ಬೂದಿಗೆಯ ಸ್ತಂಭವನ್ನು ಕಾಣಬಹುದು ಇದು ನಮ್ಮ ರಾಷ್ಟ್ರ ಲಾಂಛನವಾಗಿದೆ.
6ನೇ ತರಗತಿ ಸಮಾಜ ವಿಜ್ಞಾನ ಘಟಕ-03 ಮೌರ್ಯರು ಹೆಚ್ಚುವರಿ ಮಾಹಿತಿ:
➡ ಭಾರತದ ಮೊಟ್ಟಮೊದಲ ಸಾಮ್ರಾಜ್ಯ: ಮೌರ್ಯರು
➡ ಭಾರತದ ಮೆಕೆವೆಲ್ಲಿ - ಕೌಟಿಲ್ಯ
➡ ಸೌರಾಷ್ಟ್ರದಲ್ಲಿ ಸುದರ್ಶನ ಕೆರೆಯನ್ನು (ಜಲಾಶಯವನ್ನು) ನಿರ್ಮಿಸಿದ ಚಂದ್ರಗುಪ್ತನ ಅಧಿಕಾರಿ - ಪುಷ್ಯಗುಪ್ತ
➡ ಚಂದ್ರಗುಪ್ತನು ಅನುಸರಿಸಿದ ಧರ್ಮ - ಜೈನಧರ್ಮ
➡ ದ್ವಿತೀಯ ಬುದ್ಧ, ದೇವನಾಂಪ್ರಿಯ ಪ್ರಿಯದರ್ಶಿ, ಶಿಲಾಶಾಸನಗಳ ರಾಜ, ಶಿಲಾಶಾಸನಗಳ ಪಿತಾಮಹ - ಅಶೋಕ
➡ ಅಶೋಕನ ಶಾಸನಗಳನ್ನು ಪ್ರಥಮ ಬಾರಿಗೆ ಓದಿ ಬೆಳಕಿಗೆ ತಂದವರು - ಜೇಮ್ಸ್ ಪ್ರಿನ್ಸೆಪ್
➡ ಅಶೋಕನನ್ನು ವಿಶ್ವದ ಗಣ್ಯ ಚಕ್ರವರ್ತಿ ಎಂದು ಕರೆದವರು - ಹೆಚ್. ಜಿ. ವೇಲ್ಸ್
➡ ಕಳಿಂಗ ಯುದ್ಧ ನಡೆದ ವರ್ಷ - ಕ್ರಿ. ಪೂ 261
➡ ಅಶೋಕನ ಕಳಿಂಗ ಯುದ್ಧದ ಬಗ್ಗೆ ಮಾಹಿತಿ ನೀಡುವ ಶಿಲಾಶಾಸನ - 13 ನೇ ಗೌಣ ಶಿಲಾಶಾಸನ
➡ ಮೌರ್ಯರ ಕಾಲದಲ್ಲಿ ಭೂಮಿಯನ್ನು ಅಳತೆ ಮಾಡಿ ಕಂದಾಯ ನಿಶ್ಚಯ ಮಾಡುತ್ತಿದ್ದ ಅಧಿಕಾರಿ - ರಜ್ಜುಕ
➡ ಮೌರ್ಯರ ಕಾಲದಲ್ಲಿ ರಾಜನ ಕಣ್ಣು ಕಿವಿಗಳೆಂದು ಹೆಸರಾಗಿದ್ದ ಇಲಾಖೆ - ಗುಪ್ತಚರ ವಿಭಾಗ
➡ ಪಾಟಲಿಪುತ್ರದಲ್ಲಿ ಮೂರನೇ ಬೌದ್ಧ ಸಮ್ಮೇಳನ ನಡೆದ ವರ್ಷ - ಕ್ರಿಸ್ತಪೂರ್ವ 250
➡ ಪ್ರಪಂಚದಲ್ಲಿ ಜನಗಣತಿ ಆರಂಭಿಸಿದ ಎರಡನೇ ದೇಶ ಭಾರತ ( ಮೌರ್ಯರು)
➡ ಕಲ್ಹಣನ ರಾಜತರಂಗಿಣಿ ಪ್ರಕಾರ ಅಶೋಕನ ಇಷ್ಟದೈವ ಶಿವ
➡ ಅಶೋಕನ ಬೌದ್ಧರಡೆಗಿನ ಅತಿಯಾದ ಧಾರಾಳತನವನ್ನು ವಿರೋಧಿಸಿದ ಅವನ ರಾಣಿ ತ್ತಿಸ್ಸರಕ್ಖಾ
➡ ಮೌರ್ಯರ ಕಾಲದ ಪ್ರಸಿದ್ಧ ಅಧ್ಯಯನ ಕೇಂದ್ರ ತಕ್ಷಶಿಲಾ
➡ ನೇಪಾಳದ ಕ್ಷತ್ರಿಯ ದೇವಪಾಲನನ್ನು ವಿವಾಹವಾದ ಅಶೋಕನ ಮಗಳು ಚಾರುಮತಿ
➡ ಶಾಸನಗಳಲ್ಲಿ ಹೆಸರಿಸಲ್ಪಟ್ಟ ಅಶೋಕನ ಏಕ ಮಾತ್ರ ಪುತ್ರ ತಿವಾರ
➡ ಮೌರ್ಯರ ಕೊನೆಯ ಅರಸ ಬೃಹದ್ರಥ
➡ ಬೃಹದ್ರಥನನ್ನು ಕೊಲೆಗೈದವರು ಪುಷ್ಯ ಮಿತ್ರಶುಂಗ
No comments:
Post a Comment
If you have any doubts please let me know