26 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು26th June 2023 Daily Top-10 General Knowledge Questions and Answers
26 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
26th June 2023 Daily Top-10 General Knowledge Questions and Answers
1. ಪ್ರಸ್ತುತ ಭಾರತದಲ್ಲಿರುವ ಹೈಕೋರ್ಟ್ ಗಳ ಸಂಖ್ಯೆ ಎಷ್ಟು?
- 25 ಹೈಕೋರ್ಟ್ ಗಳು
2. ಭಾರತದ ಅತ್ಯಂತ ಹಳೆಯ ಹೈಕೋರ್ಟ್ಗಳನ್ನು ಹೆಸರಿಸಿರಿ.
- ಕಲ್ಕತ್ತಾ, ಮುಂಬೈ ಮತ್ತು ಮದ್ರಾಸ್ ಹೈಕೋರ್ಟ್ ಗಳು
3. ಭಾರತದ ಅತ್ಯಂತ ದೊಡ್ಡ ಹೈಕೋರ್ಟ್ ಯಾವುದು?
- ಉತ್ತರಪ್ರದೇಶದ ಅಲಹಾಬಾದ್ ಹೈಕೋರ್ಟ್ (160 ಮಂದಿ ನ್ಯಾಯಾಧೀಶರು)
4. ಅತಿ ಹೆಚ್ಚು ರಾಜ್ಯಗಳ ವ್ಯಾಪ್ತಿಯನ್ನು ಹೊಂದಿರುವ ಹೈಕೋರ್ಟ್ ಯಾವುದು?
- ಅಸ್ಸಾಂನ ಗುವಾಹಟಿ ಹೈಕೋರ್ಟ್ (ಅಸ್ಸಾಂ, ಅರುಣಾಚಲ ಪ್ರದೇಶ, ನಾಗಾಲ್ಯಾಂಡ್, ಮಿಜೋರಾಂ)
5. ಕರ್ನಾಟಕ ಹೈಕೋರ್ಟ್ ನ ಆರಂಭಿಕ ಕಛೇರಿ ಎಲ್ಲಿತ್ತು?
- ಬೆಂಗಳೂರಿನ ಅಠಾರಾ ಕಛೇರಿ
6. ಭಾರತ ಸಂವಿಧಾನದ ಯಾವ ವಿಧಿಗಳು ಹೈಕೋರ್ಟ್ ಕುರಿತು ತಿಳಿಸುತ್ತವೆ?
- ಸಂವಿಧಾನದ 6ನೇ ಭಾಗದ 214 ರಿಂದ 237 ನೇ ವಿಧಿಗಳು
7. ಕೇಂದ್ರಾಡಳಿತ ಪ್ರದೇಶವಾದ ಚಂಡೀಗಡ ಯಾವ ಹೈಕೋರ್ಟ್ ನ ವ್ಯಾಪ್ತಿಗೆ ಒಳಪಟ್ಟಿದೆ?
- ಪಂಜಾಬ್ ಹೈಕೋರ್ಟ್
8. ಕೇಂದ್ರಾಡಳಿತ ಪ್ರದೇಶವಾದ ಪಾಂಡಿಚೇರಿ ಯಾವ ಹೈಕೋರ್ಟ್ ನ ವ್ಯಾಪ್ತಿಗೆ ಒಳಪಟ್ಟಿದೆ?
- ಮದ್ರಾಸ್ ಹೈಕೋರ್ಟ್
9. ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರನ್ನು ಯಾರು ನೇಮಕ ಮಾಡುತ್ತಾರೆ?
- ರಾಷ್ಟ್ರಪತಿಗಳು
10. ಜಿಲ್ಲಾ ನ್ಯಾಯಾಧೀಶರನ್ನು ಯಾರು ನೇಮಕ ಮಾಡುತ್ತಾರೆ?
- ರಾಜ್ಯದ ರಾಜ್ಯಪಾಲರು ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರೊಡನೆ ಚರ್ಚಿಸಿ ನೇಮಕ
No comments:
Post a Comment
If you have any doubts please let me know