03 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು03rd June 2023 Daily Top-10 General Knowledge Questions and Answers
03 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
03rd June 2023 Daily Top-10 General Knowledge Questions and Answers
1. ಯುರೇನಸ್ ಗ್ರಹವನ್ನು ಕಂಡುಹಿಡಿದ ಖಗೋಳಶಾಸ್ತ್ರಜ್ಞ ಯಾರು?
- ಸರ್ ಫ್ರೆಡರಿಕ್ ವಿಲಿಯಂ ಹರ್ಷಲ್
2. ಕ್ಷ-ಕಿರಣಗಳನ್ನು ಆವಿಷ್ಕರಿಸಿದ ವಿಜ್ಞಾನಿ ಯಾರು?
- ವಿಲಿಯಂ ರಾಂಟಜೆನ್
3. ನೇರಳಾತೀತ ವಿಕಿರಣಗಳನ್ನು ಆವಿಷ್ಕರಿಸಿದ ವಿಜ್ಞಾನಿ ಯಾರು?
- ಜೆ.ಡಬ್ಲ್ಯು.ರಿಟ್ಟರ್
4. ರತ್ನಗಳ ಶುದ್ಧತೆಯನ್ನು ಪರೀಕ್ಷಿಸಲು ಬಳಸುವ ವಿಕಿರಣ ಯಾವುದು?
- ನೇರಳಾತೀತ ವಿಕಿರಣ
5. ನೇರಳಾತೀತ ವಿಕಿರಣಗಳನ್ನು ಯಾವ ವಿಟಮಿನ್ ಸಂಶ್ಲೇಷಣೆ ಮಾಡಲು ಬಳಸುವರು?
- ವಿಟಮಿನ್ ಡಿ
6. ಪ್ರಾಣಿ & ಮನುಷ್ಯರ ದೇಹದಲ್ಲಿ ಹೊಕ್ಕಿರಬಹುದಾದ ನಾಣ್ಯ, ಗುಂಡುಸೂಜಿ ಮತ್ತಿತರ ವಸ್ತುಗಳನ್ನು ಪತ್ತೆ ಮಾಡಲು ಬಳಸುವ ವಿಕಿರಣ ಯಾವುದು?
- ಕ್ಷ-ಕಿರಣಗಳು
7. ಗಾಮಾ ಕಿರಣಗಳನ್ನು ಆವಿಷ್ಕರಿಸಿದ ವಿಜ್ಞಾನಿ ಯಾರು?
- ಹೆನ್ರಿ ಬೆಕ್ವೆರಲ್
8. ವಿದ್ಯುತ್ ಕಾಂತೀಯ ವಿಕಿರಣಗಳಲ್ಲಿ ವಿಕಿರಣ ಪಟುತ್ವವನ್ನು ಹೊಂದಿರುವ ಏಕೈಕ ವಿಕಿರಣ ಯಾವುದು?
- ಗಾಮಾ ಕಿರಣಗಳು
9. ವೈದ್ಯಕೀಯ ಕ್ಷೇತ್ರದಲ್ಲಿ ಕ್ಯಾನ್ಸರ್ ಕೋಶಗಳನ್ನು ನಾಶಪಡಿಸಲು ವ್ಯಾಪಕವಾಗಿ ಬಳಸುವ ವಿಕಿರಣ ಯಾವುದು?
- ಗಾಮಾ ವಿಕಿರಣಗಳು
10. ಕ್ವಾಂಟಮ್ ಸಿದ್ಧಾಂತವನ್ನು ವಿವರಿಸಿದ ಭೌತವಿಜ್ಞಾನಿ ಯಾರು?
- ಮ್ಯಾಕ್ಸ ಪ್ಲಾಂಕ್
No comments:
Post a Comment
If you have any doubts please let me know