02 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು02nd June 2023 Daily Top-10 General Knowledge Questions and Answers
02 ಜೂನ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
02nd June 2023 Daily Top-10 General Knowledge Questions and Answers
1. ಸೂರ್ಯನ ಸುತ್ತ ಗ್ರಹಗಳ ಚಲನೆಯ ಕುರಿತು ಮೂರು ನಿಯಮಗಳನ್ನು ಆವಿಷ್ಕರಿಸಿದ ವಿಜ್ಞಾನಿ ಯಾರು?
- ಜೋಹಾನಿಸ್ ಕೆಪ್ಲರ್
2. ವಿದ್ಯುತ್ಕಾಂತೀಯ ತರಂಗಗಳಲ್ಲಿ ಅತಿ ಕಡಿಮೆ ತರಂಗ ದೂರವನ್ನು ಹೊಂದಿರುವ ವಿಕಿರಣ ಯಾವುದು?
- ಗಾಮಾ ವಿಕಿರಣಗಳು
3. ವಿದ್ಯುತ್ಕಾಂತೀಯ ತರಂಗಗಳಲ್ಲಿ ಅತಿ ಹೆಚ್ಚು ತರಂಗ ದೂರವನ್ನು ಹೊಂದಿರುವ ವಿಕಿರಣ ಯಾವುದು?
- ರೇಡಿಯೋ ತರಂಗ
4. ದೃಗ್ಗೋಚರ ಬೆಳಕಿನ ತರಂಗ ವ್ಯಾಪ್ತಿ ಎಷ್ಟು?
- 400nm to 750nm (nm-ನ್ಯಾನೋಮೀಟರ್)
5. ರೇಡಿಯೋ ತರಂಗಗಳನ್ನು ಉತ್ಪತ್ತಿ ಮಾಡಿದ ವಿಜ್ಞಾನಿ ಯಾರು?
- ಹೆನ್ರಿಚ್ ರುಡಾಲ್ಫ್ ಹರ್ಟ್ಸ್
6. ಜಿಪಿಎಸ್ ನಲ್ಲಿ ಯಾವ ವಿದ್ಯುತ್ ಕಾಂತೀಯ ತರಂಗಗಳನ್ನು ಬಳಸುತ್ತಾರೆ?
- ರೇಡಿಯೋ ತರಂಗಗಳು
7. ಪೊಲೀಸ ಸಂಪರ್ಕ ವ್ಯವಸ್ಥೆ (ವಾಕಿಟಾಕಿ)ಯಲ್ಲಿ ಯಾವ ವಿದ್ಯುತ್ ಕಾಂತೀಯ ತರಂಗಗಳನ್ನು ಬಳಸುತ್ತಾರೆ?
- ರೇಡಿಯೋ ತರಂಗಗಳು
8. ರೇಡಾರ್ ಗಳಲ್ಲಿ ಬಳಕೆ ಮಾಡುವ ವಿದ್ಯುತ್ ಕಾಂತೀಯ ತರಂಗಗಳು ಯಾವುವು?
- ರೇಡಿಯೋ ತರಂಗಗಳು
9. ಅವಕೆಂಪು ವಿಕಿರಣಗಳನ್ನು ಕಂಡು ಹಿಡಿದವರು ಯಾರು?
- ವಿಲಿಯಮ್ ಹರ್ಷಲ್
10. ಶತ್ರು ಸೇನಾ ಶಿಬಿರಗಳನ್ನು ಪತ್ತೆ ಮಾಡಲು ಬಳಸುವ ವಿಕಿರಣ ಯಾವುದು?
- ಅವಕೆಂಪು ವಿಕಿರಣಗಳು
No comments:
Post a Comment
If you have any doubts please let me know