6 ನೇ ತರಗತಿಯ ಅಧ್ಯಾಯ-01
ನಮ್ಮ ಹೆಮ್ಮೆಯ ಭಾರತ ನೋಟ್ಸ್
- ಭಾರತದ ಪ್ರಾಚೀನ ಹೆಸರುಗಳು: ಭರತ ಖಂಡ, ಹಿಂದೂಸ್ತಾನ, ಇಂಡಿಯಾ, ಜಂಬೂದ್ವೀಪ
- ಪುರಾಣಗಳ ಪ್ರಕಾರ: ವೃಷಭನಾಥನ ಹಿರಿಯ ಮಗನಾದ ಭರತ ರಾಜನು ಈ ನಾಡನ್ನು ಆಳಿದ್ದರಿಂದಾಗಿ ಭರತಖಂಡ, ಭರತವರ್ಷ (ಭಾರತ ದೇಶ) ಎಂಬ ಹೆಸರು ಬಂದಿದೆ.
- ಪರ್ಷಿಯನ್ನರು ಸಿಂಧೂ ನದಿ ಬಯಲಿನ ಜನರನ್ನು ಹಿಂದೂ ಎಂದು ಕರೆದರು.
- ಗ್ರೀಕರು ಹಿಂದೂ ಪದವನ್ನು ಇಂಡು ಎಂದು ಉಚ್ಛರಿಸಿದರು, ಹಾಗೂ ಸಿಂಧು ನದಿಯನ್ನು ಇಂಡಸ್ ಎಂದು ಕರೆದರು.
- ಮಹಮ್ಮದಿಯರ ಆಕ್ರಮಣದಿಂದ ಮತ್ತೆ ಹಿಂದೂ ಪದ ಮತ್ತೆ ಬಳಕೆಗೆ ಬಂದಿತು.
- ಮಹಮ್ಮದಿಯರು ಈ ದೇಶವನ್ನು ಹಿಂದೂಸ್ತಾನ ಎಂದು ಕರೆದರು ಹಾಗೂ ಇಲ್ಲಿನ ಜನರನ್ನು ಹಿಂದುಗಳು ಎಂದು ಹಾಗೂ ಅವರ ಧರ್ಮವನ್ನು ಹಿಂದೂ ಧರ್ಮ ಎಂದು ಕರೆದರು.
- ಇಂಗ್ಲೀಷರು ಈ ದೇಶವನ್ನು ಇಂಡಿಯಾ ಎಂದೂ ಹಾಗೂ ಹಿಂದೂ ಧರ್ಮವು ಹಿಂದೂಯಿಸಂ ಎಂದು ಕರೆದರು.
- “ಸಂಸ್ಕೃತ ಭಾಷೆಯ ನುಡಿಗಟ್ಟು ಅದ್ಭುತ” ಎಂಬ ಹೇಳಿಕೆ ನೀಡಿದವರು- ವಿಲಿಯಂ ಜೋನ್ಸ್
- ವಿಲಿಯಂ ಜೋನ್ಸ್ ಭಾರತದ ಸಾಹಿತ್ಯ ಅಧ್ಯಯನ ಮಾಡುವ ಸಲುವಾಗಿ ಸಂಸ್ಥೆಯೊಂದನ್ನು ಸ್ಥಾಪಿಸಿದರು.
- ವಿಲಿಯಂ ಜೋನ್ಸ್ ಸ್ಥಾಪಿಸಿದ ಸಂಸ್ಥೆಯು ಭಗವದ್ಗೀತೆಯನ್ನು ಇಂಗ್ಲೀಷ್ ಗೆ ಭಾಷಾಂತರಿಸಿತು, ಇದು ಸಂಸ್ಕೃತದಿಂದ ಇಂಗ್ಲೀಷ್ ಗೆ ತರ್ಜುಮೆಗೊಂಡ ಮೊದಲ ಕೃತಿಯಾಗಿದೆ.
- ವಿಲಿಯಂ ಜೋನ್ಸ್ ಕಾಳಿದಾಸನ ಶಾಕುಂತಲ ಕೃತಿಯನ್ನು ಇಂಗ್ಲೀಷ್ ನಲ್ಲಿ ಸಿದ್ಧಗೊಳಿಸಿದನು.
- ಇದೇ ಕಾಲದಲ್ಲಿ 50 ಉಪನಿಷತ್ತುಗಳು ಪರ್ಷಿಯನ್ ಮತ್ತು ಫ್ರೆಂಚ್ ಭಾಷೆಗಳಿಗೆ ಅನುವಾದಗೊಂಡವು.
- ಭಾರತ ಶಬ್ದದ ವಿವರಣೆ: ಭಾ- ಎಂದರೆ ಬೆಳಕು. ಜ್ಞಾನವೆಂಬ ಬೆಳಕಿನಲ್ಲಿ ‘ರತ’ (ಆಸಕ್ತ)ರಾಗಿರುವ ಭೂಮಿ (ದೇಶ) ‘ಭಾರತ’. ಆ ಪರಂಪರೆಯಲ್ಲಿರುವವರೇ ಭಾರತೀಯರು
- 1) ಮಗಧ-ಬಿಹಾರ
- 2) ಕಳಿಂಗ-ಒರಿಸ್ಸಾ
- 3) ಚೇರ-ಕೇರಳ
- 4) ಇಂದ್ರಪ್ರಸ್ಥ-ದೆಹಲಿ
- 5) ಪ್ರಯಾಗ-ಅಲಹಾಬಾದ್
- 6) ಮದ್ರಾಸ್-ಚೆನ್ನೈ
- 7) ಬರೋಡಾ-ವಡೋದರಾ
- 8) ಬೊಂಬಾಯಿ-ಮುಂಬೈ
- 1) ಮೆಸಪೊಟೇಮಿಯಾ-ಇರಾಕ್
- 2) ಪರ್ಷಿಯಾ-ಇರಾನ್
- 3) ವಾತಾಪಿ-ಬಾದಾಮಿ
- 4) ಕಾಥವಪುರಿ-ಶ್ರವಣಬೆಳಗೊಳ
- 5) ಸ್ಥಣ ಕುಂದೂರು-ತಾಳಗುಂದ
- 6) ವೈಜಯಂತಿಪುರ (ವಿಜಯಪತಾಕೆಪುರ)-ಬನವಾಸಿ
- 7) ಗೌಡದೇಶ-ಬಂಗಾಳ
- 8) ಕಾಮರೂಪ-ಅಸ್ಸಾಂ
- 9) ಭಾಗ್ಯನಗರ-ಹೈದರಾಬಾದ್
- 10) ಕರ್ಣಾವತಿ ನಗರ-ಅಹಮದಾಬಾದ್
- 11) ಕಾಥಿಯವಾಡ-ಗುಜರಾತ್
- 12) ಬನಾರಸ್-ಕಾಶಿ
- 13) ಮಹಿಷಮಂಡಲ-ಮೈಸೂರು
- 14) ರಜಪುತಾನ-ರಾಜಸ್ಥಾನ
- 15) ಸುವರ್ಣಗಿರಿ-ಕನಕಗಿರಿ (ರಾಯಚೂರು)
- 16) ಇಸಿಲ-ಬ್ರಹ್ಮಗಿರಿ (ಚಿತ್ರದುರ್ಗ)
- 17) ಅಹ್ ಸಾನಾಬಾದ್-ಕಲಬುರಗಿ
- 18) ಆನೆಗೊಂದಿ-ವಿಜಯನಗರ
- 19) ದ್ವಾರಸಮುದ್ರ-ಹಳೆಬೀಡು
- 20) ವೇಣುಗ್ರಾಮ-ಬೆಳಗಾವಿ
ಮಹತ್ವದ ಮಾಹಿತಿ
- ಶನ ಅಥವಾ ಸೊನ್ನೆಯನ್ನು ಮೊತ್ತಮೊದಲು ಒಂದು ಸಂಖ್ಯಾಸೂಚಕವಾಗಿ ಬಳಸಿದ ಕೀರ್ತಿ ಭಾರತೀಯರಿಗೆ ಸಲ್ಲುತ್ತದೆ.
- ಭೂಮಿ ಗುಂಡಗಿದೆ, ಸೂರ್ಯನ ಸುತ್ತ ಭೂಮಿ ಪರಿಭ್ರಮಿಸುತ್ತದೆ ಎಂದು ಭಾರತೀಯ ವಿಜ್ಞಾನಿ ಆರ್ಯಭಟನ ವಾದವನ್ನು ಎತ್ತಿಹಿಡಿದ ಕೀರ್ತಿ ಕೊಪರ್ನಿಕಸ್ ಗೆ ಸಲ್ಲುತ್ತದೆ.
- ನಾವಿಕರಿಗಾಗಿ ಭಾರತೀಯರು ರೇಖಾಂಶ ನಕ್ಷೆಯನ್ನು ಉಜ್ಜಯಿನಿಯಲ್ಲಿ ಸಿದ್ಧಗೊಳಿಸಿದ್ದರು.
- ಇಂತಹ ರೇಖಾಂಶ ನಕ್ಷೆಯೊಂದನ್ನು ಬಳಸಿಕೊಂಡು ಪೋರ್ಚುಗಲ್ ನಾವಿಕನಾದ ವಾಸ್ಕೋಡಿಗಾಮ ಭಾರತದ ಪಶ್ಚಿಮ ತೀರವನ್ನು ತಲುಪಿದನು.
- ಪೈಥಾಗೊರಸ್ ನ ಪ್ರಖ್ಯಾತ ಪ್ರಮೇಯವನ್ನು ಆತನಿಗಿಂತ 2 ಶತಮಾನಗಳ ಮೊದಲೇ ಬೋಧಾಯನ ಎಂಬ ಭಾರತೀಯ ವಿಜ್ಞಾನಿ ಗುರುತಿಸಿದ್ದನು.
- ವಸ್ತುವಿನ ಅವಿಭಾಜ್ಯ ಕಣವಾದ ಅಣುವನ್ನು ಕಣಾದ ಎಂಬ ಭಾರತೀಯ ವಿಜ್ಞಾನಿ 27 ಶತಮಾನಗಳಷ್ಟು ಹಿಂದೆ ಪ್ರತಿಪಾದಿಸಿದ್ದನು.
- ರಷ್ಯಾದೇಶದಲ್ಲಿ ಅಣು ಸಿದ್ಧಾಂತಕ್ಕೆ ಸಂಬಂಧಿಸಿದ ಪಾಠವು ಕಣಾದನ ಸ್ಮರಣೆಯಿಂದ ಆರಂಭವಾಗುತ್ತದೆ.
- ಗುಜರಾತಿನ ಸೂರತ್ ಪ್ರಾಚೀನ ಭಾರತದಲ್ಲಿ ಅತಿ ದೊಡ್ಡ ನೌಕಾನಿರ್ಮಾಣ ಕೇಂದ್ರವೆಂದು ಪ್ರಸಿದ್ಧವಾಗಿತ್ತು.
- ಜಗತ್ತಿನ ಅತಿ ಎತ್ತರದ ಬುದ್ಧನ ಮೂರ್ತಿ ಅಪ್ಘಾನಿಸ್ತಾನದ ಬಮಿಯಾನ್ ನಲ್ಲಿ ಇತ್ತು.
- ಕಾಂಬೋಡಿಯಾದ ಅಂಗೋರವಾಟ್ ನಲ್ಲಿ ಭವ್ಯ ಹಿಂದೂ ದೇವಾಲಯವು ಜಗತ್ತಿನ ಶ್ರೇಷ್ಟ ವಾಸ್ತುಶಿಲ್ಪಗಳಲ್ಲೊಂದಾಗಿದೆ.
- ಜಾವಾದ ಬೊರಬೊದೂರ್ ಎಂಬಲ್ಲಿ ಜಗತ್ಪ್ರಿಸಿದ್ಧ ಬೃಹತ್ ಬೌದ್ಧದೇವಾಲಯವಿದೆ.
- ಇವೆರಡೂ ವಿಶ್ವಪರಂಪರೆಗೆ ಸೇರಿದ ತಾಣಗಳಾಗಿವೆ.
- ವೃಷಭನಾಥ ಜೈನಮತದ ಮೊದಲ ತೀರ್ಥಂಕರ.
- ಜೈನಧರ್ಮದ 23 ನೇ ತೀರ್ಥಂಕರ – ಪಾರ್ಶ್ವನಾಥ
- ಜೈನಧರ್ಮದ 24 ನೇ ತೀರ್ಥಂಕರ – ಮಹಾವೀರ
- ಜೈನಧರ್ಮದ ಸ್ಥಾಪಕ – ಮಹಾವೀರ
- ಮಹಾವೀರನು ಕ್ರಿ.ಪೂ 599 ಅಥವಾ 540 ರಲ್ಲಿ ಪಾಟ್ನಾ ಸಮೀಪದ ಕುಂಡಲಿವನ ಅಥವಾ ಕುಂದಗ್ರಾಮದಲ್ಲಿ ಜನಿಸಿದನು.
- ಮಹಾವೀರನ ತಂದೆ-ಸಿದ್ಧಾರ್ಥ, ತಾಯಿ-ತ್ರಿಶಲಾದೇವಿ, ಹೆಂಡತಿ-ಯಶೋಧರೆ.
- ಮಹಾವೀರನ ಮೊದಲ ಹೆಸರು- ವರ್ಧಮಾನ
- ಮಹಾವೀರನ ಹೆಣ್ಣುಮಗುವಿನ ಹೆಸರು- ಅನೊಜ್ಜ ಅಥವಾ ಪ್ರಿಯದರ್ಶಿನಿ
- ಮಹಾವೀರ ಕೈವಲ್ಯ ಜ್ಞಾನ ಪಡೆದ ಗ್ರಾಮ- ಜ್ರುಂಬಕ.
- ಮಹಾವೀರ ಬಿಹಾರದ ಪಾವಾಪುರಿ ಎಂಬಲ್ಲಿ ಕ್ರಿ.ಪೂ 527 ರಲ್ಲಿ ನಿರ್ವಾಣ ಹೊಂದಿದರು.
- ಜಿನ ಎಂದರೆ ಇಂದ್ರಿಯಗಳನ್ನು ಪೂರ್ಣ ನಿಗ್ರಹಿಸಿದವನು ಅಥವಾ ಜಯಿಸಿದವನು.
- ಕೇವಲಿನ್ ಎಂದರೆ- ಮಹಾಜ್ಞಾನಿ ಎಂದರ್ಥ
- ತೀರ್ಥಂಕರ ಎಂದರೆ – ಮಾರ್ಗದರ್ಶಕರು ಅಥವಾ ಭವ ಸಾಗರವನ್ನು ದಾಟಿಸಬಲ್ಲ ಧರ್ಮಗುರು ಎಂದರ್ಥ.
- ಕುಂಡಲಿವನದ ಇಂದಿನ ಹೆಸರು- ಬಸುಕುಂದ
- ಮಹಾವೀರನ ಪ್ರಥಮ ಗಮಧರ ಅಥವಾ ಶಿಷ್ಯ- ಇಂದ್ರಭೂತಿ
- ಜೈನಧರ್ಮದ ಗ್ರಂಥಗಳು- ಪ್ರಾಕೃತ ಭಾಷೆಯಲ್ಲಿವೆ.
- ಕರ್ನಾಟಕದ ಪ್ರಾಚೀನ ಜೈನ ಕೇಂದ್ರಗಳು- ಕೊಪ್ಪಳ ಹಾಗೂ ಶ್ರವಣಬೆಳಗೊಳ
- ಕರ್ಮ ಸಿದ್ಧಾಂತದ ಪ್ರತಿಪಾದಕರು – ಮಹಾವೀರ
- ವರ್ಧಮಾನರು ಸನ್ಯಾಸತ್ವ ಸ್ವೀಕರಿಸಿದ ಘಟನೆಯನ್ನು ಮಹಾಪರಿತ್ಯಾಗ ಎಂದು ಕರೆಯುವರು.
- ಋಗ್ವೇದದಲ್ಲಿ ಯಾವ ತೀರ್ಥಂಕರನ ಉಲ್ಲೇಖವಿದೆ- ವೃಷಭನಾಥ.
- ಮೊದಲ ಜೈನ ಸಮ್ಮೇಳನ ಕ್ರಿ.ಪೂ 3 ನೇ ಶತಮಾನದಲ್ಲಿ, ಸ್ಥೂಲಭದ್ರನ ಅಧ್ಯಕ್ಷತೆಯಲ್ಲಿ ಪಾಟಲೀಪುತ್ರದಲ್ಲಿ ಜರುಗಿತು.
- ಗೊಮ್ಮಟೇಶ್ವರ ನಿರ್ಮಾತೃ – ಚಾವುಂಡರಾಯ
- ಪ್ರಸಿದ್ಧ ಮೌಂಟ್ ಅಬು ದೇವಾಲಯದ ನಿರ್ಮಾತೃ – ಗುಜರಾತಿನ ರಾಜಕುಮಾರ ಕುಮಾರಪಾಲ
- 1000 ಕಂಬಗಳಿರುವ ಬಸದಿ – ಮೂಡಬಿದ್ರೆಯಲ್ಲಿದೆ.
- ಜೈನರ ಮೆಕ್ಕಾ – ಮೂಡಬಿದ್ರೆ
- ಜೈನರ ಕಾಶಿ - ಶ್ರವಣಬೆಳಗೊಳ
- ಮಯನ್ಮಾರ್-ಬ್ರಹ್ಮದೇಶ
- ಇಂಡೋನೇಷ್ಯಾದ ಜಾವಾ, ಸುಮಾತ್ರಾ, ಬಾಲಿ – ಸುವರ್ಣದ್ವೀಪ
- ವಿಯೆಟ್ನಾಂ – ಚಂಪಾ
- ಕಾಂಬೋಡಿಯ – ಕಂಬುಜ ಎಂದು ಕರೆಯಲಾಗುತ್ತಿತ್ತು.
No comments:
Post a Comment
If you have any doubts please let me know