Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Saturday 15 April 2023

9ನೇ ತರಗತಿ ಗದ್ಯಭಾಗ-02 ಬೆಡಗಿನ ತಾಣ ಜಯಪುರ 9th Standard Gadhyabhaga-02 Bedagina Taana Jayapura Kannada Notes

9ನೇ ತರಗತಿ ಗದ್ಯಭಾಗ-02 ಬೆಡಗಿನ ತಾಣ ಜಯಪುರ

9th Standard Gadhyabhaga-02 Bedagina Taana Jayapura Kannada Notes

9ನೇ ತರಗತಿ ಗದ್ಯಭಾಗ-02 ಬೆಡಗಿನ ತಾಣ ಜಯಪುರ 9th Standard Gadhyabhaga-02 Bedagina Taana Jayapura Kannada Notes, Karnataka 9th standard Kannada Notes,


9ನೇ ತರಗತಿ ಗದ್ಯಭಾಗ-02 ಬೆಡಗಿನ ತಾಣ ಜಯಪುರ:

ಕೃತಿಕಾರರ ಪರಿಚಯ: ಕೆ.  ಶಿವರಾಮ ಕಾರಂತ

ಕೃತಿಕಾರರ ಪರಿಚಯ: ಕೆ.  ಶಿವರಾಮ ಕಾರಂತ

ಶಿವರಾಮ ಕಾರಂತ (ಅಕ್ಟೋಬರ್ 10, 1902-ಸೆಪ್ಟೆಂಬರ್ 12, 1997) - “ಕಡಲತೀರದ ಭಾರ್ಗವ”, “ನಡೆದಾಡುವ ವಿಶ್ವಕೋಶ” ಎಂದೇ ಖ್ಯಾತರಾಗಿದ್ದ ಕನ್ನಡ ಸಾಹಿತ್ಯ-ಸಂಸ್ಕೃತಿಯ ವಕ್ತಾರ, ಕವಿ, ಕಾದಂಬರಿಕಾರ, ನಾಟಕಕಾರ, ಅನುವಾದಕ, ವೈಜ್ಞಾನಿಕ ಬರಹಗಾರ. ಆಡುಮುಟ್ಟದ ಸೊಪ್ಪಿಲ್ಲ. ಹಾಗೇಯೆ ಕಾರಂತರು ಬರೆಯದ ಸಾಹಿತ್ಯ ಪ್ರಕಾರವೇ ಇಲ್ಲವೆನ್ನಲಾಗಿದೆ. ವಿಶ್ವ ವಿದ್ಯಾನಿಲಯಗಳಲ್ಲಿ ಪದವಿ, ಸ್ನಾತಕೋತ್ತರ ಪದವಿ ಪಡೆದಿಲ್ಲದಿದ್ದರೂ, ಅವರ ಸಾಹಿತ್ಯ ಪರಿಶ್ರಮ ಅಪಾರವಾದುದು. ಜ್ಞಾನಪೀಠ, ಪದ್ಮಭೂಷಣ, ಪಂಪ ಪ್ರಶಸ್ತಿ, ನಾಡೋಜ ಪುರಸ್ಕಾರ, ಎಂಟು ವಿಶ್ವವಿದ್ಯಾಲಯಗಳು ಗೌರವ ಡಾಕ್ಟರೇಟ್‌ಗಳನ್ನಿತ್ತು ಪುರಸ್ಕರಿಸಿವೆ.

ಜ್ಞಾನಪೀಠ ಪುರಸ್ಕೃತ ಡಾ. ಶಿವರಾಮ ಕಾರಂತರು ಹುಟ್ಟಿದ್ದು ಉಡುಪಿ ಜಿಲ್ಲೆಯ ಕೋಟದಲ್ಲಿ 1902, ಅಕ್ಟೋಬರ್ 10ರಂದು. ಒಂದು ಶತಮಾನಕ್ಕೆ ನಾಲ್ಕು ವರ್ಷಗಳಷ್ಟೇ ಕಮ್ಮಿಯಾಗಿ ಬಾಳಿ, ತಮ್ಮ ಜೀವಿತಾವಧಿಯಲ್ಲಿ ಸುಮಾರು 427 ಪುಸ್ತಕಗಳನ್ನು ರಚಿಸಿದರು. ಅವುಗಳಲ್ಲಿ ಕಾದಂಬರಿಗಳು 47. ತಮ್ಮ 96ನೆಯ ವಯಸ್ಸಿನಲ್ಲೂ ಹಕ್ಕಿಗಳ ಕುರಿತು ಒಂದು ಪುಸ್ತಕವನ್ನು ಬರೆದಿದ್ದು, ಇದು ವಿಶ್ವ ದಾಖಲೆಗೆ ಅರ್ಹವಾಗಿರುವ ಒಂದು ಸಾಧನೆ ಎನ್ನಬಹುದು. ಸಾಹಿತಿಯಾಗಿ ಶಿವರಾಮ ಕಾರಂತರು ಪ್ರಸಿದ್ಧಿಯಾಗಿರುವಂತೆ, ಇತರ ಕ್ಷೇತ್ರಗಳಲ್ಲೂ ಅಪಾರ ಸಾಧನೆ ಮಾಡಿದವರು. ಕರ್ನಾಟಕದ ಪ್ರಮುಖ ಕಲೆಯಾದ ಯಕ್ಷಗಾನದ ಉಳಿವಿಗೆ ಪ್ರಯತ್ನಿಸಿ, ಅದರಲ್ಲಿ ಹಲವು ಪ್ರಯೋಗಗಳನ್ನು ಮಾಡಿದ್ದರು. ತಾವೇ ಸ್ವತಃ ನೃತ್ಯವನ್ನು ಕಲಿತು, ಬ್ಯಾಲೆಯಲ್ಲೂ ಗಂಭೀರ ಪ್ರಯೋಗ ಮತ್ತು ಪ್ರಯತ್ನ ಮಾಡಿದ್ದರು.

ಯುವಕರಾಗಿದ್ದಾಗ, ಸಮಾಜ ಸುಧಾರಣೆಗೂ ಕೈ ಹಾಕಿ, ವೇಶ್ಯಾ ವಿವಾಹಗಳನ್ನು ಮಾಡಿಸಿದ್ದರು! ಯಕ್ಷಗಾನ ತಂಡಗಳನ್ನು ಕಟ್ಟಿಕೊಂಡು ಶ ವಿದೇಶಗಳಲ್ಲಿ ಈ ಕಲೆಯನ್ನು ಪ್ರಚುರಪಡಿಸಲು ಯತ್ನಿಸಿದರು. ಮಕ್ಕಳಲ್ಲಿದ್ದ ಪ್ರತಿಭೆ ಅರಳಿಸಲು ಪುತ್ತೂರಿನಲ್ಲಿ ಬಾಲವನ ಎಂಬ ಅಸಂಪ್ರದಾ ಯಿಕ ಶೈಕ್ಷಣಿಕ ಕೇಂದ್ರವನ್ನು ತೆರೆದಿದ್ದರು. ಪುತ್ತೂರಿನಲ್ಲಿ ಒಂದು ಮುದ್ರಣಾಲಯ ತೆರೆದು, ತಮ್ಮ ಪುಸ್ತಕಗಳನ್ನು ಮುದ್ರಿಸುತ್ತಿದ್ದರಲ್ಲದೆ, ತಮ್ಮ ಹಲವು ಕಾದಂಬರಿಗಳಿಗೆ ತಾವೆ ಮುಖಪುಟದ ಚಿತ್ರಗಳನ್ನೂ ಬರೆದು ಮುದ್ರಿಸಿದ ಬಹುಮುಖ ಪ್ರತಿಭೆ ಇವರದ್ದು! ಬಹುಶಃ ಮುಖಪುಟ ಚಿತ್ರ ಬರೆದು ಪ್ರಕಟಿಸಿದ ಕನ್ನಡದ ಪ್ರಥಮ ಪ್ರಮುಖ ಸಾಹಿತಿ ಇವರೊಬ್ಬರೇ. ನಿರಂತರ ಪ್ರಯೋಗಶೀಲರಾಗಿದ್ದ ಕೋಟ ಶಿವರಾಮ ಕಾರಂತ ಅವರು ಕನ್ನಡ ಚಿತ್ರರಂಗದಲ್ಲಿ ಕೂಡ ತಮ್ಮ ಪ್ರಯೋಗವನ್ನು ಆರಂಭ ಮಾಡಿದ್ದು. ಮೂಕಿ ಚಿತ್ರ ನಿರ್ಮಾಣಕ್ಕೆ ಕೈಹಾಕುವ ಮೂಲಕ. ಹರಿಜನರ ಬದುಕನ್ನು ಆಧರಿಸಿದ್ದ ಡೊಮಿಂಗೋ (1930) ಚಿತ್ರವನ್ನು ತಾವೇ ಚಿತ್ರೀಕರಿಸಿ, ಅಭಿನಯಿಸಿ ನಿರ್ದೇಶಿಸಿದ್ದರು. ಅನಂತರ ಭೂತರಾಜ್ಯ (1931) ಎಂಬ ಮೂಕಿ ಚಿತ್ರಗಳನ್ನು ಸಹ ನಿರ್ಮಿಸಿದರು.

ಶಿವರಾಮ ಕಾರಂತರ ಸಾಹಿತ್ಯ ಶ್ರೇಣಿಯ ಸಂಪುಟ – 32,  ಭಾಗ – 2,  ಗ್ರಂಥದ ಅಬುವಿನಿಂದ ಬರಾಮಕ್ಕೆ ಭಾಗದಿಂದ ಆರಿಸಿ,  ಸಂಪಾದಿಸಿ; ನಿಗದಿಪಡಿಸಲಾಗಿದೆ.


9ನೇ ತರಗತಿ ಗದ್ಯಭಾಗ-02 ಬೆಡಗಿನ ತಾಣ ಜಯಪುರ: ಆಶಯ ಭಾವ 

'ಬೆಡಗಿನತಾಣ ಜಯಪುರ' ಪಠ್ಯಭಾಗದಲ್ಲಿ ಭಾರತದ ಐತಿಹಾಸಿಕ ಹಾಗೂ ಸಾಂಸ್ಕೃತಿಕ ನಗರಗಳಲ್ಲಿ ಒಂದಾದ ಜಯಪುರದ ಅಂದ ಚಂದ, ಅಲ್ಲಿನ ಜನರ ಉಡುಗೆ-ತೊಡುಗೆ, ಐತಿಹಾಸಿಕ ವೈಭವ, ಜಾನಪದ ಕಲೆಗಳ ಸೊಗಸು ಮೊದಲಾದ ವಿಚಾರಗಳ ಬಗ್ಗೆ ಲೇಖಕರು ಹೇಳಿದ್ದಾರೆ. ಹಾಗೆಯೇ ಜಯಪುರದ ರಾಜರ ವೈಜ್ಞಾನಿಕತೆಗೆ ಸಾಕ್ಷಿಯಾದ ಜಂತ್ರ – ಮಂತ್ರ ಬಯಲು ಪ್ರಯೋಗಾಲಯದ ಬಗ್ಗೆ ವಿಶೇಷ ಉಲ್ಲೇಖವಿದೆ. 


9ನೇ ತರಗತಿ ಗದ್ಯಭಾಗ-02 ಬೆಡಗಿನ ತಾಣ ಜಯಪುರ: ಸರಳಾನುವಾದ ಮತ್ತು ಸಾರಾಂಶ:

ಕೆ. ಶಿವರಾಮಕಾರಂತರು ಮತ್ತು ಅವರ ಸ್ನೇಹಿತರಾದ ಶ್ರೀಪತಿಯವರು ಜಯಪುರಕ್ಕೆ ರೈಲಿನಲ್ಲಿ ಪ್ರವಾಸ ಹೋಗಿರುತ್ತಾರೆ.  ಜಯಪುರದ ರೈಲು ನಿಲ್ದಾಣದಲ್ಲಿ ಇವರಿಗಾಗಿ ಕೈ ಗಳು ಕಾಯುತ್ತಿದ್ದರು. ಸರಿಯಾಗಿ ಹನ್ನೊಂದು ಗಂಟೆಗೆ ಜಯಪುರ ತಲುಪಿದಾಗ ಬಿಸಿಲು ಬಡಿಯುತ್ತಿತ್ತು.  ರೈಗಳು ಲೇಖಕರನ್ನು ಊರ ಹೊರಗಿನಲ್ಲಿದ್ದ ತಮ್ಮ ಮನೆಗೆ ಕರೆದುಕೊಂಡು ಹೋದರು. 

ರೈಗಳ ಮನೆಯು ನಾಲ್ಕು ಸುತ್ತಲೂ ಉಸುಬು ಹರಡಿದ್ದ ಮರುಭೂಮಿಯಲ್ಲಿ ಇತ್ತು.  ಆದ್ದರಿಂದ ಮನೆಯಲ್ಲಿಯ ನೀರು ಕಾದೆ ಬರುತ್ತಿತ್ತು.  ಲೇಖಕರು ಬಿಸಿ ನೀರಿನಲ್ಲಿ ಸ್ನಾನ ಮಡಿದರು.  ಆದರೆ ಶ್ರೀ ಪತಿಯವರಿಗೆ ಸ್ನಾನ ಮಾಡಲು ತಣ್ಣೀರು ಬೇಕಾಗಿತ್ತು.  ಆದರಿಂದ ಬಿಸಿನೀರನ್ನು ಆರಿಸಿ ತಣ್ಣೀರು ಮಾಡಿಕೊಂಡು ಸ್ನಾನ ಮಾಡಿದರು.  ನಂತರ ಊಟ ಮಾಡಿ,  ಒಂದೆರಡು ಗಂಟೆಗಳ ಕಾಲ ವಿಶ್ರಾಂತಿ ಪಡೆದು,  ಟಾಂಗಾವನ್ನು ಹತ್ತಿ ನಗರ ಮಧ್ಯಭಾಗದಿಂದ ಹಾದು ಅಂಬೇರಕ್ಕೆ ಹೊರಟು ಹೋದರು.


ಜಯಪುರದ ಮುಖ್ಯಬೀದಿಗಳು ಲೇಖಕರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿದವು.  ಒಂದು ಶತಮಾನದ ಹಿಂದೆ ಈ ನಗರದ ಬೀದಿಗಳು ನಿರ್ಮಾಣವಾಗಿದ್ದರೂ ಸಹ ವಿಶಾಲವಾಗಿದ್ದವು.  ನೇರವಾಗಿದ್ದವು.  ಮನೆಗಳು ಸಹ ಅಷ್ಟೇ ಸುಂದರವಾಗಿ ಶೋಭಿಸುತ್ತಿದ್ದವು.  ಮುಖ್ಯಬೀದಿಗಳು ಸೇರುವಲ್ಲಿ ಸುಂದರವಾದ ಚೌಕಗಳಿದ್ದವು,  ಜಯಪುರ ಬಣ್ಣಗಾರರ ತವರೂರು. ಬಣ್ಣ ಹಾಕುವ ಕುಶಲಿಗರು,  ಬಣ್ಣದ ಮೋಹವಿರುವ ಜನರು ಬಹಳ ಜನರಿದ್ದಾರೆ.  ಗಿಡಮರ,  ಪ್ರಕೃತಿಯನ್ನು ಕಾಣದ ಜನರು ತಾವು ಹಾಕುವ ಬಟ್ಟೆಗಳಲ್ಲಿ ಬಣ್ಣಬಣ್ಣದ ರಂಗನ್ನು ಕಾಣುತ್ತಿದ್ದರು. 


ಇವರಿಗೆ ಕೆಂಪು,  ಕಿತ್ತಳೆ,  ಹಳದಿ ಬಣ್ಣಗಳೆಂದರೆ ಬಹಳ ಇಷ್ಟ ಹೆಂಗಸರು ರಂಗುರಂಗಿನ ಲಂಗ,  ಪಾಯಿಜಾಮಾ,  ಸೀರೆ,  ರವಿಕೆ,  ಮೇಲುದೆ ತೋಡುತ್ತಿದ್ದರು.  ಗಂಡಸರು ಆಷ್ಟೇ ರಂಗು ರಾಯರೇ ಆಗಿದ್ದರು.  ಲೇಖಕರು ಜಯಪುರ ನಗರವನ್ನು ಸುತ್ತಿ ಅಂಬೇರ ಬೆಟ್ಟಕ್ಕೆ ಹೋದರು. 

ಅಂಬೇರ ಜಯಪುರದ ಪೂರ್ವದ ರಾಜಧಾನಿ. ಹಳೆಯ ಕೋಟೆ,  ಅರಮನೆಗಳು ಇದ್ದವು.  ಲೇಖಕರು ಸುಮಾರು ಹದಿನೈದು ವರ್ಷಗಳ ಹಿಂದೆ ಜಯಪುರಕ್ಕೆ ಹೋಗಿದ್ದರು. 

ಆಗ ಆಂಬೇರ ಬೆಟ್ಟದಲ್ಲಿ ಜನರು ಮನೆಗಳನ್ನು ಕಟ್ಟಿಕೊಂಡು ವಾಸ ಮಾಡುತ್ತಿರಲಿಲ್ಲ.  ಪ್ರಾಚೀನ ಗುಡಿಗೋಪುರಗಳು ಪೂಜೆ ಇಲ್ಲದೆ ಗೂಬೆಯ ಮನೆಗಳಾಗಿದ್ದವು.  ಈಗ ಹಾಗಿಲ್ಲ ; ನೂರಾರು ಸಿಂಧೀ ಕುಟುಂಬಗಳು ಅಲ್ಲಿ ಮನೆ ಮಾಡಿಕೊಂಡು ವಾಸ ಮಾಡುತ್ತಿದ್ದಾರೆ. 

ಅಂಬೇರ ಬೆಟ್ಟದ ಬುಡದಲ್ಲಿ ಕೆರೆ,  ಉದ್ಯಾನ,  ಗುಡ್ಡ ಬೆಟ್ಟ ಹಾಗೂ ಕಣಿವೆಗಳು ಅಪೂರ್ವ ಮೋಹಕತೆಯನ್ನು ಉಂಟು ಮಾಡುತ್ತದೆ.  ಪ್ರಾಚೀನ ಜಯಪುರವನ್ನು ರಜಪೂತ ಅರಸರುಗಳು ಆಳ್ವಿಕೆ ಮಾಡಿದ್ದಾರೆ.  ಸುಂದರ ಕೆತ್ತನೆಯ ಸರಳತೆ,  ಭವ್ಯ,  ವೈಖರಿ ಪ್ರತಿಮೆಗಳಲ್ಲಿ ಕಾಣಿಸುತ್ತದೆ,  ಅಂಬೇರ ಕೋಟೆಯನ್ನು ಏರುತ್ತಾ ಹೋದರೆ ಕೆಳಗಿನ ನೋಟ ಸುಂದರವಾಗಿ ಕಾಣಿಸುತ್ತದೆ. 

ಕೋಟೆಯ ಒಳಗೆ ಅರಮನೆ ಇದೆ.  ಅರಮನೆಯ ಮೊದಲ ಅಂತಸ್ತಿನಲ್ಲಿ ಪುಟ್ಟ ದೇವಾಲಯವಿದೆ.  ಈ ದೇವಾಲಯದ ರಚನೆ,  ಗೋಡೆ,  ನೆಲ,  ಸ್ತಂಭಗಳೆಲ್ಲವೂ ಹಾಲುಗಲ್ಲಿನಿಂದ ರಚನೆಯಾಗಿದೆ.  ಗುಡಿ ಚಿಕ್ಕದಾಗಿದ್ದರೂ ಶಾಂತವಾಗಿ ಕಾಣಿಸುತ್ತದೆ.

ಎರಡನೆಯ ಅಂತಸ್ತಿನಲ್ಲಿ ದೊಡ್ಡದಾದ ಸಭಾಂಗಣ ಇದೆ,  ಇದು ವಿಶಾಲವಾದ ಹಾಲುಗಲ್ಲಿನ ರಚನೆ,  ಚಾವಣಿ,  ಕಮಾನು,  ಕಂಬಗಳು ರಜಪೂತ ಶೈಲಿಯಲ್ಲಿವೆ.  ಮೂರನೆಯ ಅಂತಸ್ತಿನಲ್ಲಿ ರಾಜರ ಆಂತಪುರವಿದೆ,  ಇಲ್ಲಿ ಕೆಲವು ಭಾಗಗಳಲ್ಲಿ ಚಂದ್ರಕಾಂತ ಶಿಲೆಯ ಸುಂದರ ಮಂಟಪಗಳಿವೆ, 

ಶಿಲೆಯನ್ನು ಕೆತ್ತಿ ಬಣ್ಣದ ಕಲ್ಲುಗಳಿಂದ ಕೊರೆದು ತುಂಬಿಸಿದ ಲತಾಪುಷ್ಪಗಳ ಚಿತ್ತಾವಳಿಗಳೂ ಇವೆ.  ಇನ್ನೊಂದೆರಡು ಚಾವಡಿಗಳು ಕನ್ನಡಿಯ ಚೂರುಗಳನ್ನು ಸುಣ್ಣದ ಗಾರೆಯಲ್ಲಿ ಅಂಟಿಸಿ,  ಚಿತ್ರವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ ಅಲಂಕರಿಸಿದಂತಹ ಕಂಬ,  ಮುಚ್ಚಿಕೆಗಳುಳ್ಳ ರಚನೆ, 

ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ,  ಲಕ್ಷೇಪಲಕ್ಷ ಈ ಗಾಜಿನ ತುಣುಕುಗಳು,  ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ.  ಆರಮನೆಯ ಮೊದಲನೆಯ ಮಟ್ಟದಲ್ಲಿ ಇನ್ನೊಂದು ಅಂತಃಪುರವಿದೆ,  ಅಲ್ಲೂ ಹಾಲುಗಲ್ಲಿನ ಚಾವಡಿ ಮತ್ತು ನೀರಿನ ಕಾರಂಜಿಗಳಿವೆ ; ಚಿತ್ರ ಕೊರೆದು ಮಾಡಿದ ಹಾಲುಗಲ್ಲಿನ ನೀರ ಕಾಲುವೆಗಳಿವೆ. 

ಇವೆಲ್ಲ ರಜಪೂತ ಅರಸರುಗಳ ರಸಿಕ ಜೀವನದ ದ್ಯೋತಕಗಳು.  ನಂತರ ಮೀರಾಬಾಯಿ ದೇವಾಲಯಕ್ಕೆ ಹೋದರು. ಆಕೆ ಗಿರಿಧರನಾಗರನನ್ನು ಪೂಜಿಸಿದ ಸ್ಥಳವಿದು.  ಕೆಳಗಿಳಿದು ಹೋಗಿ ಗುಡಿಯನ್ನು ನೋಡಿದರೆ ಅದರ ಸೊಬಗು ಚೆನ್ನಾಗಿ ಕಾಣುತ್ತದೆ. 

ನಕ್ಷತ್ರಾಕೃತಿಯನ್ನು ತುಂಬಿಕೊಂಡ ಗರ್ಭಗೃಹ,  ನವರಂಗಗಳಿವೆ.  ಗುಡಿಯ ಸುಂದರ ಆವರಣವನ್ನು ನೋಡಿ ಹಿಗ್ಗಿ,  ಲೇಖಕರು ಟಾಂಗಾ ನಿಲ್ಲಿಸಿದಲ್ಲಿಗೆ ಮರಳಿ ಬಂದರು.  ದಿನವಲ್ಲ ಪ್ರವಾಸ ಮಾಡಿದ್ದರಿಂದ ಲೇಖಕರಿಗೆ ತುಂಬಾ ದಣಿವಾಗಿತ್ತು.  ಜೊತೆಗೆ ಬಾಯಾರಿಕೆಯಾಗಿತ್ತು. 

ಆದ್ದರಿಂದ ಹಾದಿ ಬದಿಯ ಅಂಗಡಿಯಲ್ಲಿ ಬಣ್ಣ ಬಣ್ಣದ ಸೋಡಾ,  ಲೇಮನೇಡ್ ಕುಡಿದರು ನಂತರ ಮನೆಗೆ ಹೊರಟರು.  ಅಕ್ಕಪಕ್ಕದ ಹೊಲೆಗಳಲ್ಲಿ ಕೋಳಿ,  ಕಾಗೆಗಳಿಗಿಂತ ಅಗ್ಗವಾಗಿ ನವಿಲಿನ ಹಿಂಡು ಕಾಣಿಸಿತು, 

ಮರುದಿನ 'ಜಂತ್ರಮಂತ್ರ' ನೋಡಲು ಹೋದರು  'ಜಂತ್ರ ಮಂತ್ರ' ಹಳೆಯ ಕಾಲದ ಖಗೋಳವಿಜ್ಞಾನದ ಪರಿಶೀಲನಾಲಯ,  400-500 ವರ್ಷಗಳ ಪೂರ್ವದಲ್ಲಿ ಖಗೋಳಶಾಸ್ತ್ರಜ್ಞರು ಗ್ರಹ,  ಸೂರ್ಯ ಚಂದ್ರ ತಾರಾಮಂಡಲಗಳನ್ನು ಅಳೆದು,  ಪರಿಶೀಲಿಸಿ ನೋಡುವ ಸಲುವಾಗಿ,  ಇಲ್ಲಿ ವಿಚಿತ್ರವಾದ ಸಾಧನಗಳನ್ನು ನೆಟ್ಟಿದ್ದಾರೆ.  ಇಂಥ ಹತ್ತೆಂಟು ವಿಧದ ಸಾಧನಗಳ ವಿಚಿತ್ರ ರಚನೆಗಳಿವೆ.

ಗಳಿಗೆ ಅಳೆಯುವುದಕ್ಕೆ,  ಪ್ರತಿಯೊಂದು ತಿಂಗಳಿನಲ್ಲೂ ಸೂರ್ಯ,  ನಕ್ಷತ್ರಗಳ ಗತಿ ಪರಿಶೀಲಿಸುವುದಕ್ಕೆ ಏನೇನೊ ಏರ್ಪಾಟುಗಳಿವೆ. ಪ್ರತಿಯೊಂದು ಸಾಧನದ ಮೇಲೂ ಅವುಗಳ ಉಪಯೋಗ ಮತ್ತು ಕಾಲವನ್ನು ಅಳೆಯುವ ರೀತಿ ಮೊದಲಾದುವನ್ನು ನಮೂದಿಸಿದೆ. ದೂರದರ್ಶಿಯ ಸಹಾಯವಿಲ್ಲದೆ,  ಬರಿಗಣ್ಣಿನಿಂದಲೇ ಖಗೊಳದ ಗ್ರಹಗಳ ಗತಿಯನ್ನು ಅಳೆಯಲು ಮಾಡಿದ ಈ ಸಾಧನಗಳು,  ಗಣಿತಕ್ಕೂ ಸೂಕ್ಷ್ಮ ಪರಿಶೀಲನೆಗೂ ಹಿರಿಯರು ಸಲ್ಲಿಸಿದ ಕಾಣಿಕೆ, 


ಸೂರ್ಯ ನಡುಬಾನಿನಲ್ಲಿ ನಿಂತು ನಮ್ಮ ತಲೆಯನ್ನು ಕೊರೆಯುತ್ತಿದ್ದನಾದುದರಿಂದ,  ಇತರ ಸ್ಥಳಗಳನ್ನು ನೋಡುವ ಆಸೆ ಮರೆತು,  ಮನೆಗೆ ಓಡಿ ಬಂದರು.  ಲೇಖಕರಿಗೆ ಜಯಪುರದ ನೃತ್ಯಗಳನ್ನು ನೋಡಬೇಕೆಂಬ ಹಂಬಲ ಇತ್ತು. ಇದನ್ನು ರೈಗಳಿಗೆ ತಿಳಿಸಿದರು.  ಅವರು ಅವರ ಗೆಳೆಯನಿಗೆ ಹೇಳಿ ಏರ್ಪಾಡು ಮಾಡಿದರು. 

ಊರಿನ ಜನಸಾಮಾನ್ಯರ ನೃತ್ಯವದು.  ಇಬ್ಬರು ಯೌವನಸ್ಥರು ಸ್ತ್ರೀಯರ ಉಡುಗೆ ಉಟ್ಟಿದ್ದರು.  ಮಾರವಾಡಿ ಸ್ತ್ರೀಯರಂತೆ ತಲೆಗೆ ಸೆರಗು ಹಾಕಿಕೊಂಡು ಮುಖತೋರಿಸದೆ ಕುಣಿಯತೊಡಗಿದರು. ಹಿಮ್ಮೇಳಕ್ಕೆ ಡೋಲು ತಮಟೆಗಳಿದ್ದವು.  ಮುಂಭಾಗದಲ್ಲಿ ಸ್ತ್ರೀವೇಷದ ನರ್ತಕರು ಲಾಸ್ಯವೆಸಗಿದರು.  ಅವರ ಜತೆಗೆ ಮೂರು,  ನಾಲ್ಕು ಹುಡುಗರು ನಿತ್ಯದ ಉಡುಗೆಯಲ್ಲಿ ಕುಣಿದಾಡಿದರು.  ಆ ನೋಟವನ್ನು ನೋಡುವುದಕ್ಕೆ ಪುರವಣಿಗರೂ ಬಂದು ಕಲೆತರು. 

ನಮಗಾಗಿ ಒಂದೇ ದಿನದ ಏರ್ಪಾಟಿನಿಂದ ಈ ಕಾರ್ಯಕ್ರಮವನ್ನು ಏರ್ಪಡಿಸಿದ ಮಿತ್ರರಿಗೆ ಲೇಖಕರು ತುಂಬಾ ಕೃತಜ್ಞತೆ ಸಲ್ಲಿಸಿದರು.  ತನ್ನ ಮಿತ್ರ ರೈಗಳ ಸತ್ಕಾರಕ್ಕೆ ವಂದನೆ ಸಲ್ಲಿಸಿ ದಹಲಿಗೆ ಹೋಗುವ ರೈಲನ್ನೇರಿ ನಿದ್ರೆಗೆ ಜಾರಿದರು, 


9ನೇ ತರಗತಿ ಗದ್ಯಭಾಗ-02 ಬೆಡಗಿನ ತಾಣ ಜಯಪುರ: ಪದಗಳ ಅರ್ಥ:-

  • ಮರಳು – ಉಸುಕು
  • ದೇಶೀಯ - ದೇಶದೊಳಗಿನ
  • ನವರಂಗ – ದೇವಾಲಯದ ಸಭಾಮಂಟಪ. 
  • ಮುಂಡಾಸು - ಪೇಟಿ,  ತಲೆಯುಡುಗೆ. 
  • ವಾಸ್ತು – ನಿರ್ಮಾಣ ಶಾಸ್ತ್ರ, 
  • ಹಾಲುಗಲ್ಲು - ಅಮೃತಶಿಲೆ. 

9ನೇ ತರಗತಿ ಗದ್ಯಭಾಗ-02 ಬೆಡಗಿನ ತಾಣ ಜಯಪುರ: ಅ) ಕೊಟ್ಟಿರುವ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿ.


1. ರೈಗಳ ಮನೆ ಎಂಥ ಪ್ರದೇಶದಲ್ಲಿತ್ತು ?

ಉತ್ತರ : ರೈಗಳ ಮನೆಯು ಸುತ್ತಲೂ ಉಸುಬು ಹರಡಿದ್ದ ಮರುಭೂಮಿಯ ಪ್ರದೇಶದಲ್ಲಿತ್ತು.


2. ಲೇಖಕರಿಗೆ ಜಯಚುರದ ಮನೆಗಳ ಮೇಲೆ ಮೋಹವೇಕೆ ?

ಉತ್ತರ : ಜಯಪುರದ ಮನೆಗಳು ಒಂದೊಂದು ಮನೆಯೂ ಒಂದೊಂದು ಶೈಲಿಯದೂ ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ. ಆದುದರಿಂದಲೇ ಲೇಖಕರಿಗೆ ಅವುಗಳ ಮೇಲೆ ಮೋಹ.


3. ಜಯಪುರದ ಜನರಿಗೆ ಯಾವ ಯಾವ ಬಣ್ಣಗಳು ಇಷ್ಟ ?

ಉತ್ತರ : ಜಯಪುರದ ಜನರಿಗೆ ಕೆಂಪು, ಕಿತ್ತಳೆ, ಹಳದಿ ಎಂದರೆ ಇಷ್ಟ.


4. ಜಯಪುರದ ಪೂರ್ವದ ರಾಜಧಾನಿ ಯಾವುದು ?

ಉತ್ತರ : ಅಂಬೇರ ಜಯಪುರದ ಪೂರ್ವಕಾಲದ ರಾಜಧಾನಿ.


5. ಲೇಖಕರಿಂದ ಹಂಬಲವೇನು ?

ಉತ್ತರ : ಜಯಪುರದ ಜಾನಪದ ನೃತ್ಯಗಳನ್ನು ನೋಡಬೇಕೆಂಬ ಹಂಬಲ ಲೇಖಕರದ್ದಾಗಿತ್ತು.

9ನೇ ತರಗತಿ ಗದ್ಯಭಾಗ-02 ಬೆಡಗಿನ ತಾಣ ಜಯಪುರ: ಆ) ಕೊಟ್ಟಿರುವ ಪ್ರಶ್ನೆಗಳಿಗೆ ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.


1. ಜಯಪುರದ ಬೀದಿ ಹಾಗೂ ಮನೆಗಳ ಸೌಂದರ್ಯವನ್ನು ವರ್ಣಿಸಿ.

ಉತ್ತರ : ಜಯಪುರದ ಮುಖ್ಯಬೀದಿಗಳು ಲೇಖಕರ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರಿದವು. ನಗರದ ಬೀದಿಗಳು ಒಂದು ಶತಮಾನದ ಹಿಂದೆ ನಿರ್ಮಾಣವಾಗಿದ್ದರೂ ಬಹಳ ಅಗಲವಾದ ಬೀದಿಗಳವು : ನೇರವಾದವುಗಳು ಬಹುದೂರದಿಂದ ಕಾಣಿಸುವ ಅಂಗಡಿ – ಮನೆಗಳ ದೇಶೀ ವಾಸ್ತುರಚನೆ ಚೆನ್ನಾಗಿ ಶೋಭಿಸುತ್ತದೆ.

ಇಲ್ಲಿನ ಒಂದೊಂದು ಮನೆಯೂ ಒಂದೊಂದು ಶೈಲಿಯದೂ ಒಂದೊಂದು ದೇಶದ್ದೂ ಆಗಿ ಕಾಣಿಸುವುದಿಲ್ಲ. ಆದುದರಿಂದಲೇ ಲೇಖಕರಿಗೆ ಅವುಗಳ ಮೇಲೆ ಮೋಹ. ಇಲ್ಲಿನ ಮುಖ್ಯ ಬೀದಿಗಳು ಸಂಧಿಸುವಲ್ಲಿ ಸುಂದರವಾದ ಚೌಕಗಳಿವೆ. ಕೆಲವೊಂದು ಕಡೆಗಳಲ್ಲಿ : ಮಹಾದ್ವಾರಗಳಿವೆ. ಎಂದು ಲೇಖಕರು ಹೇಳಿದ್ದಾರೆ.

2. ಲೇಖಕರ ಮೊದಲ ಅಂಬೇರ ಭೇಟಿಗೂ ಇತ್ತೀಚಿನ ಭೇಟಿಗೂ ಯಾವ ವ್ಯತ್ಯಾಸವಿತ್ತು ?

ಉತ್ತರ : ಜಯಪುರ ಲೇಖಕರ ಪಾಲಿಗೆ ಹೊಸತಾಗಿರಲಿಲ್ಲ. ಹದಿನೈದು ವರ್ಷಗಳ ಹಿಂದೊಮ್ಮೆ ಹೋಗಿದ್ದರು. ಆಗ ಅಂಬೇರ ಬೆಟ್ಟದಲ್ಲಿ ಜನವಸತಿ ಇದ್ದಿರಲಿಲ್ಲ. ಹಲವಾರು ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು.

ಈಗ ಹಾಗಿಲ್ಲ; ನೂರಾರು ಸಿಂಧೀ ಕುಟುಂಬಗಳು ಅಲ್ಲಿ ಮನೆ ಮಾಡಿಕೊಂಡಿ ವಾಸ ಮಾಡುತ್ತಿವೆ. ದೇವಾಲಯದಲ್ಲಿ ಪೂಜೆ ನಡೆಯುತ್ತಿದೆ. ಎಂದು ಮೊದಲ ಭೇಟಿಗೂ ಇತ್ತೀಚಿನ ಭೇಟಿಗೂ ಇರುವ ವ್ಯತ್ಯಾಸವನ್ನು ಲೇಖಕರು ತಿಳಿಸಿದ್ದಾರೆ.


3. ಮೀರಾಬಾಯಿ ದೇವಾಲಯದ ಸೌಂದರ್ಯವನ್ನು ವಿವರಿಸಿ.

ಉತ್ತರ : ಅಂಬೇರ ಬೆಟ್ಟದಲ್ಲಿ ಮೂರು ಅಂತಸ್ತಿನ ಅರಮನೆ ಇದೆ. ಈ ಅರಮನೆಯ ಆವರಣದ ಹಿಂದುಗಡೆ ಇರುವ ತಗ್ಗಿನ ಕಣಿವೆಯ ತಳದಲ್ಲೇ ಕಾಣಿಸುತ್ತದೆ ಮೀರಾಬಾಯಿಯ ದೇವಾಲಯ. ಆಕೆ ಗಿರಿಧರನಾಗರನನ್ನು ಪೂಜಿಸಿದ ಸ್ಥಳವಿದು.

ಕೆಳಗಿಳಿದು ಹೋಗಿ ಗುಡಿಯನ್ನು ನೋಡಿದರೆ ಅದರ ಸೊಬಗು ಚೆನ್ನಾಗಿ ಕಾಣುತ್ತದೆ. ನಕ್ಷತ್ರಾಕೃತಿಯನ್ನು ತುಂಬಿಕೊಂಡ ಗರ್ಭಗೃಹ, ನವರಂಗಗಳಿವೆ.


4. ಲೇಖಕರು ನೋಡಿದ ಜನಪದ ನೃತ್ಯದ ಸೊಬಗನ್ನು ಚಿತ್ರಿಸಿ.

ಉತ್ತರ: ಲೇಖಕರಿಗೆ ಜಯಪುರದ ಜನಪದ ನೃತ್ಯ ನೋಡಬೇಕೆಂಬ ಹಂಬಲ ಇತ್ತು, ಊರಿನ ಜನಸಾಮಾನ್ಯರ ನೃತ್ಯವದು, ಇಬ್ಬರು ಯೌವನಸ್ಥರು ಸ್ತ್ರೀಯರ ಉಡುಗೆ ಉಟ್ಟಿದ್ದರು. ಮಾರವಾಡಿ ಸ್ತ್ರೀಯರಂತೆ ತಲೆಗೆ ಸೆರಗು ಹಾಕಿಕೊಂಡು ಮುಖತೋರಿಸದೆ ಕುಣಿಯತೊಡಗಿದರು.

ಹಿಮ್ಮೇಳಕ್ಕೆ ಡೋಳು ತಮಟೆಗಳಿದ್ದವು. ಮುಂಭಾಗದಲ್ಲಿ ಸ್ತ್ರೀವೇಷದ ನರ್ತಕರು ಲಾಸ್ಯವೆಸಗಿದರು. ಅವರ ಕಾಲಿನ ನಡಿಗೆಯಲ್ಲೂ ಕೈಗಳ ಚಲನೆಯಲ್ಲೂ ಜಾಣ್ಣೆ ಚೆಲುವುಗಳೆರಡೂ ಇದ್ದವು. ಅವರ ಜತೆಗೆ ಮೂರು, ನಾಲ್ಕು ಹುಡುಗರು ನಿತ್ಯದ ಉಡುಗೆಯಲ್ಲಿ ಕುಣಿದಾಡಿದರು, ಆ ನೋಟವನ್ನು ನೋಡುವುದಕ್ಕೆ ಮರವಣಿಗರೂ ಬಂದು ಕಲೆತರು. ಇದೇ ಜಯಪುರದ ಜನಪದ ನೃತ್ಯದ ಸೊಬಗು.

 

9ನೇ ತರಗತಿ ಗದ್ಯಭಾಗ-02 ಬೆಡಗಿನ ತಾಣ ಜಯಪುರ: ಇ) ಕೊಟ್ಟಿರುವ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ.


1. ಜಯಪುರದ ಜನರಿಗೆ ಬಣ್ಣಗಳ ಬಗೆಗೆ ಇರುವ ಮೋಹವನ್ನು ತಿಳಿಸಿ.

ಉತ್ತರ : ಜಯಪುರ ಬಣ್ಣಗಾರರ ತವರೂರು. ಬಣ್ಣ ಹಾಕುವ ಕುಶಲಿಗರು ಈ ಊರಿನಲ್ಲಿ ಬಹಳ ಮಂದಿ ಇದ್ದಾರೆ. ಬಣ್ಣದ ಮೋಹವಿರುವ ಜನರೂ ಬಹಳ ಇದ್ದಾರೆ.

ಗಿಡಮರಗಳಿಲ್ಲದ ಸ್ಥಳದಲ್ಲಿ ವಾಸಿಸುವ ಜನರಿಗೆ, ಕಣ್ಣಿನ ತಣಿವು ಹೇಗೆ ಬರಬೇಕು ? ಆದ್ದರಿಂದಲೇ ಇಲ್ಲಿನ ಜನರು ಅದರಲ್ಲೂ ಹೆಂಗಸರೂ ರಂಗುರಂಗಿನ ಲಂಗ, ಪಾಯಿಜಾಮಾ, ಸೀರೆ, ರವಿಕೆ, ಮೇಲುದೆ ತೊಡುವ ಅಭ್ಯಾಸದವರು. ಅದರಲ್ಲೂ ಕೆಂಪು, ಕಿತ್ತಳೆ, ಹಳದಿ ಎಂದರೆ ಪ್ರಾಣ. ನಿತ್ಯವೂ ಹೋಳಿ ಹುಣ್ಣಿಮೆ ಮಾಡುವವರಂತೆ ಬಣ್ಣದ ಚಲ್ಲಾಟ ಅವರ ಬಟ್ಟೆಗಳಲ್ಲಿ, ಗಂಡಸರೂ ರಂಗುರಾಯರೇ. ಅವರ ಪಂಚೆ, ಅಂಗಿಗಳಲ್ಲಿ ರಂಗು ಕಾಣಿಸದಿದ್ದರೂ ಮುಂಡಾಸಿನ ಮೂವತ್ತು ಮೊಳಗಳಲ್ಲಿ ಮುನ್ನೂರು ಬಣ್ಣಗಳನ್ನು ಮೆರೆಯಿಸುವುದುಂಟು. ಆದ್ದರಿಂದ ಜಯಪುರದ ಜನರಿಗೆ ಬಣ್ಣಗಳ ಬಗೆಗೆ ಬಹಳ ಮೋಹವೆಂದೇ ಹೇಳಬಹುದು


2. ಅಂಬೇರ ಬೆಟ್ಟದ ಮೂರು ಅಂತಸ್ತಿನ ಅರಮನೆಯ ಒಳಾಂಗಣ ಚೆಲುವನ್ನು ತಿಳಿಸಿ.

ಉತ್ತರ : ಅಂಬೇರ ಬೆಟ್ಟದಲ್ಲಿ ಮೂರು ಅಂತಸ್ತಿನ ಅರಮನೆ ಇದೆ. ಈ ಅರಮನೆಯ ಮೊದಲ ಅಂತಸ್ತಿನಲ್ಲಿ ಪುಟ್ಟ ದೇವಾಲಯವಿದೆ. ಈ ಪುಟ್ಟ ಮಂದಿರವು ಚಿತ್ರ ಕೆಲಸಗಳಿಂದ ಕೂಡಿದ ಹಾಲುಗಲ್ಲಿನ ರಚನೆಯಾಗಿದೆ, ಗೊಡೆಗಳೆಲ್ಲವೂ ಹಾಲುಗಲ್ಲಿನವೇ ; ನೆಲವೂ ಅದರದ್ದೇ. ಸ್ತಂಭಗಳೂ ಅವುಗಳದ್ದೇ.

ಗುಡಿ ಚಿಕ್ಕದಾಗಿದ್ದರೂ ಶಾಂತವಾಗಿ ಕಾಣಿಸುವ ಮಂದಿರ, ಗುಡಿಯ ವಿಗ್ರಹ ಮಾತ್ರ ಆಕಾರ ಹಾಗೂ ಅಲಂಕಾರಗಳಿಂದ ಅಷ್ಟೊಂದು ಶೋಭಿಸದು. ಎರಡನೆಯ ಅಂತಸ್ತಿನಲ್ಲಿ ದೊಡ್ಡದೊಂದು ಸಭಾಂಗಣ ಇದೆ ಇದು ವಿಶಾಲವಾದ ಹಾಲುಗಲ್ಲಿನ ರಚನೆ,

ಅದರ ಚಾವಣಿ, ರಜಪುತಾನದ ಶೈಲಿಯ ಕಮಾನು ಮತ್ತು ಕಂಬಗಳು ತುಂಬ ಲಲಿತವಾಗಿದ್ದು, ಪರಸ್ಪರ ಹೊಂದಿಕೊಂಡು, ಈ ರಚನೆಗೆ ಚಲುವನ್ನು ನೀಡಿವೆ. ಮೂರನೆಯ ಅಂತಸ್ತಿನಲ್ಲಿ ರಾಜರ ಅಂತಃಪುರ ಇದೆ.

ಇಲ್ಲಿನ ಕೆಲವು ಭಾಗಗಳಲ್ಲಿ ಚಂದ್ರಕಾಂತ ಶಿಲೆಯ ಸುಂದರ ಮಂಟಪಗಳವ. ಶಿಲೆಯನ್ನು ಕೆತ್ತಿ ಬಣ್ಣದ ಕಲ್ಲುಗಳಿಂದ ಕೊರೆದು ತುಂಬಿಸಿದೆ ಲತಾಮುಷ್ಪಗಳ ಚಿತ್ತಾವಳಿಗಳೂ ಇವೆ.

ಇನ್ನೊಂದೆರಡು ಚಾವಡಿಗಳು ಕನ್ನಡಿಯ ಚೂರುಗಳನ್ನು ಸುಣ್ಣದ ಗಾರೆಯಲ್ಲಿ ಅಂಟಿಸಿ, ಚಿತ್ರವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ ಅಲಂಕರಿಸಿದಂತಹ ಕಂಬ, ಮುಚ್ಚಿಕಗಳುಳ್ಳ ರಚನೆ.

ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ, ಲಕ್ಷೇಪಲಕ್ಷ ಈ ಗಾಜಿನ ತುಣುಕುಗಳು, ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ.

3. ಜಂತ್ರ ಮಂತ್ರದ ವಿಶೇಷತೆಯನ್ನು ಪರಿಚಯ ಮಾಡಿಕೊಡಿ.

ಉತ್ತರ : ‘ ಜಂತ್ರ ಮಂತ್ರ ‘ ಹಳೆಯ ಏಗೋಳವಿಜ್ಞಾನದ ಪರಿಶೀಲನಾಲಯ, 400-500 ರ್F ದಲ್ಲಿ, ಖಗೋಳಶಾಸ್ತ್ರಜ್ಞರು ಗ್ರಹ, ಸೂರ್ಯ ಚಂದ್ರ, ತಾರಾಮಂಡಲಗಳನ್ನು ಅಳೆದು, ಪರಿಶೀಲಿಸಿ ನೋಡುವ ಸಲುವಾಗಿ, ಇಲ್ಲಿ ವಿಚಿತ್ರವಾದ ಸಾಧನಗಳನ್ನು ನೆಟ್ಟಿದ್ದಾರೆ.

ಇಂಥ ಹತ್ತೆಂಟು ವಿಧದ ಸಾಧನಗಳ ವಿಚಿತ್ರ ರಚನೆಗಳಿವೆ. ಗಳಿಗೆ ಅಳೆಯವುದಕ್ಕೆ, ಪ್ರತಿಯೊಂದು ತಿಂಗಳಿನಲ್ಲೂ ಸೂರ್ಯ, ನಕ್ಷತ್ರಗಳ ಗತಿ ಪರಿಶೀಲಿಸುವುದಕ್ಕೆ ಏನೇನೋ ಏರ್ಪಾಟುಗಳಿವೆ. ಪ್ರತಿಯೊಂದು ಸಾಧನದ ಮೇಲೂ ಅವುಗಳ ಉಪಯೋಗ ಮತ್ತು ಕಾಲವನ್ನು ಅಳೆಯುವ ರೀತಿ ಮೊದಲಾದುವನ್ನು ನಮೂದಿಸಿದೆ.

ದೂರದರ್ಶಿಯ ಸಹಾಯವಿಲ್ಲದೆ, ಬರಿಗಣ್ಣಿನಿಂದಲೇ ಖಗೋಳದ ಗ್ರಹಗಳ ಗತಿಯನ್ನು ಅಳೆಯಲು ಮಾಡಿದ ಈ ಸಾಧನಗಳು, ಗಣಿತಕ್ಕೂ ಸೂಕ್ಷ್ಮ ಪರಿಶೀಲನೆಗೂ ಹಿರಿಯರು ಸಲ್ಲಿಸಿದ ಕಾಣಿಕೆ.


9ನೇ ತರಗತಿ ಗದ್ಯಭಾಗ-02 ಬೆಡಗಿನ ತಾಣ ಜಯಪುರ: ಈ) ಸಂದರ್ಭಸಹಿತ ಸ್ವಾರಸ್ಯವನ್ನು ವಿವರಿಸಿ.


1. “ ಅಲ್ಲಿ ಮಧ್ಯಾಹ್ನ ವೇಳ ಸ್ನಾನಕ್ಕೆ ನೀರು ಕಾಯಿಸುವ ಅಗತ್ಯವಿಲ್ಲ.

ಆಯ್ಕೆ : ಈ ವಾಕ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೊರತಂದಿರುವ ಶಿವರಾಮಕಾರಂತರ ಸಾಹಿತ್ಯ ಶ್ರೇಣಿಯ ಸಂಪುಟ ಭಾಗ – 2 ಗ್ರಂಥದ ‘ಅಬುವಿನಿಂದ ಬರಾಮಕ್ಕೆ‘ ಭಾಗದಿಂದ ಆಯ್ದ ಬೆಡಗಿನತಾಣ ಜಯಪುರ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ : ಲೇಖಕರು ಜಯಪುರಕ್ಕೆ ಪ್ರವಾಸ ಹೋಗಿದ್ದರು. ಜಯಪುರದಲ್ಲಿ ಇವರ ಸ್ನೇಹಿತರಾದ ರೈಗಳ ಮನೆಯು ಸುತ್ತಲೂ ಉಸುಬು ಹರಡಿದ್ದ ಮರುಭೂಮಿಯ ಪ್ರದೇಶದಲ್ಲಿತ್ತು. ಇಲ್ಲಿ ಮಧ್ಯಾಹ್ನ ವೇಳೆ ಸ್ನಾನಕ್ಕೆ ನೀರು ಕಾಯಿಸುವ ಅಗತ್ಯವಿಲ್ಲ, ಉಸುಬಿನ ಕಾವಿನಿಂದ ನಲ್ಲಿಯ ನೀರು ಕಾದೇ ಬರುತ್ತಿತ್ತು. ಆ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.

ಸ್ವಾರಸ್ಯ : ರೈಗಳ ಮನೆಯು ಮರುಭೂಮಿಯಲ್ಲಿ ಇದ್ದಿದ್ದರಿಂದ ಸೂರ್ಯನ ಬಿಸಿಲಿಗೆ ಮರಳು ಕಾದು, ಮರಳಿನಲ್ಲಿರುವ ನೀರಿನ ಪೈಪುಗಳು ಕಾದು ಆದರಿಂದ ನೀರು ಬಿಸಿಯಾಗಿ ಬರುವುದು ಸ್ವಾರಸ್ಯಕರವಾಗಿದೆ.

2. “ಗಂಡಸರೂ ರಂಗರಾಯರೇ”

ಆಯ್ಕೆ : ಈ ವಾಕ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೊರತಂದಿರುವ ಶಿವರಾಮಕಾರಂತರ ಸಾಹಿತ್ಯ ಶ್ರೇಣಿಯ ಸಂಪುಟ ಭಾಗ – 2 ಗ್ರಂಥದ ‘ ಅಬುವಿನಿಂದ ಬರಾಮಕ್ಕೆ ಭಾಗದಿಂದ ಆಯ್ದ “ ಬೆಡಗಿನತಾಣ ಜಯಪುರ ‘ ಎಂಬ ಗದ್ಯಭಾಗದಿಂದ. ಆರಿಸಲಾಗಿದೆ.

ಸಂದರ್ಭ : ಜಯಪುರದ ಜನರಿಗೆ ಬಣ್ಣಗಳ ಮೇಲೆ ಅಪಾರವಾದ ಮೋಹ, ಇವರಿಗೆ ಕೆಂಪು, ಕಿತ್ತಳೆ, ಹಳದಿ ಎಂದರೆ ಪ್ರಾಣ. ಇಲ್ಲಿನ ಹೆಣ್ಣು ಮಕ್ಕಳು ಬಣ್ಣಬಣ್ಣದ ಲಂಗ, ಪಾಯಿಜಾಮಾ, ಸೀರೆ, ರವಿಕೆ, ಮೇಲುದೆ ತೊಡುತ್ತಾರೆ. ಗಂಡು ಮಕ್ಕಳು ಸಹ ಬಣ್ಣಬಣ್ಣದ ಅಂಗಿ, ಮಂಚಿ, ಮುಂಡಾಸನ್ನು ಧರಿಸಿ ರಂಗು ರಂಗಾಗಿ ಕಾಣುತ್ತಾರೆ. ಆ ಸಂದರ್ಭದಲ್ಲಿ ಲೇಖಕರು ಈ ಮಾತನ್ನು ಹೇಳಿದ್ದಾರೆ.

ಸ್ವಾರಸ್ಯ : ಜಯಪುರವು ಗಿಡಮರಗಳಿಲ್ಲದ ಊರು. ಇಲ್ಲಿ ವಾಸಿಸುವ ಜನರಿಗೆ, ಕಣ್ಣಿನ ತಣಿವು ಹೇಗೆ ಬರಬೇಕು, ಆದ್ದರಿಂದ ಇಲ್ಲಿನ ಜನರು ಬಟ್ಟೆಗಳಲ್ಲಿ ಬಣ್ಣಗಳನ್ನು ಕಾಣುವುದನ್ನು ಸ್ವಾರಸ್ಯಕರವಾಗಿ ಲೇಖಕರು ಹೇಳಿದ್ದಾರೆ.


3. “ ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು ”

ಆಯ್ಕೆ : ಈ ವಾಕ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೊರತಂದಿರುವ ಶಿವರಾಮಕಾರಂತರ ಸಾಹಿತ್ಯ ಶ್ರೇಣಿಯ ಸಂಪುಟ 2 ಗ್ರಂಥದ ‘ ಅಬುವಿನಿಂದ ಬರಾಮಕ್ಕೆ ‘ ಭಾಗದಿಂದ ಆಯ್ದ ‘ ಬೆಡಗಿನತಾಣ ಜಯಪುರ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ : ಲೇಖಕರು ಹದಿನೈದು ವರ್ಷಗಳ ಹಿಂದೊಮ್ಮೆ ಜಯಪುರಕ್ಕೆ ಹೋಗಿದ್ದರು. ಆಗ ಅಂಬೇರ ಬೆಟ್ಟದಲ್ಲಿ ಜನವಸತಿ ಇದ್ದಿರಲಿಲ್ಲ. ಹಲವಾರು ಪ್ರಾಚೀನ ಗುಡಿಗೋಪುರಗಳು ಗೂಬೆಯ ಮನೆಗಳಾಗಿದ್ದವು. ಇದನ್ನು ನೋಡಿದ ಸಂದರ್ಭದಲ್ಲಿ ಈ ಮಾತನ್ನು ಲೇಖಕರು ಹೇಳಿದ್ದಾರೆ.

ಸ್ವಾರಸ್ಯ : ಜಯಪುರವು ದಿನದಿಂದಕ್ಕೆ ಯಾವ ರೀತಿ ಅಭಿವೃದ್ಧಿಯಾಗಿದೆ. ಈಗ ಜಯಪುರದ ಅಂಬೇರ ಬೆಟ್ಟದಲ್ಲಿ ಗುಡಿಗೋಪುರದಲ್ಲಿ ದೇವರಿಗೆ ಪೂಜೆ ಸಲ್ಲಿಸುತ್ತಿರುವ ಅಂಶ, ಜನರು ಅಲ್ಲಿ ವಾಸಿಸುವ ಅಂಶ ಸ್ವಾರಸ್ಯಕರವಾಗಿದೆ.

4. “ ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತದೆ ”

ಆಯ್ಕೆ : ಈ ವಾಕ್ಯವನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯು ಹೊರತಂದಿರುವ ಶಿವರಾಮಕಾರಂತರ ಸಾಹಿತ್ಯ ಶ್ರೇಣಿಯ ಸಂಪುಟ ಭಾಗ 2 ಗ್ರಂಥದ ‘ ಅಬುವಿನಿಂದ ಬರಾಮಕ್ಕೆ ಭಾಗದಿಂದ ಆಯ್ದ ‘ ಬೆಡಗಿನತಾಣ ಜಯಮರ ‘ ಎಂಬ ಗದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ : ಮೂರನೆಯ ಅಂತಸ್ತಿನಲ್ಲಿ ರಾಜರ ಅಂತಃಮರ ಇದೆ. ಈ ಅರಮನೆಯ ಚಾವಡಿಗಳಿಗೆ ಕನ್ನಡಿಯ ಚೂರುಗಳನ್ನು ಸುಣ್ಣದ ಗಾರೆಯಲ್ಲಿ ಅಂಟಿಸಿ, ಚಿತ್ರವಿಚಿತ್ರ ಪ್ರತಿರೂಪಗಳನ್ನು ನಿರ್ಮಿಸಿ ಅಲಂಕರಿಸಿದಂತಹ ಕಂಬ, ಮುಚ್ಚಿಕೆಗಳುಳ್ಳ ರಚನೆ. ಕತ್ತಲಿನಲ್ಲಿ ದೀವಿಗೆ ಹೊತ್ತಿಸಿದಾಗ, ಲಕೋಪಲಕ್ಷ ಈ ಗಾಜಿನ ತುಣುಕುಗಳು, ಚಾವಡಿಗೆ ನಕ್ಷತ್ರಲೋಕದ ಸೊಬಗನ್ನು ಕೊಡುತ್ತವೆ, ಆ ಸಂದರ್ಭದಲ್ಲಿ ಈ ಮಾತನ್ನು ಲೇಖಕರು ಹೇಳಿದ್ದಾರೆ.

ಸ್ವಾರಸ್ಯ : ರಜಪೂತ ಅರಸರುಗಳು ತಮ್ಮ ಅಂತಃಮರದಲ್ಲಿಯೇ ನಕ್ಷತ್ರಲೋಕವನ್ನು ಸೃಷ್ಟಿಸಿರುವುದು. ಅವರ ರಸಿಕ ಜೀವನದ ದ್ಯೋತಕವಾಗಿರುವುದನ್ನು ಲೇಖಕರು ಸ್ವಾರಸ್ಯಕರವಾಗಿ ವರ್ಣಿಸಿದ್ದಾರೆ.


9ನೇ ತರಗತಿ ಗದ್ಯಭಾಗ-02 ಬೆಡಗಿನ ತಾಣ ಜಯಪುರ: ಉ ) ಬಿಟ್ಟ ಜಾಗಗಳನ್ನು ಸೂಕ್ತ ಪದಗಳಿಂದ ತುಂಬಿ.


1. ಜಯಪುರ ಬಣ್ಣಗಾರರ______.

2. ಚಿತ್ರಕೊರೆದು ಮಾಡಿದ _______ ನೀರ ಕಾಲುವೆಗಳು,

3. ರಾಜರ ಅಂತಃಪುರದ ಕೆಲವು ಭಾಗಗಳಲ್ಲಿ __________ ಸುಂದರ ಮಂಟಪಗಳಿವೆ.

4. ಹಿಮ್ಮೇಳಕ್ಕೆ _________ ತಮಟೆಗಳಿದ್ದವು.

ಸರಿ ಉತ್ತರಗಳು

  • 1. ತವರೂರು,
  • 2. ಹಾಲುಗಲ್ಲಿನ
  • 3. ಚಂದ್ರಕಾಂತ ಶಿಲೆಯ
  • 4. ಡೋಲು
  • 5. ಸತ್ಕಾರಕ್ಕೆ


9ನೇ ತರಗತಿ ಗದ್ಯಭಾಗ-02 ಬೆಡಗಿನ ತಾಣ ಜಯಪುರ: ಊ) ಹೊಂದಿಸಿ ಬರೆಯಿರಿ:


ಅ ಪಟ್ಟಿ                        ಆ ಪಟ್ಟಿ                                   ಸರಿ ಉತ್ತರಗಳು.

1, ಅಂಬೇರ                                  ಸುವರ್ಣ ದೀರ್ಘಸಂದಿ                                     ಪೂರ್ವದ ರಾಜಧಾನಿ

2, ಲಕ್ಷೇಪಲಕ್ಷ                               ತತ್ಸಮ                                                             ಗುಣಸಂಧಿ

3. ಬಣ್ಣಬಣ್ಣ                                  ಪೂರ್ವದ ರಾಜಧಾನಿ                                        ದ್ವಿರುಕ್ತಿ

4 ಜಂತ್ರ ಮಂತ್ರ                           ದ್ವಿರುಕ್ತಿ                                                              ಖಗೋಳ ವೀಕ್ಷಣಾಲಯ

5. ಶೃಂಗಾರ                                ಖಗೋಳ ವೀಕ್ಷಣಾಲಯ                                       ತತ್ಸಮ

ಮಂತ್ರವಾದಿ

ಗುಣಸಂಧಿ

9ನೇ ತರಗತಿ ಗದ್ಯಭಾಗ-02 ಬೆಡಗಿನ ತಾಣ ಜಯಪುರ: ಭಾಷಾ ಚಟುವಟಿಕೆ


ಅ. ಕೊಟ್ಟಿರುವ ಪ್ರಶ್ನೆಗಳಿಗೆ ಉತ್ತರಿಸಿ,


1. ಸಂಸ್ಕೃತ ಸಂಧಿ ಎಂದರೇನು? ಅದರ ವಿಧಗಳಾವುವು?

ಉತ್ತರ : ಸಂಸ್ಕೃತ ಪದಗಳೇ ಸೇರಿ ಸಂಧಿಯಾದರೆ ಅವುಗಳನ್ನು ಸಂಸ್ಕೃತಸಂಧಿ ಎಂದು ಕರೆಯಲಾಗುತ್ತದೆ. ಎರಡು ಸ್ವರಗಳ ನಡುವೆ ಸಂಧಿಯಾದರೆ ಅದು ಸ್ವರಸಂಧಿ, ಸ್ವರಕ್ಕೆ ವ್ಯಂಜನ ಆಥವಾ ವ್ಯಂಜನಕ್ಕೆ ವ್ಯಂಜನ ಸೇರಿ ಸಂಧಿಯಾದರೆ ಅದು ವ್ಯಂಜನಸಂಧಿ.


2. ಸವರ್ಣದೀರ್ಘಸಂಧಿ ಎಂದರೇನು ?

ಉತ್ತರ : ಸವರ್ಣಸ್ವರಗಳು ಒಂದರ ಮುಂದೆ ಒಂದು ಸೇರಿ ಸಂಧಿಯಾದಾಗ ಅವೆರಡರ ಸ್ಥಾನದಲ್ಲಿ ಅದೇ ಜಾತಿಯ ದೀರ್ಘಸ್ವರ ಆದೇಶವಾಗಿ ಬಂದರೆ ಅದನ್ನು ಸವರ್ಣ ದೀರ್ಘಸಂಧಿ ಎಂದು ಕರೆಯುವರು.

💥💥💥💥

3. ಗುಣಸಂಧಿ ಎಂದರೇನು ? ಉದಾಹರಣೆ ಕೊಡಿ.

ಉತ್ತರ : ಆ ಆ ಕಾರಗಳಿಗೆ ಆ ಈ ಕಾರಗಳು ಪರವಾದರೆ ಅವೆರಡರ ಸ್ಥಾನದಲ್ಲಿ ‘ ಐ ‘ ಕಾರವೂ ಈ ಊ ಕಾರಗಳು ಪರವಾದರೆ ‘ ಓ ‘ ಕಾರವೂ ‘ ಇ ‘ ಕಾರ ಪರವಾದರ ‘ ಆರ್ ‘ ಕಾರವೂ ಆದೇಶವಾಗಿ ಬಂದರೆ ಅದು ಗುಣಸಂಧಿ,


4. ಸಮಾಸ ಎಂದರೇನು ? ಅದರ ವಿಧಗಳಾವುವು ?

ಉತ್ತರ : ಎರಡು ಅಥವಾ ಅನೇಕ ಪದಗಳು ಅರ್ಥಕ್ಕನುಸಾರವಾಗಿ ಸೇರಿ, ಮಧ್ಯದಲ್ಲಿರುವ ವಿಭಕ್ತಿಪ್ರತ್ಯಯವನ್ನು ಲೋಪ ಮಾಡಿಕೊಂಡು ಒಂದು ಪದವಾಗುವುದಕ್ಕೆ ಸಮಾಸ ಎಂದು ಕರೆಯುವರು. ಇದರಲ್ಲಿ ತತ್ಪುರುಷ, ಕರ್ಮಧಾರಯ, ದ್ವಿಗು, ಅಂತಿ, ದ್ವಂದ್ವ, ಬಹುವ್ರಹಿ, ಕ್ರಿಯಾ, ಗಮಕ ಸಮಾಸ ಎಂಬ ವಿಧಗಳಿವೆ.


5. ಅಂಶಿ ಸಮಾಸ ಎಂದರೇನು ? ಎರಡು ಉದಾಹರಣೆಗಳನ್ನು ಬರೆಯಿರಿ.

ಉತ್ತರ : ಪೂರ್ವೋತ್ತರ ಪದಗಳು ಆಂಶಾಂತಿ ಭಾವ ಸಂಬಂಧದಿಂದ ಸೇರಿ ಸಮಾಸವಾಗುವಾಗ ಪೂರ್ವಪದದ ಅರ್ಥವು ಪ್ರಧಾನವಾಗಿದ್ದರೆ ಅದು ಅಂಶಿಸಮಾಸ

ಉದಾ :

ತಲೆಯ+ಹಿಂದು=ಹಿಂದಲೆ

ಮನೆಯ+ನಡು =ನಡುಮನೆ

ಹುಬ್ಬಿನ+ಕೊನೆ =ಕೊನೆಹುಬ್ಬು

ನಾಲಿಗೆಯ+ತುದಿ=ತುದಿನಾಲಗೆ

6. ದ್ವಂದ್ವ ಸಮಾಸ ಎಂದರೇನು ? ಎರಡು ಉದಾಹರಣೆಗಳನ್ನು ಬರೆಯಿರಿ.

ಉತ್ತರ : ಎರಡು ಅಥವಾ ಅನೇಕ ನಾಮಪದಗಳು ಸಹಯೋಗ ತೋರುವಂತೆ ಸೇರಿ ಎಲ್ಲಾ ಪದಗಳ ಅರ್ಥವೂ ಪ್ರಧಾನವಾಗಿ ಇರುವ ಸಮಾಸವೇ ದ್ವಂದ್ವ ಸಮಾಸ,

ಉದಾ :

ರಾಮನೂ + ಲಕ್ಷ್ಮಣನೂ = ರಾಮಲಕ್ಷ್ಮಣರು

ಕೆರೆಯೂ + ಕಟ್ಟೆಯೂ + ಬಾವಿಯ = ಕೆಲೆಕಟ್ಟೆಬಾವಿಗಳು,

ಆನೆಯೂ +ಕುದುರೆಯೂ + ಒಂಟೆಯ = ಆನೆಕುದುರೇಒಂಟೆಗಳು.

ಗಿಡವೂ+ಮರವೂ + ಬಳ್ಳಿಯೂ = ಗಿಡಮರಬಳ್ಳಿಗಳು.

ಹೊಲವೂ + ಮನೆಯ = ಹೊಲಮನಗಳು.

ಮಠವೂ +  ಮನೆಯೂ =ಮನೆಮಠಗಳು.

ಗುಡುಗು+ಸಿಡಿಲು+ ಮಿಂಚೂ = ಗುಡುಗುಸಿಡಿಲುಮಿಂಚುಗಳು,

ಸೂರ್ಯನೂ+ ಚಂದ್ರನೂ+ ನಕ್ಷತ್ರವೂ = ಸೂರ್ಯಚಂದ್ರನಕ್ಷತ್ರಗಳು,

ಕುರಿಯೂ +ತುರಗವೂ+ ರಥವೂ =. ಕರಿತುರಗರಥಗಳು.

ಗಿರಿಯೂ + ದುರ್ಗ ವೂ + ವನವೂ = ಗಿರಿವನದುರ್ಗಗಳು.


ಆ. ಕೊಟ್ಟಿರುವ ಪದಗಳಲ್ಲಿ ಅನುಸ್ವಾರ – ವಿಸರ್ಗ ಸಹಿತ ಅಕ್ಷರಗಳನ್ನು ಗುರುತಿಸಿ ಬರೆಯಿರಿ,

ಸ್ವತಃ   ( ತಃ )                       ಸುಂದರ ( ಸುಂ ). ರಂಗುರಂಗಿನ ( ರಂ, ರಂ )

ಕೆಂಪು( ಕೆಂ )                         ದುಃಖ ( ದುಃ ) ಹಿಂದೊಮ್ಮೆ ( ಹಿಂ)

ಗಂಡಸರು (ಗಂ)                    ಆಂತಃಕರಣ( ಅಂ,ತಃ, ) ಪಂಚೆ ( ಪಂ )

ಅಂಗಿ ( ಅಂ)                         ಮುಂಡಾಸು ( ಮುಂ ) ಆಂಬೇರ ( ಅಂ )

ಸಭಾಂಗಣ ( ಭಾಂ )               ಅಂತಃಪುರ ( ಅಂ, ತಃ )ಪುನಃ  (ನಃ)

ಜಂತ್ರಮಂತ್ರ( ಜಂ,ಮಂ)        ಅಂತಸ್ತು ಅಂ )

ಇ. ಕೊಟ್ಟಿರುವ ಪದಗಳಲ್ಲಿ ಅನುನಾಸಿಕ ಅಕ್ಷರಗಳನ್ನು ಗುರುತಿಸಿ ಬರೆಯಿರಿ


ನಗರ ( ನ )    -     ಮಧ್ಯ (ಮ)      -        ಪರಿಣಾಮ (ಣಾ)  -  ಬಣ್ಣ (ಣ್ಣ)

ನಿತ್ಯ ( ನಿ )     -      ಜನ ( ನ )       -       ಮನೆ (ಮ,ನೆ)   -    ಕಣಿವೆ (ಣಿ)

ಮಂದಿರ (ಮ)  -   ವಿಜ್ಞಾನ ( ಜ್ಞಾ)


ಈ. ಕೊಟ್ಟಿರುವ ವಿಷಯಗಳನ್ನು ಕುರಿತು ಒಂದು ಪುಟಕ್ಕೆ ಮೀರದಂತೆ ಪ್ರಬಂಧ ಬರೆಯಿರಿ.

 

 1. ಜನಸಂಖ್ಯೆ

ಪೀಠಿಕೆ:

ಇಂದು ವಿಶ್ವದಲ್ಲಿ ತಲೆದೋರಿರುವ ಅನೇಕ ಜಟಿಲ ಸಮಸ್ಯೆಗಳಲ್ಲಿ ಮಿತಿಮೀರಿ ಬೆಳೆಯುತ್ತಿರುವ ಜನಸಂಖ್ಯೆಯೂ ಒಂದು ಪ್ರಮುಖ ಸಮಸ್ಯೆಯಾಗಿದೆ. ಒಂದು ದೇಶದ ಮಿತಿಮೀರಿದ ಜನಸಂಖ್ಯಾ ಬೆಳೆವಣಿಗೆಯನ್ನು ಜನಸಂಖ್ಯಾ ಸ್ಫೋಟ ಎನ್ನುವರು. ಜನಸಂಖ್ಯೆಯು ಜನರ ಬದುಕಿನ ಮೇಲೆ ದುಷ್ಪರಿಣಾಮವನ್ನು ಬೀರುತ್ತದೆ. ದೇಶದ ಪ್ರಗತಿಗೆ ಮಾರಕವಾಗುತ್ತದೆ. ಭಾರತ ದೇಶದಲ್ಲಂತೂ ಜನಸಂಖ್ಯೆ ಮಿತಿಮೀರಿ ಬೆಳೆದು ದೇಶದ ಅಭಿವೃದ್ಧಿಯು ಕುಂಠಿತವಾಗಿದೆ.

ವಿಷಯ ನಿರೂಪಣೆ:–

ಜನಸಂಖ್ಯಾ ಬೆಳವಣಿಗೆಗೆ ಕಾರಣವೇನೆಂದರೆ ಹವಾಮಾನ, ಭೌಗೋಳಿಕ ಪರಿಸರ, ಅಜ್ಞಾನ, ಬಡತನ ಅನಕ್ಷರತೆ ವೈದ್ಯಕೀಯ ಕ್ಷೇತ್ರದ ಪ್ರಗತಿಯಿಂದ ಜನನದಲ್ಲಿ ಏರಿಕೆ – ಮರಣದಲ್ಲಿ ಇಳಿಕೆ ಅವಿಭಕ್ತ ಕುಟುಂಬ ಪದ್ಧತಿ, ಬಾಲ್ಯವಿವಾಹ, ವಲಸೆ, ಗಂಡು ಮಗುವಿನ ವ್ಯಾಮೋಹ, ಮೂಢನಂಬಿಕೆ, ಕುಟುಂಬ ಯೋಜನೆಯ ವಿಫಲತೆ ಇತ್ಯಾದಿ. ಮಿತಿಮೀರಿದ ಜನಸಂಖ್ಯಾ ಬೆಳೆವಣಿಗೆಯಿಂದ ದೇಶದಲ್ಲಿ ಅನಾರೋಗ್ಯ ಸಮಸ್ಯೆ, ನಿರುದ್ಯೋಗ ಸಮಸ್ಯೆ, ಆಹಾರ ಸಮಸ್ಯೆ, ವಸತಿ ಸಮಸ್ಯೆ, ಶೈಕ್ಷಣಿಕ ಸಮಸ್ಯೆ ಉಂಟಾಗುತ್ತದೆ, ಈ ಸಮಸ್ಯೆಯನ್ನು ನಾವು ತಡೆಗಟ್ಟಬೇಕು ಇಲ್ಲದೇ ಹೋದರೆ ದೇಶದ ಪ್ರಗತಿಗೆ ಮಾರಕವಾಗಿ ಪರಿಣಮಿಸುತ್ತದೆ.

ಮನುಷ್ಯನಲ್ಲಿ ಚಿಕ್ಕ ಸಂಸಾರ ಚೊಕ್ಕ ಸಂಸಾರ ಅನ್ನೋ ಕಲ್ಪನೆ ಬರಬೇಕಿದೆ ಮಾನವ ಸಂಪತ್ತು ದೇಶದ ಆಸ್ತಿ ಆದರೆ ಇದೆ ಮಾನವ ಸಂಪತ್ತು ರಾಷ್ಟ್ರದ ಅಭಿವೃದ್ಧಿಗೆ ಅಡ್ಡಿಪಡಿಸುತ್ತಿದೆ.

ಉಪಸಂಹಾರ:–

ಭಾರತ ದೇಶದ ಬೆಳವಣಿಗೆಗೆ ಮಾರಕವಾದ ಈ ಜನಸಂಖ್ಯೆಯು ದಿನದಿಂದ ದಿನಕ್ಕೆ ಬೆಳೆಯುವ ಪರಿ ನೋಡಿದರೆ ಇದು ಎಲ್ಲಿಗೆ ಹೋಗಿ ನಿಲ್ಲುತ್ತದೆ. ಎಂಬುದೆ ಯಕ್ಷ ಪ್ರಶ್ನೆ, ಇರುವ ಮಾನವ ಸಂಪನ್ಮೂಲಕ್ಕೆ ಕೆಲಸ ಕೊಟ್ಟರೆ ಅಷ್ಟು ಸಮಸ್ಯೆಯಾಗುವುದಿಲ್ಲ. ಪ್ರತಿಯೊಬ್ಬ ನಾಗರಿಕನು ಶಿಕ್ಷಣವಂತನಾದರೆ ಈ ಜನಸಂಖ್ಯಾ ಸಮಸ್ಯೆಗೆ ಒಂದು ಸೂಕ್ತ ಪರಿಹಾರ ದೊರಕಬಹುದು ಎಂಬುದೆ ನನ್ನ ಅಭಿಪ್ರಾಯ.

 

2. ನಿರುದ್ಯೋಗ

ಪೀಠಿಕೆ:–

ನಿರುದ್ಯೋಗ ಆಧುನಿಕ ಸಮಾಜಕ್ಕಂಟಿದ ಶಾಪವಾಗಿದೆ. ನಿರುದ್ಯೋಗದಿಂದ ಹಸಿವು, ಬಡತನ ದರಿದ್ಯ ಅನಾಚಾರಗಳು, ಅಪರಾಧ, ಶೋಷಣೆ ಸುಲಿಗೆಗಳಂತಹ ಕೃತ್ಯಗಳು ಜನ್ಮತಾಳುತ್ತವೆ. ಮನಷ್ಯನು ತನ್ನ ಜವಬ್ದಾರಿಗಳನ್ನು ನಿಭಾಯಿಸಲಾಗದೆ ಅವಮಾನಿತನಾಗುತ್ತಾನೆ, ಅಸಹಾಯಕ ಸ್ಥಿತಿ ಅವನನ್ನು ಕಾಡುತ್ತದೆ. ದಿನದಿಂದ ದಿನಕ್ಕೆ ಅವನ ಬದುಕು ನರಕವಾಗಿ ಹೋಗುತ್ತದೆ. ಈ ಸಮಸ್ಯೆ ಇಂದು ನಿನ್ನೆಯದಲ್ಲ. ತಲತಲಾಂತರದಿಂದ ಸಮಾಜಕ್ಕೆ ಕಂಟಕವಾಗಿದೆ. ಮುಂದಿನ ಎಲ್ಲಾ ಸಮಾಜಗಳು, ಅಭಿವೃದ್ಧಿ ಹೊದುತ್ತಿರುವ ರಾಷ್ಟಗಳು ಎದುರಿಸುತ್ತಿರುವ ಭೀಕರ ಸಮಸ್ಯೆಯಾಗಿದೆ.

ವಿಷಯ ನಿರೂಪಣೆ:–

ಮನುಷ್ಯನಿಗೆ ಕೆಲಸ ಮಾಡಲು ಶಕ್ತಿ ಸಾಮರ್ಥ್ಯಗಳಿದ್ದು ಮತ್ತು ಇಚ್ಚಾ ಶಕ್ತಿಗಳಿದ್ದು, ಕೆಲಸ ಮಾಡಲು ಯಾವುದೇ ಅವಕಾಶ ಸಿಗದಿರುವ ಸ್ಥಿತಿಗೆ ನಾವು ನಿರುದ್ಯೋಗ ಎನ್ನಬಹುದು. ದಿನವಿಡೀ ದುಡಿದರೂ ಹೊಟ್ಟೆ ಬಟ್ಟೆಗೆ ಸಾಲದೆ ರಸ್ತೆ, ಮೋರಿ, ಪೈಪುಗಳ ಸಂದುಗೊಂದುಗಳಲ್ಲಿ, ಕೊಳೆಗೇರಿಗಳಲ್ಲಿ ಜೀವನ ತಳ್ಳುವ ಜನರು ಒಂದು ಕಡೆ, ಪದವಿ ಡಬ್ಬಲ್ ಬಾಗ್ರಿಗಳನ್ನ ಪಡೆದು, ಕಸಲಕ್ಕಾಗಿ ಬೀದಿ  ಅಲೆಯುವ ಯುವ ಶಕ್ತಿ ಒಂದು ಕಡೆ, ಇವರಿಗೆ ಕೆಲಸ ಮಾಡುವ ಸಾಮರ್ಥ್ಯ, ಇಚ್ಚೆ, ನಿರಂತರ ಪ್ರಯತ್ನಗಳಿದ್ದರು ಸಹ ಕೆಲಸ ಸಿಗುವುದಿಲ್ಲ,

ದೇಶದಲ್ಲಿ ಶಕ್ತಿ ಸಾಮರ್ಥ್ಯ ಮತ್ತು ಅರ್ಹತೆಗೆ ತಕ್ಕಂತೆ ಬೇಗನೆ ಕೆಲಸ ಸಿಗುವ ವಾತಾವರಣ ನಿರ್ಮಾವಾಗಬೇಕು, ಯುವ ಜನತೆಗೆ ವಿಧ್ಯಾಭ್ಯಾಸ ಮುಗಿದ ತಕ್ಷಣವೇ ಕೆಲಸ ಸಿಗುತ್ತದೆ ಎಂಬ ಭರವಸೆ ಮೂಡಿಸಬೇಕು. ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಬೇಕು ಕೆಲಸಕ್ಕೆ ಸರಿಸಮಾನವಾದ ವೇತನ ಸಿಗುವಂತಾಗಬೇಕು.

ಇಂತಹ ಸಮಾಜವನ್ನು ನಿರುದ್ಯೋಗ ರಹಿತ ಸಮಾಜವೆನ್ನಬಹುದು. ನಿರುದ್ಯೋಗಿಯ ಮನಸು ದೆವ್ವಗಳು ವಾಸಿಸುವ ಸ್ಮಶಾನವಾಗಿರುತ್ತದೆ. ಇಂತಹ ಮನಸ್ಥಿತಿಯಿಂದ ಸಮಾಜ ಬಾಹಿರ ಚಟುವಟಿಕೆಯು ಜರುಗುವುದೇ ಹೆಚ್ಚು ದೇಶದ್ರೋಹಿ ಕೆಲಸ, ಭಯೋತ್ಪದನಾ ಕೃತ್ಯಗಳು, ಕೊಲೆ ಸುಲಿಗೆ ಅಪರಾಧಗಳಂತಹ ಅಕ್ರಮ ಚಟುವಟಿಕೆಗಳಿಂದ ಸಮಾಜ ತಲೆತಗ್ಗಿಸಬೇಕಾಗುತ್ತದೆ.

ಇದು ವ್ಯಕ್ತಿ ಕುಟುಂಬ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿರುದ್ಯೋಗದಿಂದ ಮನುಷ್ಯನು ಅವಮಾನ, ನೋವು, ನಿಂದನೆ, ಆತ್ಮನಿಂದನೆ ಮಾನಸಿಕ ಹಿಂಸೆಗಳನ್ನು ಅನುಭವಿಸುತ್ತಾನೆ. ದೇಶದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸುತ್ತದೆ. ಈ ನಿರುದ್ಯೋಗಕ್ಕೆ ಕಾರಣಗಳನ್ನು ಗುರುತಿಸಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕು,

ಬೀದಿ ಅಲೆಯುವ ಯುವ ಶಕ್ತಿ ಒಂದು ಕಡೆ, ಇವರಿಗೆ ಕೆಲಸ ಮಾಡುವ ಸಾಮರ್ಥ್ಯ, ಇಚ್ಛೆ, ನಿರಂತರ ಪ್ರಯತ್ನಗಳಿದ್ದರು ಸಹ ಕೆಲಸ ಸಿಗುವುದಿಲ್ಲ. ದೇಶದಲ್ಲಿ ಶಕ್ತಿ ಸಾಮರ್ಥ್ಯ ಮತ್ತು ಅರ್ಹತೆಗೆ ತಕ್ಕಂತೆ ಬೇಗನೆ ಕೆಲಸ ಸಿಗುವ ವಾತಾವರಣ ನಿರ್ಮಾವಾಗಬೇಕು, ಯುವ ಜನತೆಗೆ ವಿಧ್ಯಾಭ್ಯಾಸ ಮುಗಿದ ತಕ್ಷಣವೇ ಕೆಲಸ ಸಿಗುತ್ತದೆ ಎಂಬ ಭರವಸೆ ಮೂಡಿಸಬೇಕು. ಹೆಚ್ಚು ಹೆಚ್ಚು ಉದ್ಯೋಗಾವಕಾಶಗಳನ್ನು ಸೃಷ್ಟಿ ಮಾಡಬೇಕು ಕೆಲಸಕ್ಕೆ ಸರಿಸಮಾನವಾದ ವೇತನ ಸಿಗುವಂತಾಗಬೇಕು.

ಇಂತಹ ಸಮಾಜವನ್ನು ನಿರುದ್ಯೋಗ ರಹಿತ ಸಮಾಜವೆನ್ನಬಹುದು. ನಿರುದ್ಯೋಗಿಯ ಮನಸು ದೆವ್ವಗಳು ವಾಸಿಸುವ ಸ್ಮಶಾನವಾಗಿರುತ್ತದೆ. ಇಂತಹ ಮನಸ್ಥಿತಿಯಿಂದ ಸಮಾಜ ಬಾಹಿರ ಚಟುವಟಿಕೆಳು ಜರುಗುವುದೇ ಹೆಚ್ಚು ದೇಶದ್ರೋಹಿ ಕೆಲಸ, ಭಯೋತ್ಪದನಾ ಕೃತ್ಯಗಳು, ಕೊಲೆ ಸುಲಿಗೆ ಅಪರಾಧಗಳಂತಹ ಅಕ್ರಮ ಚಟುವಟಿಕೆಗಳಿಂದ ಸಮಾಜ ತಲೆತಗ್ಗಿಸಬೇಕಾಗುತ್ತದೆ.

ಇದು ವ್ಯಕ್ತಿ ಕುಟುಂಬ ಮತ್ತು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ನಿರುದ್ಯೋಗದಿಂದ ಮನುಷ್ಯನು ಅವಮಾನನೋವು, ನಿಂದನೆ, ಆತ್ಮನಿಂದನೆ ಮಾನಸಿಕ ಹಿಂಸೆಗಳನ್ನು ಅನುಭವಿಸುತ್ತಾನೆ. ದೇಶದ ಅಭಿವೃದ್ಧಿಗೆ ಮಾರಕವಾಗಿ ಪರಿಣಮಿಸುತ್ತದೆ, ಈ ನಿರುದ್ಯೋಗಕ್ಕೆ ಕಾರಣಗಳನ್ನು ಗುರುತಿಸಿ ಸೂಕ್ತ ಪರಿಹಾರಗಳನ್ನು ಕಂಡುಕೊಳ್ಳಬೇಕು,

ಉಪಸಂಹಾರ:–

ಮನುಷ್ಯನು ಯಾವುದೇ ಕೆಲಸ ಮಾಡಿದರು ಅವಮಾನವಿಲ್ಲ.ತನ್ನ ಸಾಮರ್ಥ್ಯ ಅರ್ಹತೆಗೆ ತಕ್ಕ ಉದ್ಯೋಗ ಸಿಗಬೇಕು ಎಂದು ಕಾಯುತ್ತಾ ಕುಳಿತುಕೊಳ್ಳಬಾರದು, ಸಿಕ್ಕ ಕೆಲಸದಲ್ಲೇ ತೃಪ್ತಿ ಪಡಬೇಕು.ನಿರಂತರ ಹೆಚ್ಚುತ್ತಿರುವ ಜನಸಂಖ್ಯೆ, ದೋಷಪೂರಿತ ಶಿಕ್ಷಣ ವ್ಯವಸ್ಥೆ, ತಾಂತ್ರಿಕ ಕೊರತೆ, ಆವಶ್ಯಕತೆಗಿಂತ ಕಡಿಮೆ ಉದ್ಯೋಗ ಸೃಷ್ಟಿ ಮುಂತಾದ ಕಾರಣಗಳು ನಿರುದ್ಯೋಗ ಸಮಸ್ಯೆಗೆ ಕಾರಣವಾಗುತ್ತವೆ

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads