Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Saturday 15 April 2023

9ನೇ ತರಗತಿ ಗದ್ಯಭಾಗ-01 ರಾಮರಾಜ್ಯ ಕನ್ನಡ ನೋಟ್ಸ್‌ 9th Standard Gadhyabhaga-01 Ramarajya Kannada Notes

9ನೇ ತರಗತಿ ಗದ್ಯಭಾಗ-01 ರಾಮರಾಜ್ಯ ಕನ್ನಡ ನೋಟ್ಸ್‌

9th Standard Gadhyabhaga-01 Ramarajya Kannada Notes 

9ನೇ ತರಗತಿ ಗದ್ಯಭಾಗ-01 ರಾಮರಾಜ್ಯ ಕನ್ನಡ ನೋಟ್ಸ್‌ 9th Standard Gadhyabhaga-01 Ramarajya Kannada Notes, Karnataka 9th standard Kannada Notes,

9ನೇ ತರಗತಿ ಗದ್ಯಭಾಗ-01 ರಾಮರಾಜ್ಯ: ಕೃತಿಕಾರರ ಪರಿಚಯ: ಡಾ . ಎನ್ . ರಂಗನಾಥ ಶರ್ಮಾ:

ಮಹಾಮಹೋಪಾಧ್ಯಾಯ ವಿದ್ವಾನ್ ಡಾ . ಎನ್ . ರಂಗನಾಥ ಶರ್ಮಾ ಕನ್ನಡ ಮತ್ತು ಸಂಸ್ಕೃತ ಭಾಷೆಗಳಲ್ಲಿ ಪ್ರಕಾಂಡ ವಿದ್ವತ್ತೆ ಇದ್ದ ಓರ್ವ ಹಿರಿಯ ಸಾಹಿತಿ, ಇವರು ಶಿವಮೊಗ್ಗ ಜಿಲ್ಲೆಯ ಸೊರಬ ತಾಲೂಕಿನ ನಡಹಳ್ಳಿ ಗ್ರಾಮದಲ್ಲಿ ೧೯೧೬ ರ ಜನವರಿ ೭ ರಂದು ಜನಿಸಿದರು. ತಂದೆ ಹಾಗೂ ಚಿಕ್ಕಪ್ಪ ಇಬ್ಬರೂ ಸಂಸ್ಕೃತ ವಿದ್ವಾಂಸರಾಗಿದ್ದುದರಿಂದ ಆ ವಿದ್ವತ್ತೆಯ ಪರಿಸರ ಶರ್ಮಾರ ಮೇಲೆ ಅಗಾಧ ಪ್ರಭಾವವನ್ನು ಬೀರಿತು. ಕೆಳದಿ ಸಂಸ್ಕೃತ ಪಾಠಶಾಲೆಯಲ್ಲಿ ಕಾವ್ಯಪರೀಕ್ಷೆಯಲ್ಲಿ ಉತ್ತೀರ್ಣರಾಗಿ ನಂತರ ಬೆಂಗಳೂರಿನ ಜಯಚಾಮರಾಜೇಂದ್ರ ಕಾಲೇಜಿನಲ್ಲಿ ಸಂಸ್ಕೃತ ವ್ಯಾಕರಣ, ಅಲಂಕಾರಶಾಸ್ತ್ರಗಳಲ್ಲಿ ಅಧ್ಯಯನ ನಡೆಸಿ ಪಾಂಡಿತ್ಯ ಗಳಿಸಿದರು. ಬೇಲೂರಿನ ಸಂಸ್ಕೃತ ಪಾಠಶಾಲೆಯಲ್ಲಿ ಅಧ್ಯಾಪಕರಾಗಿ, ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕೃತ ಮಹಾವಿದ್ಯಾಲಯದಲ್ಲಿ ವ್ಯಾಕರಣ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರು. ‌

ರಂಗನಾಥ ಶರ್ಮಾರದು ಅಪರೂಪದ ಭಾಷಾಪಾಂಡಿತ್ಯ, ಕನ್ನಡ – ಸಂಸ್ಕೃತಗಳೆರಡರಲ್ಲೂ ಸರಿಸಮವೆನಿಸುವಂಥ ವಿದ್ವತ್ತು, ಏಕಚಕ್ರಂ, ಬಾಹುಬಲಿ ವಿಜಯಂ, ಗುರುಪಾರಮಿತ್ರಚರಿತಂ, ಗೊಮ್ಮಟೇಶ ಪಂಚಕಂ ಮೊದಲಾದ ಕೃತಿಗಳನ್ನು ಅವರು ಸಂಸ್ಕೃತದಲ್ಲಿ ಬರೆದು ಪ್ರಕಟಿಸಿದ್ದಾರೆ. ಭಾಷಾಂತರ ಪಥ, ಲೌಕಿಕ ನ್ಯಾಯಗಳು, ಸೂಕ್ತಿವ್ಯಾಪ್ತಿ, ಉಪನಿಷತ್ತಿನ ಕಥೆಗಳು, ವಾಲ್ಮೀಕಿ ಮುನಿಗಳ ಹಾಸ್ಯ ಪ್ರವೃತ್ತಿ ಮೊದಲಾದ ಕೃತಿಗಳನ್ನು ಕನ್ನಡದಲ್ಲಿ ಬರೆದಿದ್ದಾರೆ. ಸಂಸ್ಕೃತದ ಹತ್ತು ಹಲವು ಕೃತಿಗಳನ್ನು ಶರ್ಮಾರು ಮೂಲದ ಸೊಗಸಿಗೆ ಕಿಂಚಿದೂನವೂ ಇಲ್ಲದಂತೆ ಕನ್ನಡಕ್ಕೆ ಅನುವಾದಿಸಿದ್ದಾರೆ. ವಾಲ್ಮೀಕಿ ರಾಮಾಯಣ, ಅಮರಕೋಶ, ವಿದುರನೀತಿ, ಶ್ರೀಮದ್ಭಾಗವತದ ದಶಮಸ್ಕಂದ, ವಾಕ್ಯಪದೀಯದ ಬ್ರಹ್ಮಕಾಂಡ, ವಿದ್ಯಾರಣ್ಯರ ಪಂಚದಶಿ ಮೊದಲಾದವು ಅವರ ಅನುವಾದಿತ ಕೃತಿಗಳು. ಡಿವಿಜಿಯವರ ಮುನ್ನುಡಿಯೊಂದಿಗೆ ಪ್ರಕಟಗೊಂಡ ರಂಗನಾಥ ಶರ್ಮಾರ ವಾಲ್ಮೀಕಿ ರಾಮಾಯಣ ಎಂಬ, ಮೂಲ ರಾಮಾಯಣದ ಅನುವಾದ ಕೃತಿ ಅತ್ಯಂತ ಪ್ರಸಿದ್ಧವಾದುದು. ಡಿವಿಜಿಯವರ ನಿಧನಾನಂತರ, ಮಂಕುತಿಮ್ಮನ ಕಗ್ಗದ ಮುಂದುವರಿದ ಭಾಗವಾಗಿ “ಮರುಳ ಮುನಿಯನ ಕಗ್ಗ” ವನ್ನು ಸಂಪಾದಿಸಿ ಪ್ರಕಟಿಸಿದುದು ಶರ್ಮಾರ ಸಂಪಾದನ ಸಾಮರ್ಥ್ಯಕ್ಕೊಂದು ಸಾಕ್ಷಿಯಾಗಿದೆ.


ಇವರಿಗೆ ಸಂಸ್ಕೃತ ಅಧ್ಯಾಪನಕ್ಕಾಗಿ ರಾಷ್ಟ್ರಪ್ರಶಸ್ತಿ, ರಾಜ್ಯೋತ್ಸವ ಪ್ರಶಸ್ತಿ, ತಿರುಪತಿಯ ಸಂಸ್ಕೃತ ವಿಶ್ವವಿದ್ಯಾಲಯದ “ಮಹಾಮಹೋಪಾಧ್ಯಾಯ” ಎಂಬ ಗೌರವ, ಬೆಂಗಳೂರಿನ ಕರ್ನಾಟಕ ಸಂಸ್ಕೃತ ವಿಶ್ವವಿದ್ಯಾಲಯದ ಗೌರವ ಡಾಕ್ಟರೇಟ್, ಆದಿಚುಂಚನಗಿರಿ ಮಹಾಸಂಸ್ಥಾನವು ಕೊಡಮಾಡುವ ಚುಂಚಶ್ರೀ ಪ್ರಶಸ್ತಿ, ರಾಷ್ಟ್ರಪತಿಗಳ ಗೌರವ ಪ್ರಶಸ್ತಿಪತ್ರ ಮುಂತಾದ ಹಲವು ಪ್ರಶಸ್ತಿ – ಪುರಸ್ಕಾರಗಳು ಸಂದಿವೆ. ಇವರು ತುಂಬುಜೀವನವನ್ನು ನಡೆಸಿ ೨೦೧೪ ರ ಜನವರಿ ೨೫ ರಂದು, ತನ್ನ ೯೮ ನೆಯ ವಯಸ್ಸಿನಲ್ಲಿ ನಿಧನರಾದರು.

ಆಯ್ಕೆ:

ಪ್ರಸ್ತುತ ಪಠ್ಯಭಾಗವನ್ನು ಶರ್ಮಾರ ಶ್ರೀಮದ್ವಾಲ್ಮೀಕಿರಾಮಾಯಣಮ್ ಕೃತಿಯ ಅಯೋಧ್ಯಾಕಾಂಡ ಸಂಪುಟದಿಂದ ಆರಿಸಿಕೊಳ್ಳಲಾಗಿದೆ .


9ನೇ ತರಗತಿ ಗದ್ಯಭಾಗ-01 ರಾಮರಾಜ್ಯ ಕತೆಯ ಹಿನ್ನೆಲೆ:

ಕೈಕೇಯಿಯ ಬಲವಂತಕ್ಕೆ ಕಟ್ಟುಬಿದ್ದು ದಶರಥನು ರಾಮನನ್ನು ವನವಾಸಕ್ಕೆ ಹೊರಡೆಂದುಹೇಳಿದ ಮೇಲೆ ರಾಮನು ತನ್ನ ಪತ್ನಿ ಸೀತೆ ಹಾಗೂ ಸೋದರ ಲಕ್ಷ್ಮಣನೊಡಗೂಡಿ ಕಾಡಿಗೆ ತೆರಳುತ್ತಾನೆ, ಈ ಘಟನೆಯು ನಡೆದಾಗ ಭರತನು ಅಯೋಧ್ಯೆಯಲ್ಲಿರಲಿಲ್ಲ. ನಂತರ ಬಂದು ವಿಷಯ ತಿಳಿದು ಆಘಾತಗೊಂಡ ಭರತನು ಎಷ್ಟುಮಾತ್ರಕ್ಕೂ ತಾನು ಸಿಂಹಾಸನದಲ್ಲಿ ಕೂರೆನೆಂದೂ ರಾಮನೊಬ್ಬನೇ ಪಟ್ಟಾಭಿಷಿಕ್ತನಾಗಲು ಅರ್ಹನೆಂದೂ ಹೇಳಿ ತನ್ನ ಪರಿವಾರಸಮೇತನಾ ರಾಮನನ್ನು ಕಾಣಲು ಅರಣ್ಯಕ್ಕೆ ಬರುತ್ತಾನೆ . ಭರತನು ಯುದ್ಧ ಮಾಡುವುದಕ್ಕೆಂದೇ ಸನ್ನದ್ಧನಾಗಿ ಬರುತ್ತಿರಬೇಕೆಂದು ಲಕ್ಷ್ಮಣನು ಬಗೆದರೂ ಅವನನ್ನು ಸಮಾಧಾನಪಡಿಸಿದ ರಾಮನು ಭರತನ ಜೊತೆ ಸ್ನೇಹಭಾವದಿಂದ ಮಾತಾಡುತ್ತಾನೆ. ಆಗ ಆತನಿಗೆ ಭರತನ ಮೂಲಕ, ತನ್ನ ತಂದೆಯ ದೇಹಾಂತ್ಯದ ವಿಚಾರ ತಿಳಿಯುತ್ತದೆ. ತನ್ನನ್ನು ಮರಳಿ ಅಯೋಧ್ಯೆಗೆ ಬರುವಂತೆ ಭರತ ಎಷ್ಟು ಒತ್ತಾಯಿಸಿದರೂ ಕೇಳದೆ ರಾಮನು ತಂದೆಯ ಆದೇಶವನ್ನು ಪಾಲಿಸುವುದು ತನ್ನ ಕರ್ತವ್ಯ ಎಂದು ಹೇಳುತ್ತಾನೆ. ಆ ಸಂದರ್ಭದಲ್ಲಿ ಆತ ರಾಜ್ಯಾಡಳಿತದ ಬಗ್ಗೆ ಭರತನಲ್ಲಿ ಕೇಳುವ ಪ್ರಶ್ನೆಗಳು, ಹೇಳುವ ಅನುಭವದ ಮಾತುಗಳು ಈ ಅಧ್ಯಾಯದಲ್ಲಿ ಬಂದಿವೆ. ವನವಾಸಕ್ಕೆ ತೆರಳುವ ಮೊದಲು ೧೨ ವರ್ಷಗಳ ಕಾಲ ಅಯೋಧ್ಯೆಯ ಅಧಿಕಾರಿಯಾಗಿ ರಾಮನು ಪಡೆದಿದ್ದ ಅನುಭವವೂ ಇಲ್ಲಿ ಅವನ ಮಾತಿನಲ್ಲಿ ಪ್ರತಿಫಲಿಸುತ್ತಿದೆ. ರಾಜನಾದವನು ಎಷ್ಟು ಸೂಕ್ಷ್ಮಗ್ರಾಹಿಯಾಗಿರಬೇಕು, ಎಷ್ಟು ಸಮಚಿತ್ತ ಹೊಂದಿರಬೇಕು, ತನ್ನ ಸುತ್ತ ನಡೆಯುವ ವಿಚಾರಗಳಿಗೆ ಹೇಗೆ ಆತ ಪ್ರತಿಕ್ರಿಯಿಸುತ್ತಿರಬೇಕು, ಒಟ್ಟು ಆಡಳಿತದಲ್ಲಿ ಭ್ರಷ್ಟಾಚಾರವು ನುಸುಳದಂತೆ ಹೇಗೆ ಜಾಗ್ರತೆಯಿಂದ ವ್ಯವಹರಿಸಬೇಕು ಎಂಬ ಎಲ್ಲ ಸೂಕ್ಷ್ಮಚಿಂತನೆಗಳೂ ಇಲ್ಲಿ ರಾಮಮುಖದಿಂದ ಬಂದಿವೆ . ಅಯೋಧ್ಯೆಯಿಂದ ದೂರವಾದರೂ ಆ ರಾಜ್ಯದ ಯೋಗಕ್ಷೇಮದ ಕಳಕಳಿ ರಾಮನಲ್ಲಿ ಎಷ್ಟು ತುಂಬಿತ್ತು ಎಂಬುದಕ್ಕೂ ಈ ಮಾತುಗಳು ಸಾಕ್ಷಿಯಾಗಿವೆ.

9ನೇ ತರಗತಿ ಗದ್ಯಭಾಗ-01 ರಾಮರಾಜ್ಯ: ಅ) ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯಗಳಲ್ಲಿ ಉತ್ತರಿಸಿರಿ


1. ಅಮಾತ್ಯರು ಯಾವ ವಿಷಯದಲ್ಲಿ ನಿಪುಣರಾಗಿರಬೇಕು?

ಅಮಾತ್ಯರು ರಾಜ್ಯಶಾಸ್ತ್ರದಲ್ಲಿ ನಿಪುಣರಾಗಿರಬೇಕು.


1. ರಾಜನು ಯಾವ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು?

ರಾಜನು ಅಲ್ಪಪ್ರಯತ್ನದಿಂದ ಬಹುಫಲವನ್ನು ಕೊಡತಕ್ಕ ಕಾರ್ಯವನ್ನು ಕೂಡಲೇ ಆಚರಣೆಗೆ ತರಬೇಕು.


3. ಕಷ್ಟಕಾಲದಲ್ಲಿ ಸಹಾಯಕ್ಕೆ ನಿಲ್ಲುವವನು ಯಾರು?

  ಕಷ್ಟಕಾಲದಲ್ಲಿ ಸಹಾಯಕ್ಕೆ ನಿಲ್ಲುವವನು ಪಂಡಿತ.

 

4. ರಾಜನಿಗೆ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲವನು ಯಾರು?

ಮೇಧಾವಿಯೂ ಶೂರನೂ ಕಾರ್ಯದಕ್ಷನೂ ರಾಜ್ಯಶಾಸ್ತ್ರವಿಶಾರದನೂ ಸಚಿವನು ರಾಜನಿಗೆ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲನು.

 

5. ಜನರು ಅರಸನನ್ನು ಹೇಗೆ ತಿರಸ್ಕರಿಸಬಹುದು?

ಬಲಾತ್ಕಾರದಿಂದ ಕೆಲಸ ಮಾಡಿಸಿಕೊಂಡು ಶೋಷಿಸುವ ಯಜಮಾನನಂತೆ ಅರಸನು ವರ್ತಿಸಿದರೆ ಜನರು ತಿರಸ್ಕರಿಸಬಹುದು.

 

6. ದೇಶಕ್ಕೆ ದೊಡ್ಡ ಗಂಡಾಂತರ ತರಬಲ್ಲವರು ಯಾರು?

ದೇಶಭ್ರಷ್ಟಗೊಳಿಸಿದ ಶತ್ರುಗಳು ಮರಳಿ ದೇಶದೊಳಕ್ಕೆ ಸೇರಿಕೊಂಡರೆ ಅವರು ದೇಶಕ್ಕೆ ದೊಡ್ಡ ಗಂಡಾಂತರ ತರಬಲ್ಲರು.


7. ಯಾರೊಡನೆ ಸಮಾಲೋಚಿಸುವುದು ರಾಜದೋಷ ಎಂದು ರಾಮನು ಹೇಳುತ್ತಾನೆ?

ಅನುಭವವಿಲ್ಲದ ಅವಿವೇಕಿಗಳೊಡನೆ ಸಮಾಲೋಚಿಸುವುದು ರಾಜದೋಷ ಎಂದು ರಾಮನು ಹೇಳುತ್ತಾನೆ

9ನೇ ತರಗತಿ ಗದ್ಯಭಾಗ-01 ರಾಮರಾಜ್ಯ: ಆ) ಈ ಕೆಳಗಿನ ಪ್ರಶ್ನೆಗಳಿಗೆ ಐದು – ಆರು ವಾಕ್ಯಗಳಲ್ಲಿ ಉತ್ತರಿಸಿರಿ.


1. ಮಂತ್ರಾಲೋಚನೆಯನ್ನು ಹೇಗೆ ನಡೆಸಬೇಕೆಂದು ರಾಮನ ಅಭಿಪ್ರಾಯ?

ರಾಜ್ಯಶಾಸ್ತ್ರ ನಿಪುಣರಾದ ಅಮಾತ್ಯರೊಂದಿಗೆ ಮಂತ್ರಾಲೋಚನೆಯನ್ನು ಗೌಪ್ಯವಾಗಿ ನಡೆಸಬೇಕು.ಮಂತ್ರಾಲೋಚನೆಗೆ ಅಗತ್ಯಕ್ಕಿಂತ ಹೆಚ್ಚಿನ ಮಂದಿಯನ್ನು ಸೇರಿಸಿಕೊಳ್ಳಬಾರದು.

ಮಂತ್ರಾಲೋಚನೆಯ ವಿಷಯವು ಕಾರ್ಯರೂಪಕ್ಕೆ ಬರುವುದರೊಳಗೆ ರಾಷ್ಟ್ರದಲ್ಲಿ ಬಹಿರಂಗವಾಗಬಾರದು. ಮೊದಲೇ ಸಾಮಂತರಾಜರಿಗೆ ತಿಳಿಯಬಾರದು.ಅದು ಸಾಮಂತರಿಗೆ ಗೊತ್ತಾಗುವಷ್ಟರಲ್ಲಿ ಪೂರ್ಣವಾಗಿ ನಡೆದು ಹೋಗಿರಬೇಕು ಇಲ್ಲವೇ ಅರ್ಧದಷ್ಟಾದರೂ ಆಚರಣೆಯಲ್ಲಿ ಬಂದಿರಬೇಕು.


2. ರಾಜ್ಯದ ಅಮಾತ್ಯರಲ್ಲಿ ಯಾವ ಗುಣಗಳಿರಬೇಕು?

ಅಮಾತ್ಯನು ರಾಜ್ಯಶಾಸ್ತ್ರ ನಿಪುಣನಾಗಿರಬೇಕು. ಮಂತ್ರಾಲೋಚನೆ ಯನ್ನು ಗೌಪ್ಯವಾಗಿ ಇಡುವವನಾಗಿರಬೇಕು. ಮೇಧಾವಿಯೂ ಶೂರನೂ ಕಾರ್ಯದಕ್ಷನೂ ಆಗಿರಬೇಕು. ಲಂಚವನ್ನು ಮುಟ್ಟದವನೂ ಪ್ರಾಮಾಣಿಕನೂ ಆಗಿರಬೇಕು. ರಾಜ್ಯದ ಆಡಳಿತವನ್ನು ಸರಿಯಾಗಿ ನಿರ್ವಹಿಸಿ ರಾಜನಿಗೆ ಶ್ರೇಯಸ್ಸನ್ನು ತಂದುಕೊಡಬಲ್ಲವನಾಗಿರಬೇಕು


3. ಯಾವ ಮೂರು ವ್ಯಕ್ತಿಗಳನ್ನು ರಾಜನು ತ್ಯಜಿಸಬೇಕು? ಯಾಕೆ?

ಉಪಾಯದಿಂದ ಹಣ ಕೀಳುವ ವೈದ್ಯನನ್ನೂ, ಒಡೆಯನನ್ನು ದೂಷಿಸುವ ಸೇವಕನನ್ನೂ, ಖಜಾನೆಯ ಐಶ್ವರ್ಯದ ಮೇಲೆ ಕಣ್ಣಿಟ್ಟಿರುವ ಸೈನಿಕನನ್ನೂ, ರಾಜನು ತ್ಯಜಿಸಬೇಕು. ಏಕೆಂದರೆ ಈ ವ್ಯಕ್ತಿಗಳ ಕುತಂತ್ರದಿಂದಲೇ ರಾಜನು ವಿಪತ್ತಿನಲ್ಲಿ ಸಿಕ್ಕಿಕೊಳ್ಳಬಹುದು. ಆದ್ದರಿಂದ ಇವರಿಗೆ ಉಗ್ರ ಶಿಕ್ಷೆಯನ್ನು ನೀಡಿ, ರಾಜನು ತನ್ನಿಂದ ಇಂಥವರನ್ನು ದೂರವಿಡಬೇಕು.

 4. ದೂತನು ಹೇಗಿರಬೇಕು?

ನಮ್ಮ ದೇಶದಲ್ಲಿ ಹುಟ್ಟಿ ಬೆಳೆದ ವಿದ್ಯಾಂಸನವನ್ನು ದೂತನನ್ನಾಗಿ ನೇಮಿಸಿಕೊಳ್ಲಬೇಕು. ದೂತನು ಕಾರ್ಯ ಸಮರ್ಥನೂ ಪ್ರತಿಭಾಶಾಲಿಯೂ ಆಗಿರಬೇಕು. ಹೇಳಿ ಕಳಿಸಿದ ಸಂದೇಶವನ್ನಷ್ಟೇ ತಿಳಿಸುವ ಸತ್ಯವಂತನಾಗಿರಬೇಕು. ವ್ಯಕ್ತಿ ವಸ್ತುಗಳ ಮೌಲ್ಯವನ್ನೂ ಯೋಗ್ಯತೆಯನ್ನೂ ಸರಿಯಾಗಿ ಗುರುತಿಸಬಲ್ಲ ನಿಷ್ಣಾತನಾಗಿರಬೇಕು.


5. ಸೇವಕರ ವಿಷಯದಲ್ಲಿ ರಾಜನು ಹೇಗೆ ವರ್ತಿಸಬೇಕು?

ಸೇವಕರು ನಿರ್ಭಯರಾಗಿ ಬಂದು ಎದುರಿಗೆ ನಿಲ್ಲುವಷ್ಟು ಸಲಿಗೆಯನ್ನು ಕೊಡಬಾರದು. ಅಥವಾ ಸೇವಕರು ನಿರ್ಭಯರಾಗಿ ಬಂದು ಎದುರಿಗೆ ನಿಲ್ಲುವಷ್ಟು ಸಲಿಗೆಯನ್ನು ಕೊಡಬಾರದು. ಅಥವಾ ಹತ್ತಿರವೇ ಸುಳಿಯದೆ ದೂರಕ್ಕೆ ಸರಿಯುವಂತೆ ಅಂಜಿಸಲೂಬಾರದು. ಅವರ ವಿಷಯದಲ್ಲಿ ಹೆಚ್ಚು ಸಲಿಗೆಯೂಸಲ್ಲದು, ಹೆಚ್ಚು ಅಂಜಿಸುವುದೂ ಸಲ್ಲದು ಇವೆರಡರ ನಡುದಾರಿಯನ್ನು ರಾಜನು ಕಾಯ್ದುಕೊಳ್ಳಬೇಕು ಎಂದು ರಾಮನು ಹೇಳುತ್ತಾನೆ.


6. ಖಜಾನೆಯನ್ನು ಹೇಗೆ ನಿಭಾಯಿಸಬೇಕೆಂದು ರಾಮನು ಹೇಳುತ್ತಾನೆ?

ಆದಾಯವು ವ್ಯಯಕ್ಕಿಂತ (ಖರ್ಚಿಗಿಂತ) ಹೆಚ್ಚಿರಬೇಕು. ರಾಜ್ಯದ ಬೊಕ್ಕಸದಲ್ಲಿ ಸಂಗ್ರಹಿಸುವ ಸಂಪತ್ತು ರಾಜ್ಯದ ಅಭಿವೃದ್ಧಿಯ ಕೆಲಸಕಾರ್ಯಗಳಿಗೆ ವಿನಿಯೋಗವಾಗಬೇಕು. ಖಜಾನೆಯನ್ನು ಬರಿದುಗೊಳಿಸಬಾರದು. ಹಾಗೆಂದು ಅದನ್ನು ತುಳುಕುವಷ್ಟು ತುಂಬಿಸಿಕೊಳ್ಳಲು ಅನರ್ಥದ ಆದಾಯವು ಖರ್ಚಿಗಿಂತ  ಹೆಚ್ಚಿರಬೇಕು. ರಾಜ್ಯದ ಬೊಕ್ಕಸದಲ್ಲಿ ಸಂಗ್ರಹಿಸುವ ಸಂಪತ್ತು ರಾಜ್ಯದ ಅಭಿವೃದ್ಧಿಯ ಕೆಲಸಕಾರ್ಯಗಳಿಗೆ ವಿನಿಯೋಗವಾಗಬೇಕು. ಖಜಾನೆಯನ್ನು ಬರಿದುಗೊಳಿಸಬಾರದು. ಹಾಗೆಂದು ಅದನ್ನು ತುಳುಕುವಷ್ಟು ತುಂಬಿಸಿಕೊಳ್ಳಲು ಅನರ್ಥ ಅನ್ಯಾಯಗಳ ಮಾರ್ಗವನ್ನು ಹಿಡಿಯಬಾರದು ಎಂದು ರಾಮನು ಖಜಾನೆಯನ್ನು ನಿಭಾಯಿಸುವ ಬಗ್ಗೆ ಹೇಳುತ್ತಾನೆ.

9ನೇ ತರಗತಿ ಗದ್ಯಭಾಗ-01 ರಾಮರಾಜ್ಯ: ಆ) ಈ ಕೆಳಗಿನ ಪ್ರಶ್ನೆಗಳಿಗೆ ಹತ್ತು ವಾಕ್ಯಗಳಲ್ಲಿ ಉತ್ತರಿಸಿರಿ.


1. ರಾಜ್ಯಾಡಳಿತದ ವಿಷಯದಲ್ಲಿ ರಾಮನ ಉಪದೇಶವನ್ನು ಸಂಗ್ರಹವಾಗಿ ಬರೆಯಿರಿ.

ರಾಜ್ಯವನ್ನು ಆಳತಕ್ಕವರಿಗೆ ಮಂತ್ರಾಲೋಚನೆಯು ಮುಖ್ಯವಾದದ್ದು. ಅದನ್ನು ಗೌಪ್ಯವಾಗಿ ಇಟ್ಟಿರಬೇಕು. ಮೇಧಾವಿಯೂ ಶೂರನೂ ಕಾರ್ಯದಕ್ಷನೂ ರಾಜ್ಯಶಾಸ್ತ್ರ ವಿಶಾರದನೂ ಆದ ಸಚಿವನನ್ನು ರಾಜನು ಹೊಂದಿರಬೇಕು. ಅವನು ಆಡಳಿತದಲ್ಲಿ ರಾಜನಿಗೆ ಶ್ರೇಯಸ್ಸನ್ನು ತಂದುಕೊಡುವನು. ಅಧಿಕಾರಿಗಳನ್ನು ಅವರ ಕುಶಲತೆಗೆ ಯೋಗ್ಯತೆಗೆ ತಕ್ಕಂತೆ ನೇಮಿಸಿಕೊಳ್ಳಬೇಕು. ಸೇನಾನಾಯಕರನ್ನು ಸೈನಿಕರನ್ನು ರಾಜನು ಚೆನ್ನಾಗಿ ನೋಡಿಕೊಳ್ಳಬೇಕು. ದೇಶದಲ್ಲಿಯೇ ಹುಟ್ಟಿ ಬೆಳೆದ ವಿದ್ವಾಂಸನನ್ನು ದೂತನನ್ನಾಗಿ ನೇಮಿಸಿಕೊಳ್ಳಬೇಕು. ಶತ್ರು ಪಕ್ಷದಲ್ಲಿನ ಇಲಾಖೆಗಳನ್ನು ಗಮನಿಸಲು ಗೂಢಚಾರರನ್ನು ನೇಮಿಸಬೇಕು. ರಾಜ್ಯದ ಬೊಕ್ಕಸದಲ್ಲಿನ ಸಂಪತ್ತನ್ನು ಅಭಿವೃದ್ದಿಯ ಕೆಲಸಕಾರ್ಯಗಳಿಗೆ ಉಪಯೋಗಿಸಬೇಕು. ಖರ್ಚಿಗಿಂತ ಆದಾಯವು ಹೆಚ್ಚಿರುವ ಹಾಗೆ  ರಾಜನು ನೋಡಿಕೊಳ್ಳಬೇಕು. ರಾಜನು ಯಂತ್ರ ಯಂತ್ರಜ್ಞರನ್ನು ಶಿಲ್ಪಿಗಳನ್ನು ಆಯುಧಗಳನ್ನು ಧನುರ್ಧಾರಿಗಳಾದ ಸೈನಿಕರನ್ನು ಹೊಂದಿರಬೇಕು.


2. ರಾಜನಲ್ಲಿ ತಲೆದೋರಬಹುದಾದ ಹದಿನಾಲ್ಕು ದೋಷಗಳ ಬಗ್ಗೆ ವಿವರಿಸಿ.

ರಾಜನಲ್ಲಿ ಸಂಭವಿಸಬಹುದಾದ ದೋಷಗಳು ಹದಿನಾಲ್ಕು, ಅವು ನಾಸ್ತಿಕಬುದ್ಧಿ, ಸುಳ್ಳು, ಸಿಟ್ಟು, ಅನವಧಾನ, ಚಟುವಟಿಕೆಯಿಲ್ಲದೆ ಕೆಲಸವನ್ನು ತಡಮಾಡುವುದು, ಪ್ರಾಜರಾದ ಸಜ್ಜನರೊಡನೆ ಸೇರದಿರುವುದು, ಸೋಮಾರಿತನ, ಪಂಚೇಂದ್ರಿಯಗಳಿಗೆ ಅಧೀನನಾಗಿ ಇಂದ್ರಿಯ ಚಾಪಲ್ಯದಲ್ಲಿ ಮುಳುಗುವುದು, ಮಂತ್ರಿಗಳೊಡನೆ ಸಮಾಲೋಚಿಸದೆ ರಾಜ್ಯಕಾರ್ಯಗಳಲ್ಲಿ ತಾನೊಬ್ಬನೇ ನಿರ್ಧಾರವನ್ನು ತೆಗೆದುಕೊಳ್ಳುವುದು. ಅನುಭವವಿಲ್ಲದ ಅವಿವೇಕಿಗಳೊಡನೆ ಸಮಾಲೋಚಿಸುವುದು, ನಿಶ್ಚಯಿಸಿದ ಕಾರ್ಯಗಳನ್ನು ಆರಂಭಿಸುರುವರು, ಮಂತ್ರಾಲೋಚನೆಯನ್ನು ರಹಸ್ಯವಾಗಿಡದೆ ಬಹಿರಂಗಪಡಿಸುವುದು, ಮಂಗಳಕರವಾದ ಶುಭಕಾರ್ಯವನ್ನು ಮಾಡದಿರುವುದು, ಹಾಗೂ ಎಲ್ಲ ಶತ್ರುಗಳ ಮೇಲೂ ಏಕಕಾಲದಲ್ಲಿ ಯುದ್ಧಾರಂಭ – ಈ ಹದಿನಾಲ್ಕು ರಾಜದೋಷಗಳಿಗೆ ಅವಕಾಶವನ್ನು ಕೊಡಬೇಡ.

ಈ ಮಾತುಗಳ ಸ್ವಾರಸ್ಯವನ್ನು ವಿಸ್ತರಿಸಿ ಬರೆಯಿರಿ.


1. ಸಾವಿರ ಮೂರ್ಖರಿಗಿಂತ ಒಬ್ಬ ಪಂಡಿತ ಲೇಸು.

ಸಾವಿರ ಮೂರ್ಖರಿಗಿಂತಲೂ ಒಬ್ಬ ಪಂಡಿತನೇ ಲೇಸೆಂದು ತಿಳಿದು ಅವನನ್ನು ಆದರಿಸುವೆಯಾ? ಏಕೆಂದರೆ ಕಷ್ಟಕಾಲದಲ್ಲಿ ಪಂಡಿತನೊಬ್ಬನೇ ಸರಿಯಾದ ಉಪಾಯವನ್ನು ಬೋಧಿಸಿ ಕಾರ್ಯವನ್ನು ನಿರ್ವಹಿಸಬಲ್ಲ. ಮೂರ್ಖರ ಸಂಖ್ಯೆ ಸಾವಿರವಿರಲಿ, ಹತ್ತು ಸಾವಿರವೇ ಇರಲಿ, ರಾಜನಿಗೆ ಆದರಿಂದ ಯಾವ ಸಹಾಯವೂ ಆಗುವುದಿಲ್ಲ. ಮೇಧಾವಿಯೂ ಶೂರನೂ ಕಾರ್ಯದಕ್ಷನೂ ರಾಜ್ಯಶಾಸ್ತ್ರವಿಶಾರದನೂ ಆದ ಸಚಿವನು ಒಬ್ಬನೇ ಆದರೂ ರಾಜನಿಗಾಗಲೀ ರಾಜ್ಯದ ಆಡಳಿತವನ್ನು ನಿರ್ವಹಿಸುವವನಿಗಾಗಲೀ ಮಹತ್ತರವಾದ ಶ್ರೇಯಸ್ಸನ್ನು ತಂದುಕೊಡಬಲ್ಲನು.

2.  ದೂತನು ಕಾರ್ಯಸಮರ್ಥನೂ ಪ್ರತಿಭಾಶಾಲಿಯೂ ಆಗಿರಬೇಕು.

ದೂತನು ಕಾರ್ಯಸಮರ್ಥನೂ ಪ್ರತಿಭಾಶಾಲಿಯೂ ಆಗಿರಬೇಕು ನಮ್ಮ ದೇಶದಲ್ಲಿ ಹುಟ್ಟಿ ಬೆಳೆದ ವಿದ್ವಾಂಸನನ್ನು ದೂತನನ್ನಾಗಿ ನೇಮಿಸಿಕೊಳ್ಳಬೇಕು ಹೇಳಿ ಕಳಿಸಿದ ಸಂದೇಶವನ್ನು ಮಾತ್ರ ತಿಳಿಸುವಂತ ಸತ್ಯವಂತನಾಗಿರಬೇಕು. ವ್ಯಕ್ತಿ ವಸ್ತುಗಳ ಮೌಲ್ಯವನ್ನುಯೋಗ್ಯತೆಯನ್ನು ಸರಿಯಾಗಿ ಗುರುತಿಸಬಲ್ಲ ನಿಷ್ಣಾತನಾಗಿರಬೇಕು. ಹೀಗೆ ರಾಮನು ಹೇಳಿದಂತೆ ಚಾಣಾಕ್ಷತನವನ್ನು ಹೊಂದಿರುವ ದೂತನು ಇದ್ದರೆ ಆತನು ರಾಜನನ್ನು ಶತ್ರುಗಳ ಸಂಚಿನಿಂದ ಕಾಪಾಡಬಲ್ಲವನಾಗುವನು ಸುತ್ತಮುತ್ತಲಿನ ರಾಜ್ಯಗಳಲ್ಲಿ ನಡೆಯುವ ವಿಚಾರಗಳನ್ನು ಸರಿಯಾಗಿ ರಾಜನಿಗೆ ಮುಟ್ಟಿಸಬಲ್ಲವನಾಗಿರುತ್ತಾನೆ.


3. ಪೂರ್ವಿಕರ ವ್ಯಕ್ತಿತ್ವದ ಅತ್ಯುತ್ತಮ ಅಂಶಗಳನ್ನು ರಾಜನು ಅಳವಡಿಸಿಕೊಳ್ಳಬೇಕು.

ಇತಿಹಾಸವನ್ನು ಅವಲೋಕಿಸಿದಾಗ ನಮಗೆ ಅನೇಕ ಮಹಾನುಭಾವರ ಪರಿಚಯವಾಗುತ್ತದೆ. ಅವರೆಲ್ಲ ತಮ್ಮ ಉದಾತ್ತ ವ್ಯಕ್ತಿತ್ವದಿಂದ ನಮ್ಮ ಗಮನ ಸೆಳೆಯುತ್ತಾರೆ. ತಮ್ಮ ವ್ಯಕ್ತಿತ್ವದಿಂದಾಗಿ ಅಪೂರ್ವವಾದ ಸಾಧನೆಯನ್ನು ಆದಕಾರಣ ರಾಮನು ಸಹ ಭರತನಿಗೆ ರಾಜನ ಆಡಳಿತದ ಬಗ್ಗೆ ಹೇಳುವಾಗ ರಾಜನು ತನ್ನ ಪೂರ್ವಿಕರ ವ್ಯಕ್ತಿತ್ವದ ಅತ್ಯತ್ತಮ ಅಂಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಹೇಳುತ್ತಾನೆ. ಈ ಅಂಶಗಳನ್ನು ಅಳವಡಿಸಿಕೊಳ್ಳುವುದರಿಂದ ಆಡಳಿತವು ಸುಲಭವಾಗುತ್ತದೆ. ಮತ್ತು ಪ್ರಜೆಗಳು ಸಂತುಷ್ಟರಾಗುತ್ತಾರೆ. ಉತ್ತಮ ವ್ಯಕ್ತಿತ್ವವುಳ್ಳ ರಾಜನು ಪ್ರಜೆಗಳ ಪ್ರೀತಿಗೆ ಗೌರವಕ್ಕೆ ಪಾತ್ರನಾಗುತ್ತಾನೆ.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads