24 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು24th April 2023 Daily Top-10 General Knowledge Questions and Answers
24 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
24th April 2023 Daily Top-10 General Knowledge Questions and Answers
1. ಸಮಾಜವಾದ, ಜಾತ್ಯತೀತತೆ ಮತ್ತು ಸಮಗ್ರತೆ ಎಂಬ ಮೂರು ಹೊಸ ಪದಗಳನ್ನು ಸಂವಿಧಾನ ಪ್ರಸ್ತಾವನೆಗೆ ಯಾವ ತಿದ್ದುಪಡಿ ಮೂಲಕ ಸೇರಿಸಲಾಯಿತು?
- 42ನೇ ತಿದ್ದುಪಡಿ
2. ಎಷ್ಟನೆಯ ತಿದ್ದುಪಡಿಯ ಕಾಯ್ದೆಯನ್ನು ಮಿನಿ ಸಂವಿಧಾನ ಎಂದು ಕರೆಯುತ್ತಾರೆ?
- 42ನೇ ತಿದ್ದುಪಡಿ
3. 44ನೇ ತಿದ್ದುಪಡಿ ಕಾಯ್ದೆ ಯಾವಾಗ ಜಾರಿಗೆ ಬಂತು?
- 1978ರಲ್ಲಿ
4. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಯಾವಾಗ ಜಾರಿಗೆ ತರಲಾಯಿತು?
- 1985ರಲ್ಲಿ
5. ಪಕ್ಷಾಂತರ ನಿಷೇಧ ಕಾಯ್ದೆಯನ್ನು ಯಾವಾಗ ತಿದ್ದುಪಡಿ ಮಾಡಲಾಯಿತು?
- 2003ರಲ್ಲಿ 91ನೇ ತಿದ್ದುಪಡಿ
6. ಪಂಚಾಯತ್ ರಾಜ್ ಕಾಯ್ದೆ ಎಂದು ಎಷ್ಟನ ೇ ತಿದ್ದುಪಡಿ ಕಾಯ್ದೆಗೆ ಕರೆಯುತ್ತಾರೆ?
- 73ನೇ ತಿದ್ದುಪಡಿ ಕಾಯ್ದೆ
7. 73ನೇ ತಿದ್ದುಪಡಿ ಕಾಯ್ದೆ ಯಾವಾಗಿನಿಂದ ಜಾರಿಯಲ್ಲಿದೆ?
- 24 ಏಪ್ರಿಲ್ 1993ರಿಂದ
8. ಎಷ್ಟನೇ ಭಾಗವು ಪಂಚಾಯತ್ ರಾಜ್ ವ್ಯವಸ್ಥೆಗೆ ಸಂಬಂಧಿಸಿದೆ?
- 9ನೇ ಭಾಗ
9. ಯಾವ ವಿಧಿಯು ಗ್ರಾಮ ಸಭೆಯ ರಚನೆ ಮತ್ತು ಅಧಿಕಾರಗಳನ್ನು ವಿವರಿಸುತ್ತದೆ?
- 243-A ವಿಧಿ
10. ಯಾವ ವಿಧಿಯು ಮೂರು ಹಂತದ ಪಂಚಾಯತ್ ರಾಜ್ ವ್ಯವಸ್ಥೆಗೆ ಅವಕಾಶ ಮಾಡಿಕೊಟ್ಟಿದೆ?
- 243-B ವಿಧಿ
No comments:
Post a Comment
If you have any doubts please let me know