22 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು22nd April 2023 Daily Top-10 General Knowledge Questions and Answers
22 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
22nd April 2023 Daily Top-10 General Knowledge Questions and Answers
1. ಭಾರತದ ಸಂವಿಧಾನ ತಿದ್ದುಪಡಿಯು ಯಾವ ಭಾಗದಲ್ಲಿ ಉಲ್ಲೇಖವಿದೆ?
- 20ನೇ ಭಾಗ
2. ಯಾವ ವಿಧಿಯು ಸಂವಿಧಾನದ ತಿದ್ದುಪಡಿಯ ಬಗ್ಗೆ ತಿಳಿಸುತ್ತದೆ?
- 368ನೇ ವಿಧಿ
3. ಭಾರತದಲ್ಲಿ ಸಂವಿಧಾನ ತಿದ್ದುಪಡಿ ಮಾಡುವ ಅಧಿಕಾರವನ್ನು ಯಾರಿಗೆ ನೀಡಲಾಗಿದೆ?
- ಸಂಸತ್ತಿಗೆ
4. ಸಂಸತ್ತು ಮೂಲ ಸಂರಚನೆಯನ್ನು ಹೊರತು ಪಡಿಸಿ ಸಂವಿಧಾನದ ಯಾವುದೇ ಭಾಗವನ್ನು ತಿದ್ದುಪಡಿ ಮಾಡಬಹುದೆಂದು ಯಾವ ಪ್ರಕರಣ ತಿಳಿಸುತ್ತದೆ?
- ಕೇಶವಾನಂದ ಭಾರತಿ ಪ್ರಕರಣ (1973)
5. ಸಂವಿಧಾನ ತಿದ್ದುಪಡಿ ಮಸೂದೆಯನ್ನು ಒಂದು ಸದನವು ಅಂಗೀಕರಿಸಿ ಇನ್ನೊಂದು ಸದನವು ತಿರಸ್ಕರಿಸಿದರೆ ಸಂವಿಧಾನ ತಿದ್ದುಪಡಿ ಮಾಡಲು ಸಾಧ್ಯವಿಲ್ಲ ಏಕೆ?
- ತಿದ್ದುಪಡಿ ಮಸೂದೆಗೆ ಸಂಬಂಧಿಸಿದಂತೆ ಜಂಟಿ ಅಧಿವೇಶನ ಕರೆಯಲು ಸಂವಿಧಾನದಲ್ಲಿ ಅವಕಾಶವಿರುವುದಿಲ್ಲ.
6. ಸಂವಿಧಾನ ತಿದ್ದುಪಡಿ ಮಸೂದೆಯ ಮೇಲೆ ರಾಷ್ಟ್ರಾಧ್ಯಕ್ಷರು ಹೊಂದಿದ್ದ ವೀಟೋ ಅಧಿಕಾರವನ್ನು ಯಾವ ಕಾಯ್ದೆ ರದ್ದುಗೊಳಿಸಿದೆ?
- 24ನೇ ಸಂವಿಧಾನ ತಿದ್ದುಪಡಿ ಕಾಯ್ದೆ (1971)
7. ಹೊಸ ರಾಜ್ಯಗಳ ಸೇರ್ಪಡೆ ಯಾವ ತಿದ್ದುಪಡಿ ವಿಧಾನದ ಮೂಲಕ ತಿದ್ದುಪಡಿ ಮಾಡಲಾಗುತ್ತದೆ?
- ಸರಳ ಬಹುಮತದ ತಿದ್ದುಪಡಿ ವಿಧಾನ
8. ರಾಜ್ಯ ವಿಧಾನ ಪರಿಷತ್ತುಗಳ ರಚನೆ ಅಥವಾ ರದ್ದತಿ ಯಾವ ತಿದ್ದುಪಡಿ ವಿಧಾನದ ಮೂಲಕ ತಿದ್ದುಪಡಿ ಮಾಡಲಾಗುತ್ತದೆ?
- ಸರಳ ಬಹುಮತದ ತಿದ್ದುಪಡಿ ವಿಧಾನ
9. ಅಧಿಕೃತ ಭಾಷೆಯ ಬಳಕೆ ಯಾವ ವಿಧಾನದ ಮೂಲಕ ತಿದ್ದುಪಡಿ ಮಾಡಲಾಗುತ್ತದೆ?
- ಸರಳ ಬಹುಮತದ ತಿದ್ದುಪಡಿ ವಿಧಾನ
10. ರಾಷ್ಟ್ರಾಧ್ಯಕ್ಷರ, ರಾಜ್ಯಪಾಲರ, ಸಭಾಧ್ಯಕ್ಷರ ಹಾಗೂ ನ್ಯಾಯಾಧೀಶರ ವೇತನ ಭತ್ಯೆ ಮತ್ತು ಸೌಲಭ್ಯಗಳಿಗೆ ಸಂಬಂಧಿಸಿದ ತಿದ್ದುಪಡಿಯನ್ನು ಯಾವ ವಿಧಾನದ ಮೂಲಕ ತಿದ್ದುಪಡಿ ಮಾಡಲಾಗುತ್ತದೆ?
- ಸರಳ ಬಹುಮತದ ತಿದ್ದುಪಡಿ ವಿಧಾನ
No comments:
Post a Comment
If you have any doubts please let me know