06 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು06th April 2023 Daily Top-10 General Knowledge Questions and Answers
06 ಏಪ್ರಿಲ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
06th April 2023 Daily Top-10 General Knowledge Questions and Answers
1. ವ್ಯಕ್ತಿಯೊಬ್ಬನ ಸೀಮಾಂತ ಉತ್ಪಾದನೆ ಶೂನ್ಯವಾಗಿರುವ ಸನ್ನಿವೇಶವನ್ನು ಏನೆಂದು ಕರೆಯುತ್ತಾರೆ?
- ಮರೆಮಾಚಿದ ನಿರುದ್ಯೋಗ ( ಪ್ರಚ್ಛನ್ನ ನಿರುದ್ಯೋಗ)
2. ಅರ್ಥ ವ್ಯವಸ್ಥೆಯ ಸ್ವರೂಪ ಅಥವಾ ರಚನೆಯಲ್ಲಿ ಆಗುವ ಬದಲಾವಣೆಗಳಿಂದ ಉಂಟಾಗುವ ನಿರುದ್ಯೋಗ ಯಾವುದು?
- ಸ್ವರೂಪಾತ್ಮಕ ನಿರುದ್ಯೋಗ
3. ಕಾರ್ಮಿಕರು ಕಾಯ್ದೆಗಳ ಕೊರತೆಯ ಕಾರಣದಿಂದ ಉದ್ಯೋಗ ಪಡೆಯಲಾಗದ ಸ್ಥಿತಿಯನ್ನು ಏನೆಂದು ಕರೆಯುತ್ತಾರೆ?
- ರಚನಾತ್ಮಕ ನಿರುದ್ಯೋಗ
4. ಕಾರ್ಮಿಕರ ಬೇಡಿಕೆ ಮತ್ತು ಪೂರೈಕೆಯ ಬದಲಾವಣೆಯ ಕಾರಣದಿಂದ ಉಂಟಾಗುವ ನಿರುದ್ಯೋಗವನ್ನ ಏನೆಂದು ಕರೆಯುತ್ತಾರೆ?
- ಘರ್ಷಣಾತ್ಮಕ ನಿರುದ್ಯೋಗ
5. ಆರ್ಥಿಕ ವ್ಯವಸ್ಥೆಯಲ್ಲಿ ಆಗುವಂತಹ ಏರಿಳಿತಗಳಿಂದ ಉಂಟಾಗುವ ನಿರುದ್ಯೋಗ ಯಾವುದು?
- ಆವರ್ತ ನಿರುದ್ಯೋಗ
6. ಬಂಡವಾಳ ಶಾಹಿ ಅರ್ಥವ್ಯವಸ್ಥೆಯಲ್ಲಿ ಕಂಡುಬರುವ ನಿರುದ್ಯೋಗ ಯಾವುದು?
- ಆವರ್ತ ನಿರುದ್ಯೋಗ
7. ಸ್ವಯಂಪ್ರೇರಿತ ನಿರುದ್ಯೋಗದ ಬಗ್ಗೆ ರಾಷ್ಟ್ರದಾದ್ಯಂತ ವಿಷಾದ ವ್ಯಕ್ತಪಡಿಸಿದರು ಯಾರು?
- ಬಿಬೇಕ್ ದೇಬ್ರಾಯ್
8. ಗಿನಿ ಸಹಗುಣಕವನ್ನು ಏನನ್ನು ಮಾಪನ ಮಾಡಲು ಬಳಸುತ್ತಾರೆ?
- ಆದಾಯದ ಅಸಮಾನತೆಯನ್ನು
9. ಆದಾಯ ಅಸಮಾನತೆಯನ್ನು ವಿವರಿಸುವ ರೇಖೆಗೆ ಏನೆಂದು ಕರೆಯುತ್ತಾರೆ?
- ಲೋರೆಂಜ್ ರೇಖೆ
10. ಲೋರೆಂಜ್ ರೇಖೆಯನ್ನು ಯಾರು ಯಾವಾಗ ಅಭಿವೃದ್ಧಿಪಡಿಸಿದರು?
- ಮ್ಯಾಕ್ಸ್.ಒ.ಲೋರೆಂಜ್ ರವರು 1905ರಲ್ಲಿ
No comments:
Post a Comment
If you have any doubts please let me know