ಜನವರಿ ತಿಂಗಳ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಗಳು
💥ಜನವರಿ ತಿಂಗಳ ಪ್ರಮುಖ ದಿನಗಳು💥
ಆತ್ಮೀಯರೇ ಇವತ್ತಿನ ಲೇಖನದಲ್ಲಿ ಜನವರಿ ತಿಂಗಳ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ದಿನಗಳ ಬಗ್ಗೆ ಸಮಗ್ರವಾಗಿ ತಿಳಿದುಕೊಳ್ಳೋಣ. ಇದೆ ರೀತಿಯ ಹೆಚ್ಚಿನ ಅಪ್ಡೇಟ್ ಪಡೆಯಲು ನಮ್ಮ www.edutubekannada.com ಜಾಲತಾಣಕ್ಕೆ ಭೇಟಿ ನೀಡಿ.
👉 ಜನವರಿ 1- ಜಾಗತಿಕ ಕುಟುಂಬ ದಿನ
👉 ಜನವರಿ 9 - ಪ್ರವಾಸಿ ಭಾರತೀಯ ದಿನ
- ಅನಿವಾಸಿ ಭಾರತೀಯರ ಸಾಧನೆ ಗುರುತಿಸಿ ಪ್ರೋತ್ಸಾಹಿಸಲು 2003 ರಿಂದ ಭಾರತದ ಬೇರೆ ಸ್ಥಳಗಳಲ್ಲಿ ಭಾರತ ಸರ್ಕಾರ ಅನಿವಾಸಿ ಭಾರತೀಯ ದಿನವನ್ನು ಆಚರಿಸುತ್ತದೆ.
- ಈ ದಿನದಂದು ಭಾರತದ ರಾಷ್ಟ್ರಪತಿ ಅನಿವಾಸಿ ಭಾರತೀಯರಿಗೆ ಪ್ರವಾಸಿ ಭಾರತೀಯ ಸನ್ಮಾನ್ ಪ್ರಶಸ್ತಿ ನೀಡಿ ಗೌರವಿಸುತ್ತಾರೆ.
- 2003ರ ಪ್ರಥಮ ಅನಿವಾಸಿ ಭಾರತೀಯ ದಿನವನ್ನು ನವ ದೆಹಲಿಯಲ್ಲಿ ಆಚರಿಸಲಾಯಿತು.
- 2023ರ ಅನಿವಾಸಿ ಭಾರತೀಯ ದಿನವನ್ನು ಮಧ್ಯಪ್ರದೇಶದ ಇಂದೋರ್ ನಲ್ಲಿ ಆಚರಿಸಲಾಯಿತು.
👉 ಜನವರಿ 12 - ರಾಷ್ಟ್ರೀಯ ಯುವ ದಿನ
- ಭಾರತದ ಮೊದಲ ಸನ್ಯಾಸಿ ಸ್ವಾಮಿ ವಿವೇಕಾನಂದ 1863 ಜನವರಿ 12ರಂದು ಜನಿಸಿದರು.
- ಭಾರತ ಸರ್ಕಾರ 1985 ಜನವರಿ 12 ರಿಂದ ರಾಷ್ಟ್ರೀಯ ಯುವ ದಿನವನ್ನು ಆಚರಿಸುತ್ತಿದೆ.
- 2023 ನೇ ರಾಷ್ಟ್ರೀಯ ಯುವ ದಿನವನ್ನು ಅವಳಿ ನಗರಗಳಾದ ಹುಬ್ಬಳ್ಳಿ- ಧಾರವಾಡನಲ್ಲಿ ಆಚರಿಸಲಾಯಿತು.
👉 ಜನವರಿ 15 - ರಾಷ್ಟ್ರೀಯ ಸೇನಾ ದಿನ
- ಸರ್ ಫ್ರಾನ್ಸಿಸ್ ಬೂಚರ್ 1948 ಜನವರಿ 15ರಂದು ತಮ್ಮ ಅಧಿಕಾರವನ್ನು ಭಾರತದ ಪ್ರಥಮ ಕಮಾಂಡರ್ ಕೆ.ಎಂ. ಕಾರ್ಯಪ್ಪ ನವರಿಗೆ ಹಸ್ತಾಂತರಿಸಿದರು.
👉 ಜನವರಿ 24 - ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ
- ಪ್ರಥಮ ಮಹಿಳಾ ಪ್ರಧಾನಿಯಾಗಿ ಇಂದಿರಾ ಗಾಂಧಿ 1966 ಜನವರಿ 24ರಂದು ಅಧಿಕಾರ ಸ್ವೀಕರಿಸಿದರು.
- ಭಾರತ ಸರ್ಕಾರ 2009 ರಿಂದ ಈ ದಿನವನ್ನು ಆಚರಿಸುತ್ತಿದೆ.
👉 ಜನವರಿ 25 ಭಾರತೀಯ ಪ್ರವಾಸೋದ್ಯಮ ದಿನ
👉 ಜನವರಿ 25 ರಾಷ್ಟ್ರೀಯ ಮತದಾರರ ದಿನ
- ಮತದಾರರಲ್ಲಿ ಮತದಾನದ ಕುರಿತು ಜಾಗೃತಿ ಮೂಡಿಸಲು 2011 ರಿಂದ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ.
- 1951 ಜನವರಿ 25ರಂದು ನವದೆಹಲಿಯಲ್ಲಿ ಭಾರತದ ಚುನಾವಣಾ ಆಯೋಗ ಅಸ್ತಿತ್ವಕ್ಕೆ ಬಂದಿತು.
👉 ಜನವರಿ 26 ರಾಷ್ಟ್ರೀಯ ಗಣರಾಜ್ಯೋತ್ಸವ ದಿನ
- 1950 ಜನವರಿ 26ರಂದು ಭಾರತ ಸಂವಿಧಾನವನ್ನು ಅಳವಡಿಸಿಕೊಂಡಿತು.
- 2023 ರ ಭಾರತದ ಗಣರಾಜ್ಯೋತ್ಸವದ ಮುಖ್ಯ ಅತಿಥಿ ಈಜಿಪ್ಟ್ ಅಧ್ಯಕ್ಷ ಅಬ್ದೆಲ್ ಫತ್ತಾಹ್ ಎಲ್-ಸಿಸಿ. ಆಗಿದ್ದರು.
- 1950ರ ಪ್ರಥಮ ಗಣರಾಜ್ಯೋತ್ಸವಕ್ಕೆ ಆಗಮಿಸಿದ ವಿಶೇಷ ಅತಿಥಿ ಅಂದಿನ ಇಂಡೋನೇಷ್ಯಾದ ಅಧ್ಯಕ್ಷ ಸುಕಾರ್ನೋ
👉 ಜನವರಿ 30 ರಾಷ್ಟ್ರೀಯ ಹುತಾತ್ಮರ ದಿನ
- 1948 ಜನವರಿ 30ರಂದು ನವ ದೆಹಲಿಯ ಬಿರ್ಲಾ ಮಂದಿರದ ಆವರಣದಲ್ಲಿ ನಾಥೂರಾಮ್ ಗೋಡ್ಸೆ ಮಹಾತ್ಮ ಗಾಂಧೀಜಿಯನ್ನು ಗುಂಡಿಟ್ಟು ಹತ್ಯೆ ಮಾಡಿದನು.
No comments:
Post a Comment
If you have any doubts please let me know