27 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು27th March 2023 Daily Top-10 General Knowledge Questions and Answers
27 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
27th March 2023 Daily Top-10 General Knowledge Questions and Answers
1. ಸಂವಿಧಾನಾತ್ಮಕ ಪರಿಹಾರಗಳ ಹಕ್ಕು ಎಂದು ಯಾವ ವಿಧಿಯನ್ನು ಕರೆಯುತ್ತಾರೆ?
- 32ನೇ ವಿಧಿ
2. 1951 ರಲ್ಲಿ 9ನೇ ಅನುಸೂಚಿಯು 13 ಕಾಯ್ದೆ ಮತ್ತು ನಿಯಮಗಳನ್ನು ಮಾತ್ರ ಒಳಗೊಂಡಿತ್ತು ಆದರೆ ಪ್ರಸ್ತುತ ಅವುಗಳ ಸಂಖ್ಯೆ ಎಷ್ಟಿದೆ?
- 282
3. ರಾಜ್ಯ ನಿರ್ದೇಶಕ ತತ್ವಗಳು ಯಾವ ಭಾಗದಲ್ಲಿ ಕಂಡುಬರುತ್ತವೆ?
- 4ನೇ ಭಾಗ
4. 36 ರಿಂದ 51ರವರೆಗಿನ ವಿಧಿಗಳು ಯಾವುದಕ್ಕೆ ಸಂಬಂಧಿಸಿವೆ?
- ರಾಜ್ಯ ನಿರ್ದೇಶಕ ತತ್ವಗಳು
5. ರಾಜ್ಯ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
- ಐರಿಷ್ ಸಂವಿಧಾನ
6. ಮೂಲಭೂತ ಹಕ್ಕುಗಳು ಮತ್ತು ರಾಜ್ಯ ನಿರ್ದೇಶಕ ತತ್ವಗಳನ್ನು ಸಂವಿಧಾನದ ಅಂತರಾತ್ಮ ಎಂದು ಕರೆದವರು ಯಾರು?
- ಗ್ರಾನ್ ವಿಲ್ಲೆ ಆಸ್ಟಿನ್
7. ಕರ್ನಾಟಕ ಜಾನುವಾರು ಹತ್ಯೆ ಪ್ರಕರಣ ಮತ್ತು ಸಂರಕ್ಷಣಾ ಕಾಯ್ದೆ-2020 ಯಾವಾಗ ಜಾರಿಗೆ ಬಂತು?
- ಫೆಬ್ರವರಿ 2021
8. ರಾಷ್ಟ್ರದಾದ್ಯಂತ ಎಲ್ಲ ಪ್ರಜೆಗಳಿಗೆ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೊಳಿಸುವ ವಿಧಿ ಯಾವುದು?
- 44ನೇ ವಿಧಿ
9. ಪರಿಸರ ಸಂರಕ್ಷಣೆ ಮತ್ತು ಸುಧಾರಣೆ ಮತ್ತು ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಗೆ ಸಂಬಂಧಿಸಿದ ವಿಧಿ ಯಾವುದು?
- 48-ಎ
10. ರಾಷ್ಟ್ರೀಯ ಮಹತ್ವದ ಸ್ಮಾರಕಗಳು, ಸ್ಥಳಗಳು ಮತ್ತು ವಸ್ತುಗಳ ರಕ್ಷಣೆಗೆ ಬಗ್ಗೆ ತಿಳಿಸುವ ವಿಧಿ ಯಾವುದು?
- 49ನೇ ವಿಧಿ
No comments:
Post a Comment
If you have any doubts please let me know