11 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು11th March 2023 Daily Top-10 General Knowledge Questions and Answers
11 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
11th March 2023 Daily Top-10 General Knowledge Questions and Answers
1. "ಸ್ವರಾಜ್ಯ ನನ್ನ ಆ ಜನ್ಮಸಿದ್ಧ ಹಕ್ಕು ಮತ್ತು ನಾನು ಅದನ್ನು ಪಡೆದೇ ತೀರುತ್ತೇನೆ" ಎಂದು ಘೋಷಿಸಿದವರು ಯಾರು?
- ಬಾಲ ಗಂಗಾಧರ ತಿಲಕ್
2. "ರಾಜಕೀಯ ಹಕ್ಕುಗಳು ಬೇಡಿದರೆ ಬರುವುದಿಲ್ಲ, ಅವುಗಳಿಗಾಗಿ ಹೋರಾಡಬೇಕು" ಎಂಬ ಹೇಳಿಕೆ ಯಾರದ್ದು?
- ಬಾಲ ಗಂಗಾಧರ ತಿಲಕ್
3. "ರಾಜಕೀಯ ಸ್ವಾತಂತ್ರ್ಯವು ರಾಷ್ಟ್ರದ ಉಸಿರು, ಅದನ್ನು ಹಿಂದೂ ಧರ್ಮವೊಂದೇ ಈಡೇರಿಸಬಲ್ಲದು" ಎಂಬ ಉಕ್ತಿ ಯಾರದ್ದು?
- ಅರವಿಂದ್ ಘೋಷ್
4. "New Lamps for Old" ಎಂಬ ಕೃತಿಯ ಕರ್ತೃ ಯಾರು?
- ಅರವಿಂದ್ ಘೋಷ್
5. " ಸಾಮಾನ್ಯ ತತ್ವದಂತೆ ಉನ್ನತ ಹುದ್ದೆಗಳು ಇಂಗ್ಲಿಷ್ ರಿಗೆ ಮೀಸಲಿರುತ್ತವೆ. ಭಾರತವನ್ನು ಆಳಲು ಇಂಗ್ಲಿಷ್ ರನ್ನು ದೇವರೇ ಆರಿಸಿ ಕಳುಹಿಸಿದ್ದಾನೆ. ಆದ್ದರಿಂದ ಸ್ವಾತಂತ್ರ್ಯ ಬೇಡುವುದು ದೇವರ ಇಚ್ಚೆಗೆ ವಿರುದ್ಧ ನಡೆದಂತೆ " ಎಂದು ಹೇಳಿವದರು ಯಾರು?
- ಲಾರ್ಡ್ ಕರ್ಜನ್
6. 1905 ಅಕ್ಟೋಬರ್ 16ರಂದು ಬಂಗಾಳ ವಿಭಜನೆ ಮಾಡಿದ ಬ್ರಿಟಿಷ್ ಅಧಿಕಾರಿ ಯಾರು?
- ಲಾರ್ಡ್ ಕರ್ಜನ್
7. 'ರಾಷ್ಟ್ರೀಯ ಶೋಕ ದಿನ' ಯಾವಾಗ ಆಚರಿಸಲಾಯಿತು?
- ಅಕ್ಟೋಬರ್ 16, 1905
8. ಮಂದಗಾಮಿಗಳ ನಾಯಕ ಯಾರು?
- ಗೋಪಾಲ ಕೃಷ್ಣ ಗೋಖಲೆ
9. ತೀವ್ರಗಾಮಿಗಳ ನಾಯಕ ಯಾರು?
- ಬಾಲ ಗಂಗಾಧರ ತಿಲಕ್
10. "ಗೀತ ರಹಸ್ಯ" ಕೃತಿ ರಚಿಸಿದವರು ಯಾರು?
- ಬಾಲ ಗಂಗಾಧರ ತಿಲಕ್
No comments:
Post a Comment
If you have any doubts please let me know