10 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು10th March 2023 Daily Top-10 General Knowledge Questions and Answers
10 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
10th March 2023 Daily Top-10 General Knowledge Questions and Answers
1. ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿಯನ್ನು ಸ್ಥಾಪಿಸಿದವರು ಯಾರು?
- ಗೋಪಾಲ ಕೃಷ್ಣ ಗೋಖಲೆ
2. ಗೋಖಲೆ ಅವರನ್ನು ರಾಜಕೀಯ ಗುರುವಾಗಿ ಸ್ವೀಕರಿಸಿದವರು ಯಾರು?
- ಮಹಾತ್ಮ ಗಾಂಧೀಜಿ
3. 'ಭಾರತದ ಶಿರೋಮಣಿ, ಮಹಾರಾಷ್ಟ್ರದ ವಜ್ರ, ದೇಶಭಕ್ತ ಮುಕಟವಾಣಿ, ನವಯುಗ ಪ್ರವಾದಿ' ಎಂದು ಅನ್ವರ್ಥಕವಾಗಿ ಯಾರನ್ನು ಕರೆಯುತ್ತಾರೆ?
- ಗೋಪಾಲ ಕೃಷ್ಣ ಗೋಖಲೆ
4. ಗೋಪಾಲ ಕೃಷ್ಣ ಗೋಖಲೆ ಅವರನ್ನು 'ಪವಿತ್ರ ಗಂಗೆ' ಎಂದು ಕರೆದವರು ಯಾರು?
- ಮಹಾತ್ಮ ಗಾಂಧೀಜಿ
5. ಗೋಖಲೆ ಅವರನ್ನು ' ಕಾರ್ಯಕರ್ತರ ರಾಜಕುಮಾರ, ಮಹಾರಾಷ್ಟ್ರದ ವಜ್ರ, ಭಾರತದ ವಜ್ರ ' ಎಂದು ಕರೆದವರು ಯಾರು?
- ಬಾಲಗಂಗಾಧರ ತಿಲಕ
6. 1913ರಲ್ಲಿ " ಬಾಂಬೆ ಕ್ರಾನಿಕಲ್" ಎಂಬ ಪತ್ರಿಕೆಯನ್ನು ಸ್ಥಾಪಿಸಿದವರು ಯಾರು?
- ಫಿರೋಜ್ ಷಾ ಮೆಹ್ತಾ
7. 'ಮುಂಬಯಿಯ ಅನಭಿಷಿಕ್ತ ದೊರೆ' ಎಂದು ಕರೆಯಿಸಿಕೊಂಡವರು ಯಾರು?
- ಫಿರೋಜ್ ಷಾ ಮೆಹ್ತಾ
8. " ಹಿಂದೂ ಮಹಾಸಭಾ" ಎಂಬ ಸಂಸ್ಥೆಯನ್ನು ಕಟ್ಟಿದವರು ಯಾರು?
- ಮದನಮೋಹನ ಮಾಳವೀಯ
9. ಮದನಮೋಹನ ಮಾಳವೀಯ ಅವರು ಹೊರಡಿಸಿದ ಮಾಸ ಪತ್ರಿಕೆಗಳು ಯಾವುವು?
- ಮರ್ಯಾದಾ ಮತ್ತು ಕಿಸಾನ್
10. ಹಿಂದೂಸ್ತಾನ್, ದಿ ಇಂಡಿಯನ್ ಯೂನಿಯನ್ ಮತ್ತು ಅಭ್ಯುದಯ ಎಂಬ ವಾರಪತ್ರಿಕೆಗಳನ್ನು ಹೊರಡಿಸಿದವರು ಯಾರು?
- ಮದನಮೋಹನ ಮಾಳವೀಯ
No comments:
Post a Comment
If you have any doubts please let me know