07 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು07th March 2023 Daily Top-10 General Knowledge Questions and Answers
07 ಮಾರ್ಚ್ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
07th March 2023 Daily Top-10 General Knowledge Questions and Answers
1. ಭಾರತದ ಒಕ್ಕೂಟದಲ್ಲಿ ಹೊಸ ರಾಜ್ಯವನ್ನು ರೂಪಿಸುವ ಅಧಿಕಾರ ಯಾರಿಗಿರುತ್ತದೆ?
- ಭಾರತದ ಸಂಸತ್ತು
2. ಯಾವ ವಿಧದ ಮೂಲಭೂತ ಹಕ್ಕು ಅಸ್ಪೃಶ್ಯತೆಯ ನಿವಾರಣೆಯನ್ನು ಒಳಗೊಂಡಿದೆ?
- ಸಮಾನತೆಯ ಹಕ್ಕು
3. ಸಂವಿಧಾನದಲ್ಲಿ ಈಗ ಯಾವುದು ಮೂಲಭೂತ ಹಕ್ಕಾಗಿ ಉಳಿದಿಲ್ಲ?
- ಆಸ್ತಿಯ ಹಕ್ಕು
4. ತಪ್ಪು ಬಂಧನದ ಸಂದರ್ಭದಲ್ಲಿ ಯಾವ ರಿಟ್ ಆಜ್ಞೆಯನ್ನು ಹೊರಡಿಸಲಾಗುತ್ತದೆ?
- ಬಂಧಿ ಪ್ರತ್ಯಕ್ಷೀಕರಣ (ಹೇಬಿಯಸ್ ಕಾರ್ಪಸ್)
5. ಯಾವ ವರ್ಷದಲ್ಲಿ 42 ನೇ ತಿದ್ದುಪಡಿ ಕಾಯ್ದೆಯು ಮೂಲಭೂತ ಕರ್ತವ್ಯಗಳಿಗೆ ಸಂಬಂಧಿಸಿದ ಹೊಸ ಅಧ್ಯಾಯವನ್ನು ಸಂವಿಧಾನದಲ್ಲಿ ಅಳವಡಿಸಿದೆ?
- 1976.
6. ಪಂಚವಾರ್ಷಿಕ ಯೋಜನೆಯ ಕಲ್ಪನೆಯನ್ನು ಯಾವ ದೇಶದಿಂದ ಎರವಲು ಪಡೆಯಲಾಗಿದೆ?
- ಯುಎಸ್‌ಎಸ್‌ಆರ್ (ರಷ್ಯಾ)
7. ಭಾರತದ ಕೇಂದ್ರ ಶಾಸಕಾಂಗವನ್ನು ಏನೆಂದು ಕರೆಯುತ್ತಾರೆ?
- ಪಾರ್ಲಿಮೆಂಟ್
8. ಭಾರತದ ಮುಖ್ಯ ಚುನಾವಣಾ ಆಯುಕ್ತರನ್ನು ಯಾರು ನೇಮಕ ಮಾಡುತ್ತಾರೆ?
- ರಾಷ್ಟ್ರಪತಿ
9. ರಾಷ್ಟ್ರಪತಿಗಳು ನೀಡುವ ಕ್ಷಮಾದಾನದ ಅಧಿಕಾರ ಸಂವಿಧಾನದ ಯಾವ ಅನುಚ್ಛೇದದಲ್ಲಿದೆ?
- ಅನುಚ್ಛೇದ-72
10. ರಾಷ್ಟ್ರಪತಿಯವರಿಗೆ ಯಾರು ಪ್ರಮಾಣವಚನವನ್ನು ವಿಧಿವತ್ತಾಗಿ ಬೋಧಿಸುತ್ತಾರೆ?
- ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರು.
No comments:
Post a Comment
If you have any doubts please let me know