ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ ಸಂಪೂರ್ಣ ನೋಟ್ಸ್
ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ ಅಧ್ಯಾಯದ ಮಹತ್ವದ ಅಂಶಗಳು
ಪ್ರಮುಖ ಯುದ್ಧಗಳು ಮತ್ತು ಒಪ್ಪಂದಗಳು | |||
---|---|---|---|
ಕ್ರ. ಸಂ | ಪ್ರಮುಖ ಯುದ್ಧಗಳು | ಇಸ್ವಿಗಳು | ಒಪ್ಪಂದಗಳು |
01 | 1ನೇ ಕರ್ನಾಟಿಕ್ ಯುದ್ಧ | 1746-48 | ಎಕ್ಸ್-ಲಾ-ಚಾಪೆಲ್ ಒಪ್ಪಂದ |
02 | 2ನೇ ಕರ್ನಾಟಿಕ್ ಯುದ್ಧ | 1749-54 | ಪಾಂಡಿಚೇರಿ ಒಪ್ಪಂದ |
03 | 3ನೇ ಕರ್ನಾಟಿಕ್ ಯುದ್ಧ | 1756-63 | ಪ್ಯಾರಿಸ್ ಒಪ್ಪಂದ |
04 | ಪ್ಲಾಸಿ ಕದನ | 1757 | - |
05 | ಬಕ್ಸಾರ್ ಕದನ | 1764 | - |
ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ ಅಧ್ಯಾಯದ ಮಹತ್ವದ ಅಂಶಗಳು
ಪ್ರಮುಖ ಘಟನಾವಳಿಗಳು | ||
---|---|---|
ಕ್ರ. ಸಂ | ಪ್ರಮುಖ ಇಸ್ವಿಗಳು | ಪ್ರಮುಖ ಘಟನೆಗಳು |
01 | 1453 | ಅಟೋಮನ ಟರ್ಕರು ಕಾನಸ್ಟಾಂಟಿನೋಪಲ್ ನಗರ ವಶಪಡಿಸಿಕೊಂಡರು. |
02 | 1498 | ಪೋರ್ಚುಗಲ್ ನಾವಿಕ ವಾಸ್ಕೋಡಿಗಾಮನು ಕೇರಳದ “ಕಾಪ್ಪಡ್” ಪ್ರದೇಶಕ್ಕೆ ಬಂದು ತಲುಪಿದನು. |
03 | 1510 | ಅಲ್ಪಾನ್ಸ್ ಡಿ. ಅಲ್ಬುಕರ್ಕ ಬಿಜಾಪುರದ ಸುಲ್ತಾನನಿಂದ ಗೋವಾ ವಶಪಡಿಸಿಕೊಂಡನು. |
04 | 1600 | ಇಂಗ್ಲೀಷ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ |
05 | 1602 | ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ |
06 | 1664 | ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆ |
07 | 1760 | ವಾಂಡಿವಾಷ್ ಕದನ |
08 | 1757 | ಪ್ಲಾಸಿ ಕದನ |
09 | 1764 | ಬಕ್ಸಾರ್ ಕದನ |
10 | 1765 | ರಾಬರ್ಟ ಕ್ಲೈವ್ ಬಂಗಾಳದಲ್ಲಿ ದ್ವಿಮುಖ ಸರ್ಕಾರ ಪದ್ಧತಿ ಜಾರಿಗೆ ತಂದನು. |
ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ ಅಧ್ಯಾಯದ ಮಹತ್ವದ ಅಂಶಗಳು
ವ್ಯಕ್ತಿ ವಿಶೇಷತೆಗಳು | ||
---|---|---|
ಕ್ರ. ಸಂ | ಪ್ರಮುಖ ವ್ಯಕ್ತಿಗಳು | ವಿಶೇಷತೆಗಳು |
01 | ವಾಸ್ಕೊಡಿಗಾಮ | 1498 ರಲ್ಲಿ ಭಾರತಕ್ಕೆ ಹೊಸ ಜಲಮಾರ್ಗ ಕಂಡು ಹಿಡಿದನು. |
02 | ಫ್ರಾನ್ಸಿಸ್ಕೊ-ಡಿ-ಅಲ್ಮೇಡ | * ಭಾರತಕ್ಕೆ ಬಂದ ಮೊದಲ ಪೋರ್ಚುಗೀಸರ ವೈಸರಾಯ * 'ಜಲ ನೀರಿನ ನೀತಿ ಜಾರಿಗೆ ತಂದನು. |
03 | ಅಲ್ಫಾನ್ಸೋ-ಡಿ-ಅಲ್ಬುಕರ್ಕ | ಭಾರತದಲ್ಲಿ ಪೋರ್ಚುಗೀಸರ ಸಾಮ್ರಾಜ್ಯದ ನಿಜವಾದ ಸ್ಥಾಪಕ |
04 | ಜಹಾಂಗೀರ್ | ಬ್ರಿಟಿಷರಿಗೆ ಭಾರತದಲ್ಲಿ ಮೊದಲ ವ್ಯಾಪಾರಿ ಕೋಠಿ ತೆರೆಯಲು ಅನುಮತಿ ನೀಡಿದನು. |
05 | ಸರ್ ಥಾಮಸ್ ರೋ | ಇಂಗ್ಲೆಂಡಿನ ರಾಜ 1ನೇ ಜೇಮ್ಸ್‌ನ ರಾಯಭಾರಿಯಾಗಿ ಜಹಾಂಗೀರನ ಆಸ್ಥಾನಕ್ಕೆ ಬಂದನು. |
06 | ಡೂಪ್ಲೆ | ಫ್ರೆಂಚರ್ ಪ್ರಸಿದ್ಧ ಗವರ್ನರ ಜನರಲ್ |
07 | ಲಾಬೋರ್ಡಿನಾ | ಫ್ರೆಂಚ್ ಸೇನಾ ಅಧಿಕಾರಿ ಮತ್ತು 1ನೇ ಕರ್ನಾಟಕ ಯುದ್ಧದಲ್ಲಿ ಮದ್ರಾಸ್ ವಶಪಡಿಸಿಕೊಂಡನು. |
08 | ಹೆಕ್ಟರ್ ಮನ್ರೋ | ಬಕ್ಸಾರ ಕದನದಲ್ಲಿ ಮೀರ ಖಾಸೀಂನ ಸಂಯುಕ್ತ ಸೈನ್ಯವನ್ನು ಸೋಲಿಸಿದನು. |
09 | ಮೀರ್ ಜಾಫರ್ | * ಸಿರಾಜ್-ಉದ್-ದೌಲ ನ ಸೇನಾಪತಿ * ಬ್ರಿಟೀಷರ ಗೆಲುವಿಗಾಗಿ ಸಹಕರಿಸಿದ |
ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ ಸಂಪೂರ್ಣ ನೋಟ್ಸ್
ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ : ಈ ಕೆಳಗಿನ ಪ್ರಶ್ನೆಗಳಿಗೆ ಒಂದು ವಾಕ್ಯದಲ್ಲಿ ಉತ್ತರಿಸಿರಿ
ಉತ್ತರ: 1453
ಉತ್ತರ: ವಾಸ್ಕೋಡಗಾಮ
ಉತ್ತರ: 1757
ಉತ್ತರ: ಫ್ರಾನ್ಸಿಸ್ಕೋ ಡಿ ಆಲ್ಮೇಡ್
ಉತ್ತರ: ಫ್ರಾನ್ಸಿಸ್ಕೋ ಡಿ ಅಲ್ಮೇಡ್
ಉತ್ತರ: ಅಲ್ಫೋನ್ಸೋ-ಡಿ-ಅಲ್ಬುಕರ್ಕ್
ಉತ್ತರ: 1602
ಉತ್ತರ: ಸಾ.ಸ.1600 ಡಿಸೆಂಬರ್ 31
ಉತ್ತರ: ಪರವಾನಿಗೆ ಪತ್ರ
ಉತ್ತರ: ರಾಬರ್ಟ್ ಕ್ಲೈವ್
ಉತ್ತರ: ಎರಡನೇ ಷಾ ಅಲಂ
ಉತ್ತರ: ಪಾಂಡಿಚೇರಿ
ಉತ್ತರ: ಪಾಂಡಿಚೇರಿ ಒಪ್ಪಂದ
ಉತ್ತರ: ಪ್ಯಾರಿಸ್ ಒಪ್ಪಂದ
ಉತ್ತರ: ಭೂ ಕಂದಾಯ ವಸೂಲಿ ಮಾಡುವ ಹಕ್ಕು
ಉತ್ತರ: ಆಟೋಮನ್ ಟರ್ಕರು
ಉತ್ತರ: ನಕ್ಷತ್ರ ಉನ್ನತಿ ಮಾಪನ
ಉತ್ತರ: ಇಟಲಿಯ ವರ್ತಕರರು
ಉತ್ತರ: ಕಾನ್‌ಸ್ಟಾಂಟಿನೋಪಲ್ ನಗರ
ಉತ್ತರ: ಕಾನ್‌ಸ್ಟಾಂಟಿನೋಪಲ್ ನಗರ
ಉತ್ತರ: ಅರಬ್ಬರು
ಉತ್ತರ: ಬೈಜಾಂಟೀನ್
ಉತ್ತರ: ಪೋರ್ಚುಗಲ್ ದೇಶದ ನಾವಿಕ
ಉತ್ತರ: ಕಾಪ್ಪಡ್
ಉತ್ತರ: ಪೋರ್ಚುಗೀಸರು
ಉತ್ತರ: ಗೋವಾ
ಉತ್ತರ: ಹಾಲೆಂಡ್ ಅಥವಾ ನೆದರಲ್ಯಾಂಡ್ ದೇಶದವರು.
ಹತ್ತನೆಯ ತರಗತಿ ಸಮಾಜ ವಿಜ್ಞಾನ ಅಧ್ಯಾಯ-01 ಭಾರತಕ್ಕೆ ಯುರೋಪಿಯನ್ನರ ಆಗಮನ : ಈ ಕೆಳಗಿನ ಪ್ರಶ್ನೆಗಳಿಗೆ ಎರಡು-ಮೂರು ವಾಕ್ಯಗಳಲ್ಲಿ ಉತ್ತರಿಸಿ :
ಉತ್ತರ:
• ಕಾನಸ್ಟಾಂಟಿನೋಪಲ್ ನಗರದ ಮೂಲಕ ನಡೆಯುತ್ತಿತ್ತು.
• ಮೆಣಸು, ಜಿರಿಗೆ, ದಾಲ್ಟಿನ್ನಿ, ಏಲಕ್ಕಿ, ಶುಂಠಿ
ಉತ್ತರ:
• ಮಧ್ಯ ಕಾಲದಲ್ಲಿಯು ಯೂರೋಪ್ ಮತ್ತು ಭಾರತ ದೇಶಗಳ ನಡುವೆ ವ್ಯಾಪಾರ ಮುಂದುವರಿಯಿತು.
• ಮಧ್ಯಕಾಲದಲ್ಲಿ ಏಷ್ಯಾದ ಸರಕುಗಳನ್ನು ಅರಬ್ ವರ್ತಕರು ಪೂರ್ವರೋಮನ್ ಸಾಮ್ರಾಜ್ಯದ ರಾಜಧಾನಿಯಾದ ಕಾನಸ್ಟಾಂಟಿನೋಪಲ್ ನಗರಕ್ಕೆ ತಲುಪಿಸುತ್ತಿದ್ದರು.
• ಅಲ್ಲಿಂದ ಇಟಲಿಯ ವರ್ತಕರು ಅವುಗಳನ್ನು ಕೊಂಡು ಯೂರೋಪಿನ ದೇಶಗಳಲ್ಲಿ ಮಾರುತ್ತಿದ್ದರು.
• ಕಾನಸ್ಟಾಂಟಿನೋಪಲ್ ನಗರವು ಅಂತರರಾಷ್ಟ್ರೀಯ ಸರಕು ವಿನಿಮಯ ಕೇಂದ್ರ ಮತ್ತು ಯುರೋಪಿನ ವ್ಯಾಪಾರದ ಹೆಬ್ಬಾಗಿಲೆಂದು ಪರಿಗಣಿಸಲ್ಪಟ್ಟಿತು.
• ಅಟೋಮನ್ ಟರ್ಕರು ಕಾನ್‌ಸ್ಟಾಂಟಿನೋಪಲ್ ನಗರವನ್ನು ವಶಪಡಿಸಿಕೊಂಡರು
• ಭಾರತದ ಸಾಂಬಾರು ಪದಾರ್ಥಗಳಿಗಿದ್ದ ಅಪಾರ ಬೇಡಿಕೆ
• ನಾವಿಕರ ದಿಕ್ಕೂಚಿ, ಆಸ್ಟ್ರೋಲೋಬ್, ಸಿಡಿಮದ್ದು.
• ಇಟಲಿಯ ವರ್ತಕರ ಏಕಸ್ವಾಮ್ಯವನ್ನು ಮುರಿಯಲು ಸ್ಪೇನ್, ಪೋರ್ಚುಗಲ್, ದೇಶಗಳ ರಾಜರು ಭಾರತಕ್ಕೆ ಸಮುದ್ರ ಮಾರ್ಗ ಹುಡಕಲು ನಾವಿಕರನ್ನು ಪ್ರೋತ್ಸಾಹಿಸಿದರು.
ಉತ್ತರ:
• ಪೋರ್ಚುಗಲ್ ನಾವಿಕ ವಾಸ್ಕೋಡಿಗಾಮ್
• ಸಾ.ಸ 1498ರಲ್ಲಿ ಇತ ಭಾರತದ ಪಶ್ಚಿಮದ ಕರಾವಳಿಯ ತೀರದ ಕಲ್ಲಿಕೋಟೆ ಸಮೀಪದ 'ಕಾಪ್ಪಡ್' ಎಂಬಲ್ಲಿಗೆ ಬಂದು ತಲುಪಿದನು.
ಉತ್ತರ:
• ಪೋರ್ಚುಗೀಸರು
• ಬ್ರಿಟೀಷರು
• ಡಚ್ಚರು
• ಫ್ರೆಂಚರು
ಉತ್ತರ: • ಪೋರ್ಚುಗೀಸರ ಮೊಟ್ಟಮೊದಲ ವೈಸರಾಯ ಫ್ರಾನ್ಸಿಸ್ಕೊ ಡಿ ಆಲ್ಮೇಡ್. ಅವನು “ನೀಲಿ ನೀರಿನ ನೀತಿಯನ್ನು” ಜಾರಿಗೆ ತಂದನು.
ಉತ್ತರ: • ಭೂಮಿಯ ಮೇಲಿನ ಅಧಿಪತ್ಯಕ್ಕೆ ಬದಲು ಸಮುದ್ರದ ಮೇಲಿನ ಏಕಸ್ವಾಮ್ಯಕ್ಕಾಗಿ ನೌಕಾಶಕ್ತಿಯನ್ನು ಬಲಪಡಿಸುವದೇ ನೀಲಿ ನೀರಿನ ನೀತಿಯಾಗಿದೆ. ಇದನ್ನು ಫ್ರಾನ್ಸಿಸ್ಕೊ ಡಿ ಆಲೋಡ್ ಜಾರಿಗೆ ತಂದನು.
ಉತ್ತರ: • ಭಾರತದಲ್ಲಿ ಪೋರ್ಚುಗೀಸರ ಸಾಮ್ರಾಜ್ಯದ ನಿಜವಾದ ಸ್ಥಾಪಕ ಅಲ್ಫಾನ್ಸೋ ಡಿ ಆಲ್ಬುಕರ್ಕ್. ಇವನು ಸಾ.ಸ 1510 ರಲ್ಲಿ ಬಿಜಾಪೂರದ ಸುಲ್ತಾನನಿಂದ ಗೋವಾವನ್ನು ಗೆದ್ದುಕೊಂಡು ಪೋರ್ಚುಗೀಸರ ಆಡಳಿತ ಕೇಂದ್ರವನ್ನಾಗಿ ಮಾಡಿದನು.
• ಯುನೈಟೆಡ್ ಈಸ್ಟ್ ಇಂಡಿಯಾ ಕಂಪನಿ 1602 ರಲ್ಲಿ ಸ್ಥಾಪನೆಯಾಯಿತು
• ಸೂರತ್, ಬೋಚ್, ಕ್ಯಾಂಬೆ, ಕೊಚ್ಚಿನ್, ನಾಗಪಟ್ಟಣ, ಮಚಲಿಪಟ್ಟಣ, ಚಿನ್ಸೂರ್ ಇವು ಡಚ್ಚರ ವ್ಯಾಪಾರಿ ಕೋಠಿಗಳಾದ್ದವು.
ಉತ್ತರ: • ಇಂಗ್ಲೀಷ್ ಈಸ್ಟ್ ಇಂಡಿಯಾ ಕಂಪನಿ ಸ್ಥಾಪನೆಯಾದ ವರ್ಷ ಸಾ.ಶ 1600 ಡಿಸೆಂಬರ 31. ಈ ಕಂಪನಿಗೆ ಪೂರ್ವದ ದೇಶಗಳಲ್ಲಿ ವ್ಯಾಪಾರ ನಡೆಸಲು ಪರವಾನಿಗೆಯನ್ನು ನೀಡಿದವರು ಇಂಗ್ಲೆಂಡ್ ನ ರಾಣಿ ಎಲಿಜಬೆತ್.
ಉತ್ತರ:
• ಸಾ. ಶ 1613
• ಮೊಗಲ್ ಸಾಮ್ರಾಟ ಜಹಾಂಗಿರ್
ಉತ್ತರ:
• ಮದ್ರಾಸನಲ್ಲಿ ಸೆಂಟ್ ಜಾರ್ಜ್ ಪೋರ್ಟ
• ಕಲ್ಕತ್ತಾ ಸಮೀಪದ ಪೋರ್ಟ್ ವಿಲಿಯಂ ಕೋಟೆ
ಉತ್ತರ:
• ಸಾ.ಸ 1664
• ಸೂರತ್
ಉತ್ತರ:
• ಡೂಪ್ಲೆ
• ದಕ್ಷಿಣ ಭಾರತದ ಮೇಲೆ
• ಲಾಬೋರ್ಡಿನಾ ಎಂಬ ಫ್ರೆಂಚ್ ಸೇನಾ ಮುಖ್ಯಸ್ಥನು ಬ್ರಿಟಿಷರಿಂದ ಮದ್ರಾಸನ್ನು ವಶಪಡಿಸಿಕೊಂಡನು.
• ಬ್ರಿಟಿಷರು ಅನ್ವರುದ್ದೀನನ ಮೊರೆ ಹೋದರು ಅನ್ವರುದ್ದೀನನ ಸೈನ್ಯ ಸೋತಿತು.
• ಲಾಬೋರ್ಡಿನನು ಬ್ರಿಟಿಷರಿಂದ ಹಣ ಪಡೆದು ಮದ್ರಾಸನ್ನು ಬಿಟ್ಟುಕೊಟ್ಟನು.
• ಡೂಪ್ಲೆಯು ಮದ್ರಾಸನ್ನು ಮತ್ತೆ ಪಡೆಯಲು ವಿಫಲ ಪ್ರಯತ್ನವನ್ನು ನಡೆಸಿದನು ಅಂತಿಮವಾಗಿ ಯೂರೋಪಿನಲ್ಲಿ ನಡೆದ “ಏಕ್ಸ್ -ಲಾ-ಚಾಫೆಲ್ ಒಪ್ಪಂದದೊಂದಿಗೆ ಈ ಯುದ್ಧ ಮುಕ್ತಾಯವಾಯಿತು.
ಉತ್ತರ:
• ಫ್ರೆಂಚರು ಅಸಫ್ ಜಾನ ಮಗನಾದ ಸಲಾಬತ್‌ಜಂಗನನ್ನು ಹೈದಾರಾಬಾದಿನ ನಿಜಾಮನಾಗಿ ಮಾಡಿದರು. ಆತನ ರಕ್ಷಣೆಗಾಗಿ ಬುಸ್ಸಿ ಎಂಬ ಅಧಿಕಾರಿಯನ್ನು ನೇಮಿಸಿದರು. ಮತ್ತೊಂದು ಕಡೆ ಫ್ರೆಂಚರ ಬೆಂಬಲದಿಂದ ಚಂದಾಸಾಹೇಬನ್ನು ಕರ್ನಾಟಿಕ್‌ನ ನವಾಬನಾಗಿದ್ದನು.
• ರಾಬರ್ಟ್ ಕ್ಲೈವ್ ನು ಕರ್ನಾಟಕ ರಾಜಧಾನಿ ಆರ್ಕಾಟಿನ ಮೇಲೆ ಅಕ್ರಮಣ ಮಾಡಿ ಫ್ರೆಂಚರನ್ನು ಮತ್ತು ಚಂದಾಸಾಹೇಬನನು ಸೋಲಿಸಿ ಕೊಂದನು.
• ಈ ಯುದ್ಧವು “ಪಾಂಡಿಚೇರಿ” ಒಪ್ಪಂದದೊಂದಿಗೆ ಮುಕ್ತಾಯವಾಯಿತು.
• ಈ ಯುದ್ಧವು ಬ್ರಿಟಿಷರಿಗೆ ಪ್ರತಿಷ್ಠೆ ಹಾಗೂ ಫ್ರೆಂಚರಿಗೆ ಹಿನ್ನಡೆಯಾಯಿತು.
• ಅನ್ವರುದ್ದೀನನ ಮಗನಾದ ಮಹಮ್ಮದ್ ಅಲಿಯನ್ನು ಕರ್ನಾಟಕನ ನವಾಬನನ್ನಾಗಿ ಮಾಡಿದರು.
ಉತ್ತರ:
• ಫ್ರೆಂಚರ ಕೌಂಟ-ಡಿ-ಲಾಲಿಯು 1760ರಲ್ಲಿ ಬ್ರಿಟಿಷರ್ ವಾಂಡಿವಾಷ ಕೋಟೆಗೆ ಮುತ್ತಿಗೆ ಹಾಕಿದನು.
• ಬ್ರಿಟಿಷ್ ಸೇನಾಧಿಕಾರಿ ಸರ್ ಐರ್ ಕೂಟನು ಫ್ರೆಂಚರನ್ನು ಸೋಲಿಸಿದನು.
• ಬುಸ್ಸಿಯನ್ನು ಸೆರೆಹಿಡಿದನು.
• ಸರ್ ಐರ್ ಕೂಟ ಫ್ರೆಂಚರ ರಾಜಧಾನಿ ಪಾಂಡಿಚೇರಿಗೂ ಮುತ್ತಿಗೆ ಹಾಕಿದನು ಅಲ್ಲಿ ಲಾಲಿಯು ಶರಣನಾದನು.
• ಪ್ಯಾರಿಸ ಒಪ್ಪಂದದೊಂದಿಗೆ ಈ ಯುದ್ಧ ಮುಕ್ತಾಯವಾಯಿತು.
ಉತ್ತರ:
• ಫ್ರೆಂಚರು ಭಾರತದಲ್ಲಿನ ತಮ್ಮ ಎಲ್ಲಾ ನೆಲೆಗಳನ್ನು ಕಳೆದುಕೊಂಡರು.
• 1763 ರಲ್ಲಿ “ಪ್ಯಾರಿಸ ಒಪ್ಪಂದದ ಪ್ರಕಾರ ಫ್ರೆಂಚರಿಗೆ ಪಾಂಡಿಚೇರಿಯನ್ನು ಹಿಂತಿರುಗಿಸಲಾಯಿತು.
ಉತ್ತರ:
ಕಾರಣಗಳು :-
• ದಸ್ತಕಗಳ ದುರುಪಯೋಗ
• ನವಾಬನ ಅನುಮತಿ ಇಲ್ಲದೆ ಬ್ರಿಟೀಷರು ಪೋರ್ಟ ವಿಲಿಯಂ ಕೋಟೆ ಬಲಪಡಿಸಿಕೊಂಡದ್ದು.
• ಕಪ್ಪು ಕೋಣೆ ದುರಂತ.
ಪರಿಣಾಮ :-
• ಸಿರಾಜ್ ಉದ್ ದೌಲನನ್ನು ಸೆರೆಹಿಡಿದು ಕೊಲ್ಲಲಾಯಿತು.
• ಭಾರತೀಯರಲಿದ್ದ ಅನೈಕ್ಯತೆ, ಅಸಂಘಟನೆ ಹಾಗೂ ಲೋಭಿತನವನ್ನು ಪ್ರದರ್ಶಿಸಿತು.
• ಮೀರ್ ಜಾಫರ್ ಬಂಗಾಳದ ನವಾಬನಾದನು
ಉತ್ತರ:
• ಮೀರ ಖಾಸಿಂನ ಒಕ್ಕೂಟ ಸೈನ್ಯಕ್ಕೆ ಸೋಲಾಯಿತು.
• ಎರಡನೇ ಷಾ ಆಲಂ ಬ್ರಿಟೀಷರಿಗೆ ಬಂಗಾಳದ ಮೇಲಿನ ದಿವಾನಿ ಹಕ್ಕುನ್ನು ನೀಡಿದನು.
• ಬ್ರಿಟಿಷರು ಬಂಗಾಳ ಬಿಹಾರ, ಓರಿಸ್ಸಾದ ನಿಜವಾದ ಒಡೆಯರೆಂದು ದೃಢವಾಯಿತು.
ಉತ್ತರ:
• ರಾಬರ್ಟ ಕ್ಲೈವ್ ನು ಬಂಗಾಳದಲ್ಲಿ ದ್ವಿ ಪ್ರಭುತ್ವ ನೀತಿಯನ್ನು ಜಾರಿಗೆ ತಂದನು
• ಈ ಪದ್ಧತಿಯಂತೆ ಬ್ರಿಟಿಷ್‌ರು ಭೂ ಕಂದಾಯ ವಸೂಲಿ ಮಾಡುವ ಹಕ್ಕನ್ನು ಹೊಂದಿದ್ದರು.
• ಆದರೆ ನವಾಬವನು ಆಡಳಿತ, ನ್ಯಾಯ ತೀರ್ಮಾನ, ಆಡಳಿತಾತ್ಮಕ ಕಾರ್ಯಗಳನ್ನು ನಿರ್ವಹಿಸುತ್ತಿದ್ದನು.
No comments:
Post a Comment
If you have any doubts please let me know