27 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
27th February 2023 Daily Top-10 General Knowledge Questions and Answers
27 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
27th February 2023 Daily Top-10 General Knowledge Questions and Answers
1. ಸ್ವಚ್ಛ ನೀರಿನ ಕೊಳ ಅಥವಾ ಬಾವಿಯಲ್ಲಿ ಅದರ ತಳಭಾಗ ನಿಜವಾಗಿ ಇರುವುದಕ್ಕಿಂತ ಸ್ವಲ್ಪ ಮೇಲೆ ಇರುವಂತೆ ಕಾಣಲು ಕಾರಣವೇನು?
- ಬೆಳಕಿನ ವಕ್ರಿಭವನ
2. ಸೂರ್ಯನ ಬೆಳಕಿನ 7 ಬಣ್ಣಗಳ ರೋಹಿತದಲ್ಲಿ ಹೆಚ್ಚು ಬಾಗುವ ಬಣ್ಣ ಯಾವುದು?
- ನೇರಳೆ ಬಣ್ಣ
3. ಸೂರ್ಯನ ಬೆಳಕಿನ 7 ಬಣ್ಣಗಳ ರೋಹಿತದಲ್ಲಿ ಕಡಿಮೆ ಬಾಗುವ ಬಣ್ಣ ಯಾವುದು?
- ಕೆಂಪು ಬಣ್ಣ
4. ವಾಹನಗಳಲ್ಲಿ ಹಿನ್ನೋಟದ ದರ್ಪಣಗಳಿಗೆ ಯಾವ ದರ್ಪಣ ಬಳಸುತ್ತಾರೆ?
- ಪೀನದರ್ಪಣ
5. "ಕಣ್ಣು ಮತ್ತು ವಸ್ತುಗಳ ನಡುವಿನ ಜಾಗದಲ್ಲಿ ನಡೆಯುವ ಒಂದು ವಿಧ್ಯಮಾನವೇ ಬೆಳಕು" ಎಂದು ಹೇಳಿದರು ಯಾರು?
- ಅರಿಸ್ಟಾಟಲ್ (ಕ್ರಿ.ಪೂ.384-322)
6. ಬೆಳಕಿನ ಕಣ ಸಿದ್ಧಾಂತವನ್ನು ಪ್ರತಿಪಾದಿಸಿದವರು ಯಾರು?
- ಐಸಾಕ್ ನ್ಯೂಟನ್
7. ಬೆಳಕಿನ ತರಂಗ ಸಿದ್ಧಾಂತವನ್ನು ಪ್ರತಿಪಾದಿಸಿದವರು ಯಾರು?
- ಕ್ರಿಶ್ಚಿಯನ್ ಹೈಗನ್ಸ್
8. ಸಿ. ವಿ. ರಾಮನ್ನರು ನೊಬೆಲ್ ಪಾರಿತೋಷಕ ಪಡೆದಿದ್ದು ಯಾವಾಗ?
- 1930 ರಲ್ಲಿ
9. ರಾಷ್ಟ್ರೀಯ ವಿಜ್ಞಾನ ದಿನವನ್ನು ಯಾವಾಗ ಆಚರಿಸಲಾಗುತ್ತದೆ?
- ಫೆಬ್ರವರಿ 28
10. ಸೂರ್ಯನ ಸಂಕೀರ್ಣ ಬೆಳಕಿನಲ್ಲಿ ಕಡಿಮೆ ತರಂಗ ದೂರ ಹೊಂದಿರುವ ಬಣ್ಣ ಯಾವುದು?
- ನೀಲಿ ಬಣ್ಣ
No comments:
Post a Comment
If you have any doubts please let me know