20 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
20th February 2023 Daily Top-10 General Knowledge Questions and Answers
20 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
20th February 2023 Daily Top-10 General Knowledge Questions and Answers
1. ಸಂವಿಧಾನದ ಕೈಗನ್ನಡಿ ಎಂದು ಯಾವುದನ್ನು ಕರೆಯಲಾಗುತ್ತದೆ?
- ಪ್ರಸ್ತಾವನೆ (Preamble)
2. 'ಪ್ರಸ್ತಾವನೆ'ಯನ್ನು ಸಂವಿಧಾನದ ರಚನಾ ಸಭೆ ಯಾವಾಗ ಅಂಗೀಕರಿಸಿತು?
- ಜನವರಿ 22, 1947
3. 'ಸಮಾಜವಾದ ' & ' ಜಾತ್ಯಾತೀತತೆ' ಎಂಬ ಪದವನ್ನು ಪ್ರಸ್ತಾವನೆಗೆ ಯಾವಾಗ ಸೇರ್ಪಡೆ ಮಾಡಲಾಯಿತು?
- 1976 ರಲ್ಲಿ ಸಂವಿಧಾನದ 42 ನೇ ತಿದ್ದುಪಡಿ ಮೂಲಕ
4. ಯಾವ ಪ್ರಕರಣದ ಆಧಾರದ ಮೇಲೆ ಸರ್ವೋಚ್ಚ ನ್ಯಾಯಾಲಯವು 'ಪ್ರಸ್ತಾವನೆ ಸಂವಿಧಾನದ ಒಂದು ಭಾಗವಲ್ಲ' ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ?
- ಬೆರುಬಾರಿ ಒಕ್ಕೂಟ ಪ್ರಕರಣ (1960)
5. ಪ್ರಸ್ತಾವನೆಯನ್ನು ಇಲ್ಲಿವರೆಗೂ ಎಷ್ಟು ಬಾರಿ ತಿದ್ದುಪಡಿ ಮಾಡಲಾಗಿದೆ?
- 1976ರ 42ನೇ ತಿದ್ದುಪಡಿ ಕಾಯ್ದೆ ಮೂಲಕ ಒಂದು ಬಾರಿ
6. " ಭಾರತ ಸಂವಿಧಾನದ ಅತಿ ಮುಖ್ಯ ಭಾಗವೆಂದರೆ ಪ್ರಸ್ತಾವನೆಯಾಗಿದೆ. ಇದು ಸಂವಿಧಾನದ ಹೃದಯ ಹಾಗೂ ಒಡವೆಯಿದ್ದಂತೆ ಮತ್ತು ಅತ್ಯಂತ ವೈಭವದ ಹಾಗೂ ಸೊಗಸಾದ ಕಾವ್ಯವಿದ್ದಂತೆ " ಎಂದು ಪ್ರಸ್ತಾವನೆಯ ಬಗ್ಗೆ ವರ್ಣಿಸಿದವರು ಯಾರು?
- ಠಾಕೂರ್ ದಾಸ್ ಭಾರ್ಗವ
7. ಕೆ.ಎಂ.ಮುನ್ಷಿ ರವರ ಪ್ರಕಾರ ಪ್ರಸ್ತಾವನೆಯನ್ನು ಏನೆಂದು ಕರೆದಿದ್ದಾರೆ?
- "ರಾಜಕೀಯ ಜಾತಕ"
8. ಪ್ರಸ್ತಾವನೆಯನ್ನು ಸಂವಿಧಾನದ ಗುರುತಿನ ಚೀಟಿ (Identity Card of the constitution) ಎಂದು ಕರೆದವರು ಯಾರು?
- ಎನ್. ಎ. ಪಾಲ್ಖಿವಾಲ
9. ಸಂವಿಧಾನದ ಮೊದಲನೆಯ ಭಾಗದಲ್ಲಿ ಕಂಡುಬರುವ 1 ರಿಂದ 4 ನೇ ವಿಧಿಗಳು ಯಾವುದಕ್ಕೆ ಸಂಬಂಧಿಸಿವೆ?
- ಒಕ್ಕೂಟ ಮತ್ತು ಭೂಪ್ರದೇಶಗಳಿಗೆ
10. ಸಂವಿಧಾನದ ಒಂದನೇ ವಿಧಿ ಏನೆಂದು ವಿವರಿಸುತ್ತದೆ?
- ಭಾರತ ಒಂದು ರಾಜ್ಯಗಳ ಒಕ್ಕೂಟ
No comments:
Post a Comment
If you have any doubts please let me know