15 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
15th February 2023 Daily Top-10 General Knowledge Questions and Answers
15 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
15th February 2023 Daily Top-10 General Knowledge Questions and Answers
1. ಪ್ರಸ್ತುತ ಭಾರತದ ಸಂವಿಧಾನವು ಎಷ್ಟು ವಿಧಿಗಳನ್ನೊಳಗೊಂಡಿದೆ ?
- 470 (ಸಂವಿಧಾನ ಜಾರಿಗೆ ಬಂದಾಗ 395)
2. ಭಾರತ ಸಂವಿಧಾನದ ಮೂರನೆಯ ಭಾಗ ಏನನ್ನು ಒಳಗೊಂಡಿದೆ?
- ಮೂಲಭೂತ ಹಕ್ಕುಗಳು
3. ಮೂಲಭೂತ ಹಕ್ಕುಗಳ ರಕ್ಷಕ ಎಂದು ಯಾರನ್ನು ಕರೆಯುತ್ತಾರೆ?
- ಸರ್ವೋಚ್ಚ ನ್ಯಾಯಾಲಯ
4. ರಾಷ್ಟ್ರ ಧ್ವಜವನ್ನು ಸಂವಿಧಾನ ರಚನಾ ಸಭೆ ಯಾವಾಗ ಒಪ್ಪಿಕೊಂಡಿತು?
- 22 ಜುಲೈ 1947
5. ಮೂಲಭೂತ ಕರ್ತವ್ಯಗಳನ್ನು ಎಷ್ಟನೇ ತಿದ್ದುಪಡಿ ಮೂಲಕ ಭಾರತದ ಸಂವಿಧಾನಕ್ಕೆ ಸೇರಿಸಲಾಯಿತು?
- 1976ರ 42ನೇ ತಿದ್ದುಪಡಿ
6. ಮೂಲಭೂತ ಕರ್ತವ್ಯಗಳು ಸಂವಿಧಾನದ ಯಾವ ವಿಧಿಯಡಿಯಲ್ಲಿ ಕಂಡುಬರುತ್ತವೆ?
- 4-ಎ ಭಾಗದಲ್ಲಿನ 51ಎ ವಿಧಿ (11.ಮೂ.ಕ)
7. ಭಾರತ ಸಂವಿಧಾನದ ರಚನಾ ಸಭೆಯು 'ಜನಗಣಮನ ಅಧಿನಾಯಕ ಜಯಹೇ' ಗೀತೆಯನ್ನು ರಾಷ್ಟ್ರಗೀತೆ ಎಂದು ಯಾವಾಗ ಒಪ್ಪಿಕೊಂಡಿತು?
- 24 ಜನವರಿ 1950
8. ಭಾರತ ಸಂವಿಧಾನದ ಎಷ್ಟನೇ ಭಾಗದಲ್ಲಿ 'ರಾಜ್ಯ ನೀತಿ ನಿರ್ದೇಶಕ ತತ್ವಗಳು' ಕಂಡುಬರುತ್ತವೆ?
- ಭಾಗ 4
9. ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಯಾವ ಸಂವಿಧಾನದಿಂದ ಎರವಲು ಪಡೆಯಲಾಗಿದೆ?
- ಐರಿಷ್/ಐರ್ಲೆಂಡ್ ಸಂವಿಧಾನ
10. ರಾಜ್ಯ ನೀತಿ ನಿರ್ದೇಶಕ ತತ್ವಗಳು " ಈ ತತ್ವಗಳು ಸರ್ಕಾರ ಹೇಗೆ ಕಾರ್ಯಪ್ರವೃತ್ತವಾಗಬೇಕು ಎಂಬುದರ ಮಾರ್ಗಸೂಚಿಗಳಾಗಿವೆ" ಎಂದು ಅಭಿಪ್ರಾಯ ವ್ಯಕ್ತಪಡಿಸಿದರು ಯಾರು?
- ಡಾ|| ಬಿ. ಆರ್. ಅಂಬೇಡ್ಕರ್
No comments:
Post a Comment
If you have any doubts please let me know