13 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
13th February 2023 Daily Top-10 General Knowledge Questions and Answers
13 ಫೆಬ್ರವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
13th February 2023 Daily Top-10 General Knowledge Questions and Answers
1. ಸಂವಿಧಾನ ರಚನಾ ಸಭೆಯು ಯಾವಾಗ ನಡೆಯಿತು?
- 09 ಡಿಸೆಂಬರ್ 1946 ರಂದು.
2. ‘ಡಾ|| ರಾಜೇಂದ್ರ ಪ್ರಸಾದ್' ರವರನ್ನು ಸಂವಿಧಾನ ರಚನಾ ಸಭೆಯ ಅಧ್ಯಕ್ಷರನ್ನಾಗಿ ಯಾವಾಗ ಚುನಾಯಿಸಲಾಯಿತು?
- 11 ಡಿಸೆಂಬರ್ 1946.
3. ‘ಡಾ|| ಬಿ. ಆರ್. ಅಂಬೇಡ್ಕರ್' ರವರ ಅಧ್ಯಕ್ಷತೆಯಲ್ಲಿ ಕರಡು ಸಮಿತಿಯನ್ನು ಯಾವಾಗ ರಚಿಸಲಾಯಿತು?
- 29 ಆಗಸ್ಟ್ 1947.
4. ಸಂವಿಧಾನದ ಕರಡನ್ನು ಪರಿಶೀಲಿಸುವ ವಿಶೇಷ ಸಮಿತಿಯ ಅಧ್ಯಕ್ಷರು ಯಾರಾಗಿದ್ದರು?
- ಅಲ್ಲಾಡಿ ಕೃಷ್ಣಸ್ವಾಮಿ ಅಯ್ಯರ್.
5. ಐಎನ್‌ಸಿ ಯು ಲಾಹೋರ್ ಅಧಿವೇಶನದಲ್ಲಿ ‘ಪೂರ್ಣ ಸ್ವರಾಜ್ಯ' ವನ್ನು ಪಡೆಯುವ ಗೊತ್ತುವಳಿಯನ್ನು ಯಾವಾಗ ಅಂಗೀಕರಿಸಿತು?
- 31 ಡಿಸೆಂಬರ್ 1929.
6. ಐಎನ್‌ಸಿ (ಭಾರತ ರಾಷ್ಟ್ರೀಯ ಕಾಂಗ್ರೆಸ್) ‘ಪೂರ್ಣ ಸ್ವರಾಜ್' ದಿನವನ್ನು ಯಾವಾಗ ಆಚರಿಸಿತು?
- 26 ಜನವರಿ 1930.
7. “ದಿ ಇಂಡಿಯನ್ ಕಾನ್‌ಸ್ಟಿಟ್ಯೂಶನ್-ಕಾರ್ನರ್ ಸ್ಟೋನ್ ಆಫ್ ಎ ನೇಷನ್" ಎಂಬ ಕೃತಿಯ ಕರ್ತೃ ಯಾರು?
- ಗ್ರಾನ್ ವಿಲ್ ಆಸ್ಟಿನ್
8. ಭಾರತದ ರಚನಾ ಸಮಿತಿಯು “ಅದು ಒಂದು ಹಿಂದುಗಳ ಸಂಸ್ಥೆ” ಎಂದು ಕರೆದವರು ಯಾರು?
- ಲಾರ್ಡ್ ವಿಸ್ಕೌಂಟ್ ಸೈಮನ್
9. “ಸಂವಿಧಾನ ರಚನಾ ಸಮಿತಿಯು ಭಾರತದಲ್ಲಿನ ಒಂದೇ ಒಂದು ಪ್ರಮುಖ ಸಮುದಾಯವನ್ನು ಪ್ರತಿನಿಧಿಸಿತ್ತು” ಎಂದು ಹೇಳಿದರು ಯಾರು?
- ವಿನ್ ಸ್ಟನ್ ಚರ್ಚಿಲ್
10. ಭಾರತದ ಸಂವಿಧಾನ ರಚಿಸಲು ತೆಗೆದುಕೊಂಡ ಕಾಲಾವಧಿ ಎಷ್ಟು?
- 2 ವರ್ಷ 11 ತಿಂಗಳು 18 ದಿನಗಳು
No comments:
Post a Comment
If you have any doubts please let me know