ಕಾಶ್ಮೀರದ ಕಾರ್ಕೋಟ ಸಾಮ್ರಾಜ್ಯ
ವಿಶ್ವವೇ ಬೆರಗಾಗುವಂತೆ ಆಡಳಿತವನ್ನು ನಡೆಸಿದ, ಮಾದರಿ ರಾಜ್ಯವನ್ನು ಕಟ್ಟಿದ ಮತ್ತು ಅಸಾಧ್ಯವಾದುದನ್ನು ಸಾಧಿಸಿದ ಭಾರತದ ರಾಜವಂಶಗಳಲ್ಲಿ ಕಾಶ್ಮೀರದ ಕಾರ್ಕೋಟ ವಂಶಸ್ಥರು ಒಬ್ಬರು. 625ರಲ್ಲಿ ರಾಜಾ ದುರ್ಲಭವರ್ಧನನಿಂದ ಸ್ಥಾಪಿತವಾದ ಕಾರ್ಕೋಟ ಮನೆತನ ಆ ಕಾಲದ ಭಾರತದ ಬಲಿಷ್ಠ ಸಂಸ್ಥಾನಗಳಲ್ಲಿ ಒಂದಾಗಿತ್ತು.
230 ವರ್ಷ (625 - 855) ಅಸ್ತಿತ್ವದಲ್ಲಿದ್ದ ಕಾರ್ಕೋಟ ಸಾಮ್ರಾಜ್ಯ ಹಿಮಾಲಯ ಮತ್ತು ಅದರ ತಪ್ಪಲಿನ ಪ್ರದೇಶಗಳಲ್ಲಿ ತನ್ನ ಪ್ರಭಾವವನ್ನು ಬೀರಿದ್ದು ಮಾತ್ರವಲ್ಲದೆ ಮಧ್ಯ ಏಷ್ಯದವರೆಗೂ ವಿಸ್ತರಿಸಿತ್ತು. ಪಾರಸ್ಪೋರ್ ಅಥವಾ ಪರಿಹಾಸಪುರವನ್ನು ರಾಜಧಾನಿಯನ್ನಾಗಿ ಮಾಡಿಕೊಂಡಿದ್ದ ಕಾರ್ಕೋಟರು ಸೂರ್ಯೋಪಾಸಕರಾಗಿದ್ದರು. ಕಾಶ್ಮೀರದ ಗತವೈಭವವನ್ನು ಸಾರುವ ಹೆಸರಾಂತ ಮಾರ್ತಾಂಡ ಸೂರ್ಯ ದೇವಸ್ಥಾನ ಇವರ ಕೊಡುಗೆ.
ಲಲಿತಾದಿತ್ಯ:
ಕಾರ್ಕೋಟ ವಂಶದಲ್ಲಿ ಗಮನ ಸೆಳೆಯುವ ಮತ್ತು ಅತ್ಯಂತ ಪ್ರಭಾವಿ ರಾಜನಾಗಿದ್ದವನೆಂದರೆ 724ರಲ್ಲಿ ಪಟ್ಟಕ್ಕೆ ಬಂದ ಲಲಿತಾದಿತ್ಯ. ಆತನ 36 ವರ್ಷಗಳ ಆಳ್ವಿಕೆಯಲ್ಲಿ ಸಾಮ್ರಾಜ್ಯವು ಇಂದಿನ ಉತ್ತರ ಪ್ರದೇಶ, ಉತ್ತರಾಖಂಡ ಮತ್ತು ಬಿಹಾರದವರೆಗೆ ಹಬ್ಬಿತ್ತು. ಈತನ ಕಾಲವನ್ನು ಕಾರ್ಕೋಟ ವಂಶದ ಚಿನ್ನದ ಯುಗ ಎನ್ನಬಹುದು. ಏಕೆಂದರೆ ಲಲಿತಾದಿತ್ಯನು ಕಲೆ, ಸಂಸ್ಕೃತಿಗಳಿಗೆ ಯಥೇಚ್ಛವಾದ ಪ್ರೋತ್ಸಾಹವನ್ನು ಕೊಟ್ಟನು.
ಶೈವಸಿದ್ಧಾಂತದ ವೈಭವದ ಕಾಲಘಟ್ಟ:
ಕಾಶ್ಮೀರದ ಶೈವಸಿದ್ಧಾಂತದ ಅತ್ಯಂತ ವೈಭವದ ಕಾಲಘಟ್ಟವೆಂದು ಕಾರ್ಕೋಟರ ಕಾಲವನ್ನು ಹೇಳಲಾಗುತ್ತದೆ. ವಸುಗುಪ್ತನ ಶೈವಸೂತ್ರ ಈ ಅವಧಿಯಲ್ಲಿ ರಚನೆಯಾಯಿತು. ಖ್ಯಾತ ತತ್ವಶಾಸ್ತ್ರಜ್ಞ, ಕವಿ ಅಭಿನವಗುಪ್ತ ಕಾರ್ಕೋಟಕರ ಕಾಲದವನಾಗಿದ್ದ. ಶೈವಸೂತ್ರಗಳ ತ್ರಿಕ ಮತ್ತು ಕೌಲ ಸಂಪ್ರದಾಯಗಳು ಈ ಅವಧಿಯಲ್ಲಿ ಉಚ್ಛ್ರಾಯಸ್ಥಿತಿಯನ್ನು ತಲುಪಿದವು. ಹೆಸರಾಂತ ಕವಿಯಾದ ಕಲ್ಹಣನು ಲಲಿತಾಧಿತ್ಯನ ಆಸ್ಥಾನದಲ್ಲಿದ್ದನು.
ಕಲ್ಹಣನ ಪ್ರಮುಖ ಕೃತಿ ರಾಜತರಂಗಿಣಿ.
No comments:
Post a Comment
If you have any doubts please let me know