16 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
16th January 2023 Daily Top-10 General Knowledge Questions and Answers
16 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
16th January 2023 Daily Top-10 General Knowledge Questions and Answers
1. ಅತ್ಯಂತ ಪೂರ್ವ ಮತ್ತು ಅತ್ಯಂತ ಪಶ್ಚಿಮಕ್ಕೆ ಇರುವ ಭಾರತದ ರಾಜ್ಯಗಳು ಯಾವವು?
- ಅರುಣಾಚಲ ಪ್ರದೇಶ ಮತ್ತು ಗುಜರಾತ್
2. "ಎಂಟು ಮೂಲ ಕೈಗಾರಿಕೆಗಳ ಸೂಚಿ" ಯಲ್ಲಿ ಯಾವುದಕ್ಕೆ ಹೆಚ್ಚಿನ ಮೌಲಿಕ ತೂಕ ನೀಡಲಾಗಿದೆ?
- ವಿದ್ಯುತ್ ಉತ್ಪಾದನೆ
3. ಭಾರತದ ರಾಷ್ಟ್ರೀಯ ಜಲಚರ ಪ್ರಾಣಿ ಯಾವುದು?
- ಗಂಗಾ ಡಾಲ್ಫಿನ್
4. ಭಾರತದಲ್ಲಿ ಮ್ಯಾಂಗ್ರೋವ್ ಕಾಡು, ನಿತ್ಯಹರಿದ್ವರ್ಣ ಅರಣ್ಯ ಮತ್ತು ಎಲೆ ಉದುರುವ ಮರಗಳ ಕಾಡನ್ನು ಹೊಂದಿರುವ ವಲಯ ಯಾವುದು?
- ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
5. ಭಾರತದಲ್ಲಿ ಉಕ್ಕು ಉತ್ಪಾದನಾ ಕೈಗಾರಿಕೆಗೆ ಯಾವುದರ ಆಮದಿನ ಅವಶ್ಯಕತೆ ಇದೆ?
- ಕೋಕಿಂಗ್ ಕೋಲ್ (ಕಲ್ಲಿದ್ದಲು)
16 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
16th January 2023 Daily Top-10 General Knowledge Questions and Answers
6. ಭಾರತದಲ್ಲಿ ಯಾವ ಮಾದರಿಯ ಅರಣ್ಯಗಳಲ್ಲಿ ಸಾಗುವಾನಿ (ಟೀಕ್) ಮರಗಳು ಹೆಚ್ಚು ಕಂಡುಬರುತ್ತವೆ?
- ಉಷ್ಣವಲಯದ ತೇವಾಂಶ ಭರಿತ ಎಲೆ ಉದುರುವ ಅರಣ್ಯಗಳು
7. ಟರ್ಕಿ ದೇಶವು ಯಾವ ಸಮುದ್ರಗಳ ಮಧ್ಯೆ ಸ್ಥಿತಗೊಂಡಿದೆ?
- ಕಪ್ಪು ಸಮುದ್ರ ಮತ್ತು ಮೆಡಿಟರೇನಿಯನ್ ಸಮುದ್ರ
8. 10° ಡಿಗ್ರಿ ಚಾನೆಲ್ ಯಾವ ದ್ವೀಪಗಳನ್ನು ಪ್ರತ್ಯೇಕಿಸುತ್ತದೆ?
- ಅಂಡಮಾನ್ ಮತ್ತು ನಿಕೋಬಾರ್
9. ನೀವು ಭಾರತದ ಕೆಲವು ಪ್ರದೇಶಗಳಲ್ಲಿ ಪ್ರಯಾಣಿಸುವಾಗ ಕೆಂಪು ಮಣ್ಣನ್ನು ಕಾಣುತ್ತೀರಿ.ಈ ಬಣ್ಣಕ್ಕೆ ಮುಖ್ಯವಾದ ಕಾರಣ ಏನು?
- ಫೆರಿಕ್ ಆಕ್ಸೈಡ್ ಗಳ ಉಪಸ್ಥಿತಿ
10. ಸಿಕ್ಕಿಂನಿಂದ ಹಾಯ್ದು ಹೋಗುವ ಅಕ್ಷಾಂಶಗಳು ಯಾವ ರಾಜ್ಯದ ಮೂಲಕ ಹಾಯ್ದು ಹೋಗುತ್ತವೆ?
- ರಾಜಸ್ಥಾನ
No comments:
Post a Comment
If you have any doubts please let me know