11 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
11th January 2023 Daily Top-10 General Knowledge Questions and Answers
11 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
11th January 2023 Daily Top-10 General Knowledge Questions and Answers
1. ಕರ್ನಾಟಕದ ಹಾಸನ ಜಿಲ್ಲೆಯಲ್ಲಿರುವ ಇಸ್ರೋ ಘಟಕದಲ್ಲಿ ಯಾವುದಕ್ಕೆ ಸಂಬAಧಿಸಿದ ಕಾರ್ಯ ನಡೆಯುತ್ತದೆ?
- ಉಡಾವಣೆಯ ನಂತರದ ಕಾರ್ಯಾಚರಣೆಗಳು
2. ಕಂಪ್ಯೂಟರ್ ನಲ್ಲಿ ಬಳಸುವ ಕಾಂಪ್ಯಾಕ್ಟ್ ಡಿಸ್ಕ್ ಗಳ ಬರವಣಿಗೆ ಮತ್ತು ಓದುವಿಕೆಯನ್ನು ಮಾಡಲು ಯಾವ ಸಾಧನಗಳನ್ನು ಬಳಸಲಾಗುತ್ತದೆ?
- ಆಯಸ್ಕಾಂತೀಯ ಸೂಚಿಗಳು
3. ಭಾರತದಿಂದ ಉಪಗ್ರಹಗಳನ್ನು ಹೊತ್ತೊಯ್ಯುವ ರಾಕೆಟ್‌ಗಳನ್ನು ಪೂರ್ವ ಕರಾವಳಿಯಿಂದ ಉಡಾಯಿಸಲು ಕಾರಣವೇನು?
- ಭೂಮಿಯು ಪಶ್ಚಿಮದಿಂದ ಪೂರ್ವಕ್ಕೆ ಪರಿಭ್ರಮಿಸುತ್ತದೆ. ಆದ್ದರಿಂದ ಅದು ಉಪಗ್ರಹದ ವೆಲಾಸಿಟಿಯನ್ನು ಹೆಚ್ಚಿಸುತ್ತದೆ.
4. ಸಿಂಧೂ ನಾಗರಿಕತೆಯ ಪ್ರಸಿದ್ಧ ನಿವೇಶನಗಳಲ್ಲೊಂದಾದ ‘ಲೋಥಾಲ್’ನ್ನು ಉತ್ಖನನ ಮಾಡಿದವರು ಯಾರು?
- ಎಸ್. ಆರ್. ರಾವ್
5. ಋಗ್ವೇದ ಕಾಲದ ಆರ್ಯರು ಆರಾಧಿಸುತ್ತಿದ್ದ ಪ್ರಮುಖ ದೈವ ಯಾವುದು?
- ಇಂದ್ರ
11 ಜನೆವರಿ 2023 ಪ್ರತಿದಿನದ ಟಾಪ್-10 ಸಾಮಾನ್ಯ ಜ್ಞಾನದ ಪ್ರಶ್ನೋತ್ತರಗಳು
11th January 2023 Daily Top-10 General Knowledge Questions and Answers
6. ಕೊಡಗಿನಲ್ಲಿ ಬ್ರಿಟಿಷರ ವಿರುದ್ಧ ನಡೆದ ಸಶಸ್ತ್ರದಂಗೆಯ ಮುಂದಾಳತ್ವ ವಹಿಸಿದ್ದವರು ಯಾರು?
- ಕಲ್ಯಾಣ ಸ್ವಾಮಿ
7. ಕರ್ನಾಟಕದಲ್ಲಿ ಬ್ರಹ್ಮ ಸಮಾಜದ ಮೊದಲ ಶಾಖೆ ಎಲ್ಲಿ ಸ್ಥಾಪಿಸಲಾಗಿದೆ?
- ಬೆಂಗಳೂರು
8. ಸವನ್ನಾಗಳೆಂದರೆ?
- ಉಷ್ಣವಲಯದ ಹುಲ್ಲುಗಾವಲುಗಳು
9. ಆರ್ಕ್ಟಿಕ್ ನ ಕೆಲವು ತೀರಗಳನ್ನು ಹಿಮಮುಕ್ತವಾಗಿಸುವ ಪ್ರವಾಹ ಯಾವುದು?
- ಉತ್ತರ ಅಟ್ಲಾಂಟಿಕ್ ಡ್ರಿಫ್ಟ್
10. ಪಶ್ಚಿಮ ಘಟ್ಟಗಳಲ್ಲಿ ಯಾವ ವಿಧದ ಅರಣ್ಯಗಳು ಕಂಡು ಬರುತ್ತವೆ?
- ನಿತ್ಯಹರಿದ್ವರ್ಣ ಕಾಡುಗಳು
No comments:
Post a Comment
If you have any doubts please let me know