ಭಾರತದ ಸಂವಿಧಾನದ ಪರಿಚಯ ನೋಟ್ಸ್-01
* ಒಂದು ದೇಶದ ಮೂಲಭೂತ ಕಾನೂನು & ರಾಜಕೀಯ ದಾಖಲೆಯನ್ನು "ಸಂವಿಧಾನ" ಎನ್ನುವರು.
* ಸಂವಿಧಾನವು "ಪೌರರ ಹಕ್ಕು, ಕರ್ತವ್ಯಗಳು, ಸರಕಾರ ಮತ್ತು ಪ್ರಜೆಗಳ ನಡುವಿನ " ಸಂಬಂಧವನ್ನು ತಿಳಿಸುವ ಮಹತ್ವದ ದಾಖಲೆಯಾಗಿದೆ.
* 16ನೇ ಶತಮಾನದಲ್ಲಿ ಸಂವಿಧಾನ ಎಂಬ ಪದವನ್ನು ಪ್ರಥಮ ಬಾರಿಗೆ ಬಳಸಿದವರು 2ನೇ ಹೆನ್ರಿ.
* ಜಗತ್ತಿನ ಅತ್ಯಂತ ಹಳೆಯ ಸಂವಿಧಾನ: ಸ್ಯಾನ್ ಮರಿನೋ ಸಂವಿಧಾನ
* ವಿಶ್ವದ ಮೊದಲ ಲಿಖಿತ ಸಂವಿಧಾನ ಅಮೇರಿಕಾ ಸಂವಿಧಾನ
* ವಿಶ್ವದ ಅತ್ಯಂತ ದೊಡ್ಡ ಸಂವಿಧಾನ ಅಲ್ಬಮ್ ಸಂವಿಧಾನ (ಅಲ್ಬಮ್ ಎಂಬುದು ಅಮೇರಿಕಾದ ಒಂದು ಚಿಕ್ಕ ರಾಜ್ಯವಾಗಿದೆ.
* ಪ್ರಜಾಪ್ರಭುತ್ವ ರಾಷ್ಟ್ರಗಳಲ್ಲಿ ವಿಶ್ವದ ಅತಿ ದೊಡ್ಡ ಸಂವಿಧಾನ : ಭಾರತದ ಸಂವಿಧಾನ
* ಭಾರತ ಸಂವಿಧಾನದ ಪಿತಾಮಹ ಡಾ.ಬಿ.ಆರ್. ಅಂಬೇಡ್ಕರ
* ಅಮೇರಿಕಾ ಸಂವಿಧಾನದ ಪಿತಾಮಹ : ಜೆಮ್ಸ್ ಮ್ಯಾಡಿಸನ್
* ಒಂದು ದೇಶ ಹೊಸ ಸಂವಿಧಾನವನ್ನು ರಚಿಸಿಕೊಳ್ಳುವ ಅಗತ್ಯತೆ ಈ ಕೆಳಗಿನ 3 ಸಂದರ್ಭಗಳಲ್ಲಿ ಉದ್ಭವಿಸುತ್ತದೆ
1]. ಒಂದು ಬೃಹತ್ ಸಾಮಾಜಿಕ ಕ್ರಾಂತಿಯಾದಾಗ
2]. ಒಂದು ದೇಶ ಪರಕೀಯರ ಆಡಳಿತದಿಂದ ಮುಕ್ತವಾದಾಗ
3]. ಸಣ್ಣ ಸಣ್ಣ ಪ್ರಾಂತ್ಯಗಳು ಒಂದು ಗುಡಿ ಒಂದು ಸ್ವತಂತ್ರ ರಾಷ್ಟ್ರ ಉದಯಿಸಿದಾಗ,
* ಮೇಲಿನ 2ನೇ ವರ್ಗಕ್ಕೆ ಸೇರಿದ ಭಾರತ ಸಂವಿಧಾನವು ಚುನಾಯಿತ ಸಂವಿಧಾನ ರಚನಾ ಸಭೆಯ ಸದಸ್ಯರಿಂದ ರಚನೆಯಾಗಿದೆ.
* ಭಾರತ ಸಂವಿಧಾನದ ಬೆಳವಣಿಗೆಯ ಹಿನ್ನೆಲೆ :
* ಭಾರತ ಸಂವಿಧಾನದ ಬೆಳವಣಿಗೆಯನ್ನು ಈ ಕೆಳಗಿನ ನಾಲ್ಕು ಹಂತಗಳಲ್ಲಿ ವಿಂಗಡಿಸಲಾಗಿದೆ.
1]. ಭಾರತ ಬ್ರಿಟಿಷರ ಆಗಮನ
2]. ಕಂಪನಿ ಆಡಳಿತ
3]. ಬ್ರಿಟನ್ ರಾಣಿ ಆಡಳಿತ
4]. ಗಾಂಧಿಯುಗ
1] ಭಾರತಕ್ಕೆ ಬ್ರಿಟಿಷರ ಆಗಮನ :
* ಭಾರತಕ್ಕೆ ಬಂದ ಮೊದಲ ಬ್ರಿಟಿಷ್ ವ್ಯಾಪಾರಿ ಜಾನ್ ಮಿಲಡನ್ ಹಾಲ್
* ಭಾರತದಲ್ಲಿ ಬ್ರಿಟಿಷರ ಮೊದಲು ಹೊಸ ಕೇಂದ್ರ ಸೂರತ್
* ಡಿಸೆಂಬರ್-31, 1600 ರಂದು ಬ್ರಿಟನ್ ರಾಣಿ "1ನೇ ಎಲಿಜೆಬತ್" ಈಸ್ಟ ಇಂಡಿಯಾ ಕಂಪನಿಗೆ ಭಾರತದಲ್ಲಿ ವ್ಯಾಪಾರ ಮಾಡಲು ಅನುಮತಿ ನೀಡಿದಳು.
* 1726 ರಲ್ಲಿ ಕಂಪನಿಯು ಭಾರತದಲ್ಲಿ ತಾನು ವಶಪಡಿಸಿಕೊಂಡ ಪ್ರದೇಶಗಳ ಮೇಲೆ ಕಾನೂನು ಮಾಡಲು ಪ್ರಾರಂಭಿಸಿತು.
* 1757 ರಲ್ಲಿ ಪ್ಲಾಸಿ ಕದನ
* 1764ರಲ್ಲಿ ಬಕ್ಸಾರ್ ಕದನ
* ಈ ಮೇಲಿನ "ಎರಡು ಕದನಗಳು" ಭಾರತದಲ್ಲಿ ಬ್ರಿಟಿಷ್ ಕಂಪನಿಯ ಆಡಳಿತಕ್ಕೆ ಭದ್ರ ಬುನಾದಿ ಹಾಕಿಕೊಟ್ಟವು.
2] ಬ್ರಿಟಿಷ ಕಂಪನಿ ಆಡಳಿತ :
* ಬ್ರಿಟನ್ ಕಂಪನಿಯು "1773 ರಿಂದ 1857 ರವರೆಗೆ ಭಾರತದಲ್ಲಿ ಹಲವಾರು ಕಾಯ್ದೆಗಳನ್ನು ಜಾರಿಗೊಳಿಸಿತು.
1]. 1773 ರ ರೆಗ್ಯುಲೆಟಿಂಗ್ ಕಾಯ್ದೆ
2]. 1784ರ ಪಿಟ್ ಇಂಡಿಯಾ ಕಾಯ್ದೆ
3]. 1793 ರ ಚಾರ್ಟರ್ ಕಾಯ್ದೆ
4]. 1813 ರ ಚಾರ್ಟರ್ ಕಾಯ್ದೆ
5]. 1833 ರ ಚಾರ್ಟರ್ ಕಾಯ್ದೆ
6]. 1853 ರ ಚಾರ್ಟರ್ ಕಾಯ್ದೆ
3] ಬ್ರಿಟನ್ ರಾಣಿ ಆಡಳಿತ :
* 1857 ಸಿಪಾಯಿ ದಂಗೆಯ ನಂತರ ಭಾರತದಲ್ಲಿ ಬ್ರಿಟಿಷ್ ಕಂಪನಿ ಆಡಳಿತ ಕೊನೆಗೊಂಡಿತು. ನಂತರ ಬ್ರಿಟನ್ ರಾಣಿ "ವಿಕ್ಟೋರಿಯಾ" ಭಾರತ ಸರ್ಕಾರದ ಮುಖ್ಯಸ್ಥಳಾದಳು.
1]. 1858 ರ ಭಾರತ ಸರ್ಕಾರ ಕಾಯ್ದೆ
2]. 1861 ರ ಭಾರತೀಯ ಪರಿಷತ್ತು ಅಧಿನಿಯಮ,
3]. 1892 ರ ಭಾರತೀಯ ಪರಿಷತ್ತು ಅಧಿನಿಯಮ
4]. 1909 ರ ಭಾರತೀಯ ಪರಿಷತ್ ಕಾಯ್ದೆ [ಮಿಂಟೋ - ಮಾರ್ಲೆ ಸುಧಾರಣೆಗಳು)
5]. 1919 ರ ಭಾರತ ಸರ್ಕಾರ ಕಾಯ್ದೆ[ಮಾಂಟೆಗೊ - ಚೆಲಫರ್ಡ್ ಸುಧಾರಣೆಗಳು]
6]. 1935ರ ಭಾರತ ಸರ್ಕಾರ ಕಾಯ್ದೆ
4] ಗಾ೦ಧಿಯುಗ :
* ಜನವರಿ-9, 1915 ರಂದು ದಕ್ಷಿಣ ಆಫ್ರಿಕಾದಿಂದ ಗಾಂಧೀಜಿಯವರು ಭಾರತಕ್ಕೆ ಬಂದರು.
* 1915ರಲ್ಲಿ ಸಾಬರಮತಿ ಆಶ್ರಮವನ್ನು ಪ್ರಾರಂಭಿಸಿದರು.
* 1916ರಲ್ಲಿ ರಾಷ್ಟ್ರೀಯ ಕಾಂಗ್ರೆಸ್ ಸೇರಿ 1947 ರವರೆಗೆ "ರಾಷ್ಟ್ರೀಯ ಚಳವಳಿಯ ನಾಯಕತ್ವ ವಹಿಸಿಕೊಂಡರು.
* ಗಾಂಧಿ ಯುಗದಲ್ಲಿ ನಡೆದ ಪ್ರಮುಖ ಘಟನೆಗಳು
1) ಚಂಪಾರಣ್ಯ ಸತ್ಯಾಗ್ರಹ : 1917
2] ಅಹ್ಮದಾಬಾದ್ ಹತ್ತಿ ಗಿರಣಿ ಹೋರಾಟ : 1918
3] ಜಲಿಯನ್ ವಾಲಾಬಾಗ್ ದುರಂತ ಏಪ್ರಿಲ್-13, 1919
4] ಅಸಹಕಾರ ಚಳವಳಿ : 1920-1922 5] ಸೈಮನ್ ಆಯೋಗ : 1927-1930
6] ಲಾರ್ಡ್ ಇರ್ವಿನ್ ಘೋಷಣೆ : 1928
7] ಮತೀಯ ತೀರ್ಪು ಪ್ರಕಟ : ಅಗಸ್ಟ್-16, 1932,
8] 3 ದುಂಡು ಮೇಜಿನ ಸಮ್ಮೇಳನಗಳು.: 1930, 1931, 1932.
9] ಪೂನಾ ಒಪ್ಪಂದ ಸಪ್ಟೆಂಬರ್-26, 1932,
10] 1935ರ ಭಾರತ ಸರ್ಕಾರ ಕಾಯ್ದೆ
11] 1940 ಆಗಸ್ಟ್ 08 ರ ಕೊಡುಗೆ
12] 1942 ರ ಕ್ರಿಪ್ ಆಯೋಗದ ವರದಿಗಳು
13] 1946 ರ ಕ್ಯಾಬಿನೆಟ್ ಆಯೋಗ ವರದಿ,
14] 1947 ರ ಮೌಂಟ್ ಬ್ಯಾಟನ್ ಯೋಜನೆ
15] 1947 ರ ಭಾರತ ಸ್ವಾತಂತ್ರ್ಯ ಕಾಯ್ದೆ
* ಭಾರತದಲ್ಲಿ ಬ್ರಿಟಿಷರು ಜಾರಿಗೊಳಿಸಿದ ಮೊಟ್ಟ ಮೊದಲ ಕಾಯ್ದೆ 1773 ರೆಗ್ಯುಲೆಟಿಂಗ್ ಕಾಯ್ದೆ * ರೌಲತ್ ಕಾಯ್ದೆ ಜಾರಿಗೆ ಬಂದು ವರ್ಷ : 1919.
* ಭಾರತದ ಮೊದಲ ಬಂಗಾಳದ ಗವರ್ನರ್ ಜನರಲ್ ಲಾರ್ಡ್ ವಾರ್ನ್ ಹೆಸ್ಟಿಂಗ್
* ಮೊದಲ ಭಾರತದ ಗವರ್ನರ್ ಜನರಲ್ : ಲಾರ್ಡ್ ವಿಲಿಯಂ ಬೆಂಟಿಕ್,
* ಭಾರತದ ಮೊದಲ ವೈಸರಾಯ ಲಾರ್ಡ್ ಕ್ಯಾನಿಂಗ್,
* ಭಾರತದ ಪ್ರಪ್ರಥಮ ರಾಜ್ಯ ಕಾರ್ಯದರ್ಶಿ ಲಾರ್ಡ್ ಸ್ಪ್ಯಾನಿ
* ನಾಗರಿಕ ಸೇವಾ ಪರೀಕ್ಷೆ ಪಾಸಾದ ಮೊದಲ ಭಾರತೀಯ: ಸತ್ಯಂಧ್ರನಾಥ ಠಾಗೂರ್
* ವೈಸರಾಯರ ಕಾರ್ಯಕಾರಿ ಮಂಡಳಿಗೆ ಆಯ್ಕೆಯಾದ ಮೊದಲ ಭಾರತೀಯ ಸತ್ಯೇಂದ್ರನಾಥ ಸಿನ್ಹಾ
* ಭಾರತದಲ್ಲಿ ಬ್ರಿಟಿಷರು ಜಾರಿಗೊಳಿಸಿದ ಮೊದಲ ಶೈಕ್ಷಣಿಕ ಕಾಯ್ದೆ : 1813ರ ಚಾರ್ಟರ್ ಕಾಯ್ದೆ
* ಕ್ರಿಪ್ಸ್ ಆಯೋಗದ ವರದಿಗಳನ್ನು ಮಹಾತ್ಮ ಗಾಂಧೀಜಿಯವರು "ಮುಳುಗುತ್ತಿರುವ ಬ್ಯಾಂಕಿನ ಪೋಸ್ಟ ಡೇಟೆಡ್ ಚೆಕ್" ಎಂದು ಕರೆದಿದ್ದಾರೆ.
* ಭಾರತ ಸಂವಿಧಾನದ ''ನೀಲಿ ನಕ್ಷೆ'' ಎಂದು ಕರೆಯಲ್ಪಡುವ ಕಾಯ್ದೆ : 1935 ರ ಭಾರತ ಸರ್ಕಾರ ಕಾಯ್ದೆ
No comments:
Post a Comment
If you have any doubts please let me know