ಭಾರತದ ಅತ್ಯುನ್ನತ ನಾಗರಿಕ ಪ್ರಶಸ್ತಿ: ಭಾರತ ರತ್ನ ಪ್ರಶಸ್ತಿ ಸಂಪೂರ್ಣ ಮಾಹಿತಿ
ಇವತ್ತಿನ ತರಗತಿಯ ವಿಶೇಷತೆಗಳು
ಸಾಮಾನ್ಯ ಜ್ಞಾನದ ಈ ತರಗತಿ ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಬಹಳಷ್ಟು ಉಪಯುಕ್ತ.
ಇಲ್ಲಿರುವ ಮಾಹಿತಿ ಒಂದೇ ಪುಸ್ತಕದಲ್ಲಿ ಸಿಗೋದಿಲ್ಲ.
100 % ಸಂಪೂರ್ಣ ಉಚಿತ ತರಗತಿ, ಯಾವುದೇ ಹಣ ಕೊಡಬೇಕಾಗಿಲ್ಲ.
ಪಠ್ಯಕ್ರಮ ಆಧರಿಸಿ ಎಚ್ಚರಿಕೆಯಿಂದ ವ್ಯವಸ್ಥಿತವಾಗಿ ತಯಾರಿಸಿದ ಮಾಹಿತಿ.
ಒಂದು ವೀಡಿಯೋ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಮಹತ್ವದ ಮಾಹಿತಿ ಒದಗಿಸುತ್ತದೆ.
ಉಚಿತ ತರಗತಿಗಳಲ್ಲಿ ಅತ್ಯಂತ ಮಹತ್ವದ ಉಪಯುಕ್ತ ಮಾಹಿತಿ ನೀಡುವ ಏಕೈಕ ಯೂಟ್ಯೂಬ್ ಚಾನೆಲ್ ಎಜ್ಯುಟ್ಯೂಬ್ ಕನ್ನಡ.
ಭಾರತ ರತ್ನ ಪ್ರಶಸ್ತಿ: ಸಂಪೂರ್ಣ ಮಾಹಿತಿ
ಭಾರತ ರತ್ನ ಪ್ರಶಸ್ತಿಯ ಸಂಪೂರ್ಣ ಮಾಹಿತಿ
- ದೇಶದ ಅತ್ಯುನ್ನತ ನಾಗರಿಕ ಪ್ರಶಸ್ತಿ ಭಾರತ ರತ್ನ ಪ್ರಶಸ್ತಿ.
- ಕಲೆ, ವಿಜ್ಞಾನ, ತಂತ್ರಜ್ಞಾನ, ಕ್ರೀಡೆ, ಸಾಹಿತ್ಯ, ರಾಜಕೀಯ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಸಾಧನೆಗೈದ ವ್ಯಕ್ತಿಗಳನ್ನು ಗುರುತಿಸಿ ನೀಡುವ ದೇಶದ ಅತ್ಯುನ್ನತ ಪ್ರಶಸ್ತಿ ಇದು.
- ಸಂವಿಧಾನದ 18 ನೇ ವಿಧಿಯು ಬಿರುದುಗಳ ರದ್ದತಿಯ ಬಗ್ಗೆ ತಿಳಿಸುತ್ತದೆ.
- ಭಾರತದ ಸಂವಿಧಾನದ 18 (1) ನೇ ವಿಧಿಯಲ್ಲಿ ಉಲ್ಲೇಖಿಸಿದಂತೆ, ಸ್ವೀಕರಿಸುವವರು ಭಾರತ ರತ್ನವನ್ನು ತಮ್ಮ ಹೆಸರಿನ ಪೂರ್ವಪ್ರತ್ಯಯ ಅಥವಾ ಪ್ರತ್ಯಯವಾಗಿ ಬಳಸುವಂತಿಲ್ಲ. ಆದಾಗ್ಯೂ, ಸ್ವೀಕರಿಸುವವರು ತಮ್ಮ ರೆಸ್ಯೂಮ್, ಲೆಟರ್‌ಹೆಡ್, ವಿಸಿಟಿಂಗ್ ಕಾರ್ಡ್ ಇತ್ಯಾದಿಗಳಲ್ಲಿ ‘ರಾಷ್ಟ್ರಪತಿಗಳಿಂದ ಭಾರತ ರತ್ನ ಪ್ರಶಸ್ತಿ ಪುರಸ್ಕೃತರು’ ಅಥವಾ ‘ಭಾರತ ರತ್ನ ಪ್ರಶಸ್ತಿ ಪುರಸ್ಕೃvರ ÀÄ’ ಎಂಬ ಅಭಿವ್ಯಕ್ತಿಯನ್ನು ಬಳಸಬಹುದು.
ಭಾರತ ರತ್ನ ಪ್ರಶಸ್ತಿ ಪದಕದ ವಿವರಣೆ
ಭಾರತ ರತ್ನ ಪದಕವು ಚಿನ್ನ, ಪ್ಲಾಟಿನಂ, ಹಿತ್ತಾಳೆಯನ್ನು ಒಳಗೊಂಡಿದೆ.
ಅರಳಿ ಮರದ ಎಲೆಯ ಮಾದರಿಯಲ್ಲಿ ಮುಂಬದಿಯಲ್ಲಿ ಸೂರ್ಯನ ಚಿತ್ರವಿದ್ದು ಇದರ ಕೆಳಗಡೆ ಭಾರತ ರತ್ನ ಎಂದು ಬೆಳ್ಳಿಯಲ್ಲಿ ಕೆತ್ತಲಾಗಿದೆ.
ಇನ್ನೊಂದು ಬದಿಗೆ ಭಾರತದ ಲಾಂಛನವಾಗಿರುವ ಸಿಂಹ ಲಾಂಛನವಿದ್ದು, ಅದರ ಕೆಳಗೆ ‘ಸತ್ಯಮೇವ ಜಯತೆ’ (ಸತ್ಯ ಜಯಿಸುತ್ತದೆ) ಎಂದು ದೇವನಾಗರಿ ಲಿಪಿಯಲ್ಲಿ ಬೆಳ್ಳಿಯಲ್ಲಿ ಕೆತ್ತಲಾಗಿದೆ.
ಸತ್ಯ ಮೇವ ಜಯತೆ ಸಾಲನ್ನು ಮುಂಡಕ ಉಪನಿಷತ್‌ನಿಂದ ಆರಿಸಲಾಗಿದೆ.
ಭಾರತ ರತ್ನ ಪ್ರಶಸ್ತಿ ಪದಕದ ವಿವರಣೆ
ಪದಕದ ಉದ್ದ: 5.8 ಸೆಂ. ಮೀ
ಅಗಲ: 4. 7 ಸೆಂ. ಮೀ
ದಪ್ಪ: 3. 1 ಮಿ. ಮೀ
ಸೂರ್ಯನ ಡಯಾಮೀಟರ್: 16 ಮಿ. ಮೀ
ಕಂದು ಕಂಚಿನ ಪದಕ ಇದಾಗಿರುತ್ತದೆ.
ಪದಕಕ್ಕೆ 2-ಇಂಚಿನ ಅಗಲದ ಬಿಳಿ ರಿಬ್ಬನ್ ಅನ್ನು ಜೋಡಿಸಲಾಗಿದೆ ಆದ್ದರಿಂದ ಅದನ್ನು ಕುತ್ತಿಗೆಗೆ ಧರಿಸಬಹುದು.
ಭಾರತ ರತ್ನ ಪದಕ ತಯಾರಿಸುವ ಸ್ಥಳ – ಕೋಲ್ಕತ್ತಾದ ಅಲಿಪೋರ್ ಮಿಂಟ್
ಸ್ಥಾಪನೆ: 1954 ಜನೆವರಿ 2
ನೀಡುವವರು : ಭಾರತ ಸರ್ಕಾರ
ನೀಡುವ ವ್ಯಕ್ತಿ: ರಾಷ್ಟ್ರಪತಿ
ನೀಡುವ ಸ್ಥಳ: ರಾಷ್ಟ್ರಪತಿ ಭವನ (ದೆಹಲಿ)
ನೀಡುವ ದಿನಾಂಕ: ಜನೆವರಿ 26
ಮೊತ್ತ: ಮೊತ್ತ ಇರುವುದಿಲ್ಲ, ಒಂದು ಪದಕ ನೀಡಲಾಗುತ್ತದೆ.
ಭಾರತ ರತ್ನ ಪ್ರಶಸ್ತಿ ಪದಕದ ವಿವರಣೆ
ಈ ಪ್ರಶಸ್ತಿಯನ್ನು ಭಾರತದ ಮಾಜಿ ರಾಷ್ಟ್ರಪತಿ ರಾಜೇಂದ್ರ ಪ್ರಸಾದ್ ಅವರು 2 ನೇ ಜನವರಿ 1954 ರಂದು ಪ್ರಾರಂಭಿಸಿದರು.
ಇದುವರೆಗೂ ಪ್ರಶಸ್ತಿ ಪಡೆದ ಒಟ್ಟು ಜನ : 48
ಮೊದಲ ನೊಬೆಲ್ ಪ್ರಶಸ್ತಿ ಪಡೆದ ಮತ್ತು ಭಾರತ ರತ್ನ ಪ್ರಶಸ್ತಿ ಪಡೆದ ಭಾರತೀಯ – ಅ. ಗಿ. ಖಚಿmಚಿಟಿ
ಈ ಪ್ರಶಸ್ತಿಯನ್ನು 1 ವರ್ಷದಲ್ಲಿ 3 ಜನರಿಗೆ ಮಾತ್ರ ನೀಡಲಾಗುತ್ತದೆ.
ಮರಣೋತ್ತರವಾಗಿ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ- ಲಾಲ್ ಬಹುದ್ದೂರ್ ಶಾಸ್ತ್ರಿ (1966 ವರ್ಷ).
ಮರಣೋತ್ತರವಾಗಿ ಈ ಪ್ರಶಸ್ತಿ ಪಡೆದ ಮೊದಲ ಮಹಿಳೆ - ಅರುಣಾ ಅಸಫ್ ಅಲಿ 1997 (ಮೊದಲ ಸ್ವಾತಂತ್ರ ಹೋರಾಟಗಾರ್ತಿ)
ಭಾರತ ರತ್ನ ಪ್ರಶಸ್ತಿ ರದ್ದುಗೊಳಿಸಿದ ಮೊದಲ ಪ್ರಧಾನಿ ಮೊರಾರ್ಜಿ ದೇಸಾಯಿ-1977
ಪುನಃ ಪ್ರಾರಂಭಿಸಿದವರು– ಇಂದಿರಾ ಗಾಂಧಿ 1980
ಭಾರತ ರತ್ನ ಪ್ರಶಸ್ತಿ ನಿರಾಕರಿಸಿದ ವ್ಯಕ್ತಿ - ಮೌಲಾನ ಅಬ್ದುಲ್‌ಕಲಾಂ ಅಜಾದ್
ಭಾರತ ರತ್ನ ಮತ್ತು ನೊಬೆಲ್ ಪ್ರಶಸ್ತಿ ಎರಡನ್ನೂ ಪಡೆದವರು: ಸರ್ ಸಿ. ವಿ. ರಾಮನ್, ಮದರ್ ಥೆರೆಸಾ, ನೆಲ್ಸನ್ ಮಂಡೇಲಾ, ಅಮರ್ಥ್ಯ್ ಸೇನ್.
ಭಾರತ ರತ್ನ ಪ್ರಶಸ್ತಿ ಪಡೆದ ಮೊದಲಿಗರು:
1. ರಾಜ ಗೋಪಾಲಚಾರಿ ನೀಡಿದ ವರ್ಷ 1954 (ಭಾರತೀಯ ಮೊದಲ ಮತ್ತು ಕೊನೆಯ ಗೌವರ್ನರ್ ಜನರಲ್)
2. ತಮಿಳು ನಾಡಿನ ಸರ್ವಪಲ್ಲಿ ರಾಧಾಕೃಷ್ಣನ್ 1954 (ಭಾರತೀಯ ಮೊದಲ ಉಪರಾಷ್ಟ್ರಪತಿ ಮತ್ತು 2ನೇ ರಾಷ್ಟ್ರಪತಿ, ಶಿಕ್ಷಣ ತಜ್ಞ)
3. ಸಿ. ವಿ. ರಾಮನ್ (ಭೌತ ವಿಜ್ಞಾನಿ) 1954 – (ಈ ಮೂರು ಜನರು ತಮಿಳುನಾಡಿನವರು)
ಎರಡನೇ ಬಾರಿಗೆ 1955 ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದವರು:
1. ಸರ್. ಎಮ್. ವಿಶ್ವೇಶ್ವರಯ್ಯ (ಇಂಜಿನಿಯರ್)
2. ಭಗವಾನ್ ದಾಸ್ (ಸಮಾಜಸೇವೆ)
3. ಜವಾಹರ್ ಲಾಲ್ ನೆಹರೂ (ರಾಜಕೀಯ-ಮೊದಲ ಪ್ರಧಾನಿ)
ಭಾರತ ರತ್ನ ಪ್ರಶಸ್ತಿ ಪಡೆದ ಮಹಿಳೆಯರು (5 ಜನ ಪಡೆದಿದ್ದಾರೆ):
1. ಇಂಧಿರಾ ಗಾಂಧಿ (1971, ಉತ್ತರ ಪ್ರದೇಶ) - ರಾಜಕೀಯ
2. ಮಧರ್ ಥೆರಸಾ (1980, ಪಶ್ಚಿಮ ಬಂಗಾಳ) - ಸಮಾಜ ಸೇವೆ.
3. ಅರುಣಾ ಅಸಫ್ ಅಲಿ (1997, ಪಂಜಾಬ್)
4. ಎಂ. ಎಸ್. ಸುಬ್ಬಲಕ್ಷ್ಮೀ (1998, ತಮಿಳುನಾಡು) - ಭಾರತ ರತ್ನ ಪಡೆದ ಮೊದಲ ಸಂಗೀತಗಾರ್ತಿ)
5. ಲತಾ ಮಂಗೇಶ್ಕರ್ (2001, ಮಹಾರಾಷ್ಟ್ರ) ಸಂಗೀತ ಹಿನ್ನಲೆ ಗಾಯಕಿ
ಭಾರತ ರತ್ನ ಪ್ರಶಸ್ತಿಯ ಸಂಪೂರ್ಣ ಮಾಹಿತಿ
ಭಾರತ ರತ್ನ ಪ್ರಶಸ್ತಿ ಪಡೆದ ರಾಷ್ಟ್ರಪತಿಗಳ ಸಂಖ್ಯೆ-06:
1. 1954 - ಸರ್ವ ಪಲ್ಲಿ ರಾಧಾಕೃಷ್ಣ
2. 1962 – ಡಾ. ಬಾಬು ರಾಜೇಂದ್ರ ಪ್ರಸಾದ್
3. 1963 - ಜಾಕೀರ್ ಹುಸೇನ್ (ಭಾರತದ ಮೊದಲ ಮುಸ್ಲಿಂ ರಾಷ್ಟ್ರಪತಿ 1963 ರಲ್ಲಿ ಮತ್ತು ಅಧಿಕಾರ ಅವಧಿಯಲ್ಲಿ ಮರಣ ಹೊಂದಿದರು)
4. 1975 - ವಿ. ವಿ. ಗಿರಿ ಮೊದಲ ಹಂಗಾಮಿ ರಾಷ್ಟ್ರಪತಿ 5. 1997 – ಎ.ಪಿ.ಜೆ.ಅಬ್ದುಲ್ ಕಲಾಂ
6. 2019 – ಪ್ರಣಬ್ ಮುಖರ್ಜಿ
ಭಾರತ ರತ್ನ ಪ್ರಶಸ್ತಿ ಪಡೆದ ಪ್ರಧಾನ ಮಂತ್ರಿ-06 :
1. 1955 - ಜವಾಹರ್ ಲಾಲ್ ನೆಹರೂ
2. 1966 - ಲಾಲ್ ಬಹದ್ದೂರ್ ಶಾಸ್ತ್ರಿ
3. 1971 - ಇಂದಿರಾಗಾAಧಿ
4. 1991 – ಮೂರಾರ್ಜಿ ದೇಸಾಯಿ
5. 2015 - ಅಟಲ್ ಬಿಹಾರಿ ವಾಜಪೇಯಿ
ಭಾರತ ರತ್ನ ಪ್ರಶಸ್ತಿ ಪಡೆದ ಇಬ್ಬರು ವಿದೇಶಿಗರು:
1. 1987 - ಖಾನ್ ಅಬ್ದುಲ್ ಘಫರ್‌ಖಾನ್ - ಪಾಕಿಸ್ತಾನ
2. 1990 - ನೆಲ್ಸನ್ ಮಂಡೇಲಾ (ಆಫ್ರಿಕಾದ ಗಾಂಧಿ)
2014 ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದವರು-02 :
1. ಸಿ. ಎನ್. ಆರ್. ರಾವ್
2. ಸಚಿನ್ ತೆಂಡೂಲ್ಕರ್ (ಪ್ರಥಮ ಕ್ರಿಕೆಟಿಗ)
2015 ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದವರು - 02:
1. ಮದನ ಮೋಹನ ಮಾಳವೀಯ - ಮರಣೋತ್ತರ
2. ಅಟಲ್ ಬಿಹಾರಿ ವಾಜಪೇಯಿ
2019 ರಲ್ಲಿ ಭಾರತ ರತ್ನ ಪ್ರಶಸ್ತಿ ಪಡೆದವರು - 03:
1. ಪ್ರಣಬ್ ಮುಖರ್ಜಿ
2. ಬುಫೆನ ಹಜಾರಿಕಾ - ಮರಣೋತ್ತರ
3. ನಾನಾಜಿ ದೇಶ್‌ಮುಖ್ - ಮರಣೋತ್ತರ
ಭಾರತ ರತ್ನ ಪ್ರಶಸ್ತಿ: ನೆನಪಿಡಬೇಕಾದ ಸಂಗತಿಗಳು
ಭಾರತ ರತ್ನ ಪ್ರಶಸ್ತಿ ಪಡೆದ ಅತ್ಯಂತ ಕಿರಿಯ ವ್ಯಕ್ತಿ: ಸಚಿನ್ ತೆಂಡೋಲ್ಕರ್ 2014 (40 ವರ್ಷ) (ಕ್ರೀಡೆಯಲ್ಲಿ ಈ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ)
ಭಾರತ ರತ್ನ ಪ್ರಶಸ್ತಿ ಪಡೆದ ಅತ್ಯಂತ ಹಿರಿಯ ವ್ಯಕ್ತಿ: ದೊಂಡಚಾ ಕೇಶವ ಕರ್ವೆ (100ವರ್ಷ)
ಭಾರತ ರತ್ನ ಪ್ರಶಸ್ತಿ ಪಡೆದ ಮೊದಲ ಮುಖ್ಯಮಂತ್ರಿ: ಗೋವಿಂದ ವಲ್ಲಭ ಪಂತ (ಉತ್ತರ ಪ್ರದೇಶ)
ಮನೋರಂಜನೆಗೆ ಈ ಪ್ರಶಸ್ತಿ ಪಡೆದ ಮೊದಲ ವ್ಯಕ್ತಿ: ಸತ್ಯಜೀತ ರೇ (1992)
ಭಾರತ ರತ್ನ ಪ್ರಶಸ್ತಿ ಪಡೆದ ಕೈಗಾರಿಕಾ ಉದ್ಯಮಿ: ಜೆ. ಆರ್. ಡಿ. ಟಾಟಾ (1992)
ಭಾರತ ರತ್ನ ಪ್ರಶಸ್ತಿಗೆ ಶಿಫಾರಸ್ಸು ಮಾಡುವವರು: ಪ್ರಧಾನಮಂತ್ರಿ
ರಾಷ್ಟ್ರಪತಿ ಹುದ್ದೆಗೆ ಏರುವ ಮುಂಚೆ ಭಾರತ ರತ್ನ ಪ್ರಶಸ್ತಿ ಪಡೆದ ಇಬ್ಬರು ವ್ಯಕ್ತಿಗಳು:
1. ಎ. ಪಿ. ಜೆ. ಅಬ್ದುಲ್ ಕಲಾಂ
2. ಡಾ. ಎಸ್. ರಾಧಾಕೃಷ್ಣ
ಭಾರತ ರತ್ನ ಪ್ರಶಸ್ತಿ ಪಡೆದ ಸಿತಾರವಾದಕ: ಪಂಡಿತ್ ರವಿಶಂಕರ (1999- ಉತ್ತರ ಪ್ರದೇಶ)
ಇತಿಹಾಸದಲ್ಲಿ ಭಾರತ ರತ್ನ ಪ್ರಶಸ್ತಿ ನೀಡಿ ಮರಳಿ ಪಡೆದ ಏಕೈಕ ವ್ಯಕ್ತಿ: ಸುಭಾಷ್ ಚಂದ್ರಬೋಸ್ (1992)
ಈ ಪ್ರಶಸ್ತಿ ಮಹಾತ್ಮಾ ಗಾಂಧಿಜಿಯವರಿಗೆ ನೀಡದೆ ಇರುವ ಕಾರಣ:
1. ಈ ಪ್ರಶಸ್ತಿ ಸ್ಥಾಪನೆಯಾಗುವ ಸಂದರ್ಭದಲ್ಲಿ ಗಾಂಧೀಜಿಯವರು ಬದುಕಿರಲಿಲ್ಲ.
2. ಈ ಪ್ರಶಸ್ತಿ ನೀಡಿದರೆ ರಾಷ್ಟ್ರಪಿತ ಪದಕ್ಕೆ ಅವಮಾನವಾಗುತ್ತದೆ.
ಭಾರತ ರತ್ನ ಪ್ರಶಸ್ತಿ ಸ್ಥಾಪನೆಯಾಗಲು ಕಾರಣರಾದ ರಾಷ್ಟ್ರಪತಿ: ಡಾ. ಬಾಬು ರಾಜೇಂದ್ರ ಪ್ರಸಾದ.
ಭಾರತ ರತ್ನ ಪ್ರಶಸ್ತಿ ಮತ್ತು ಪಾಕಿಸ್ತಾನದ ಅತ್ಯುನ್ನತ ನಾಗರಿಕ ಪ್ರಶಸ್ತಿ: ನಿಶಾನ್-ಏ-ಪಾಕಿಸ್ತಾನ ಪಡೆದ ಏಕೈಕ ಭಾರತೀಯ ಮುರಾರ್ಜಿ ದೇಸಾಯಿ
ಭಾರತ ರತ್ನ ಪ್ರಶಸ್ತಿ: ನೆನಪಿಡಬೇಕಾದ ಸಂಗತಿಗಳು
ಭಾರತ ರತ್ನ ಪ್ರಶಸ್ತಿಯನ್ನು 2011 ನವೆಂಬರ್ 16 ರಿಂದ ಕ್ರೀಡಾ ಕ್ಷೇತ್ರಕ್ಕೆ ಕೊಡಲು ಆರಂಭಿಸಿತು.
ಭಾರತ ರತ್ನ ಪ್ರಶಸ್ತಿ ಪಡೆದ ಅತಿ ಹೆಚ್ಚು ರಾಜ್ಯಗಳು ಮತ್ತು ವ್ಯಕ್ತಿಗಳು :
1. ಉತ್ತರ ಪ್ರದೇಶ ರಾಜ್ಯದ 10 ಜನರು.
2. ತಮಿಳುನಾಡು ರಾಜ್ಯದ 8 ಜನರು.
3. ಕರ್ನಾಟಕ ರಾಜ್ಯದ 3 ಜನರು.
- 1955- ಸರ್ ಎಮ್ ವಿಶ್ವೇಶ್ವರಯ್ಯ (ಮೊದಲ ಕನ್ನಡಿಗ)
- 2008- ಭೀಮಸೇನ್ ಜೋಶಿ
- 2014- ಸಿ. ಎನ್. ಆರ್. ರಾವ್
ಮರಣೋತ್ತರವಾಗಿ ಈ ಪ್ರಶಸ್ತಿ ಪಡೆದ ಒಟ್ಟು ಜನ 14:
1. ಲಾಲ ಬಹುದ್ದೂರ್ ಶಾಸ್ತ್ರೀ 1966
2. ಅರುಣಾ ಅಸಫ್ ಅಲಿ
3. ಕೆ. ಕಾಮರಾಜ
4. ಎಮ್. ಜಿ. ರಾಮಚಂದ್ರನ್ (ಸಿನಿಮಾ ರಂಗದಿಂದ ಮುಖ್ಯಮಂತ್ರಿಯಾದಂತಹ ಭಾರತದ ಮೊದಲ ವ್ಯಕ್ತಿ)
5. ವಿನೋಭಾ ಭಾವೆ
6. ಗೋಪಿನಾಥ ಬಾರ್ಡೋಲಿ
7. ಸರ್ದಾರ ವಲ್ಲಭಬಾಯಿ ಪಟೇಲ
8. ಮೌಲಾನಾ ಅಬ್ದುಲ್ ಕಲಾಂ ಆಜಾದ್
9. ರಾಜೀವ್ ಗಾಂಧಿ
10. ಮದನ್ ಮೋಹನ್ ಮಾಳ್ವಿಯಾ
11. ಡಾ. ಬಿ. ಆರ್. ಅಂಬೇಡ್ಕರ್
12. ಜಯಪ್ರಕಾಶ ನಾರಾಯಣ
13. ಭೂಪೇನ್ ಹಜಾರಿಕಾ (2019)
14. ನಾನಾಜಿ ದೇಶಮುಖ್ (2019)
ಇತ್ತೀಚಿಗೆ ಈ ಪ್ರಶಸ್ತಿ ಪಡೆದವರು :
1. ಪ್ರಣಬ್ ಮುಖರ್ಜಿ - 2019 (ರಾಷ್ಟ್ರಪತಿ, ಪಶ್ಚಿಮ ಬಂಗಾಳ)
2. ನಾನಾಜಿ ದೇಶಮುಖ್ - 2019 (ಸಮಾಜ ಸೇವೆ, ಸಂಗೀತ ಕಲೆ, ಮಹಾರಾಷ್ಟ್ರ, ಮರಣೋತ್ತರ)
3. ಬೊಪೆನ್ ಹಜಾರಿಕಾ - 2019 (ಆಸ್ಸಾಂ, ಮರಣೋತ್ತರ)
ಭಾರತ ರತ್ನ ಪ್ರಶಸ್ತಿ ಒಟ್ಟು 48 ಜನ ಪಡೆದಿದ್ದಾರೆ.
ಭಾರತ ರತ್ನ ಪ್ರಶಸ್ತಿ: ಪುರಸ್ಕೃತರಿಗೆ ಸಿಗುವ ಸೌಲಭ್ಯಗಳು
ಯಾವುದೇ ಹಣ ಸಿಗುವುದಿಲ್ಲ.
ಭಾರತ ಸರ್ಕಾರದ ಅಧಿಕೃತ ಪ್ರೊಟೊಕಾಲ್‌ನಲ್ಲಿ 7 ನೇ ಸ್ಥಾನ ಹೊಂದಿರುತ್ತಾರೆ.
ಭಾರತದೊಳಗೆ ಪ್ರಯಾಣಿಸುವಾಗ ಅವರನ್ನು ರಾಜ್ಯ ಅತಿಥಿಗಳಾಗಿ ಪರಿಗಣಿಸಲಾಗುತ್ತದೆ.
ರಾಜತಾಂತ್ರಿಕ ಪಾಸ್‌ಪೋರ್ಟ್ಗೆ (ಮರೂನ್ ಬಣ್ಣ) ಅರ್ಹರಾಗಿರುತ್ತಾರೆ. ಅವರು ಭಾರತವನ್ನು ಪ್ರತಿನಿಧಿಸುವ ಗಣ್ಯರು ಎಂಬುದನ್ನು ಇದು ಸೂಚಿಸುತ್ತದೆ. ಇದು ವಿಮಾನ ನಿಲ್ದಾಣಗಳಲ್ಲಿ ಪ್ರತ್ಯೇಕ ವಲಸೆ ಕೌಂಟರ್‌ಗಳು ಮತ್ತು ಲಾಂಜ್‌ಗಳಿಗೆ ಪ್ರವೇಶವನ್ನು ನೀಡುತ್ತದೆ.
ಏರ್ ಇಂಡಿಯಾದಲ್ಲಿ ಜೀವಮಾನದ ಉಚಿತ ಎಕ್ಸಿಕ್ಯೂಟಿವ್ ಕ್ಲಾಸ್ ಪ್ರಯಾಣ ಮತ್ತು ಉಚಿತ ಜೀವಮಾನದ ಪ್ರಥಮ ದರ್ಜೆ ರೈಲು ಪ್ರಯಾಣಕ್ಕೆ ಅರ್ಹರಾಗಿರುತ್ತಾರೆ.
ಭಾರತದ ಪ್ರಧಾನ ಮಂತ್ರಿಯ ವೇತನದ 50% ಕ್ಕೆ ಸಮಾನವಾದ ಪಿಂಚಣಿಗೆ ಅರ್ಹರಾಗಿರುತ್ತಾರೆ.
ಸಂಸತ್ತಿನ ಸಭೆಗಳು ಮತ್ತು ಅಧಿವೇಶನಗಳಲ್ಲಿ ಭಾಗವಹಿಸಬಹುದು.
ಅಗತ್ಯವಿದ್ದರೆ ಅವರು Z ವರ್ಗದ ರಕ್ಷಣೆಗೆ ಅರ್ಹರಾಗಿರುತ್ತಾರೆ. Z ವರ್ಗದ ರಕ್ಷಣೆ ಎಂದರೆ NSG ಕಮಾಂಡೋಗಳು+ಪೊಲೀಸ್ ಸಿಬ್ಬಂದಿಯಿAದ ರಕ್ಷಣೆ.
ಗಣರಾಜ್ಯ ಮತ್ತು ಸ್ವಾತಂತ್ರ‍್ಯ ದಿನಾಚರಣೆಯಲ್ಲಿ ಅವರನ್ನು ವಿಶೇಷ ಅತಿಥಿಯಾಗಿ ಪರಿಗಣಿಸಲಾಗುತ್ತದೆ.
ಅವರ ಸ್ಥಾನಮಾನವು ಭಾರತದ ಒಳಗೆ ಮತ್ತು ಹೊರಗೆ ವಿವಿಐಪಿಗೆ ಸಮಾನವಾಗಿದೆ.
ಅವರಿಗೆ ಆದಾಯ ತೆರಿಗೆ ಪಾವತಿಯಿಂದ ವಿನಾಯಿತಿ ನೀಡಲಾಗಿದೆ.
ಭಾರತದ ಯಾವುದೇ ನಾಗರಿಕ ವಿಮಾನ ನಿಲ್ದಾಣದಲ್ಲಿ ಅವರನ್ನು ಪರೀಕ್ಷಿಸಲಾಗುವುದಿಲ್ಲ.
ನಾಗರಿಕ ವಿಮಾನ ನಿಲ್ದಾಣಗಳಲ್ಲಿ ಪೂರ್ವ ಭದ್ರತಾ ತಪಾಸಣೆಯಿಂದ ವಿನಾಯಿತಿ ಪಡೆದಿರುವ 32 ವರ್ಗದ ಜನರಲ್ಲಿ ಅವರು ಸೇರಿದ್ದಾರೆ.
ಪ್ರಪಂಚದ ವಿವಿಧ ದೇಶಗಳ ಅತ್ಯುನ್ನತ ನಾಗರಿಕ ಪ್ರಶಸ್ತಿಗಳು
- ಅಫ್ಘಾನಿಸ್ತಾನ ಅಮೀರ್ ಅಮಾನುಲ್ಲಾ ಖಾನ್ ಪ್ರಶಸ್ತಿ
- ಅಲ್ಜೀರಿಯಾ ನ್ಯಾಷನಲ್ ಆರ್ಡರ್ ಆಫ್ ಮೆರಿಟ್ (ಅಲ್ಜೀರಿಯಾ)
- ಅರ್ಜೆಂಟೀನಾ ಆರ್ಡರ್ ಡಿ ಮೇಯೊ
- ಆಸ್ಟ್ರೇಲಿಯಾ ಕ್ರಾಸ್ ಆಫ್ ಶೌರ್ಯ
- ಆಸ್ಟ್ರಿಯಾ ಆಸ್ಟ್ರಿಯಾ ಗಣರಾಜ್ಯಕ್ಕೆ ಸೇವೆಗಳಿಗಾಗಿ ಗೌರವದ ಅಲಂಕಾರ
- ಬಾAಗ್ಲಾದೇಶ ಬಾಂಗ್ಲಾದೇಶ ಸ್ವಾಧಿಂತ ಸಮ್ಮನೋನ
- ಬೆಲ್ಜಿಯಂ ಆರ್ಡರ್ ಆಫ್ ಲಿಯೋಪೋಲ್ಡ್
- ಭೂತಾನ್ ಆರ್ಡರ್ ಆಫ್ ಗ್ರೇಟ್ ವಿಕ್ಟರಿ ಆಫ್ ಥಂಡರ್ ಡ್ರ‍್ಯಾಗನ್
- ಬ್ರೆಜಿಲ್ ಆರ್ಡರ್ ಆಫ್ ಸದರ್ನ್ ಕ್ರಾಸ್
- ಕಾಂಬೋಡಿಯಾ ರಾಯಲ್ ಆರ್ಡರ್ ಆಫ್ ಕಾಂಬೋಡಿಯಾ
- ಕೆನಡಾ ಕ್ರಾಸ್ ಆಫ್ ಶೌರ್ಯ
- ಚಿಲಿ ದಿ ಆರ್ಡರ್ ಆಫ್ ಬರ್ನಾರ್ಡೊ ಒ'ಹಿಗ್ಗಿನ್ಸ್
- ಚೀನಾ ಆರ್ಡರ್ ಆಫ್ ಬ್ರಿಲಿಯಂಟ್ ಜೇಡ್
- ಜೆಕ್ ರಿಪಬ್ಲಿಕ್ ಮೆರಿಟ್ ಪದಕ
- ಈಜಿಪ್ಟ್ ಆರ್ಡರ್ ಆಫ್ ದಿ ನೈಲ್
- ಫಿನ್ಲ್ಯಾಂಡ್ ಆರ್ಡರ್ ಆಫ್ ದಿ ಕ್ರಾಸ್ ಆಫ್ ಲಿಬರ್ಟಿ
- ಫ್ರಾನ್ಸ್ ನ್ಯಾಶನಲ್ ಆರ್ಡರ್ ಆಫ್ ದಿ ಲೀಜನ್ ಆಫ್ ಆನರ್ (ಆರ್ಡ್ರೆ ನ್ಯಾಷನಲ್ ಡೆ ಲಾ ಲೆಜಿಯನ್ ಡಿ'ಹಾನರ್)
- ಜಾರ್ಜಿಯಾದ ಜಾರ್ಜಿಯಾದ ರಾಷ್ಟ್ರೀಯ ನಾಯಕ
- ಜರ್ಮನಿ ಆರ್ಡರ್ ಆಫ್ ಮೆರಿಟ್ ಆಫ್ ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ
- ಗ್ರೀಸ್ ಗ್ರ‍್ಯಾಂಡ್ ಕ್ರಾಸ್ ಆಫ್ ದಿ ಆರ್ಡರ್ ಆಫ್ ದಿ ರಿಡೀಮರ್
- ಹಂಗೇರಿ ಆರ್ಡರ್ ಆಫ್ ಸೇಂಟ್ ಸ್ಟೀಫನ್ ಆಫ್ ಹಂಗೇರಿ ಆರ್ಡರ್ ಆರ್ಡರ್ ಆಫ್ ಸೇಂಟ್ ಸ್ಟೀಫನ್ ಆಫ್ ಹಂಗೇರಿ
- ಇAಡೋನೇಷ್ಯಾ ಬಿಂಟಾAಗ್ ರಿಪಬ್ಲಿಕ್ ಇಂಡೋನೇಷ್ಯಾ
- ಇರಾಕ್ ದಿ ಮೋಸ್ಟ್ ಹಾನರಬಲ್ ಆರ್ಡರ್ ಆಫ್ ದಿ ಬಾತ್
- ಇಸ್ರೇಲ್ ಇಟುರ್ ನೇಸಿ ಮೆಡಿನಾಟ್ ಇಸ್ರೇಲ್
- ಇಟಲಿ ಆರ್ಡಿನ್ ಅಲ್ ಮೆರಿಟೊ ಡೆಲ್ಲಾ ರಿಪಬ್ಲಿಕಾ ಇಟಾಲಿಯನ್
- ಜಪಾನ್ ಗ್ರ‍್ಯಾಂಡ್ ಕಾರ್ಡನ್ ಆಫ್ ದಿ ಆರ್ಡರ್ ಆಫ್ ದಿ ಕ್ರೈಸಾಂಥೆಮಮ್
- ಕೀನ್ಯಾ ದಿ ಆರ್ಡರ್ ಆಫ್ ದಿ ಗೋಲ್ಡನ್ ಹಾರ್ಟ್ ಆಫ್ ಕೀನ್ಯಾ
- ಮೆಕ್ಸಿಕೋ ದಿ ಆರ್ಡರ್ ಆಫ್ ದಿ ಅಜ್ಟೆಕ್ ಈಗಲ್ (ಆರ್ಡೆನ್ ಮೆಕ್ಸಿಕಾನಾ ಡೆಲ್ ಅಗುಲಾ ಅಜ್ಟೆಕಾ)
- ಮಂಗೋಲಿಯಾ ಅತ್ಯುತ್ತಮ ಕೆಲಸಗಾರ
- ನೇಪಾಳ ಮನ್ ಪಡ್ವೈ
- ನೆದರ್ಲ್ಯಾಂಡ್ಸ್ ಆರ್ಡರ್ ಆಫ್ ನೆದರ್ಲ್ಯಾಂಡ್ಸ್ ಲಯನ್
- ನ್ಯೂಜಿಲೆಂಡ್ ಆರ್ಡರ್ ಆಫ್ ನ್ಯೂಜಿಲೆಂಡ್
- ನಾರ್ವೆ ಆರ್ಡರ್ ಆಫ್ ಸೇಂಟ್ ಓಲಾವ್
- ಪಾಕಿಸ್ತಾನ ನಿಶಾನ್-ಎ-ಪಾಕಿಸ್ತಾನ
- ಫಿಲಿಪೈನ್ಸ್ ಕ್ವಿಜಾನ್ ಸೇವಾ ವರ್ಗ
- ಪೋಲೆಂಡ್ ಕ್ರಾಸ್ ಆಫ್ ಮೆರಿಟ್
- ರಷ್ಯಾ ಆರ್ಡರ್ ಆಫ್ ಸೇಂಟ್ ಆಂಡ್ರ‍್ಯೂ ದಿ ಅಪೊಸ್ತಲ್
- ಸೌದಿ ಅರೇಬಿಯಾ ಕಿಂಗ್ ಅಬ್ದುಲ್ ಅಜೀಜ್ ಪದಕ
- ಸ್ಪೇನ್ ಆರ್ಡರ್ ಆಫ್ ಇಸಾಬೆಲ್ಲಾ ದಿ ಕ್ಯಾಥೋಲಿಕ್
- ಶ್ರೀಲಂಕಾ ಶ್ರೀಲಂಕಾಭಿಮಾನ್ಯ
- ಟರ್ಕಿ ಆರ್ಡರ್ ಆಫ್ ಡೆಮಾಕ್ರಸಿ
- ಯುನೈಟೆಡ್ ಅರಬ್ ಎಮಿರೇಟ್ಸ್ ದಿ ಆರ್ಡರ್ ಆಫ್ ಜಾಯೆದ್
- ಯುನೈಟೆಡ್ ಸ್ಟೇಟ್ಸ್ ಆಫ್ ಅಮೇರಿಕಾ ಅಧ್ಯಕ್ಷೀಯ ಪದಕ ಸ್ವಾತಂತ್ರ‍್ಯ
- ಯುನೈಟೆಡ್ ಕಿಂಗ್‌ಡಮ್ ಆರ್ಡರ್ ಆಫ್ ಮೆರಿಟ್
ಭಾರತದ ಅತ್ಯುನ್ನತ ನಾಗರೀಕ ಪ್ರಶಸ್ತಿಯಾದ ಭಾರತ ರತ್ನ ಪ್ರಶಸ್ತಿಯ ಸಂಪೂರ್ಣ ಮಾಹಿತಿಯ ವಿಡಿಯೋ ಲಿಂಕ್ ಇಲ್ಲಿದೆ 👇👇
ಧನ್ಯವಾದಗಳು
No comments:
Post a Comment
If you have any doubts please let me know