Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Saturday 2 July 2022

ಈಜಿಪ್ಟ್ ನಾಗರಿಕತೆ ಯ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Egypt Civilisation in Kannada

ಈಜಿಪ್ಟ್ ನಾಗರಿಕತೆ ಯ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Egypt Civilisation in Kannada

ಈಜಿಪ್ಟ್ ನಾಗರಿಕತೆ ಯ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Egypt Civilisation in Kannada


ಬಹುಶಃ ಜಗತ್ತಿನ ಮೊದಲ ನಾಗರಿಕತೆ ಈಜಿಪ್ಟ್ ದೇಶದ ನೈಲ್ ನದಿಯ ತೀರದಲ್ಲಿ ಬೆಳೆಯಿತು. ಈಜಿಪ್ಟ್ ಆಫ್ರಿಕಾ ಖಂಡದಲ್ಲಿದ್ದು, ಏಷ್ಯಾ ಹಾಗೂ ಯುರೋಪ್‌ಗಳೊಂದಿಗೆ ಭೌಗೋಳಿಕ ನಿಕಟತೆಯನ್ನು ಹೊಂದಿದೆ. ಭೇದಿಸಲಸಾಧ್ಯವಾದ ಮರುಭೂಮಿ, ಪೂರ್ವ, ಪಶ್ಚಿಮ ಮತ್ತು ದಕ್ಷಿಣಕ್ಕಿದ್ದು ಉತ್ತರಕ್ಕೆ ಮೆಡಿಟರೇನಿಯನ್ ಸಮುದ್ರವಿದ್ದು, ಇದು ಈಜಿಪ್ಟ್ ಗೆ ನೈಸರ್ಗಿಕ ಭದ್ರತೆಯನ್ನು ಒದಗಿಸಿದೆ. ಹೀಗಾಗಿ ಈಜಿಪ್ಟ್ ಜಗತ್ತಿನ ಇತರೆ ಭಾಗಗಳಿಂದ ಪ್ರತ್ಯೇಕಿಸಲ್ಪಟ್ಟಿದೆ. ಈ ಕಾರಣಕ್ಕಾಗಿಯೇ ಬಾಹ್ಯ ಶತ್ರುಗಳ ದಾಳಿಯಿಂದ ಅಸಾಮಾನ್ಯ ರಕ್ಷಣೆಯ ಲಾಭ ಹೊಂದಿದೆ. ಹೀಗಾಗಿ ಅಲ್ಲಿ ವಿಶಿಷ್ಟ ನಾಗರಿಕತೆಯೊಂದು ಬೆಳೆಯಿತು. ಈಜಿಪ್ತಿನ ನಾಗರಿಕತೆಯು ಜಗತ್ತಿನಲ್ಲಿ ದೀರ್ಘ ಕಾಲ ಬಾಳಿದ ಹಾಗೂ ಶ್ರೀಮಂತ ನಾಗರಿಕತೆಗಳಲ್ಲೊಂದಾಗಿದೆ.

ಈಜಿಪ್ಟ್ ನಾಗರಿಕತೆ ಯ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Egypt Civilisation in Kannada: 'ಈಜಿಪ್ಟ್ ನೈಲ್ ನದಿಯ ವರಪ್ರಸಾದ'

ಈಜಿಪ್ಟ್ ನಲ್ಲಿ ಉತ್ತರಾಭಿಮುಖವಾಗಿ ಹರಿಯುವ ನೈಲ್ ನದಿಯು ತನ್ನ ಇಕ್ಕೆಲಗಳಲ್ಲಿ 15-20 ಕಿ ಮೀ ವರೆಗೆ ಅತ್ಯಂತ ಫಲವತ್ತಾದ ಬಯಲನ್ನು ನಿರ್ಮಿಸಿದೆ. ನೈಲ್ ನದಿಯಿಂದಾಗಿ ಅಲ್ಲಿನ ಜನತೆಗೆ ಸಾಕಷ್ಟು ಪ್ರಮಾಣದಲ್ಲಿ ಆಹಾರ ಮತ್ತು ಸಾಕು ಪ್ರಾಣಿಗಳಿಗೆ ಮೇವು ಮತ್ತು ನಿರಂತರ ನೀರು ಸರಬರಾಜು ಸಾಧ್ಯವಾಯಿತು. ಮಾನವನಿಗೆ ದೊರೆತ ಆಹಾರದ ಭದ್ರತೆ ತನ್ಮೂಲಕ ಸಿಕ್ಕ ಹೆಚ್ಚಿನ ವಿರಾಮದ ಸಮಯದಿಂದಾಗಿ ನಾಗರಿಕತೆಯ ಬೆಳವಣಿಗೆಗೆ ಸಹಾಯವಾಯಿತು. ನೈಲ್ ನದಿಯು ಆಫ್ರಿಕಾದ ದಟ್ಟವಾದ ಭೂಮಧ್ಯವೃತ್ತದ ಕಾಡುಗಳಲ್ಲಿ ಹುಟ್ಟುತ್ತದೆ. ವರ್ಷವಿಡೀ ತುಂಬಿ ಹರಿಯುತ್ತದೆ. ನೈಲ್ ನದಿಯು ಇಲ್ಲದೇ ಹೋಗಿದ್ದರೆ ಈಜಿಪ್ತಿನ ನಾಗರಿಕತೆಯು ಬೆಳೆಯಲು ಸಾಧ್ಯವಾಗುತ್ತಿರಲಿಲ್ಲ. ಆದ್ದರಿಂದ ಈಜಿಪ್ತಿನ್ನು ನೈಲ್ ನದಿಯ ವರಪ್ರಸಾದ ಅಥವಾ ಕೊಡುಗೆ ಎಂದು ಕರೆಯುತ್ತೇವೆ.

ಈಜಿಪ್ತನಲ್ಲಿ ನಾಗರಿಕತೆಯ ಬೆಳವಣಿಗೆಯ ಮೊದಲು ಸಾವಿರಾರು ವರ್ಷಗಳವರೆಗೆ ಆದಿಮಾನವರು ವಾಸಿಸುತ್ತಿದ್ದರು. ಅವರು ಮೂಲತಃ ಬೇಟೆಗಾರರು ಮತ್ತು ಆಹಾರ ಸಂಗ್ರಾಹಕರು ಆಗಿದ್ದರು. ನಿಸರ್ಗದ ಬಹಳಷ್ಟು ಅವಲೋಕನದಿಂದ ಹಸಿ ಮಣ್ಣಿನಲ್ಲಿ ಬೀಜ ಬಿತ್ತಿ ಬೆಳೆ ಬೆಳೆಯುವ ಉಪಾಯವನ್ನು ಅವರು ಕಲಿತಿರಬಹುದಾಗಿದೆ. ಇದು ಕೃಷಿಯ ಪ್ರಾರಂಭವಾಗಿದೆ. ಈ ವೃತ್ತಿಯು ಮಣ್ಣಿನೊಂದಿಗೆ ಮನುಷ್ಯನ ಸಂಬಂಧ ಏರ್ಪಡಿಸಿತು. ಇಲ್ಲಿನ ಜನರ ಮೂಲದ ಬಗ್ಗೆ ಇತಿಹಾಸಕಾರರಲ್ಲಿ ವಿಭಿನ್ನ ಅಭಿಪ್ರಾಯಗಳಿವೆ. ಇವರು ಕಕೇಷಿಯನ್ ಅಥವಾ ಬಿಳಿ ಜನಾಂಗಕ್ಕೆ ಸೇರಿದ ಜನ ಸಮೂಹವೆಂದು ಸಾಮಾನ್ಯವಾಗಿ ನಂಬಲಾಗಿದೆ, ಇವರು ಉತ್ತರ ಯುರೋಪಿನಿಂದ ವಲಸೆ ಬಂದರೆಂದೂ ನಂಬಲಾಗಿದೆ.

ಈಜಿಪ್ಟ್ ನಾಗರಿಕತೆ ಯ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Egypt Civilisation in Kannada: ಈಜಿಪ್ತಿನ ನಾಗರಿಕತೆಯ ಮೂಲಾಧಾರಗಳು

ಈ ಮಹಾನ್ ನಾಗರಿಕತೆಯು ಸುಮಾರು 7,000 ವರ್ಷಗಳ ಹಿಂದೆ ಪ್ರಾರಂಭವಾಯಿತು. ಇದು 3,000 ವರ್ಷಗಳಿಗೂ ಹೆಚ್ಚು ಕಾಲ ಮುಂದುವರೆಯಿತು. ಆ ಕಾಲದ ವಿವಿಧ ಪುರಾತತ್ವ ಮತ್ತು ಸಾಹಿತ್ಯಕ ಆಧಾರಗಳು ನಮಗೆ ಲಭ್ಯವಾಗಿವೆ. ಅವು ಆ ಕಾಲದ ಇತಿಹಾಸವನ್ನು ಪುನರ್ ರಚಿಸಲು ಸಹಾಯಕವಾಗಿವೆ. ಪಿರಾಮಿಡ್ಡುಗಳು, ದೇವಾಲಯಗಳು, ಪಿರಾಮಿಡ್ಡುಗಳಲ್ಲಿ ಇಟ್ಟಿರುವ ಅಸಂಖ್ಯಾತ ಮೂರ್ತಿಗಳು, ಸಿಂಕ್ಸ್ ಮೂರ್ತಿಶಿಲ್ಪ, ಚಿತ್ರ ಕಲಾಕೃತಿಗಳು, ಹಲವು ರೀತಿಯ ಸಾಧನ ಹಾಗೂ ಸಲಕರಣೆಗಳು, ಆಭರಣಗಳು, ಪ್ಯಾಪಿರಸ್ ಎಲೆಯ ಮೇಲೆ ಹೈರೋಗ್ಲಿಫಿಕ್ ಲಿಪಿಯಲ್ಲಿ ಬರೆದ ಗ್ರಂಥಗಳು, ರೊಸೆಟ್ಟಾ ಶಿಲಾಶಾಸನ ಮುಂತಾದವು ಪ್ರಮುಖ ಆಧಾರಗಳಾಗಿವೆ. ಕ್ರಿ ಶ 1798 1802 ರ ಅವಧಿಯಲ್ಲಿ ನೆಪೋಲಿಯನ್ನನು ಈಜಿಪ್ಟಿನ ಮೇಲೆ ದಾಳಿ ಮಾಡಿದನು. ಅದಾದನಂತರ ಈಜಿಪ್ತಿನ ಇತಿಹಾಸದ ಅಧ್ಯಯನವು ವೇಗ ಪಡೆದುಕೊಂಡಿತು.


ಈಜಿಪ್ಟ್ ನಾಗರಿಕತೆ ಯ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Egypt Civilisation in Kannada: ರಾಜಕೀಯ ಸ್ಥಿತಿ:

ಆರಂಭಿಕ ಜನರು ಹಳ್ಳಿಗಳಲ್ಲಿ ವಾಸಿಸುತ್ತಿದ್ದರು. ಮುಂದೆ ಅವುಗಳೇ ನಗರಗಳಾಗಿ ಬೆಳೆದು 'ನಗರ-ರಾಜ್ಯ' ಗಳಾದವು, ಅವು ರಾಜರಿಂದ ಆಳಲ್ಪಡುತ್ತಿದ್ದು, ಇವನ್ನು ರಾಜಮನೆತನಗಳ ಪೂರ್ವಕಾಲವೆಂದು ಕರೆಯುತ್ತಾರೆ. ನಗರ ರಾಜ್ಯಗಳು ಆಂತರಿಕ ಕಲಹದಲ್ಲಿ ತೊಡಗಿದವು. ಇದು ರಾಜ್ಯಗಳ ಉದಯಕ್ಕೆ ದಾರಿ ಮಾಡಿಕೊಟ್ಟಿತು. ರಾಜ್ಯಗಳನ್ನು ಅನೇಕ ರಾಜ ಮನೆತನಗಳು ಆಳಿದವು. ಈಜಿಪ್ತಿನ ನಾಗರಿಕತೆಯ 3,000 ವರ್ಷಗಳ ಅವಧಿಯಲ್ಲಿ 30 ರಾಜಮನೆತನಗಳು ಆಳಿವೆ. ಇವುಗಳಲ್ಲಿ ಯಾವೊಂದು ರಾಜಮನೆತನವು ಆರರಿಂದ ಏಳು ತಲೆಮಾರುಗಳಿಗೂ ಹೆಚ್ಚಿಗೆ ಬದುಕಲಿಲ್ಲ.

ಈಜಿಪ್ಟಿನ ರಾಜರನ್ನು 'ಫೆರೋ'ಗಳೆಂದು ಕರೆಯಲಾಗುತ್ತಿತ್ತು. ಅವರನ್ನು ಭೂಮಿಯ ಮೇಲೆ ದೇವರ ಪ್ರತಿನಿಧಿಗಳೆಂದು ಭಾವಿಸಲಾಗಿತ್ತು. ಆ ಕಾರಣಕ್ಕಾಗಿಯೇ ಅವರು ಅಪರಿಮಿತ ಅಧಿಕಾರವನ್ನು ಅನುಭವಿಸುತ್ತಿದ್ದರು. 'ಫೆರೋ' ಮೀನು ಉತ್ತರ ಮತ್ತು ದಕ್ಷಿಣದ ಈಜಿಪ್‌ಗಳನ್ನು ಸಾ.ಶ.ಪೂ 3000ರಲ್ಲಿ ಒಂದುಗೂಡಿಸಿದನು. ಮತ್ತು ಮೆಂಫಿಸ್‌ನ್ನು ತನ್ನ ರಾಜಧಾನಿಯನ್ನಾಗಿ ಮಾಡಿಕೊಂಡನು. ಫೆರೋ ಸಂಸ್ಥೆಯು ಎಷ್ಟೊಂದು ಬಲಿಷ್ಠವಾಗಿತ್ತೆಂದರೆ, ಅದರಲ್ಲಿ ರಾಜಕೀಯ ಮತ್ತು ಧಾರ್ಮಿಕ ಅಧಿಕಾರಗಳೆರಡೂ ಅಡಕವಾಗಿದ್ದವು, ಬಲಿಷ್ಠವಾದ ಕೇಂದ್ರ ಸರ್ಕಾರ, ಪರಮಾಧಿಕಾರಿ ರಾಜ್ಯ ಸತ್ತ ಸುನಿಯಂತ್ರಿತ ಆಡಳಿತ ಮತ್ತು ಕಟ್ಟುನಿಟ್ಟಿನ ಕಾನೂನು ಪಾಲನೆ ಇವು ಈಜಿಪ್ತಿನ ರಾಜ್ಯ ವ್ಯವಸ್ಥೆಯ ಮೂಲ ಲಕ್ಷಣಗಳಾಗಿದ್ದವು.

ರಾಜ ಮನೆತನಗಳ ಆಳ್ವಿಕೆಯ ಕಾಲವನ್ನು ಮೂರು ಭಾಗಗಳಾಗಿ ವಿಂಗಡಿಸಬಹುದು.

1) ಹಳೆಯ ರಾಜ ಮನೆತನಗಳ ಕಾಲ 

2) ಮಧ್ಯ ರಾಜ ಮನೆತನಗಳ ಕಾಲ 

3) ಹೊಸ ರಾಜ ಮನೆತನಗಳ ಕಾಲ

1) ಹಳೆಯ ರಾಜ ಮನೆತನಗಳ ಕಾಲ:

ಇದನ್ನು ಪಿರಾಮಿಡ್ಡಗಳ ಕಾಲವೆಂದು ಕರೆಯುತ್ತಾರೆ. ಈ ಕಾಲದ ಫೆರೋಗಳು ಅತ್ಯಂತ ಬಲಿಷ್ಠರಾಗಿದ್ದರು. ರಾಜನಿಗೆ ಸಲಹೆ ನೀಡಲು ಹಿರಿಯರ ಸಭೆಯೊಂದಿತ್ತು. ಆದರೆ ಅದರ ಸಲಹೆ ರಾಜನಿಗೆ ಕಡ್ಡಾಯವಾಗಿರಲಿಲ್ಲ. ಫೆರೋ 'ವಿಝರ'ನನ್ನು ನೇಮಿಸುತ್ತಿದ್ದ. ಆತ ಪ್ರಧಾನ ಮಂತ್ರಿಯಾಗಿದ್ದು, ಆಡಳಿತ, ನ್ಯಾಯ ಮತ್ತು ಖಜಾನೆಗಳ ಮುಖ್ಯಸ್ಥನಾಗಿದ್ದನು. ವಿಝೀರನಿಗೆ ಸಹಾಯ ಮಾಡಲು ಸ್ಥಳೀಯ ಮತ್ತು ಕೇಂದ್ರಿಯ ಅಧಿಕಾರಿಗಳಿದ್ದರು. ಸ್ಥಳೀಯ ಅಧಿಕಾರಿಗಳು ತೆರಿಗೆ ಸಂಗ್ರಹಿಸುವದರೊಂದಿಗೆ ಕಾನೂನು ಸುವ್ಯವಸ್ಥೆಯ ಪಾಲನೆ ಮಾಡುತ್ತಿದ್ದರು. ಕೇಂದ್ರಿಯ ಅಧಿಕಾರಿಗಳು ದಾಖಲೆ ಮತ್ತು ಲೆಕ್ಕ ಪತ್ರಗಳನ್ನು ಇಡುತ್ತಿದ್ದರು.

2) ಮಧ್ಯ ರಾಜ ಮನೆತನಗಳ ಕಾಲ:

ಇದನ್ನು ಭೂ ಮಾಲೀಕರ ಕಾಲವೆಂದೂ ಕರೆಯುತ್ತಾರೆ. ಈ ಅವಧಿಯಲ್ಲಿ ಜಮೀನ್ದಾರರು ಮತ್ತು ಸರದಾರರು ಫೆರೋಗಳಿಗಿಂತಲೂ ಹೆಚ್ಚು ಶಕ್ತಿಶಾಲಿಗಳಾದರು. ಇದರಿಂದ ಅನೇಕ ಅಂತರಿಕ ಯುದ್ಧಗಳಾಗಿ ಅರಾಜಕತೆ ಉಂಟಾಯಿತು. 1ನೇ ಅಮೆನ್ ಹೊಟಪ್ ಎಂಬ ಫೆರೋ, ಫೆರೋಗಳ ಪ್ರಭುತ್ವವನ್ನು ಮರು ಸ್ಥಾಪಿಸಿದನು.

3) ಹೊಸ ರಾಜ್ಯಗಳ ಕಾಲ:

ಈ ಕಾಲದಲ್ಲಿ ರಾಜರು ಬಲಿಷ್ಠವಾದ ಸೈನ್ಯವನ್ನು ಸಂಘಟಿಸಿದರು ಮತ್ತು ಬಲವಾದ ಸಾಮ್ರಾಜ್ಯವನ್ನು ಕಟ್ಟಿದರು. 1ನೇ ಥಟ್‌ಮೋಸನು ಹೊಸ ಪ್ರದೇಶಗಳನ್ನು ಗೆದ್ದು ತನ್ನ ಸಾಮ್ರಾಜ್ಯವನ್ನು ವಿಸ್ತರಿಸಿದನು. ಅವನ ಮಗಳಾದ ಹತ್ತೆಪ್ಪುಟ್ಳು ಅವನ ಉತ್ತರಾಧಿಕಾರಿಯಾದಳು, ಹಾಗೂ 21 ವರ್ಷಗಳ ಕಾಲ ಆಳ್ವಿಕೆ ಮಾಡಿದಳು. ಇವಳನ್ನು ಜಾಗತಿಕ ಇತಿಹಾಸದ ಪ್ರಥಮ ಸಾಮಾಜೆಯೆಂದು ಗುರುತಿಸಲಾಗಿದೆ.


ಈಜಿಪ್ಟ್ ನಾಗರಿಕತೆ ಯ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Egypt Civilisation in Kannada: ಸಾಮಾಜಿಕ ಸ್ಥಿತಿ:

ಈಜಿಪ್ತಿಯನ್ನರ ಸಮಾಜ ಸುಸಂಘಟಿತವಾಗಿತ್ತು. ಸಮಾಜದಲ್ಲಿ ಮೇಲ್ವರ್ಗ, ಮಧ್ಯಮ ವರ್ಗ ಮತ್ತು ಗುಲಾಮರೆಂಬ ಮೂರು ವರ್ಗಗಳಿದ್ದವು. ಮೇಲ್ವರ್ಗ-ರಾಜ ಪರಿವಾರ, ಪುರೋಹಿತರು. ಜಮೀನ್ದಾರರು, ಮತ್ತು ಸೈನ್ಯದ ಸರದಾರರನ್ನು ಒಳಗೊಂಡಿತ್ತು. ಮೇಲ್ವರ್ಗದ ಜನರು ಶೃಂಗರಿಸಿದ ಮಹಲುಗಳಲ್ಲಿದ್ದು, ಸುಖ ಸಂಪತ್ತು ಮತ್ತು ವೈಭೋಗದ ಜೀವನವನ್ನು ನಡೆಸುತ್ತಿದ್ದರು. ವೈದ್ಯರು, ಕುಶಲ ಕರ್ಮಿಗಳು, ಲಿಪಿಕರು, ವ್ಯಾಪಾರಿಗಳು ಮತ್ತು ರೈತರು, ಮಧ್ಯಮ ವರ್ಗಕ್ಕೆ ಸೇರಿದ್ದರು. ಕೆಳ ವರ್ಗವು ಗುಲಾಮರಿಂದ ಕೂಡಿತ್ತು. ಈ ವರ್ಗದ ಜನ ಅತ್ಯಂತ ಶ್ರಮದಾಯಕ ಮತ್ತು ಕಷ್ಟದ ಜೀವನವನ್ನು ನಡೆಸುತ್ತಿದ್ದರು.


ಈಜಿಪ್ಟ್ ನಾಗರಿಕತೆ ಯ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Egypt Civilisation in Kannada: ಮಹಿಳೆಯರ ಸ್ಥಿತಿ:

ಈಜಿಪ್ತಿನ ಮಹಿಳೆಯರು ಸಮಾಜದಲ್ಲಿ ಅತ್ಯಂತ ಉಚ್ಛ ಸ್ಥಾನಮಾನ ಹೊಂದಿದ್ದರು, ಇಂತಹ ಉನ್ನತ ಸ್ಥಾನಮಾನವನ್ನು ಜಗತ್ತಿನ ಬೇರೆ ಯಾವ ನಾಗರಿಕತೆಯ ಮಹಿಳೆಯರು ಹೊಂದಿರಲಿಲ್ಲ. ಅದಕ್ಕಾಗಿಯೇ ಈಜಿಪ್ಟಿನ ನಾಗರೀಕತೆಯು ಜಗತ್ತಿನ ಮೊಟ್ಟ ಮೊದಲ ರಾಣಿಯಿಂದ ಆಳಲ್ಪಟ್ಟ ದೇಶವೆಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಮಹಿಳೆಯರಿಗೆ ಪಿತ್ರಾರ್ಜಿತ ಆಸ್ತಿಯಲ್ಲಿ ಸಮಪಾಲು ಇತ್ತು. ರಾಜ ಮನೆತನಗಳಲ್ಲಿ ಪರಿವಾರದಲ್ಲಿಯೇ ಮದುವೆ ಆಗುತ್ತಿದ್ದರು. ಫಿರೋಗಳು ತಮ್ಮ ಅಕ್ಕ-ತಂಗಿಯರನ್ನು, ಮಕ್ಕಳನ್ನು ಲಗ್ನವಾಗುತ್ತಿದ್ದರು. ಆಸ್ತಿ ಮತ್ತು ಅಧಿಕಾರ ಇನ್ನೊಬ್ಬರ ಕೈಗೆ ಹೋಗುವದನ್ನು ತಪ್ಪಿಸುವದು ಮತ್ತು ರಕ್ತ ಪಾವಿತ್ರ್ಯತೆ' ಯನ್ನು ಕಾಪಾಡುವುದು ಇದರ ಹಿಂದಿನ ಉದ್ದೇಶವಾಗಿತ್ತು.

ಆರ್ಥಿಕ ಸ್ಥಿತಿ:

ಕೃಷಿ:

ಈಜಿಪ್ಟ್ ಕೃಷಿ ಪ್ರಧಾನ ಅರ್ಥವ್ಯವಸ್ಥೆಯಾಗಿತ್ತು. ನೈಲ್ ನದಿಯಿಂದಾಗಿ ಅವರ ಕೃಷಿ ಸಮೃದ್ಧವಾಗಿತ್ತು. ಪ್ರಾರಂಭದಲ್ಲಿ ಬಾಹುಬಲದಿಂದಲೇ ಉಳುಮೆ ಮಾಡಲಾಗುತ್ತಿತ್ತು. ಇದು ನಿಧಾನವೂ, ಶ್ರಮದಾಯಕವೂ ಆಗಿತ್ತು. ಕಾಲಾಂತರದಲ್ಲಿ ಗುದ್ದಲಿಗೆ ಉದ್ದನೆಯ ಕಟ್ಟಿಗೆ ಜೋಡಿಸಿ ನೇಗಿಲದಂತೆ ಬಳಸುವ ಪದ್ಧತಿ ರೂಢಿಗೆ ಬಂತು. ಇದುವೇ ಮುಂದೆ ನೇಗಿಲ ಮೂಲಕ ಉಳುಮೆಗೆ ನಾಂದಿಯಾಯಿತು. ಈಜಿಪ್ತಿಯನ್ನರು ಗೋಧಿ, ಬಾರ್ಲಿ, ಹತ್ತಿ, ಬಟಾಣಿ, ಬೆಳ್ಳುಳ್ಳಿ, ವಿವಿಧ ತರಕಾರಿ ಮತ್ತು ಹಣ್ಣುಗಳನ್ನು ಬೆಳೆಯುತ್ತಿದ್ದರು. ನೀರಾವರಿಗಾಗಿ ಕಾಲುವೆಗಳು ಮತ್ತು ಬಿತವನ್ನು ಬಳಸುತ್ತಿದ್ದರು.

ಕೈ ಕಸಬುಗಳು ಮತ್ತು ಉತ್ಪಾದಕರು: ಈಜಿಪ್ತಿಯನ್ನರು ಹಲವಾರು ಕೈಕಸಬುಗಳು ಮತ್ತು ಉತ್ಪಾದನೆಗಳನ್ನು ಮಾಡುತ್ತಿದ್ದರು. ಪಡ್ಡರು, ಕಲ್ಲು ಕುಟುಕರು, ಬಡಿಗ, ಕಮಾರ, ಕುಂಬಾರ, ಚಿನಿವಾರ ಮೊದಲಾದವರು ಈಜಿಪ್ತಿಯನ್ನರ ಜೀವನಕ್ಕೆ ಸಂಪತ್ತು, ಸೌಕರ್ಯಗಳನ್ನು ಹಾಗೂ ಆಯುಷ್ಯಾರಾಮವನ್ನು ಒದಗಿಸಿ ಕೊಟ್ಟರು. ತಾಮ್ರವು ಅವರು ಉಪಯೋಗಿಸಿದ ನಂತರದ ಕಾಲದಲ್ಲಿ ಬಳಸಿದರು. ಮೊದಲ ಲೋಹವಾಗಿತ್ತು, ಹಿತ್ತಾಳೆ, ಕಂಚು, ಕಬ್ಬಿಣ ಮತ್ತು ಬಂಗಾರಗಳನ್ನು ವ್ಯಾಪಾರ ಮತ್ತು ವಾಣಿಜ್ಯ, ಈಜಿಪ್ತಿಯನ್ನರು ಪೂರ್ವ ಮೆಡಿಟರೇನಿಯನ್ ಮತ್ತು ಕೆಂಪು ಸಮುದ್ರದ ಪ್ರದೇಶಗಳಾದ, ಈಗಿನ ಸಿರಿಯಾ, ಲೆಬನಾನ್ ಮತ್ತು ಯಮನ್‌ಗಳೊಂದಿಗೆ ವ್ಯಾಪಾರ ಸಂಬಂಧ ಹೊಂದಿದ್ದರು. ಇವರು ಆಂತರಿಕ ಹಾಗೂ ವಿದೇಶಿ ವ್ಯಾಪಾರಗಳೆರಡನ್ನೂ ಅಭಿವೃದ್ಧಿಗೊಳಿಸಿದ್ದರು. ವಸ್ತು ವಿನಿಮಯವು ಬಳಕೆಯಲ್ಲಿತ್ತು. ಇವರು ಮೆಸೊಪೊಟೇಮಿಯಾ ಹಾಗೂ ಏಷ್ಯಾದ ರಾಷ್ಟ್ರಗಳೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದರು. ನದಿಯಲ್ಲಿ ದೋಣಿ, ಸಮುದ್ರದಲ್ಲಿ ಚಿಕ್ಕ ಹಡಗುಗಳು, ರಸ್ತೆಯಲ್ಲಿ ಪ್ರಾಣಿಗಳು, ಸಾಗಾಟದ ಪ್ರಮುಖ ಸಾಧನಗಳಾಗಿದ್ದವು. ವಿವಿಧ ಬಗೆಯ ತೆರಿಗೆಗಳನ್ನು ಸಂಗ್ರಹಿಸುತ್ತಿದ್ದರು. ಕೃಷಿ, ವ್ಯಾಪಾರ ಮತ್ತು ಕಸಬುಗಳ ಮೇಲಿನ ತೆರಿಗೆಯು ಆದಾಯದ ಶೇ.10 ರಿಂದ 20 ರವರೆಗೆ ಸಂಗ್ರಹಿಸಲ್ಪಡುತ್ತಿತ್ತು. ತೆರಿಗೆಗಳನ್ನು ಹಣ ಹಾಗು ವಸ್ತು ರೂಪಗಳೆರಡರಲ್ಲೂ ಸಂಗ್ರಹಿಸುತ್ತಿದ್ದರು.


ಈಜಿಪ್ಟ್ ನಾಗರಿಕತೆ ಯ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Egypt Civilisation in Kannada: ಧಾರ್ಮಿಕ ಸ್ಥಿತಿ:

ಧರ್ಮವು ಈಜಿಪ್ತಿಯನ್ನರ ಜೀವನದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿತ್ತು. ಬಹು ದೇವತಾರಾಧನೆ ಜಾರಿಯಲ್ಲಿತ್ತು. ಇವರು ಪಕ್ಷಿ ಮತ್ತು ಪ್ರಾಣಿಗಳನ್ನು ಪೂಜಿಸುತ್ತಿದ್ದರು ಅಮುನ್‌ರಾ ದೇವರ ದೇವನಾಗಿದ್ದನು. ಇವನನ್ನು ಈಜಿಪ್ಟಿನ ನಿರ್ಮಾಪಕನೆಂದು ನಂಬಲಾಗಿತ್ತು. ರಾ ಎಂಬುವನು ಸೂರ್ಯದೇವತೆ, ಓಸಿರಿಸ್ ಪಾತಾಳದ ಮತ್ತು ಮೃತ್ಯು ದೇವತೆ ಆಗಿದ್ದ. ಇಸಿಸ್ ಮಾತೃತ್ವದ ದೇವತೆ ಮತ್ತು ಓಸಿರಸ್‌ನ ಹೆಂಡತಿಯಾಗಿದ್ದಳು. ಹೋರಸ್, ಹ್ಯಾಫರ್ ಮುಂತಾದವರು ಕೆಳ ಶ್ರೇಣಿಯ ದೇವತೆಗಳಾಗಿದ್ದರು. ಈಜಿಪ್ತಿಯನ್ನರು ತಮ್ಮ ದೇವತೆಗಳಿಗೆ ಆನೇಕ ಗುಡಿಗಳನ್ನು ಕಟ್ಟಿದ್ದರು. ಇವರು ಅತ್ಯಗಳ ಮರು ಆಗಮನದಲ್ಲಿ ನಂಬಿಕೆಯಿಟ್ಟಿದರು ಮತ್ತು ಈ ಕಾರಣಕ್ಕಾಗಿಯೇ ಶವಗಳನ್ನು ಮಮ್ಮಿಗಳಲ್ಲಿ ಸಂರಕ್ಷಿಸಿಡುತ್ತಿದ್ದರು. ಇವರಿಗೆ ಮನರ್ ಜನ್ಮದಲ್ಲಿಯೂ ವಿಶ್ವಾಸವಿತ್ತು. ಪುರೋಹಿತರು ಉಚ್ಛ ಸ್ಥಾನಮಾನ ಅನುಭವಿಸುತ್ತಿದ್ದರು. ರಾಜ, ಧರ್ಮದ ಮುಖ್ಯಸ್ಥನಾಗಿದ್ದನು. 4ನೇ ಅಮನ್ ಹೊಟೆಪ್ ಎಂಬ ದೊರೆ ಏಕ ದೇವತಾರಾಧನೆಯನ್ನು ಜಾರಿಯಲ್ಲಿ ತಂದನು. ಸೂರ್ಯ ಅಥವಾ ರಾ ದೇವತೆಯೊಬ್ಬನನ್ನೇ ಪೂಜಿಸುವಂತೆ ಪ್ರಯತ್ನಿಸಿದನು. ಆದರೆ ನಂತರದ ದೊರೆಗಳು ಇದನ್ನು ಮುಂದುವರೆಸಲಿಲ್ಲ.

ಈಜಿಪ್ಟ್ ನಾಗರಿಕತೆ ಯ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Egypt Civilisation in Kannada: ಮಮ್ಮಿಕರಣ:

ರಾಜರ ಶವವನ್ನು ಸಂರಕ್ಷಿಸಿಡುವ ಪ್ರಕ್ರಿಯೆಯನ್ನು ಮಮ್ಮಿಕರಣ ಎಂದು ಕರೆಯುತ್ತಾರೆ. ಮಮ್ಮಿಯು ವ್ಯಕ್ತಿಯೊಬ್ಬನ ಆತ್ಮದ ಸತ್ತ ನಂತರದ ಜೀವನಕ್ಕೆ ಮನೆಯಾಗಿತ್ತು. ಈಜಿಪ್ತಿಯನ್ನರು ಸಾವಿನ ನಂತರದ ಜೀವನಕ್ಕೆ ಎಷ್ಟೋ ವರ್ಷ ಮೊದಲು ಸಿದ್ಧತೆಗಳನ್ನು ನಡೆಸುತ್ತಿದ್ದರು. ಈಜಿಪ್ತಿಯನ್ನರು ಶವದ ಶರೀರದಿಂದ ಹೃದಯವನ್ನು ಹೊರತು ಪಡಿಸಿ ಉಳಿದ ಆಂತರಿಕ ಅಂಗಾಂಗಳನ್ನು ಹೊರ ತೆಗೆಯುತ್ತಿದ್ದರು ಮತ್ತು ಶರೀರವನ್ನು 40 ದಿನಗಳ ಕಾಲ ನಾರ್‌ಟಾನ್ ಲವಣದಲ್ಲಿ ಒಣಗಿಸುತ್ತಿದ್ದರು. ನಂತರ ಶರೀರದಲ್ಲಿ ಒಣ ಎಲೆ ಅಥವಾ ಕಟ್ಟಿಗೆಯ ಹೊಟ್ಟನ್ನು ತುಂಬಿ ಬಟ್ಟೆಯಲ್ಲಿ ಸುತ್ತಿಡುತ್ತಿದ್ದರು. ಈ ಮಮ್ಮಿಯನ್ನು ಶವ ಪೆಟ್ಟಿಗೆಯಲ್ಲಿಟ್ಟು ಅದಕ್ಕೆ ಮೇಲು ಹೊದಿಕೆ ಹಾಕುತ್ತಿದ್ದರು. ಮತ್ತು ಇದರ ಮೇಲೆ “ಸತ್ತವರ ಪುಸ್ತಕ' ವನ್ನು ಇಡುತ್ತಿದ್ದರು. ಈ ಪುಸ್ತಕಗಳಲ್ಲಿರುವ ಜ್ಞಾನವು ಮೃತ ವ್ಯಕ್ತಿಯು ಆನಂದ ಪೂರ್ವಕವಾಗಿ ಸ್ವರ್ಗ ಸೇರುವ ಜ್ಞಾನವನ್ನು ಕೊಟ್ಟು ಸಹಕರಿಸುತ್ತದೆ ಎಂದು ನಂಬಿದ್ದರು.


ಸಾಹಿತ್ಯ ಮತ್ತು ಕಲಿಕೆ:

ಈಜಿಪ್ತಿಯನ್ನರು ಚಿತ್ರ ಲಿಪಿಯನ್ನು ಅಭಿವೃದ್ಧಿ ಪಡಿಸಿದ್ದರು. ಇದು ಅತ್ಯಂತ ಆರಂಭದ ಬರವಣಿಗೆಯ ಪ್ರಕಾರಗಳಲ್ಲೊಂದು. ಇವರು ಪೆಪಿರಸ್ ತೊಗಟೆಯನ್ನು ಬರವಣಿಗೆಗೆ ಬಳಸುತ್ತಿದ್ದರು. ಈಜಿಪ್ತಿಯನ್ನರ ಬರವಣಿಗೆಯನ್ನು 'ಹೈರೋಗ್ಲಿಫ್' ಎಂದು ಕರೆಯುತ್ತಾರೆ. ಗ್ಲಿಫ್ ಎಂದರೆ, ಚಿಹ್ನೆ ಎಂದರ್ಥ. ಹೈರೋಗ್ಲಿಫ್ ನೂರಾರು ಚಿಹ್ನೆಗಳನ್ನೊಳಗೊಂಡಿದೆ. ಅದರಲ್ಲಿ ಕೆಲವು ಚಿಹ್ನೆಗಳು ಪೂರ್ಣ ಶಬ್ದಗಳಾಗಿವೆ. ಇನ್ನುಳಿದವು ಧ್ವನಿಗಳನ್ನು ಪ್ರತಿನಿಧಿಸುತ್ತವೆ, 'ದ ಬುಕ್ ಆಫ್ ದಿ ಡೆಡ್', 'ಕಾಫಿನ್ ಟೆಕ್ಸ್', 'ದಿ ಸ್ಟೋರಿ ಆಫ್ ದಿ ಶಿಪ್ ರೆಕ್ಟ್ ಸೇಲರ್‌', 'ದಿ ಟೇಲ್ ಆಫ್ ಅನುಪು ಮತ್ತು ಬಿಟೂ', ಮುಂತಾದ ಪುಸ್ತಕಗಳು ದೊರಕಿವೆ.

ಈಜಿಪ್ತಿಯನ್ನರಿಗೆ ರೇಖಾ ಗಣಿತ ಪಂಚಾಂಗ, ಖಗೋಳ ಶಾಸ್ತ್ರ ಮತ್ತು ಗಣಿತ ಶಾಸ್ತ್ರದ ಉತ್ತಮ ಜ್ಞಾನವಿತ್ತು. ಪ್ರಾಚೀನ ಈಜಿಪ್ತಿನ ಬಹಳಷ್ಟು ಪಂಡಿತರು ಪುರೋಹಿತ ವರ್ಗಕ್ಕೆ ಸೇರಿದವರಾಗಿದ್ದರು. ಬೃಹತ್ತಾದ ಪಿರಾಮಿಡ್ಡುಗಳ ನಿರ್ಮಾಣವು, ರೇಖಾ ಗಣಿತ ಮತ್ತು ಅಂಕ ಗಣಿತದಲ್ಲಿ ಈಜಿಪ್ತಿಯನ್ನರ ಪ್ರಖರ ಜ್ಞಾನವನ್ನು ಸಂದೇಹವಿಲ್ಲದಂತೆ ಸಿದ್ಧಮಾಡುತ್ತದೆ. ಅವರು ತ್ರಿಕೋನ, ಆಯತ, ಚೌಕ, ವೃತ್ತ ಮತ್ತು ಷಟ್ರೋನಗಳ ವಿಸ್ತೀರ್ಣವನ್ನು ಖಚಿತವಾಗಿ ಅಳೆಯ ಬಲ್ಲವರಾಗಿದ್ದರು. ಈಜಿಪ್ತಿಯನ್ನರಿಗೆ ಸಂಕಲನ, ವ್ಯವಕಲನ ಮತ್ತು ಭಾಗಾಕಾರದ ಸ್ಪಷ್ಟ ಕಲ್ಪನೆಯಿತ್ತು. ಆದರೆ ಅವರಿಗೆ ಗುಣಾಕಾರದ ತಿಳುವಳಿಕೆ ಇರಲಿಲ್ಲ. ಅವರು ದಶಮಾಂಶ ಅಭಿವೃದ್ಧಿ ಪಡಿಸಿದವರಲ್ಲಿ ಮೊದಲಿಗರಾಗಿದ್ದಾರೆ.

ಅವರಿಗೆ ಗ್ರಹ ಮತ್ತು ನಕ್ಷತ್ರಗಳಲ್ಲಿನ ಅಂತರವು ಸ್ಪಷ್ಟವಾಗಿ ತಿಳಿದಿತ್ತು. ಇವರ ಪಂಚಾಂಗವು ಸೂರ್ಯನನ್ನು ಆಧರಿಸಿತ್ತು ಮತ್ತು ಅದನ್ನು ಸೌರ ಪಂಚಾಂಗ ಎನ್ನುತ್ತಾರೆ. ಅವರು 365 ದಿನಗಳ ಪಂಚಾಂಗವನ್ನು ಅಭಿವೃದ್ಧಿ ಪಡಿಸಿದ್ದರು. ಇದರಲ್ಲಿ ವರ್ಷ ಒಂದಕ್ಕೆ 12 ತಿಂಗಳು ಮತ್ತು ಪ್ರತಿ ತಿಂಗಳಲ್ಲಿ 30 ದಿನಗಳಿದ್ದವು. ಈಜಿಪ್ತಿಯನ್ನರು ವರ್ಷವೊಂದನ್ನು 4 ತಿಂಗಳುಗಳ 3 ಕಾಲಗಳಾಗಿ ವಿಂಗಡಿಸಿದ್ದರು. ನೈಲ್ ನದಿಯ ಮಹಾಪೂರದ ಏರಿಕೆ ಮತ್ತು ಇಳಿಕೆ ಮೊದಲ ಕಾಲವಾಗಿತ್ತು. ಭೂ ಉಳಿಮೆ ಮಾಡಿ ಬಿತ್ತಿ ಬೆಳೆಯುವದು 2ನೇ ಕಾಲವಾಗಿತ್ತು.


ಈಜಿಪ್ಟ್ ನಾಗರಿಕತೆ ಯ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Egypt Civilisation in Kannada:

  • ಈಜಿಪ್ಟ್ ದೇಶ ಈ ಖಂಂಡದಲ್ಲಿದೆ - ಆಫ್ರಿಕಾ ಖಡ
  • ಆಫ್ರಿಕಾ ಖಡ ಈಜಿಪ್ಟ್ ದೇಶ ಈ ಪ್ರದೇಶದಲ್ಲಿದೆ - ಉತ್ತರ ಭಾಗದ ಪೂರ್ವ ಅಂಚು
  • ಈಜಿಪ್ಟ್ ನ ಜೀವ ನದಿ - ನೈಲ್ ನದಿ
  • ಪ್ರಪಂಚದ ಅತ್ಯಂತ ಉದ್ದವಾದ ನದಿ - ನೈಲ್ ನದಿ
  • ನೈಲ್ ನದಿಯು ಹರಿಯುವ ದಿಕ್ಕು - ದಕ್ಷಿಣದಿಂದ ಉತ್ತರ ತುದಿಯವರೆಗೆ
  • ನೈಲ್ ನದಿಯ ಅಗಲ - ಹತ್ತರಿಂದ ಮೂವತ್ತು ಮೈಲುಗಳು
  • ನೈಲ್ ನದಿಯ ಉದ್ದ - ಸುಮಾರು ನಾಲ್ಕು ಮೈಲುಗಳು
  • ಈಜಿಪ್ಟ್ ನ ಪ್ರಾಚೀನ ನಾಗರಿಕತೆ ಉದಯವಾಗಲು ಕಾರಣ - ನೈಲ್ ನದಿ
  • ನೈಲ್ ನದಿಯ ವರಪ್ರಸಾದ - ಈಜಿಪ್ಟ್
  • ನೈಲ್ ನಾಗರಿಕತೆಯನ್ನು ಮೊದಲಿಗೆ ಪತ್ತೆ ಹಚ್ಚಿದವರು - ಷಾಂಪೋಲಿಯನ್
  • ಈಜಿಪ್ಟ್ ನ ಇತಿಹಾಸದ ಬಗ್ಗೆ ದೊರೆತಿರುವ ಶಾಸನಗಳಲ್ಲಿ ಅತ್ಯಂತ ಮುಖ್ಯವಾದ ಶಾಸನ - ರೊಸೆಟ್ಟಾ ಶಾಸನ
  • ನೈಲ್ ನದಿಯಲ್ಲಿ ನಾಗರಿಕತೆಯನ್ನು ಆರಂಭಿಸಿದ ಜನಾಂಗ - ಕಕೇಶಿಯನ್ ಅಥವಾ ಬಿಳಿಯ
  • ಕಕೇಶಿಯನ್ ಜನಾಂಗ ಇಲ್ಲಿಂದ ವಲಸೆ ಬಂದವರು - ಪಶ್ಚಿಮದಿಂದ

ಈಜಿಪ್ಟ್ ನಾಗರಿಕತೆ ಯ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Egypt Civilisation in Kannada: ರಾಜಕೀಯ ಇತಿಹಾಸ


  • ಈಜಿಪ್ಟ್ ನ ರಾಜಕೀಯ ಇತಿಹಾಸ ಪ್ರಥಮ ಭಾಗ - ರಾಜಮನೆತನಗಳ ಪೂರ್ವ ಕಾಲ
  • ರಾಜಮನೆತನಗಳಾಗುವ ಪೂರ್ವಕಾಲದ ಅವಧಿ - ಕ್ರಿ.ಪೂ. 3500 – 3200
  • ಪುರಾತನ ರಾಜ್ಯದ ಪ್ರಾರಂಭ - 3200 ರಿಂದ 2300
  • ಈಜಿಪ್ಟಿಯನ್ನರ ದೊರೆಗಳು - ಫೇರೋ ಎಂದು ಕರೆಯುತ್ತಿದ್ದರು
  • ಎರಡು ಸಾಮ್ರಾಜ್ಯಗಳನ್ನು ಒಂದುಗೂಡಿಸಿ ಏಕಪತ್ಯ ಸ್ಥಾಪಿಸಿದ ಅರಸ - ಮಿನಿಸ್
  • ಈ ಕಾಲದ ಸರದಾರರ ಕಾಲ ಎಂದು ಕರೆಯುವರು - ನಡುಗಾಲದ ರಾಜ್ಯ
  • ಈಜಿಪ್ಟ್ ನ ಪ್ರಪ್ರಥಮ ರಾಣಿ - ಹತ್ಸೇಪುಟ್ಸ್ 
  • ಹತ್ಸೇಪುಟ್ಸ್  ಇವನ ಮಗಳು - ಥುಟ್ ಮೋಸ್
  • ಥುಟ್ ಮೋಸ್ ನ ನಂತರ ಸಿಂಹಾಸನವೇರಿದ ವರು - ರಾಣಿ ಹತ್ಸೇಪುಟ್ಸ್ 
  • ಈಜಿಪ್ಟ್ ಸಾಮ್ರಾಜ್ಯ ಪರ್ಷಿಯನ್ನರ ಕೈಸೇರಿದ್ದು - ಕ್ರಿ.ಪೂ.700 ರಲ್ಲಿ
  • ಈಜಿಪ್ಟ್ ಸಾಮ್ರಾಜ್ಯ ಅಲೆಗ್ಸಾಂಡರ್ ನ ವಶವಾಗಿದ್ದು - ಕ್ರಿ.ಪೂ.4 ನೇ ಶತಮಾನದಲ್ಲಿ
  • ಈಜಿಪ್ಟ್ ಸಾಮ್ರಾಜ್ಯ ರೋಮ್ ನ ಅಧೀನಕ್ಕೆ ಸಾಗಿದ್ದು - ಕ್ರಿ.ಶ 1 ರಲ್ಲಿ
  • ಅರಸು ಎಂದು ಕರೆಯಲ್ಪಡುತ್ತಿದ ರಾಣಿ - ಹಟ್ ಷಪ್ ಸತ್
  • ವಿಶ್ವದ ಇತಿಹಾಸದಲ್ಲಿ ಪ್ರಪ್ರಥಮ ರಾಣಿ - ಹಟ್ಸೆಪುತ್
  • ಹಟ್ಸೆಪುತ್ ಈ ನಗರದಲ್ಲಿ ಅನೇಕ ದೇವಾಲಯಗಳನ್ನು ನಿರ್ಮಿಸಿದಳು - ಕಾರ್ನಕ್
  • ಈಜಿಪ್ಟ್ ನ ರಾಜರನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಪೇರೋ
  • ಪೇರೋ ಪದದ ಅರ್ಥ - ದೇವರ ಪ್ರತಿ ನಿಧಿ ಅಥವಾ ದೈವಾಂಶ ಸಂಭೂತ
  • ಈಜಿಪ್ಟ್ ನಲ್ಲಿ ಜಿಲ್ಲೆಗಳನ್ನು ಈ ಹೆಸರಿನಿಂದ ಕರೆಯಲಾಗಿದೆ - ನೊಮ್ಸ್
  • ನೋಮ್ಸ್ ಗಳನ್ನು ನೋಡಿಕೊಳ್ಳುತ್ತಿದ್ದವರು - ರಾಜ್ಯಪಾಲರು

ಈಜಿಪ್ಟ್ ನಾಗರಿಕತೆ ಯ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Egypt Civilisation in Kannada: ಸಾಮಾಜಿಕ ಸ್ಥಿತಿ


  • ಈಜಿಪ್ಟ್ ನ ಸಮಾಜದ ಆಸ್ತಿಯ ಹಕ್ಕು - ಮಾತೃ ಪ್ರಧಾನವಾಗಿತ್ತು
  • ನಾಲ್ಕನೇ ಅಮನ್ ಹೊತೆಪ್ ನ ಮತ್ತೋಂದು ಹೆಸರು - ಅಖ್ನಾಟನ್
  • ಅಖ್ನಾಟನ್ ಅಧಿಕಾರಕ್ಕೆ ಬಂದಿದ್ದು - ಕ್ರಿ.ಪೂ. 1830 ರಲ್ಲಿ
  • ಈಜಿಪ್ಟ್ ನ ಅಕ್ಬರ್ ಎಂದು ಖ್ಯಾತರಾದವರು - ಅಖ್ನಾಟನ್
  • ನಾಲ್ಕನೆ ಅಮನ್ ಹೊತೆಪ್ ನು ಜಾರಿಗೆ ತಂದ ಏಕದೇಮೋಪಾಸನೆಯನ್ನು ಈ ಹೆಸರಿನಿಂದ ಕರೆಯಲಾಗಿದೆ - ಅಟಾನ್
  • ಅಖ್ನಾಟನ್ ಎಂಬ ಹೆಸರಿನ ಅರ್ಥ - ಅಟನ್ ಗೆ ಪ್ರೀಯವಾದುದು
  • ಪ್ರಥಮ ಮಹಿಳಾ ಆಡಳಿತ ಗಾರ್ತಿಯನ್ನು ನೀಡಿದ ದೇಶ - ಈಜಿಪ್ಟ್

    ಈಜಿಪ್ಟ್ ನಾಗರಿಕತೆ ಯ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Egypt Civilisation in Kannada ಆರ್ಥಿಕ ಸ್ಥಿತಿ

    • ಈಜಿಪ್ಷಿಯನ್ನರ ಪ್ರಮುಖ ಕೆಲಸ - ವ್ಯವಸಾಯ
    • ಈಜಿಪ್ಷಿಯನ್ನರ ಮುಖ್ಯ ಕೈಗಾರಿಕೆ - ಮಡಕೆ ತಯಾರಿಸುವುದು
    • ಈಜಿಪ್ಷಿಯನ್ನರ ಉತ್ಪಾದಿಸುತ್ತಿದ್ದ ಕಾಗದ - ಪ್ಯಾಪಿರಸ್
    • ಈಜಿಪ್ಷಿನ ಜನರು ವ್ಯಾಪಾರ ಸಂಪರ್ಕ ಹೊಂದಿದ್ದ ದೇಶಗಳು - ಗ್ರೀಷ್ಮರೋಮ್ , ಪಶ್ಚಿಮ ಏಷ್ಯಾ ಹಾಗೂ ಸಿರಿಯಾ

      ಈಜಿಪ್ಟ್ ನಾಗರಿಕತೆ ಯ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Egypt Civilisation in Kannada: ಧರ್ಮ


      • ಈಜಿಪ್ಷಿಯನ್ನರ ಪ್ರಮುಖ ಆರಾಧ್ಯ ದೈವ - ಸೂರ್ಯ
      • ಈಜಿಪ್ಷಿಯನ್ನರು ಸೂರ್ಯನನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ರಾ
      • ಈಜಿಪ್ಟಿನ ಪ್ರಸಿದ್ದ ದೇವಾಲಯ ಹೊಂದಿದ್ದ ನಗರಗಳು - ಕಾನರ್ಕ್ ಮತ್ತು ಲತ್ತರ್
      • ಈಜಿಪ್ಷಿಯನ್ನರು ಸೂರ್ಯನ ಜೊತೆಗೆ ಪೂಜಿಸುತ್ತಿದ್ದ ರಾಷ್ಟ್ರೀಯ ದೇವತೆಯ ಹೆಸರು - ಅಮನ್ ರಾ
      • ಇವರು ವಾಯುದೇವನನ್ನ ಈ ಹೆಸರಿನಿಂದ ಕರೆದಿದ್ದಾರೆ - - ಶು
      • ಇವರ ಕಾಲದ ನ್ಯಾಯ ದೇವತೆಯನ್ನ ಈ ಹೆಸರಿನಿಂದ ಕರೆದಿದ್ದಾರೆ - ಒಸಿರಸ್
      • ಇವರು ಭೂ ದೇವಿಯನ್ನ ಈ ಹೆಸರಿನಿಂದ ಕರೆದಿದ್ದಾರೆ - ಇಸ್
      • ಅಮನ್ ರಾ ದೇವರ ಪ್ರತೀಕ - ಟಗರು

        ಈಜಿಪ್ಟ್ ನಾಗರಿಕತೆ ಯ ಸಂಪೂರ್ಣ ಇತಿಹಾಸ ಇಲ್ಲಿದೆ Complete History of The Egypt Civilisation in Kannada: ಕಲೆ ಮತ್ತು ವಾಸ್ತು ಶಿಲ್ಪ

        • ಕಾರ್ನಕ್ ದೇವಾಲಯ ಈ ನಗರದ ಸಮೀಪವಿದೆ - ಥೀಬ್ಸ್ ನಗರದ ಸಮೀಪ ನೈಲ್ ನದಿಯ ದಂಡೆಯ ಮೇಲೆ
        • ಈಜಿಪ್ಷಿಯನ್ನರ ಪ್ರಮುಖ ವಾಸ್ತು ಶಿಲ್ಪ ಹೊಂದಿರುವ ದೇವಾಲಯ - ಕಾರ್ನಕ್
        • ದಿರ್ ಎಲ್ ಬಹಾರಿ ದೇವಾಲಯದ ನಿರ್ಮಾತೃ - ಒಂದನೇ ಥುಟ್ ಮೋಸ್ ಹಾಗೂ ಆತನ ಮಗಳು ರಾಣಿ ಹಟ್ಸೆ ಪ್ಸುತ್
        • ದಿರ್ ಎಲ್ ಬಹಾರಿ ದೇವಾಲಯದ ಪ್ರಮುಖ ವಾಸ್ತು ಶಿಲ್ಪ - ಸೇನ್ ಮುಥ್
        • ದಿರ್ ಎಲ್ ಬಹಾರಿ ದೇವಾಲಯವನ್ನು ಈ ಶಿಲೆಯನ್ನು ಹೊಂದಿದೆ - ಉಸುಕು
        • ಗಿಜೆಯ ಪಿರಮಿಡ್ಡಿನ ರಚನಾಕಾರರು - ಚಿಯೋಪ್ಸ್ ದೊರೆ
        • ಈಜಿಪ್ಷಿಯನ್ನರ ಪ್ರಮುಖ ಮೂರ್ತಿ ಶಿಲ್ಪ - ಸ್ಪಿಂಕ್ಸ್
        • ಸ್ಪಿಂಕ್ಸ್ ಎಂದರೆ - ಮನುಷ್ಯನ ಮುಖ ಹಾಗೂ ಸಿಂಹದ ಶರೀರ ಹೊಂದಿರುವ ಮೂರ್ತಿ ಶಿಲ್ಪ
        • ರಾಣಿ ಹಟ್ಸೆಪುತ್ಸಳ ವಿಗ್ರಹ ಈ ಮ್ಯೂಸಿಯಂನಲ್ಲಿದೆ - ನ್ಯೂಯಾರ್ಕ್
        • ಆರಂಭದಲ್ಲಿ ಈಜಿಪ್ಷಿನ್ನರ ಬಳಸಿದ ಲಿಪಿ - ಪಿಕ್ಟೋಗ್ರಾಫ್ ಅಥವಾ ಚಿತ್ರಲಿಪಿ
        • ನಂತರದಲ್ಲಿ ಈಜಿಪ್ಷಿಯನ್ನರು ಬಳಸಿದ ಲಿಪಿ - ಹಿರೋಗ್ಲಿಪಿಕ್ಸ್
        • ಹಿರೋಗ್ಲಿಪಿಕ್ಸ್ ಎಂದರೇ - ಪವಿತ್ರ ಲಿಪಿ
        • ಪವಿತ್ರ ಲಿಪಿಯನ್ನು ಈ ವರ್ಗವು ಬಳಸುತ್ತಿತ್ತು - ಪುರೋಹಿತ ವರ್ಗ
        • ಮಮ್ಮಿಗಳ ಪೆಟ್ಟಿಗೆಯಲ್ಲಿ ದೊರೆತ ಎರಡು ಪ್ರಮುಖ ಗ್ರಂಥಗಳು - ಮಡಿದವರ ಪುಸ್ತಕ ಹಾಗೂ ಶವ ಪೆಟ್ಟಿಗೆಯ ಪುಸ್ತಕ
        • ಈಜಿಪ್ಷಿಯನ್ನರು - ಗಣಿತ ಹಾಗೂ ರೇಖಾಗಣಿತದಲ್ಲಿ ಮುಂದುವರಿದಿದ್ದರು
        • ಜಲಗಡಿಯಾರವನ್ನು ಕಂಡು ಹಿಡಿದವರು - ಈಜಿಪ್ಷಿಯನ್ನರು
        • ಕ್ಯಾಲೆಂಡರ್ ನ್ನು ಬಳಕೆಗೆ ತಂದವರು - ಈಜಿಪ್ಷಿಯನ್ನರು
        • ನೆಪೋಲಿಯನ್ ಈಜಿಪ್ಟ್ ನ ಮೇಲೆ ದಾಳಿ ಮಾಡಿದ ವರ್ಷ - 1798
        • ಆಪ್ರಿಕಾ ಖಂಡದ ಮಹಾನದಿ ಎಂದು ಕರೆಯಲ್ಪಡುವ ನದಿ - ನೈಲ್
        • ನೈಲ್ ನದಿಯ ದಕ್ಷಿಣ ಭಾಗದಲ್ಲಿರುವ ಪ್ರಾಚೀನ ನಗರಗಳು - ಆಸ್ಪಾನ್ ಥೀಬ್ಸ್ ಹಾಗೂ ಲಕ್ಸರ ಹಾಗೂ ಕಾರ್ನಾಕ್
        • ಈಜಿಪ್ಟ್ ನ ಒಂದು ಪ್ರಮುಖ ಪಟ್ಟಣ - ಟಿಲ್ ಅಮರ್ನಾ
        • ನದಿ ಮುಖಜ ಭೂಮಿಯಲ್ಲಿದ್ದ ನಗರಗಳು - ಮೆಂಘಸಿ ಸರ್ಕಾರ ಹೆಲಿಯಾ ಪೋಲಿಸ್
        • 3000 ವರ್ಷಗಳ ದೀರ್ಘ ಇತಿಹಾಸದಲ್ಲಿ ಆಳಿದ ರಾಜರು - 31
        • ರಾಜಾ ಮಿನಿಸ್ ನ ರಾಜಧಾನಿ - ಮೆಂಫಿಸ್
        • ಅಖ್ನಾಟನ್ ಎಂಬ ಹೆಸರನ್ನು ಹೊಂದಿದ್ದ ಅರಸ - 4 ನೇ ಅಮನ್ ಹೋಟೆಪ್
        • ಸ್ವಕುಟುಂಬ ವಿವಾಹವನ್ನು ಹೊಂದಿದ್ದವರು - ಈಜಿಪ್ಟ್ ನ ರಾಜರು
        • ಈಜಿಪ್ಟಿಯನ್ನರ ಮೇಧಾವಿ ಅರಸ 4 ನೇ ಅಮನ್ ಹೋಟೆಪ್

        • ಅಟನ್ ಎಂದರೆ - ಸೂರ್ಯ ದೇವ
        • ಈಜಿಪ್ಟ್ ನ ಕೊನೆಯ ಅರಸ - ರಾಮೆಸಸ್
        • ಈಜಿಪ್ಟ್ ನಲ್ಲಿ ಟಾಲೆಮಿ ರಾಜಮನೆತನವನ್ನು ಸ್ಥಾಪಿಸಿದ ಗ್ರೀಕ್ ದೊರೆ - ಅಲೆಗ್ಸಾಂಡರ್
        • ಈಜಿಪ್ಷಿಯನ್ನರ ಸಾವಿನ ದೇವತೆಯ ಹೆಸರು - ಒಸಿರಿಸ್
        • ಈಜಿಪ್ಷಿಯನ್ನರು ಕಳೆಬರವನ್ನ ಸಂಗ್ರಹಿಸಲು ಬಳಸುತ್ತಿದ್ದ ಸಾಧನ - ಮಮ್ಮಿ ಹಾಗೂ ಪಿರಮಿಡ್ಡ್
        • ಅತ್ಯಂತ ಎತ್ತರದ ಮೂರ್ತಿ ಶಿಲ್ಪ ಸ್ಪಿಂಕ್ಸ್ ಅನ್ನು ರಚಿಸಿದ ಈಜಿಪ್ಟ್ ದೊರೆ - ಖಪ್ರೆ ( 160 ಅಡಿ ಎತ್ತರ )
        • ಕಾರ್ನಾಕ್ ದೇವಾಲಯದ ರಚನೆಕಾರರು - ಮೂರನೇ ರಾಮೆಸಸ್
        • ಅತ್ಯಂತ ದೊಡ್ಡ ಪಿರಮಿಡ್ಡ್ ಇಲ್ಲಿದೆ - ಗಿಜೆಯಲ್ಲಿದೆ
        • ಗಿಜೆಯ ಪಿರಮಿಡ್ಡ್ ನ ವ್ಯಾಸ - 481 ಅಡಿ ಎತ್ತರ 146 ಅಡಿ ತಳ ಹಾಗೂ 13 ಎಕರೆ ಪ್ರದೇಶವನ್ನು ವ್ಯಾಪಿಸಿದೆ
        • ಮೊಟ್ಟ ಮೊದಲು ಅಂಚೆ ವ್ಯವಸ್ಥೆ ಹಾಗೂ ಜನಗಣತಿಯನ್ನು ಜಾರಿಗೆ ತಂದವರು - ಈಜಿಪ್ಟಿಯನ್ನರು
        • Paper ಎಂಬ ಪದದ ಮೂಲ ಪದ - ಪ್ಯಾಪಿರಸ್
        • ಈಜಿಪ್ಟಿಯನ್ನರ ಶಾಯಿ ಮಾಡಲು ಬಳಸುತ್ತಿದ್ದ ವಸ್ತು - ವನಸ್ಪತಿಯ ರಸ
        • ಈಜಿಪ್ಟಿಯನ್ನರ ಲೇಖನಿ - ಲಾಳದ ಕಡ್ಡಿ
        • ಗಾಜನ್ನು ಸೌಂದರ್ಯ ವರ್ಧಕ ಸಾಧನಗಳು ಹಾಗೂ ಸೌರಮಾನ ಪಂಚಾಂಗ ಮೊದಲು ತಯಾರಿಸಿದವರು - ಈಜಿಪ್ಟಿಯನ್ನರು
        • ನೆರಳಿನ ಗಡಿಯಾರವನ್ನು ರೂಪಿಸಿದವರು - ಈಜಿಪ್ಟಿಯನ್ನರು
        • ಪ್ಯಾಪಿರಸ್ ನ ಕಟ್ಟುಗಳು ಯಾವ ಬಂದರಿನಿಂದ ರಪ್ತಾಗುತ್ತಿತ್ತು - ಬಿಬ್ಲಾಸ್
        • ಬೈಬಲ್ ಪದದ ಅರ್ಥ - ಪುಸ್ತಕ
        • ಈಜಿಪ್ಟ್ ನ ಇತಿಹಾಸದ ದ್ವಿತೀಯ ಮಹಿಳೆ - ಕ್ಲಿಯೋಪಾತ್ರ
        • ನೈಲ್ ನದಿಯ ಕಣಿವೆಯಲ್ಲಿ ಬಳೆಯುವ ಸಸ್ಯ - ಪ್ಯಾಕ್ಸ್
        • ಅತ್ಯಂತ ಹಳೆಯ ಪಿರಮಿಡ್ ಪತ್ತೆಯಾದದ್ದು - ಕೈರೋನಗರದಲ್ಲಿ

        No comments:

        Post a Comment

        If you have any doubts please let me know

        ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

        Popular Posts

        Facebook

        Buy Products

        ಪ್ರಚಲಿತ ಪೋಸ್ಟ್‌ಗಳು

        Most Useful Notes

        Labels

        Buy Products

        Random Posts

        Buy Products

        Most Useful Notes

        Recent Posts

        Useful PDF Notes

        Important PDF Notes

        Ads