Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Monday 11 July 2022

ಅಧ್ಯಾಯ-3 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು British Alvikeya Parinamagalu SSLC Social Science Question Answers

 

ಅಧ್ಯಾಯ-3 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು British Alvikeya Parinamagalu SSLC Social Science Question Answers

ಅಧ್ಯಾಯ-3 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು ಹತ್ತನೇ ತರಗತಿಯ ಸಮಾಜ ವಿಜ್ಞಾನ ಘಟಕದ ಪ್ರಶ್ನೋತ್ತರಗಳು British Alvikeya Parinamagalu SSLC Social Science Question Answers

ಅಧ್ಯಾಯ - 03 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು: ಒಂದು ಅಂಕದ ಪ್ರಶ್ನೆಗಳು

1. ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು

ಉತ್ತರ: ಲಾರ್ಡ ಕಾರ್ನವಾಲಿಸ್

2. ರೈತವಾರಿ ಪದ್ಧತಿಯನ್ನು ಪ್ರಯೋಗಿಸಿದ ಬ್ರಿಟಿಷ್ ಅಧಿಕಾರಿ

ಉತ್ತರ: ಅಲೆಕ್ಸಾಂಡರ್ ರೀಡ್

3. ರೈತವಾರಿ ಪದ್ಧತಿಯನ್ನು ಮುಂದುವರೆಸಿದವನು

ಉತ್ತರ: ಥಾಮಸ್ ಮನ್ರೋ

4. ಮಹಲ್ವಾರಿ ಪದ್ಧತಿಯನ್ನು ಜಾರಿಗೆ ತಂದವರು.

ಉತ್ತರ: ಆರ್ ಎಂ ಬರ್ಡ್ & ಜೇಮ್ಸ್ ಥಾಮ್ಸನ್

5. ಇಂಗ್ಲೀಷ ಶಿಕ್ಷಣಕ್ಕೆ ಬುನಾದಿ ಹಾಕಿದ ಬ್ರಿಟಿಷ್ ಗವರ್ನರ್.

ಉತ್ತರ: ಲಾರ್ಡ ವಿಲಿಯಂ ಬೆಂಟಿಂಕ್

6. ಭಾರತದಲ್ಲಿ ಭಾಷಾ ಪತ್ರಿಕೆಗಳ ಪ್ರಾರಂಭವಾದ ವರ್ಷ

ಉತ್ತರ: ಕ್ರಿಶ 1818

7. ಕನ್ನಡದ ಮೊದಲ ವರ್ತಮಾನ ಪತ್ರಿಕೆ.

ಉತ್ತರ: ಮಂಗಳೂರು ಸಮಾಚಾರ

8. ಭಾರತದಲ್ಲಿ ಪ್ರಥಮ ರೈಲು ಸಂಚಾರ ಪ್ರಾರಂಭವಾದ

ಉತ್ತರ: ಕ್ರಿ ಶ 1853

9. ಕಲ್ಕತ್ತಾ ಜರ್ನಲ್ ಎಂಬ ಇಂಗ್ಲೀಷ್ ಪತ್ರಿಕೆಯ ಸಂಪಾದಕ

ಉತ್ತರ: ಬಕ್ಕಿಂಗ್ ಹ್ಯಾಮ್

10. ಈಶ್ವರ ಚಂದ್ರ ವಿದ್ಯಾಸಾಗರರು ನಡೆಸುತ್ತಿದ್ದ ಪತ್ರಿಕೆ.

ಉತ್ತರ: ಸೋಮೆ ಪ್ರಕಾಶ

11. ಕನ್ನಡದ ಮೊದಲ ಪತ್ರಿಕೆಯಾದ ಮಂಗಳೂರು ಸಮಾಚಾರ ಪತ್ರಿಕೆಯನ್ನು ಪ್ರಾರಂಭಿಸಿದವರು.

ಉತ್ತರ: ಮೋಗ್ಲಿಂಗ್

12. ಬ್ರಿಟಿಷ್ ವಿರೋಧಿ ಲೇಖನದಿಂದಾಗಿ ಭಾರತದಿಂದ ಗಡಿಪಾರು ಮಾಡಿದ ಕಲ್ಕತ್ತಾ ಜರ್ನಲ್ ಪತ್ರಿಕೆಯ ಸಂಪಾದಕ

ಉತ್ತರ: ಬಕ್ಕಿಂಗ್ ಹ್ಯಾಮ್

1➤ 18ನೇ ಶತಮಾನದಲ್ಲಿ ಉತ್ಪಾದನಾ ಕೇಂದ್ರವಾಗಿದ್ದ ಭಾರತ ಕೇವಲ ಕಚ್ಚಾ ವಸ್ತುಗಳನ್ನು ರಫ್ತು ಮಾಡುವ ಸ್ಥಿತಿ ತಲುಪಿತು ಏಕೆಂದರೆ-

ⓐ ದೇಶೀ ಉತ್ಪನ್ನಗಳ ಗುಣಮಟ್ಟದ ಕುಸಿತ
ⓑ ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿ
ⓒ ಇಂಗ್ಲೆಂಡಿನಲ್ಲಾದ ಕೈಗಾರಿಕಾ ಕ್ರಾಂತಿ
ⓓ ಐರೋಪ್ಯ ಮಾರುಕಟ್ಟೆಯಲ್ಲಾದ ಅಸಮತೋಲನ

2➤ ಲಾರ್ಡ್‌ಕಾರ್ನ್‌ವಾಲೀಸನು ಜಮೀನ್ದಾರಿ ಪದ್ಧತಿಯನ್ನು ಇಲ್ಲಿ ಜಾರಿಗೆ ತಂದನು.

ⓐ ಕೊಡಗು
ⓑ ಕೊಡಗು
ⓒ ಕೊಡಗು
ⓓ ಬಂಗಾಳ

3➤ ಮಹಲ್ ಎಂಬುದು ಈ ಅರ್ಥ ಕೊಡುತ್ತದೆ.

ⓐ ಜಿಲ್ಲೆ
ⓑ ತಾಲೂಕು
ⓒ ತಾಲೂಕು
ⓓ ಪ್ರಾಂತ್ಯ

4➤ ಈ ವರದಿಯು ಇಂಗ್ಲೀಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕೆಂದು ಶಿಫಾರಸ್ಸು ಮಾಡಿತು.

ⓐ ಮೆಕಾಲೆ ವರದಿ
ⓑ ಚಾರ್ಲ್ಸವುಡ್ ವರದಿ
ⓒ ಚಾರ್ಲ್ಸವುಡ್ ವರದಿ
ⓓ ಚಾರ್ಲ್ಸವುಡ್ ವರದಿ

5➤ ಸಾರ್ವಜನಿಕ ಶಿಕ್ಷಣ ಇಲಾಖೆಯು ಈ ಅಧಿಕಾರಿಯ ಕೊಡುಗೆಯಾಗಿದೆ.

ⓐ ಚಾರ್ಲ್ಸ್ ವುಡ್
ⓑ ಲಾರ್ಡ್ ವಿಲಿಯಂ ಬೆಂಟಿಂಕ್
ⓒ ಮೆಕಾಲೆ
ⓓ ಲಾರ್ಡ್ ಕರ್ಜನ್

6➤ ಭಾರತದಲ್ಲಿ ಪ್ರಥಮ ರೈಲು ಸಂಚಾರ ಆರಂಭವಾಗಿದ್ದು ಈ ಎರಡು ನಗರಗಳ ನಡುವೆ.

ⓐ ಬೆಂಗಳೂರು- ಚೆನ್ನೈ
ⓑ ಕಲ್ಕತ್ತಾ - ರಾಣಿಗಂಜ್
ⓒ ಮುಂಬೈ – ಥಾಣಾ
ⓓ ಮುಂಬೈ – ಥಾಣಾ

7➤ ಬಂಗಾಳದಲ್ಲಿ ನಡೆದ ನೀಲಿ ಕೃಷಿಕರ ಹೋರಾಟದಲ್ಲಿ ಪ್ರಮುಖ‌ ಪಾತ್ರವಹಿಸಿದ ಪತ್ರಿಕೆ-

ⓐ ಹಿಂದೂ ಪೆಟ್ರಿಯಾಟ್
ⓑ ಕೇಸರಿ
ⓒ ಸಂವಾದ ಕೌಮುದಿ
ⓓ ಕಲ್ಕತ್ತಾ ಜರ್ನಲ್

8➤ ಸುರೇಂದ್ರನಾಥ ಬ್ಯಾನರ್ಜಿಯವರು ಎರಡು ತಿಂಗಳ ಕಾರಾಗೃಹ ವಾಸಕ್ಕೆ ಒಳಗಾಗಲು ಕಾರಣ

ⓐ ಹಿಂಸಾತ್ಮಕ ಹೋರಾಟದಲ್ಲಿ ತೊಡಗಿದ್ದರಿಂದ ನೀಲಿ ಕೃಷಿಕರ ಹೋರಾಟದಲ್ಲಿ ಭಾಗವಹಿಸಿದ್ದರಿಂದ
ⓑ ಬ್ರಿಟಿಷ್ ಕಾನೂನು ಉಲ್ಲಂಘಿಸಿದ್ದರಿಂದ
ⓒ ಪತ್ರಿಕೆಯಲ್ಲಿ ಬ್ರಿಟಿಷ್ ವಿರೋಧಿ ಲೇಖನ ಪ್ರಕಟಿಸಿದ್ದರಿಂದ
ⓓ ಯಾವುದೂ ಅಲ್ಲ.

9➤ ಬಾಲ ಗಂಗಾಧರ ತಿಲಕರು ಹೊರಡಿಸಿದ ಎರಡು ಪತ್ರಿಕೆಗಳೆಂದರೆ

ⓐ ಸಂವಾದ ಕೌಮುದಿ & ದಿ ಟ್ರಿಬ್ಯುನ್
ⓑ ಕೇಸರಿ & ಮರಾಠ
ⓒ ದಿ ಬೆಂಗಾಲಿ & ಸಮಾಚಾರ ದರ್ಪಣ
ⓓ ಕಲ್ಕತ್ತಾ ಜರ್ನಲ್ & ಮೈಸೂರು ರೆಕಾರ್ಡರ್

10➤ 'ದಿ ಬೆಂಗಾಲಿ' ಮತ್ತು 'ದಿ ಟ್ರಿಬ್ಯುನ್' ಪತ್ರಿಕೆಗಳನ್ನು ಹೊರಡಿಸಿದವರು.

ⓐ ಸುರೇಂದ್ರನಾಥ ಬ್ಯಾನರ್ಜಿ
ⓑ ಈಶ್ವರ ಚಂದ್ರ ವಿದ್ಯಾಸಾಗರ
ⓒ ಡಬ್ಲ್ಯೂ, ಸಿ, ಬ್ಯಾನರ್ಜಿ
ⓓ ಬಾಲಗಂಗಾಧರ ತಿಲಕ್

ಅಧ್ಯಾಯ - 03 ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು: ಈ ಕೆಳಗಿನ ಪ್ರಶ್ನೆಗಳಿಗೆ 2-3 ವಾಕ್ಯಗಳಲ್ಲಿ ಉತ್ತರಿಸಿರಿ.

ಉತ್ತರ: 1. ಏಕರೂಪದ ಆಡಳಿತ ವ್ಯವಸ್ಥೆಯು ಭಾರತೀಯರಲ್ಲಿ ತಾವೆಲ್ಲ ಒಂದು ಎಂಬ ಮನೋಭಾವನೆ ಬೆಳೆಸಿ ಸ್ವಾತಂತ್ರ್ಯ ಚಳುವಳಿಗೆ ಪ್ರೋತ್ಸಾಹಿಸಿತು. 2. ವಿವಿಧ ಜಾತಿ ಮತ್ತು ಧರ್ಮಕ್ಕೆ ಸೇರಿದ ಭಾರತೀಯರಿಗೆ ಸಮಾನತೆ ನೀಡಿತು. 3. ಏಕರೂಪದ ಅಧಿಕಾರಿಶಾಹಿ ಪದ್ಧತಿ ಮತ್ತು ಸಮರ್ಥ ಪೋಲಿಸ್ ಪಡೆ ಆಂತರಿಕ ಸ್ಥಿರತೆ ತಂದವು. 4. ಬ್ರಿಟಿಷರ ಆಡಳಿತ ಭಾಷೆಯಾದ ಇಂಗ್ಲಿಷ್ ಭಾರತೀಯರ ಸಂಪರ್ಕ ಭಾಷೆಯಾಗಿ ಭಾರತೀಯರನ್ನು ಒಗ್ಗೂಡಿಸಿತು.

ಉತ್ತರ : ಕೈಗಾರಿಕಾ ಕ್ರಾಂತಿಯಿಂದ ಭಾರತದಲ್ಲಾದ ಬದಲಾವಣೆಗಳು 1. ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯಿಂದಾಗಿ ಭಾರತದ ಸಿದ್ಧವಸ್ತುಗಳ ರಫ್ತು ಗಣನೀಯವಾಗಿ ಕುಸಿಯಿತು. 2. ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯಿಂದಾಗಿ ಉತ್ಪಾದನಾ ಕೇಂದ್ರವಾಗಿದ್ದ ಭಾರತವು ಕೇವಲ ಕಚ್ಚಾ ವಸ್ತುಗಳನ್ನು ರಫ್ತು ಮಾಡುವ ಸ್ಥಿತಿಯನ್ನು ತಲುಪಿತು. 3. ಯಂತ್ರದಿಂದ ತಯಾರಿಸಲ್ಪಟ್ಟ ವಸ್ತುಗಳನ್ನು ಭಾರತದಲ್ಲಿ ಕಡಿಮೆ ಬೆಲೆಗೆ ಮಾರಾಟ ಮಾಡಲಾಯಿತು. ಪರಿಣಾಮವಾಗಿ ಬ್ರಿಟನ್‌ನ ವಸ್ತುಗಳ ಜೊತೆಗೆ ಭಾರತೀಯ ವಸ್ತುಗಳು ಸ್ಪರ್ಧಿಸಲಾರದೆ ಸೋತವು. 4. ಭಾರತೀಯ ಕೈಗಾರಿಕೆಗಳು ತೀವ್ರ ನಷ್ಟವನ್ನು ಅನುಭವಿಸಿ ಮುಚ್ಚಲ್ಪಟ್ಟವು. 5. ಲಕ್ಷಾಂತರ ಕಾರ್ಮಿಕರು ನಿರುದ್ಯೋಗಿಗಳಾದರು. 6. ಇಂಗ್ಲೆಂಡಿನ ಕೈಗಾರಿಕಾ ಕ್ರಾಂತಿಯಿಂದಾಗಿ ಭಾರತವು ಇಂಗ್ಲೆಂಡ್‌ನ ವಸ್ತುಗಳಿಗೆ ಮಾರುಕಟ್ಟೆಯಾಗಿ ಪರಿವರ್ತನೆಗೊಂಡಿತು.

ಉತ್ತರ : ಬ್ರಿಟಿಷರು ಶಿಕ್ಷಣ ಕ್ಷೇತ್ರದಲ್ಲಿ ಕೈಗೊಂಡ ಸುಧಾರಣೆಗಳು. 1. ಲಾರ್ಡ ವಿಲಿಯಂ ಬೆಂಟಿಂಕನು ಮೆಕಾಲೆ ವರದಿಯಂತೆ ಇಂಗ್ಲೀಷ ಶಿಕ್ಷಣಕ್ಕೆ ಬುನಾದಿ ಹಾಕಿದನು. 2.ಸಾರ್ವಜನಿಕ ಶಿಕ್ಷಣ ಇಲಾಖೆಯನ್ನು ರಚಿಸಿ ಪ್ರಾಥಮಿಕ ಶಿಕ್ಷಣಕ್ಕೆ ಒತ್ತು ನೀಡಲು ಚಾರ್ಲ್ಸ್ ವುಡ್ ಆಯೋಗವು ಸಲಹೆ ನೀಡಿತು. 3. ಕಲ್ಕತ್ತಾ, ಮದ್ರಾಸ್ ಮತ್ತು ಮುಂಬೈಗಳಲ್ಲಿ ವಿಶ್ವವಿದ್ಯಾಲಯಗಳು ಅಸ್ತಿತ್ವಕ್ಕೆ ಬಂದವು. 4. ಈಸ್ಟ ಇಂಡಿಯಾ ಕಂಪನಿಯು ಬಂಗಾಳದ ಹಿಂದೂ ಕಾಲೇಜಿನಲ್ಲಿ ಪಾಶ್ಚಿಮಾತ್ಯ ಸಾಹಿತ್ಯ, ಮಾನವಶಾಸ್ತ್ರ ಮತ್ತು ವಿಜ್ಞಾನವನ್ನು ಬೋಧಿಸಲು ಪ್ರಾರಂಭಿಸಿತು. 5. ರೂರಿಯಲ್ಲಿ ಇಂಜಿನಿಯರಿಂಗ್ ಕಾಲೇಜನ್ನು ಸ್ಥಾಪಿಸಿದರು.

ಉತ್ತರ : ಇಂಗ್ಲೀಷ ಶಿಕ್ಷಣ ಪದ್ಧತಿ ಭಾರತದ ಮೇಲೆ ಬೀರಿದ ಪರಿಣಾಮ. 1. ಇಂಗ್ಲಿಷ್ ಶಿಕ್ಷಣದ ಬೆಳವಣಿಗೆ ಸ್ವಾತಂತ್ರ್ಯ ಚಳುವಳಿಗೆ ಪ್ರೇರಣೆಯಾಯಿತು. 2. ಪಾಶ್ಚಾತ್ಯ ವಿಚಾರಧಾರೆಗಳು ರಾಷ್ಟ್ರೀಯ ಜಾಗೃತಿಗೆ ಸಹಕಾರಿಯಾದವು. 3. ನಾಯಕತ್ವದ ಬೆಳವಣಿಗೆಗೆ ಸಹಕಾರಿಯಾಯಿತು. 4. ಆಂಗ್ಲ ಭಾಷೆಯು ಸಂಪರ್ಕ ಭಾಷೆಯಾಗಿ ಬೆಳೆದು ಏಕತೆಗೆ ಸಹಕಾರಿಯಾಯಿತು. 5. ಮಧ್ಯಮ ವರ್ಗದ ಶ್ರೀಸಾಮಾನ್ಯರು ಎಲ್ಲಾ ಚಟುವಟಿಕೆಗಳ ನಾಯಕತ್ವ ವಹಿಸುವಂತಾಯಿತು.

ಬ್ರಿಟಿಷ್ ಆಳ್ವಿಕೆಯ ಪರಿಣಾಮಗಳು: ಈ ಕೆಳಗಿನ ಪ್ರಶ್ನೆಗಳಿಗೆ 5-6 ವಾಕ್ಯಗಳಲ್ಲಿ ಉತ್ತರಿಸಿರಿ.

ಉತ್ತರ : ಜಮೀನ್ದಾರಿ ಪದ್ಧತಿ - 1. ಲಾರ್ಡ ಕಾರ್ನವಾಲಿಸನು ಜಮೀನ್ದಾರಿ ಪದ್ಧತಿಯನ್ನು ಬಂಗಾಳ, ಬಿಹಾರ, ಆಸ್ಸಾಂ ಭಾಗಗಳಲ್ಲಿ ಜಾರಿಗೆ ತಂದನು. 2. ಜಮೀನ್ದಾರರು ಉಳುವ ರೈತನಿಂದ ನಿಗದಿತ ಕಂದಾಯ ವಸೂಲು ಮಾಡಿ ಕಟ್ಟಬೇಕಿತ್ತು. 3. ಜಮೀನ್ದಾರರು ನಿಗದಿತ ಕಂದಾಯಕ್ಕಿಂತ ಹೆಚ್ಚಿನ ಕಂದಾಯ ವಸೂಲುಮಾಡಿ ನಿಗದಿತ ಮೊತ್ತವನ್ನು ಮಾತ್ರ ಸರ್ಕಾರಕ್ಕೆ ಕಟ್ಟುತ್ತಿದ್ದರು. 4. ಜಮೀನ್ದಾರರು ಶ್ರೀಮಂತಿಕೆಯಿಂದ ವೈಭವದ ಜೀವನ ನಡೆಸಿದರೆ, ರೈತರು ಶೋಷಣೆಗೆ ಒಳಗಾದರು. ರೈತವಾರಿ ಪದ್ಧತಿ - 1. ಈ ಪದ್ಧತಿಯನ್ನು ಮದ್ರಾಸ್, ಮುಂಬೈ, ಸಿಂದ್, ಬಿರಾರ್, ಅಸ್ಸಾಂ ಭಾಗಗಳಲ್ಲಿ ಜಾರಿಗೆ ತರಲಾಯಿತು. 2. ಭೂಮಿಯ ಆಳತೆ ಮಾಡಿ ಭೂಮಿಯ ಫಲವತ್ತತೆ ಮತ್ತು ನೀರಾವರಿಯ ಅನುಕೂಲಗಳನ್ನು ಗಮನಿಸಿ ಕಂದಾಯ ನಿಗದಿ ಮಾಡಲಾಯಿತು. 3. ಇದು ರೈತರ ಭೂಮಿಯ ಹಕ್ಕನ್ನು ದೃಢಪಡಿಸಿತು. 4. ರೈತರು ಕಂದಾಯವನ್ನು ಕಟ್ಟಲು ವಿಫಲರಾದಾಗ ಭೂಮಿಯ ಹಕ್ಕನ್ನು ಕಳೆದುಕೊಳ್ಳುತ್ತಿದ್ದರು.

ಉತ್ತರ : 1. ಬ್ರಿಟಿಷರು ಸಾರಿಗೆ ಮತ್ತು ಸಂಪರ್ಕವನ್ನು ತಮ್ಮ ಸ್ವಹಿತಾಸಕ್ತಿಯಾಗಿ ನಿರ್ಮಿಸಿಕೊಂಡರು. 2. ಭಾರತದ ಮೂಲೆಮೂಲೆಗಳನ್ನು ಶೀಘ್ರವಾಗಿ ತಲುಪಲು ರಸ್ತೆ ಮತ್ತು ರೈಲು ವ್ಯವಸ್ಥೆ ಕಲ್ಪಿಸಿದರು. 3. ಕಚ್ಚಾ ವಸ್ತು ಮತ್ತು ಸಿದ್ಧ ವಸ್ತುಗಳ ಸಾಗಾಣಿಕೆ ಮತ್ತು ಸೇನೆಯು ಸಂಚರಿಸಲು ನಿರ್ಮಿಸಲಾಯಿತು. 4. ಸಾರಿಗೆ ಸಂಪರ್ಕವು ಪರೋಕ್ಷವಾಗಿ ದೇಶೀಯರನ್ನು ಸಂಘಟಿಸಲು, ಸಂಚರಿಸಲು ಸಹಾಯವಾಯಿತು. 5. ಪರಸ್ಪರ ತಮ್ಮ ಸಮಸ್ಯೆಗಳನ್ನು ಹಂಚಿಕೊಳ್ಳಲು, ಪ್ರಚಾರ ಮಾಡಲು ಸಾಧ್ಯವಾಯಿತು. 6. ಇದು ದೇಶೀಯರನ್ನು ಒಂದುಗೂಡಿಸಿ ರಾಷ್ಟ್ರೀಯತೆಗೆ ಕಾರಣವಾಯಿತು.

ಉತ್ತರ : 1. 19ನೇ ಶತಮಾನದ ಉತ್ತರಾರ್ಧ ಭಾಗದಲ್ಲಿ ಭಾರತದಲ್ಲಿ ಪತ್ರಿಕೋದ್ಯಮ ಸಾಕಷ್ಟು ಬೆಳವಣಿಗೆ ಹೊಂದಿ ಸುಮಾರು 169 ವಿವಿಧ ಪತ್ರಿಕೆಗಳ ದೇಶೀಯ ಭಾಷೆಯಲ್ಲಿ ಪ್ರಕಟಗೊಳ್ಳುತ್ತಿದ್ದವು. 2. ಭಾರತೀಯರಲ್ಲಿ ಜಾಗೃತಿಯನ್ನು ಮೂಡಿಸಿ ರಾಷ್ಟ್ರೀಯತೆಯನ್ನು ಬೆಳೆಸುವಲ್ಲಿ ವೃತ್ತ ಪತ್ರಿಕೆಗಳ ಪಾತ್ರ ಪ್ರಮುಖವಾದುದು. 3. ಭಾರತೀಯ ಪತ್ರಿಕೆಗಳು ಬ್ರಿಟಿಷ್ ಆಡಳಿತದ ದುಷ್ಪರಿಣಾಮಗಳ ಬಗ್ಗೆ ಜನಸಾಮಾನ್ಯರಿಗೆ ಅರಿವನ್ನುಂಟು ಮಾಡಿದವು. 4. ಬ್ರಿಟಿಷ್ ಆಡಳಿತ ನೀತಿಯ ವಿರುದ್ಧ ಜನಾಭಿಪ್ರಾಯವನ್ನು ಮೂಡಿಸುವಲ್ಲಿ ಪತ್ರಿಕೆಗಳು ಮಹತ್ವದ ಪಾತ್ರವನ್ನು ವಹಿಸಿದವು. 5. ರಾಷ್ಟ್ರೀಯ ನಾಯಕರುಗಳು ತಮ್ಮ ಬರವಣಿಗಳ ಮೂಲಕ ತಮ್ಮ ವಿಚಾರಧಾರೆಗಳನ್ನು ಜನರಿಗೆ ತಲುಪಿಸುವಲ್ಲಿ ಪತ್ರಿಕೆಗಳು ನೆರವಾದವು. 6.ಅಮೃತಬಜಾರ್, ದಿ ಬೆಂಗಾಲಿ, ಮರಾಠ ಮೊದಲಾದ ಹಲವು ಪತ್ರಿಕೆಗಳು ರಾಷ್ಟ್ರೀಯತೆಯನ್ನು ಪ್ರಚೋದಿಸುವ ನಿಟ್ಟಿನಲ್ಲಿ ಕಾರ್ಯ ನಿರ್ವಹಿಸಿದವು. 7. ಪತ್ರಿಕೆಗಳು ಪ್ರಜಾಪ್ರಭುತ್ವ, ಜವಬ್ದಾರಿ ಸರ್ಕಾರ, ಸ್ವಾತಂತ್ರ್ಯ, ಸಮಾನತೆ ಮೊದಲಾದ ವಿಷಯಗಳ ಬಗ್ಗೆ ಚಿಂತಿಸುವಂತೆ ಅವರು ಮೊದಲಾದ ಮಾಡಿದವು. 8. ಹೀಗೆ ಪತ್ರಿಕೆಗಳು ಭಾರತೀಯರಲ್ಲಿ ನವ ಜಾಗೃತಿಯ ಜೊತೆಗೆ ರಾಷ್ಟ್ರೀಯತೆಯ ಉಗಮಕ್ಕೆ ಕಾರಣವಾದವು.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads