ಪ್ರಾಚೀನ ಭಾರತದ ಇತಿಹಾಸ ಅಧ್ಯಾಯ 1. ಆಧಾರಗಳು Ancient Indian History Top-40 Question Answers in Kannada Part-02
ಪ್ರಾಚೀನ ಭಾರತದ ಇತಿಹಾಸ ಅಧ್ಯಾಯ 1. ಆಧಾರಗಳು ಟಾಪ್-40 ಪ್ರಶ್ನೋತ್ತರಗಳು
- ಗುಪ್ತರ ಚರಿತ್ರೆ, ಸಮುದ್ರಗುಪ್ತನ ಸಾಧನೆಗಳನ್ನು ವಿವರಿಸುವ ಶಾಸನ - ಅಲಹಾಬಾದ್ ಸ್ಥಂಭ ಶಾಸನ
- ಅಲಹಾಬಾದ್ ಸ್ಥಂಭ ಶಾಸನವನ್ನು ಕೆತ್ತಿಸಿದ ದೊರೆ -ಸಮುದ್ರಗುಪ್ತ
- ಅಲಹಾಬಾದ್ ಸ್ಥಂಭ ಶಾಸನವನ್ನು ಕೌಸಾಂಬಿಯಿಂದ ಅಲಹಾಬಾದ್‌ಗೆ ಸಾಗಿಸಿದ್ದು -ಫಿರೋಜ್ ಷಾ ತುಘಲಕ್
- ಅಲಹಾಬಾದ್ ಸ್ತಂಭ ಶಾಸನದ ಭಾಷೆ -ಸಂಸ್ಕೃತ
- 33 ಸಾಲುಗಳಿಂದ ಕೂಡಿದ ಒಂದೇ ಬೃಹತ್ ವಾಕ್ಯವನ್ನು ಒಳಗೊಂಡ ಶಾಸನ -ಅಲಹಾಬಾದ್ ಸ್ಥಂಭ ಶಾಸನ
- ಇಮ್ಮಡಿ ಪುಲಕೇಶಿಯ ದಿಗ್ವಿಜಯಗಳನ್ನು ವರ್ಣಿಸುವ ಶಾಸನ -ಐಹೊಳೆ ಶಾಸನ
- ಬಾದಾಮಿ ಚಾಲುಕ್ಯರ ಬಗ್ಗೆ ವಿವರಗಳನ್ನು ನೀಡುವ ಶಾಸನ -ಐಹೊಳೆ ಶಾಸನ
- ಐಹೊಳೆ ಶಾಸನವನ್ನು ರಚಿಸಿದವರು -ರವಿಕೀರ್ತಿ
- ಚಂದ್ರಗುಪ್ತ ವಿಕ್ರಮಾದಿತ್ಯನ ಬಗ್ಗೆ ವಿವರಗಳನ್ನು ನೀಡುವ ಶಾಸನ -ಮೆಹ್ರೌಲಿ ಕಬ್ಬಿಣದ ಸ್ತಂಭ ಶಾಸನ
- ಗುಪ್ತರ ಕಾಲದ ಲೋಹಶಾಸ್ತ್ರದ ನಿಮಣತೆಗೆ ಸಾಕ್ಷಿಯಾಗಿರುವ ಶಾಸನ -ಮೆಹ್ರೌಲಿ ಕಬ್ಬಿಣದ ಸ್ತಂಭ ಶಾಸನ
- ಕದಂಬರ ಇತಿಹಾಸಕ್ಕೆ ಸಂಬಂಧಿಸಿದ ಮಾಹಿತಿಯನ್ನು ನೀಡುವ ಪ್ರಮುಖ ಶಾಸನ -ತಾಳಗುಂದದ ಶಾಸನ
- ಚೋಳರ ಸ್ಥಳೀಯ ಸರ್ಕಾರ ಗ್ರಾಮಾಡಳಿತದ ಬಗ್ಗೆ ಮಹತ್ವದ ವಿವರ ನೀಡುವ ಶಾಸನ -ಉತ್ತರ ಮೆರೂರು ಶಾಸನ
- ಉತ್ತರ ಮೆರೂರು ಶಾಸನವನ್ನು ಕೆತ್ತಿಸಿದ ಚೋಳ ದೊರೆ -1ನೇ ಪರಾಂತಕ
- 'ಕುಡಿಮಿಯಾ ಮಲೈ' ಶಾಸನ -ದಕ್ಷಿಣದ ಸಂಗೀತದ ಬೆಳವಣಿಗೆಯ ವಿವರಗಳನ್ನು ಒಳಗೊಂಡಿದೆ
- ಬಸ್ತಾ, ಉದಯಗಿರಿ, ಸಾಂಚಿಯ ಶಾಸನಗಳು ಗುಪ್ತ ವಂಶ ಆಡಳತದ ಬಗ್ಗೆ ಮಾಹಿತಿ ನೀಡುತ್ತವೆ
- ಪ್ರತಿಹಾರ ದೊರೆ ಬೋಜರಾಜನ ಬಗ್ಗೆ ಮಾಹಿತ ಒದಗಿಸುವ ಶಾಸನ -ಗ್ವಾಲಿಯರ್‌ನ ಶಾಸನ
- ಮೌರ್ಯರ ವಂಶಾವಳಿ ಮತ್ತು ಕಾಲಾನುಕ್ರಮಣಿಕೆಯನ್ನು ನಿರ್ಧರಿಸಲು ಇರುವ ಪ್ರಮುಖ ಆಧಾರ -ಶಾಸನಗಳು
- ನಾಣ್ಯಶಾಸ್ತ್ರ(Numismatics) ಎಂದರೆ -ನಾಣ್ಯಗಳ ಅಧ್ಯಯನ ಶಾಸ್ತ್ರ
- ಮಾಳ್ವರಲ್ಲಿ ಗಣರಾಜ್ಯ ಅಸ್ತಿತ್ವದಲ್ಲಿತ್ತು ಎಂಬುದಕ್ಕೆ ಪ್ರಮುಖ ಆಧಾರ -ನಾಣ್ಯಗಳು
- ಭಾರತ ಮತ್ತು ರೋಮ್ ನಡುವೆ ಇದ್ದ ವ್ಯಾಪಾರ ಸಂಬಂಧ ಅರಿಯಲು ನೆರವಾಗುವ ಪ್ರಮುಖ ಆಧಾರ -ಭಾರತದಲ್ಲಿ ದೊರೆತ ರೋಮನ್ ನಾಣ್ಯಗಳು
- ಭಾರತದಲ್ಲಿ ದೊರೆತ ಪ್ರಮುಖ ಗ್ರೀಕ್ ನಾಣ್ಯಗಳು -ಸ್ಟೇಟರ್ (Stater), ಡೇರಿಕ್ (Daric), ದಿನಾರ್ (Dinar)
- ವಾಯುವ್ಯ ಭಾರತದಲ್ಲಿ ಆಳ್ವಿಕೆ ನಡೆಸಿದ ಇಂಡೋ-ಗ್ರೀಕರು, ಶಕರು, ಪಾರ್ಥಿನಿಯರು ಮತ್ತು ಕುಶಾನರ ಇತಿಹಾಸಕ್ಕಿರುವ ಪ್ರಮುಖ ಆಧಾರಗಳು -ನಾಣ್ಯಗಳು
- ಎಂಟು ಬಗೆಯ ಚಿನ್ನ ಮತ್ತು ಬೆಳ್ಳಿ ನಾಣ್ಯಗಳನ್ನು ಹೊರಡಿಸಿದ ಗುಪ್ತ ದೊರೆ -ಸಮುದ್ರಗುಪ್ತ
- ಸಮುದ್ರಗುಪ್ತನ ಸಂಗೀತಾಭಿರುಚಿಯನ್ನು ವಿವರಿಸುವ ಪ್ರಮುಖ ಆಧಾರ ಅವನು ವೀಣಾಪಾಣಿಯಾಗಿ ಕುಳಿತಿರುವ ಚಿತ್ರವಿರುವ ನಾಣ್ಯ
- ರಾಜವಂಶಗಳ ಕಾಲದ ಆರ್ಥಿಕ ಸ್ಥಿತಿಗತಿಗೆ ಕೈಗನ್ನಡಿಯಂತಿರುವ ಆಕರಗಳು -ನಾಣ್ಯಗಳು
- ಪ್ರಾಚೀನ ಭಾರತದಲ್ಲಿ ಬಳಕೆಯಲ್ಲಿದ್ದ ಪ್ರಮುಖ ನಾಣ್ಯಗಳು -ಶತಮಾನ, ರಜತ, ನಿಷ್ಕ, ಪುರಾಣ, ಕರ್ಷಪಣ, ಪಂಚ್ ಮಾರ್ಕ್ ನಾಣ್ಯಗಳು
- ಚಿನ್ನದ ನಾಣ್ಯಗಳನ್ನು ಭಾರತದಲ್ಲಿ ಮೊದಲು ಪ್ರಚುರಪಡಿಸಿದವರು- ಕುಶಾನ ದೊರೆಗಳು ವಂಶದ ದೊರೆಗಳು.
- ಭಾರತದ ನಾಣ್ಯಗಳ ಗುಣಮಟ್ಟ ಉತ್ತಮಗೊಂಡದ್ದು ಭಾರತದ ಮೇಲೆ ಗ್ರೀಕರ ದಾಳಿಯ ನಂತರ
- ಕುಶಾನರ ಮೇಲೆ ರೋಮನ್ನರ ಪ್ರಭಾವವಿತ್ತೆಂಬುದಕ್ಕೆ ಪ್ರಮುಖ ಆಧಾರ -ಕುಶಾನರ ನಾಣ್ಯಗಳು
- ಅಗಸ್ಟಸ್ ಮತ್ತು ಟೈಬೀರಿಯಸ್ ಚಕ್ರವರ್ತಿಗಳ ಕಾಲದ ರೋಮನ್ ನಾಣ್ಯಗಳು ದೊರೆತ ಸ್ಥಳ -ಬೆಂಗಳೂರು
- ಗುಪ್ತರ ನಾಣ್ಯಗಳ ಮೇಲೆ ಇದ್ದ ದೇವಿಯ ಚಿತ್ರ -ಲಕ್ಷ್ಮೀಯ ಚಿತ್ರ
- ಕುಶಾನರ ನಾಣ್ಯಗಳ ಮೇಲೆ ಇದ್ದ ದೇವನ ಚಿತ್ರ -ಶಿವನ ಚಿತ್ರ
- 2ನೇ ಚಂದ್ರಗುಪ್ತನು ಪಶ್ಚಿಮದ ಶಕರನ್ನು ಸೋಲಿಸಿದ್ದನ್ನು ತಿಳಿಯಲು ಇರುವ ಪ್ರಮುಖ ಆಧಾರಗಳು ಅವನ -ಬೆಳ್ಳಿಯ ನಾಣ್ಯಗಳು
- ಭಾರತದಲ್ಲಿನ ಪುರಾತನ ಸ್ಮಾರಕಗಳು ಬೌದ್ಧ ಸ್ತೂಪಗಳು, ವಿಹಾರಗಳು, ಜೈನ ಚೈತ್ಯಾಲಯಗಳು, ಅರಮನೆಗಳು, ದೇವಾಲಯಗಳು ಗುಹಾಲಯ, ಸ್ತಂಭಗಳು ಇತ್ಯಾದಿ.
- ದೇವಾಲಯ ನಿರ್ಮಾಣ ಕಲೆ ಬೆಳವಣಿಗೆಗೊಂಡದ್ದು ಗುಪ್ತರು, ಮತ್ತು ನಂತರದ ಕಾಲಾವಧಿಯಲ್ಲಿ
- ಪ್ರಾಚೀನ ಭಾರತದ ಧಾರ್ಮಿಕ ಮತ್ತು ಸಾಂಸ್ಕೃತಿಕ ಇತಿಹಾಸಕ್ಕೆ ಪ್ರಮುಖ ಆಧಾರಗಳು -ವಾಸ್ತುಶಿಲ್ಪದ ಸ್ಮಾರಕಗಳು
- ರಾಜಕೀಯ ಇತಿಹಾಸಕ್ಕಿಂತ ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಇತಿಹಾಸ ತಿಳಿಯಲು ಇರುವ ಪ್ರಮುಖ ಆಧಾರಗಳು -ಸ್ಮಾರಕಗಳು
- ವೇಷ ಭೂಷಣ, ಕೇಶ ವಿನ್ಯಾಸ, ಆಭರಣಗಳ ಬಗ್ಗೆ ಮಾಹಿತಿ ನೀಡಬಹುದಾದ ಮುಖ್ಯ ಆಧಾರಗಳು -ಚಿತ್ರಕಲೆ ಮತ್ತು ಶಿಲ್ಪಕಲೆ
- ಹರಪ್ಪನ್ನರ ಬಗ್ಗೆ ವಿವರಗಳನ್ನು ಒದಗಿಸುವ ಶಾಸನ ರೂಪದ ಪ್ರಮುಖ ಆಧಾರಗಳು ಮುದ್ರೆಗಳು
- ರಾಮಾಯಣವನ್ನು ಬರೆದವರು -ವಾಲ್ಮೀಕಿ
- ಮಹಾಭಾರತವನ್ನು ಬರೆದವರು -ವ್ಯಾಸ ಮಹರ್ಷಿ
No comments:
Post a Comment
If you have any doubts please let me know