ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಕನ್ನಡದಲ್ಲಿ ದಿನಾಂಕ 10 ಜುಲೈ 2022 ರ ಪ್ರಚಲಿತ ವಿದ್ಯಮಾನಗಳು
ಸೇವಾ ವಲಯದ ಬೇಡಿಕೆ ಸುಧಾರಣೆ
ಜೂನ್ ತಿಂಗಳಿನಲ್ಲಿ ದೇಶದ ಸೇವಾ ವಲಯದ ಚಟುವಟಿಕೆಗಳು 2011ರ ಏಪ್ರಿಲ್ ನಂತರದ ಅತಿಹೆಚ್ಚಿನ ಮಟ್ಟವನ್ನು ತಲುಪಿದ್ದು, ಬೇಡಿಕೆಯಲ್ಲಿ ಸುಧಾರಣೆ ಕಂಡುಬಂದಿದೆ.
- ಎಸ್ ಆ್ಯಂಡ್‌ಪಿ ಗ್ಲೋಬಲ್ ಇಂಡಿಯಾ ಸರ್ವಿಸಸ್ ಪಿಎಂಐ ಬ್ಯುಸಿನೆಸ್ ಆ್ಯಕ್ಟಿವಿಟಿ ಸೂಚ್ಯಂಕವು ಜೂನ್ ತಿಂಗಳಿನಲ್ಲಿ 59,2 ಕ್ಕೆ ತಲುಪಿದೆ. ಮೇ ತಿಂಗಳಲ್ಲಿ ಇದು 58.9ರಷ್ಟಿತ್ತು.
- ಸತತ ಹನ್ನೊಂದು ತಿಂಗಳುಗಳಿಂದ ಸೇವಾ ವಲಯದ ಚಟುವಟಿಕೆಗಳು ಹೆಚ್ಚಳ ಕಾಣುತ್ತಿವೆ. ಸೂಚ್ಯಾಂಕವು 50ಕ್ಕಿಂತ ಹೆಚ್ಚಿನ ಮಟ್ಟದಲ್ಲಿದ್ದರೆ ಅದನ್ನು ಬೆಳವಣಿಗೆ ಎಂದು ಅರ್ಥೈಸಲಾಗುತ್ತದೆ. 50 ಕ್ಕಿಂತ ಕಡಿಮೆ ಇದ್ದರೆ ಅದನ್ನು ಕುಸಿತ ಎಂದು ಕಾಣಲಾಗುತ್ತದೆ.
ಸೇವಾ ವಲಯ (ತೃತೀಯ ವಲಯ) :
- ಗ್ರಾಹಕರು ಬಳಸಿಕೊಳ್ಳುವ ಸರಕು ಮತ್ತು ಸೇವೆಗಳು ಈ ವಲಯದಲ್ಲಿ ಕಂಡುಬರುತ್ತದೆ.
- ಈ ವಲಯವು ಅತಿ ಕಡಿಮೆ ಕಾರ್ಮಿಕರನ್ನು ಬಳಸಿಕೊಂಡು ಹೆಚ್ಚು ಉತ್ಪಾದನೆ ಮತ್ತು ಕೊಡುಗೆಯನ್ನು ನೀಡುತ್ತಿರುವ ವಲಯವಾಗಿದೆ.
- ಪ್ರಪಂಚದಲ್ಲಿ ಅತಿ ಹೆಚ್ಚು ಸೇವಾ ವಲಯದಲ್ಲಿ ಕೊಡುಗೆ ನೀಡುತ್ತಿರುವ ಪ್ರಥಮ ರಾಷ್ಟ್ರ ಅಮೆರಿಕಾ, ಭಾರತವು ಸೇವಾ ವಲಯದಲ್ಲಿ ಕೊಡುಗೆ ನೀಡುತ್ತಿರುವ ಏಳನೇ ರಾಷ್ಟ್ರವಾಗಿದೆ. ಭಾರತದಲ್ಲಿ “ನವದೆಹಲಿಯು” ಈ ವಲಯದಲ್ಲಿ ಹೆಚ್ಚು ಕೊಡುಗೆ ನೀಡುತ್ತಿದೆ.
- ಕರ್ನಾಟಕದಲ್ಲಿ ಸೇವಾ ವಲಯ ಮತ್ತು ಕೈಗಾರಿಕಾ ವಲಯದಿಂದ ಅತಿ ಹೆಚ್ಚು ಕೊಡುಗೆ ನೀಡುತ್ತಿರುವ ಜಿಲ್ಲೆ ಬೆಂಗಳೂರು ನಗರ.
- ಸೇವಾ ವಲಯ ಕ್ಷೇತ್ರಗಳು : ವಿಮೆ, ಹಣಕಾಸು ಸೇವೆಗಳು, ಭೂ ಉಧ್ಯಮ, ವಾಣಿಜ್ಯ ಸೇವೆಗಳು ಬ್ಯಾಂಕಿಂಗ್ ಸೇವೆಗಳು ಇತ್ಯಾದಿ.
ಐಎಂಎಫ್ ವಾಲ್ ಆಫ್ ಫೇಮ್‌ನಲ್ಲಿ ಗೀತಾ ಗೋಪಿನಾಥ್
ಅಂತರಾಷ್ಟ್ರೀಯ ಹಣಕಾಸು ನಿಧಿಯ(ಐಎಂಎಫ್) ವಾಲ್ ಆಫ್ ಚೀಫ್ ಎಕಾನಾಮಿಸ್ಟ್ ನಲ್ಲಿ ಕರ್ನಾಟಕದ ಮೂಲದ ಗೀತಾ ಗೋಪೀನಾಥ್ ಸ್ಥಾನ ಪಡೆದು ಕೊಂಡಿದ್ದಾರೆ. ಈ ಗೌರವ ಪಡೆದ ಮೊದಲ ಮಹಿಳೆ ಹಾಗೂ 2ನೇ ಭಾರತೀಯರೆನ್ನಿಸಿಕೊಂಡಿದ್ದಾರೆ.
2018 ರಲ್ಲಿ ಗೀತಾ ಐಎಂಎಫ್ ಮುಖ್ಯ ಅರ್ಥಶಾಸ್ತ್ರಜ್ಞೆಯಾಗಿ ನೇಮಕ ಗೊಂಡಿದ್ದರು. ಈ ಮೊದಲ ರಘುರಾಮ್ ರಾಜನ್ ಕೂಡಾ ವಾಲ್‌ನಲ್ಲಿ ಸ್ಥಾನ ಪಡೆದಿದ್ದು, ಈ ಗೌರವ ಪಡೆದ ಮೊದಲ ಭಾರತೀಯ ಎನಿಸಿಕೊಂಡಿದ್ದರು.
ಅಂತರಾಷ್ಟ್ರೀಯ ಹಣಕಾಸು ನಿಧಿ : International Monetary Fund | |
---|---|
IMF | International Monetary Fund |
ಸ್ಥಾಪನೆ | ಡಿಸೆಂಬರ್ 17, 1945 |
ಕೇಂದ್ರ ಕಛೇರಿ | ವಾಷಿಂಗ್ಟನ್ ಡಿಸಿ |
ಸದಸ್ಯ ರಾಷ್ಟ್ರಗಳ ಸಂಖ್ಯೆ | 190 |
ಪ್ರಸ್ತುತ ಅಧ್ಯಕ್ಷರು | ಕ್ರಿಸ್ಟಿಲಿನಾ ಜಾರ್ಜಿವಾ |
ಉದ್ದೇಶ | ಅಂತರಾಷ್ಟ್ರೀಯ ವ್ಯಾಪಾರವನ್ನು ಸುಗಮಗೊಳಿಸಿ, ಸುಸ್ಥಿರ ಆರ್ಥಿಕ ಬೆಳವಣಿಗೆಯನ್ನು ಉತ್ತೇಜಿಸುವುದು. |
ಧ್ವಜ ಸಂಹಿತೆಗೆ ತಿದ್ದುಪಡಿ 2021
ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ಆಗಸ್ಟ್ 11ರಿಂದ 17 ರವರೆಗೆ ನಡೆಯಲಿರುವ 'ಹರ್ ಘರ್ ತಿರಂಗಾ' ಕಾರ್ಯಕ್ರಮವು ತಮ್ಮ ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲು ಜನರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೂಡಿದೆ. ಬರುವ ಸ್ವಾತಂತ್ರೋತ್ಸವದಂದು ಮನೆಗಳ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲು ಜನರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಕೂಡಿದೆ. ಬರುವ ಸ್ವಾತಂತ್ರ್ಯತ್ಸವದಂದು ಕನಿಷ್ಠ 20 ಕೋಟಿ ಧ್ವಜಗಳು ಹಾರಬೇಕೆಂಬ ನಿರೀಕ್ಷೆ ಸರ್ಕಾರದ್ದಾಗಿದೆ.
* ಭಾರತದ ಧ್ವಜ ಸಂಹಿತೆ 2002ರ ಪ್ರಕಾರ ಈ ಮೊದಲು ಕೈಮಗ್ಗ ಮತ್ತು ಕೈಯಿಂದ ನೇಯ್ದ ಖಾದಿಯಿಂದ ಮಾಡಿದ ಬಟ್ಟೆಗಳಿಂದ ಮಾತ್ರ ರಾಷ್ಟ್ರಧ್ವಜಗಳನ್ನು ತಯಾರಿಸಲು ಅನುಮತಿ ಇತ್ತು 2021ರ ಡಿಸೆಂಬರ್ 30ರಂದು ಈ ಧ್ವಜ ಸಂಹಿತೆಗೆ ತಿದ್ದುಪಡಿ ತರಲಾಯಿತು. ಕೈಮಗ್ಗ ಅಥವಾ ಕೈಯಿಂದ ತಯಾರಿಸಲಾದ ಬಟ್ಟೆಯಿಂದ ಮಾತ್ರವಲ್ಲದೆ, ಯಂತ್ರದಿಂದ ತಯಾರಿಸಿದ ಹತ್ತಿ ಪಾಲಿಯೆಸ್ಟರ್, ಉಣ್ಣೆ, ರೇಷ್ಮೆ, ಖಾದಿ ಬಟ್ಟೆಯಿಂದಲೂ ರಾಷ್ಟ್ರಧ್ವಜ ಮಾಡಬಹುದು ಎಂದು ಈ ತಿದ್ದುಪಡಿ ಹೇಳುತ್ತದೆ. ಆದರೆ ತಿದ್ದುಪಡಿಗೆ ಕೆಲ ವಲಯಗಳಿಂದ ವಿರೋಧ ಸಹ ವ್ಯಕ್ತವಾಗಿದೆ.
ಭಾರತದ ಸ್ವಾತಂತ್ರ್ಯದ 75ನೇ ವರ್ಷವನ್ನು ಆಚರಿಸಲು ಮತ್ತು 'ಹರ್ ಘರ್ ತಿರಂಗಾ' ಅಭಿಯಾನದ ಆರಂಭದ ಪೂರ್ವದಲ್ಲಿ ಧ್ವಜ ಸಂಹಿತೆಗೆ ಮಾಡಿದ ಬದಲಾವಣೆಯ ಪರಿಣಾಮವಾಗಿ ತ್ರಿವರ್ಣ ಧ್ವಜದ ವೆಚ್ಚವು ಕಡಿಮೆಯಾಗಬಹುದು ಎಂದು ಸರ್ಕಾರ ನಿರೀಕ್ಷಿಸುತ್ತಿದೆ.
ಧ್ವಜ ಸಂಹಿತೆಯ ಬದಲಾವಣೆಯ ಸರ್ಕಾರದ 'ಹರ್ ಘರ್ ತಿರಂಗಾ'ದ ಸಾಮೂಹಿಕ ಅಭಿಯಾನಕ್ಕೆ ಪೂರಕ ಬಲವನ್ನು ಒದಗಿಸುವ ನಿರೀಕ್ಷೆಯಿದೆ. ಈ ಅಭಿಯಾನವನ್ನು 2022ರ ಆಗಸ್ಟ್ 15 ರಂದು ಪ್ರಾರಂಭಿಸಲು ಉದ್ದೇಶಿಸಲಾಗಿದೆ. ಜನರು ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಲು ಪ್ರೋತ್ಸಾಹ ನೀಡುವುದು ಈ ಅಭಿಯಾನದ ಉದ್ದೇಶವಾಗಿದೆ.
* ಈ ಅಭಿಯಾನವು ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿದೆ. ದೇಶಾದ್ಯಂತ ಕನಿಷ್ಠ 20 ಕೋಟಿ ರಾಷ್ಟ್ರಧ್ವಜಗಳನ್ನು ಮಾರಾಟ ಮಾಡುವ ಮತ್ತು ಹಾರಿಸುವ ಗುರಿಯನ್ನು ಹೊಂದಿದೆ. ಕೋವಿಡ್ -19 ಸಾಂಕ್ರಾಮಿಕ ಹರಡಿದ ಸಮಯದಲ್ಲಿ ಮಾಸ್ಕ್ ಮತ್ತು ಪಿಪಿಇ ಕಿಟ್‌ಗಳನ್ನು ತಯಾರಿಸಿದ ಸ್ವ-ಸಹಾಯ ಗುಂಪುಗಳಿಂದ ಇನ್ನು ಮುಂದೆ ಧ್ವಜ ತಯಾರಿಕೆಯು ಬೃಹತ್ ಪ್ರಮಾಣದಲ್ಲಿ ಪ್ರಾರಂಭವಾಗುವ ನಿರೀಕ್ಷೆಯಿದೆ ಎಂದು ಸರ್ಕಾರ ಮೂಲಗಳು ತಿಳಿಸಿವೆ. ಹರ್ ಘರ್ ತಿರಂಗಾ ಅಭಿಯಾನವನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸುವ ನಿರೀಕ್ಷೆಯಿದೆ. ರಾಷ್ಟ್ರಧ್ವಜಗಳನ್ನು ಉಚಿತವಾಗಿ ವಿತರಿಸಲಾಗುವುದಿಲ್ಲ. ಜನರು ಧ್ವಜವನ್ನು ಖರೀದಿಸುವುದರಿಂದ ಅವರಲ್ಲಿ ಹೆಮ್ಮೆಯ ಭಾವನೆ ಮೂಡುತ್ತದೆ.
ಜಪಾನ್ ಮಾಜಿ ಪ್ರಧಾನಿ ಶಿಂಜೋ ಅಬೆ ನಿಧನ
ಜಪಾನ್ ದೇಶವನ್ನು ಅತೀ ಹೆಚ್ಚು ಕಾಲ ಆಳ್ವಿಕೆ ನಡೆಸಿದ್ದ ಮಾಜಿ ಪ್ರಧಾನಿ ಶಿಂಜೋ ಅಬೆ ಅವರು ನಾರಾ ನಗರದಲ್ಲಿ ಭಾಷಣ ಮಾಡುತ್ತಿದ್ದ ವೇಳೆ ಅವರು ಗುಂಡೇಟಿಗೆ ಬಲಿಯಾಗಿದ್ದಾರೆ. 1954ರ ಸೆಪ್ಟೆಂಬರ್ 21ರಂದು ಜನಿಸಿದ್ದ ಶಿಂಜೋ ಅಬೆ ಅವರು ಜಪಾನ್ ನಲ್ಲಿ ಅತೀ ಹೆಚ್ಚು ಕಾಲ ಆಳ್ವಿಕೆ ಮಾಡಿದ ಪ್ರಧಾನಿ ಎಂಬ ಹೆಗ್ಗಳಿಕೆ ಹೊಂದಿದ್ದಾರೆ.
* 2007ರಲ್ಲಿ ಅವರು ಅಧಿಕಾರ ಕಳೆದುಕೊಂಡರು. ಬಳಿಕ 2012-2014ರ ನಡುವೆ ಅವರು ಎರಡನೇ ಬಾರಿ ಪ್ರಧಾನಿಯಾದರು. 2014ರಲ್ಲಿ ನಡೆದ ಚುನಾವಣೆಯಲ್ಲಿ ಗೆದ್ದು ಮತ್ತೆ ಪ್ರಧಾನಿಯಾದ ಶಿಂಜೋ ಅಬೆ 2017ರ ವರೆಗೆ ಆಳ್ವಿಕೆ ನಡೆಸಿದ್ದರು. 2017ರ ಚುನಾವಣೆಯಲ್ಲಿ ಪುನರಾಯ್ಕೆಯಾದ ಅಬೆ 2020ರವರೆಗೆ ಆಳ್ವಿಕೆ ನಡೆಸಿದ್ದರು.
* ಜೂನ್ 2020 ರಲ್ಲಿ ಅಬೆ ಅವರ ಆರೋಗ್ಯವು ಹದಗೆಟ್ಟಿತು. ನಿರಂತರ ಆಸ್ಪತ್ರೆ ಭೇಟಿಗಳ ನಂತರ. ಅಬೆ ಅವರು 28 ಅಗಸ್ಟ್ 2020 ರಂದು ಅವರು ಪ್ರಧಾನ ಮಂತ್ರಿಯಾಗಿ ನಿವೃತ್ತಿ ಘೋಷಿಸಿದರು.
ಭಾರತದೊಂದಿಗೆ ಸಂಬಂಧ :
ಶಿಂಜೋ ಅಬೆ ಅವರು ಭಾರತದೊಂದಿಗೆ ಉತ್ತಮ ಸ್ನೇಹ ಸಂಬಂಧವನ್ನು ಹೊಂದಿದ್ದರು. ಅಲ್ಲದೆ ಭಾರತದ ಜೊತೆಗೂಡಿ ಏಷ್ಯಾದಲ್ಲಿ ಬಲ ಹೆಚ್ಚಿಸುವ ಬಗ್ಗೆ ಕಾರ್ಯತಂತ್ರ ರೂಪಿಸಿದ್ದರು. 2007 ರಲ್ಲಿ ಜಪಾನ್, ಆಸ್ಟ್ರೇಲಿಯಾ ಮತ್ತು ಭಾರತದ ಯುನೈಟೆಡ್ ಸ್ಟೇಟ್, ನಡುವೆ ಮಾತುಕತೆ ಪ್ರಾರಂಭಿಸಿದರು. ಆಗಸ್ಟ್ 2007 ರಲ್ಲಿ ಭಾರತಕ್ಕೆ ಅವರ ಮೂರು ದಿನಗಳ ಭೇಟಿಯು ಹೊಸ ದ್ವಿಪಕ್ಷೀಯ ಏಷ್ಯನ್ ಮೈತ್ರಿಗೆ ಮುನ್ನಡಿಯಾಯಿತು. ಈ ಮೂಲಕ ಅಮೆರಿಕ-ಆಸ್ಟ್ರೇಲಿಯಾ, ಅಮೆರಿಕಾ- ಜಪಾನ್, ಜಪಾನ್-ಆಸ್ಟ್ರೇಲಿಯಾ, ಮತ್ತು ಅಮೆರಿಕಾ- ಭಾರತದಂತೆ ಐದನೇ ದ್ವಿಪಕ್ಷೀಯ ಕೊಂಡಿಯಾಗಿ ಭಾರತ- ಜಪಾನ್ ಸಂಬಂಧ ಹೊಂದಲು ಅಬೆ ಕ್ರಮ ರೂಪಿಸಿದ್ದರು. ಈ ವ್ಯವಸ್ಥೆಯಲ್ಲಿ ವಿಯೆಟ್ನಾಂ, ದಕ್ಷಿಣ ಕೋರಿಯಾ, ಫಿಲಿಫೈನ್ಸ್ ಮತ್ತು ಇಂಡೋನೇಷ್ಯಾವನ್ನು ಸೇರಿಸುವ ಉಪಕ್ರಮವಾಗಿತ್ತು. ಚೀನಾದ ತಜ್ಞರು ವಿಕಸನಗೊಳ್ಳತ್ತಿರುವ ಜಿಯೋ-ಸ್ಪಾಟೆಜಿಕ್ ಮಾದರಿಯನ್ನು “ಏಷ್ಯನ್ ನ್ಯಾಟೋ” ಎಂದು ಲೇಬಲ್ ಪಡೆದಿದ್ದಾರೆ.
ಗಂಗಾರತಿ ಬುಲೆಟ್ ರೈಲು :
2015ರಲ್ಲಿ ಭಾರತಕ್ಕೆ ಭೇಟಿ ನೀಡಿದ್ದ ಅಬೆ ವಾರಣಾಸಿಯಲ್ಲಿ ಅವರು ಗಂಗಾ ಆರತಿ ಆಚರಣೆಯನ್ನು ವೀಕ್ಷಿಸಿದ್ದರು. ಎರಡು ವರ್ಷಗಳ ಬಳಿಕ ಅದೆ ಅವರನ್ನು ಮತ್ತೆ ಭಾರತ ಪ್ರವಾಸ ಕೈಗೊಂಡಿದ್ದರು. ಈ ವೇಳೆ ಅವರು ಅಹಮದಾಬಾದ್‌ನಲ್ಲಿ ಭಾರತದ ಮೊದಲ ಬುಲೆಟ್ ಟ್ರೆನ್‌ಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಮರು ವರ್ಷ ಭಾರತ-ಜಪಾನ್ ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಪ್ರಧಾನಿ ಮೋದಿ ಅಲ್ಲಿಗೆ ತೆರಳಿದ್ದರು. ಯಮನಶಿಯಲ್ಲಿನ ತಮ್ಮ ಪೂರ್ವಜರ ಮನೆಯಲ್ಲಿ ಅವರಿಗೆ ಆತಿಥ್ಯ ಕೊಡಲಾಗಿತ್ತು. ವಿದೇಶಿ ನಾಯಕರೊಬ್ಬರ ಅಂತಹ ಉಪಚಾರ ನೀಡಿದ್ದು ಅದೇ ಮೊದಲು.
ಶಿಂಜೋ ಅಬೆ ಅವರಿಗೆ ಪದ್ಮ ವಿಭೂಷಣ ಗೌರವ:
ಭಾರತದ ಜತೆ ವಿಶೇಷ ಬಾಂಧವ್ಯ ಹೊಂದಿದ್ದ ಅಬೆ ಅವರಿಗೆ ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾಗಿರುವ ಪದ್ಮವಿಭೂಷಣ ಗೌರವವನ್ನು 2021ರಲ್ಲಿ ನೀಡಲಾಗಿತ್ತು. ಮದರ್ ಥೆರೆಸಾ ಮತ್ತು ನೆಲ್ಸನ್ ಮಂಡೇಲಾ ಅವರು ಮಾತ್ರ ಈ ಗೌರವ ಪಡೆದಿದ್ದ ವಿದೇಶಿಗರಾಗಿದ್ದಾರೆ.
ಶಿಂಜೋ ಅಬೆ ಹಾಗೂ ಅವರ ಕುಟುಂಬ ಈ ಹಿಂದಿನಿಂದಲೂ ಭಾರತದ ಜತೆ ಉತ್ತಮ ನಂಟು ಹೊಂದಿತ್ತು. 2014ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅವರು ಜನವರಿ 26ರಂದು ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.
ಶಿಂಜೋ ಅಬೆ ಹಾಗೂ ಅವರ ಕುಟುಂಬ ಈ ಹಿಂದಿನಿಂದಲೂ ಭಾರತದ ಜತೆ ಉತ್ತಮ ನಂಟು ಹೊಂದಿತ್ತು. 2014ರಲ್ಲಿ ಯುಪಿಎ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಅವರು ಜನವರಿ 26ರಂದು ಗಣರಾಜ್ಯೋತ್ಸವ ಪಥ ಸಂಚಲನಕ್ಕೆ ವಿಶೇಷ ಅತಿಥಿಯಾಗಿ ಆಗಮಿಸಿದ್ದರು.
* ಶಿಂಜೋ ಅಬೆ ಅವರ ಆರ್ಥಿಕ ಸುಧಾರಣೆಗಳು ಮತ್ತು ನೀತಿಗಳು ವಿಶೇಷವಾಗಿ ಚರ್ಚೆಗೆ ಗ್ರಾಸವಾಗಿದ್ದವು . ಜಪಾನ್ ಆರ್ಥಿಕತೆಯ ಗಣನೀಯ ಪ್ರಗತಿಗೆ ಅವರ ನೀತಿಗಳು ಸಹಾಯ ಮಾಡಿದ್ದವು. ಅವರ ಸುಧಾರಣಾ ಕ್ರಮಗಳು ಕೂಡ ಶ್ಲಾಘನೆಗೆ ಪಾತ್ರವಾಗಿದ್ದವು. ಇದು 'ಅಬೆನಾಮಿಕ್ಸ್' ಎಂದು ಜನಪ್ರಿಯವಾಗಿತ್ತು. ಅಬೆ ಅವರ ಅಧಿಕಾರವಧಿಯಲ್ಲಿ ಭಾರತದ ಜತೆ ನಾಗರಿಕ ಪರಮಾಣು ಶಕ್ತಿಯಿಂದ ಇಂಡೋಪೆಸಿಫಿಕ್ ಸಮುದ್ರದ ಸುರಕ್ಷತೆಯವರೆಗೆ ಅನೇಕ ವಲಯಗಳಲ್ಲಿ ಸಹಭಾಗಿತ್ವ ಸಾಧಿಸಲಾಗಿತ್ತು. ಜತೆಗೆ ಆರ್ಥಿಕ ಪಾಲುದಾರಿಕೆ ಮತ್ತು ಮೂಲಸೌಕರ್ಯದಲ್ಲಿನ ಹೊಂದಾಣಿಕೆಯೂ ಗಮನಾರ್ಹವಾಗಿತ್ತು.
• ಅಂತರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ಮುಕ್ತ ವ್ಯಾಪಾರ ಮಾರ್ಗವನ್ನು ಬಲಪಡಿಸುವ ಜೊತೆಗೆ ಇಂಡೋ- ಫೆಸಿಫಿಕ್ ಪ್ರದೇಶದಲ್ಲಿ ಭದ್ರತೆ ಕಲ್ಪಿಸುವುದು ಅವರ ಪ್ರಮುಖ ಜಾಗತಿಕ ಕೊಡುಗೆಗಳಲ್ಲಿ ಒಂದು. ಈ ಭಾಗದಲ್ಲಿ ಭಾರತದ ಪಾತ್ರದ ಮಹತ್ವವನ್ನು ಗ್ರಹಿಸಿದ್ದ ಅಬೆ, ಭವಿಷ್ಯದಲ್ಲಿನ ಇಂಡೋ-ಫೆಸಿಫಿಕ್ ಸಮಗ್ರತೆಯ ಪ್ರಯತ್ನದಲ್ಲಿ ಚೀನಾದ ನಿಯಂತ್ರಣದ ಮಧ್ಯೆ ಪ್ರಜಾಸತ್ತಾತ್ಮಕ ಸಮತೋಲನ ಸೃಷ್ಟಿಸುವ ಬಗ್ಗೆ ಆದ್ಯತೆ ನೀಡಿದ್ದರು. ಅಬೆ ಅವರ ಯೋಜನೆಯ ಇಂಡೋ-ಫೆಸಿಫಿಕ್ ಪ್ರದೇಶದಲ್ಲಿ ಭಾರತವನ್ನು ಪ್ರಮುಖ ಪಾತ್ರಧಾರಿಯನ್ನಾಗಿ ಮಾತ್ರವಲ್ಲದೆ. ಆಸ್ಟ್ರೇಲಿಯಾ, ಆಸಿಯನ್ ದೇಶಗಳೂ, ಫ್ರಾನ್ಸ್ - ಬ್ರಿಟನ್ ಮತ್ತು ಅಮೆರಿಕದಂತಹ ಸಮಾನ ಮನಸ್ಕ ದೇಶಗಳನ್ನೂ ಒಳಗೊಂಡಿತ್ತು. ಭಾರತ, ಅಮೆರಿಕಾ, ಆಸ್ಟ್ರೇಲಿಯಾ ಮತ್ತು ಜಪಾನ ದೇಶಗಳನ್ನು ಒಳಗೊಂಡ 'ಕ್ವಾಡ್' ಗುಂಪಿನ ರಚನೆ ಮತ್ತು ಅದರಲ್ಲಿ ಭಾರತಕ್ಕೆ ಮಾನ್ಯತೆ ನೀಡುವುದರಲ್ಲಿ ಅಬೆ ಅವರು ಪ್ರಮುಖ ಪಾತ್ರ ವಹಿಸಿದ್ದರು. ಈ ಕ್ವಾಡ್ ಸಂಘಟನೆ, ಭಾರತದ ಮೇಲಿನ ಚೀನಾ ಅಕ್ರಮಣಕ್ಕೆ ಒಂದಷ್ಟು ಏಟು ಕೊಡುವಲ್ಲಿ ಸಫಲವಾಗಿದೆ.
* ಭಾರತದಲ್ಲಿ ಬುಲೆಟ್ ಟ್ರೈನ್ ನಿರ್ಮಾಣದ ಕಲ್ಪನೆ ಹಲವು ದಶಕಗಳಿಂದ ಇದ್ದರೂ, ಅದಕ್ಕೆ ಚಾಲನೆ ನೀಡುವುದು ಕನಸಿನ ಮಾತು ಎನಿಸಿತ್ತು. ಆದರೆ ಭಾರತದ ಈ ಬಯಕೆಗೆ ಚೈತನ್ಯ ನೀಡಿದ್ದು ಶಿಂಜೋ ಅಬೆ, ಸುಮಾರು 80,000 ಕೋಟಿ ರೂ ಮೃದು ಸಾಲದೊಂದಿಗೆ ಬಹು ನಿರೀಕ್ಷೆಯ ಶಿಂಕಾಸನ್ ಅಥವಾ ಬುಲೆಟ್ ಟ್ರೈನ್‌ನ ಯೋಜನೆಗೆ ಶೇ.80 ರಷ್ಟು ಅನುದಾನ ನೀಡಲು ಜಪಾನ್ ಸರ್ಕಾರ ನಿರ್ಧರಿಸಿತ್ತು. ಈ ಮೃದು ಸಾಲದಲ್ಲಿ ಕೇವಲ ಶೇ.0.1ರ ಬಡ್ಡಿಯಲ್ಲಿ 15 ವರ್ಷದ ಹೆಚ್ಚುವರಿ ಅವಧಿಯೊಂದಿಗೆ 50 ವರ್ಷಗಳ ಮರುಪಾವತಿ ಅವಕಾಶ ಒಪ್ಪಂದ ಮಾಡಿಕೊಳ್ಳಲಾಗಿದೆ.
'ಶಕ್ತಿಶಾಲಿ ಭಾರತವು ಜಪಾನ್‌ನ ಹಿತಾಸಕ್ತಿಗೆ ಪೂರಕವಾಗಿದೆ. ಹಾಗೆಯೇ ಶಕ್ತಿಶಾಲಿ ಜಪಾನ್, ಭಾರತದ ಹಿತಾಸಕ್ತಿಗೆ ಅನುಕೂಲಕರವಾಗಿದೆ' ಎಂದು ಶಿಂಜೋ ಅಬೆ ಹೇಳಿದ್ದರು. ಅಬೆ ಅವರ ಅವಧಿಯಲ್ಲಿ ಭಾರತಕ್ಕೆ ಅತಿ ದೊಡ್ಡ ದ್ವಿಪಕ್ಷೀಯ ದೇಣಿಗೆದಾರನಾಗಿ ಜಪಾನ್ ಮುಂದುವರಿದಿತ್ತು. ಭಾರತದಲ್ಲಿನ ಅನೇಕ ಮೂಲಸೌಕರ್ಯ ಯೋಜನೆಗಳಿಗೆ ಜಪಾನ್ ಸಹಾಯ ಮಾಡಿದೆ. 2013ರ ಫೆಬ್ರವರಿಯಿಂದ ಒಡಿಪಿ(ಅಧಿಕೃತ ಅಭಿವೃದ್ಧಿ ನೆರವು) ಅಡಿಯಲ್ಲಿ 60ಕ್ಕೂ ಹೆಚ್ಚು ಯೋಜನೆಗಳನ್ನು ಜಾರಿಗೊಳಿಸಲಾಗಿದೆ.
ಜಪಾನ್ ದೇಶದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ
- ರಾಜಧಾನಿ - ಟೋಕಿಯೋ
- ರಾಷ್ಟ್ರೀಯ ಭಾಷೆ - ಜಪಾನೀಸ್
- ಪ್ರಧಾನ ಮಂತ್ರಿ - ಪುಮಿಯೋ ಕಿಶಿದಾ
- ಕರೆನ್ಸಿ - ಜಪಾನಿ ಯೆನ್
ಕಾಟ್ಸಾ ಕಾಯ್ದೆ ತಿದ್ದುಪಡಿ
ರಷ್ಯಾದಿಂದ ಎಸ್-400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿ ಸಂಬಂಧ ಭಾರತಕ್ಕೆ ಪ್ರತಿಕೂಲವಾಗಿರುವ ಕಾಟ್ಸಾ ಕಾಯ್ದೆಗೆ ಅಮೆರಿಕದ ಸಂಸತ್‌ನಲ್ಲಿ ಶಾಸನಾತ್ಮದ ತಿದ್ದುಪಡಿ ಮಸೂದೆಯನ್ನು ಭಾರತ - ಅಮೆರಿಕದ ಕಾಂಗ್ರೆಸ್ಸಿಗ ರೋ ಖನ್ನಾ ಮಂಡಿಸಿದ್ದಾರೆ. 'ಕಾಟ್ಸಾ ಕಾಯ್ದೆಯ ತಿದ್ದುಪಡಿ ಮಸೂದೆ ಅಮೆರಿಕ ಮತ್ತು ಭಾರತದ ರಕ್ಷಣಾ ಸಂಬಂಧವನ್ನು ಬಲಪಡಿಸುತ್ತದೆ ಮತ್ತು ಆಕ್ರಮಣಕಾರರನ್ನು ಹಿಮ್ಮೆಟ್ಟಿಸುತ್ತದೆ.'
* ಎಸ್ - 400 ಕ್ಷಿಪಣಿ ರಕ್ಷಣಾ ವ್ಯವಸ್ಥೆಯನ್ನು ರಷ್ಯಾದಿಂದ ಖರೀದಿಸಿದ ಟರ್ಕಿ ಮೇಲೆ ಅಮೆರಿಕ ಈಗಾಗಲೇ ಕಾಟ್ಸಾ ಕಾಯ್ದೆಯ ನಿರ್ಭಂಧಗಳನ್ನು ಹೇರಿದೆ. ಇದೇ ನಿರ್ಬಂಧಗಳನ್ನು ಭಾರತದ ಮೇಲೂ ಹೇರುವ ಅಂದಾಜು ಇದೆ. ಎಸ್ - 400 ಕ್ಷಿಪಣಿ ರಕ್ಷಣಾ ವ್ಯವಸ್ಥೆ ಖರೀದಿ ಸಂಬಂಧ ಭಾರತಕ್ಕೆ ಕಾಟ್ಸಾ ಕಾಯ್ದೆಯಡಿ ಸಂಭಾವ್ಯ ನಿರ್ಬಂಧ ಅಥವಾ ವಿನಾಯತಿ ಬಗ್ಗೆ ಅಮೆರಿಕಾ ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ.
ಅಮೆರಿಕ ದೇಶದ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ
- ರಾಜಧಾನಿ - ವಾಷಿಂಗ್ಟನ್ ಡಿ.ಸಿ
- ಅಧ್ಯಕ್ಷರು - ಜೋ ಬ್ಐಡನ್
- ಕರೆನ್ಸಿ - ಯುಎಸ್ ಡಾಲರ್
ಸುದ್ದಿಯಲ್ಲಿರುವ ಮಂಗರ್ ಬೆಟ್ಟದ ತುದಿ
ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರದ (ಎನ್.ಎಂ.ಎ) ವರದಿಯು 1500 ಬಿಲ್ಲರು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಗೌರವಾರ್ಥವಾಗಿ ರಾಜಸ್ಥಾನದ ಮಂಗರ್ ಬೆಟ್ಟದ ತುದಿಯನ್ನು ರಾಷ್ಟ್ರೀಯ ಸ್ಮಾರಕವಾಗಿ ಗುರುತಿಸಬೇಕೆಂದು ಚಿಂತನೆ ನಡೆಸಿದೆ.
ಮಂಗರ್ ಬೆಟ್ಟದ ಹಿನ್ನೆಲೆ :
ಗುಜರಾತ್-ರಾಜಸ್ಥಾನ ಗಡಿಯಲ್ಲಿರುವ ಈ ಬೆಟ್ಟವು ಬುಡಕಟ್ಟು ದಂಗೆಯ ತಾಣವಾಗಿದ್ದು, 1913 ರಲ್ಲಿ 1500 ಕ್ಕೂ ಹೆಚ್ಚು ಬಿಲ್ಲರು ಬುಡಕಟ್ಟು ಸ್ವಾತಂತ್ರ್ಯ ಹೋರಾಟಗಾರರ ಹತ್ಯಾಕಾಂಡ ನಡೆಯಿತು. ಈ ಸ್ಥಳವನ್ನು “ಆದಿವಾಸಿ ಜಲಿಯನ್ ವಾಲಾಬಾಗ್ ಎಂದೂ ಸಹ ಕರೆಯಲಾಗುತ್ತದೆ. ಮತ್ತು ಸ್ಮಾರಕವನ್ನು ನಿರ್ಮಿಸಬೇಕೆಂಬ ಬೇಡಿಕೆ ಬಂದಿದೆ. 1913 ರ ನವೆಂಬರ್ 17 ರಲ್ಲಿ, ಆ ಸ್ಥಳದಲ್ಲಿ ನೆರೆದಿದ್ದ ಬುಡಕಟ್ಟು ಜನರ ಮೇಲೆ ಬ್ರಿಟಿಷ್ ಪಡೆಗಳು ಗುಂಡು ಹಾರಿಸಿದವು, ಅವರು ಸಮುದಾಯದ ಮುಖಂಡ ಗೋವಿಂದ್ ಗುರು ಅವರ ನೇತೃತ್ವದಲ್ಲಿ ಸಭೆ ನಡೆಸುತ್ತಿದ್ದು, 1,500 ಕ್ಕೂ ಹೆಚ್ಚು ಜನರನ್ನು ಬ್ರಿಟಿಷರು ಕೊಂದು ಹಾಕಿದರು.
ಬಿಲ್ಲರು ಬುಡಕಟ್ಟು
ಬಿಲ್ಲರನ್ನು ಸಾಮಾನ್ಯವಾಗಿ ರಾಜಸ್ಥಾನದ ಬೌಮನ್ ಎಂದು ಕರೆಯಲಾಗುತ್ತದೆ. ಅವರು ಭಾರತದ ಅತ್ಯಂತ ವ್ಯಾಪಕವಾಗಿ ಚದುರಿದ ಬುಡಕಟ್ಟು ಸಮುದಾಯಗಳು ಅವರು ದಕ್ಷಿಣ ಏಷ್ಯಾದ ಅತಿದೊಡ್ಡ ಬುಡಕಟ್ಟು ಜನಾಂಗವಾಗಿದ್ದಾರೆ ಅವುಗಳನ್ನು ಸ್ಕೂಲವಾಗಿ ಎರಡು ವಿಧಗಳಾಗಿ ವಿಂಗಡಿಸಲಾಗಿದೆ.
ಮಧ್ಯ ಅಥವಾ ಶುದ್ಧ ಬಿಲ್ಲರುಗಳು ಹಾಗೂ ಪೂರ್ವ ಅಥವಾ ರಜಪೂತ ಭಿಲ್ಲರು:
ಮಧ್ಯ ಭಿಲ್ಲರನ್ನು ಭಾರತದ ಮಧ್ಯಪ್ರದೇಶ, ಮಹಾರಾಷ್ಟ್ರ, ಗುಜರಾತ್ ಮತ್ತು ರಾಜಸ್ಥಾನದ ಪರ್ವತ ಪ್ರದೇಶಗಳಲ್ಲಿ ಕಾಣಬಹುದು, ಮತ್ತು ತ್ರಿಪುರಾದ ವಾಯುವ್ಯ ಪ್ರದೇಶಗಳಲ್ಲಿಯೂ ಕಾಣಬಹುದು. ಅವರನ್ನು ಆಂಧ್ರಪ್ರದೇಶ, ಛತ್ತೀಸ್‌ಗಢ, ಗುಜರಾತ್, ಕರ್ನಾಟಕ, ಮಧ್ಯಪ್ರದೇಶ, ಮಹಾರಾಷ್ಟ್ರ, ರಾಜಸ್ಥಾನ ಮತ್ತು ತ್ರಿಪುರಾಗಳಲ್ಲಿ ಪರಿಶಿಷ್ಟ ಪಂಗಡ ಎಂದು ಪರಿಗಣಿಸಲಾಗುತ್ತದೆ.
ಚಾರಿತ್ರಿಕ ಹಿನ್ನೆಲೆ :
ಬಿಲ್ಲರು ಆರ್ಯ-ಪೂರ್ವ ಜನಾಂಗದ ಸದಸ್ಯರು. `ಭಿಲ್' ಎಂಬ ಪದವು ದ್ರಾವಿಡ ಭಾಷೆಯಲ್ಲಿ ಬಿಲ್ಲು ಎಂದು ಕರೆಯಲ್ಪಡುವ ವಿಲ್ಲು ಅಥವಾ ಬಿಲ್ಲು ಎಂಬ ಪದದಿಂದ ಉತ್ಪತ್ತಿಯಾಗಿದೆ. ಮಹಾಭಾರತ ಮತ್ತು ರಾಮಾಯಣದ ಪ್ರಾಚೀನ ಮಹಾಕಾವ್ಯಗಳಲ್ಲಿ ಬಿಲ್ ಎಂಬ ಹೆಸರನ್ನು ಸಹ ಉಲ್ಲೇಖಿಸಲಾಗಿದೆ.
ರಾಷ್ಟ್ರೀಯ ಪ್ರಾಮುಖ್ಯತೆಯ ಸ್ಮಾರಕಗಳು :
ರಾಷ್ಟ್ರೀಯ ಪ್ರಾಚೀನ ಸ್ಮಾರಕಗಳನ್ನು ಪ್ರಾಚೀನ ಸ್ಮಾರಕ ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಕಾಯ್ದೆ, 1958 ರ ಅಡಿಯಲ್ಲಿ ವ್ಯಾಖ್ಯಾನಿಸಲಾಗಿದೆ. ಈ ಕಾಯ್ದೆಯು ಪ್ರಾಚೀನ ಸ್ಮಾರಕವನ್ನು ಯಾವುದೇ ರಚನೆ ಅಥವಾ ಸ್ಮಾರಕ ಅಥವಾ ಯಾವುದೇ ಗುಹೆ, ಶಿಲಾಶಿಲ್ಪ, ಐತಿಹಾಸಿಕ ಅಥವಾ ಪುರಾತತ್ವ ಆಸಕ್ತಿಯ ಶಾಸನ ಎಂದು ವ್ಯಾಖ್ಯಾನಿಸುತ್ತದೆ. ಸ್ಮಾರಕಗಳನ್ನು ನಿರ್ವಹಿಸಲು, ರಕ್ಷಿಸಲು ಮತ್ತು ಉತ್ತೇಜಿಸಲು ಕೇಂದ್ರ ಸರ್ಕಾರಕ್ಕೆ ಅಧಿಕಾರವಿದೆ.
ರಾಷ್ಟ್ರೀಯ ಸ್ಮಾರಕಗಳ ಪ್ರಾಧಿಕಾರ (MA) |
---|
ಪ್ರಾಚೀನ ಸ್ಮಾರಕಗಳು ಮತ್ತು ಪುರಾತತ್ವ ಸ್ಥಳಗಳು ಮತ್ತು ಅವಶೇಷಗಳ ಎಎಂಎಎಸ್‌ಆರ್ (ತಿದ್ದುಪಡಿ ಮತ್ತು ಮಾನ್ಯತೆ) ಕಾಯ್ದೆ, 2010 ರ ಅವಶ್ಯಕತೆಗಳಿಗೆ ಅನುಗುಣವಾಗಿ ಇದನ್ನು ಸಂಸ್ಕೃತಿ ಸಚಿವಾಲಯದ ಅಡಿಯಲ್ಲಿ ಸ್ಥಾಪಿಸಲಾಯಿತು. ಸ್ಮಾರಕಗಳು ಮತ್ತು ತಾಣಗಳ ಸಂರಕ್ಷಣೆ ಮತ್ತು ಸಂರಕ್ಷಣೆಗಾಗಿ ಎನ್.ಎಂ.ಎಗೆ ನಿರ್ದಿಷ್ಟ ಕಾರ್ಯಗಳನ್ನು ವಹಿಸಲಾಗಿದೆ, ಇದರಲ್ಲಿ ಕೇಂದ್ರ ನಿಯೋಜಿತ ಸ್ಮಾರಕಗಳ ಸುತ್ತಲಿನ ನಿಷೇಧಿತ ಮತ್ತು ನಿಬರ್ಂಧಿತ ಪ್ರದೇಶಗಳ ನಿಯಂತ್ರಣವೂ ಸೇರಿದೆ. ನಿರ್ಬಂಧಿತ ಮತ್ತು ನಿಯಂತ್ರಿತ ಪ್ರದೇಶಗಳಲ್ಲಿ ನಿರ್ಮಾಣ ಸಂಬಂಧಿತ ಚಟುವಟಿಕೆಗಳಿಗೆ ಅರ್ಜಿದಾರರಿಗೆ ಪರವಾನಗಿಗಳನ್ನು ನೀಡುವುದನ್ನು ಮೌಲ್ಯಮಾಪನ ಮಾಡುವುದು ಎನ್.ಎಂ.ಎ.ಯ ಪಾತ್ರಗಳಲ್ಲೊಂದಾಗಿದೆ. |
No comments:
Post a Comment
If you have any doubts please let me know