Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Tuesday 28 June 2022

Top-100 General Knowledge (GK) Question Answers Quiz in Kannada for All Competitive Exams-07

Top-100 General Knowledge (GK) Question Answers Quiz in  Kannada for All Competitive Exams-07

Top-100 General Knowledge (GK) Question Answers Quiz in  Kannada for All Competitive Exams-06 ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ (ಸಾಮಾನ್ಯ ಅಧ್ಯಯನ) ಟಾಪ್-100 ಪ್ರಶ್ನೋತ್ತರಗಳು"



ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಪಿಎಸ್ಸಿ ನಡೆಸುವ ಕೆಎಎಸ್, ಎಫ್‌ಡಿಎ, ಎಸ್ಡಿಎ, ಗ್ರೂಪ್-ಸಿ, ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಪೊಲೀಸ್ ಕಾನ್ಸ್‌ಟೇಬಲ್, ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿ (ಪಿಡಿಒ) ಗ್ರಾಮ ಪಂಚಾಯತ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಶಿಕ್ಷಕರ ಅರ್ಹತಾ ಪರೀಕ್ಷೆ (ಟಿಇಟಿ), ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ನೇಮಕಾತಿ ಪರೀಕ್ಷೆ (GPSTR) ಸೇರಿದಂತೆ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ "ಸಾಮಾನ್ಯ ಜ್ಞಾನದ (ಸಾಮಾನ್ಯ ಅಧ್ಯಯನ) ಟಾಪ್-100 ಪ್ರಶ್ನೋತ್ತರಗಳು" ಪ್ರತಿದಿನವೂ ನಮ್ಮ ಈ ವೆಬ್‌ಸೈಟ್ ನಲ್ಲಿ ಅಪ್ಡೇಟ್ ಮಾಡಲಾಗುತ್ತದೆ. ಆದ್ದರಿಂದ ಪ್ರತಿದಿನವೂ ನಮ್ಮ ವೆಬ್‌ಸೈಟ್ ಗೆ ಭೇಟಿ ನೀಡಿ..!! Top-100 General Knowledge (GK) Multiple Choice Question Answers (GK MCQ's in Kannada) in Kannada For All Competitive Exams like KPSC KAS, FDA SDA, Group-C, Police Sub-Inspector, Police Constable, Karnataka Teacher's Eligibility Test (TET), Graduate Primary School Teachers Recruitment (GPSTR), and All Competitive Exams.




Edutube Kannada ಜಾಲತಾಣಕ್ಕೆ ಸ್ವಾಗತ…!! ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ನೋಟ್ಸ್ ಹಾಗೂ ಬಹು ಆಯ್ಕೆಯ ವಿವರಣೆ ಸಹಿತ ಪ್ರಶ್ನೋತ್ತರಗಳಿಗಾಗಿ, ಗೂಗಲ್ ನಲ್ಲಿ Edutube Kannada ಎಂದು ಸರ್ಚ್ ಮಾಡಿ, ಹೊಸ ಅಪ್ಡೇಟ್ಸ್ ಗಳಿಗಾಗಿ ದಿನವೂ ನಮ್ಮ ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ

1➤ ಗುರುತ್ವದಿಂದ ಉಂಟಾದ ವೇಗೋತ್ಕರ್ಷವು ಯಾವುದರಿಂದ ಮುಕ್ತವಾಗಿರುತ್ತದೆ?

ⓐ ವಸ್ತುವಿನ ಘನರಾಶಿ
ⓑ ಗಾತ್ರ
ⓒ ಆಕಾರ
ⓓ ಮೇಲಿನ ಎಲ್ಲವೂ

2➤ ಜೀವ ವಿಕಾಸದ ಹಿನ್ನಲೆಯಲ್ಲಿ ಹಾವುಗಳು, ಕಾಲುಗಳನ್ನು ಕಳೆದುಕೊಂಡದ್ದನ್ನು ಈ ವಿದ್ಯಮಾನ ವಿವರಿಸುತ್ತದೆ?

ⓐ ಅಂಗಗಳ ಬಳಕೆ ಮತ್ತು ನಿರ್ಬಳಕೆ
ⓑ ಹುತ್ತಗಳಲ್ಲಿನ ಜೀವನ ಶೈಲಿಗೆ ಹೊಂದಿಕೆ
ⓒ ಸ್ವಾಭಾವಿಕ ಆಯ್ಕೆ
ⓓ ಪಡೆದ ಗುಣಗಳ ಮುಂದುವರಿಕೆ

3➤ ಕುಡಿತದಿಂದ ಉಂಟಾಗುವ ಕುರುಡು ಹಾಗೂ ಇನ್ನಿತರ ದುಷ್ಪರಿಣಾಮಗಳಿಗೆ ಕಾರಣವಾಗುವ ವಸ್ತುವು.

ⓐ ಈಥೈಲ್ ಆಲ್ಕೋಹಾಲ್
ⓑ ಅಮೈಲ್ ಆಲ್ಕೋಹಾಲ್
ⓒ ಬೆನ್‌ಜೈಲ್ ಆಲ್ಕೋಹಾಲ್
ⓓ ಮಿಥೈಲ್ ಆಲ್ಕೋಹಾಲ್

4➤ ವಿಕ್ಷೇಪಣ [Dispersion] ಪದವು ವಿವರಿಸುವ ಪ್ರಕ್ರಿಯೆ ಇದಾಗಿದೆ?

ⓐ ಬೆಳಕನ್ನು ಅದರ ಆವರ್ತನದ ಉಪಾಂಗಗಳನ್ನಾಗಿ ಪ್ರತ್ಯೇಕಿಸುವುದು.
ⓑ ನುಣುಪಾದ ಮೇಲ್ಮೈನಿಂದ ಬೆಳಕನ್ನು ಪ್ರತಿಫಲಿಸುವುದು.
ⓒ ಸಮಯವಿಲ್ಲದೆ ಒರಟು ಮೇಲ್ಮೈಯೊಂದರಿಂದ ಬೆಳಕಿನ ಹೀರಿಕೊಳ್ಳುವಿಕೆಯ ಪ್ರಕ್ರಿಯೆ
ⓓ ಬೆಳಕು ಚದರುವಿಕೆ

5➤ ಬರಗಾಲ ಪೀಡಿತ ಜನರಿಗೆ ಪರಿಹಾರ ನೀಡಲು ಬರಗಾಲ ಸಂಹಿತೆಯನ್ನು ರೂಪಿಸಿದ ಮೊದಲ ಸುಲ್ತಾನ ಯಾರು?

ⓐ ಫಿರೋಜ್ ತುಘಲಕ್
ⓑ ಮಹಮ್ಮದ್ ಬಿನ್ ತುಘಲಕ್
ⓒ ಅಲ್ಲಾವುದ್ದೀನ್ ಖಿಲ್ಜಿ
ⓓ ಬಲ್ಬನ್

6➤ 1857ರ ದಂಗೆಗೆ ಸಂಬಂಧಿಸಿದಂತೆ ಈ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?

ⓐ ಸಾಮಾನ್ಯ ಜನತೆಯು ಇದರಲ್ಲಿ ಭಾಗವಹಿಸಲಿಲ್ಲ.
ⓑ ವಿದ್ಯಾವಂತ ಭಾರತೀಯರು ಇದರಲ್ಲಿ ಭಾಗವಹಿಸಲಿಲ್ಲ.
ⓒ ಹಿಂದೂ ಮತ್ತು ಮುಸ್ಲಿಂರ ನಡುವೆ ಸಹಕಾರವಿರಲಿಲ್ಲ
ⓓ ಬಿಹಾರದ ಜಮೀನುದಾರರು ದಂಗೆಕೋರರಿಗೆ ಸಹಾಯ

7➤ ಅಪಘಾತದಲ್ಲಿ ಒಬ್ಬಾತನಿಗೆ ಮಂಡಿ-ಕೀಲಿಗೆ ಪೆಟ್ಟಾದಲ್ಲಿ ಆತ ಯಾವ ವೈದ್ಯರನ್ನು ಸಂಪರ್ಕಿಸಬೇಕು?

ⓐ Orthopedic Surgeon
ⓑ Paediatric Surgeon
ⓒ Onclogist Surgeon
ⓓ Urologist Surgeon

8➤ ಎಪಿಗ್ಲಾಟಿಸ್ ಅಂಗಾಂಶದ ಕಾರ್ಯವೇನು?

ⓐ ಅನ್ನನಾಳದಲ್ಲಿ ಗಾಳಿ ಹೋಗದಂತೆ ತಡೆಯುತ್ತದೆ.
ⓑ ಶ್ವಾಸಕೋಶಗಳನ್ನು ಹಿಗ್ಗಿಸುತ್ತದೆ
ⓒ ಶ್ವಾಸಕೋಶಗಳನ್ನು ಕುಗ್ಗಿಸುತ್ತದೆ.
ⓓ ಆಹಾರ ಶ್ವಾಸನಾಳಗಳನ್ನು ಪ್ರವೇಶಿಸುವುದನ್ನು ತಡೆಯುತ್ತದೆ.

9➤ ಕೆಳಗಿನ ಯಾವ ಪರಿಸ್ಥಿತಿಗಳಲ್ಲಿ ರಾಸಾಯನಿಕ ಕ್ರಿಯೆಯು ಸಂಭವಿಸುವುದಿಲ್ಲ?

ⓐ ಸಾಮಾನ್ಯ ಲವಣ ಗಾಳಿಗೆ ಅನಾವರಿಸಲ್ಪಟ್ಟಾಗ
ⓑ ಗಾಳಿಯಲ್ಲಿ ಕಲ್ಲಿದ್ದಲ್ಲನ್ನು ಸುಡುವಾಗ
ⓒ ಸೋಡಿಯಂ ಅನ್ನು ನೀರಿನಲ್ಲಿ ಇರಿಸಿದಾಗ
ⓓ ಕಬ್ಬಿಣವನ್ನು ತೇವಾಂಶವಿರುವ ಗಾಳಿಯಲ್ಲಿ ಇರಿಸಿದಾಗ

10➤ ದೂರದರ್ಶನ ಪ್ರಸಾರ ವ್ಯಾಪ್ತಿಯು ಒಂದು ನಿರ್ದಿಷ್ಟ ದೂರಕ್ಕೆ ಮಾತ್ರ ಸೀಮಿತವಾಗಿರುತ್ತದೆ. ಏಕೆಂದರೆ

ⓐ ಉದ್ದ ಅಲೆಗಳ ಬಳಕೆ
ⓑ ಅಡ್ಡ ಅಲೆಗಳ ಬಳಕೆ
ⓒ ಸೂಕ್ಷ್ಮ ಅಲೆಗಳ ಬಳಕೆ
ⓓ ಭೂಮಿ ಗೋಳಾಕಾರದಲ್ಲಿರುವುದು

11➤ ಸೂಪರ್ ಕಂಡಕ್ಟರ್‌ಗಳು ಅಂದರೆ ಏನು?

ⓐ ಕಡಿಮೆ ಉಷ್ಣತೆಯಲ್ಲಿಯೂ ಸಹ ವಿದ್ಯುತ್ ವಾಹಕವಾಗಿದೆ.
ⓑ ವಿದ್ಯುತ್ ಹರಿಯುವಿಕೆಗೆ ಹೆಚ್ಚು ಪ್ರತಿರೋಧ ತೋರುತ್ತದೆ.
ⓒ ವಿದ್ಯುತ್ ಹರಿಯುವಿಕೆಗೆ ಹೆಚ್ಚು ಪ್ರತಿರೋಧ ತೋರುವುದಿಲ್ಲ
ⓓ ಹೆಚ್ಚು ಉಷ್ಣತೆಯಲ್ಲಿಯೂ ಸಹ ವಿದ್ಯುತ್ ವಾಹಕವಾಗಿದೆ.

12➤ ಮಹಾಯಾನ ಬೌದ್ಧ ಪಂಥದಲ್ಲಿ ಬೋಧಿಸತ್ವ ಅವಲೋಕಿತೇಶ್ವರನ್ನು ಹೀಗೆಂದೂ ಕರೆಯಲಾಗಿದೆ?

ⓐ ವಜ್ರಪಾಣಿ
ⓑ ಮಂಜುಶ್ರೀ
ⓒ ಪದ್ಮಪಾಣಿ
ⓓ ಮೈತ್ರೇಯ

13➤ ಬ್ರಿಟಿಷರು ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ನಿರ್ಮಾಣ ಮಾಡಿದ ಮೊದಲ ಕೋಟೆ ಯಾವುದು?

ⓐ ಪೋರ್ಟ್ ವಿಲಿಯಂ
ⓑ ಪೋರ್ಟ್ ಸೈಂಟ್ ಜಾರ್ಜ್
ⓒ ಫೋರ್ಟ್ ಸೈಂಟ್ ಡೇವಿಡ್
ⓓ ಫೋರ್ಟ್ ಸೈಂಟ್ ಎಂಜೆಲೋ

14➤ ಋಗ್ವೇದದ ಸಮಯದಲ್ಲಿ 'ಜನ' ಎಂಬುದು ಏನಾಗಿತ್ತು?

ⓐ ನಾಣ್ಯ
ⓑ ಬುಡಕಟ್ಟು
ⓒ ರಾಜಕೀಯ ಘಟಕ
ⓓ ಜಾತಿ

15➤ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ 1. ಸಿಹಿ ಕಿತ್ತಳೆ ಗಿಡವನ್ನು ಕಸಿ ವಿಧಾನದಿಂದ ಸಂತಾನಭಿವೃದ್ಧಿ ಮಾಡಲಾಗುತ್ತದೆ. 2. ಮಲ್ಲಿಗೆ ಗಿಡವನ್ನು ನೆಲದಲ್ಲಿ ಹೂಳುವ ಲೇಯರಿಂಗ್ ವಿಧಾನದಿಂದ ಸಂತಾನಾಭಿವೃದ್ಧಿ ಮಾಡಲಾಗುತ್ತದೆ. ಮೇಲಿನ ಹೇಳಿಕೆಗಳಲ್ಲಿ ಯಾವುದು ಸರಿ

ⓐ 1
ⓑ 2
ⓒ 1 & 2
ⓓ 1 & 2 ಇವೆರಡೂ ಅಲ್ಲ

16➤ ಈ ಕೆಳಗಿನ ಘಟನೆಗಳಲ್ಲಿ ಯಾವುದನ್ನು ಮಾಂಟೆಗೊ ತಡೆಯಬಹುದಾಗಿದ್ದಂಥ ಕೊಲೆ ಎಂದು ಲಕ್ಷಣಿಸಲಾಗಿದೆ?

ⓐ ಐ.ಎನ್.ಎ ಕಾರ್ಯಕರ್ತರ ಕೊಲೆ
ⓑ ಜಲಿಯನ್ ವಾಲಾಬಾಗಿನ ಹತ್ಯಾಕಾಂಡ
ⓒ ಮಹಾತ್ಮಾ ಗಾಂಧಿಯವರ ಶೂಟಿಂಗ್
ⓓ ಕರ್ಜನ್ ವೈತ್‌ನ ಶೂಟಿಂಗ್

17➤ ಪೂರ್ಣ ಸ್ವಾತಂತ್ರ್ಯದ ಗುರಿಯನ್ನು ಕಾಂಗ್ರೆಸ್ ಅಳವಡಿಸಿಕೊಳ್ಳಬೇಕೆಂದು 1920ರ ಅಹ್ಮದಾಬಾದ್‌ ಅಧಿವೇಶನದಲ್ಲಿ ಕೆಳಗಿನ ಯಾರು ಪ್ರಸ್ತಾಪಿಸಿದರು?

ⓐ ಅಬ್ದುಲ್ ಕಲಾಂ ಅಜಾದ್
ⓑ ಹಸ್ರತ್ ಮೊಹಾನಿ
ⓒ ಜವಹರ್‌ಲಾಲ್ ನೆಹರೂ
ⓓ ಮೋಹನದಾಸ ಕರಮಚಂದ ಗಾಂಧಿ

18➤ ರಾಮಚರಿತ ಮಾನಸ ವನ್ನು ಬರೆದ ತುಳಸಿದಾಸರು ಈ ಕೆಳಗಿನ ಯಾವ ದೊರೆಯ ಕಾಲದಲ್ಲಿ ಪ್ರವರ್ಧಮಾನಕ್ಕೆ ಬಂದರು?

ⓐ ಅಕ್ಬರ್‌
ⓑ ಚಂದ್ರಗುಪ್ತ
ⓒ ಹುಮಾಯೂನ್
ⓓ ಷಹಜಹಾನ್

19➤ ಅಮೃತಸರದಲ್ಲಿ ಸ್ವರ್ಣ ಮಂದಿರವನ್ನು ಕಟ್ಟಲು ಭೂಮಿಯನ್ನು ದಾನ ಮಾಡಿದ ಮೊಘಲ್ ದೊರೆ ಯಾರು?

ⓐ ಜಹಾಂಗೀರ್
ⓑ ಅಕ್ಬರ್‌
ⓒ ಹುಮಾಯೂನ್
ⓓ ಷಹಜಹಾನ್

20➤ ಭಾರತದ ವಿಭಜನೆಯಾದಾಗ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿದ್ದವರು

ⓐ ಸಿ.ರಾಜಗೋಪಾಲಚಾರಿ
ⓑ ಜೆ.ಬಿ.ಕೃಪಲಾನಿ
ⓒ ಜವಹರಲಾಲ್ ನೆಹರೂ
ⓓ ಮೌಲಾನಾ ಅಬ್ದುಲ್ ಕಲಾಂ ಅಜಾದ್

21➤ ಪ್ರಾಚೀನ ಭಾರತೀಯ ಬೌದ್ಧಾಲಯಗಳಲ್ಲಿ 'ಪವರಣ' ಎಂಬ ಸಮಾರಂಭ ನಡೆಯುತ್ತಿದ್ದುದು.

ⓐ ಧರ್ಮ ಹಾಗೂ ವಿನಯಗಳ ಮೇಲೆ ಮಾತನಾಡಲು ಇಬ್ಬರನ್ನು ಹಾಗೂ ಸಂಘ ಪರಿನಾಯಕನನ್ನು ಆಯ್ಕೆ ಮಾಡಲು
ⓑ ಮಳೆಗಾಲದಲ್ಲಿ ತಮ್ಮ ತಂಗುವಿಕೆಯ ದಿನಗಳಲ್ಲಿ ತಾವು ಎಸಗಿದ ಅಪರಾಧಗಳ ಕುರಿತು ಸನ್ಯಾಸಿಗಳು ತನ್ನೊಪ್ಪಿಗೆ ನೀಡಲು
ⓒ ಬೌದ್ಧ ಸಂಘಗಳಿಗೆ ಹೊಸದಾಗಿ ಸೇರಿಕೊಳ್ಳುತ್ತಿದ್ದವರಿಗೆ ಮುಂಡನ ಮಾಡಿ ಹಳದಿ ಹೊದಿಕೆ ಕೊಟ್ಟು ಭಿಕ್ಷೆ ನೀಡಲು
ⓓ ಮಳೆಗಾಲದಲ್ಲಿ ನಾಲ್ಕು ತಿಂಗಳು ಒಂದೆಡೆ ಇರಲು, ಆಷಾಢ ಪೂರ್ಣಿಮೆಯ ಮರುದಿನ ಬೌದ್ಧ ಮರುದಿನ ಬೌದ್ಧ ಸನ್ಯಾಸಿಗಳು ಒಂದೆಡೆ ಸೇರಿ ನಿರ್ಧರಿಸಲು.

22➤ ಹರಪ್ಪನ್ ಸಂಸ್ಕೃತಿಯ ಮುದ್ರಿಕೆ ಹಾಗೂ ಟೆರಾಕೋಟ ಕಲೆಗಳಲ್ಲಿ ಕೆಳಗಿನ ಯಾವ ಪ್ರಾಣಿ ಕಾಣುವುದಿಲ್ಲ?

ⓐ ಆಕಳು
ⓑ ಆನೆ
ⓒ ಫೇಂಡಾಮೃಗ
ⓓ ಹುಲಿ

23➤ ಅಯೋಧ್ಯೆಯಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ್ದು ಯಾವಾಗ?

ⓐ ಡಿಸೆಂಬರ್ 6, 1990
ⓑ ಡಿಸೆಂಬರ್ 6, 1991
ⓒ ಡಿಸೆಂಬರ್ 6, 1992
ⓓ ಡಿಸೆಂಬರ್ 6, 1993

24➤ ನವೆಂಬರ್ 26, 1949 ರಂದು ಅಂಗೀಕರಿಸಲಾದ ಸಂವಿಧಾನ ಪೀಠಿಕೆಯಲ್ಲಿ ಯಾವ ಪದಗಳು ಇರಲಿಲ್ಲ? 1. ಸಮಾಜವಾದಿ 2. ಸೆಕ್ಯುಲರ್ 3. ಸಮಗ್ರತೆ 4. ಗಣರಾಜ್ಯ ಕೆಳಗಿನ ಕೋಡ್ ಮೂಲಕ ಸರಿಯಾದ ಉತ್ತರವನ್ನು ಆರಿಸಿ.

ⓐ 1, 2 ಮತ್ತು 3
ⓑ 2, 3 ಮತ್ತು 4
ⓒ 1, 2, 4
ⓓ 3 ಮತ್ತು 4

25➤ ರಾಜ್ಯನೀತಿ ನಿರ್ದೇಶಕ ತತ್ವಗಳಲ್ಲಿ ಕೆಳಗಿನ ಯಾವುದನ್ನು ಸೇರಿಸಲಾಗಿದೆ? 1. ಮಾನವರ ಕಳ್ಳ ಸಾಗಣೆ ಹಾಗೂ ಒತ್ತಾಯದ ಕೂಲಿಗಳ ನಿಷೇಧ 2. ವೈದ್ಯಕೀಯ ಉದ್ದೇಶಗಳಿಗೆ ಹೊರತಾಗಿ ಆರೋಗ್ಯಕ್ಕೆ ಹಾನಿ ತರುವ ಕುಡಿತದ ನಿಷೇಧ. ಮೇಲಿನ ಹೇಳಿಕೆಗಳಲ್ಲಿ ಸರಿಯಾದ ಹೇಳಿಕೆಗಳು

ⓐ 1 ಮಾತ್ರ
ⓑ 2 ಮಾತ್ರ
ⓒ 1 ಮತ್ತು 2
ⓓ 1 ಅಥವಾ 2 ಯಾವುದು ಅಲ್ಲ

26➤ ಭಾರತದ ಪ್ರಧಾನಮಂತ್ರಿಯು ಕೆಳಗಿನ ಯಾವ ಸ್ಥಾನಗಳನ್ನು ಹೊಂದಿರುತ್ತಾರೆ?

ⓐ ಹಣಕಾಸು ಆಯೋಗದ ಅಧ್ಯಕ್ಷರು
ⓑ ಯೋಜನಾ ಆಯೋಗದ ಅಧ್ಯಕ್ಷರು
ⓒ ರಾಜ್ಯ ಯೋಜನಾ ಆಯೋಗದ ಅಧ್ಯಕ್ಷರು
ⓓ ಏರ್‌ಪೋರ್ಟ್‌ ಪ್ರಾಧಿಕಾರದ ಅಧ್ಯಕ್ಷರು

27➤ ಭಾರತದಲ್ಲಿ ಪಂಚವಾರ್ಷಿಕ ಯೋಜನೆಯು ಅಂತಿಮವಾಗಿ ಅನುಮತಿ ಪಡೆಯುವುದು

ⓐ ಕೇಂದ್ರ ಸಂಪುಟದಿಂದ
ⓑ ಪ್ರಧಾನಮಂತ್ರಿ ಉಪದೇಶದ ಮೇರೆಗೆ ರಾಷ್ಟ್ರಪತಿಯಿಂದ
ⓒ ಯೋಜನಾ ಆಯೋಗದಿಂದ
ⓓ ರಾಷ್ಟ್ರೀಯ ಅಭಿವೃದ್ಧಿ ಪರಿಷತ್ತಿನಿಂದ

28➤ “ಹಿಂದೂ ಪೇಟ್ರಿಯಾಟ್” ಪತ್ರಿಕೆಯ ಸಂಪಾದಕರು ಯಾರು?

ⓐ ಶಿಶಿರ್ ಕುಮಾರ್ ಘೋಷ್
ⓑ ಗಿರೀಶ್ ಚಂದ್ರ ಘೋಷ್
ⓒ ತುಸರ್‌ ಕಾಂತಿ ಘೋಷ್
ⓓ ಲಾಲಾ ಜಗತ್ ನಾರಾಯಣ

29➤ ಜೈನ ಧರ್ಮವು ಬಹು ಬೇಗನೆ ಜನ ಮನ್ನಣೆ ಗಳಿಸಿತು ಕಾರಣವೆಂದರೆ?

ⓐ ಅದು ಜಾತಿ ಪದ್ಧತಿಯನ್ನು ಖಂಡಿಸಿ, ವರ್ಣ ಪದ್ಧತಿಯ ಕೆಡಕುಗಳನ್ನು ತಗ್ಗಿಸಿತು.
ⓑ ಅದು ಸಂಸ್ಕೃತ ಭಾಷೆಯನ್ನು ಅಳವಡಿಸಿಕೊಂಡಿತು.
ⓒ ಅದು ಪ್ರಾಕೃತ ಭಾಷೆಯನ್ನು ಅಳವಡಿಸಿಕೊಂಡಿತು.
ⓓ ಮೇಲಿನ ಎಲ್ಲವೂ

30➤ ಕೆಳಗಿನ ಯಾವ ಸಂಸ್ಥೆಗಳ ಬಗ್ಗೆ ಸಂವಿಧಾನದಲ್ಲಿ ಪ್ರಸ್ತಾಪವಿಲ್ಲ? 1. ರಾಷ್ಟ್ರೀಯ ಅಭಿವೃದ್ಧಿ ಮಂಡಳಿ 2. ಯೋಜನಾ ಆಯೋಗ 3. ಜೋನಲ್ ಕೌನ್ಸಿಲ್‌ಗಳು (ವಲಯ ಪರಿಷತ್ತುಗಳು) ಕೆಳಗಿನ ಸಂಕೇತಗಳಲ್ಲಿ ಸರಿಯಾದ ಉತ್ತರವನ್ನು ಗುರುತಿಸಿ.

ⓐ 1 ಮತ್ತು 2 ಮಾತ್ರ
ⓑ 2 ಮಾತ್ರ
ⓒ 1 ಮತ್ತು 3 ಮಾತ್ರ
ⓓ 1, 2 ಮತ್ತು 3

31➤ ಭಾರತೀಯ ಸಂವಿಧಾನಕ್ಕೆ 9ನೇ ಪರಿಚ್ಛೇಧ ಸೇರ್ಪಡೆಯಾದದ್ದು

ⓐ ಮೊದಲನೇ ತಿದ್ದುಪಡಿಯಿಂದ
ⓑ 8ನೇ ತಿದ್ದುಪಡಿಯಿಂದ
ⓒ 9ನೇ ತಿದ್ದುಪಡಿಯಿಂದ
ⓓ 42ನೇ ತಿದ್ದುಪಡಿಯಿಂದ

32➤ ಸಂವಿಧಾನದ ಪ್ರಕಾರ ಈ ಕೆಳಕಂಡ ಯಾವುದು ಮೂಲಭೂತ ಕರ್ತವ್ಯವಲ್ಲ.

ⓐ ಸಂವಿಧಾನಕ್ಕೆ ಬದ್ಧವಾಗಿರುವ ಕರ್ತವ್ಯ
ⓑ ಭಾರತದ ಸಾರ್ವಭೌಮತೆ, ಏಕತೆ ಹಾಗೂ ಸಮಗ್ರತೆಯನ್ನು ಎತ್ತಿಹಿಡಿಯುವ ಮತ್ತು ರಕ್ಷಿಸುವ ಕರ್ತವ್ಯ
ⓒ ನಮ್ಮ ಮಿಶ್ರ ಸಂಸ್ಕೃತಿಯ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ಹಾಗೂ ಗೌರವಿಸುವ ಕರ್ತವ್ಯ
ⓓ ಕುಟುಂಬವನ್ನು ಪೋಷಿಸುವ ಕರ್ತವ್ಯ

33➤ ಭಾರತದ ಸಂವಿಧಾನದ ಉದ್ದೇಶಗಳಲ್ಲೊಂದಾದ ಆರ್ಥಿಕ ನ್ಯಾಯವು ಕೆಳಗಿನ ಯಾವುದರಲ್ಲಿ ಉಪಬಂಧಿತವಾಗಿದೆ.

ⓐ ಪೀಠಿಕೆ ಮತ್ತು ಮೂಲಭೂತ ಹಕ್ಕುಗಳಲ್ಲಿ
ⓑ ಪೀಠಿಕೆ ಮತ್ತು ರಾಜ್ಯ ನೀತಿ ನಿರ್ದೇಶಕ ತತ್ವಗಳಲ್ಲಿ
ⓒ ಮೂಲಭೂತ ಹಕ್ಕುಗಳಲ್ಲಿ ಮತ್ತು ರಾಜ್ಯ ನೀತಿ ನಿರ್ದೇಶಕ ತತ್ವಗಳಲ್ಲಿ
ⓓ ಮೇಲಿನ ಯಾವುದು ಅಲ್ಲ

34➤ ಈ ಕೆಳಗಿನವುಗಳಲ್ಲಿ ಯಾವುದು ರಾಷ್ಟ್ರಪತಿ ಸರ್ಕಾರದ ಮೂಲಭೂತ ಲಕ್ಷಣವಾಗಿದೆ?

ⓐ ಕಠಿಣ ಸಂವಿಧಾನ
ⓑ ಏಕ ಕಾರ್ಯಕಾರಿ
ⓒ ಶಾಸಕಾಂಗದ ಶ್ರೇಷ್ಠತೆ
ⓓ ರಾಜ್ಯಗಳ ಉಳಿಕೆ ಅಧಿಕಾರಗಳು

35➤ ಸರ್ಕಾರದ ಸಂಸದೀಯ ರೂಪದ ಮುಖ್ಯ ಪ್ರಯೋಜನವೆಂದರೆ,

ⓐ ಕಾರ್ಯಾಂಗ ಮತ್ತು ಶಾಸಕಾಂಗವು ಸ್ವತಂತ್ರವಾಗಿ ಕೆಲಸ ಮಾಡುತ್ತದೆ.
ⓑ ಇದು ನೀತಿಯ ನಿರಂತರತೆಯನ್ನು ಒದಗಿಸುತ್ತದೆ ಮತ್ತು ಹೆಚ್ಚು ಪರಿಣಾಮಕಾರಿಯಾಗಿರುತ್ತದೆ.
ⓒ ಕಾರ್ಯಾಂಗವು ಶಾಸಕಾಂಗಕ್ಕೆ ಜವಾಬ್ದಾರಿಯಾಗಿರುತ್ತದೆ.
ⓓ ಮುಖ್ಯಸ್ಥ ಚುನಾವಣೆ ಇಲ್ಲದೆ ಸರ್ಕಾರ ಬದಲಾಯಿಸಲು ಸಾಧ್ಯವಿಲ್ಲ.

36➤ ಬ್ರಿಟಿಷ್ ಸಂಸತ್ತಿನಲ್ಲಿ ಭಾರತದ ನೇರ ಪ್ರಾತಿನಿಧ್ಯ ಬೇಡಿ ಕೆಳಗಿನ ಯಾವುದು 1975 ರಲ್ಲಿ 'ದಿ ಹೌಸ್ ಆಫ್ ಕಾಮನ್ಸ್'ಗೆ ಅರ್ಜಿ ಸಲ್ಲಿಸಿತು?

ⓐ ದಿ ಡೆಕ್ಕನ್ ಅಸೋಸಿಯೇಶನ್
ⓑ ದಿ ಇಂಡಿಯನ್ ಅಸೋಸಿಯೇಶನ್
ⓒ ದಿ ಮದ್ರಾಸ್ ಮಹಾಜನ ಸಭಾ
ⓓ ದಿ ಪೂನಾ ಸಾರ್ವಜನಿಕ ಸಭಾ

37➤ ಭಾರತದ ಸಂವಿಧಾನದಲ್ಲಿ ರಾಜ್ಯ ನೀತಿ ನಿರ್ದೇಶಕ ತತ್ವಗಳನ್ನು ಸೇರಿಸುವುದರ ಉದ್ದೇಶ ಇದನ್ನು ಸ್ಥಾಪಿಸಲು-

ⓐ ರಾಜಕೀಯ ಪ್ರಜಾಪ್ರಭುತ್ವ
ⓑ ಸಾಮಾಜಿಕ ಪ್ರಜಾಪ್ರಭುತ್ವ
ⓒ ಗಾಂಧಿವಾದಿ ಪ್ರಜಾಪ್ರಭುತ್ವ
ⓓ ಸಾಮಾಜಿಕ ಮತ್ತು ಆರ್ಥಿಕ ಪ್ರಜಾಪ್ರಭುತ್ವ

38➤ ಜ್ವಾಲಾಮುಖಿಗಳಿಂದ ಹೊರಬಂದ ಶಿಲಾಪಾಕದಿಂದ ನಿರ್ಮಿತವಾದ ಜ್ವಾಲಾಮುಖಿ ಪರ್ವತಗಳಿಗೆ ಕೆಳಗಿನ ಯಾವುದು ಉದಾಹರಣೆಯಾಗಿದೆ?

ⓐ ಕೋಟೋಪಾಕ್ಷಿ ಪರ್ವತ
ⓑ ವಿಂಧ್ಯಾಪರ್ವತ
ⓒ ಅರಾವಳಿ ಪರ್ವತ
ⓓ ಆಂಡೀಸ್ ಪರ್ವತ

39➤ ಈ ಕೆಳಗಿನ ಯಾವುದು ಸರಿಯಾಗಿ ಹೊಂದಾಣಿಕೆಯಾಗಿಲ್ಲ?

ⓐ ಹರಿಕೇನ್ - ಕೆರಿಬಿಯನ್ ದ್ವೀಪಗಳು
ⓑ ಬುರಾನ್ - ಕೆನಡಾ
ⓒ ಟೈಫೂನ್ - ಫಿಲಿಫೈನ್ಸ್
ⓓ ಟಾರ್‌ನ್ಯಾಡೋ - ಯುಎಸ್ಎ ಯ ಆಗ್ನೆಯ ಭಾಗ

40➤ ಯಾವ ಜ್ವಾಲಾಮುಖಿಯನ್ನು 'ಮೆಡಿಟರೇನಿಯನ್‌ನ ದ್ವೀಪದ ಮನೆ' ಎಂದು ಕರೆಯುತ್ತಾರೆ?

ⓐ ಎಟ್ನಾ
ⓑ ವೆಸುಲಿಯನ್
ⓒ ಶಾಸ್ತಾ
ⓓ ಸ್ಟ್ರಾಂಬೊಲಿ

41➤ ಸಂವಿಧಾನದ ಮೊದಲ ಕೈ ಲಿಖಿತ ನಕಲನ್ನು ಯಾರ ಮಾರ್ಗದರ್ಶನದಲ್ಲಿ ಕರಕುಶಲ ಮಾಡಲಾಯಿತು?

ⓐ ಮಿಹಿರ್ ಸೇನ್
ⓑ ಎಸ್.ಎನ್.ಬ್ಯಾನರ್ಜಿ
ⓒ ಮುಖೇಶ್ ಬಂಡೋಪಾದ್ಯಾಯ
ⓓ ನಂದಲಾಲ್ ಬೋಸ್

42➤ ಜಾರಾವಾಸ್‌ ಬುಡಕಟ್ಟು ಜನಾಂಗವು ಎಲ್ಲಿ ಕಂಡುಬರುತ್ತದೆ?

ⓐ ಅಸ್ಸಾಂ
ⓑ ಬಿಹಾರ
ⓒ ಅಂಡಮಾನ್ & ನಿಕೋಬಾರ್
ⓓ ಸಿಕ್ಕಿಂ

43➤ ಪಶ್ಚಿಮ ಘಟ್ಟಗಳಿಂದ ಪಶ್ಚಿಮಕ್ಕೆ ಹರಿಯುವ ಹೆಚ್ಚಿನ ನದಿಗಳು ಮುಖಜ ಭೂಮಿಯನ್ನು ರೂಪಿಸಿಲ್ಲ ಕಾರಣವೇನೆಂದರೆ,

ⓐ ಸವೆತಕ್ಕೊಳಗಾಗುವ ಮಣ್ಣಿನ ಕೊರತೆ
ⓑ ಆಳವಾದ ಮತ್ತು ನೀಳವಾದ ಕಣಿವೆಗಳಿರುವುದು
ⓒ ಅರಣ್ಯವಿಲ್ಲದ ಪ್ರದೇಶದ ಕೊರತೆ
ⓓ ನದಿಗಳ ಹರಿವಿನ ಕಡಿಮೆ ವೇಗ

44➤ ಮುಂಗಾರು ಇದರಿಂದ ಉಂಟಾಗುತ್ತದೆ.

ⓐ ಗಾಳಿಯ ಋತುಕಾಲೀನ ಹಿಮ್ಮುಖ
ⓑ ಭೂಮಿಯು ಅಕ್ಷದಲ್ಲಿ ತಿರುಗುವಿಕೆ
ⓒ ಮೋಡಗಳು ಮತ್ತು ಗಾಳಿಯ ಚಲನೆ
ⓓ ಉಷ್ಣಾಂಶದ ಏರಿಕೆ

45➤ ಈ ಕೆಳಗಿನ ಯಾವ ಕಾಯ್ದೆಯನ್ನು ಜವಾಹರಲಾಲ್ ನೆಹರೂರವರು 'ದಾಸ್ಯತ್ವದ ಹೊಸ ಸನ್ನದು' ಎಂಬುದಾಗಿ ವಿವರಿಸಿದರು?

ⓐ ಭಾರತ ಸರ್ಕಾರದ 1919ರ ಕಾಯ್ದೆ
ⓑ ಭಾರತ ಸರ್ಕಾರದ 1935ರ ಕಾಯ್ದೆ
ⓒ ಪಿಟ್ಸ್ ಇಂಡಿಯಾ 1784ರ ಕಾಯ್ದೆ
ⓓ ರೆಗ್ಯುಲೇಟಿಂಗ್ 1773 ರ ಕಾಯ್ದೆ

46➤ ಧ್ರುವ ಪ್ರದೇಶಗಳಿಗೆ ಹತ್ತಿರವಾದಂತೆಲ್ಲಾ ಉಷ್ಣಾಂಶ ಸಾಮಾನ್ಯವಾಗಿ ಇಳಿಮುಖವಾಗುತ್ತದೆ, ಏಕೆಂದರೆ

ⓐ ಸಮಭಾಜಕದತ್ತ ಗಾಳಿಯ ಚಲನೆ
ⓑ ಶೀತಲ ಧ್ರುವ ವಾಯುರಾಶಿಗಳು ಭೂಮಿಯ ಮೇಲೆ ಶಾಖವನ್ನು ತಪ್ಪಿಸುತ್ತವೆ.
ⓒ ಶೀತಲ ಪ್ರದೇಶಗಳು ಶಾಖದ ಪ್ರದೇಶಗಳ ರೀತಿಯಲ್ಲಿ ಸೂರ್ಯನ ಶಕ್ತಿಯನ್ನು ಹೀರುವುದಿಲ್ಲ
ⓓ ಮೇಲಿನ ಯಾವುದು ಅಲ್ಲ

47➤ 'ಬಾಕು' ಇದಕ್ಕಾಗಿ ಖ್ಯಾತಿ ಪಡೆದಿದೆ?

ⓐ ಕಲ್ಲಿದ್ದಲು ಪ್ರದೇಶ
ⓑ ತೈಲ ಪ್ರದೇಶಗಳು
ⓒ ತಾಮ್ರ ಪ್ರದೇಶಗಳು
ⓓ ಮೇಲಿನ ಯಾವುದು ಅಲ್ಲ

48➤ ವಿದ್ಯಾರ್ಥಿಗಳ ಒಂದು ಸಾಲಿನಲ್ಲಿ ನಾಗೇಶ ಎಡಗಡೆಯಿಂದ 12ನೇಯವನು ಮತ್ತು ರಾಜು ಬಲಗಡೆಯಿಂದ 10ನೇಯವರು ಅವರು ಪರಸ್ಪರ ತಮ್ಮ ಸ್ಥಾನವನ್ನು ಬದಲಾಯಿಸಿಕೊಂಡಲ್ಲಿ ರಮೇಶ ಎಡಗಡೆಯಿಂದ 32 ನೇಯವನಾಗುತ್ತಾನೆ. ಹಾಗಿದ್ದಲ್ಲಿ ಆ ಸಾಲಿನಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಯು

ⓐ 41
ⓑ 35
ⓒ 38
ⓓ 42

49➤ ಈ ಕೆಳಗಿನ ಯಾವ ದೇಶವು ಕ್ಯಾಸ್ಪಿಯನ್ ಸಮುದ್ರದೊಂದಿಗೆ ಗಡಿ ಹೊಂದಿದೆ?

ⓐ ಅರ್ಮೆನಿಯಾ
ⓑ ಅಜರ್ಬೈಜಾನ್
ⓒ ಕಜಕಿಸ್ತಾನ್
ⓓ ತುರ್ಕಮೆನಿಸ್ತಾನ್

50➤ ಕೆಳಗಿನ ಹೇಳಿಕೆಗಳನ್ನು ಪರಿಗಣಿಸಿ 1. ವಜ್ರದ ಗಣಿಗಳಿಗೆ ಬಾಲಘಾಟ್ ಪ್ರಸಿದ್ಧವಾಗಿದೆ. 2. ಮ್ಯಾಂಗನೀಸ್ ನಿಕ್ಷೇಪಗಳಿಗೆ ಮಜಗವಾಂ ಪ್ರಸಿದ್ಧವಾಗಿದೆ ಮೇಲಿನವುಗಳಲ್ಲಿ ಸರಿಯಾದ ಹೇಳಿಕೆಗಳು

ⓐ 1 ಮಾತ್ರ
ⓑ 2 ಮಾತ್ರ
ⓒ 1 ಮತ್ತು 2 ಮಾತ್ರ
ⓓ 1 ಅಥವಾ 2 ಯಾವುದು ಅಲ್ಲ

51➤ ನೀವು ಭಾರತದ ಕೆಲವು ಪ್ರದೇಶಗಳಲ್ಲಿ ಪ್ರಯಾಣಿಸುವಾಗ ಕೆಂಪು ಮಣ್ಣನ್ನು ಕಾಣುತ್ತೀರಿ. ಈ ಬಣ್ಣಕ್ಕೆ ಮುಖ್ಯವಾದ ಕಾರಣ ಏನು?

ⓐ ಮೆಗ್ನಿಷಿಯಂನ ಹೇರಳತೆ
ⓑ ತೇವಾಂಶದ ಸಂಚಯನ
ⓒ ಫೆರಿಕ್ ಆಕ್ಸೆಡ್‌ಗಳ ಉಪಸ್ಥಿತಿ
ⓓ ಫಾಸ್ಪೇಟ್‌ಗಳ ಹೇರಳತೆ

52➤ ಒಬ್ಬ ವ್ಯಕ್ತಿಯು ಬ್ಯಾಂಕಿನಿಂದ ವಾರ್ಷಿಕವಾಗಿ ಸಾಮಾನ್ಯ ಬಡ್ಡಿದರ ಶೇ.12 ರಂತೆ ಸಾಲ ಪಡೆದುಕೊಂಡಿರುತ್ತಾನೆ. 3 ವರ್ಷಗಳ ನಂತರ ಆತನು ರೂ.5,400 ಗಳನ್ನು ಬಡ್ಡಿ ಕಟ್ಟಬೇಕಾಗುತ್ತದೆ. ಹಾಗಾದರೆ ಆತನು ಸಾಲವಾಗಿ ಪಡೆದುಕೊಂಡಿದ್ದ ಮೂಲಧನ ಎಷ್ಟು?

ⓐ ರೂ. 2000
ⓑ ರೂ.15,000
ⓒ ರೂ.10,000
ⓓ ರೂ. 20,000

53➤ 'ಥಾಲಿ' ಎಂಬುದು ಯಾವ ರಾಜ್ಯದ ಜಾನಪದ ನೃತ್ಯವಾಗಿದೆ?

ⓐ ಮಣಿಪುರ
ⓑ ಹಿಮಾಚಲ ಪ್ರದೇಶ
ⓒ ಅಸ್ಸಾಂ
ⓓ ಸಿಕ್ಕಿಂ

54➤ ಕೆಳಗಿನ ಯಾವುದರಲ್ಲಿ ಬೆಳಕು ಹೊಂದುವುದರಿಂದ ಸೂರ್ಯ ಪ್ರಭಾವಲಯ ಉಂಟಾಗುತ್ತದೆ?

ⓐ ಕೆಳಗಿನ ಯಾವುದರಲ್ಲಿ ಬೆಳಕು ಹೊಂದುವುದರಿಂದ ಸೂರ್ಯ ಪ್ರಭಾವಲಯ ಉಂಟಾಗುತ್ತದೆ?
ⓑ ಕೆಳಗಿನ ಯಾವುದರಲ್ಲಿ ಬೆಳಕು ಹೊಂದುವುದರಿಂದ ಸೂರ್ಯ ಪ್ರಭಾವಲಯ ಉಂಟಾಗುತ್ತದೆ?
ⓒ ಸಿರಸ್ ಮೋಡಗಳಲ್ಲಿನ ಹಿಮಸ್ಪಟಿಕಗಳು
ⓓ ಸ್ಟ್ರಾಟಸ್ ಮೋಡಗಳಲ್ಲಿನ ಧೂಳು ಕಣಗಳು

55➤ ಯಾವ ದ್ವೀಪವು ಹವಳಗಳಿಂದ ಕೂಡಿದೆ?

ⓐ ಸಿಲೋನ್ (ಶ್ರೀಲಂಕಾ)
ⓑ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು
ⓒ ಮಾಲ್ಡಿವ್ಸ್
ⓓ ಮಡಗಾಸ್ಕರ್‌

56➤ ಭಾರತದ ಯಾವ ರಾಜ್ಯದಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್ (ಹೆಬ್ಬಕ) ಪಕ್ಷಿಗಳು ಕಂಡು ಬರುತ್ತವೆ?

ⓐ ಬಿಹಾರ
ⓑ ರಾಜಸ್ತಾನ
ⓒ ಆಂಧ್ರಪ್ರದೇಶ
ⓓ ಕರ್ನಾಟಕ

57➤ ಇತ್ತೀಚೆಗೆ ಪ್ರಾರಂಭಿಸಲಾದ “ಅಗ್ನಿಪಥ್” ಯೋಜನೆಯು ಯಾವ ಕ್ಷೇತ್ರದಲ್ಲಿನ ಸುಧಾರಣೆಗಳೊಂದಿಗೆ ಸಂಬಂಧಿಸಿದೆ?

ⓐ ಪೋಲಿಸ್
ⓑ ರಕ್ಷಣೆ
ⓒ ನಾಗರಿಕ ಸೇವೆ
ⓓ ಬುಡಕಟ್ಟು ಕಲ್ಯಾಣ

58➤ ಒಂದು ಕೋಡ್ ಭಾಷೆಯಲ್ಲಿ COULD ಅನ್ನು BNTKC ಎಂದು ಮತ್ತು MARGIN ಅನ್ನು LZQFHM ಎಂದು ಬರೆಯಲಾಗಿದೆ. ಇದೇ ಕೋಡ್ ಆಧಾರದಲ್ಲಿ MOULDING ಅನ್ನು ಹೇಗೆ ಬರೆಯಬಹುದು?

ⓐ CHMFINTK
ⓑ LNKTCHMF
ⓒ LNTKCHMF
ⓓ NITKHCMF

59➤ ಇತ್ತೀಚೆಗೆ ಯಾವ ರಾಜ್ಯವು ವಸಂತ ಹಬ್ಬವಾದ ಬೈಖೋ ಹಬ್ಬವನ್ನು ಆಚರಿಸಿತು?

ⓐ ಅಸ್ಸಾಂ
ⓑ ಕೇರಳ
ⓒ ಮಹಾರಾಷ್ಟ್ರ
ⓓ ಮಧ್ಯಪ್ರದೇಶ

60➤ ವಿಶ್ವಸಂಸ್ಥೆಯ ಕಟ್ಟಡಗಳಿಗಾಗಿ “ವೇ ಫೈಂಡಿಂಗ್ ಅಪ್ಲಿಕೇಶನ್” ಅನ್ನು ಅಭಿವೃದ್ಧಿಪಡಿಸಲು ಯಾವ ದೇಶವು ಘೋಷಿಸಿದೆ?

ⓐ ಯು.ಎಸ್.ಎ
ⓑ ರಷ್ಯಾ
ⓒ ಭಾರತ
ⓓ ಯು.ಎ.ಇ

61➤ 'ಪಿಲಿಭಿತ್ ಟೈಗರ್ ಪ್ರೊಟೆಕ್ಷನ್ ಫೌಂಡೇಶನ್' ಅನ್ನು ಸ್ಥಾಪಿಸಲು ಯಾವ ರಾಜ್ಯವು ಅನುಮೋದಿಸಿದೆ?

ⓐ ಉತ್ತರಾಖಂಡ
ⓑ ಉತ್ತರಪ್ರದೇಶ
ⓒ ಆಂಧ್ರಪ್ರದೇಶ
ⓓ ಸಿಕ್ಕಿಂ

62➤ 'ಕೊಲ್ಲೇರು ಸರೋವರ' ವು ಯಾವ ಎರಡು ಮುಖಜ ಭೂಮಿಗಳ ನಡುವೆ ಇದೆ?

ⓐ ಇಂದ್ರಾವತಿ ಮತ್ತು ಗೋದಾವರಿ
ⓑ ಗೋದಾವರಿ ಮತ್ತು ಕೃಷ್ಣ
ⓒ ಕೃಷ್ಣಾ ಮತ್ತು ಪೆನ್ನಾರ
ⓓ ಭೀಮ ಮತ್ತು ಕೃಷ್ಣ

63➤ ಯಾವ ಸಂಸ್ಥೆ/ಇಲಾಖೆ ಪ್ರತಿ ವರ್ಷ ವೆಚ್ಚದ ಹಣದುಬ್ಬರ ಸೂಚ್ಯಂಕವನ್ನು ತಿಳಿಸುತ್ತದೆ?

ⓐ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ
ⓑ ನೇರ ತೆರಿಗೆಗಳ ಕೇಂದ್ರ ಮಂಡಳಿ
ⓒ ರಾಷ್ಟ್ರೀಯ ಅಂಕಿಅಂಶ ಕಛೇರಿ
ⓓ ಆರ್ಥಿಕ ವ್ಯವಹಾರಗಳ ಇಲಾಖೆ

64➤ ಗಡಿಯಾರದಲ್ಲಿ 8 ಗಂಟೆ 48 ನಿಮಿಷ ತೋರಿಸುತ್ತಿರುವಾಗ ಗಂಟೆ ಮುಳ್ಳು ಮತ್ತು ನಿಮಿಷ ಮುಳ್ಳುಗಳ ನಡುವೆ ಏರ್ಪಡುವ ಕೋನ.

ⓐ 24 ಡಿಗ್ರಿ
ⓑ 48 ಡಿಗ್ರಿ
ⓒ 55 ಡಿಗ್ರಿ
ⓓ 86 ಡಿಗ್ರಿ

65➤ ವೈದ್ಯ : ರೋಗಿ : : ರಾಜಕರಣಿ :_____ ?

ⓐ ಮತದಾರ
ⓑ ಕುರ್ಚಿ
ⓒ ಹಣ
ⓓ ಭ್ರಷ್ಟಚಾರ

66➤ ಇತ್ತೀಚೆಗೆ ನಿಧನರಾದ ಗೋಪಿ ಚಂದ್‌ನಾರಂಗ್ ರವರು ಪದ್ಮ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ. ಅವರು ಭಾರತ ಮತ್ತು ಪಾಕಿಸ್ತಾನದ ಅಧ್ಯಕ್ಷರುಗಳಿಂದ ಗೌರವಿಸಲ್ಪಟ್ಟ ಏಕೈಕ ಬರಹಗಾರರಾಗಿದ್ದಾರೆ.

ⓐ ಬೆಂಗಾಲಿ
ⓑ ಸಂತಾಲಿ
ⓒ ಉರ್ದು
ⓓ ಮರಾಠಿ

67➤ A ಯು B ಯ ಸಹೋದರ, C ಯು A ಯ ತಂದೆ, D ಯು E ಯ ಸಹೋದರ E ಯು Bಯ ಮಗಳು, ಹಾಗಾದರೆ D ಯ ಅಂಕಲ್ ಯಾರು?

ⓐ A
ⓑ B
ⓒ C
ⓓ D

68➤ ಜಗತ್ತಿನಲ್ಲಿ ಅತಿ ಹೆಚ್ಚು ಚಹಾ/ಟೀ ರಫ್ತು ಮಾಡುವ ದೇಶ ಯಾವುದು ?

ⓐ ಭಾರತ
ⓑ ಚೀನಾ
ⓒ ಅಮೇರಿಕಾ
ⓓ ಅಮೇರಿಕಾ

69➤ 2026ನೇ ಸಾಲಿನ ಫಿಫಾ ವಿಶ್ವಕಪ್ ಪುಟ್ಬಾಲ್ ಅನ್ನು ಆಯೋಜಿಸಿರುವ ದೇಶಗಳು ಯಾವುವು?

ⓐ ಜಪಾನ್ ಮತ್ತು ದಕ್ಷಿಣ ಕೋರಿಯಾ
ⓑ ಚೀನಾ ಮತ್ತು ಜಪಾನ್
ⓒ ಯು.ಎಸ್.ಎ, ಮೆಕ್ಸಿಕೋ, ಕೆನಡಾ
ⓓ ಭಾರತ ಮತ್ತು ಮೆಕ್ಸಿಕೋ

70➤ ಈ ಕೆಳಗಿನ ಶ್ರೇಣಿಯಲ್ಲಿ ವಿಲಕ್ಷಣ (ಅನನುರೂಪ) ವಾದದನ್ನು ಕಂಡುಹಿಡಿಯಿರಿ. 10, 25, 45, 54, 60, 75, 80.

ⓐ 10
ⓑ 45
ⓒ 54
ⓓ 75

71➤ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ಅತೀ ಹೆಚ್ಚು ರನ್‌ಗಳಿಸಿ ವಿಶ್ವ ದಾಖಲೆ ನಿರ್ಮಿಸಿದ ತಂಡ ಯಾವುದು?

ⓐ ಇಂಗ್ಲೆಂಡ್
ⓑ ಶ್ರೀಲಂಕಾ
ⓒ ಭಾರತ
ⓓ ದಕ್ಷಿಣ ಆಫ್ರಿಕಾ

72➤ ಇತ್ತೀಚೆಗೆ ಸುದ್ದಿಯಲ್ಲಿದ್ದ ಗಿಸ್ಟೋಪಸ್ ಮೇಘಾಲಯ ಒಂದು?

ⓐ ಬಸವನ ಹುಳು
ⓑ ಬಾವಲಿ
ⓒ ಹಾವು
ⓓ ಕೋತಿ

73➤ ಯಾವ ಸಂಸ್ಥೆಯು ಅಗ್ನಿವೀರ್ಸ್ ಗಾಗಿ ಕೌಶಲ್ಯ ಆಧಾರಿತ ಸ್ನಾತಕೋತ್ತರ ಪದವಿ ಕಾರ್ಯಕ್ರಮವನ್ನು ನೀಡುತ್ತದೆ?

ⓐ IIT
ⓑ IGNOU
ⓒ AICTE
ⓓ Jawarhalal Nehru University

74➤ ಹವಾಮಾನ ಬದಲಾವಣೆಯನ್ನು ಪರಿಹರಿಸಲು ಯುವ ಸಂಸದರ ಎಂಟನೇ ಜಾಗತಿಕ ಸಮ್ಮೇಳನವನ್ನು ಯಾವ ದೇಶದಲ್ಲಿ ನಡೆಸಲಾಗಿದೆ?

ⓐ ಬಾಂಗ್ಲಾದೇಶ
ⓑ ಉರುಗ್ವೆ
ⓒ ಯು.ಎ.ಇ
ⓓ ಈಜಿಪ್ಟ್

75➤ ಭೀಮನಗೌಡ ಸಂಗನಗೌಡ ಪಾಟೀಲ್ ರವರು ಯಾವ ರಾಜ್ಯದ ಲೋಕಯುಕ್ತರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಾರೆ?

ⓐ ಗುಜರಾತ್
ⓑ ಕರ್ನಾಟಕ
ⓒ ಉತ್ತರಪ್ರದೇಶ
ⓓ ತಮಿಳುನಾಡು

76➤ ಒಂದು ಕೊಳವೆಯು ಒಂದು ಟ್ಯಾಂಕನ್ನು ತುಂಬಿಸಲು 20 ನಿಮಿಷಗಳು ಬೇಕು. ಇನ್ನೊಂದು ಕೊಳವೆಯು ಅದೇ ಟ್ಯಾಂಕಿನ ನೀರು ಖಾಲಿ ಮಾಡಲು 24 ನಿಮಿಷಗಳು ತೆಗೆದುಕೊಳ್ಳುತ್ತದೆ. ಎರಡು ಕೊಳವೆಗಳು ಏಕಕಾಲದಲ್ಲಿ ತೆರೆದರೆ ಎಷ್ಟು ನಿಮಿಷಗಳು ಬೇಕು?

ⓐ 120 ನಿಮಿಷಗಳು
ⓑ 125 ನಿಮಿಷಗಳು
ⓒ 122 ನಿಮಿಷಗಳು
ⓓ 130 ನಿಮಿಷಗಳು

77➤ ಹಮ್ಜಾ ಅಬ್ದಿ ಬ್ಯಾರೆ ಯಾವ ದೇಶದ ಪ್ರಧಾನ ಮಂತ್ರಿಯಾಗಿ ನೇಮಕಗೊಂಡಿದ್ದಾರೆ?

ⓐ ಕೀನ್ಯಾ
ⓑ ಸೂಡಾನ್
ⓒ ಸೋಮಾಲಿಯಾ
ⓓ ಜಿಂಬಾಬ್ವೆ

78➤ ಮೂರು ದಿನಗಳ ಅಂತರಾಷ್ಟ್ರೀಯ ಸಾಹಿತ್ಯ ಉತ್ಸವ 'ಉನ್ಮಶ್' ಯಾವ ರಾಜ್ಯದಲ್ಲಿ ನಡೆಯಿತು?

ⓐ ಆಂಧ್ರಪ್ರದೇಶ
ⓑ ಉತ್ತರ ಪ್ರದೇಶ
ⓒ ಅರುಣಾಚಲ ಪ್ರದೇಶ
ⓓ ಹಿಮಾಚಲ ಪ್ರದೇಶ

79➤ ಭಾರತೀಯ ಅತಿದೊಡ್ಡ ಖಾಸಗೀ ಆಸ್ಪತ್ರೆ 2,400 ಹಾಸಿಗೆಗಳ ಅಮೃತ ಆಸ್ಪತ್ರೆಯನ್ನು ಯಾವ ನಗರದಲ್ಲಿ ತೆರೆಯಲಾಗುವುದು?

ⓐ ಮೀರತ್
ⓑ ಕೊಯಿಮತ್ತೂರು
ⓒ ಫರೀದಾಬಾದ್
ⓓ ಚಂಡೀಘರ್‌

80➤ ಯಾವ ಸಂಸ್ಥೆಯು 'ಪಾವತಿ ಮಿಷನ್ 2025 ಎಂಬ ಶೀರ್ಷಿಕೆಯ ವರದಿಯನ್ನು ಬಿಡುಗಡೆ ಮಾಡಿದೆ?

ⓐ NPCI
ⓑ RBI
ⓒ NITI ಆಯೋಗ
ⓓ ವಿಶ್ವಬ್ಯಾಂಕ್

81➤ ಈ ಕೆಳಗಿನವುಗಳಲ್ಲಿ ಯಾವುದು ಆರ್ಥಿಕತೆಯನ್ನು ನಿಯಂತ್ರಿಸುವ ವಿತ್ತೀಯ ನೀತಿಯ ಅಡಿಯಲ್ಲಿ ಬರುವುದಿಲ್ಲ?

ⓐ ರಿಯಾಯಿತಿ ದರ
ⓑ ಸರ್ಕಾರಿ ಖರ್ಚು
ⓒ ಮೀಸಲು ಅವಶ್ಯಕತೆ
ⓓ ಮುಕ್ತ ಮಾರುಕಟ್ಟೆ ಕಾರ್ಯಾಚರಣೆಗಳು

82➤ ನಿಂತ ನೀರಿನಲ್ಲಿ ದೋಣಿಯ ವೇಗವು 8 Kmph ಗಳಾದರೆ ಮತ್ತು ಪ್ರವಾಹದ ವೇಗವು 4 Kmph ಗಳಾದರೆ ದೋಣಿಯ ಮೇಲು ಪ್ರವಾಹದ ವೇಗ ಎಷ್ಟು?

ⓐ 2
ⓑ 6 Kmph
ⓒ 4 Kmph
ⓓ 12 Kmph

83➤ ಒಟ್ಟು ಮೌಲ್ಯವರ್ಧಿತ ಮತ್ತು ನಿವ್ವಳ ಮೌಲ್ಯವರ್ಧಿತ ನಡುವಿನ ವ್ಯತ್ಯಾಸವೇನು?

ⓐ ಮೌಲ್ಯವರ್ಧನೆ
ⓑ ಸವಕಳಿ
ⓒ ಉತ್ಪಾದನಾ ಹರಿವು
ⓓ ಹೂಡಿಕೆ

84➤ MSME ಗಳ ಉದ್ಯೋಗಿಗಳಿಗಾಗಿ ಯಾವ ಪಾವತಿ ಬ್ಯಾಂಕ್ ಸುರಕ್ಷಾ ಸಂಬಳ ಖಾತೆ ಅನ್ನು ಪ್ರಾರಂಭಿಸಿದೆ?

ⓐ ಏರ್‌ಟೆಲ್ ಪೇಮೆಂಟ್ ಬ್ಯಾಂಕ್
ⓑ ಜಿಯೋ ಪೇಮೆಂಟ್ ಬ್ಯಾಂಕ್
ⓒ ಇಂಡಿಯಾ ಪೋಸ್ಟ್ ಪೇಮೆಂಟ್ ಬ್ಯಾಂಕ್
ⓓ ಪೇಟಿಯಂ ಪೇಮೆಂಟ್ ಬ್ಯಾಂಕ್

85➤ ಅತ್ಯಂತ ವೇಗದಾಯಕ ಮತ್ತು ಅತ್ಯಂತ ವೆಚ್ಚದಾಯಕ ಗಣಕ ಯಂತ್ರ ಯಾವುದು?

ⓐ ಸೂಪರ್ ಕಂಪ್ಯೂಟರ್
ⓑ ಮಿನಿ ಕಂಪ್ಯೂಟರ್
ⓒ ಮೈಕ್ರೋ ಕಂಪ್ಯೂಟರ್
ⓓ ಮೇನ್ ಪ್ರೈಮ್ ಕಂಪ್ಯೂಟರ್

86➤ 1 ಬೈಟ್ ಎಂದರೆ ಎಷ್ಟು ಬಿಟ್‌ಗಳು

ⓐ 8 ಬಿಟ್
ⓑ 32 ಬಿಟ್
ⓒ 64 ಬಿಟ್
ⓓ 1024 ಬಿಟ್

87➤ ಒಬ್ಬನ ವಯಸ್ಸು ಆತನ ಇಬ್ಬರ ಮಕ್ಕಳ ವಯಸ್ಸಿನ ಮೊತ್ತದ ಮೂರು ಪಟ್ಟಿದೆ. ಐದು ವರ್ಷಗಳ ನಂತರ ಆತನ ವಯಸ್ಸು ಅವನ ಮಕ್ಕಳ ವಯಸ್ಸಿನ ಮೊತ್ತದ ಎರಡು ಪಟ್ಟಾಗಿರುತ್ತದೆ. ಹಾಗಿದ್ದರೆ ತಂದೆಯ ಈಗಿನ ವಯಸ್ಸು?

ⓐ 40 ವರ್ಷ
ⓑ 45 ವರ್ಷ
ⓒ 50 ವರ್ಷ
ⓓ 55 ವರ್ಷ

88➤ Apple ಸಂಸ್ಥೆ ಉಪಯೋಗಿಸುವ OS ಯಾವುದು?

ⓐ ವಿಂಡೋಸ್
ⓑ ಜಾವ
ⓒ ಆಂಡ್ರಾಯ್ಡ್
ⓓ ಮ್ಯಾಕ್

89➤ ಟ್ವಿಟ್ಟರ್ ಸಂಸ್ಥಾಪಕರು ಯಾರು?

ⓐ ಜಾಕ್ ಡೋ ಸೈ
ⓑ ಲಾರೆನ್ಸ್ ಪೇಜ್
ⓒ ಟಿಮ್ ಬರ್ನಲ್ಸ್ ಲೀ
ⓓ ಮಾರ್ಕ್ ಜೂಕಾರ್ ಬರ್ಗ್

90➤ ಈ ಕೆಳಗಿನವುಗಳಲ್ಲಿ ಯಾವುದರಿಂದ ವಾಲ್‌ಪೇಪರ್ ಸೆಟ್ಟಿಂಗ್ ಅನ್ನು ಬದಲಾಯಿಸಬಹುದು?

ⓐ ಕಂಟ್ರೋಲ್ ಪ್ಯಾನೆಲ್
ⓑ ಎಕ್ಸಸ್‌ರಿಸ್ ಗ್ರೂಪ್
ⓒ ಸೆಟ್ಟಿಂಗ್ ಡಯಲಾಗ್ ಬಾಕ್ಸ್
ⓓ ಮೆನು ಗ್ರೂಪ್

91➤ ಲಿಂಪೋಸೈಟ್ಸ್ ಕಣಗಳು ಉಂಟಾಗುವ ಮಾನವ ದೇಹದ ಅಂಗ ಯಾವುದು?

ⓐ ಯಕೃತ್ತು
ⓑ ಮೇದೋಜಿರಕ ಗ್ರಂಥಿ
ⓒ ಅಸ್ಥಿಮಜ್ಜೆ
ⓓ ಗುಲ್ಮ

92➤ ಸಸ್ಯಗಳ ಎಲೆಗಳ ಮೇಲೆ ಇರುವ ಸಣ್ಣ ರಂಧ್ರಗಳನ್ನು ಕರೆಯಲಾಗುತ್ತದೆ?

ⓐ ಸೊಮಾಟಾ
ⓑ ಕ್ಲೋರೋಫಿಲ್
ⓒ ಕೋಶಗಳು
ⓓ ಧಾನ್ಯಗಳು

93➤ ಹೊಸ ಪವರ್ ಪಾಯಿಂಟ್ ಪ್ರದರ್ಶಕವನ್ನು ಈ ಕೆಳಗಿನ ಯಾವ ವಿಧಾನ ಬಳಸಿ ಸೃಷ್ಟಿಸಬಹುದು?

ⓐ ಖಾಲಿ ದಸ್ತಾವೇಜು ಬಳಸಿ
ⓑ ಡಿಸೈನ್ ಟೆಂಪ್ಲೇಟ್ ಬಳಸಿ
ⓒ ಸ್ವಯಂ ಅಡಕ ವೀಜಾರ್ಡ್
ⓓ ಮೇಲಿನ ಎಲ್ಲಾ ವಿಧಾನಗಳಿಂದ

94➤ ರೈಲೊಂದು 140 ಮೀ. ಉದ್ದವಿದ್ದು ಅದು ಗಂಟೆಗೆ 60 ಕಿ.ಮೀ. ವೇಗದಲ್ಲಿ ಚಲಿಸುತ್ತದೆ. ಅದು ಎಷ್ಟು ಸೆಕೆಂಡುಗಳಲ್ಲಿ 260 ಮೀ. ಉದ್ದದ ಪ್ಲಾಟ್‌ಫಾರ್ಮ್‌ಅನ್ನು ಹಾದು ಹೋಗುತ್ತದೆ?

ⓐ 20 ಸೆಕೆಂಡುಗಳು
ⓑ 24 ಸೆಕೆಂಡುಗಳು
ⓒ 34 ಸೆಕಂಡುಗಳು
ⓓ 40 ಸೆಕೆಂಡುಗಳು

95➤ ಕಂಪ್ಯೂಟರ್‌ಗೆ ನೀಡುವ ನಿರ್ದೇಶನ ಯಾವ ಪದ್ಧತಿಯಲ್ಲಿ ಇರುತ್ತದೆ?

ⓐ ಏಕಮಾನ ಪದ್ಧತಿ
ⓑ ದ್ವಿಮಾನ ಪದ್ಧತಿ
ⓒ ಪಂಚಮಾನ ಪದ್ಧತಿ
ⓓ ದಶಮಾನ ಪದ್ಧತಿ

96➤ 'Greenmufler' ಎನ್ನುವುದು ಯಾವುದಕ್ಕೆ ಸಂಬಂಧಿಸಿದೆ?

ⓐ ಭೂಮಾಲಿನ್ಯ
ⓑ ವಾಯು ಮಾಲಿನ್ಯ
ⓒ ಶಬ್ದ ಮಾಲಿನ್ಯ
ⓓ ಜಲಮಾಲಿನ್ಯ

97➤ ಒಬ್ಬ ವ್ಯಕ್ತಿಯ ಕಣ್ಣಿನಲ್ಲಿ ನಿರ್ದಿಷ್ಟ ವರ್ಣದ್ರವ್ಯವು ಯಾವ ಭಾಗದಲ್ಲಿ ಇರುವ ಕಾರಣ ಕಣ್ಣು ಕಂದು ಬಣ್ಣವಾಗಿ, ನೀಲಿ ಬಣ್ಣವಾಗಿ ಅಥವಾ ಕಪ್ಪು ಬಣ್ಣವಾಗಿ ಕಾಣುತ್ತದೆ?

ⓐ ಪಾಪೆ
ⓑ ಐರಿಸ್
ⓒ ಕಾರ್ನಿಯಾ
ⓓ ಮಯೋಪಿಯಾ

98➤ ಒಂದೇ ಹೂವಿನ ಪುಪ್ಪರೇಣುವು ಅದೇ ಕಾಂಡಕ್ಕೆ ವರ್ಗಾವಣೆಯಾದರೆ ಅದನ್ನು ಏನೆಂದು ಕರೆಯುತ್ತಾರೆ?

ⓐ ಅಲೋಗಾಮಿ
ⓑ ಅಟೋಗಾಮಿ
ⓒ ಕ್ರಾಸ್ ಪಾಲಿನೇಷನ್
ⓓ ಪುಪ್ಪಕಾಂಡ

99➤ ಶೈತ್ಯಾಗಾರದಲ್ಲಿ ಶೇಖರಿಸಿದ ಹಣ್ಣುಗಳು ಹೆಚ್ಚಿನ ಸಮಯ ಕೆಡದಿರಲು ಕಾರಣವೇನು?

ⓐ ಸೂರ್ಯಕಿರಣ ತಾಗದಿರುವುದರಿಂದ
ⓑ CO ಪ್ರಮಾಣ ಹೆಚ್ಚು
ⓒ ಹಣ್ಣುಗಳಲ್ಲಿನ ಉಸಿರಾಟದ ಪ್ರಮಾಣದಲ್ಲಿ ಕಡಿತ
ⓓ ಆರ್ದತೆಯ ಹೆಚ್ಚಳ

100➤ ಒಬ್ಬ ವ್ಯಕ್ತಿಯು ಉತ್ತರಕ್ಕೆ ಮುಖ ಮಾಡಿ ನಿಂತಿದ್ದಾನೆ. ಅವನು ಗಡಿಯಾರದ ದಿಕ್ಕಿನತ್ತ 90° ಡಿಗ್ರಿ ತಿರುಗುತ್ತಾನೆ. ಮತ್ತೇ ಅದೇ ರೀತಿ 45 ಡಿಗ್ರಿ ತಿರುಗುತ್ತಾನೆ ಮತ್ತೇ 90° ಡಿಗ್ರಿ ಮತ್ತೊಮ್ಮೆ 45 ಡಿಗ್ರಿಗೆ ತಿರುಗುತ್ತಾನೆ. ಹಾಗಾದರೆ ಅಂತಿಮವಾಗಿ ಯಾವ ದಿಕ್ಕಿನಲ್ಲಿದ್ದಾನೆ?

ⓐ ಉತ್ತರ
ⓑ ಪಶ್ಚಿಮ
ⓒ ನೈರುತ್ಯ
ⓓ ಪೂರ್ವ

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads