Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Tuesday, 21 June 2022

Top-100 General Knowledge Multiple Choice Question Answers in Kannada For KPSC, KPTCL JEE, Junior Assistant, PSI, Police Constable, GPSTR, HSTR and All Competitive Exams

 Top-100 General Knowledge Multiple Choice Question Answers in Kannada For KPSC, KPTCL JEE, Junior Assistant, PSI, Police Constable, GPSTR, HSTR and All Competitive Exams

Top-100 General Knowledge Multiple Choice Question Answers in Kannada For KPSC, KPTCL JEE, Junior Assistant, PSI, Police Constable, GPSTR, HSTR and All Competitive Exams Top-100 General Knowledge Question Answers,PSI MCQs,Police Constable MCQs,CET MCQs,FDA MCQs,KPSC MCQs,SDA MCQs PDO MCQs,Current Affairs MCQs,KPSC,FDA,MCQs For All Exams,


Top-100 General Knowledge Multiple Choice Question Answers in Kannada For KPSC, KPTCL JEE, Junior Assistant, PSI, Police Constable, GPSTR, HSTR and All Competitive Exams:

ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ KTop-100 General Knowledge Multiple Choice Question Answers in Kannada For KPSC, KPTCL JEE, Junior Assistant, PSI, Police Constable, GPSTR, HSTR and All Competitive Exams ಯನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ.




1➤ ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಗೆ ಸಂಬಂಧಿಸಿದಂತೆ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ಸರಿಯಾದ ಆಯ್ಕೆಯನ್ನು ಗುರುತಿಸಿ ? ಎ) ಇದು ವಿಶ್ವ ಸಂಸ್ಥೆಯ ತ್ರಿಪಕ್ಷೀಯ ವಿಶೇಷ ಸಂಸ್ಥೆಯಾಗಿದೆ. ಬಿ) ಭಾರತ ಅಂತರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಸ್ಥಾಪಕ ಸದಸ್ಯವಾಗಿದೆ. ಸಿ) ಇದರ ಕೇಂದ್ರ ಕಚೇರಿ ಇಟಲಿಯಲ್ಲಿದೆ.

ⓐ ಎ ಮಾತ್ರ ಸರಿ
ⓑ ಬಿ & ಸಿ ಮಾತ್ರ ಸರಿ
ⓒ ಎ & ಬಿ ಮಾತ್ರ ಸರಿ
ⓓ ಮೇಲಿನ ಎಲ್ಲಾ ಹೇಳಿಕೆ ಸರಿ

2➤ ಕೆಳಗಿನ ಹೇಳಿಕೆಗಳಲ್ಲಿ ತಪ್ಪಾದ ಹೇಳಿಕೆಯನ್ನು ಗುರುತಿಸಿ?

ⓐ ಅಂತರ ರಾಜ್ಯ ಮಂಡಳಿಯ ಸಂಯೋಜನೆ ಅಧ್ಯಕ್ಷರಾಗಿ ಪ್ರಧಾನ ಮಂತ್ರಿ ಇರುತ್ತಾರೆ.
ⓑ ಶಾಶ್ವತ ಆಹ್ವಾನಿತರನ್ನು ಪರಿಷತ್ತಿನ ಅಧ್ಯಕ್ಷರು ನಾಮನಿರ್ದೇಶನವನ್ನು ಮಾಡುತ್ತಾರೆ
ⓒ ಗೃಹ ಸಚಿವರು ಸೇರಿದಂತೆ ಕೇಂದ್ರ ಆರು ಕ್ಯಾಬಿನೆಟ್ ಮಂತ್ರಿಗಳನ್ನು ರಾಷ್ಟ್ರಪತಿಯವರು ನಾಮನಿರ್ದೇಶನ ಮಾಡುತ್ತಾರೆ.
ⓓ ಎಲ್ಲಾ ಹೇಳಿಕೆಗಳು ಸರಿಯಾಗಿವೆ.

3➤ 2014ರಲ್ಲಿ ಭಾರತವು ವಿಶೇಷ ಕಾರ್ಯತಂತ್ರ ಮತ್ತು ಜಾಗತಿಕ ಪಾಲುದಾರಿಕೆ ಯಾವ ದೇಶದೊಂದಿಗೆ ಹಂಚಿಕೊಂಡಿತು ?

ⓐ ಚೀನಾ
ⓑ ಜಪಾನ
ⓒ ಅಮೇರಿಕಾ
ⓓ ಬಾಂಗ್ಲಾದೇಶ

4➤ ಇತ್ತೀಚಿಗೆ ಪಂಡಿತ ರಾಮಪ್ರಸಾದ್ ಬಿಸ್ಮಿಲ್ಲಾ ಅವರ ಜನ್ಮದಿನಾಚರಣೆಯನ್ನು ಆಚರಿಸಲಾಯಿತು ಹಾಗಾದರೆ . ಅವರ ಹಿರಿತು ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ? 1) ಇವರು ಹಿಂದುಸ್ತಾನ್ ರಿಪಬ್ಲಿಕ್ ಅಸೋಸಿಯೇಷನ್‌ನ ಸ್ಥಾಪಕದಲ್ಲಿ ಒಬ್ಬರಾಗಿದ್ದಾರೆ. 2) 1925 ರಲ್ಲಿ ನಡೆದ ಕಾಕೋರಿ ರೈಲು ದುರಂತದ ಪ್ರಮುಖ ನಾಯಕರಾಗಿದ್ದರು.

ⓐ 1 ಮತ್ತು 2 ಸರಿ
ⓑ 1 ಮಾತ್ರ ಸರಿ
ⓒ 2 ಮಾತ್ರ ಸರಿ
ⓓ 1 ಮತ್ತು 2 ತಪ್ಪು

5➤ ಸ್ವಚ್ಛ ಭಾರತ್ ಮಿಷನ್ 2.0 ಸಂಬಂಧಿಸಿದಂತೆ ಕೆಳಗಿನ ಯಾವ ಹೇಳಿಕೆ ಸರಿಯಾಗಿದೆ?

ⓐ ಇದರ ಮೊದಲ ಹಂತವನ್ನು ಅಕ್ಟೋಬರ್ 2, 2014 ರಿಂದ ಪ್ರಾರಂಭಿಸಲಾಯಿತು.
ⓑ Waste to Wealth and Circular Economy ಎಂಬುದು ಇದರ ತತ್ವ
ⓒ ತ್ಯಾಜ್ಯಗಳ ಮರು ಬಳಕೆಗೆ ಆದ್ಯತೆ ನೀಡಿ ಪರಿಸರ ಮಾಲಿನ್ಯವನ್ನು ತಡೆಗಟ್ಟುವುದು ಇದರ ಗುರಿಯಾಗಿದೆ.
ⓓ ಮೇಲಿನ ಎಲ್ಲಾ ಹೇಳಿಕೆಗಳು ಸರಿಯಾಗಿದೆ.

6➤ ಇತ್ತಿಚಿಗೆ ಈ ಕೆಳಗಿನ ಯಾವ ದೇಶದ ಜೊತೆಗೆ ಭಾರತೀಯ ನೌಕಾಪಡೆಯ ದ್ವಿಪಕ್ಷೀಯ ವ್ಯಾಯಾಮ ಬೊಂಗೋ ಸಾಗರನ ಮೂರನೇ ಆವೃತ್ತಿಯು ನಡೆಯಿತು?

ⓐ ಜಪಾನ
ⓑ ಬ್ರೆಜಿಲ್
ⓒ ಬಾಂಗ್ಲಾದೇಶ
ⓓ ಮಯನ್ಮಾರ

7➤ RBI ಸ್ಥಾಪನೆಯಾದ ವರ್ಷ ಯಾವುದು?

ⓐ 1937 ಎಪ್ರಿಲ್ 1
ⓑ 1936 ಎಪ್ರೀಲ್ 2
ⓒ 1935 ಎಪ್ರೀಲ್ 1
ⓓ 1938 ಎಪ್ರೀಲ್ 5

8➤ Jimex 'ಈ ಕೆಳಗಿನ ಯಾವ ಎರಡು ದೇಶಗಳ ಮಿಲಿಟರಿ ವ್ಯಾಯಾಮವಾಗಿದೆ?

ⓐ ಭಾರತ & ಬ್ರೆಜಿಲ್
ⓑ ಭಾರತ್ & ಜಪಾನ್
ⓒ ಭಾರತ & ಬಾಂಗ್ಲಾದೇಶ
ⓓ ಭಾರತ & ಮಯನ್ಮಾರ

9➤ ಕೆಳಗಿನ ಹೇಳಿಕೆಯನ್ನು ಗಮನಿಸಿ. ಎ) ಅತಿ ಹೆಚ್ಚು ವಿಸ್ತೀರ್ಣ ದಟ್ಟ ಕಾಡು ಹೆಚ್ಚಾದ ರಾಜ್ಯಗಳಲ್ಲಿ ಕರ್ನಾಟಕವು ಮೂರನೇ ಸ್ಥಾನದಲ್ಲಿದೆ. ಬಿ) ಇತ್ತೀಚಿಗೆ ದೇಶದಲ್ಲಿ ಕಾಡಿನ ವಿಸ್ತೀರ್ಣ ಶೇ 0.22 ರಷ್ಟು ಏರಿಕೆಯಾಗಿದೆ.

ⓐ ಎ ಮಾತ್ರ ಸರಿ
ⓑ ಬಿ ಮಾತ್ರ ಸರಿ
ⓒ ಎ & ಬಿ ಸರಿ
ⓓ ಎ & ಬಿ ತಪ್ಪು

10➤ ಚಂದ್ರಯಾನ 2 ಸರಣಿಯನ್ನು ಗ್ರಹ ನೌಕೆಯಾಗಿ ಯಾವುದನ್ನು ಬಳಸಲಾಗಿತ್ತು ?

ⓐ ವಿಕ್ರಂ
ⓑ ಸದ್ದಾಮ್
ⓒ ಚಂದ್ರ
ⓓ ಪ್ರಜಾನ್

11➤ ದೇಶದಲ್ಲಿ 2020-21 ನೇ ಸಾಲಿನಲ್ಲಿ ಗ್ರಾಮಗಳಿಗೆ ವಲಸೆಯಾದ ಕಾರ್ಮಿಕರಿಗೆ ಅತಿ ಹೆಚ್ಚು ಉದ್ಯೋಗಖಾತರಿ ಒದಗಿಸುವಲ್ಲಿ ಪ್ರಥಮ ಸ್ಥಾನ ಯಾವ ರಾಜ್ಯ ಪಡೆದಿದೆ ?

ⓐ ಮಹಾರಾಷ್ಟ್ರ
ⓑ ಕೇರಳ
ⓒ ಕರ್ನಾಟಕ
ⓓ ಆಂಧ್ರ ಪ್ರದೇಶ

12➤ ಪ್ರಸ್ತುತ ವರ್ಷದಲ್ಲಿ ಎಷ್ಟು ಪ್ರತಿಶತ ಎಥೆನಾಲ್ (ethanol) ಅನ್ನು ಪಟ್ರೋಲ್‌ಗೆ ಮಿಶ್ರಣ ಮಾಡಲು ನಿರೀಕ್ಷಿಸಲಾಗಿದೆ ?

ⓐ 20%
ⓑ 15%
ⓒ 25 %
ⓓ 10%

13➤ ವಿಸ್ತೀರ್ಣದ / ಪ್ರದೇಶದ ಪ್ರಕಾರ ಕರ್ನಾಟಕದ ಅತ್ಯಂತ ಚಿಕ್ಕ ಜಿಲ್ಲೆ ಯಾವುದು ?

ⓐ ರಾಮನಗರ
ⓑ ಚಿಕ್ಕ ಬಳ್ಳಾಪುರ
ⓒ ಕೊಡಗು
ⓓ ಬೆಂಗಳೂರ ನಗರ

14➤ ಕೆಳಗಿನ ಯಾವ ನದಿಯಲ್ಲಿ ಹಿರಾಕುಡ್ ಅಣೆಕಟ್ಟು ಇದೆ ?

ⓐ ಮಹಾನದಿ
ⓑ ಗೋದಾವರಿ
ⓒ ಮೇಘನಾ
ⓓ ಕೃಷ್ಣ

15➤ ಕಾರಗೃಹದಲ್ಲಿರುವ ಖೈದಿಗಳನ್ನು ಸಂಪರ್ಕಿಸಲು ಜಾರಿಗೆ ತರಲಾದ ಆನ್‌ಲೈನ್ ವೇದಿಕ ಇದಾಗಿದೆ ?

ⓐ ಗೇಟ್ ಕೀಪಕ್
ⓑ ಮನೋದರ್ಪನ
ⓒ ಟ್ವಿಂತನ - ಮಾಥನ್
ⓓ ಇ-ಮುಲಾಕತ್

16➤ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ ? ಎ) ಇತ್ತೀಚಿಗೆ ರಕ್ಷಣಾ ಸಚಿವಾಲಯವು ಆಸ್ಟ್ರೋ ಎಂ.ಕೆ - 1 ಕ್ಷಿಪಣಿ ಪೂರೈಕೆ ಒಪ್ಪಂದಕ್ಕೆ ಸಹಿ ಹಾಕಿದೆ. ಬಿ) ಈ ಕ್ಷಿಪಣಿಯನ್ನು ಡಿ.ಆರ್.ಡಿ.ಒ ಅಭಿವೃದ್ಧಿಪಡಿಸಿದೆ.

ⓐ ಬಿ ಮಾತ್ರ ಸರಿ
ⓑ ಎ ಮಾತ್ರ ಸರಿ
ⓒ ಎ ಮಾತ್ರ ಸರಿ
ⓓ ಎ & ಬಿ ತಪ್ಪು

17➤ ತೆಲಂಗಾಣ ರಾಜ್ಯ ರಚನೆಯಾದ ದಿನ ಯಾವುದು ?

ⓐ ಜೂನ 2, 2014
ⓑ ಜೂನ 6, 2015
ⓒ ಜೂನ 6, 2015
ⓓ ಜೂನ 6, 2015

18➤ ಸಿಂಧೂ ನದಿಯ ಕುರಿತಾಗಿ ಈ ಕೆಳಗಿನ ಹೇಳಿಕೆಯನ್ನು ಗಮನಿಸಿ ಎ) ಸಿಂಧೂ ನದಿ ಜಲಾಯನ ಪ್ರದೇಶವು ಒಟ್ಟು ಆರು ನದಿಗಳನ್ನು ಹೊಂದಿದೆ. ಬಿ) ಈ ನದಿಗಳು ಟಿಬೆಟನಲ್ಲಿ ಹುಟ್ಟಿ ಹಿಮಾಲಯ ಶ್ರೇಣಿಗಳ ಮೂಲಕ ಹರಿದು ಪಾಕಿಸ್ತಾನಕ್ಕೆ ಪ್ರವೇಶಿಸಿ ಕರಾಚಿಯಲ್ಲಿ ಕೊನೆಗೊಳ್ಳುತ್ತವೆ.

ⓐ ಎ ಮಾತ್ರ ಸರಿ
ⓑ ಬಿ ಮಾತ್ರ ಸರಿ
ⓒ ಎ & ಬಿ ಸರಿ
ⓓ ಎ & ಬಿ ತಪ್ಪು

19➤ ಈ ಕೆಳಗಿನ ಯಾವುದು ಥಿಯೊಲಾಜಿ (theology) ಗೆ ಸಂಬಂಧಿಸಿದೆ ?

ⓐ ಧರ್ಮಗಳ ಅಧ್ಯಯನ
ⓑ ಕೂದಲಿನ ವೈಜ್ಞಾನಿಕ ಅಧ್ಯಯನ
ⓒ ಸಮಾಜಶಾಸ್ತ್ರ-ಸಮಾಜಿಕ ವಿಷಯಗಳ ಅಧ್ಯಯನ
ⓓ ಮೇಲಿನ ಯಾವುದು ಅಲ್ಲ

20➤ ಜಗತ್ತಿನಲ್ಲಿ ಅತಿ ಹೆಚ್ಚು ಚಹಾ/ಟೀ ರಫ್ತು ಮಾಡುವ ದೇಶ ಯಾವುದು ?

ⓐ ಭಾರತ
ⓑ ಚೀನಾ
ⓒ ಅಮೇರಿಕಾ
ⓓ ತೈವಾನ್

21➤ ಥಾರ ಮರಭೂಮಿಯಲ್ಲಿ ಸ್ಥಳಾಂತರಗೊಳ್ಳುವ ಮರಳು ದಿನ್ನೆಗಳನ್ನು ಸ್ಥಳಿಯವಾಗಿ ಹೀಗೆನ್ನಲಾಗುತ್ತದೆ ?

ⓐ ದ್ರಿಯಾನ್
ⓑ ದೌರ
ⓒ ದೊರೊಸ್
ⓓ ಧಾಯ

22➤ ಫೆರಲ್‌ನ ನಿಯಮ ಯಾವುದನ್ನು ವಿವರಿಸುತ್ತದೆ ?

ⓐ ಒತ್ತಡ ಪಟ್ಟಿಗಳ
ⓑ ಮಾರುತಗಳ ದಿಕ್ಕು ಬದಲಾಗುವಿಕೆ
ⓒ ಮಾರುತದ ವೇಗ
ⓓ ಮಾರುತದ ದಿಕ್ಕು

23➤ ಈ ಕೆಳಗಿನವುಗಳಲ್ಲಿ ಶೀತೊದಕ ಪ್ರವಾಹ ಯಾವುದು ?

ⓐ ಕ್ಯಾನರಿ ಪ್ರವಾಹ
ⓑ ಬ್ರೆಜಿಲಿಯನ ಪ್ರವಾಹ
ⓒ ಗಲ್ಫ್ ಸ್ಟ್ರೀಂ
ⓓ ಕುರುಷಿಯೋ ಪ್ರವಾಹ

24➤ 'ಕಾನ್ರಾಡ್ ಸೀಮಾವಲಯವು' ಕೆಳಕಂಡ ಯಾವ ಪದರಗಳನ್ನು ಪ್ರತ್ಯೇಕಗೊಳಿಸುತ್ತದೆ ?

ⓐ ಶಿಲಾಗೋಳ & ಮ್ಯಾಂಟಲ್
ⓑ ಹೊರ ಶಿಲಾಗೋಳ & ಒಳಶಿಲಾಗೋಳ
ⓒ ಮ್ಯಾಂಟಲ್ & ಹೊರಕೇಂದ್ರ ಗೋಳ
ⓓ ಹೊರಕೇಂದ್ರ ಗೋಳ & ಒಳ ಕೇಂದ್ರಗೋಳ

25➤ ತಪ್ಪಾದ ಜೋಡಣೆಯನ್ನು ಗುರುತಿಸಿ ?

ⓐ ಲವಣ ಸರೋವರ – ಮೃತ್ಯು ಸಮುದ್ರ
ⓑ ಹಿಮ ಸರೋವರ - ಲೇಕ್ ಸುಪೀರಿಯರ
ⓒ ಲಾವಾ ಹೊರ ಹರಿವಿನಿಂದಾದ ಸರೋವರ -ಕಿವು ಸರೋವರ
ⓓ ವಾಯು ನಿರ್ಮಿತ ಸರೋವರ - ವ್ಯಾನ ಸರೋವರ

26➤ ಕೆಳಗಿನವುಗಳಲ್ಲಿ ಯಾವುದು ಸಂವಿಧಾನಿಕ ಸಂಸ್ಥೆಯಲ್ಲ ?

ⓐ ಭಾರತೀಯ ಚುಣಾವಣಾ ಆಯೋಗ
ⓑ UPSC
ⓒ CAG
ⓓ ಕರ್ನಾಟಕ ಲೋಕಾಯುಕ್ತ

27➤ ಎಸ್.ಆರ್. ಬೊಮ್ಮಾಯಿ V/S ಯೂನಿಯನ್ ಆಫ್ ಇಂಡಿಯಾ ಪ್ರಕರಣದಲ್ಲಿ ಸುಪ್ರೀಂ ಕೋರ್ಟ ಮಹತ್ವದ ತೀರ್ಪ ಸಂಬಂಧಿಸಿರುವುದು ?

ⓐ ರಿಟ್ ಪಟಿಷನ್
ⓑ ರಾಷ್ಟ್ರಪತಿ ಆಡಳಿತ
ⓒ ಮೂಲಭೂತ ಹಕ್ಕುಗಳು
ⓓ ರಾಜ್ಯ ನೀತಿ ನಿರ್ದೇಶಕ ತತ್ವಗಳು.

28➤ ರಾಜ್ಯದ ಮುಖ್ಯಮಂತ್ರಿ ಕನಿಷ್ಟ ವಯಸ್ಸು ಎಷ್ಟಿರಬೇಕು?

ⓐ 21
ⓑ 25
ⓒ 30
ⓓ 35

29➤ ಭಾರತದ ಸಂವಿಧಾನ ವಿಧಿ 19ರ ಅಡಿಯ ಮೂಲಭುತ ಹಕ್ಕುಗಳನ್ನು ಯಾವ ಸಂದರ್ಭದಲ್ಲಿ ಅಮಾನತ್ತುಗೊಳಿಸಲಾಗುತ್ತದೆ ?

ⓐ ಆರ್ಥಿಕ ಬಿಕ್ಕಟ್ಟು
ⓑ ಆಂತರಿಕ ಸಶಸ್ತ್ರ ದಾಳಿ
ⓒ ರಾಷ್ಟ್ರಪತಿ ಆಡಳಿತ
ⓓ ಯುದ್ಧ & ಬಾಹ್ಯ ಆಕ್ರಮಣ.

30➤ ಸಂವಿಧಾನ ಯಾವ ವಿಧಿಯ ಒಕ್ಕೂಟದ ಕಾರ್ಯಂಗೀಯ ಅಧಿಕಾರವನ್ನು ರಾಷ್ಟ್ರತಿಪತಿಗಳ ವಹಿಸುತ್ತದೆ ?

ⓐ 40ನೇ
ⓑ 75ನೇ
ⓒ 53 ನೇ
ⓓ 74 ನೇ

31➤ ಅಂತರಾಷ್ಟ್ರೀಯ ಅಣು ಶಕ್ತಿ ಆಯೋಗದ ಕೇಂದ್ರ ಕಛೇರಿ ಇರುವುದು ಎಲ್ಲಿ?

ⓐ ಜಿನೀವಾ
ⓑ ವಾಷಿಂಗಟನ್ ಡಿ.ಸಿ
ⓒ ನ್ಯೂಯಾರ್ಕ
ⓓ ವಿಯನ್ನಾ

32➤ ಕರ್ನಾಟಕ ರಾಜ್ಯದ ಹೈನು & ಕೃಷಿ ಕೆಲಸ ಗಳಿಗೆ ಹೆಸರುವಾಸಿಯಾದ ದೇಶ ಅವಳಿ ಉದ್ದೇಶಿತ ತಳಿಗಳು?

ⓐ ಅಮೃತ ಮಹಲ್ & ಹಳ್ಳಿಕಾರ್ '
ⓑ ಖಿಲ್ಲಾರ್ & ಮಲೆನಾಡು ಗಿಡ್ಡ
ⓒ ದೇವಣಿ & ಕೃಷ್ಣ ವ್ಯಾಲಿ
ⓓ ಸಹಿವಾಲ್ & ಕಾಂಕ್ರೇಜ್

33➤ The Land of Downlit Mountains ಎಂಬುದು ಯಾವ ರಾಜ್ಯದ ಪ್ರವಾಸೋದ್ಯಮ ಘೋಷ ವಾಕ್ಯವಾಗಿದೆ ?

ⓐ ಉತ್ತರಖಂಡ
ⓑ ಅರುಣಾಚಲ ಪ್ರದೇಶ
ⓒ ಹಿಮಾಚಲ ಪ್ರದೇಶ
ⓓ ಸಿಕ್ಕಿಂ

34➤ 'ಕರಗ ಉತ್ಸವ' ಯಾವ ಜಿಲ್ಲೆಯಲ್ಲಿ ನಡೆಯುತ್ತದೆ ?

ⓐ ಬಳ್ಳಾರಿ
ⓑ ಚಿಕ್ಕಬಳ್ಳಾಪುರ
ⓒ ಬೆಂಗಳೂರ
ⓓ ಉತ್ತರ ಕನ್ನಡ

35➤ 'ಪೂರೈಕೆ ತನ್ನಷ್ಟಕ್ಕೆ ತಾನೇ ಬೇಡಿಕೆಯನ್ನು ಸೃಷ್ಟಿಸಿಕೊಳ್ಳುತ್ತದೆ' ಈ ಹೇಳಿಕೆಯನ್ನು ನೀಡಿದ ಅರ್ಥಶಾಸ್ತ್ರಜ್ಞನ ಹೆಸರು ತಿಳಿಸಿ ?

ⓐ ಜೆ. ಎಸ್. ಮಿಲ್
ⓑ ಜೆ. ಬಿ. ಸೇ
ⓒ ಜೆ. ಎಮ್. ಕೇನ್ಸ್
ⓓ ಆರ್. ಕೆ. ರಾವ್

36➤ ರಕ್ಷಣಾ ವೆಚ್ಚ ಯಾವುದಕ್ಕೆ ಸಂಬಂಧಿಸಿದೆ ?

ⓐ ಬಂಡವಾಳ ವೆಚ್ಚ
ⓑ ಕಂದಾಯ ವೆಚ್ಚ
ⓒ ಯೋಜನೆ ವೆಚ್ಚ
ⓓ ಯೋಜನೇತರ ವೆಚ್ಚ

37➤ ಮುಕ್ತ ಮಾರುಕಟ್ಟೆ ವ್ಯವಹಾರ ಕೆಳಕಂಡ ನೀತಿಯ ಒಂದು ಭಾಗವಾಗಿದೆ ?

ⓐ ಕೃಷಿ ನೀತಿ
ⓑ ರಾಜ್ಯ ಕೋಶ ನೀತಿ
ⓒ ಹಣಕಾಸು ನೀತಿ
ⓓ ಯಾವುದು ಅಲ್ಲ

38➤ ತಕಾವಿ ಸಾಲದ ಅರ್ಥ ?

ⓐ ಕೃಷಿಗಾಗಿ ಕಡಿಮೆ ಬಡ್ಡಿದರದಲ್ಲಿ ದೀರ್ಘಾವಧಿ ಸಾಲ
ⓑ ಕೃಷಿಗಾಗಿ ಅಧಿಕ ಬಡ್ಡಿದರದಲ್ಲಿ ದೀರ್ಘಾವಧಿ ಸಾಲ
ⓒ ಕೃಷಿಗಾಗಿ ಕಡಿಮೆ ಬಡ್ಡಿದರದಲ್ಲಿ ಅಲ್ಪಾವಧಿಯ ಸಾಲ
ⓓ ಕೃಷಿಗಾಗಿ ಅಧಿಕ ಬಡ್ಡಿದರದಲ್ಲಿ ಅಲ್ಪಾವಧಿಯ ಸಾಲ

39➤ ಪಾಲಘಾಟ್ ಕಣಿವೆಯು ಕೆಳಗಿನ ಯಾವ ರಾಜ್ಯಗಳನ್ನು ಸೇರಿಸುತ್ತದೆ ?

ⓐ ಸಿಕ್ಕಿಂ & ಪಶ್ಚಿಮ ಬಂಗಾಳ
ⓑ ಮಹಾರಾಷ್ಟ್ರ & ಗುಜರಾತ
ⓒ ಕೇರಳ & ತಮಿಳುನಾಡು
ⓓ ಅರುಣಾಚಲ ಪ್ರದೇಶ & ಸಿಕ್ಕಿಂ

40➤ ಈ ಕೆಳಗಿನ ಯಾವುದು ಮೊದಲ ವೆಬ್ ಆಧಾರಿತ ಮೇಲ್ (ಅಂಚೆ ) ಸೇವೆಯಾಗಿದೆ.

ⓐ ಯಾಹೂ
ⓑ ಹಾಟ್ ಮೇಲ್
ⓒ ಗೂಗಲ್
ⓓ ಕೋಲ್ಡ್ ಮೇಲ್

41➤ ಈ ಕೆಳಗಿನ ಯಾವ ಜೋಡಿ ತಪ್ಪಾಗಿದೆ ?

ⓐ ರೇಣುಕಾಸಾಗರ ಆಣೆಕಟ್ಟು : ಮಲಪ್ರಭಾ ನದಿ
ⓑ ರಾಜಾಲಕಮ್ ಆಣೆಕಟ್ಟು : ಪಟಪ್ರಭಾ ನದಿ
ⓒ ಬಸವಸಾಗರ : ತುಂಗಭದ್ರಾ ನದಿ
ⓓ ವಾಣಿವಿಲಾಸ ಸಾಗರ : ವೇದಾವತಿ ನದಿ

42➤ ಈ ಕೆಳಗಿನವುಗಳಲ್ಲಿ ಯಾವುದು ಕರ್ನಾಟಕದ ಪಶ್ಚಿಮಕ್ಕೆ ಹರಿಯುವ ನದಿಯಲ್ಲ?

ⓐ ನೇತ್ರಾವತಿ
ⓑ ಕುಮಾರಧಾರಾ
ⓒ ಶರಾವತಿ
ⓓ ಹೇಮಾವತಿ

43➤ ರಾಜ್ಯಪಾಲರ ಸಂವಿಧಾನಿಕ ವಿವೇಚನಾಧಿಕಾರವಾದ ರಾಜ್ಯದ ಮಸೂದೆಗಳನ್ನು ರಾಷ್ಟ್ರಧ್ಯಕ್ಷರ ಒಪ್ಪಿಗೆಗಾಗಿ ಕಾಯ್ದಿರಿಸುವುದನ್ನು ಯಾವ ವಿಧಿಯಡಿ ನೀಡಲಾಗಿದೆ ?

ⓐ 213 ನೇ ವಿಧಿ
ⓑ 200ನೇ ವಿಧಿ
ⓒ 161 ನೇ ವಿಧಿ
ⓓ 167 ನೇ ವಿಧಿ

44➤ ಕೆಳಗಿನ ಯಾವ ವಿಧಿಯ ರಾಜ್ಯ ಶಾಸಕಾಂಗಕ್ಕೆ ಪಂಚಾಯತ್‌ಗಳ ಲೆಕ್ಕಪತ್ರ ನಿರ್ವಹಣೆ & ಲೆಕ್ಕ ಪರಿಶೋಧನೆಗೆ ಸಂಬಂಧಿಸಿದಂತೆ ನಿಯಮಗಳನ್ನು ರೂಪಿಸಲು ಅವಕಾಶ ಕಲ್ಪಿಸಿದೆ .?

ⓐ 243 (ಐ) ವಿಧಿ
ⓑ 243(ಜೆ) ವಿಧಿ
ⓒ 243 (ಡಿ) ವಿಧಿ
ⓓ 243 (ಕೆ) ವಿಧಿ

45➤ ರಾಜ್ಯ ಲೋಕಸೇವಾ ಆಯೋಗದ ಕುರಿತು ಕೆಳಗಿನ ಹೇಳಿಕೆಗಳನ್ನು ಗಮನಿಸಿ ? 1) ಸಂವಿಧಾನ ಪ್ರತಿ ರಾಜ್ಯಕ್ಕೆ ತನ್ನದೆ ಆದ ಲೋಕಸೇವಾ ಆಯೋಗ ಹೊಂದಲು 2) ರಾಜ್ಯ ಲೋಕಸೇವಾ ಆಯೋಗದ ಸದಸ್ಯರ ಸಂಖ್ಯೆಯನ್ನು ಸಂವಿಧಾನ ಸ್ಪಷ್ಟವಾಗಿ ನೀಡಿದೆ. 3) ಸದಸ್ಯರ ಅಧಿಕಾರವಧಿ 6 ವರ್ಷ / 62 ವರ್ಷಗಳು ಮೇಲಿನವುಗಳಲ್ಲಿ ಸರಿಯಾದ ಹೇಳಿಕೆಗಳು ಯಾವುವು ?

ⓐ 1 & 2
ⓑ 2 & 3
ⓒ 1 & 3
ⓓ 1. 2 & 3

46➤ ಅಲ್ಪ ಸಂಖ್ಯಾತರ ರಾಷ್ಟ್ರೀಯ ಆಯೋಗವು ಯಾವಾಗ ಸ್ಥಾಪನೆಯಾಯಿತು ?

ⓐ 1983
ⓑ 1989
ⓒ 1992
ⓓ 1993

47➤ ಯಾವ ರಾಜ್ಯದಲ್ಲಿ ರಾಷ್ಟ್ರಪತಿ ಕೋವಿಂದ ಅವರು ಸಂತ ಕಬೀರ ಅಕಾಡೆಮಿ ಮತ್ತು ಸಂಶೋಧನಾ ಕೇಂದ್ರವನ್ನು ಉದ್ಘಾಟಿಸಿದರು ?

ⓐ ಉತ್ತರ ಪ್ರದೇಶ
ⓑ ಮಹಾರಾಷ್ಟ್ರ
ⓒ ಉತ್ತರಾ ಖಂಡ
ⓓ ಹರಿಯಾಣ

48➤ ಒಂದು ಕಛೇರಿಯಲ್ಲಿ ಪುರುಷ ಮತ್ತು ಮಹಿಳಾ ಅಧಿಕಾರಿಗಳ ಅನುಪಾತ 4:7 ಇದೆ 50 ಪುರುಷರು & 100 ಮಹಿಳಾ ಅಧಿಕಾರಿಗಳನ್ನು ಅನ್ಯ (ಬೇರೊಂದು) ಕಛೇರಿಗೆ ವರ್ಗಾವಣೆ ಮಾಡಿದಾಗ ಪುರುಷ ಮತ್ತು ಮಹಿಳಾ ಅಧಿಕಾರಿ ಅನುಪಾತ 7:12 ಆಗುವುದು ಹಾಗಾದರೆ ಆ ಕಛೇರಿಯಲ್ಲಿರುವ ಒಟ್ಟು ಸಂಖ್ಯೆ ಎಷ್ಟು ?

ⓐ 500
ⓑ 300
ⓒ 450
ⓓ 400

49➤ ಒಂದು ಚೀಲದಲ್ಲಿ 455ರೂ ಗಳ ನಾಣ್ಯಗಳಿದ್ದು ಅವುಗಳಲ್ಲಿ 1 ರೂ, 2 ರೂ ಮತ್ತು 5‌ರೂ ನಾಣ್ಯಗಳಿದ್ದು‌ಅವುಗಳ ಅನುಪಾತ ಕ್ರಮವಾಗಿ 2:4:5 ಅನುಪಾತದಲ್ಲಿದೆ. ಹಾಗದರೆ ಆ ಚೀಲದಲ್ಲಿ 2ರೂ ನಾಣ್ಯಗಳ ಸಂಖ್ಯೆ ಎಷ್ಟು ?

ⓐ 26
ⓑ 65
ⓒ 52
ⓓ 13

50➤ ರಾಮನು ಅಮರನ ಹತ್ತಿರ ಶೇ 9 ವಾರ್ಷಿಕ ಸರಳ ಬಡ್ಡಿಯಲ್ಲಿನ ದರದಲ್ಲಿ 24000ರೂ ಸಾಲವನ್ನು ಪಡೆದಿದ್ದಾನೆ ಹಾಗಾದರೆ ರಾಮನು 3 ವರ್ಷಗಳ ನಂತರ ಅವನು ಎಷ್ಟು ರೂಪಾಯಿ ಮೊತ್ತವನ್ನು ನೀಡಬೇಕಾಗುತ್ತದೆ .

ⓐ ರೂ 6,480
ⓑ ರೂ 28,480
ⓒ ರೂ 4,800
ⓓ ರೂ 30,480

51➤ ಒಂದು ಕೆಲಸವನ್ನು X ಯು 3 ದಿನಗಳಲ್ಲಿ ಮಾಡಿದರೆ, ಅದೇ ಕೆಲಸನ್ನು Y ನು 6 ದಿನಗಳಲ್ಲಿ ಮಡಿದರೆ ಆ ಕೆಲಸವನ್ನು 2ನು 9 ದಿನದಲ್ಲಿ ಮಾಡಿದರೆ X, Y & Z ಒಟ್ಟು ಸೇರಿ ಅದೇ ಕೆಲಸವನ್ನು ಎಷ್ಟು ದಿನದಲ್ಲಿ ಮಾಡುತ್ತಾರೆ?

ⓐ 5 ದಿನ
ⓑ 2.5 ದಿನ
ⓒ 3 ದಿನ
ⓓ 1.63 ದಿನ

52➤ X:Y= 3:4 ಆಗಿದ್ದರೆ ( 4x+3y) : (4y-4x) ನ ಅನುಪಾತವೇನು ?

ⓐ 2:3
ⓑ 1:6
ⓒ 6:1
ⓓ 3:2

53➤ ಮನೀಪನು ಒಂದು ಫ್ಯಾನನ್ನು ಮಾರ್ಕೆಟ್ ಬೆಲೆ (ಎಮ್.ಆರ್.ಪಿ) 200 ಬೆಲೆಯ ಮೇಲೆ 30% & 20% ರಿಯಯಾತಿ ದರದಲ್ಲಿ ಖರಿಧಿಸಿದರೆ ಆತನು ಆ ಫ್ಯಾನಗೆ ನೀಡಿದ ಹಣ ಎಷ್ಟು?

ⓐ ರೂ 15
ⓑ ರೂ 108
ⓒ ರೂ 12
ⓓ ರೂ 90

54➤ ಗಡಿಯಾರದಲ್ಲಿ 4 & 5 ಗಂಟೆಯ ನಡುವೆ ಗಂಟೆ & ನಿಮಿಷದ ಮುಳ್ಳುಗಳು 0 ಡಿಗ್ರಿ ಕೋನದಲ್ಲಿ ಯಾವ ಸಮಯದಲ್ಲಿ ಇರುತ್ತದೆ ?

ⓐ 4 ಗಂಟೆ 20 5/11 ನಿಮಿಷ
ⓑ 4 ಗಂಟೆ 19 9/11 ನಿಮಿಷ
ⓒ 4 ಗಂಟೆ 21 9/11 ನಿಮಿಷ
ⓓ 4 ಗಂಟೆ 20 6/11 ನಿಮಿಷ

55➤ 2022 ನೇ ಸಾಲಿನ ಜನವರಿ 26 ಬುಧವಾರವಾದರೆ 2022 ನೇ ಸಾಲಿನ ಮೇ 5 ನೇ ದಿವಸವು ಯಾವ ವಾರವಾಗುತ್ತದೆ?

ⓐ ಗುರುವಾರ
ⓑ ಶುಕ್ರವಾರ
ⓒ ಬುಧವಾರ
ⓓ ಭಾನುವಾರ

56➤ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ್ದನ್ನು ಬರೆಯಿರಿ ?

ⓐ ಭರತೇಶ ವೈಭವ
ⓑ ಜೈಮಿನಿ ಭಾರತ
ⓒ ತ್ರೈಲೋಕ ಶತಕ
ⓓ ರತ್ನಾಕರೇಶ್ವರ ಶತಕ

57➤ ಈ ಕೆಳಗಿನ ಯಾವುದು ಕನ್ನಡದ ಮೊಟ್ಟ ಮೊದಲ ಸಾಮಾಜಿಕ ಕಾದಂಬರಿಯಾಗಿದೆ?

ⓐ ಮಾಡಿದ್ದುಣೋ ಮಹರಾಯ
ⓑ ಮೂಕಜ್ಜಿಯ ಕನಸುಗಳು
ⓒ ಚನ್ನಬಸವ ನಾಯಕ
ⓓ ಇಜ್ಜೋಡು

58➤ ಕನ್ನಡದ ಮೊಟ್ಟ ಮೊದಲ ಧಾರ್ಮಿಕ ಕಾವ್ಯ ಇದು?

ⓐ ಶಾಂತಿನಾಥ ಪುರಾಣ
ⓑ ಆದಿಪುರಾಣ
ⓒ ಅಜಿತ ತೀರ್ಥಂಕರು
ⓓ ರಾಮಚಂದ್ರ ಪುರಾಣ

59➤ ಯು.‌ ಆರ್. ಅನಂತಮೂರ್ತಿಗೆ ಜ್ಞಾನಪೀಠ ಪ್ರಶಸ್ತಿ ದೊರಕಿದ್ದು ?

ⓐ ಸಂಸ್ಕಾರ
ⓑ ಭಾರತೀಪುರ ಕಾದಂಬರಿ
ⓒ ಭವ
ⓓ ಸಮಗ್ರ ಕೃತಿಗಳಿಗೆ

60➤ ಈ ಕೆಳಗಿನವುಗಳಲ್ಲಿ ಗುಂಪಿಗೆ ಸೇರದ ಪದವನ್ನು ಆರಸಿ ಬರೆಯಿರಿ ?

ⓐ ನೋಡುವ
ⓑ ತಿನ್ನುವ
ⓒ ನುಂಗುವ
ⓓ ಕುಡಿಯುವ

61➤ ಈ ಕೆಳಗಿನವುಗಳಲ್ಲಿ ಯಾವ ಪ್ರೊಗ್ರಾಮಿಂಗ್ ಭಾಷೆಯನ್ನು ಪ್ರತ್ಯೇಕವಾಗಿ ಆರ್ಟಫಿಸಿಯಲ್ ಇಂಟೆಲಿಜೆನ್ಸ್ ಗಾಗಿ ಬಳಸಲಾಗುತ್ತದೆ ?

ⓐ ಸಿ ಲ್ಯಾಂಗ್ವೇಜ್
ⓑ ಜಾವ
ⓒ ಜೆ2 ಇ ಇ
ⓓ ಪ್ರೊಲಾಗ್

62➤ ಕಂಪ್ಯೂಟರ್ ಫೈರ್‌ವಾಲ್ ಅನ್ನು ಯಾವುದಕ್ಕೆ ಬಳಸಲಾಗುತ್ತದೆ ?

ⓐ ಭದ್ರತೆ
ⓑ ಡೇಟಾ ಪ್ರಸರಣ
ⓒ ದೃಢೀಕರಣ
ⓓ ಮೇಲ್ವಿಚಾರಣೆ

63➤ ಅಂತರ್ಜಾಲದಲ್ಲಿ ಮೊದಲ ಹುಡುಕುವ ಇಂಜಿನ್ (ಫಸ್ಟ ಸರ್ಚ ಇಂಜಿನ್) ಯಾವುದು ?

ⓐ ಗೂಗಲ್
ⓑ ಆರ್ಕಿ
ⓒ ಆಲ್ಟವಿಸ್ತಾ
ⓓ WAIS

64➤ RAM ಇದನ್ನು ಸೂಚಿಸುತ್ತದೆ ?

ⓐ Random Arithmetic Media
ⓑ Random Acess Memory
ⓒ Regular Acess Memory
ⓓ Remember Acess Memory

65➤ ಗಣಕಯಂತ್ರದ ಮೆದಳು ಎಂದು ಯಾವುದಕ್ಕೆ ಕರೆಯುತ್ತಾರೆ ?

ⓐ CD Drive
ⓑ CPU
ⓒ Memory
ⓓ Control Unit (ಕಂಟ್ರೋಲ್ ಯೂನಿಟ್)

66➤ He saw me by Chance and ..........The bus

ⓐ was stopping
ⓑ stops
ⓒ stopped
ⓓ stop

67➤ How many pegs of wine__yesterday?

ⓐ Were you drinking
ⓑ Did you drink
ⓒ You have drank
ⓓ none of the Above

68➤ I was watching T.V When he_in ?

ⓐ came
ⓑ come
ⓒ was coming
ⓓ come's

69➤ He cut his finger while he ____ vegetables ?

ⓐ cut
ⓑ had cut
ⓒ cutting
ⓓ was cutting

70➤ He Still remembers the day when he first_to church?

ⓐ was going
ⓑ went
ⓒ going
ⓓ gone

71➤ ಮೌರ್ಯರ ಕಾಲದಲ್ಲಿ ನಗರಗಳ ಜನಗಣತಿ ಅಧಿಕಾರಿಯ ಹೆಸರೇನು?

ⓐ ಕೊತ್ವಾಲ್
ⓑ ನಾಗರಕ
ⓒ ಸಮಹರ್ತಾ
ⓓ ಪ್ರಾದೇಶಿಕ

72➤ ಯಾವ ರೋಗದ ಪತ್ತೆಗೊಸ್ಕರ ವೈಡಲ್ ಪರೀಕ್ಷೆಯನ್ನು (Widal Test) ನಡೆಸಲಾಗುತ್ತದೆ ?

ⓐ ಟೈಫಾಯ್ಡ್
ⓑ ಟ್ಯೂಬರ್ ಕ್ಯುಲೊಸಿಸ್
ⓒ ನ್ಯೂಮೊನಿಯಾ
ⓓ ಅಸ್ತಮಾ

73➤ ಕೊಬ್ಬಿನ ಜೀರ್ಣಕ್ರೀಯೆಯಲ್ಲಿ ನೆರವಾಗುವ ಕಿಣ್ವ ?

ⓐ ಯೂರಿಯೆಜ್
ⓑ ಟ್ರಿಪ್ಸಿನ್
ⓒ ಲಿಪೇಸ್
ⓓ ಯಾವುದೂ ಅಲ್ಲ

74➤ ಲ್ಯುಕೆಮಿಯಾ ಒಂದು ರೀತಿಯ ಕ್ಯಾನ್ಸರ ಆಗಿದ್ದು ಇದಕ್ಕೆ ಕಾರಣ ?

ⓐ ದೇಹದಲ್ಲಿ ಬಿಳಿರಕ್ತ ಕಣಗಳ ಹೆಚ್ಚಾಗುವಿಕೆ
ⓑ ದೇಹದಲ್ಲಿ ಬಿಳಿರಕ್ತ ಕಣಗಳ ಕಡಿಮೆಯಾಗುವಿಕೆ
ⓒ ದೇಹದಲ್ಲಿ ಕೆಂಪು ರಕ್ತ ಕಣಗಳ ಕಡಿಮೆಯಾಗುವಿಕೆ.
ⓓ ದೇಹದಲ್ಲಿ ಕೆಂಪುರಕ್ತ ಕಣಗಳ ಹೆಚ್ಚಾಗುವಿಕೆ

75➤ ಭೂಮಿಯ ಸುತ್ತ ಒಂದು ನಿದಿರ್ಷ್ಟ ಕಕ್ಷೆಗೆ ಉಪಗ್ರಹವನ್ನು ಹಾಕಲು ಅಗತ್ಯವಿರುವ ಕನಿಷ್ಟ ವೇಗವನ್ನು ಏನೆಂದು ಕರೆಯಲಾಗುವುದು?

ⓐ ಚಲನಾ ವೇಗ
ⓑ ಕಕ್ಷಾವೇಗ
ⓒ ವಿಮೋಚನಾ ವೇಗ
ⓓ ನಿದಿಷ್ಟ ವೇಗ

76➤ ಗೋಲ ಗುಂಬಜ್ ಎನ್ನುವುದು ಯಾರ ಸಮಾಧಿಯಾಗಿದೆ ?

ⓐ ಮಹಮ್ಮದ ಆದಿಲ್ ಷಾ
ⓑ ಯುಸೂಫ ಆದಿಲ್ ಷಾ
ⓒ ಕೃಷ್ಣ ದೇವರಾಯ
ⓓ ಸಿಕಂದರ ಆದಿಲ್ ಷಾ

77➤ ಸಿಂಧೂ ನಾಗರಿಕತೆಯ ಯಾವ ಸ್ಥಳವನ್ನು “ಸಿಂಧನ ಓಯಾಸಿಸ್' ಎನ್ನುವರು?

ⓐ ಹರಪ್ಪ
ⓑ ಮೆಹೆಂಜೊದಾರೋ
ⓒ ಚಾನ್ಹೊದಾರೊ
ⓓ ಬಾಣಾವಲಿ

78➤ ಭಾರತದಲ್ಲಿ ಯಾವ ಸ್ಥಳಗಳ ನಡುವೆ ಪ್ರಥಮ (1853) ರೇಲ್ವೆ ಸಂಪರ್ಕ ಉಂಟಾಯಿತು ?

ⓐ ಮುಂಬೈ-ಕಲ್ಕತ್ತಾ
ⓑ ಮುಂಬೈ-ಥಾಣೆ
ⓒ ಬೆಂಗಳೂರ-ಕೋಲಾರ
ⓓ ಯಾವುದು ಅಲ್ಲ

79➤ ಖಗೋಳ ವಿಜ್ಞಾನ ಗಣಿತ & ಔಷಧ ಸೇರಿದಂತೆ‌ ವಿವಿಧ ಕಲಿಕೆಯ ಶಾಖೆಗಳನ್ನು ಚನ್ನಾಗಿ ತಿಳಿದಿದ್ದ ಮಧ್ಯಕಾಲಿನ ಮುಸ್ಲಿಂ ಆಡಳಿತಗಾರ/ಗಾರ್ತಿ ಯಾರು ?

ⓐ ಸಿಕಂದರ ಲೋದಿ
ⓑ ರಜಿಯಾ ಸುಲ್ತಾನ
ⓒ ಮಹಮ್ಮದ್ ಬಿನ್ ತುಘಲಕ್
ⓓ ಅಲ್ಲಾವುದ್ದೀನ್ ಖಿಲ್ಜಿ

80➤ ಸಂಸ್ಕೃತದ ಈ ಕೆಳಗಿನ ಕಾವ್ಯಗಳಲ್ಲಿ ಯಾವುದು‌ ನ್ಯಾಯಾಲಯದ ಒಳಸಂಚುಗಳು & ಚಂದ್ರಗುಪ್ತ ಮೌರ್ಯನು ಅಧಿಕಾರ ಹಿಡಿಯುವುದನ್ನು ತಿಳಿಸುತ್ತದೆ?

ⓐ ಋತು ಸಂಹಾರ
ⓑ ಮೃಚ್ಛಕಟಿಕ
ⓒ ಕುಮಾರ ಸಂಭವ
ⓓ ಮುದ್ರಾರಾಕ್ಷಸ

81➤ ವೇದಗಳ ಕಾಲದಲ್ಲಿ 'ಅಮಾಜು' ಎಂದರೆ___.

ⓐ ಹಾಲು ಕೊಡುವ ಹಸು
ⓑ ವೇದಗಳಲ್ಲಿ ಚರ್ಚೆಗಳಲ್ಲಿ ಭಾಗವಹಿಸುವ ಮಹಿಳೆಯರು
ⓒ ಜೀವಮಾನವಿಡೀ ವಿವಾಹವಾಗದ ಮಹಿಳೆ
ⓓ ವಿಚ್ಛೇದಿತ ಮಹಿಳೆ

82➤ ಸೌರವ್ಯೂಹದ ಯಾವ ಗ್ರಹ ದೀರ್ಘಾವಧಿ ದಿನಗಳನ್ನು ಹೊಂದಿದೆ ?

ⓐ ಬುಧ
ⓑ ಗುರು
ⓒ ಶುಕ್ರ
ⓓ ಭೂಮಿ

83➤ ಯಾವ ನದಿಯ ದಡದ ಮೇಲೆ ಲೂಧಿಯಾನ ನಗರವಿದೆ ?

ⓐ ಬಿಯಾಸ್
ⓑ ರಾವಿ
ⓒ ಸತ್ಲೇಜ್
ⓓ ಲೂನಿ

84➤ ಇತ್ತೀಚಿಗೆ ಸುದ್ದಿಯಲ್ಲಿದ್ದ 'ಟೊಮೊಟೊ ಜ್ವರ' ಯಾವ ರಾಜ್ಯಕ್ಕೆ ಸ್ಥಳಿಯ ರೋಗವಾಗಿದೆ?

ⓐ ತಮಿಳುನಾಡು
ⓑ ಕೇರಳ
ⓒ ಕರ್ನಾಟಕ
ⓓ ಒಡಿಶಾ

85➤ ಇತ್ತೀಚೆಗೆ ವಿಶ್ವದ ಅತಿ ಉದ್ದದ ತೂಗು ಸೇತುವ ಯಾವ ದೇಶದಲ್ಲಿ ಜನರ ಸಂಚಾರಕ್ಕೆ ಮುಕ್ತವಾಗಿದೆ?

ⓐ ಫಿಲಿಫೈನ್ಸ್
ⓑ ಜೆಕ್ ಗಣರಾಜ್ಯ
ⓒ ಭಾರತ
ⓓ ಪಾಕಿಸ್ತಾನ

86➤ ಕೆರೆಮನ ಮೇಳ ಯಾವ ಕಲೆಗೆ ಸಂಬಂಧಿಸಿದೆ?

ⓐ ವೀರಗಾಸೆ
ⓑ ಹುತ್ತರಿ
ⓒ ಕುಚುಪುಡಿ
ⓓ ಯಕ್ಷಗಾನ

87➤ ಟೇಬಲ್ ಶುಗರ್ ಎಂದು ಕರೆಯಲ್ಪಡುವುದು?

ⓐ ಗ್ಲುಕೋಸ್
ⓑ ಪ್ರಕ್ಟೋಸ್
ⓒ ಸೆಲ್ಯೂಲೋಸ್
ⓓ ಸುಕ್ರೋಸ್

88➤ ಗಾಂಧಿಜಿಯವರ ಹತ್ಯೆ ಯಾವಾಗ ನಡೆಯಿತು ?

ⓐ ಜನವರಿ 26, 1947
ⓑ ಜನವರಿ 26. 1948
ⓒ ಫೆಬ್ರುವರಿ 26, 1948
ⓓ ಜನವರಿ 30 , 1948

89➤ ಭಾರತದಲ್ಲಿ ಮೊದಲ ಪಂಚವಾರ್ಷಿಕ ಯೋಜನೆ ಯಾವಾಗ ಜಾರಿಗೆ ಬಂದಿತು?

ⓐ 1949
ⓑ 1950
ⓒ 1951
ⓓ 1952

90➤ ಚೆನ್ನಾಗಿ ಮಳೆಯಾದ ನಂತರ ವಿಶಿಷ್ಟವಾದ ಆಹ್ಲಾದಕರ ವಾಸನೆಯ ಅನುಭವಾಗುತ್ತದೆ ಈ ವಾಸನೆಗೆ ಕಾರಣವೇನು?

ⓐ ಮಳೆಯಲ್ಲಿ ಕರಗಿರುವ ಕೆಲವು ರಾಸಾಯನಿಕಗಳು
ⓑ ಒದ್ದೆಯಾದ ಮಣ್ಣಿನಲ್ಲಿ ಬೆಳೆಯುವಂತ ಕೆಲವು ಬ್ಯಾಕ್ಟೀರಿಯಾಗಳ ಕ್ರಿಯೆ
ⓒ ಮಳೆಬಿದ್ದಾಗ ಗಿಡದ ಎಲೆಗಳು ಒದ್ದೆಯಾಗುವ ಕಾರಣ
ⓓ ತೇವ ಭರಿತ ಗಾಳಿಯೊಂದಿಗೆ ಸೇರಿಕೊಂಡಿರುವಂತಹ ರಾಸಾಯನಿಕಗಳು ಕಾರಣ

91➤ 'ಅಲ್ಗೋರಿದಮ್' ಎಂಬ ಪದವು ಗಣಿತ & ಗಣಕ ವಿಜ್ಞಾನದಲ್ಲಿ ಬಳಕೆಯಾಗುವಂತಹ ಕೆಲವು ಸ್ಪಷ್ಟವಾಗಿ ನಿರ್ವಹಿಸಲಾದ ಸೂಚನೆಗಳ ಪಟ್ಟಿಗೆ ಸಂಬಂಧಿಸಿದೆ. ‌‌ಹಾಗಾದರೆ Algorithm ಎಂಬ ಪದ ಯಾವ ಮೂಲದಿಂದ ಬಂದಿದೆ?

ⓐ ಭಾರತೀಯ
ⓑ ಪರ್ಷಿಯನ್
ⓒ ಅಮೇರಿಕನ್
ⓓ ಚೀನಿ

92➤ ಕೆಳಕಂಡ ಯಾವ ಜೋಡಿ ತಪ್ಪಾಗಿದೆ?

ⓐ ಸಿ.ಕೆ ನಾಯ್ಡು ಟ್ರೋಫಿ - ಕ್ರಿಕೆಟ್
ⓑ ಧ್ಯಾನಚಂದ್ ಕಪ್ - ಹಾಕಿ
ⓒ ಡ್ಯುರಾಂಡ್ ಕಪ್ - ಫುಟ್‌ಬಾಲ್
ⓓ ಆಘಾಖಾನ್ ಕಪ್- ವಾಲಿಬಾಲ್

93➤ ವಿಶ್ವ ಪ್ರಸಿದ್ಧ ಧುವಂಧರಾ ಅಥವಾ 'ಮಂಜಿನ ಮೋಡ” ಜಲಪಾತವು ಈ ಕೆಳಗಿನ ಯಾವ ನದಿಗೆ ಸಮೀಪಿಸಿದೆ?

ⓐ ನರ್ಮದಾ
ⓑ ತಪತಿ
ⓒ ದಾಮೋದ‌ರ
ⓓ ಬ್ರಹ್ಮಣಿ

94➤ ದಂಡ ಕಾಂತದ ಕಾಂತತ್ವವು ಕೇಂದ್ರದಲ್ಲಿ ____ ಆಗಿರುತ್ತದೆ?

ⓐ ಅತ್ಯಧಿಕ
ⓑ ಕನಿಷ್ಟ
ⓒ ಶೂನ್ಯವಾಗಿರುತ್ತದೆ
ⓓ ಅತ್ಯಧಿಕ

95➤ ವಿಶ್ವ ಬಾಲಕಾರ್ಮಿಕ ವಿರೋಧಿ ದಿನವನ್ನು ಯಾವಾಗ ಆಚರಿಸಲಾಗುತ್ತದೆ?

ⓐ ಜೂನ್ 12
ⓑ ಜುಲೈ 12
ⓒ ಎಪ್ರೀಲ್ 12
ⓓ ಆಗಸ್ಟ್ 12

96➤ ಕೆಳಗಿನವುಗಳಲ್ಲಿ ಯಾವುದು G7 ಸದಸ್ಯ ರಾಷ್ಟ್ರವಲ್ಲ ?

ⓐ ಅಮೆರಿಕಾ
ⓑ ಕೆನಡ
ⓒ ಚೀನಾ
ⓓ ಇಟಲಿ

97➤ ಕೆಳಗಿನವುಗಳಲ್ಲಿ ಭಾರತ ಮತ್ತು ಅಮೆರಿಕಾ ನಡುವೆ ನಡೆಯುವ ಸಮರಾಭ್ಯಾಸ ಯಾವುದು?

ⓐ ಯುದ್ಧ ಅಭ್ಯಾಸ
ⓑ ಮಿತ್ರ ಶಕ್ತಿ
ⓒ ಮೈತ್ರಿ
ⓓ ಗರುಡ ಶಕ್ತಿ

98➤ ಪ್ರತಿವರ್ಷ ವಿಶ್ವ ಸಾಗರ ದಿನವನ್ನು ಈ ಕೆಳಗಿನ ಯಾವ ದಿನಾಂಕದಂದು ಆಚರಿಸಲಾಗುತ್ತದೆ?

ⓐ ಜೂನ್ 8
ⓑ ಜೂನ್ 6
ⓒ ಜೂನ್ 5
ⓓ ಜೂನ್ 7

99➤ ಈ ಕೆಳಗಿನ ಹೇಳಿಕೆಗಳನ್ನು ಗಮನಿಸಿ . ಎ) ದ್ರವದ ನ್ಯಾನೋ ಯೂರಿಯಾವು ರಾಸಾಯನಿಕ ಸಾರಜನಕ ಗೊಬ್ಬರವಾಗಿದ್ದು, ಬಿಳಿ ಬಣ್ಣದಲ್ಲಿದೆ. ಬಿ) ಈ ಉತ್ಪನ್ನವನ್ನು ಗುಜರಾತ ನ ಕಲೋಲ ನಲ್ಲಿರುವ IFFCO ನ್ಯಾನೋ ಬಯೋಟೆಕ್ನಾಲಜಿ ಸಂಶೋಧನಾ ಕೇಂದ್ರದಲ್ಲಿ ಅಭಿವೃದ್ಧಿಪಡಿಸಲಾಗಿದೆ.

ⓐ A ಮಾತ್ರ ಸರಿ
ⓑ B ಮಾತ್ರ ಸರಿ
ⓒ A ಮತ್ತು B ಸರಿ
ⓓ A ಮತ್ತು B ತಪ್ಪು

100➤ ಕೆಳಕಂಡವರಲ್ಲಿ ಯಾರು ಪ್ರಾಚೀನ ಭಾರತದ ವೈದ್ಯ ಶಾಸ್ತ್ರಕ್ಕೆ ಸಂಬಂಧಪಟ್ಟವರಲ್ಲ.

ⓐ ಧನ್ವಂತ್ರಿ
ⓑ ಭಾಸ್ಕರಾಚಾರ್ಯ
ⓒ ಚರಕ
ⓓ ಸುಶ್ರುಷ

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads