Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Sunday 26 June 2022

The Carnatic Wars Complete Details in Kannada ಕರ್ನಾಟಿಕ್ ಯುದ್ಧಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ

The Carnatic Wars Complete Details in Kannada ಕರ್ನಾಟಿಕ್ ಯುದ್ಧಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ:

The Carnatic Wars Complete Details in Kannada ಕರ್ನಾಟಿಕ್ ಯುದ್ಧಗಳ ಕುರಿತಾದ ಸಂಪೂರ್ಣ ಮಾಹಿತಿ ಇಲ್ಲಿದೆ

ಪೋರ್ಚುಗೀಸರು ಮತ್ತು ಡಚ್ಚರು 18ನೆಯ ಶತಮಾನದ ಮಧ್ಯಂತರದ ಹೊತ್ತಿಗೆ ಬ್ರಿಟಿಷರು ಮತ್ತು ಫ್ರೆಂಚರ ಪೈಪೋಟಿಯನ್ನು ಎದುರಿಸಲಾಗದೆ ಭಾರತದ ರಾಜಕೀಯ ರಂಗದಿಂದ ಹಿಂದೆ ಸರಿದರು. ಅಂತಿಮವಾಗಿ ಕಣದಲ್ಲಿ ಉಳಿದ ಬ್ರಿಟಿಷರು ಮತ್ತು ಫ್ರೆಂಚರು ದಕ್ಷಿಣ ಭಾರತದಲ್ಲಿ ತಮ್ಮ ರಾಜಕೀಯ ಪ್ರಭಾವವನ್ನು ಉಳಿಸಿಕೊಳ್ಳುವ ಸಲುವಾಗಿ ಶಕ್ತಿ ಪ್ರದರ್ಶನಕ್ಕೆ ಮುಂದಾದರು. ಇದೇ ಸಂದರ್ಭದಲ್ಲಿ ಹೈದರಾಬಾದ್ ಸಂಸ್ಥಾನ ಮತ್ತು ಕಾರ್ನಾಟಿಕ್ (ತಮಿಳುನಾಡಿನ ಪೂರ್ವಭಾಗ) ಪ್ರಾಂತ್ಯದಲ್ಲಿನ ರಾಜಕೀಯ ಅಸ್ಥಿರತೆಯ ಲಾಭ ಪಡೆಯಲು ಫ್ರೆಂಚರು ಮತ್ತು ಬ್ರಿಟಿಷರು ಯತ್ನಿಸಿದರು. ಅದರ ಪರಿಣಾಮವಾಗಿಯೇ ಮೂರು ಕಾರ್ನಾಟಿಕ್ ಯುದ್ಧಗಳು ನಡೆದವು.


ನಿಮಗಿದು ತಿಳಿದಿರಲಿ
1724ರಲ್ಲಿ ಹೈದರಾಬಾದ್ ಸಂಸ್ಥಾನವನ್ನು 'ಅಸಫ್ ಜಾ' ಸ್ಥಾಪಿಸಿದನು. ಇವನ ಅಧೀನದಲ್ಲಿ ಕರ್ನಾಟಿಕ್ ಪ್ರಾಂತ್ಯವನ್ನು ಆಳುತ್ತಿದ್ದ 'ದೋಸ್ತ್ ಅಲಿ' ಎಂಬಾತನು ಅಸಫ್ ಜಾ ನಿಗೆ ನಿಷ್ಠನಾಗಿರಲಿಲ್ಲ. 1740ರಲ್ಲಿ ಮರಾಠರು ಕಾರ್ನಾಟಿಕ್ ಪ್ರಾಂತ್ಯವನ್ನು ಲೂಟಿ ಮಾಡಿ, ದೋಸ್ತ್ ಅಲಿಯನ್ನು ಕೊಂದು, ಅವನ ಅಳಿಯ ಚಂದಾಸಾಹೇಬನನ್ನು ಸತಾರದಲ್ಲಿ ಸೆರೆಯಲ್ಲಿಟ್ಟರು. ಆಗ ಅಸಫ್ ಜಾ ತನ್ನ ನಂಬಿಕಸ್ಥ ವ್ಯಕ್ತಿಯಾದ ಅನ್ವರುದ್ದೀನನನ್ನು ಕರ್ನಾಟಕ್ ದ ನವಾಬನನ್ನಾಗಿ ನೇಮಿಸಿದನು.

ಮೊದಲ ಕಾರ್ನಾಟಿಕ್ ಯುದ್ಧ (1746-48): The First Carnatic War:

ಡೂಪ್ಲೆಯ ಕೋರಿಕೆಯ ಮೇರೆಗೆ ಲಾಬೋರ್ಡಿನಾ ಎಂಬ ಫ್ರೆಂಚ್ ಸೇನಾ ಮುಖ್ಯಸ್ಥನು ಮಾರಿಷಸ್‌ನಿಂದ ಬಂದು ಬ್ರಿಟಿಷರಿಂದ ಮದ್ರಾಸನ್ನು ವಶಪಡಿಸಿಕೊಂಡನು. ಅಸಹಾಯಕರಾದ ಬ್ರಿಟಿಷರು ಕಾರ್ನಾಟಿಕ್ ನವಾಬನಾದ ಅನ್ವರುದ್ದೀನನಲ್ಲಿ ಮೊರೆ ಇಟ್ಟರು. ಮದ್ರಾಸ್‌ನಿಂದ ಪ್ರೆಂಚರನ್ನು ಹೊರಗಟ್ಟಲು ಅನ್ವರುದ್ದೀನ್ ಕಳುಹಿಸಿಕೊಟ್ಟ ಸೇನೆಯು ಸೋತಿತು. ಕೊನೆಗೆ ಲೋಬರ್ಡಿನೋ ಡೂಪ್ಲೆಗೆ ತಿಳಿಸದೆ ಬ್ರಿಟಿಷರಿಂದ ಹಣಪಡೆದು ಮದ್ರಾಸನ್ನು ಬಿಟ್ಟುಕೊಟ್ಟು ಮಾರಿಷಸ್‌ಗೆ ಹೊರಟುಹೋದನು. ಇದರಿಂದ ಕೋಪಗೊಂಡ ಡೂಪ್ಲೆಯು ಮದ್ರಾಸನ್ನು ಮತ್ತೆ ಪಡೆಯುವ ವಿಫಲ ಪ್ರಯತ್ನ ನಡೆಸಿದನು. ಅಂತಿಮವಾಗಿ ಈ ಯುದ್ಧವು ಯುರೋಪಿನಲ್ಲಿ ಫ್ರಾನ್ಸ್ ಮತ್ತು ಇಂಗ್ಲೆಂಡಿನ ನಡುವೆ ಆದ 'ಏಕ್ಸ್-ಲಾ-ಚಾಪೆಲ್' ಒಪ್ಪಂದದೊಂದಿಗೆ ಮುಕ್ತಾಯವಾಯಿತು.

ನಿಮಗಿದು ತಿಳಿದಿರಲಿ:
ಹೈದರಾಬಾದ್ ಸಂಸ್ಥಾನದ ನಿಜಾಮನಾದ ಅಸಫ್ ಜಾ 1748ರಲ್ಲಿ ಮರಣ ಹೊಂದಿದನು. ಸಿಂಹಾಸನಕ್ಕಾಗಿ ಅವನ ಮಗನಾದ ನಾಸೀರ್‌ಜಂಗ್ ಮತ್ತು ಅವನ ಮಗಳ ಮಗನಾದ ಮುಜಾಫರ್‌ ಜಂಗ್ ನಡುವೆ ಕಲಹ ಆರಂಭವಾಯಿತು. ಅತ್ತ ಕಾರ್ನಾಟಕದಲ್ಲಿ (ಮರಾಠರ ಸೆರೆಯಿಂದ ಬಿಡುಗಡೆಗೊಂಡ) ಚಂದಾಸಾಹೇಬ್ ಮತ್ತು ಅನ್ವರುದ್ದೀನನ ನಡುವೆ ಸಿಂಹಾಸನಕ್ಕಾಗಿ ಕಿತ್ತಾಟ ಆರಂಭವಾಯಿತು. ಆಗ ಫ್ರೆಂಚರು ಹೈದರಾಬಾದಿನಲ್ಲಿ ಮುಜಾಫರ್ ಜಂಗನಿಗೂ, ಕಾರ್ನಾಟಿಕ್‌ನಲ್ಲಿ ಚಂದಾಸಾಹೇಬನಿಗೂ ಬೆಂಬಲ ನೀಡಿದರು. ಇದಕ್ಕೆ ಪ್ರತಿಯಾಗಿ ಬ್ರಿಟಿಷರು ನಾಸಿರ್‌ಜಂಗ್ ಮತ್ತು ಅನ್ವರುದ್ದೀನನ ಬೆಂಬಲಕ್ಕೆ ನಿಂತರು.


1749ರಲ್ಲಿ ಚಂದಾಸಾಹೇಬ, ಮುಜಾಫರ್‌ಜಂಗ್ ಮತ್ತು ಫ್ರೆಂಚರ ಪಡೆಗಳು ಒಂದಾಗಿ ಅನ್ವರುದ್ದೀನನನ್ನು ಆಂಬೂರ್ ಕದನದಲ್ಲಿ ಕೊಂದರು. ಪರಿಣಾಮವಾಗಿ ಚಂದಾಸಾಹೇಬ ಕಾರ್ನಾಟಿಕ್‌ ನವಾಬನಾದನು. ಅನ್ವರುದ್ದೀನನ ಮಗನಾದ 'ಮಹಮದ್ ಅಲಿ'ಯು ಬ್ರಿಟಿಷರ ನೆರವಿನಿಂದ ತಿರುಚನಾಪಳ್ಳಿಯಲ್ಲಿ ನೆಲೆನಿಂತನು. ಅತ್ತ ಹೈದರಾಬಾದಿನಲ್ಲಿ ಮುಜಾಫರ್‌ಜಂಗನು ಚಂದಾಸಾಹೇಬ ಮತ್ತು ಫ್ರೆಂಚರ ಸಹಾಯದಿಂದ ನಾಸಿರ್‌ಜಂಗನನ್ನು ಕೊಂದು ನಿಜಾಮನಾದರೂ, ಸ್ವಲ್ಪದಿನಗಳಲ್ಲಿಯೇ ಹತ್ಯೆಗೀಡಾದನು. ಅವನ ಸ್ಥಾನಕ್ಕೆ ಫ್ರೆಂಚರು ಅಸಫ್‌ಜಾನ ಇನ್ನೊಬ್ಬ ಮಗನಾದ ಸಲಾಬತ್‌ಜಂಗನನ್ನು ನಿಜಾಮನಾಗಿ ಮಾಡಿದರು.

ಎರಡನೆಯ ಕಾರ್ನಾಟಿಕ್ ಯುದ್ಧ (1749-1754): The Second Carnatic War

ಬದಲಾದ ಸನ್ನಿವೇಶದಲ್ಲಿ ಫ್ರೆಂಚರು ಅಸಫ್‌ಜಾನ ಮತ್ತೊಬ್ಬ ಮಗನಾದ ಸಲಾಬತ್‌ಜಂಗನನ್ನು ಹೈದರಾಬಾದಿನ ನಿಜಾಮನಾಗಿ ಮಾಡಿದರು. ಅವನ ರಕ್ಷಣೆಗಾಗಿ ಆಸ್ಥಾನದಲ್ಲಿ ಫ್ರೆಂಚರು ತಮ್ಮ ಸೈನ್ಯ ಸಹಿತ 'ಬುಸ್ಸಿ' ಎಂಬ ಅಧಿಕಾರಿಯನ್ನು ನೇಮಿಸಿದ್ದರು. ಮತ್ತೊಂದು ಕಡೆ ಫ್ರೆಂಚರ ಬೆಂಬಲದಿಂದ ಚಂದಾಸಾಹೇಬನು ಕಾರ್ನಾಟಿಕ್‌ನ ನವಾಬನಾಗಿದ್ದನು. ಆದರೆ ಇಂಗ್ಲಿಷ್ ಈಸ್ಟ್ ಕಂಪನಿಯ ಅಧಿಕಾರಿ ರಾಬರ್ಟ್ ಕ್ಲೈವ್ ನು ಕಾರ್ನಾಟಕದ ರಾಜಧಾನಿ ಆರ್ಕಾಟಿನ ಆಕ್ರಮಣ ಮಾಡಿ ಫ್ರೆಂಚರು ಮತ್ತು ಚಂದಾಸಾಹೇಬನನ್ನು ಸೋಲಿಸಿದನು. ಅಂತಿಮವಾಗಿ ಈ ಯುದ್ಧದಲ್ಲಿ ಚಂದಾಸಾಹೇಬನನ್ನು ಬಂಧಿಸಿ ಹತ್ಯೆ ಮಾಡಲಾಯಿತು. ಅವನ ಸ್ಥಾನಕ್ಕೆ ಬ್ರಿಟಿಷರು ಅನ್ವರುದ್ದೀನ್ ನ  ಮಗನಾದ ಮಹಮ್ಮದ್  ಅಲಿಯನ್ನು ನವಾಬನಾಗಿ ನೇಮಕ ಮಾಡಿದರು. ಕೊನೆಗೆ ಎರಡನೆಯ ಕರ್ನಾಟಿಕ್ ಯುದ್ಧವು 'ಪಾಂಡಿಚೇರಿ ಒಪ್ಪಂದ' ದೊಂದಿಗೆ ಕೊನೆಗೊಂಡಿತು. ಫ್ರೆಂಚರು ಡೂಪ್ಲೆಯನ್ನು ಹಿಂದಕ್ಕೆ ಕರೆಸಿಕೊಂಡರು. ಈ ಯುದ್ಧವು ಫ್ರೆಂಚರಿಗೆ ರಾಜಕೀಯ ಹಿನ್ನಡೆಯನ್ನು, ಬ್ರಿಟಿಷರಿಗೆ ಪ್ರತಿಷ್ಠೆಯನ್ನು ತಂದುಕೊಟ್ಟಿತು.

ಮೂರನೆಯ ಕಾರ್ನಾಟಿಕ್ ಯುದ್ಧ (1756-1763): The Third Carnatic War

ಫ್ರೆಂಚರ 'ಕೌಂಟ್ ಡಿ ಲಾಲಿ' ಯು 1760ರಲ್ಲಿ ವಾಂಡಿವಾಷ್ ಕೋಟೆಗೆ ಮುತ್ತಿಗೆ ಹಾಕಲು ಪ್ರಯತ್ನಿಸಿದನು. ಈ ನಿರ್ಣಾಯಕ ವಾಂಡಿವಾಷ್ ಕದನದಲ್ಲಿ ಬ್ರಿಟಿಷ್ ಸೇನಾಧಿಕಾರಿ ಸರ್. ಐರ್‌ಕೂಟನು ಫ್ರೆಂಚರನ್ನು ಸೋಲಿಸಿದನಲ್ಲದೆ, ಬುಸ್ಸಿಯನ್ನು ಸೆರೆಹಿಡಿದನು. ಲಾಲಿಯು ತಪ್ಪಿಸಿಕೊಂಡು ಪಾಂಡಿಚೇರಿಯಲ್ಲಿ ತಲೆಮರೆಸಿಕೊಂಡನು. ಅಂತಿಮವಾಗಿ ಐರ್‌ಕೂಟನು ಪಾಂಡಿಚೇರಿಗೂ ಮುತ್ತಿಗೆ ಹಾಕಿದಾಗ ಲಾಲಿಯು 1761ರಲ್ಲಿ ಬೇಷರತ್ತಾಗಿ ಶರಣಾದನು.


ಕಾರ್ನಾಟಿಕ್ ಯುದ್ಧಗಳ ಪರಿಣಾಮವಾಗಿ ಫ್ರೆಂಚರು ಭಾರತದಲ್ಲಿ ತಮ್ಮ ಎಲ್ಲ ನೆಲೆಗಳನ್ನು ಕಳೆದುಕೊಂಡರು. ಅದಾಗ್ಯೂ 1763ರಲ್ಲಿ ನಡೆದ 'ಪ್ಯಾರಿಸ್ ಒಪ್ಪಂದ' ದ ಪ್ರಕಾರ ಫ್ರೆಂಚರಿಗೆ ಪಾಂಡಿಚೇರಿಯನ್ನು ಹಿಂತಿರುಗಿಸಲಾಯಿತು. ಈ ಬೆಳವಣಿಗೆಗಳೊಂದಿಗೆ ‌ದಕ್ಷಿಣ ಭಾರತದಲ್ಲಿ ಫ್ರೆಂಚರು ಮೂಲೆಗುಂಪಾದರು. ಹೀಗೆ ಬ್ರಿಟಿಷರು ತಮ್ಮ ಇತರ ಯುರೋಪಿಯನ್ ಪ್ರತಿಸ್ಪರ್ಧಿಗಳನ್ನು ದಮನಮಾಡಿ ದಕ್ಷಿಣ ಭಾರತವನ್ನು ಗೆಲ್ಲುವ ಕಾರ್ಯದಲ್ಲಿ ಮಗ್ನರಾದರು.

ರಾಬರ್ಟ್‌ ಕ್ಲೈವ್ ಬಗ್ಗೆ ನಿಮಗೆಷ್ಟು ಗೊತ್ತು:
  • ಭಾರತದಲ್ಲಿ ಬ್ರಿಟಿಷ್ ಅಧಿಕಾರವನ್ನು ಕಟ್ಟಿದ ಪ್ರಥಮ ಅಧಿಕಾರಿ ರಾಬರ್ಟ್‌ ಕ್ಲೈವ್.‌
  • ಈತನು ಈಸ್ಟ್ ಇಂಡಿಯಾ ಕಂಪನಿಯಲ್ಲಿ ಕಾರಕೂನನಾಗಿ ಸೇವೆಗೆ ಸೇರಿದ್ದನು. ಕಾರ್ನಾಟಿಕ್ ಯುದ್ಧದಲ್ಲಿ ಅದರಲ್ಲೂ ಆರ್ಕಾಟ್‌ನ ಮುತ್ತಿಗೆಯಲ್ಲಿ ಬಹುಮುಖ್ಯ ಪಾತ್ರವನ್ನು ನಿರ್ವಹಿಸಿ, ಬ್ರಿಟಿಷರ ವಿಜಯಕ್ಕೆ ಕಾರಣನಾದನು.
  • ದಕ್ಷಿಣಭಾರತದಲ್ಲಿ ಬ್ರಿಟಿಷರ ಅಸ್ತಿತ್ವ ರೂಪಿಸುವಲ್ಲಿ ಸಫಲನಾದ ಈತ ಬಂಗಾಳದ ವಿಜಯಕ್ಕೂ ಕಾರಣನಾದನು.
  • 1757 ರ ಪ್ಲಾಸಿಕದನದ ವಿಜಯದಿಂದಾಗಿ ಬಂಗಾಳದ ನವಾಬನ ಮೇಲೆ ಹಿಡಿತವನ್ನು ಸಾಧಿಸಿದನು. ಇದರಿಂದ ಅಪಾರ ಸಂಪತ್ತನ್ನು ಕೈವನು ಸಂಪಾದಿಸಿದ್ದಲ್ಲದೆ, ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿಗೂ ಲಾಭವನ್ನು ತಂದುಕೊಟ್ಟನು.
  • ಅಪಾರ ಸಂಪತ್ತಿನಿಂದ ಇಂಗ್ಲೆಂಡಿಗೆ ಹಿಂದಿರುಗಿದ ರಾಬರ್ಟ್‌ ಕ್ಲೈವ್ ನು ಸಂಸತ್ತಿನ ಸದಸ್ಯನಾಗಿ ಸಹ ನೇಮಕಗೊಂಡನು.
  • ರಾಬರ್ಟ್‌ ಕ್ಲೈವ್ ನು ಇಂಗ್ಲೆಂಡಿಗೆ ಹಿಂದಿರುಗಿದ ನಂತರ ಭಾರತದಲ್ಲಿ ಈಸ್ಟ್ ಇಂಡಿಯಾ ಕಂಪನಿಯು ವ್ಯಾಪಾರದಲ್ಲಿ ನಷ್ಟವನ್ನು ಅನುಭವಿಸತೊಡಗಿತು. ಅವನ ಮೇಲೆ ಆಪಾದನೆಗಳು ಇದ್ದಾಗ್ಯೂ ಸಹ ಅನಿವಾರ್ಯತೆಯಲ್ಲಿ ಸರ್ಕಾರವು ಮತ್ತೆ ರಾಬರ್ಟ್‌ ಕ್ಲೈವ್ ನನ್ನು ಬ್ರಿಟಿಷರ ಘನತೆ ಮತ್ತು ಹಿತಾಸಕ್ತಿಗಳನ್ನು ಕಾಪಾಡುವ ಸಲುವಾಗಿ ಭಾರತಕ್ಕೆ ಸೇನಾಪತಿಯಾಗಿ ಕಳುಹಿಸಿಕೊಟ್ಟಿತು.
  • ಬಕ್ಸಾರ್ ಕದನದಲ್ಲಿ ಮತ್ತೆ ವಿಜಯಿಯಾಗಿ ಬ್ರಿಟಿಷರಿಗೆ ಘನತೆಯನ್ನು ತಂದುಕೊಟ್ಟ ರಾಬರ್ಟ್‌ ಕ್ಲೈವ್ ನು ಬಂಗಾಳ, ಬಿಹಾರ, ಒರಿಸ್ಸಾ ಪ್ರಾಂತ್ಯಗಳ ಮೇಲೆ ದಿವಾನಿ ಹಕ್ಕನ್ನು ಕಂಪನಿಗೆ ತಂದುಕೊಟ್ಟನು.
  • ಇದರಿಂದ ಮತ್ತೆ ಸಂಪತ್ತನ್ನು ತನಗೂ ಮತ್ತು ಈಸ್ಟ್ ಇಂಡಿಯಾ ಕಂಪನಿಗೆ ದೊರಕಿಸಿಕೊಂಡು 1767 ರಲ್ಲಿ ಇಂಗ್ಲೆಂಡಿಗೆ ಹಿಂದಿರುಗಿದನು.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads