Karnataka State Police Constable 2016 CAR/DAR Question Paper With Answers ಕರ್ನಾಟಕ ರಾಜ್ಯ ಪೊಲೀಸ್ ಕಾನ್ಸ್ಟೇಬಲ್ 2016 ಸಿಎಆರ್/ಡಿಎಆರ್ ಉತ್ತರ ಸಹಿತ ಪ್ರಶ್ನೆ ಪತ್ರಿಕೆ
Karnataka State Police Constable 2016 CAR/DAR Question Paper With Answers ಕರ್ನಾಟಕ ರಾಜ್ಯ ಪೊಲೀಸ್ ಕಾನ್ಸ್ಟೇಬಲ್ 2016 ಸಿಎಆರ್/ಡಿಎಆರ್ ಉತ್ತರ ಸಹಿತ ಪ್ರಶ್ನೆ ಪತ್ರಿಕೆ:
ಮುಂಬರುವ ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾಗುವ Karnataka State Police Constable 2016 CAR/DAR Question Paper With Answers ಕರ್ನಾಟಕ ರಾಜ್ಯ ಪೊಲೀಸ್ ಕಾನ್ಸ್ಟೇಬಲ್ 2016 ಸಿಎಆರ್/ಡಿಎಆರ್ ಉತ್ತರ ಸಹಿತ ಪ್ರಶ್ನೆ ಪತ್ರಿಕೆ ಯನ್ನು ನಿಮಗಾಗಿ ಇಲ್ಲಿ ನೀಡಲಾಗಿದೆ.
1. ಭಾರತದಲ್ಲಿ ಹತ್ತಿ ಬೆಳೆಯಲು ಉತ್ತಮವಾದ ಮಣ್ಣು ಯಾವುದು ?
- a : ಕಪ್ಪು ಮಣ್ಣು
- b : ಕೆಂಪು ಮಣ್ಣು
- c : ಜೇಡಿ ಮಣ್ಣು
- d : ಮರಳು ಮಿಶ್ರಿತ ಮಣ್ಣು
2. ರಂಗನತಿಟ್ಟು ಪಕ್ಷಿಧಾಮ ಇರುವ ಜಿಲ್ಲೆ
- a : ಮೈಸೂರು
- b : ಮಂಡ್ಯ
- c : ಹಾಸನ
- d : ರಾಮನಗರ
3. ಭಾರತದಲ್ಲಿರುವ ಅತೀ ಪ್ರಾಚೀನ ಪರ್ವತ ಶ್ರೇಣಿಗಳೆಂದರೆ
- a : ಅರಾವಳಿ
- b : ವಿಂಧ್ಯಾ
- c : ಸಾತ್ಪುರಾ
- d : ನೀಲಗಿರಿ
4. ಹೇಮಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಗೊರೂರು ಅಣೆಕಟ್ಟು ಇರುವ ಜಿಲ್ಲೆ
- a : ಮೈಸೂರು
- b : ಹಾಸನ
- c : ಮಂಡ್ಯ
- d : ಕೊಡಗು
5. ರೇಡಿಯೋ ಕಾರ್ಬನ್‌ನ ಕಾಲನಿರ್ಣಯ ತಂತ್ರಜ್ಞಾನವು ಈ ಕೆಳಗಿನ ಒಂದರ ಕಾಲವನ್ನು (ವಯಸ್ಸು) ನಿರ್ಣಯಿಸಲು ಬಳಸುತ್ತಾರೆ ?
- a : ಬಂಡೆಗಳು
- b : ಸ್ಮಾರಕಗಳು
- c : ಮಣ್ಣು
- d : ಪಳೆಯುಳಿಕೆಗಳು
6. ಕಾಫಿ ಮತ್ತು ಟೀ ಮುಖ್ಯವಾಗಿ ಹೊಂದಿರುವುದು
- a : ನಿಕೋಟಿನ್
- b : ಕ್ಲೋರೋಫಿಲ್
- c : ಕೆಫೀನ್
- d : ಆಸ್ಪಿರಿನ್
7. ನಕ್ಷತ್ರಗಳು ಪೂರ್ವದಿಂದ ಪಶ್ಚಿಮಕ್ಕೆ ಚಲಿಸುವಂತೆ ಕಾಣುವುದೇಕೆಂದರೆ,
- a : ಎಲ್ಲಾ ನಕ್ಷತ್ರಗಳು ಪೂರ್ವದಿಂದ ಪಶ್ಚಿಮಕ್ಕೆ ಚಲಿಸುವುದು
- b : ಭೂಮಿಯು ಪಶ್ಚಿಮದಿಂದ ಪೂರ್ವಕ್ಕೆ ತಿರುಗುವುದು
- c : ಭೂಮಿಯು ಪೂರ್ವದಿಂದ ಪಶ್ಚಿಮಕ್ಕೆ ತಿರುಗುವುದು
- d : ನಕ್ಷತ್ರಗಳ ಹಿನ್ನೆಲೆಯು ಪಶ್ಚಿಮದಿಂದ ಪೂರ್ವಕ್ಕೆ ಚಲಿಸುವುದು.
8. ವಾಷಿಂಗ್ ಸೋಡಾ ಇದರ ಸಾಮಾನ್ಯ ಹೆಸರು
- a : ಸೋಡಿಯಂ ಕಾರ್ಬೋನೇಟ್
- b : ಸೋಡಿಯಂ ಬೈಕಾರ್ಬೋನೇಟ್
- c : ಕ್ಯಾಲ್ಸಿಯಂ ಕಾರ್ಬೋನೇಟ್
- d : ಕ್ಯಾಲ್ಸಿಯಂ ಕಾರ್ಬೋನೇಟ್
9. ಒಂದು ಅಣುವಿನ ಕೇಂದ್ರವು ಯಾವ ಅಣುಗಳನ್ನು ಒಳಗೊಂಡಿದೆ?
- a : ಎಲೆಕ್ಟ್ರಾನ್ ಮತ್ತು ನ್ಯೂಟ್ರಾನ್
- b : ಎಲೆಕ್ಟ್ರಾನ್ ಮತ್ತು ಪ್ರೋಟಾನ್
- c : ಪ್ರೋಟಾನ್ ಮತ್ತು ನ್ಯೂಟ್ರಾನ್
- d : ಮೇಲಿನ ಎಲ್ಲವೂ
10. ಭೌಗೋಳಿಕವಾಗಿ ಅತಿ ಹೆಚ್ಚು ವಿಸ್ತಾರವಾಗಿರುವ ಭಾರತದ ರಾಜ್ಯ
- a : ಮಹಾರಾಷ್ಟ್ರ
- b : ಮಧ್ಯಪ್ರದೇಶ
- c : ಉತ್ತರ ಪ್ರದೇಶ
- d : ರಾಜಸ್ತಾನ
11. ಶ್ರೀಕೃಷ್ಣದೇವರಾಯ ವಿಜಯನಗರದ ಯಾವ ರಾಜವಂಶಕ್ಕೆ ಸೇರಿದವನು?
- a : ಸಂಗಮ
- b : ಸಾಳ್ವ
- c : ಅರವೀಡು
- d : ತುಳುವ
12. 1953 ರ ರಾಜ್ಯ ಪುನರ್‌ವಿಂಗಡಣಾ ಆಯೋಗದ ಅಧ್ಯಕ್ಷರಾಗಿ ನೇಮಕವಾದವರು
- a : ಫಝಲ್ ಆಲಿ
- b : ಕೇಳ್ಕರ್
- c : ಮಂಡಲ್
- d : ಝಾಕೀರ್ ಹುಸೇನ್
13. ಕೆಳಗಿನ ಸ್ವಾತಂತ್ರ್ಯ ಹೋರಾಟದ ಚಳುವಳಿಯನ್ನು ಕಾಲಾನುಕ್ರಮವಾಗಿ ಜೋಡಿಸಿರಿ. 1. ಅಸಹಕಾರ ಚಳುವಳಿ 2. ಕ್ವಿಟ್ ಇಂಡಿಯಾ ಚಳುವಳಿ 3. ಕಾನೂನುಭಂಗ ಚಳುವಳಿ
- a : 1, 2, 3
- b : 3, 1, 2
- c : 1, 3, 2
- d : 3, 2, 1
14. ಳಗಿನ ವ್ಯಕ್ತಿಗಳಲ್ಲಿ ಹಿಂದೂಸ್ತಾನ್ ಸೋಷಿಯಲಿಸ್ಟ್ ರಿಪಬ್ಲಿಕನ ಅಸೋಸಿಯೇಷನ್‌ಗೆ ಸಂಬಂಧಿಸಿದವರು 1. ಚಂದ್ರಶೇಖರ್ ಆಜಾದ್ 2. ಭಗತ್‌ಸಿಂಗ್ 3. ಸುಖದೇವ್ 4. ರಾಜ್‌ಗುರು
- a : 1 ಮತ್ತು 2
- b : 1, 2, 3
- c : 2 ಮಾತ್ರ
- d : 1, 2, 3 ಮತ್ತು 4
15. 'ಷೇರ್-ಎ-ಪಂಜಾಬ್' ಎಂದು ಹೆಸರು ವಾಸಿಯಾದವರು?
- a : ಲಾಲಾ ಲಜಪತ್‌ರಾಯ್
- b : ಭಗತ್‌ಸಿಂಗ್
- c : ಸುಖದೇವ್
- d : ರಾಮ್ ಪ್ರಸಾದ್ ಬಿಸ್ಮಿಲ್ಲಾ
16. ಮರೀಚಿಕೆ (ಬಿಸಿಲ್ಗುದುರೆ) ಕಾಣಿಸಿಕೊಳ್ಳಲು ಕಾರಣ
- a : ವಾತಾವರಣದಲ್ಲಿನ ವಿಭಿನ್ನ ಭಾಗಗಳ ಅಸಮತೋಲನದ ತಾಪಮಾನ
- b : ವಾತಾವರಣದ ಮೇಲಾಗುವ ಅಯಸ್ಕಾಂತೀಯ ಪ್ರಕ್ಷುಬ್ಧತೆ
- c : ವಾತಾವರಣದಲ್ಲಿರುವ ಓಜೋನ್ ಪದರದ ಸವೆತ
- d : ವಾತಾವರಣದಲ್ಲಿನ ವಿಭಿನ್ನ ಭಾಗಗಳ ಸಮತೋಲನದ ತಾಪಮಾನ
17. K.B. ಎಂದು ಕರೆಯಲ್ಪಡುವ ಒಂದು ಕಿಲೋಬೈಟ್ ಸಮವಾಗಿರುವುದು
- a : 1000 ಬೈಟ್ಸ್‌ಗಳಿಗೆ
- b : 948 ಬೈಟ್ಸ್‌ಗಳಿಗೆ
- c : 948 ಬೈಟ್ಸ್‌ಗಳಿಗೆ
- d : 1024 ಬೈಟ್ಸ್‌ಗಳಿಗೆ
18. ಅಂತರ್ಜಾಲ ಶೋಧನೆಯು (Internet Explorer) ಒಂದು ರೀತಿಯ
- a : ಆಪರೇಟಿಂಗ್ ಸಿಸ್ಟಂ
- b : ಬ್ರೌಸರ್
- c : I.P. ಅಡ್ರೆಸ್
- d : ಕಂಪೈಲರ್
19. ಕಂಪ್ಯೂಟರ್ ಭಾಷೆಯ ಸೂಚನೆಯಲ್ಲಾಗುವ 'ತಪ್ಪು' (Error) ಗಿರುವ ಮತ್ತೊಂದು ಹೆಸರು
- a : ಬಗ್
- b : ಡಿಬಗ್
- c : ಕರ್ಸರ್
- d : ಐಕಾನ್
20. ಕಂಪ್ಯೂಟರ್ ಭಾಷೆಯಲ್ಲಿ GUI ನ ವಿಸ್ತತ ರೂಪ
- a : ಗ್ರಾಫ್ ಯೂಸ್ ಇಂಟರ್‌ಫೇಸ್
- b : ಗ್ರಾಫಿಕಲ್ ಯೂಸರ್ ಇಂಟರ್‌ಫೇಸ್
- c : ಗ್ರಾಫಿಕಲ್ ಯೂನಿಕ್ ಇಂಟರ್‌ಫೇಸ್
- d : ಮೇಲಿನ ಯಾವುದೂ ಅಲ್ಲ
21. ಆರ್.ಕೆ. ಲಕ್ಷ್ಮಣ್ ಒಬ್ಬ ಪ್ರಸಿದ್ಧ
- a : ವ್ಯಂಗ್ಯ ಚಿತ್ರಕಾರ
- b : ಲೇಖಕ
- c : ಪತ್ರಿಕೋದ್ಯಮಿ,
- d : ಸಂಗೀತಕಾರ
22. 'ಭಾರತದ ಉದ್ಯಾನ ನಗರಿ' ಎಂದು ಕರೆಯಲ್ಪಡುವ ನಗರ
- a : ತ್ರಿವೇಂಡ್ರಂ
- b : ಚಂಡೀಗಢ
- c : ಶಿಮ್ಲಾ
- d : ಬೆಂಗಳೂರು
23. 'ನಗಿಸುವ ಅನಿಲ' ಎಂದರೆ
- a : ನೈಟ್ರಸ್ ಆಕ್ಸೆಡ್
- b : ಕಾರ್ಬನ್ ಮೊನಾಕ್ಸೆಡ್
- c : ಸಲ್ಫರ್ ಡೈ ಆಕ್ಸೆಡ್
- d : ಹೈಡ್ರೋಜನ್ ಪೆರಾಕ್ಸೈಡ್
24. ಸಿಡುಬಿಗೆ ಲಸಿಕೆ ಕಂಡುಹಿಡಿದವರು
- a : ರಾಬರ್ಟ್ ಕೋಚ್
- b : ಎಡ್ವರ್ಡ್ ಜೆನ್ನರ್
- c : ರಾಬರ್ಟ್ ಹುಕ್
- d : ಲೂಯಿಪಾಶ್ಚರ್
25. ಕರ್ನಾಟಕದಲ್ಲಿ ಈ ಕೆಳಗಿನ ಸ್ಥಳಗಳಲ್ಲಿ ಹೈಕೋರ್ಟ್ ಪೀಠಗಳನ್ನು ಸ್ಥಾಪಿಸಲಾಗಿದೆ. 1. ಬೆಂಗಳೂರು 2. ಬೆಳಗಾವಿ 3. ಕಲಬುರ್ಗಿ 4. ಧಾರವಾಡ
- a : 1, 3, 4
- b : 1 ಮತ್ತು 3
- c : 1, 2, 3
- d : 1, 2, 3, 4
26. ಭಾರತದಲ್ಲಿ ಅತೀ ವಿಸ್ತಾರವಾದ ನದಿ ದ್ವೀಪವು ವಿಶ್ವ ಗಿನ್ನಿಸ್ ಪುಸ್ತಕದಲ್ಲಿ ದಾಖಲಾಗಿದೆ
- a : ಮಜಲಿ ದ್ವೀಪ
- b : ನಯಚಾರ ದ್ವೀಪ
- c : ಭವಾನಿ ದ್ವೀಪ
- d : ಲೋಹಚಾರ ದ್ವೀಪ
27. 2016 ರ ರಿಯೋ ಒಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ಸ್ಪರ್ಧೆಯಲ್ಲಿ ಪಿ.ವಿ. ಸಿಂಧು ಪಡೆದಿದ್ದು
- a : ಚಿನ್ನದ ಪದಕ
- b : ಬೆಳ್ಳಿ ಪದಕ
- c : ಕಂಚಿನ ಪದಕ
- d : ಯಾವುದೂ ಅಲ್ಲ
28. ದಕ್ಷಿಣ ಭಾರತದ ಯಾವ ಸಿನಿಮಾ 19ನೇ ಶಾಂಫ್ಟ್ ಅಂತರಾಷ್ಟ್ರೀಯ ಸಿನಿಮಾ ಉತ್ಸವದಲ್ಲಿ ಅತೀ ಉತ್ತಮ ಸಿನಿಮಾ ಪ್ರಶಸ್ತಿ ಪಡೆಯಿತು ?
- a : ಬಾಹುಬಲಿ
- b : ತಿಥಿ
- c : ಪ್ರೇಮಂ
- d : ವಿಸಾರಣೆ
29. 'ದೇ.ಜ.ಗೌ.' ಎಂದು ಖ್ಯಾತರಾದ ಡಿ. ಜವರೇಗೌಡರು ಕೆಳಗಿನ ಯಾವ ಪ್ರಶಸ್ತಿಯನ್ನು ಪಡೆದಿಲ್ಲ ?
- a : ನಾಡೋಜ ಪ್ರಶಸ್ತಿ
- b : ಪಂಪ ಪ್ರಶಸ್ತಿ
- c : ಪದ್ಮಶ್ರೀ ಪ್ರಶಸ್ತಿ
- d : ಪದ್ಮಭೂಷಣ ಪ್ರಶಸ್ತಿ
30. ಈ ಕೆಳಗಿನ ಯಾವ ಶೃಂಗಸಭೆಯು ನಿಗದಿಯಂತೆ ನವೆಂಬರ್‌ನಲ್ಲಿ ಪಾಕಿಸ್ತಾನದ ಇಸ್ಲಾಮಾಬಾದ್‌ನಲ್ಲಿ ನಡೆಯಬೇಕಿದ್ದು, ಸದಸ್ಯ ದೇಶಗಳು ಭಾಗವಹಿಸಲು ನಿರಾಕರಿಸಿದ್ದರಿಂದ ರದ್ದಾಯಿತು ?
- a : ASEAN
- b : BRIC
- c : SAARC
- d : MADRID
31. ಕರ್ನಾಟಕದ ಯಾವ ನಗರದಲ್ಲಿ ಪೊಲೀಸ್ ಆಯುಕ್ತರ ಕಛೇರಿ ಇರುವುದಿಲ್ಲ ?
- a : ಕಲಬುರ್ಗಿ
- b : ಮೈಸೂರು
- c : ಬೆಳಗಾವಿ
- d : ಮಂಗಳೂರು
32. 32 ನೇ ಪ್ರಶ್ನೆ & ಆಯ್ಕೆಗಳನ್ನು ಕೊನೆಗೆ ನೀಡಲಾಗಿದೆ
- a : ಕೊನೆಗೆ ನೀಡಲಾಗಿದೆ
- b : ಕೊನೆಗೆ ನೀಡಲಾಗಿದೆ
- c : ಕೊನೆಗೆ ನೀಡಲಾಗಿದೆ
- d : ಕೊನೆಗೆ ನೀಡಲಾಗಿದೆ
33. ಪೊಲೀಸ್ ಹುತಾತ್ಮರ ದಿನವಾಗಿ ಆಚರಿಸುವ ದಿನ
- a : ಅಕ್ಟೋಬರ್ 21
- b : ಮಾರ್ಚ್ 31
- c : ಮಾರ್ಚ್ 31
- d : ಮಾರ್ಚ್ 21
34. ಕರ್ನಾಟಕ ಪೊಲೀಸ್ ಅಕಾಡೆಮಿ ಇರುವುದು
- a : ಬೆಂಗಳೂರು
- b : ಮೈಸೂರು
- c : ಕಲಬುರ್ಗಿ
- d : ಬೆಳಗಾವಿ
35. ಕೆಳಗಿನ ಲೇಖಕರು ಮತ್ತು ಅವರ ಬರಹಗಳನ್ನು ಜೋಡಿಸಿ ಬರೆಯಿರಿ. 1. ದ.ರಾ. ಬೇಂದ್ರೆ ಅ) ರಾಮಾಯಣ ದರ್ಶನಂ 2. ಕುವೆಂಪು ಆ) ಚಿಕ್ಕವೀರ ರಾಜೇಂದ್ರ 3. ಮಾಸ್ತಿ ವೆಂಕಟೇಶ ಅಯ್ಯಂಗಾರ್ ಇ) ನಾಕುತಂತಿ
- a : 1-ಇ, 2-ಅ, 3-ಆ
- b : 1-ಆ, 2-ಅ, 3-ಇ
- c : 1-ಅ, 2, 3-ಇ
- d : 1-ಆ, 2-ಇ, 3-ಅ
36. ಬ್ರೆಡ್‌ನಲ್ಲಿ ಬಳಸುವ ಈಸ್ಟ್ ಒಂದು
- a : ಸಸ್ಯ
- b : ಬೀಜ
- c : ಬ್ಯಾಕ್ಟಿರಿಯಾ
- d : ಫಂಗಸ್ (ಶಿಲೀಂಧ್ರ)
37. ಕಬ್ಬಿಣದ ಕೊರತೆಯಿಂದ ಆರೋಗ್ಯದಲ್ಲಿ ____ ಉಂಟಾಗುತ್ತದೆ.
- a : ಹಸಿವಿಲ್ಲದಂತಾಗುವುದು
- b : ಡಿಫ್ತೀರಿಯಾ
- c : ರಕ್ತಹೀನತೆ
- d : ಅಕಾಲ ವೃದ್ಧಾಪ್ಯ
38. ಕುಡಿಯುವ ನೀರಿನಲ್ಲಿ ಅಂಟುಜಾಡ್ಯ ನಿವಾರಕವಾಗಿ ಬಳಸುವ ಅನಿಲವು
- a : ಜಲಜನಕ
- b : ಆಮ್ಲಜನಕ
- c : ಕ್ಲೋರಿನ್
- d : ಫ್ಲೋರಿನ್
39. ಮೂತ್ರಜನಕಾಂಗದ ಕಾರ್ಯನಿರ್ವಾಹಕ ಘಟಕದಲ್ಲಿರುವ ಅತೀ ಚಿಕ್ಕ ರಚನೆ
- a : ನೆಫ್ರಾನ್
- b : ನ್ಯೂರಾನ್
- c : ಗ್ರಾನುಲೊಸೈಟ್
- d : ರೆಟಿಕುಲೊಸೈಟ್
40. ಪಕ್ಷಿಗಳ ಕುರಿತು ಮಾಡುವ ಅಧ್ಯಯನವು
- a : ಅರ್ನಿತಾಲಜಿ
- b : ಹೆರ್ಪಟಾಲಜಿ
- c : ಆವಿಯೋಲಜಿ
- d : ಅಂಕಾಲಜಿ
41. 41 ನೇ ಪ್ರಶ್ನೆ & ಆಯ್ಕೆಗಳನ್ನು ಕೊನೆಗೆ ನೀಡಲಾಗಿದೆ
- a : ಕೊನೆಗೆ ನೀಡಲಾಗಿದೆ
- b : ಕೊನೆಗೆ ನೀಡಲಾಗಿದೆ
- c : ಕೊನೆಗೆ ನೀಡಲಾಗಿದೆ
- d : ಕೊನೆಗೆ ನೀಡಲಾಗಿದೆ
42. ಗಡಿಯಾರದಲ್ಲಿ ಸಮಯ ಬೆಳಿಗ್ಗೆ 9 ಆಗಿದ್ದರೆ ಗಂಟೆಯ ಮುಳ್ಳು ಹಾಗೂ ಸಮೀಪದ ಮುಳ್ಳಿನ ನಡುವಿನ ಕೋನವು
- a : 0⁰
- b : 90°
- c : 180°
- d : 360°
43. 'B' ಯ ತಂದೆಯು 'A' ನ ತಾಯಿಯ ಒಬ್ಬನೇ ಮಗ. ಹಾಗಾದರೆ 'B' ಯ ಸಂಬಂಧ 'A' ಯೊಂದಿಗೆ
- a : 'A' ನ ಅಳಿಯ
- b : 'A' ನ ಸಹೋದರ
- c : 'A' ನ ತಂದೆ
- d : 'A' ನ ಮಗ
44. ಒಬ್ಬ ಬ್ಯಾಟ್ಸ್‌ಮನ್ 9 ಇನ್ನಿಂಗ್ಸ್‌ಗಳ ನಂತರ ನಿರ್ಧಿಷ್ಟ ಸರಾಸರಿಯನ್ನು ಹೊಂದಿರುತ್ತಾನೆ. ತನ್ನ 10ನೇ ಇನ್ನಿಂಗ್ಸ್‌ನಲ್ಲಿ 100 ರನ್ ಗಳಿಸಿ ತನ್ನ ಸರಾಸರಿಯನ್ನು ಎಂಟು ರನ್‌ಗಳಿಂದ ಹೆಚ್ಚಿಸಿಕೊಳ್ಳುತ್ತಾನೆ. ಹಾಗಾದರೆ ಆತನ ಹೊಸ ಸರಾಸರಿಯು
- a : 20
- b : 21
- c : 28
- d : 32
45. ಈ ಕೆಳಗಿನವುಗಳಲ್ಲಿ ಯಾವುದು ಗಣಕಯಂತ್ರದ 'ಆಪರೇಟಿಂಗ್ ಸಿಸ್ಟಂ' ಆಗಿದೆ ?
- a : ಮೈಕ್ರೋಸಾಫ್ಟ್ ವರ್ಡ್
- b : ಮೈಕ್ರೋಸಾಫ್ಟ್ ವಿಂಡೋಸ್
- c : ಮೈಕ್ರೋಸಾಫ್ಟ್ ಎಕ್ಸೆಲ್
- d : ಮೈಕ್ರೋಸಾಫ್ಟ್ ಆಕ್ಸೆಸ್
46. ರಾಜ್ಯಸಭೆಯ ಪದನಿಮಿತ್ತ ಮುಖ್ಯಸ್ಥರು
- a : ವಿರೋಧಪಕ್ಷದ ನಾಯಕರು
- b : ಉಪರಾಷ್ಟ್ರಪತಿಗಳು
- c : ರಾಷ್ಟ್ರಪತಿಗಳು
- d : ಸಂಸದೀಯ ವ್ಯವಹಾರಗಳ ಮಂತ್ರಿಗಳು
47. ಕರ್ನಾಟಕ ರಾಜ್ಯದಲ್ಲಿರುವ ವಿಧಾನಪರಿಷತ್ತಿನ ಸದಸ್ಯರ ಸಂಖ್ಯೆ
- a : 75
- b : 28
- c : 224
- d : 12
48. ಕೇಂದ್ರ ಚುನಾವಣಾ ಆಯೋಗದ ಸದಸ್ಯರ ಕಾರ್ಯನಿರ್ವಹಣೆ ಅವಧಿಯು
- a : ಆರು ವರ್ಷಗಳು ಅಥವಾ ಅರವತ್ತೈದು ವರ್ಷಗಳಾಗುವವರೆಗೂ
- b : ಐದು ವರ್ಷಗಳು ಅಥವಾ ಅರವತ್ತೈದು ವರ್ಷಗಳಾಗುವವರೆಗೂ
- c : ಆರು ವರ್ಷಗಳು ಅಥವಾ ಅರವತ್ತೆರಡು ವರ್ಷಗಳಾಗುವವರೆಗೂ
- d : ಐದು ವರ್ಷಗಳು ಅಥವಾ ಅರವತ್ತೆರಡು ವರ್ಷಗಳಾಗುವವರೆಗೂ
49. ಭಾರತ ಸಂವಿಧಾನದ ಕರಡು ರಚನಾ ಸಮಿತಿಯ ಅಧ್ಯಕ್ಷರಾಗಿದ್ದವರು
- a : ಡಾ.ಕೆ.ಎಂ. ಮುನ್ಸಿ
- b : ಡಾ.ಬಿ.ಆರ್. ಅಂಬೇಡ್ಕರ್
- c : ಜವಾಹರ್‌ಲಾಲ್ ನೆಹರು
- d : ಟಿ.ಟಿ. ಕೃಷ್ಣಮಾಚಾರಿ
50. ರಾಷ್ಟ್ರಪತಿಯವರು ಯಾವ ಸಂದರ್ಭದಲ್ಲಿ ಸುಗ್ರೀವಾಜ್ಞೆಯನ್ನು ಹೊರಡಿಸಬಹುದು ?
- a : ಎರಡೂ ಸದನಗಳು ಅಧಿವೇಶನದಲ್ಲಿ ಭಾಗವಹಿಸಿದ್ದಾಗ
- b : ಯಾವುದೇ ಸದನವು ಅಧಿವೇಶನದಲ್ಲಿ ಭಾಗವಹಿಸದಿದ್ದಾಗ
- c : ಎರಡೂ ಸದನಗಳು ಅಧಿವೇಶನದಲ್ಲಿ ಇಲ್ಲದಿರುವಾಗ
- d : (ಬಿ) ಮತ್ತು (ಸಿ) ಎರಡು ಸಂದರ್ಭಗಳಲ್ಲಿ ಮಾಡಬಹುದು
51. ಕೆಳಗಿನ ಯಾವ ಮಣ್ಣು ಭಾರತದ ನದಿ ತಟ ಹಾಗೂ ಕರಾವಳಿ ಬಯಲಿನಲ್ಲಿರುತ್ತದೆ ?
- a : ಮೆಕ್ಕಲು ಮಣ್ಣು
- b : ಕಪ್ಪು ಮಣ್ಣು
- c : ಜೇಡಿ ಮಣ್ಣು
- d : ಕೆಂಪು ಮಣ್ಣು
52. ಭಾರತದ ಪ್ರಾಚೀನ ತೈಲ ಶುದ್ದೀಕರಣ ಘಟಕ ಯಾವುದೆಂದರೆ ?
- a : ಅಂಕಲೇಶ್ವರ, ಗುಜರಾತ್
- b : ಬಾಂಬೆ ಹೈ, ಮಹಾರಾಷ್ಟ್ರ
- c : ನವಗಾಂವ, ಗುಜರಾತ್
- d : ದಿಗ್ಬಾಯ್, ಅಸ್ಸಾಂ
53. ಕೆಳಗಿನ ಯಾವ ನದಿಯು ಪಶ್ಚಿಮಕ್ಕೆ ಹರಿಯುತ್ತದೆ ?
- a : ಗೋದಾವರಿ
- b : ಕೃಷ್ಣಾ
- c : ಕಾವೇರಿ
- d : ಶರಾವತಿ
54. ಕೇಸರಿಯನ್ನು ಉತ್ಪಾದಿಸುವ ಭಾರತದ ಏಕೈಕ ರಾಜ್ಯ
- a : ಹಿಮಾಚಲ ಪ್ರದೇಶ
- b : ಅಸ್ಸಾಂ
- c : ಜಮ್ಮು ಮತ್ತು ಕಾಶ್ಮೀರ
- d : ಮೇಘಾಲಯ
55. ಭಾರತದಲ್ಲಿ ಅತೀ ಹೆಚ್ಚು ಕಾಫಿ ಬೆಳೆಯುವ ರಾಜ್ಯ
- a : ಕೇರಳ
- b : ಕರ್ನಾಟಕ
- c : ಪಶ್ಚಿಮ ಬಂಗಾಳ
- d : ಅಸ್ಸಾಂ
56. ಅತಿ ನೇರಳೆಯ (ನೇರಳಾತೀತ) ಬೆಳಕನ್ನು ಶೋಧಿಸುವ ಹಾಗೂ ವಿಕಿರಣಗಳಿಂದ ರಕ್ಷಿಸುವ ವಾಯುಮಂಡಲದಲ್ಲಿರುವ ಅನಿಲ
- a : ಹೀಲಿಯಂ
- b : ಓಜೋನ್
- c : ಆಕ್ಸಿಜನ್
- d : ಮಿಥೇನ್
57. ಇಂಗಾಲದ ಅತೀ ಕಠಿಣ ಘನ ರೂಪ
- a : ಕಲ್ಲಿದ್ದಲು
- b : ಗ್ರಾಫೈಟ್
- c : ಇದ್ದಿಲು
- d : ವಜ್ರ
58. ಮರಳಿನ ಮೇಲೆ ನಡೆಯುವುದು ಸಿಮೆಂಟ್ ರಸ್ತೆಯ ಮೇಲೆ ನಡೆಯುವುದಕ್ಕಿಂತ ಹೆಚ್ಚು ಕಷ್ಟ, ಏಕೆಂದರೆ
- a : ಮರಳು ಸಿಮೆಂಟ್ ರಸ್ತೆಗಿಂತಲೂ ಮೆದುವಾಗಿರುವುದು
- b : ಮರಳು ಕಣಕಣವಾಗಿರುವುದು, ಆದರೆ ಕಾಂಕ್ರೀಟ್ ಮೃದುವಾಗಿರುವುದು
- c : ಮರಳು ಮತ್ತು ಪಾದಗಳ ನಡುವಿನ ಘರ್ಷಣೆಯು ಕಾಂಕ್ರೀಟ್ ಮತ್ತು ಪಾದಗಳ ನಡುವಿನ ಘರ್ಷಣೆಗಿಂತ ಕಡಿಮೆ ಇರುವುದು
- d : ಸಿಮೆಂಟ್ ಮತ್ತು ಪಾದಗಳ ನಡುವಿನ ಘರ್ಷಣೆಯು ಮರಳು ಮತ್ತು ಪಾದಗಳ ನಡುವಿನ ಘರ್ಷಣೆಗಿಂತ ಕಡಿಮೆ ಇರುವುದು.
59. ಈ ಕೆಳಗಿನ ಯಾವ ಘಟನೆಯು ಜಾಗತಿಕ ತಾಪಮಾನಕ್ಕೆ ಕಾರಣವಾಗಿದೆ ?
- a : ಹಸಿರುಮನೆ ಪರಿಣಾಮ
- b : ಮುಂಗಾರು
- c : ಕಲ್ಲಿದ್ದಲು ಗಣಿಗಳಲ್ಲಿನ ಬೆಂಕಿ
- d : ವಾಣಿಜ್ಯ ಮಾರುತಗಳು
60. ಗಾಳಿಯಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿರುವ ಘಟಕ
- a : ಇಂಗಾಲದ ಡೈಆಕ್ಸೆಡ್
- b : ಸಾರಜನಕ
- c : ಆಮ್ಲಜನಕ
- d : ಜಲಜನಕ
61. ಜ್ಯೋತಿರ್ವರ್ಷ ಈ ಕೆಳಗಿನವುಗಳ ಒಂದು ಘಟಕ
- a : ಕಾಲ
- b : ದೂರ
- c : ಬೆಳಕು
- d : ಬೆಳಕಿನ ತೀವ್ರತೆ
62. ದಂಡಕಾಂತದ ಕೇಂದ್ರದಲ್ಲಿನ ಕಾಂತತ್ವವು
- a : ಅತ್ಯಧಿಕವಾಗಿರುತ್ತದೆ
- b : ಕನಿಷ್ಠವಾದುದು
- c : ಶೂನ್ಯವಾಗಿರುತ್ತದೆ
- d : ಶೂನ್ಯವಾಗಿರುತ್ತದೆ
63. ಗಾಳಿಯು ಒಂದು ಗೊತ್ತಾದ______ಯಿಂದ_______ವರೆಗೂ ಚಲಿಸುವುದು.
- a : ಅಧಿಕ ಒತ್ತಡದ ದಿಕ್ಕಿನಿಂದ ಕಡಿಮೆ ಒತ್ತಡದ ದಿಕ್ಕಿನೆಡೆಗೆ
- b : ಕಡಿಮೆ ಒತ್ತಡದ ದಿಕ್ಕಿನಿಂದ ಅಧಿಕ ಒತ್ತಡದ ದಿಕ್ಕಿನೆಡೆಗೆ
- c : ತಟಸ್ಥವಾಗಿರುತ್ತದೆ
- d : ಯಾವುದೂ ಅಲ್ಲ
64. ಶಬ್ದದ ವೇಗವು ವಿವಿಧ ಮಾಧ್ಯಮದಲ್ಲಿ ವಿಭಿನ್ನವಾಗಿರುತ್ತದೆ. ಶಬ್ದದ ವೇಗವು ಕ್ರಮವಾಗಿ ಈ ಕೆಳಗಿನ....ಮಾಧ್ಯಮಗಳಲ್ಲಿ ಹೆಚ್ಚಾಗುವುದು.
- a : ನೀರು, ಕಬ್ಬಿಣ, ಗಾಳಿ
- b : ಕಬ್ಬಿಣ, ಗಾಳಿ, ನೀರು
- c : ಗಾಳಿ, ನೀರು, ಕಬ್ಬಿಣ
- d : ನೀರು, ಗಾಳಿ, ಕಬ್ಬಿಣ
65. ಸೂರ್ಯಗ್ರಹಣ ಸಂಭವಿಸುವುದು
- a : ಸೂರ್ಯನು ಚಂದ್ರ ಮತ್ತು ಭೂಮಿಯ ನಡುವಿದ್ದಾಗ
- b : ಭೂಮಿಯು ಚಂದ್ರ ಮತ್ತು ಸೂರ್ಯನ ನಡುವಿದ್ದಾಗ
- c : ಚಂದ್ರನು ಸೂರ್ಯ ಮತ್ತು ಭೂಮಿಯ ನಡುವಿದ್ದಾಗ
- d : ಸೂರ್ಯನು ಚಂದ್ರ ಮತ್ತು ಭೂಮಿಯ ನೇರ ಕಕ್ಷೆಯಲ್ಲಿ ಇಲ್ಲದಿದ್ದಾಗ
66. ಆರ್ಯಸಮಾಜದ ಸಂಸ್ಥಾಪಕರು
- a : ಸ್ವಾಮಿ ದಯಾನಂದ ಸರಸ್ವತಿ
- b : ರಾಜಾರಾಂ ಮೋಹನ್ ರಾಯ್
- c : ಸ್ವಾಮಿ ವಿವೇಕಾನಂದ
- d : ಗೋಪಾಲಕೃಷ್ಣ ಗೋಖಲೆ
67. ಮಂಡ್ಯ ಜಿಲ್ಲೆಯಲ್ಲಿರುವ ಮೇಲುಕೋಟೆಯಲ್ಲಿನ ವೈಷ್ಣವ ಮಠವನ್ನು ನಿರ್ಮಿಸಿ ಅಭಿವೃದ್ಧಿಪಡಿಸಿದವರು
- a : ಆದಿ ಶಂಕರಾಚಾರ್ಯರು
- b : ರಾಮಾನುಜಾಚಾರ್ಯರು
- c : ಮಧ್ವಾಚಾರ್ಯರು
- d : ಬಸವೇಶ್ವರರು
68. ಆಸೆಗಳನ್ನು ನಿಯಂತ್ರಿಸಲು ಮತ್ತು ದುಃಖವನ್ನು ಗೆಲ್ಲಲು ಅಷ್ಟಾಂಗ ಮಾರ್ಗವನ್ನು ಬೋಧಿಸಿದವರು
- a : ಮಹಾವೀರ
- b : ಗೊಮ್ಮಟೇಶ್ವರ
- c : ಗೌತಮ ಬುದ್ಧ
- d : ಅಶೋಕ
69. 1857 ರ ದಂಗೆಯ ನಂತರ ರಂಗೂನಿಗೆ ಗಡಿಪಾರಾದ ಕೊನೆಯ ಮೊಘಲ್ ಸಾಮ್ರಾಟ ಯಾರೆಂದರೆ ?
- a : ಬಹದ್ದೂರ್ ಷಾ-II
- b : ಅಹ್ಮದ್ ಷಾ
- c : ಅಕ್ಬರ್-II
- d : ಫಾರೂಕ್ ಸಯ್ಯದ್
70. ಈ ಕೆಳಗಿನ ಯಾವ ಯುದ್ಧದ ಅವಧಿಯಲ್ಲಿ ಟಿಪ್ಪು ಸುಲ್ತಾನ್ ಮರಣ ಹೊಂದಿದನು ?
- a : ಮೂರನೇ ಆಂಗ್ಲೋ-ಮೈಸೂರು ಯುದ್ಧ
- b : ನಾಲ್ಕನೇ ಆಂಗ್ಲೋ-ಮೈಸೂರು ಯುದ್ಧ
- c : ಐದನೇ ಆಂಗ್ಲೋ-ಮೈಸೂರು ಯುದ್ಧ
- d : ಎರಡನೇ ಆಂಗ್ಲೋ-ಮೈಸೂರು ಯುದ್ಧ
71. ಇವುಗಳಲ್ಲಿ ಯಾವುದು ಶಾಂತಿ ಸಮಯದ ಸರ್ವೋತ್ತಮ ಶೌರ್ಯ ಪ್ರಶಸ್ತಿಯಾಗಿದೆ ?
- a : ಪರಮವೀರ ಚಕ್ರ
- b : ಅಶೋಕ ಚಕ್ರ
- c : ಕೀರ್ತಿ ಚಕ್ರ
- d : ವೀರ ಚಕ್ರ
72. ಆಮ್ನೆಸ್ಟಿ ಇಂಟರ್ ನ್ಯಾಷನಲ್ ಎಂಬ ಸಂಘಟನೆಯ ಸಂಬಂಧಿಸಿರುವುದು
- a : ಪ್ರಾಣಿ ಹಿಂಸೆ ತಡೆಯುವುದಕ್ಕಾಗಿ
- b : ಪರಿಸರ ಸಂರಕ್ಷಣೆಗಾಗಿ
- c : ಮಾನವ ಹಕ್ಕುಗಳ ರಕ್ಷಣೆಗಾಗಿ
- d : ಐತಿಹಾಸಿಕ ಸ್ಮಾರಕಗಳ ರಕ್ಷಣೆಗಾಗಿ
73. ಜೂನ್ ತಿಂಗಳ 21ನೇ ದಿನಾಂಕವನ್ನು ಆಚರಿಸುವುದು ಈ ಕೆಳಗಿನಂತೆ
- a : ವಿಶ್ವ ಜನಸಂಖ್ಯಾ ದಿನಾಚರಣೆ
- b : ವಿಶ್ವ ಪ್ರಾಣಿಗಳ ದಿನಾಚರಣೆ
- c : ವಿಶ್ವ ಯೋಗ ದಿನಾಚರಣೆ
- d : ವಿಶ್ವ ನೀರು ದಿನಾಚರಣೆ
74. 'ಭಾರತದ ಕಬ್ಬಿಣದ ಮನುಷ್ಯ' ಎಂದು ಕರೆಯಲ್ಪಡುವವರು
- a : ಗೋವಿಂದ ವಲ್ಲಭ ಪಂತ್
- b : ಜವಾಹರ್‌ಲಾಲ್ ನೆಹರು
- c : ಸುಭಾಷ್ ಚಂದ್ರ ಬೋಸ್
- d : ಸರ್ದಾರ್ ವಲ್ಲಭಬಾಯ್ ಪಟೇಲ್
75. ರೇಖಾಗಣಿತದ ಪಿತಾಮಹ
- a : ಅರಿಸ್ಟಾಟಲ್
- b : ಪೈಥಾಗೊರಸ್
- c : ಕೆಪ್ಲರ್
- d : ಯೂಕ್ಲಿಡ್
76. ನಿತ್ಯ ಹಸಿರು ಕ್ರಾಂತಿಗೆ ಕರೆಕೊಟ್ಟವರೆಂದರೆ,
- a : ಎಂ.ಎಸ್. ಸ್ವಾಮಿನಾಥನ್
- b : ತ್ರಿಭುವನ್‌ದಾಸ್ ಪಾಟೀಲ್
- c : ವರ್ಗೀಸ್ ಕುರಿಯನ್
- d : ಹೆಚ್.ಎಂ. ಬಾಲಯ್ಯ
77. ಅಬಕಾರಿ ಸುಂಕವನ್ನು ತೆರಿಗೆಯಾಗಿ ವಿಧಿಸುವುದು
- a : ಆಮದು ಸರಕುಗಳ ಮೇಲೆ
- b : ರಫ್ತಾಗುವ ಸರಕುಗಳ ಮೇಲೆ
- c : ಸರಕುಗಳ ಉತ್ಪಾದನೆಯ ಮೇಲೆ
- d : ಸರಕುಗಳ ಮಾರಾಟದ ಮೇಲೆ
78. ಕೇಂದ್ರ ಬ್ಯಾಂಕಿಂಗ್ ಕಾರ್ಯಚಟುವಟಿಕೆಗಳನ್ನು ಭಾರತದಲ್ಲಿ ನಿರ್ವಹಿಸುವುದು
- a : ಭಾರತೀಯ ಸ್ಟೇಟ್ ಬ್ಯಾಂಕ್
- b : ಭಾರತೀಯ ಸ್ಟೇಟ್ ಬ್ಯಾಂಕ್
- c : ಭಾರತೀಯ ಸ್ಟೇಟ್ ಬ್ಯಾಂಕ್
- d : ಸೆಂಟ್ರಲ್ ಬ್ಯಾಂಕ್ ಆಫ್ ಇಂಡಿಯಾ
79. ಬ್ಯಾಂಕುಗಳು ತಮ್ಮಲ್ಲಿರುವ ಹಣ ಹಾಗೂ ಒಟ್ಟಾರೆ ಆಸ್ತಿಗಳ ನಡುವೆ ನಿರ್ದಿಷ್ಟ ಪ್ರಮಾಣದ ಅನುಪಾತವನ್ನು ಹೊಂದಿರಬೇಕು. ಇದನ್ನು______ಎನ್ನುವರು.
- a : ಸ್ಟ್ಯಾಚುಟರಿ ಲಿಕ್ವಿಡಿಟಿ ರೇಷಿಯೋ (ಶಾಸನಬದ್ಧ ದ್ರವ್ಯತೆ ಅನುಪಾತ)
- b : ಸೆಂಟ್ರಲ್ ಬ್ಯಾಂಕ್ ರಿಸರ್ವ್
- c : ರೆಪೋ ರೇಟ್
- d : ರಿವರ್ಸ್ ರೆಪೋ ರೇಟ್
80. ಭಾರತದಲ್ಲಿ ಹಣದುಬ್ಬರವನ್ನು ನಿರ್ಧರಿಸುವುದು
- a : ಸಗಟು ಮಾರಾಟ ಬೆಲೆ ಸೂಚ್ಯಂಕ
- b : ನಗರ ಕೌಶಲ್ಯರಹಿತ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ
- c : ಕೃಷಿ ಕಾರ್ಮಿಕರ ಗ್ರಾಹಕ ಬೆಲೆ ಸೂಚ್ಯಂಕ
- d : ರಾಷ್ಟ್ರೀಯ ಆದಾಯ
81. 2016 ರ ವಿಂಬಲ್ಡನ್ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ವಿಜೇತರಾದವರು
- a : ನಿಕೋಲಸ್ ಮಹಟ್
- b : ನೊವಾಕ್ ಜೊಕೋವಿಕ್
- c : ಮೈಲಾಸ್ ರೋನೀ
- d : ಆ್ಯಂಡಿ ಮರ್ರೆ
82. 2016 ರ ಸೆಪ್ಟೆಂಬರ್‌ನಲ್ಲಿ ನಡೆದ ಮೊದಲ BRICS ಆರೋಗ್ಯ - ಕಲ್ಯಾಣ ಕಾರ್ಯಾಗಾರವು ನಡೆದ ಸ್ಥಳ
- a : ದೆಹಲಿ
- b : ರಿಯೋ-ಡಿ-ಜುನೈರೋ
- c : ಬೀಜಿಂಗ್
- d : ಬೆಂಗಳೂರು
83. ಅದಾನಿ ಸಮೂಹ ಇತ್ತೀಚೆಗೆ ಕಾಮುತಿಯಲ್ಲಿ ಆರಂಭಿಸಿದ 648 ಮೆಗಾವ್ಯಾಟ್ ಸಾಮರ್ಥ್ಯದ ಕಾಮುತಿ ಸೋಲಾರ್ ಪವರ್ ಪ್ಲಾಂಟ್ ಇರುವ ರಾಜ್ಯ
- a : ಆಂಧ್ರಪ್ರದೇಶ
- b : ತಮಿಳುನಾಡು
- c : ಕೇರಳ
- d : ಅಸ್ಸಾಂ
84. ಇತ್ತೀಚೆಗೆ ಆರಂಭವಾದ “ಮುಖ್ಯಮಂತ್ರಿ ಸಾಂತ್ವನ ಹರೀಶ್” ಯೋಜನೆಯು ಮುಖ್ಯವಾಗಿ ಸಂಬಂಧಿಸಿರುವುದು
- a : ಬಿ.ಪಿ.ಎಲ್. ಕುಟುಂಬಗಳಿಗೆ ಉಚಿತ ಹಣಕಾಸು ಸಹಾಯ ನೀಡಲು
- b : ಉನ್ನತ ಶಿಕ್ಷಣಕ್ಕಾಗಿ ಉಚಿತ ಹಣಕಾಸು ಸಹಾಯ ನೀಡಲು
- c : ದೌರ್ಜನ್ಯಕ್ಕೊಳಗಾದವರಿಗೆ ಉಚಿತ ವೈದ್ಯಕೀಯ ಸೇವೆ ನೀಡಲು
- d : ರಸ್ತೆ ಅಪಘಾತಕ್ಕೊಳಗಾದವರಿಗೆ ಉಚಿತ ವೈದ್ಯಕೀಯ ಸಹಾಯ ನೀಡಲು
85. ಭಾರತೀಯ ವಿಜ್ಞಾನ ಸಂಸ್ಥೆ (IISC) ಇರುವುದು
- a : ಕೊಚ್ಚಿನ್
- b : ಬೆಂಗಳೂರು
- c : ಚೆನ್ನೈ
- d : ನವದೆಹಲಿ
86. ಆಲ್‌ಝೈಮರ್ (ಅರಳು-ಮರಳು) ಕಾಯಿಲೆಯು ಈ ಕೆಳಗಿನ ಒಂದಕ್ಕೆ ಸಂಬಂಧಿಸಿದೆ
- a : ಮೂತ್ರಜನಕಾಂಗ
- b : ಮೆದುಳು
- c : ಹೃದಯ
- d : ಪಿತ್ತಜನಕಾಂಗ
87. ರಕ್ತದಲ್ಲಿ ಹಿಮೊಗ್ಲೋಬಿನ್ ಕಾರ್ಯವು
- a : ಆಮ್ಲಜನಕ ರವಾನಿಸುವುದು
- b : ನೈಟ್ರೋಜನ್ (ಸಾರಜನಕ) ರವಾನಿಸುವುದು
- c : ರೋಗಗಳ ವಿರುದ್ಧ ರಕ್ಷಿಸುವುದು
- d : ಮೇದಸ್ಸಿನ ರವಾನೆ
88. ಡಿ.ಎನ್.ಎ. ಯ ರಚನೆಯನ್ನು ಮೊದಲು ವಿವರಿಸಿದವರು
- a : ಚಾರ್ಲ್ಸ್ ಡಾರ್ವಿನ್
- b : ಗ್ರೆಗೋರ್ ಮೆಂಡಲ್
- c : ಎಂ.ಎಸ್. ಸ್ವಾಮಿನಾಥನ್
- d : ವ್ಯಾಟ್ಸನ್ ಮತ್ತು ಕ್ರಿಕ್
89. ಈ ಕೆಳಗಿನ ಒಂದು ನೀರಿನಲ್ಲಿ ಕರಗುವ ವಿಟಮಿನ್
- a : ವಿಟಮಿನ್ 'A'
- b : ವಿಟಮಿನ್ 'C'
- c : ವಿಟಮಿನ್ 'D'
- d : ಟಮಿನ್ 'K'
90. ಮಾನವನ ದೇಹದಲ್ಲಿನ ಅತೀ ವಿಸ್ತಾರವಾದ ಅಂಗ
- a : ಪಿತ್ತಜನಕಾಂಗ
- b : ಮೆದುಳು
- c : ಚರ್ಮ
- d : ಹೃದಯ
91. BTO, DSQ, FRS, HQU ನಂತರದ ಶ್ರೇಣಿ
- a : IPX
- b : JPW
- c : GPW
- d : JRW
92. ಮುಂಬೈಗೆ ಪ್ರತಿ 5 ಗಂಟೆಗಳಿಗೊಮ್ಮೆ ವಿಮಾನ ಸೌಲಭ್ಯವಿದೆ. ಕೊನೆಯ ವಿಮಾನವು ಮುಂಬೈಗೆ 25 ನಿಮಿಷ ಮುಂಚೆ ಹೊರಟಿದೆ ಎಂದಾದರೆ, ಪ್ರಸ್ತುತ ಸಮಯವು ಬೆಳಿಗ್ಗೆ 10.45 ಆಗಿರುತ್ತದೆ. ಹಾಗಾದರೆ ಮುಂಬೈಗಿರುವ ಮುಂದಿನ ವಿಮಾನದ ವೇಳೆ
- a : 2 : 20 PM
- b : 3 : 30 AM
- c : 3 : 55 PM
- d : 3 : 20 PM
93. A, B ಮತ್ತು C ಒಂದು ವ್ಯವಹಾರವನ್ನು ಆರಂಭಿಸುತ್ತಾರೆ. B ಯ ಬಂಡವಾಳವು A ನ ಬಂಡವಾಳಕ್ಕಿಂತ ಮೂರು ಪಟ್ಟು ಹಾಗೂ C ನ ಬಂಡವಾಳದ ಅರ್ಧದಷ್ಟಿರುತ್ತದೆ. ವರ್ಷದ ಅಂತ್ಯದಲ್ಲಿನ ಲಾಭವು 25,000 ರೂ.ಗಳಾದರೆ, C ಯ ಲಾಭದ ಪಾಲು ಎಷ್ಟಿದೆ ?
- a : 7,500
- b : 2,500
- c : 15,000
- d : 10,000
94. ಮೂವತ್ತೊಂಬತ್ತು ಜನರು 12 ದಿನಗಳಲ್ಲಿ ದಿನಕ್ಕೆ 5 ಗಂಟೆಯಂತೆ ಕೆಲಸ ಮಾಡಿ ಒಂದು ರಸ್ತೆಯನ್ನು ರಿಪೇರಿ ಮಾಡುತ್ತಾರೆ. ಆದರೆ ಮೂವತ್ತು ಜನರು ಅದೇ ರಸ್ತೆಯ ಕೆಲಸವನ್ನು ದಿನಕ್ಕೆ 6 ಗಂಟೆಯಂತೆ ಮಾಡಿದರೆ ಬೇಕಾಗುವ ದಿನಗಳು
- a : ಹತ್ತು ದಿನಗಳು
- b : ಹದಿಮೂರು ದಿನಗಳು
- c : ಹದಿನಾಲ್ಕು ದಿನಗಳು
- d : ಹದಿನೈದು ದಿನಗಳು
95. ಕೊಟ್ಟಿರುವ ಹೇಳಿಕೆಗಳಿಗೆ, ಈ ಕೆಳಗಿನ ಯಾವ ಉಪಸಂಹಾರ ಸರಿಯಾದುದು ? [ಹೇಳಿಕೆಗಳು]- ಎಲ್ಲಾ ಹಾರ್ಮೋನಿಯಮ್‌ಗಳು ಉಪಕರಣಗಳು ಎಲ್ಲಾ ಉಪಕರಣಗಳು ಕೊಳಲುಗಳು [ಉಪಸಂಹಾರ]- 1. ಎಲ್ಲಾ ಕೊಳಲುಗಳು ಉಪಕರಣಗಳು 2. ಎಲ್ಲಾ ಹಾರ್ಮೋನಿಯಮ್ಗಳು ಕೊಳಲುಗಳು
- a : 1 ಮಾತ್ರ ಸರಿಯಾದುದು
- b : 2 ಮಾತ್ರ ಸರಿಯಾದುದು
- c : 1 ಮತ್ತು 2 ಸರಿಯಾದವು
- d : ಮೇಲಿನ ಯಾವುದೂ ಅಲ್ಲ
96. ಕೆಳಗಿನ ಸಂವಿಧಾನದ ಕಲಮುಗಳಲ್ಲಿ ಸಂವಿಧಾನದ ಯಾವ ಕಲಮು ಅಂತರ್‌ರಾಜ್ಯ ಜಲವಿವಾದದ ನ್ಯಾಯ ನಿರ್ಣಯಕ್ಕೆ ಸಹಕರಿಸುತ್ತದೆ?
- a : 262
- b : 312
- c : 51 (A)
- d : 226
97. ಕೆಳಗಿನ ಯಾವುದು ಭಾರತದ ಪ್ರಜೆಗಳ ಮೂಲಭೂತ ಹಕ್ಕಲ್ಲ ?
- a : ಸಮಾನತೆಯ ಹಕ್ಕು
- b : ಧಾರ್ಮಿಕ ಸ್ವಾತಂತ್ರ್ಯದ ಹಕ್ಕು
- c : ಶೋಷಣೆಯ ವಿರುದ್ಧದ ಹಕ್ಕು
- d : ಉಚಿತ ಕಾನೂನು ನೆರವಿನ ಹಕ್ಕು
98. ರಾಜ್ಯವಿಧಾನಸಭೆಯ ಶಾಸಕನು ತನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸುವ ಇಚ್ಛೆಯಿದ್ದರೆ, ತನ್ನ ರಾಜೀನಾಮೆಯನ್ನು ಈ ಕೆಳಗಿನವರಿಗೆ ಸಲ್ಲಿಸಬೇಕು ?
- a : ವಿಧಾನಸಭೆಯ ಸ್ಪೀಕರ್ (ಸಭಾಪತಿ)
- b : ಜಿಲ್ಲಾಧಿಕಾರಿಯವರು
- c : ಮುಖ್ಯಮಂತ್ರಿಗಳು
- d : ವಿಧಾನಪರಿಷತ್ತಿನ ಸಭಾಪತಿಗಳು
99. ಸಂವಿಧಾನದ 359 ನೇ ವಿಧಿಯು ರಾಷ್ಟ್ರಪತಿಯವರಿಗೆ ಕೆಳಗಿನ ಯಾವ ಸಂದರ್ಭದಲ್ಲಿ ಯಾವುದೇ ನ್ಯಾಯಾಲಯದಲ್ಲಿ ಮೂಲಭೂತ ಹಕ್ಕು ಚ್ಯುತಿ ಮಂಡಿಸದಂತೆ ತಡೆಯಲು ಸವಲತ್ತು ನೀಡಿದೆ ?
- a : ರಾಷ್ಟ್ರೀಯ ತುರ್ತುಪರಿಸ್ಥಿತಿ
- b : ಆರ್ಥಿಕ ತುರ್ತುಪರಿಸ್ಥಿತಿ
- c : ರಾಜ್ಯಗಳಲ್ಲಿ ಸಂವಿಧಾನಾತ್ಮಕ ಅಂಗಗಳ ವೈಫಲ್ಯ
- d : ಮೇಲಿನ ಯಾವುದೂ ಅಲ್ಲ
100. ಭಾರತದ ಯಾವ ಒಂದು ರಾಜ್ಯ ತನ್ನದೇ ಆದ ಸಂವಿಧಾನವನ್ನು ಹೊಂದಿರುತ್ತದೆ ?
- a : ನಾಗಾಲ್ಯಾಂಡ್
- b : ಗೋವಾ
- c : ಜಮ್ಮು ಮತ್ತು ಕಾಶ್ಮೀರ
- d : ಸಿಕ್ಕಿಂ
No comments:
Post a Comment
If you have any doubts please let me know