Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Sunday 19 June 2022

ಕದಡಿದ ಸಲಿಲಂ ತಿಳಿವಂದದೆ ಸಂಪೂರ್ಣ ನೋಟ್ಸ್: Kadadida Salilam Tilivandade Complete Notes in Kannada

ಕದಡಿದ ಸಲಿಲಂ ತಿಳಿವಂದದೆ


ಕವಿ ಪರಿಚಯ:

'ಅಭಿನವ ಪಂಪ' ಎಂದೇ ಖ್ಯಾತನಾಗಿರುವ ನಾಗಚಂದ್ರನು ಹನ್ನೊಂದು ಹನ್ನೆರಡನೆಯ ಶತಮಾನದ ಕಾಲಮಾನದಲ್ಲಿ ಜೀವಿಸಿದ್ದನು. ಇಂದಿನ ವಿಜಯಪುರ (ಬಿಜಾಪುರ) ಈತನ ಸ್ಥಳ, ಬಾಲಚಂದ್ರ ಮೇಘಚಂದ್ರಯತಿಗಳು ನಾಗಚಂದ್ರನ ಗುರುಗಳು. ಈತ ಹತ್ತೊಂಬತ್ತನೆಯ ತೀರ್ಥಂಕರನಾದ ಮಲ್ಲಿನಾಥನ ಕಥೆಯನ್ನು 'ಮಲ್ಲಿನಾಥ ಪುರಾಣ' ದಲ್ಲಿ ಹೇಳಿರುವನು.

ನಾಗಚಂದ್ರನಿಗೆ ಅಪಾರ ಕೀರ್ತಿ ತಂದಿತ್ತ 'ರಾಮಚಂದ್ರ ಚರಿತ ಪುರಾಣ'ವು 'ಪಂಪರಾಮಾಯಣ'ವೆಂದೇ ಖ್ಯಾತವಾಗಿದೆ. ಪಂಪನಂತೆಯೇ ಲೌಕಿಕ- ಲೌಕಿಕ ಮಾರ್ಗದಲ್ಲಿ ಕಾವ್ಯರಚನೆ ಮಾಡಿರುವ ನಾಗಚಂದ್ರನಿಗೆ  ಭಾರತೀಕರ್ಣಪೂರ, ಕವಿತಾಮನೋಹರ, ಸಾಹಿತ್ಯವಿದ್ಯಾಧರ, ಚತುರಕವಿ, ಜನಸ್ಥಾನರತ್ನ ಪ್ರದೀಪ, ಸೂಕ್ತಿಮುಕ್ತಾವಸಂತ–ಇತ್ಯಾದಿ ಬಿರುದುಗಳಿದ್ದವು. ಪ್ರಸ್ತುತ 'ಕದಡಿದ ಸಲಿಲಂ ತಿಳಿವಂದದೆ' ಎಂಬ ಕಾವ್ಯ ಭಾಗವನ್ನು ನಾಗಚಂದ್ರ ಕವಿಯ 'ರಾಮಚಂದ್ರಚರಿತ ಪುರಾಣ'bದಿಂದ ಆಯ್ದುಕೊಳ್ಳಲಾಗಿದೆ.

'ಕದಡಿದ ಸಲಿಲಂ ತಿಳಿವಂದದೆ' ಕಾವ್ಯಭಾಗದ ಹಿನ್ನೆಲೆ:


ಸೀತೆಯನ್ನು ಅಪಹರಿಸಿದ ರಾವಣನು ಅವಳನ್ನು ತನ್ನ ಪ್ರೇಮದವನದಲ್ಲಿ ಇರಿಸಿರುತ್ತಾನೆ. ಮೂಲತಃ ಒಳ್ಳೆಯ ಗುಣಗಳ ಗಣಿಯಾದ ರಾವಣನು ವಿಧಿನಿಯಮದಂತೆ ಸೀತೆಯಲ್ಲಿ ವ್ಯಾಮೋಹವನ್ನು ತಾಳಿ ಅವಳನ್ನು ಅಪಹರಿಸಿರುತ್ತಾನೆ. ಸೀತೆ ಮಾತ್ರ ರಾವಣನಿಗೆ ಸೋಲದೆ ಸ್ಥಿರಚಿತ್ತೆಯಾಗಿದ್ದಾಳೆ. ಏನು ಮಾಡಿದರೂ ಸೀತೆಯನ್ನು ಒಲಿಸಿಕೊಳ್ಳಲು ರಾವಣನಿಗೆ ಅಸಾಧ್ಯವಾಗುತ್ತದೆ. ಇಷ್ಟರಲ್ಲಿ ರಾಮಸೈನ್ಯವು ಲಂಕೆಯನ್ನು ಮುತ್ತಿ ಯುದ್ಧಾರಂಭವಾಗುತ್ತದೆ. ರಾವಣನು ಯುದ್ಧದಲ್ಲಿ ಜಯಗಳಿಸಿಕೊಳ್ಳಲು 'ಬಹುರೂಪಿಣೀ ವಿದ್ಯೆ'ಯ ಮೊರೆಹೊಗುತ್ತಾನೆ. ಯುದ್ಧಕ್ಕೆ ತೆರಳುವ ಮುನ್ನ ಸೀತೆಯ ಭೇಟಿಗೆ ಪ್ರಮದವನಕ್ಕೆ ಬಂದಾಗ, ಸೀತೆ ಅವನನ್ನು ತೃಣಸಮಾನವಾಗಿ ಕಾಣುತ್ತಾಳೆ. ಮೂರ್ಛೆ ಹೋಗಿರುವ ಸೀತೆಯನ್ನು ಕಂಡಾಗ ರಾವಣನ ಮನಸ್ಸು ದುರ್ಮೊಹದಿಂದ ಬಿಡುಗಡೆಗೊಂಡು ಪರಿವರ್ತಿತವಾಗುತ್ತದೆ. ವಿರಕ್ತಿಯಿಂದ ಅವನು ಯುದ್ಧಾನಂತರ ಸೀತೆಯನ್ನು ರಾಮನಿಗೊಪ್ಪಿಸುವ ನಿರ್ಧಾರಕ್ಕೆ ಬರುತ್ತಾನೆ. ರಾವಣನು ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಳ್ಳುವ ಸಂದರ್ಭದಿಂದ ಈ ಪದ್ಯಭಾಗವು ಆರಂಭಗೊಳ್ಳುತ್ತದೆ.

ಕಾವ್ಯಭಾಗದ ಸಾರಾಂಶ ಮತ್ತು ವಿಮರ್ಶೆ:

ರಾವಣನು ರಾಮ ಸೈನ್ಯದ  ಮೇಲೆ ಯುದ್ಧಕ್ಕೆ ತೆರಳುವ ಮುನ್ನ ಶಾಂತಿಜಿನಭವನ್ನು ಪ್ರವೇಶಿಸಿ ಬಹುರೂಪಿಣಿ ವಿದ್ಯೆಯನ್ನು ಒಲಿಸಿಕೊಳ್ಳಲು ಪ್ರಾರ್ಥಿಸುವ ಸಂದರ್ಭ ಇದಾಗಿದೆ.

ವಚನ: ರಾವಣಂ ಧ್ರುವಮಂಡಲದಂತೆ ಚಲಿಯಿಸದೆ ಚಿತ್ತನಿರೋಧಂಗೆಯ್ದು ದಿವ್ಯಮಂತ್ರದಿಂ ವಿದ್ಯೆಯಂ ಸಾಧಿಸುವುದುಂ

ಮನಸ್ಸು ಪ್ರಕ್ಷುಬ್ಧಗೊಂಡಿದ್ದರೂ ರಾವಣನು ಧ್ರುವಮಂಡಲದಂತೆ ಚಲಿಸದೆ ಸ್ಥಿರವಾಗಿ ಕುಳಿತು ಮನಸ್ಸನ್ನು ನಿಯಂತ್ರಿಸಿಕೊಂಡು ದಿವ್ಯಮಂತ್ರಗಳಿಂದ ವಿದ್ಯೆಯನ್ನು ಒಲಿಸಿಕೊಂಡನು.

ಶಬ್ದಾರ್ಥ: 

  • ಚಿತ್ತನಿರೋಧ-ಮನಸ್ಸನ್ನು ನಿಗ್ರಹಿಸುವುದು.

೧) ಪೊಸಗಾರ ಸಿಡಿಲ ಮಸಕಮ
ನಸಕಟೆದು ಕೃತಾಂತಜಿಹೈ ಪೊಡಕರಿಸುವವೋಲ್
ಬೆಸಸು ಬೆಸಸೆಂದು ಕರಮ
ರ್ವಿಸಿ ಸನ್ನಿಧವಾಯ್ತು ವಿದ್ಯೆ ರಾವಣನಿದಿರೊಳ್

ರಾವಣನ ಎದುರು ಬಹುರೂಪಿಣಿ ದೇವತೆಯು ಪ್ರತ್ಯಕ್ಷವಾದ ಬಗೆಯನ್ನು ಕವಿ ಈ ಪದ್ಯದಲ್ಲಿ ಚಿತ್ರಿಸಿದ್ದಾನೆ. ಇದ್ದಕ್ಕಿದ್ದಂತೆ ಗಗನದಲ್ಲಿ ದರ್ಶನಗೊಳ್ಳುವ ಮುಂಗಾರಿನ ಸಿಡಿಲಿನಂತೆ ವಿದ್ಯಾದೇವತೆಯು ರಾವಣನ ಎದುರಿಗೆ ಪ್ರತ್ಯಕ್ಷವಾಗಿ, ಯಮನ ನಾಲಗೆಯೇ ನುಡಿಯುತ್ತಿದೆಯೇನೋ ಎಂಬಂತೆ, ರಾವಣನನ್ನು ಉದ್ದೇಶಿಸಿ “ಬೆಸಸು ಬೆಸಸು” ಎಂದು ಕೇಳಿತು.

ಶಬ್ದಾರ್ಥ: 

  • ಪೊಸಗಾರ-ಮುಂಗಾರು ಮಳೆಯ; 
  • ಮಸಕ-ಆವೇಶ ಮತ್ತು ಆರ್ಭಟಗಳು; 
  • ಅಸಕಟೆ-ಮೀರು; 
  • ಕೃತಾಂತ-ಯಮ; 
  • ಕೃತಾಂತಜಿಹ್ನೆ-ಯಮನ ನಾಲಗೆ; 
  • ಪೊಡಕರಿಸು-ಚಲಿಸು, ಅಲ್ಲಾಡು, ಸ್ಪುರಿಸು, ಕಾಣು; 
  • ಬೆಸಸು- ಆಜ್ಞಾಪಿಸು; 
  • ಕರಂ-ಕೈಯನ್ನು 
  • ಅರ್ವಿಸಿ-ವ್ಯಾಪಿಸಿ, ಹರಡಿ, ಚಾಚಿ; 
  • ಸನ್ನಿದ- ಸಮೀಪ, ಪ್ರತ್ಯಕ್ಷ; 
  • ಸನ್ನಿಧವಾಯ್ತು-ಸಮೀಪಿಸಿತು.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads