Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Saturday, 25 June 2022

ದುರ್ಯೋಧನ ವಿಲಾಪ ಪ್ರಥಮ ಪಿಯುಸಿ ಕನ್ನಡ ಪಾಠದ ನೋಟ್ಸ್ Duryodhana Vilapa Karnataka PUC 1st Year Kannada Notes

ದುರ್ಯೋಧನ ವಿಲಾಪ ಪ್ರಥಮ ಪಿಯುಸಿ ಕನ್ನಡ ಪಾಠದ ನೋಟ್ಸ್  -Duryodhana Vilapa Karnataka PUC 1st Year Kannada Notes

ದುರ್ಯೋಧನ ವಿಲಾಪ ಪ್ರಥಮ ಪಿಯುಸಿ ಕನ್ನಡ ಪಾಠದ ನೋಟ್ಸ್ Duryodhana Vilapa Karnataka PUC 1st Year Kannada Notes


ದುರ್ಯೋಧನ ವಿಲಾಪ ಪ್ರಥಮ ಪಿಯುಸಿ ಕನ್ನಡ ಪಾಠದ ನೋಟ್ಸ್ Duryodhana Vilapa Karnataka PUC 1st Year Kannada Notes: ಕವಿ, ಕಾವ್ಯ – ಪರಿಚಯ : 

ರತ್ನತ್ರಯ ರನ್ನ (೯೪೯) ನ ಪರಿಚಯ :

‘ರನ್ನ' ರತ್ನತ್ರಯರಲ್ಲೊಬ್ಬನು. ರನ್ನನ ಜನ್ಮಸ್ಥಳ ಬಾಗಲಕೋಟೆ ಜಿಲ್ಲೆಯ ಮುದುವೊಳಲು (ಮುಧೋಳ), ಈತನ ತಂದೆ ಜಿನವಲ್ಲಭ, ತಾಯಿ ಅಬ್ಬಲಬ್ಬೆ. ಬಳೆಗಾರ ವೃತ್ತಿಯ ಮನೆತನದ ಇವನು ತೀವ್ರ ವಿದ್ಯಾಕಾಂಕ್ಷೆಯ ತುಡಿತದಿಂದ ಶ್ರವಣಬೆಳಗೊಳದಲ್ಲಿ ತಾತ್ಕಾಲಿಕವಾಗಿ ನೆಲೆ ನಿಲ್ಲುತ್ತಾನೆ .


“ದಾನವಚಿಂತಾಮಣಿ” ಬಿರುದಾಂಕಿತ ಅತ್ತಿಮಬ್ಬೆಯ ಪ್ರೋತ್ಸಾಹ ದೊರಕಿತು. ಅಜಿತಸೇನಾಚಾರ್ಯರಿಂದ ವಿದ್ಯೆ ಸಂಪಾದಿಸಿದನು. ಮೊದಲು ಗಂಗರ ಮಂತ್ರಿ ಚಾವುಂಡರಾಯನ ಆಶ್ರಯ ಪಡೆಯುತ್ತಾನೆ. ಗಂಗರ ಪತನಾನಂತರ ಚಾಲುಕ್ಯದೊರೆ ತೈಲಪ ಹಾಗೂ ಸತ್ಯಾಶ್ರಯ ಇವಬೆಡಂಗ ( ಬದ್ದೆಗ) ನ ಆಸ್ಥಾನ ಕವಿಯಾಗಿದ್ದನು.

'ಅಜಿತ ತೀರ್ಥಂಕರ ಪುರಾಣ' ಮತ್ತು 'ಸಾಹಸಭೀಮವಿಜಯಂ' ಇವನ ಉಪಲಬ್ದ ಕಾವ್ಯಗಳು, ಚಂಪೂ ಶೈಲಿಯ ಕೃತಿಗಳಲ್ಲೊಂದಾದ ‘ಸಾಹಸಭೀಮ ವಿಜಯಂ’ ನಲ್ಲಿ ರನ್ನನು, ಪಂಪ ಕವಿಯು ಅರಿಕೇಸರಿಯನ್ನು ಸಮೀಕರಿಸಿ ಕಾವ್ಯ ರಚಿಸಿದಂತೆ, ‘ಸಾಹಸಭೀಮ' ಬಿರುದಾಂಕಿತ ರಿವಬೆಡಂಗ ಸತ್ಯಾಶ್ರಯನನ್ನು ಭೀಮನೊಂದಿಗೆ ಸಮೀಕರಿಸಿದ್ದಾನೆ. ಮಹಾಭಾರತದ ಕುರುಕ್ಷೇತ್ರ ಯುದ್ಧದ ದೃಶ್ಯವೇ ಮುಖ್ಯ ಕಥಾವಸ್ತುವಾದರೂ, ಇಡೀ ಮಹಾಭಾರತವನ್ನು ಸಿಂಹಾವಲೋಕನ ಕ್ರಮದಲ್ಲಿ ನಿರೂಪಿಸಿದ್ದಾನೆ. ಇವನ ಇಡೀ ಕಾವ್ಯದಲ್ಲಿ ನಾಟಕೀಯ ಶೈಲಿಯನ್ನು ಕಾಣಬಹುದು.

ದುರ್ಯೋಧನ ವಿಲಾಪ ಪ್ರಥಮ ಪಿಯುಸಿ ಕನ್ನಡ ಪಾಠದ ನೋಟ್ಸ್ Duryodhana Vilapa Karnataka PUC 1st Year Kannada Notes: ಕಾವ್ಯ ಭಾಗದ ಪರಿಚಯ:

ಮಹಾಭಾರತ ಯುದ್ಧದಲ್ಲಿ ತನ್ನವರೆಲ್ಲರನ್ನೂ ಕಳೆದುಕೊಂಡ ದುರ್ಯೋಧನನು ಯುದ್ಧಭೂಮಿಯಲ್ಲಿ ಶರಶಯ್ಯೆಯಲ್ಲಿದ್ದ ತಾತ ಭೀಷ್ಮನನ್ನು ಭೇಟಿ ಮಾಡಲು ಸಂಜಯನೊಡನೆ ಬರುತ್ತಾನೆ . ಸತ್ತು ಬಿದ್ದಿರುವ ವೈರಿಪಕ್ಷದ ವೀರ ಅಭಿಮನ್ಯುವನ್ನು ಪ್ರಶಂಸಿಸುವ ಅವನ ಮನೋಧರ್ಮ ಮೆಚ್ಚತಕ್ಕದ್ದಾಗಿದೆ. ಗುರು ದ್ರೋಣ, ತಮ್ಮ ದುಶ್ಯಾಸನ, ಮಗ ಲಕ್ಷಣಕುಮಾರ ಮತ್ತು ಪ್ರಾಣ ಸ್ನೇಹಿತ ಕರ್ಣರ ಕಳೇಬರಗಳನ್ನು ಕಂಡು ದುರ್ಯೊಧನ ಪಡುವ ದುಃಖ ದುಮ್ಮಾನ ಹಾಗೂ ಪ್ರಲಾಪಗಳು ಪ್ರಸ್ತುತ ಕಾವ್ಯ ಭಾಗದಲ್ಲಿ ಕರುಳು ಮಿಡಿಯುವಂತೆ ಚಿತ್ರಿತವಾಗಿವೆ .

ದುರ್ಯೋಧನ ವಿಲಾಪ ಪ್ರಥಮ ಪಿಯುಸಿ ಕನ್ನಡ ಪಾಠದ ನೋಟ್ಸ್ Duryodhana Vilapa Karnataka PUC 1st Year Kannada Notes: ಕಾವ್ಯಭಾಗದ ಹಿನ್ನೆಲೆ:

ರನ್ನ ಕವಿ ಬರೆದಿರುವ ‘ಗದಾಯುದ್ಧ' ಅಥವಾ ‘ಸಾಹಸ ಭೀಮ ವಿಜಯಂ' ಎಂಬ ಚಂಪೂ ಕಾವ್ಯದಿಂದ ‘ದುರ್ಯೋಧನ ವಿಲಾಪ' ಎಂಬ ಕಾವ್ಯಭಾಗವನ್ನು ಆರಿಸಲಾಗಿದೆ. ವಿಲಾಪ ಎಂದರೆ ಶೋಕ–ದುಃಖ ಎಂದರ್ಥ. ದುರ್ಯೋಧನ ಕುರುಕ್ಷೇತ್ರದ ಯುದ್ಧದಲ್ಲಿ ತನ್ನ ಹತ್ತಿರದ ಬಂಧು – ಬಾಂಧವರೆಲ್ಲರನ್ನು ಕಳೆದುಕೊಂಡು ಅಸಹಾಯಕ ದುಃಸ್ಥಿತಿಯಲ್ಲಿರುವಾಗ ಧೃತರಾಷ್ಟ್ರನ ಸಲಹೆಯಂತೆ ಭೀಷ್ಮಾಚಾರರನ್ನು ನೋಡಲೆಂದು ಹೊರಟನು.


ದಾರಿಯಲ್ಲಿ ಅವನು ಸ್ಮಶಾನ ಸದೃಶವಾದ ರಣರಂಗವನ್ನು ದಾಟಬೇಕಾಯಿತು. ಆ ಸಂದರ್ಭದಲ್ಲಿ ಕೌರವನು ದ್ರೋಣ, ಅಭಿಮನ್ಯು, ಲಕ್ಷಣಕುಮಾರ, ದುಶ್ಯಾಸನ ಹಾಗೂ ಕರ್ಣರ ದೇಹಗಳನ್ನು ನೋಡಿ ದುಃಖತಪ್ತನಾಗುತ್ತಾನೆ. ಆಗ ಕೌರವನ ಹೃದಯದಿಂದ ಹೊರಟ ಮಾತುಗಳು ಈ ಪದ್ಯಭಾಗದಲ್ಲಿವೆ. ದುರ್ಯೋಧನನಿಗೆ ಕರ್ಣನ ಮೇಲಿದ್ದ ಸ್ನೇಹ ಮತ್ತು ಕರ್ಣನ ನಿಧನದಿಂದ ಅವನು ಮಾನಸಿಕವಾಗಿ ಅನುಭವಿಸುತ್ತಿದ್ದ ಶೋಕ ಇಲ್ಲಿ ವ್ಯಕ್ತವಾಗಿದೆ .

ದುರ್ಯೋಧನ ವಿಲಾಪ ಪ್ರಥಮ ಪಿಯುಸಿ ಕನ್ನಡ ಪಾಠದ ನೋಟ್ಸ್ Duryodhana Vilapa Karnataka PUC 1st Year Kannada Notes: ಪದ್ಯಗಳ ವಿಮರ್ಶೆ ಅಥವಾ ಸಾರಾಂಶ, ಶಬ್ದಗಳ ಅರ್ಥ :

ದುರ್ಯೋಧನನು ತನ್ನ ಸಮಸ್ತ ಬಂಧುಬಾಂಧವರನ್ನು ಕಳೆದುಕೊಂಡ ನಂತರವೂ ಯುದ್ಧವನ್ನು ಮುಂದುವರೆಸಿ , ತನ್ನ ಸೇಡನ್ನು ಪೂರೈಸಿಕೊಳ್ಳುವ ಸಲುವಾಗಿ ಯುದ್ಧೋತ್ಸಾಹವನ್ನು ಉಳಿಸಿಕೊಂಡಿದ್ದನು. ಯುದ್ಧದಲ್ಲಿ ತನ್ನ ಮುಂದಿನ ನಡೆ ಹೇಗೆಂಬುದನ್ನು ಶರಶಯ್ಕೆಯಲ್ಲಿ ಮಲಗಿದ್ದ ಭೀಷ್ಮಾಚಾರರೊಡನೆ ಸಮಾಲೋಚಿಸಿ ತೀರ್ಮಾನಿಸಲು ಅವರಿದ್ದಲ್ಲಿಗೆ ಹೊರಡುತ್ತಾನೆ. ಆಗ ರಣರಂಗದಲ್ಲಿ ಹೋರಾಡಿ ಮಡಿದ ಬಂಧುಮಿತ್ರರ ಶವಗಳನ್ನು ಕಂಡಾಗ ಅವನ ದುಃಖ ಮಡುಗಟ್ಟಿ ನಿಲ್ಲುವುದನ್ನು ಕವಿ ಅತಿ ಸುಂದರವಾಗಿ ಇಲ್ಲಿ ವಿಮರ್ಶೆಯನ್ನು ಮಾಡಿದ್ದಾನೆ.

ಉಡಿದಿರ್ದ ಕಯ್ದು ನೆತ್ತರ

ಕಡಲೊಳಗಡಿಗಡಿಗೆ ತಳಮನುರ್ಚುತ್ತಿರ ಕಾ

ಲಿಡಲೆಡವಡೆಯದೆ ಕುರುಪತಿ

ದಡಿಗವೆಣಂಗಳನೆ ಮೆಟ್ಟಿ ಮೆಲ್ಲನೆ ನಡೆದಂ

ಶಬ್ದಾರ್ಥ:

  • ಉಡಿದಿರ್ಧ – ಮುರಿದ
  • ಕೈದು – ಆಯುಧ
  • ತಳ -ಪಾದ
  • ಉರ್ಚು – ಚುಚ್ಚು
  • ದಡಿಗವನ ( ದಡಿಗ + ಪಣ) ಭಾರಿ ಹಣ
  • ವೆಣ – ಹೆಣ

ಕವಿಯು ದುರ್ಯೋಧನನು ರಣರಂಗಕ್ಕೆ ಕಾಲಿಟ್ಟ ಸಂದರ್ಭವನ್ನು ಇಲ್ಲಿ ವಿವರಿಸಿದ್ದಾನೆ . ಲಕ್ಷ ಲಕ್ಷ ಜೀವಹಾನಿಯ ಪರಿಣಾಮದಿಂದ ರಕ್ತದ ಸಮುದ್ರದ ಕೊಡಿಯೇ ಅಲ್ಲಿ ಹರಿದಿತ್ತು . ಆ ರುಧಿರ ಕಡಲಿನಲ್ಲಿ ಯೋಧರ ಆಯುಧಗಳೆಲ್ಲ ಮುರಿದು ಚೆಲ್ಲಾಪಿಲ್ಲಿಯಾಗಿ ಬಿದ್ದಿದ್ದವು. ಕೌರವೇಶ್ವರನು ಆ ನೆಲದಲ್ಲಿ ಮುಗಿದು ಬಿದ್ದು ಹೂಳುಹೋಗಿರುವ ಆಯುಧಗಳ ಮೇಲೆಯೇ ಪಾದಗಳನ್ನು ನಡೆಯಬೇಕಾಯಿತು. ಇದರಿಂದ ಕೌರವೇಶ್ವರನ ಪಾದಗಳಿಗೆ ನೋವಾಯಿತಂತ , ಪಾದ ಊರಲು ಸ್ಥಳವಿಲ್ಲದೆ ಅಲ್ಲಿ ಬಿದ್ದಿದ ಬಿದ್ದಿದ್ದವು . ಭಾರಿ ಹೆಣಗಳ ಮೇಲೆ ಕಾಲಿಟ್ಟು ಮೆಲ್ಲನೆ ಬೀಳದಂತೆ ನಡೆಯುವಂತಾಯಿತು ಎಂದು ಕವಿ ವಿವರಿಸಿದ್ದಾನೆ.


ಇಬಶೈಲಂಗಳವೇಟೆಯೇಹಿ ರುಧಿರಸೋತಂಗಳು ದಾಂ

ಟಿಭದೋರ್ನಿಲಪಾಪ್ರತಾನ ವಿಪಿನವಾತಂಗಳೊಳ್ ಸಿಲ್ಕಿ ಸಿ

ಲ್ಕಿ ಭರಂಗೆಯುಂದೆಯ್ಲಿ ಸಂಜಯಶಿರಸಂಭಾವಲಂಬಂ ಕುರು

ಪ್ರಭು ಕಂಡಂ ಶರಚಾಲಜರ್ಜರಿತಗಾತ್ರತ್ರಾಣನಂ ದ್ರೋಣನಂ


ಶಬ್ದಾರ್ಥ:

  • ಇಭ – ಆನೆ
  • ಶೈಲ – ಬೆಟ್ಟ
  • ರುಧಿರ – ರಕ್ತ
  • ಸ್ರೋತ – ನದಿ
  • ಇಭದೋ- ಸೊಂಡಿಲು
  • ನೀಲಲತಾ- ಕಪ್ಪು ಬಳ್ಳಿಗಳು
  • ವ್ರಾತ – ಗುಂಪು, ಸಮೂಹ
  • ಪ್ರತಾನ– ಗುಂಪು, ಸಮೂಹ
  • ಭರಂಗೆಯ್ದು – ವೇಗವಾಗಿ, ಆತುರಾತುರನಾಗಿ
  • ಉಱದೆ- ಲೆಕ್ಕಿಸದೆ
  • ಗಾತ್ರತ್ರಾಣ – ದೇಹರಕ್ಷಿಸುವ ಕವಚ
  • ಗಾತ್ರ –ದೇಹ

ಪದ್ಯದ ಸಾರಾಂಶ

ಹೆಣಗಳ ಮೇಲೆ ಕಾಲಿಟ್ಟು ನಡೆಯುತ್ತಿರುವ ಕೌರವೇಶ್ವರನ ಸ್ಥಿತಿಯನ್ನು ಕಂಡು ಅವನೊಡನಿದ್ದ ಸಂಜಯ ಕಣ್ಣೀರು ಗರೆದನು . ತನುಜಾನುಜರ ವಿಯೋಗದಿಂದ ನೊಂದು ನೊಂದು ಮುಂದೆ ಸಾಗುವಾಗ ದುರ್ಯೋಧನನು ತನ್ನ ಗುರುವಾದ ದ್ರೋಣರ ಶವವನ್ನು ಎದಿರುಗೊಳ್ಳುವ ಸಂದರ್ಭವನ್ನು ಕವಿ ಈ ಪದ್ಯದಲ್ಲಿ ವಿವರಿಸಿದ್ದಾನೆ. ದುರ್ಯೋಧನನು ರಣರಂಗದಲ್ಲಿ ಸತ್ತು ಬಿದ್ದಿದ್ದ ದೊಡ್ಡ ದೊಡ್ಡ ಅನಗಳ ಪರ್ವಹದಂತಹ ದೇಹವನ್ನು ಏರಿ ಏರಿ, ಹರಿಯುತ್ತಿರುವ ರಕ್ತದ ಕಾಲುವೆಯನ್ನು ದಾಟಿ ದಾಟಿ ಮುಂದುವರೆಯುತ್ತಿದ್ದರು .

ಆ ಸಂದರ್ಭದಲ್ಲಿ ದಟ್ಟವಾದ ಕಾಡಿನಲ್ಲಿ ಇಳಿಬಿದ್ದಿರುವ ಕಪ್ಪುಬಳ್ಳಿಗಳಂತೆ ಚಾಚಿಕೊಂಡಿದ್ದ ಆನೆಗಳ ಸೊಂಡಿಲುಗಳನ್ನು ಎಡವಿದ್ದರಿಂದ ಕಾಲು ತೊಡರಿತಂತೆ , ರಣರಂಗ ದಲ್ಲಿ ನಡೆಯುತ್ತಿದ್ದರೂ ಮಹಾರಣ್ಯದಲ್ಲಿ ನಡೆಯುತ್ತಿರುವಂತೆ ಅವನಿಗೆ ಭಾಸವಾಯಿತಂತೆ. ಆಗ ಕೌರವನು ಸಂಜಯನ ಹೆಗಲ ಮೇಲೆ ಕೈ ಹಾಕಿ ಕೆಳಕ್ಕೆ ಬೀಳದ ಹಾಗೆ ನಡೆದು ಬರುವಾಗ, ನೂರಾರು ಬಾಣಗಳ ಜಾಲಕ್ಕೆ ಸಿಕ್ಕಿ ಜರ್ಜರಿತವಾಗಿ ಸತ್ತು ಬಿದ್ದಿದ್ದ ದ್ರೋಣನ ಶವವನ್ನು ಕಾಣುವನು.

ವಚನ : ಅಂತು ನಿಸರ್ಗದುಷ್ಪದೃಷ್ಟದ್ಯುಮ್ನ ಕಚನಿಗ್ರಹಾರೆವಿಲುಳಿತ ಮೌಳಿಯಾಗಿರ್ದ ಭಾರಧ್ವಾಜನಿರವಂ ರಾಜರಾಜಂ ನೋಡಿ.

ಶಬ್ದಾರ್ಥ:

  • ಭಾರಧ್ವಾಜ – ದ್ರೋಣ
  • ನಿಗ್ರಹ – ಶಿಕ್ಷೆ , ದಂಡನೆ , ಎಲುಳಿತ ತಿರುಚಲ್ಪಟ್ಟು
  • ಮೌಳಿ – ತಲೆ
  • ಕಚ – ತಲೆಗೂದಲು

ಸ್ವಭಾವತಃ ದುಷ್ಟ ಪ್ರವೃತ್ತಿಯವನಾದ ಧೃಷ್ಟದ್ಯುಮ್ನನ ಕೈಯಿಂದ ತಲೆಕಡಿಸಿಕೊಂಡು ಸತ್ತುಬಿದ್ದಿರುವ ಭರದ್ವಾಜ ವಂಶಜನಾದ ದ್ರೋಣಾಚಾರರ ಕಳೇಬರವನ್ನು ನೋಡಿದಾಗ ದುರ್ಯೋಧನನಿಗೆ ದುಃಖ ಉಮ್ಮಳಿಸಿ ಬಂದಿತು .


ನಿಸರ್ಗದುಷ್ಟ- ಸ್ವಭಾವತಃ ಕೆಟ್ಟವನಾದ

ಅರಿಯಮೆ ಬಿಲ್ಲ ಬಿನ್ನಣಕೆ ಗಾಂಡಿ ವಿಯಲು ವಿನಾಕಪಾಣಿಯುಂ

ನೆರೆಯನಿದಿರ್ಚಿ ನಿಮ್ಮೊಡನೆ ಕಾದಿ ಗೆಲಲ್ಕದು ನಿಮ್ಮುಪೇಕ್ಷೆಯಂ

ದರೆಯೆನಿದೆನ್ನ ಕರ್ಮವಶಮಂದೆ ಯಂ ನಿಮಗಿಂತು ಸಾವುಮೀ

ತರೆದಿನಕಾರಣಂ ನೆಡೆ’ಯ ಸಂಭವಿಸಿರ್ದುದೂ ಕುಂಭಸಂಭವಾ


ಶಬ್ದಾರ್ಥ:

  • ಕುಂಭಸಂಭವ- ದ್ರೋಣ.
  • ಬಿನ್ನಣ – ಚಾತುರ್ಯ ನೈವುಣ್ಯ , ಕೌಶಲ್ಯ ,
  • ನೆಲೆಯನ್- ಅಸಮರ್ಥ
  • ಪಿನಾಕಚಾಣಿ – ಶಿವ

ದ್ರೋಣಾಚಾರರ ಶವದ ಮುಂದೆ ನಿಂತು ದುರ್ಯೋಧನನು ಪ್ರಲಾಪಿಸಿದ ಬಗೆಯನ್ನು ನೀವು ಇಲ್ಲಿ ನೋಡಬಹುದು. ದ್ರೋಣರನ್ನು ಕಂಡ ಕೌರವೇಶ್ವರನು “ ಅಯ್ಯೋ ನೀವು ಬಿಲ್ವಿದ್ಯಾ ಪಾರಂಗತರೆಂಬುದು ಇಡೀ ಜಗತ್ತಿಗೆ ತಿಳಿದಿದೆ. ಅಷ್ಟೇ ಅಲ್ಲ ಅರ್ಜುನನೇಕೆ , ಸಾಕ್ಷಾತ್ ಪರಮೇಶ್ವರನೂ ನಿಮ್ಮನ್ನು ಎದುರಿಸಿ ಗೆಲ್ಲಲು ಅಸಮರ್ಥ , ನೀವು ವೀರಾವೇಶದಿಂದ ಹೋರಾಡಿ ಪಾಂಡವರನ್ನು ಜಯಿಸದೆ ಉದಾಸೀನ ತೋರಿದಿರೆಂದು ನಾನಾದರೂ ಭಾವಿಸುವುದಿಲ್ಲ . 

ನನ್ನ ಕರ್ಮದ ಫಲದಿಂದಾಗಿ ನೀವು ಜಯವನ್ನು ಸಾಧಿಸಲಾಗಲಿಲ್ಲವಷ್ಟೇ; 'ನಿಮ್ಮಂತಹ ಪರಾಕ್ರಮಿಗೆ ಇಂತಹ ಸಾವು ಹೇಗೆ ಸಂಭವಿಸಿತೋ ಕಾರಣ ತಿಳಿಯದಾಗಿದೆ' ಎಂದು ದುಃಖಿಸಿದನು .


ವಚನ: ಎಂದು ದುಃಖಂಗೆಯ್ದು ಕುಂಭಸಂಭವನಂ ತ್ರಿಪ್ರದಕ್ಷಿಣಂಗೆಯ್ದು ಬರುತ್ತಮಾ ದಿಶಾಭಾಗದೊಳ


ಎಂದು ದುಃಖಿಸುತ್ತಾ ದುರ್ಯೋಧನನು ದ್ರೋಣಾಚಾರರ ದೇಹಕ್ಕೆ ಮೂರು ಬಾರಿ ಪ್ರದಕ್ಷಿಣೆ ಬಂದು , ಅಲ್ಲಿಂದ ಮುಂದುವರೆಯುವನು – ಆ ದಿಕ್ಕಿನಲ್ಲಿ .


ಅರೆಮುಗಿದಿರ್ದ ಕಣ್ಣಲರಲದ ಮೊಗಂ ಕಡಿವೋದ ಕಯ್ಯುಮಾ

ಸುರತರಮಾಗೆ ಕರ್ಚೆದವುಡುಂ ಬೆರಸನ್ಯಶರಪ್ರಹಾರ ಜ

ರ್ಜರಿತಶರೀರನಾಗಿ ನವಲೋಹಿತವಾರ್ಧಿಯೊಳಳು ಬಿಳ್ಳನಂ

ಕುರುಪತಿ ನೋಡಿ ಕಂಡನಭಿಮನ್ಯುಕುಮಾರನನಾಜಿವೀರನಂ

ಶಬ್ದಾರ್ಥ:

  • ಕಣ್ಮಲರ್ – ಕಣ್ಣೆಂಬ ಹೂವು
  • ಅಲರ್ದ- ಅರಳಿದ
  • ಅಸುರತರ- ಭೀಕರ, ಅತಿಭಯಂಕರ,
  • ಲೋಹಿತವಾರ್ಧಿ – ರಕ್ತದ ಕಡಲು
  • ಅಳ್ದು – ಮುಳುಗಿ
  • ಆಜಿ-ಯುದ್ಧ
  • ಅಹಿಕೇತನ – ಸರ್ಪಧ್ವಜ ದುರ್ಯೋಧನ

ದ್ರೋಣರ ಶವದ ಮುಂದೆ ದುಃಖಿಸಿ , ಅವರಿಗೆ ನಮಸ್ಕರಿಸಿ ಮುಂದೆ ಸಾಗಿದ ದುರ್ಯೋಧನನಿಗೆ ಅಭಿಮನ್ಯುವಿನ ಶವ ಸಿಗುತ್ತದೆ . ದುರ್ಯೋಧನ ಕಂಡ ಅಭಿಮನ್ಯುವಿನ ಮೃತದೇಹದ ವರ್ಣನೆಯನ್ನು ರನ್ನ ಇಲ್ಲಿ ನೀಡಿರುವನು, ದುರ್ಯೋಧನನ ಕಣ್ಣಿಗೆ ಅಭಿಮನ್ಯುವಿನ ಶವ ಕಂಡುದು ಹೀಗೆ

“ಅಭಿಮನ್ಯುವಿನ ಕಣ್ಣರೆಪ್ಪೆಗಳು ಅರ್ಧಮುಚ್ಚಿ ತೆರೆದಿದ್ದವಂತೆ. ಅವನ ಕೈಗಳು ಕತ್ತರಿಸಿ ಹೋಗಿದ್ದವು. ಶತ್ರುಗಳ ಬಾಣದ ಏಟಿನಿಂದಾಗಿ ಅವನ ದೇಹದ ತುಂಬಾ ಗಾಯಗಳಾಗಿದ್ದವು, ಅವನ ದೇಹವು ರಕ್ತದ ಮಡುವಿನಲ್ಲಿ ಅದ್ದಿದಂತಿತ್ತು .

ವಚನ: ಅಂತಾತನನಹಿಕೇತನಂ ನೋಡಿ

ಯುದ್ಧದಲ್ಲಿ ಮಹಾ ಪರಾಕ್ರಮಿ ಎನಿಸಿದ್ದ ಅಭಿಮನ್ಯುವನ್ನು ದುರ್ಯೋಧನನು ಇಂತಹ ಸ್ಥಿತಿಯಲ್ಲಿ ಕಂಡನೆಂದು ಕವಿ ವರ್ಣಿಸಿದ್ದಾನೆ. 

ಹೀಗೆ ಅಭಿಮನ್ಯುವನ್ನು ದುರ್ಯೋಧನ ನೋಡಿದನು .


ಗುರುಪಣ್ಣಿದ ಚಕ್ರವ್ಯೂ

ಹರಚನೆ ಪದರ್ಗರಿದು ಪಗಲದಂ ಪೊಕ್ಕು ರಣಾ

ಜರದೊಳರಿವ್ಯಪರನಿಕ್ಕಿದ

ನರಸುತ ನಿನ್ನೊರೆಗೆ ದೊರೆಗೆ ಗ೦ಡರುಮೊಳರೇ

ಶಬ್ದಾರ್ಥ:

  • ಪಣ್ಣು ( ಕಿ ) -ರಚಿಸು
  • ಪುಗಲ್ – ಪ್ರವೇಶಿಸಲು
  • ರಣಾಜಿರ – ಯುದ್ಧಭೂಮಿ , ಅರಿಶತ್ರು
  • ನರ – ಅರ್ಜುನ
  • ಒರದೊರೆ – ಸರಿಸಮ
  • ಅಸಮಬಲ ಭವದ್ವಿಕ್ರಮ

ಅಭಿಮನ್ಯುವಿನ ಶವವನ್ನು ಕ೦ಡಾಗ ದುರ್ಯೋಧನನಾಡುವ ಮೆಚ್ಚುಗೆಯ ಮಾತುಗಳನ್ನು ನಾವು ಈ ಮೇಲಿನ ಪದ್ಯದಲ್ಲಿ ಕಾಣಬಹುದು. ದುರ್ಯೋಧನನು ಅಭಿಮನ್ಯುವಿನ ಸಾಹಸವನ್ನು ಮೆಚ್ಚುತ್ತಾ ‘ ಗುರುದ್ರೋಣರು ರಚಿಸಿದ ಚಕ್ರವ್ಯೂಹವನ್ನು ಭೇದಿಸಿ ಒಳಪ್ರವೇಶಿಸಲು ಬೇರಾರಿಗೂ ಸಾಮರ್ಥ್ಯವಿರಲಿಲ್ಲ. ಆದರೆ ನೀನು ನಿನ್ನ ಸಾಮರ್ಥ್ಯದಿಂದ ಚಕ್ರವ್ಯೂಹವನ್ನು ಭೇದಿಸಿದೆ. ಒಳನುಗ್ಗಿ ಪರಾಕ್ರಮಿಗಳನ್ನು ಎದುರಿಸಿ ಕೊಂದ ನೀನು, ಅರ್ಜುನನಿಗೆ ತಕ್ಕ ಮಗನಾಗಿದ್ದೀಯ, ನಿನ್ನ ಧೈರ್ಯ–ಸಾಹಸಗಳಿಗೆ ಸಮಾನರಾದ ಪರಾಕ್ರಮಿಗಳು ಬೇರೆ ಯಾರಿದ್ದಾರೆ?  ಎಂದು ಹೊಗಳಿದನು.

ಅಭಿಮನ್ಯು ಶತ್ರುಪುತ್ರನಾಗಿದ್ದರೂ ಅವನ ಗುಣವನ್ನು ಮೆಚ್ಚುವ ದುರ್ಯೋಧನನ ಅಂತಃಕರಣ ಇಲ್ಲಿ ಅನಾವರಣಗೊಂಡಿದೆ .

ಅಸಮಬಲ ಭವದ್ವಿಕ್ರಮ 

ಮಸಂಭವಂ ಪೆರರ್ಗೆ ನಿನ್ನನಾನಿನಿತಂ ಪ್ರಾ

ರ್ಥಿ ಸುವನಭಿಮನ್ನು ನಿಜಸಾ

ಹಮ್ಮಿಕದೇಶಾನುಮರಣಮೆಮಗಕ್ಕೆ ಗಡಾ

ಶಬ್ದಾರ್ಥ:

  • ಏಕದೇಶ – ಒಂದು ಹೋಲುವ
  • ಅನುಮರಣ – ಅನುರೂಪವಾದ ( ಅನುಗುಣವಾದ ) ಮರಣ .
  • ಭವದ್ವಿಕ್ರಮ ( ಭವತ್ + ವಿಕ್ರಮ ) -ನಿನ್ನ ಶೌರ್ಯನಿಜಸಾಹಸ ನಿನ್ನ ಪರಾಕ್ರಮ

ಅಭಿಮನ್ಯುವಿನ ಶವದ ಮುಂದೆ ನಿಂತ ದುರ್ಯೋಧನನು ಅವನ ಪ್ರಶಂಸೆಯನ್ನು ಮುಂದುವರೆಸುತ್ತಾ “ಅಸಮಬಲಶಾಲಿ ಯಾದ ಅಭಿಮನ್ಯು ಕುಮಾರನೆ, ನಿನ್ನಂತಹ ಪರಾಕ್ರಮಿಗಳು ಮತ್ತೊಬ್ಬರಿಲ್ಲ. ನಿನ್ನ ಮುಂದೆ ನಿಂತಿರುವ ನಾನು ಬೇಡಿಕೊಳ್ಳುವುದಿಷ್ಟೇ ನಿನ್ನ ಸಾಹಸದ ಹತ್ತನೇ ಒಂದಂಶವಾದರೂ ನನ್ನಲ್ಲಿದ್ದರೆ ಅದಕ್ಕನುಗುಣವಾದ ವೀರಮರಣ ನನಗೆ ಉಂಟಾಗಲಿ' ಎಂದು ಪ್ರಾರ್ಥಿಸಿದನು.

ಶತ್ರುವಿನ ಮಗನಾದ ಅಭಿಮನ್ಯುವನ್ನು ಕಂಡು ರೋಷದಿಂದ ಕರಳುವ ಬದಲು , ಅವನ ಸಾಹಸಗುಣನ ಸರಿಯೇ , ಯುದ್ಧ ಮಾಡಿಯೇ ತೀರಬೇಕೆಂಬ ಅವನ ಅ೦ತು ದ ಛಲ ಇಲ್ಲಿ ಪುಟಿದೆದ್ದಿದೆ.

ಆದ್ದರಿಂದಲೇ ಅವನು ಬಂದ ಮೆಚ್ಚುವ ದುರ್ಯೋಧನನ ವ್ಯಕ್ತಿತ್ವ ನಿಜಕ್ಕೂ ಅಪರೂಪತ್ತೆಂ ರನ್ನ ಚಿತ್ರಿಸಿದ್ದಾನೆ . ಅಲ್ಲದೆ ಸತ್ತು ವೀರಮರಣವನ್ನಪ್ಪಿದರು . ವೀರಮರಣ ಬರಲಿ ಎಂದು ಆಪೇಕ್ಷಿಸುತ್ತಿದ್ದಾನೆ . ಅವನ ಉಣಕ್ಕೆ ತೀರಾ ಸಹಜವಾದ ಮಾತಿದಾಗಿದೆ .

ವಚನ|| ಎಂದಾತ್ಮಗತದೊಳೆ ಬಗೆದು ಅಂತಭಿಮನ್ಯುಗೆ ಕಯ್ದಳೆಂ ಮುಗಿದು ಬರುತ್ತುಂ ತನ್ನ ಮಗನಪ್ಪ ಲಕ್ಷಣಕುಮಾರ ನೆನೆದು ಮನ್ನೂಷ್ಣತಕಂಠನಾಗಿ ತದಾಸನ್ನಪ್ರದೇಶದೊಳ್ ತನ್ನ ಕುಮಾರನಂ ಕಂಡು ಪುತ್ರಸ್ನೇಹಕಾತರಹೃದಯನಾಗಿ ಗಾಂಧಾರ ನಂದನ ಭಾನುಮತೀನಂದನನ ವದನಾರವಿಂದಮಂ ನೋಡಿ-

ಶಬ್ದಾರ್ಥ:

  • ಭಾನುಮತಿನಂದನ – ಲಕ್ಷಣಕುಮಾರ
  • ಮನ್ಸೂತಕಂಠನಾಗಿ – ಶೋಕಭರಿತವಾದ ಧ್ವನಿಯುಳ್ಳವನಾಗಿ ; ತದಾಸನ್ನ ( ತತ್ + ಆಸನ್ನು ಅದಕ್ಕೆ ಹತ್ತಿರದ ಗಾಂಧಾರೀನಂದನ ದುರ್ಯೋಧನ

ಅಭಿಮನ್ಯುವಿಗೆ ಬಂದಂತಹ ವೀರಮರಣವು ತನಗೂ ಸಂಭವಿಸಲೆಂದು ದುರ್ಯೋಧನನು ಮನದಲ್ಲೇ ಪ್ರಾರ್ಥಿಸಿ, ಅಭಿಮನ್ಯುವಿಗೆ ಕೈ ಮುಗಿದು ಮುಂದುವರೆಯುವಾಗ ಅವನಿಗೆ ತನ್ನ ಮಗನಾದ ಲಕ್ಷಣಕುಮಾರನ ನೆನಪಾಗುತ್ತದೆ. ದುಃಖ ದಿಂದ ಗಂಟಲು ಉಬ್ಬುತ್ತದೆ. ಅವನ ಹೃದಯ ಪುತ್ರವಾತ್ಸಲ್ಯದಿಂದ ಮಿಡಿಯುತ್ತದೆ. ಅಷ್ಟರಲ್ಲೇ ಅವನಿಗೆ ಮಗನ ತಾವರೆಯಂತಹ ಮೊಗ ಗೋಚರಿಸುತ್ತದೆ.

ಜನಕಂಗೆ ಜಲಾಂಜಲಿಯ

ತನೂಭವಂ ಕುಡುವುದುಚಿತಮದುಗೆಟ್ಟೇಗಳ

ನಿನಗಾಂ ಕುಡುವಂತಾದುದೆ

ತನೂಜ ನೀಂ ಶ್ರಮವಿಪರ್ಯಯಂ ಮಾಡುವುದೇ

ಶಬ್ದಾರ್ಥ:

  • ಜಲಾಂಜಲಿ ( ಜಲ + ಅಂಜಲಿ ) -ತರ್ಪಣ,
  • ಕ್ರಮವಿಪರ್ಯಯ – ಪದ್ಧತಿ ತಪ್ಪುವುದು , ಕ್ರಮ ವ್ಯತ್ಯಾಸ.

ತನ್ನ ಮಗ ಲಕ್ಷಣಕುಮಾರನ ಶವವನ್ನು ನೋಡಿದಾಕ್ಷಣ ದುರ್ಯೋಧನನ ದುಃಖದ ಕಟ್ಟೆಯೊಡೆಯುತ್ತದೆ. ಬಾಳಿ ಬದುಕಬೇಕಾಗಿದ್ದ ತನ್ನ ಕರುಳಿನ ಕುಡಿಯನ್ನು ಕಂಡ ದುರ್ಯೋಧನನು ‘ತಂದೆಯಾದವನಿಗೆ ಮಗನಾದವನು ಎಳ್ಳು–ನೀರಿನ ತರ್ಪಣವನ್ನು ಕೊಡಬೇಕಾದ್ದು ಲೋಕರೂಢಿ.

ಆದರೆ ಇದಕ್ಕೆ ವ್ಯತಿರಿಕ್ತವಾಗಿ ತಂದೆಯಾದ ನಾನೇ ಮಗನಾದ ನಿನಗೆ ತರ್ಪಣವನ್ನು ಬಿಡುವಂತಾಯಿತೇ? ಅಯ್ಯೋ ಮಗನೆ, ನನಗಿಂತ ಮೊದಲು ಪ್ರಾಣವನ್ನು ತೊರೆದು ನೀನೇಕೆ ಹೀಗೆ ಕ್ರಮವನ್ನು ತಪ್ಪಿಸಿದೆ? ಎಂದು ದುಃಖಿಸಿದನು. ಪುತ್ರಶೋಕತಪ್ತನಾದ ದುರ್ಯೋಧನನ ವಿಲಾಪ ಕರುಳು ಮಿಡಿಯುವಂತೆ ಇಲ್ಲಿ ಚಿತ್ರಿತವಾಗಿದೆ.


ವಚನ: ಎಂದು ಪಶ್ಚಾತ್ತಾಪಂಗೆಯ್ಯ ಸಂಜಯಂ ಸಂತೈಸಿ ಮುಂದೊಮ್ಮೆ ಭೀಮಸೇನನ ಗದಾಪರಿಘ ಪ್ರಹರಣದಿಂದ ರುಧಿರ ಪ್ರವಾಹವಶಗತನಾಗಿರ್ದ ಯುವರಾಜನಿರ್ದಡೆಯಂ ಕುರುರಾಜನೆಯ್ದವಂದಾಗಳ್

ಶಬ್ದಾರ್ಥ:

  • ಪರಿಘ – ಪ್ರಹರ ಹೊಡೆತ, ಆಯುಧ

ಪುತ್ರನಿಗೆ ತರ್ಪಣ ಕೊಡುವ ಸಂದರ್ಭವೊದಗಿದ್ದಕ್ಕಾಗಿ ಪಶ್ಚಾತ್ತಾಪಪಡುತ್ತಿರುವ ದುರ್ಯೋಧನನನ್ನು ಸಂಜಯನು ಸಂತೈಸಿ , ಮುಂದೆ ಕರೆದೊಯ್ದನು . ಅಲ್ಲಿ ಅವರಿಗೆ ಭೀಮಸೇನನ ಗದಾಪ್ರಹಾರದಿಂದ ಹತನಾಗಿ ರಕ್ತದ ಪ್ರವಾಹದೊಳಗೆ ಬಿದ್ದಿದ್ದ ಯುವರಾಜನಾದ ದುಶ್ಯಾಸನನ ಮೃತದೇಹ ಎದಿರಾಯಿತು .

ನಿನ್ನಂ ಕೊಂದಂ ಗಡಮೊಳ

ನಿನ್ನು೦ ಕೊಂದವನನಿಕ್ಕಿ ಕೊಲ್ಲದೆ ಮಣ್ಣ್ಡ್

ನಿನ್ನ ಮೊಳೆಂ ಗಡಸಾಲದೆ

ನಿನ್ನಯ ಕೂರ್ಮಗಮದನ್ನ ಸೌಧರ್ಮಿಕೆಗಂ

ಶಬ್ದಾರ್ಥ:

  • ಕೂರ್ಮ – ಪ್ರೀತಿ , ಸೌಧರ್ಮ – ಸಜ್ಜನಿಕೆ
  • ಇಕ್ಕಿ – ಬಡಿದು , ಹೊಡೆದು
  • ಮಾಣ್ ಬಿಡು – ಸುಮ್ಮನಿರುವುದು
  • ಗಡಮೊಳನನ್ನು – ಇನ್ನೂ ಬದುಕಿದ್ದಾನಲ್ಲ

ದುರ್ಯೋಧನನೆಂದರೆ ದುಶ್ಯಾಸನನಿಗೆ ಅಪರಿಮಿತವಾದ ಪ್ರೀತಿ. ಅವನ ಭ್ರಾತೃವಾತ್ಸಲಕ್ಕೆ ಎಣೆಯಿಲ್ಲ. ಅಂತಹ ತಮ್ಮನ ಶವವನ್ನು ಕಂಡಾಗ ದುರ್ಯೋಧನನಿಗೆ ತಾನಿನ್ನೂ ತಮ್ಮನ ಸಾವಿಗೆ ಕಾರಣನಾದವನನ್ನು ಬದುಕಲು ಬಿಟ್ಟಿರುವೆನಲ್ಲಾ ಎಂದು ರೋಷ ಉಕ್ಕುತ್ತದೆ. ಅದನ್ನು ಅವನು ದುಶ್ಯಾಸನನ ಶವದ ಮುಂದೆ ನಿಂತು ಅಭಿವ್ಯಕ್ತಿಸುವುದನ್ನು ಕವಿ ರನ್ನ ಈ ಮೇಲಿನ ಪದ್ಯದಲ್ಲಿ ಚಿತ್ರಿಸಿರುವನು .” ಎಲೈ ಯುವರಾಜನೇ, ನಿನ್ನನ್ನು ಕೊಂದವನು ( ಭೀಮನು ) ಇನ್ನೂ ಬದುಕಿರುವನು.


ಅವನನ್ನು ಕೊಂದು, ನಿನ್ನ ಸಾವಿನ ಸೇಡು ತೀರಿಸಿಕೊಳ್ಳದ ನಾನಿನ್ನೂ ಬದುಕುಳಿದಿರುವೆ. ನೀನು ನನ್ನಲ್ಲಿ ತೋರಿದ ಪ್ರೀತಿಗೆ ಇದು ಸರಿಯಾದ ಮರ್ಯಾದೆಯಲ್ಲ , ಇದೆಂತಹ ಸಜ್ಜನಿಕೆ ನನ್ನದು?" ಎಂದು ದುರ್ಯೋಧನನು ತಮ್ಮನ ಶವದ ಮುಂದೆ ದುಃಖಿಸಿದನು .

ಜನನೀಸನ್ಯಮನುಂಡೆನಾಂ ಬಳಿಕೆ ನೀಂ ಸೋಮಾಮೃತಂ ದಿವ್ಯಭೋ

ಜನಮೆಂಬಂತಿವನುಂಡನಾಂ ಬಳಿಕೆ ನೀಂ ಬಾಲತ್ವದಿಂದೆಲ್ಲಿಯುಂ

ವಿನಯೋಲ್ಲಂಘನಮಾದುದಿಲ್ಲ ಮರಣಕ್ಕೆನ್ನಿಂದ ನೀಂ ಮುಂಚಿದಯ್

ಮೊನೆಯೊಳ್ ಸೂಳ್‌ತಡಮಾಯ್ತಿದೊಂದೆಡೆಯೊಳಂ ಹಾ ವತ್ಸ ದುಶ್ಯಾಸನಾ

ಶಬ್ದಾರ್ಥ:

  • ಮೊನೆಯೊಳ್- ಯುದ್ಧದಲ್ಲಿ
  • ಸೂರ್ – ಸರದಿ
  • ಎಡೆ- ಸಮಯ
  • ಉಲ್ಲಂಘನೆ – ತಪ್ಪುವುದು , ಮೀರುವುದು .
  • ಸೋಮಾಮೃತ – ಸೋಮರಸ

ಪ್ರಸ್ತುತ ಪದ್ಯದಲ್ಲಿಯೂ ಕವಿಯು ದುಶ್ಯಾಸನನ ಶವದ ಮುಂದೆ ನಿಂತು ಶೋಕಿಸುವ ದುರ್ಯೋಧನನ ಅಳಲನ್ನು ಚಿತ್ರಿಸಿದ್ದಾನೆ. ತನ್ನ ದುಃಖದ ಮಾತುಗಳನ್ನು ಮುಂದುವರೆಸುತ್ತಾ ದುರ್ಯೋಧನನು ಹೀಗೆಂದು ಪ್ರಲಾಪಿಸುವನು; "ಎಲೈ ದುಶ್ಯಾಸನವೇ, ತಾಯಿಯ ಎದೆ ಹಾಲನ್ನು ನಾನು ಮೊದಲು ಕುಡಿದೆ, ಬಳಿಕ ನೀನು ಕುಡಿದೆ. ಇದರಂತೆಯೇ ಅಮೃತವೆನಿಸಿದ ಸೋಮರಸವನ್ನೂ, ರುಚಿಕರವಾದ ದಿವ್ಯಭೋಜನವನ್ನೂ ನಾನು ಮೊದಲು ಸೇವಿಸಿದೆ. ಆನಂತರವೇ ಅವುಗಳನ್ನು ನೀನು ಸೇವಿಸುತ್ತಿದ್ದ.


ಬಾಲ್ಯದಿಂದ ಇಂದಿನವರೆಗೂ ಎಂದಿಗೂ ಈ ಕ್ರಮವನ್ನು ನೀನು ಉಲ್ಲಂಘಿಸಿರಲಿಲ್ಲ. ಅದೇ ರೀತಿ ಸಾವಿನಲ್ಲೂ ನಾನು ಮೊದಲಿಗನಾಗಬೇಕಿತ್ತು. ಆದರೆ ನೀನು ಮೊದಲು ಯುದ್ಧದಲ್ಲಿ ಮರಣವನ್ನಪ್ಪಿ ಏಕೆ ಕ್ರಮವನ್ನು ಉಲ್ಲಂಘಿಸಿದ? ಹಾ ಪ್ರಿಯ ಸಹೋದರನಾದ ದುಶ್ಯಾಸನನೇ" ಎಂದು ದುರ್ಯೋಧನನು ಶೋಕತುಂಬಿ ಗೋಳಾಡಿದನು .


ವಚನ: ಎಂದು ವಿಪ್ರಳಾಪಂಗೆಯ್ದು ತನ್ನ ತಮ್ಮನ ಕಳೇಬರಮಂ ನೋಡಲಾರದೆ ಅಲ್ಲಿಂ ತಳರ್ದು ದಿನಕರತನೂಜನಂ ರಾಜರಾಜಂ ನೋಡಿ ಬಾಷ್ಪವಾರಿ ಧಾರಾಪೂರಿತ ಲೋಚನನುಮಾಗಿ

ಶಬ್ದಾರ್ಥ:

  • ಕಳೇಬರ – ಶವ

ದುಶ್ಯಾಸನನ ಮುಂದೆ ನಿಂತು ಅತಿಯಾಗಿ ಪ್ರಲಾಪಗೈಯ ದುರ್ಯೋಧನನಿಗೆ ಹೆಚ್ಚು ಹೊತ್ತು ನಿಂತು ತನ್ನ ತಮ್ಮನ ಹೆಣವನ್ನು ನೋಡಲಾಗಲಿಲ್ಲ. ಅಲ್ಲಿಂದ ಮುಂದೆ ಸಾಗಿದಾಗ ಅವನಿಗೆ ದಿವಾಕರ ಮಗನಾದ ಕರ್ಣನ ಮೃತದೇಹ ಎದುರಾಯಿತು. ಅವನನ್ನು ನೋಡಿದ ದುರ್ಯೋಧನನಿಗೆ ಕಣ್ಣೀರಕೋಡಿ ಉಕ್ಕಿಹರಿಯಿತು, ಕಣ್ಣೀರು ಸುರಿಸುತ್ತಾ ಅವನು ಕರ್ಣನ ಶವವನ್ನು ನೋಡುತ್ತಾ ಈ ಮುಂದಿನಂತೆ ಶೋಕಿಸುವನು.

ಆನುಂ ದುಶ್ಯಾಸನನುಂ

ನೀನು ಮೂವರೆ ದಲಾತನುಂ ಕಳೆದ ಬ

ಕ್ಯಾನಂ ನೀನೆ ದಲೀಗಲ್

ನೀನುಮಗಲ್ಲೆತ್ತವೋದೆಯಂಗಾಧಿಪತೀ


ಶಬ್ದಾರ್ಥ:

  • ದಲ್- ದಿಟ,ಅಲ್ಲವೇ
  • ಕಳೆದ -ತೀರಿದ

ತಮ್ಮನಾದ ದುಶ್ಯಾಸನ ಮತ್ತು ಜೀವದ ಗೆಳೆಯನಾದ ಕರ್ಣನನ್ನು ಕಂಡರೆ ಅಪರಿಮಿತವಾದ ಪ್ರೀತಿ ದುರ್ಯೋಧನನಿಗೆ ಇತ್ತು.


ಅವರಿಬ್ಬರನ್ನೂ ಏಕಕಾಲಕ್ಕೆ ಕಳೆದುಕೊಂಡ ದುರ್ಯೋಧನ ದುಃಖಕ್ಕೆ ಎಣೆಯಿಲ್ಲದಾಯಿತು. ಕರ್ಣನ ಶವದ ಮುಂದೆ ನಿಂತು "ಎಲೈ ಕರ್ಣನೇ, ನಾನು, ದುಶ್ಯಾಸನ ಹಾಗೂ ನೀನು ಮೂವರೂ ಮೊದಲಿನಿಂದಲೂ ಮಹಾಮೈತ್ರಿಯಿಂದಿದ್ದೆವು. ನಮ್ಮನ್ನಗಲಿ ಮೊದಲು ದುಶ್ಯಾಸನ ದೂರವಾದ . ಆನಂತರ ನಾನು ನೀನು ಇಬ್ಬರೂ ಇದ್ದೇವೆಂಬ ಸಮಾಧಾನವಿತ್ತು. ಆದರೀಗ ನೀನೂ ಸಾಯುವ ಮೂಲಕ ನನ್ನನ್ನು ಆಗಲಿ ದೂರಾಗಿ ಎಲ್ಲಿಗೆ ಹೋದೆ, ಎಲೆ ಅಂಗಾಧಿಪತಿಯಾದ ಕರ್ಣನೇ?” ಎಂದು ದುಃಖ ತಪ್ತನಾದ.

ನಿನ್ನ ಕಳೆಯಂ ಸುಯೋಧನ

ನಂ ನೋಡದೆ ನುಡಿಯದಪ್ಪಿಕೊಳ್ಳದೆ ಬೆಸನೇ

ನನ್ನದ ಜೀಯನ್ನದೆ ದೇ

ವೆನ್ನದೆ ಯೇಕುಸಿರಬರ್ಪೆಯಂಗಾಧಿಪತೀ


ಶಬ್ದಾರ್ಥ:

  • ಕಳೆಯ – ಗೆಳೆಯ , ಸ್ನೇಹಿತ
  • ಬೆಸನು – ಆಜ್ಞೆ
  • ಜೀಯ – ಯಜಮಾನ , ಒಡೆಯ

ಕರ್ಣನ ಸಾವನ್ನು ದುರ್ಯೋಧನನಿಗೆ ಸಹಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಒಂದೇ ಪ್ರಾಣ ಎರಡು ಜೀವಗಳಂತಿದ್ದವರು ಅವರು, ದುರ್ಯೋಧನನನ್ನು ಕಂಡೊಡನೆ ಬಂದು ಅಪ್ಪಿಕೊಳ್ಳುತ್ತಿದ್ದ ಕರ್ಣ ಇಂದು ಶವವಾಗಿ ಕಣ್ಣೆದುರು ಬಿದ್ದಿದ್ದಾನೆ. ಇದನ್ನು ಕಂಡ ದುರ್ಯೋಧನನು ನಿನ್ನ ಗೆಳೆಯನಾದ ಸುಯೋಧನ ಬಂದಿರುವನು. ಅವನನ್ನು ನೀನು ಕಣ್ಣೆರೆದು ನೋಡುತ್ತಿಲ್ಲವೇಕೆ? ಆಪ್ಪಿಕೊಳ್ಳುತ್ತಿಲ್ಲವೇಕೆ? ಏನಪ್ಪಣೆ ಮಹಾಸ್ವಾಮಿ ಎನ್ನುತ್ತಿಲ್ಲವೇಕೆ? ಏಕೆ ಏನೂ ಮಾತನಾಡದೆ ಮೌನದಿಂದಿರುವೆ ಎಲೆ ಕರ್ಣನೇ?" ಎಂದು ಗೋಳಾಡಿದನು. ತನ್ನ ಸ್ನೇಹಿತನ ಮೌನ ನಿದ್ರೆಯನ್ನು ಅವನು ಸಹಿಸುತ್ತಿಲ್ಲ . ಅಂತಹ ಅನನ್ಯವಾದ ಸ್ನೇಹ ಅವರಿಬ್ಬರದು.


ಅನ್ನತಂ ಲೋಭಂ ಭಯಮಂ

ಅನಿತಾಂ ನೀನಿರ್ದ ನಾಡೊಳರ್ಕುಮೆ ರವಿನಂ

ದನ ನನ್ನಿ ಚಾಗಮಣ್ಣೆ

ಬಿನಿತರ್ಕ೦ ನೀನೆ ಮೊತ್ತಮೊದಲಿಗನಾದಯ್

ಶಬ್ದಾರ್ಥ:

  • ಅನ್ಯತ – ಸುಳ್ಳು
  • ನನ್ನಿ – ಸತ್ಯ
  • ಚಾಗ – ತ್ಯಾಗ
  • ಅಣ್ಣು – ಪರಾಕ್ರಮ
  • ಆನರಿವೆಂ ಪೃಥೆಯದವಳ

ಕರ್ಣನ ಗುಣ ವಿಶೇಷಗಳೆಲ್ಲವೂ ಸಾಲುಸಾಲಾಗಿ ದುರ್ಯೋಧನನಿಗೆ ನೆನಪಿಗೆ ಬರುತ್ತವೆ. ಅವನ ಶವದ ಮುಂದೆ ನಿಂತು ದುರ್ಯೋಧನ “ಎಲೈ ಕರ್ಣನೇ ನೀನಿದ್ದ ರಾಜ್ಯದಲ್ಲಿ ಸುಳ್ಳೆಂಬುದಿಲ್ಲ. ಸ್ವಾರ್ಥ ಜಿಪುಣತನಗಳಿರುವುದಿಲ್ಲ. ನಿನ್ನಂತಹ ಪರಾಕ್ರಮಿಯಿದ್ದ ನಾಡಲ್ಲಿ ಭಯವೆಂಬುದಕ್ಕೆ ಸ್ಥಳವಿಲ್ಲ. ಸತ್ಯದ ನಡೆಯಲ್ಲಿ, ತ್ಯಾಗದ ಗುಣದಲ್ಲಿ, ಪರಾಕ್ರಮದಲ್ಲಿ ನಿನಗಾರು ಸರಿಸಾಟಿಯಿಲ್ಲ. ನೀನು ಅದ್ವಿತೀಯ” ಎಂದು ಮನದುಂಬಿ ಕರ್ಣನ ಗುಣಗಳನ್ನು ಕೊಂಡಾಡುವನು. ಸತ್ಯಮಾರ್ಗದಲ್ಲಿ ನಡೆದ, ಮಹಾತ್ಮಾಗಿಯಾಗಿ ‘ದಾನಶೂರ’ನೆನಿಸಿದ, ಅದ್ವಿತೀಯ ಪರಾಕ್ರಮಿಯಾದ ತನ್ನ ಗೆಳೆಯ ಕರ್ಣನನ್ನು ದುರ್ಯೋಧನ ಶೋಕದ ನಡುವೆಯೂ ಹೊಗಳಿ ಮಾತನಾಡುವುದು ಅವನ ಅಪ್ಪಟ ಗುಣಪಕ್ಷಪಾತಿ ನಡೆವಳಿಕೆಯನ್ನು ತೋರಿದೆ ಎನ್ನಬಹುದು.

ಅನಱವೆಂ ಪೃಥೆ ಯಱವಳ್‌

ದಾನವರಿಪುವಟವನರ್ಕನನಂ ದಿವ್ಯ

ಜ್ಞಾನಿಸಹದೇವನ ವಂ

ನೀನಾರ್ಗಂದಾರುಮದೆಯರಂಗಾಧಿಪತೀ

ಶಬ್ದಾರ್ಥ:

  • ಪೃಥೆ – ಕುಂತಿ
  • ದಾನವರಿಪು -ಕೃಷ್ಣ
  • ಅರ್ಕ – ಸೂರ್ಯ

ಕರ್ಣನು ಕುಂತಿಯ ಹಿರಿಯ ಮಗನೆಂಬ ಜನ್ಮರಹಸ್ಯವನ್ನು ದುರ್ಯೋಧನ ಬಲ್ಲವನಾಗಿದ್ದನು. ಅದನ್ನೀಗ ಅವನ ಕಳೇಬರದ ಮುಂದೆ ನಿಂತು ಪ್ರಕಟಿಸುವುದನ್ನು ಕವಿ ರನ್ನನು ಈ ಪದ್ಯದಲ್ಲಿ ಚಿತ್ರಿಸಿದ್ದಾನೆ. ದುರ್ಯೋಧನನು ಕರ್ಣನನ್ನು ಉದ್ದೇಶಿಸಿ ಮಾತನಾಡುತ್ತಾ ‘ನಿಜಕ್ಕೂ ನೀನು ಯಾರ ಮಗನೆಂಬ ಸಂಗತಿಯು ನನಗೆ ತಿಳಿದಿತ್ತು, ಕುಂತಿಗೆ ತಿಳಿದಿತ್ತು, ಅಲ್ಲದೆ ದಾನವರ ಶತ್ರುವಾದ ಶ್ರೀಕೃಷ್ಣನಿಗೂ ತಿಳಿದಿತ್ತು, ಸೂರ್ಯನಿಗೂ ಆರಿವಿತ್ತು. ಮಾತ್ರವಲ್ಲ, ದಿವ್ಯಜ್ಞಾನಿಯಾದ ಸಹದೇವನೂ ಈ ವಿಚಾರವನ್ನು ಬಲ್ಲವನಾಗಿದ್ದನು. ಇವರನ್ನುಳಿದು ಬೇರಾರಿಗೂ ನೀನಾರೆಂಬ ಸಂಗತಿ ತಿಳಿದಿರಲಿಲ್ಲ' ಎಂದು ಸ್ಮರಿಸಿಕೊಂಡನು. ಕುಂತಿಯ ಹಿರಿಯ ಮಗನೆಂಬುದು ತಿಳಿದಿದ್ದರೆ ಕರ್ಣನೇ ರಾಜನಾಗುವ ಅವಕಾಶವಿತ್ತು. ತಿಳಿದಿದ್ದವರಾರು ಅವನಿಗೂ ಅದನ್ನು ಹೇಳಲಿಲ್ಲ. ಕರ್ಣ ದುರಂತ ನಾಯಕನೆನಿಸಿದನು. ದುರ್ಯೋಧನ ಈಗ ಅದನ್ನು ಸ್ಮರಿಸಿಕೊಂಡು ಪಶ್ಚಾತ್ತಾಪ ಪಡುವಂತಿದೆ.

ನೀನುಳ್ಳೋಡುಂಟು ರಾಜ್ಯಂ

ನೀನುಳ್ಕೊಡೆ ಪಟ್ಟಮುಂಟು ಬೆಳ್ಕೊಡೆಯುಂಟಯ್

ನೀನುಲ್ಲೊಡುಂಟು ಪೀಡೆಗೆ

ನೀನಿಲ್ಲದಿವೆಲ್ಲಮೊಳವೆ ಅಂಗಾಧಿಪತೀ

ಶಬ್ದಾರ್ಥ:

  • ಪೀರಿಗೆ – ಸಿಂಹಾಸನ
  • ಬೆಳ್ಳೂಡೆ ( ಬೆಳ್ + ಕೊಡೆ ) –ಬಿಳಿಯಕೂಡೆ

ದುರ್ಯೋಧನನಿಗೆ ಕರ್ಣನನ್ನು ಕಂಡರೆ ಗಾಢವಾದ ಸ್ನೇಹ–ಮಮಕಾರಗಳು, ಕರ್ಣ ಸತ್ತಿರುವುದರಿಂದ ಅವನಿಗೆ ತನ್ನ ಅಧಿಕಾರ, ಐಶ್ವರ್ಯ, ಬದುಕು –ಎಲ್ಲವೂ ಅರ್ಥಹೀನವಾಗಿ ಕಂಡವಂತೆ, ಕರ್ಣನಿಲ್ಲದ ಯಾವ ಸುಖವೂ ತನಗೆ ಬೇಡವೆಂದು ದುರ್ಯೋಧನ ಆಡುವ ಮಾತುಗಳನ್ನು ರನ್ನ ಈ ಮೇಲಿನ ಪದ್ಯದಲ್ಲಿ ವಿವರಿಸಿದ್ದಾನೆ. ದುರ್ಯೋಧನನಾಡುವ ಈ ಮಾತುಗಳಲ್ಲಿ ಅವರಿಬ್ಬರ ಅಗಾಧ ಸ್ನೇಹದ ಚಿತ್ರಣವಿದೆ.


"ಎಲೈ ಕರ್ಣನೇ, ನೀನು ಬದುಕಿದ್ದರೆ ನನಗೆ ಈ ರಾಜ್ಯವಿದ್ದಂತೆ, ನೀನಿದ್ದರೆ ಮಾತ್ರ ನನ್ನ ರಾಜಪದವಿಗೆ ಅರ್ಥಬರುವುದು, ನೀನಿದ್ದರೆ ಮಾತ್ರ ಈ ಚಕ್ರವರ್ತಿತ್ವದ ಬೆಳೊಡೆಗೆ ಶೋಭೆ, ನೀನಿದ್ದರೆ ನನ್ನ ಸಿಂಹಾಸನ, ಪೀಳಿಗೆಗಳಿಗೆ ಮೆರಗು ನೀನಿಲ್ಲದೆ ಈ ಮೇಲಿನ ಎಲ್ಲವೂ ನನ್ನ ಪಾಲಿಗೆ ಇದ್ದೂ ಇಲ್ಲದಂತೆ ಅಂಗಾಧಿಪತಿ" ಎಂದು ದುರ್ಯೋಧನ ಹೇಳುವನು .


ಹರಿ ಬೇಡ ಕವಚಮಂ ನೀ

ವರಿದಿತ್ತಯ್ ಕೊಂತಿ ಬೇಡೆ ಬೆಗಡದೆ ಕೊಟ್ಟಯ್

ಪುರಿಗಣೆಯಂ ನಿನಗಳ ಕಸ

ವರಿಗಲಿ ಮೆಯ್ದಲಿಯುಮಾವನಂಗಾಧಿಪತೀ

ಶಬ್ದಾರ್ಥ:

  • ಹರಿ – ಇಂದ್ರ
  • ಪುರಿಗಣೆ ದಿವ್ಯಾಸ್ತ್ರ
  • ಕಸವರಗಲಿ ( ಕಸವರ + ಕಲಿ ) -ದಾನಶೂರ
  • ಅರಿದು -ಕತ್ತರಿಸಿ

ಪ್ರಸ್ತುತ ಪದ್ಯದಲ್ಲಿ ದುರ್ಯೋಧನನು ದಾನಶೂರ ವೀರಕರ್ಣನ ದಾನ ಮತ್ತು ತ್ಯಾಗದ ಗುಣಗಳ ಗುಣಗಾನ ಮಾಡು ತ್ತಿದ್ದಾನೆ. ದುರ್ಯೋಧನನು ಕರ್ಣನನ್ನು ಉದ್ದೇಶಿಸಿ ಈ ರೀತಿ ಹೇಳುವನು. “ಎಲೆ ಕರ್ಣನೇ, ನೀನು ದೇವೇಂದ್ರನು ಬಂದು ಜನ್ಮದತ್ತವಾಗಿ ಬಂದ ನಿನ್ನ ರಕ್ಷಾಕವಚವನ್ನು ದಾನವಾಗಿ ಕೇಳಿದಾಗ, ದೇಹಕ್ಕಂಟಿದ ಕವಚವನ್ನು ಹಿಂದುಮುಂದು ನೋಡದೆ ಕತ್ತರಿಸಿಕೊಟ್ಟೆ.


ಅದೇ ರೀತಿ ಕುಂತಿಯು ದಿವ್ಯಾಸ್ತ್ರವನ್ನು ನ್ಯಾಸವಾಗಿ ತೊಟ್ಟ ಬಾಣವನ್ನು ಮತ್ತೆ ತೊಡುವುದಿಲ್ಲವೆಂದು ಭಾಷೆ ಕೇಳಿದಾಗ ಮರುಮಾತಾಡದೆ ನೀಡಿದೆ. ಹೆದರದೆ ಇಂತಹ ವಾಗ್ದಾನ ಮಾಡಿದ ನಿನ್ನಂತಹ ಯುದ್ಧವೀರನಾಗಲೀ ಸಂಪತ್ತನ್ನು ದಾನ ಮಾಡುವ ದಾನವೀರನಾಗಲೀ ಬೇರೆ ಯಾರಿದ್ದಾರೆ ?' ಎಂದು ಕರ್ಣನ ದಾನ – ಶೂರ ಗುಣಗಳನ್ನು ಕೊಂಡಾಡುವನು .

ವಚನ|| ಎಂದು ಶೋಕಾಂಧಂ ಕರ್ಣವಿರಹಿತನಪ್ಪುದರಿಂ ಸಂಕ್ರಂದನನಂದನಂಗೆ ಮುಳಿದು ಶರಶಯನಗತನಾಗಿರ್ಪ ನದೀ ನಂದನನ ಚರಣಾರವಿಂದ ವಂದನಂಗೆಯ್ಯಲೆಂದು ಗಾಂಧಾರೀನಂದನನೆಯೆವಂದಂ

ಶಬ್ದಾರ್ಥ:

  • ಸಂಕ್ರಂದನ – ಇಂದ್ರ
  • ಶರಶಯನ – ಬಾಣದಮಂಚ
  • ನದೀನಂದನ – ಭೀಷ್ಮ (ಗಂಗೆಯ ಮಗ).

ಹೀಗೆ ಕರ್ಣನ ಸ್ನೇಹದಿಂದ ವಂಚಿತವಾಗಿ ದುಃಖತಪ್ತನಾದ, ಕರ್ಣನ ಅಗಲಿಕೆಯನ್ನು ಸಹಿಸದ ಸ್ನೇಹವಿರಹಿ ಯಾದ ದುರ್ಯೋಧನನಿಗೆ ಕರ್ಣನ ಸಾವಿಗೆ ಕಾರಣನಾದ ಇಂದ್ರನ ಮಗ ಅರ್ಜುನನ ಮೇಲೆ ಕೋಪ ಉಕ್ಕಿ ಬಂದಿತು. ಆದರೂ ಮೊದಲು ಶರಶಯ್ಕೆಯಲ್ಲಿ ಮಲಗಿರುವ ಭೀಷ್ಮಾಚಾದ್ಯರ ಚರಣಾರವಿಂದಗಳಿಗೆ ನಮಸ್ಕರಿಸಲೆಂದು ದುರ್ಯೋಧನ ಮುಂದೆ ಸಾಗಿದನು.


ಹೀಗೆ ಈ ದುರ್ಯೋಧನನು ತನ್ನ ಬಂಧುಬಾಂಧವರನ್ನೆಲ್ಲಾ ಕಳೆದುಕೊಂಡು ಏಕಾಂಗಿಯಾಗಿ ದುಃಖತಪ್ಪ ರಣರಂಗವನ್ನು ಹಾದು ಹೋಗುವ ಚಿತ್ರಣವನ್ನು ಕವಿ ರನ್ನನು ಅತ್ಯಂತ ಪರಿಣಾಮಕಾರಿಯಾಗಿ ಚಿತ್ರಿಸಿದ್ದಾನೆ. ಶೋಕರಸ ಮಡುಗಟ್ಟಿ ನಿಂತಿದೆ ಎನ್ನಬಹುದು.


ದುರ್ಯೋಧನ ವಿಲಾಪ ಒಂದು ಅಂಕದ ಪ್ರಶ್ನೋತ್ತರಗಳು: Duryodhana Vilapa Lesson One Marks Question Answers in Kannada

I. ಒಂದು ವಾಕ್ಯದಲ್ಲಿ ಉತ್ತರಿಸಿ .

1. ಕುರುಪತಿ ರಣರಂಗದಲ್ಲಿ ಏನನ್ನು ಮೆಟ್ಟಿ ನಡೆದನು?

ಉತ್ತರ: ಕುರುಪತಿ ರಣರಂಗದಲ್ಲಿ ( ಬಾರಿಗಾತ್ರದ ) ಹೆಣಗಳ ಮೇಲೆ ಕಾಲಿಟ್ಟು ನಡೆಯುತ್ತಿದ್ದನು.

2. ರಣರಂಗದಲ್ಲಿ ಸಾಗುವಾಗ ದುರ್ಯೋಧನ ಯಾರ ನೆರವನ್ನು ಅವಲಂಬಿಸಿದ್ದನು ?

ಉತ್ತರ: ರಣರಂಗದಲ್ಲಿ ಸಾಗುವಾಗ ದುರ್ಯೋಧನನು ಸಂಜಯನ ನೆರವನ್ನು ಅವಲಂಬಿಸಿದ್ದನು .


3. ಪಿನಾಕ ಪಾಣಿ ಎಂದರೆ ಯಾರು ?

ಉತ್ತರ: ಪಿನಾಕ ಎಂಬ ದನಸ್ಸನ್ನು ಹಿಡಿದಿರುವ “ಶಿವ”.

5. ಚಕ್ರವ್ಯೂಹವನ್ನು ರಚಿಸಿದವರು ಯಾರು ?

ಉತ್ತರ: ಚಕ್ರವ್ಯೂಹವನ್ನು ರಚಿಸಿದವರು ದ್ರೋಣಾಚಾರ್ಯರು.


5. ತಂದೆಗೆ ಜಲಾಂಜಲಿಯನ್ನು ಯಾರು ಕೊಡಬೇಕು ?

ಉತ್ತರ: ತಂದೆಗೆ ಜಲಾಂಜಲಿಯನ್ನು ಮಗನು ಕೊಡಬೇಕು.


6. ದಿವ್ಯಜ್ಞಾನಿ ಎಂದು ಯಾರನ್ನು ಕರೆಯಲಾಗಿದೆ ?

ಉತ್ತರ: ದಿವ್ಯಜ್ಞಾನಿ ಎಂದು ಸಹದೇವನನ್ನು ಕರೆಯಲಾಗಿದೆ.


8. ಅಂಗಾಧಿಪತಿ ಯಾರು ?

ಉತ್ತರ: ಅಂಗಾಧಿಪತಿ ಕರ್ಣ


7. ಹರಿಯು ಕರ್ಣನಿಂದ ಬೇಡಿದೇನು ?

ಉತ್ತರ: ಹರಿಯು ಕರ್ಣನಿಂದ ಬೇಡಿದ್ದು ಕವಚವನ್ನು.


II . ಎರಡು ಮೂರು ವಾಕ್ಯಗಳಲ್ಲಿ ಉತ್ತರಿಸಿ.


1. ದುಶ್ಯಾಸನನು ಅಣ್ಣನಿಗೆ ತೋರಿದ ವಿನಯ ಶೀಲತೆ ಯಾವುದು ?

ಉತ್ತರ: ಚಿಕ್ಕಂದಿನಿಂದ ಸಯುವವರೆಗೂ ದುಶ್ಯಾಸನನು ಅಣ್ಣನಿಗೆ ಎಲ್ಲೆಲ್ಲಿಯೂ ವಿನಯವನ್ನು ತೋರಿದ್ದನು ತಾಯಿಯ ಎದೆ ಹಾಲು ಕುಡಿಯುವದರಲ್ಲಿ, ಸೋಮರಸವನ್ನು, ಉತ್ತಮವಾದ ಭೋಜನವನ್ನು ಸೇವಿಸುವುದರಲ್ಲಿ ಅಣ್ಣನ ಬಳಿಕವೇ ದುಶ್ಯಾಸನನು ಸೇವಿಸುತ್ತಿದ್ದನು. ಹೀಗೆ ದುಶ್ಯಾಸನು, ಅಣ್ಣನಿಗೆ ಬಹಳ ವಿಧೇಯನಾಗಿ, ವಿನಯಶೀಲತೆಯನ್ನು ತೋರಿದನು.


2. ದುರ್ಯೋಧನನನು ತನ್ನ ಮಗನ ಶವವನ್ನು ಕಂಡು ಹೇಗೆ ವ್ಯಥೆ ಪಡುತ್ತಾನೆ ?

ಉತ್ತರ: ದುರ್ಯೋಧನನು ತನ್ನ ಮಗನ ಶವವನ್ನು ಕಂಡಾಗ ಅವನ ಕೈಯಲ್ಲಿದ್ದ ಆಯುಧ ಬಿದ್ದು ಹೋಯಿತು. ಹೃದಯದಲ್ಲಿದ್ದ ಯುದ್ಯೋತ್ಸಾಹ ಜರನೆ ಇಳಿದು ಹೋಯಿತು. ಕಣ್ಣಿನಿಂದ ನೀರು ( ಕಣ್ಣೀರು ) ಸುರಿಯತೊಡಗಿತು. ತಂದೆಗೆ ಎಳ್ಳು ನೀರು ತರ್ಪಣ ಬಿಡಬೇಕಾದುದು ರೂಡಿ, ಅದಕ್ಕೆ ವ್ಯತಿರಿಕ್ತವಾಗಿ ನಾನು ನಿನಗೆ ತರ್ಪಣ ಬಿಡುವಂತಾಯಿತೆ. ನೀನು ಹೀಗೆ ಕ್ರಮ ವ್ಯತ್ಯಾಸಗೊಳಿಸಬೇಕೆ ? ಎಂದು ದುರ್ಯೋಧನನು ಮಗನ ಶವವನ್ನು ಕಂಡು ಮರುಗಿದನು.


3. ದುರ್ಯೋಧನನು ಕರ್ಣನ ದಾನ ಗುಣವನ್ನು ಹೇಗೆ ಪ್ರಶಂಸಿಸಿದ್ದಾನೆ ?

ಉತ್ತರ: ಅಂಗರಾಜಾ , ಇಂದ್ರನು ಬಂದು ಬೇಡಿದಾಗ ನಿನ್ನ ಸ್ವಾಬಿಕವಾದ ತನ್ನ ಕವಚನ್ನು ಕೊಟ್ಟೆ ಕುಂತಿ ಬಂದು ಬೇಡಿದಾಗ ಅನುಮಾನಕ್ಕೆ ಆಸ್ಪರದಕೊಡದೆ ಸ್ವಲ್ಪವೂ ಯೋಚಿಸದೆ ಮಂತ್ರಾಸ್ತ್ರಗಳನ್ನು ನೀಡಿದೆ ಎಂಬುದಾಗಿ ದುರ್ಯೋಧನನು ಕರ್ಣನ ದಾನ ಗುಣವನ್ನು ಹೊಗಳಿದ್ದಾನೆ .


4.ಕರ್ಣನ ಜನ್ಮ ರಹಸ್ಯವನ್ನು ಯಾರು ಯಾರು ಅರಿತಿದ್ದರು ?

ಉತ್ತರ: ಕರ್ಣನ ಜನ್ಮರಹಸ್ಯವನ್ನು ಕುಂತಿ , ಕೃಷ್ಣ , ಸೂರ್ಯದೇವ ಹಾಗೂ ದಿವ್ಯಜ್ಞಾನಿಯಾದ ಸಹದೇವನು ತಿಳಿದಿದ್ದನು .


5. ರಣರಂಗದಲ್ಲಿ ಬಿದ್ದಿದ್ದ ಅಭಿಮನ್ಯುವಿನ ಕಳೇಬರ ಯಾವ ರೀತಿ ಕಾಣುತ್ತಿತ್ತು ?

ಉತ್ತರ: ರಣರಂಗದಲ್ಲಿ ಬಿದ್ದಿದ್ದ ಅಭಿಮನ್ಯುವಿನ ಕಳೇಬರವು “ಅರ್ಧ ಮುಚ್ಚಿದ ಕಣ್ಣು, ಉತ್ಸಾಹದಿಂದ ಅರಳಿದ ಮುಖ, ಕತ್ತರಿಸಿ ಹೋದ ಕೈಗಳು, ಬಭೀಕರವಾಗಿ ಕಚ್ಚಿದ ಅವುಡು ಸಹಿತವಾಗಿ ಶತ್ರು ಬಾಣ ಪ್ರಹಾರದಿಂದ ಮೈಯೆಲ್ಲ ಕಡಲಲ್ಲಿ ಮುಳುಗಿ ಬಿದ್ದು ಬೀಭತ್ಯಕರವಾಗಿ ಕಾಣುತ್ತಿತ್ತು.” ಜರ್ಜರಿತವಾಗಿ ಬಿಸಿರಕ್ತದ ಕಡಲಲ್ಲಿ ಮುಳುಗಿ ಬಿದ್ದು ಭೀಭತ್ಯಕರವಾಗಿ ಕಾಣುತ್ತಿತ್ತು.

III . ಐದು – ಆರು ವಾಕ್ಯಗಳಲ್ಲಿ ಉತ್ತರಿಸಿ.


1. ದ್ರೋಣನ ಕಳೆಬರವನ್ನು ಕಂಡು ದುರ್ಯೋಧನ ಹೇಗೆ ದು:ಖಿಸುತ್ತಾನೆ ?

ಉತ್ತರ: ದ್ರೋಣನ ದೇಹವು ಬಾಣ ಸಮೂಹಗಳಿಂದ ನಜ್ಜು ಗುಜ್ಜಾಗಿತ್ತು ದ್ರೋಣಾಚಾರ್ಯ ನನ್ನು ಕಾಣುತ್ತಲೆ,  ಆಚಾರ್ಯ ನಿಮ್ಮ ಧರ್ನು ವಿದ್ಯಾ ಕೌಶಲ್ಯವನ್ನು ಎಲ್ಲರು ಬಲ್ಲರು, ಅರ್ಜುನನ ಏನು, ಸ್ವತ: ಪಿನಾಕ ಎಂಬ ಧನಸ್ಸನ್ನು ಹಿಡಿದು ಬಂದ ಶಿವನು ಕೂಡ ನಿಮ್ಮೊಡನೆ ಯುದ್ಧ ಮಾಡಿ ಗೆಲ್ಲಲಾರನು ಅಂಥಹುದರಲ್ಲಿ ನಿಮಗೆ ಇಂತಹ ಮರಣವೇ ? ಇದಕ್ಕೆ ತಮ್ಮ ಉದಾಸೀನತೆ ಕಾರಣವೋ ಅಥವಾ ಆ ತನ್ನ ಕರ್ಮವೋ ಅದಕ್ಕೆ ನಿಮಗೆ ನಿಷ್ಕಾರಣಾವಾಗಿ ಸಾವು ಒದಗಿಬಂತೋ ಎಂಬುದಾಗಿ ದುಃಖಿಸುತ್ತಾನೆ.


2. ದುರ್ಯೋಧನನು ದುಶ್ಯಾಸನನ್ನು ಕಂಡು ವ್ಯಕ್ತ ಪಡಿಸಿದ ಭಾವನೆಗಳು ಯಾವುವು ?

ಉತ್ತರ: ದುರ್ಯೋಧನನು ದುರ್ಯೋಧನನನ್ನು ಕಂಡು ವ್ಯಕ್ತಪಡಿಸಿದ ಭಾವನೆಗಳೆಂದರೆ “ನಿನ್ನನ್ನು ಕೊಂದವನು ಇನ್ನೂ ಬದುಕಿದ್ದಾನೆ, ಕೊಂದವನನ್ನೇ ಹೊಡೆದು ಕೊಲ್ಲದೆ ಬಿಟ್ಟ ನಾನು ಕೂಡ ಇನ್ನೂ ಜೀವಂತವಾಗಿ ಉಳಿದಿದ್ದೆನೆ, ನಿನ್ನ ಪ್ರೀತಿಗೂ, ನನ್ನ ಕುಟುಂಬ ವಾತ್ಸಲ್ಯಕ್ಕೂ ಇದು ಯೋಗ್ಯವೇ?” ತಾಯಿ ಎದೆ ಹಾಲನ್ನು ನಾನು ಮೊದಲುಂಡ ಬಳಿಕ, ನೀನು ಉಂಡೆ, ಸೋಮರಸವನ್ನು ಉತ್ತಮವಾದ ಬೋಜನವನ್ನು ನಾನು ಸೇವಿಸಿದ ಬಳಿಕವೇ ನೀನು ಸವಿದೆ. ಬಾಲ್ಯದಿಂದ ಇಂದಿನವರೆವಿಗೆ ಎಲ್ಲೆಲ್ಲಿಯೂ ನೀನು ವಿನಯವನ್ನು ಮೀರಿ ನಡೆದವನಲ್ಲ. ದುಶ್ಯಾಸನಾ, ಮರಣದ ವಿಷಯದಲ್ಲಿ ಮಾತ್ರ ನನಗಿಂತ ಮುಂದೆ ನೀನೆ ಹೋದೆಯಲ್ಲ. ಇದೊಂದರಲ್ಲಿ ಕ್ರಮ ತಪ್ಪಿತು, ಎಂಬುದಾಗಿ ತನ್ನ ಭಾಗವನೆಗಳನ್ನು ವ್ಯಕ್ತಪಡಿಸಿದನು.


3.ದುರ್ಯೋಧನನು ರಣರಂಗದಲ್ಲಿ ನಡೆದುಬಂದ ಬಗೆಯನ್ನು ಕವಿ ಹೇಗೆ ವರ್ಣಿಸಿದ್ದಾರೆ ?

ಉತ್ತರ: ದುರ್ಯೋದನನು ರಣರಂಗದಲ್ಲಿ ನಡೆದು ಬರುತ್ತಿರಲು, ಕಾಲಿಡಲು ಕೂಡ ಆತನಿಗೆ ಸ್ಥಳವಿರಲಿಲ್ಲ. ನೆತ್ತರ ಕಡಲಲ್ಲಿ ಮುರಿದು ಬಿದ್ದಿದ್ದ ಆಯುಧಗಳು ಹೆಜ್ಜೆ ಹೆಜ್ಜೆಗೆ ಅಂಗಾಲುಗಳಿಗೆ ಚುಚ್ಚುತ್ತಿದ್ದವು, ಕಾಲಿಡುವುದನ್ನು ನೆಲಕಾಣದ ಬಾರಿಹೆಣಗಳ ರಾಶಿಯ ಮೇಲೆಯೇ ಕಾಲಿಟ್ಟು ನಡೆಯುತ್ತಿದ್ದನು. ಆನೆ ಹೆಣಗಳ ಬೆಟ್ಟವನ್ನೇರಿ, ರಕ್ತದನದಿಗಳನ್ನು ದಾಟಿ, ಆನೆ ಸೊಂಡಿಲೆಂಬ ಕರಿ ಬಳ್ಳಿಗಳ ಕಾಡಿನಲ್ಲಿ ಸಿಲುಕಿ, ಸಂಜಯನ ಹೆಗಲನ್ನು ಆದರಿಸಿಕೊಂಡು ರಣರಂಗದಲ್ಲಿ ನಡೆಯುತ್ತಿದ್ದನು ಎಂಬುದಾಗಿ ಕವಿ ರಣರಂಗದ ಬೀಭತ್ಯಕರ ದೃಶ್ಯವನ್ನು ವರ್ಣಿಸಿದ್ದಾನೆ.


4. ಅಭಿಮನ್ಯುವಿನ ಶೌರ್ಯ ಸಹಸವನ್ನು ದುರ್ಯೋಧನನು ಹೇಗೆ ಹೊಗಳುತ್ತಾನೆ ?

ಉತ್ತರ: ಅಭಿಮನ್ಯುವಿನ ಶೌರ್ಯ ಸಾಹಸವನ್ನು ದುರ್ಯೋಧನನನ್ನು ಬಹಳವಾಗಿ ಹೊಗಳಿದ್ದಾನೆ. ಗುರು ದ್ರೋಣಾಚಾರ್ಯರು ರಚಿಸಿದ ಚಕ್ರವ್ಯೂಹವನ್ನು ಭೇದಿಸುವುದು ಬೇರೆ ಯಾರಿಗೂ ಸಾಧ್ಯವಾಗಿರಲಿಲ್ಲ. ಅದನ್ನು ಭೇದಿಸಿ ಹೊಕ್ಕು, ರಣರಂಗದಲ್ಲಿ ಶತ್ರು ರಾಜರನ್ನು ಹೊಡೆದು ಕೊಂದ ಅರ್ಜುನನ ಪುತ್ರನೇ, ನಿನಗೆ ಸರಿಸಾಟಿ ಯಾರು ಇಲ್ಲ. ಅದ್ವಿತೀಯ ಬಲಶಾಲಿಯಾದ ಅಭಿಮನ್ಯು ಕುಮಾರನೇ ನಿನ್ನ ಪರಾಕ್ರಮ, ಇತರರಿಗೆ ಅಸಾಧ್ಯ. ನಾನು ನಿನ್ನಲ್ಲಿ ಬೇಡಿಕೊಳ್ಳುತ್ತೇನೆ ನಿನ್ನ ಸಹವಾಸದಲ್ಲಿ ಒಂದಂಶವಾದರು ನಮ್ಮಲ್ಲಿದ್ದರೆ ಅದಕ್ಕೆ ಅನುಗುಣವಾದ ವೀರ ಮರಣ ನಮಗೆ ಒದಗಿ ಬರಲಿ ಎಂದು ದುರ್ಯೋಧನನು ಹೇಳಿದನು.

5. ಕರ್ಣನ ಉದ್ದಾತ್ತ ಗುಣಗಳನ್ನು ದುರ್ಯೋಧನ ಹೇಗೆ ಕೊಂಡಾಡಿದ್ದಾನೆ ?

ಉತ್ತರ: ಕರ್ಣನು ಉದಾತ್ತ ಗುಣಗಳನ್ನು ಹೊಂದಿದವನು, ಅದನ್ನು ಕಂಡು ಆತನ ಆಪ್ತ ಮಿತ್ರನಾದ ದುರ್ಯೋಧನನು ಮನಸಾರೆ ಕೊಂಡಾಡಿದ್ದಾನೆ. “ನಾನು ದುಶ್ಯಾಸನ ಹಾಗೂ ನೀನು ಮೂವರು ಒಂದು ಜೀವವಾಗಿ ಇದ್ದವರು ಆತನು ಹೋದ ಬಳಿಕ ನಾನು, ನೀನು ಇಬ್ಬರೆ ಆಗಿದ್ದೆವು. ಅಂಗರಾಜಾ ಈಗ ನೀನು ಕೂಡ ಬಿಟ್ಟು ಎಲ್ಲಿಗೆ ಹೋದೆ ? ನಿನ್ನ ಗೆಳೆಯ ಈ ಸುಯೋಧನನನ್ನು ನೋಡದೆ, ಮಾತನಾಡಿದೆ, ಅಪ್ಪಿಕೊಳ್ಳದೆ, ಅಪ್ಪಣೆಯೇನೆಂದು ಕೇಳದೆ, ಜೀಯಾ ಎನ್ನದೆ, ದೇವಾ ಎನ್ನದೆ, ಏಕೆ ಮಾತನಾಡದಿರುವೆ ಕರ್ಣ. ನೀನಿರುವ ದೇಶದಲ್ಲಿ ಸುಳ್ಳು, ಲೋಭ, ಭಯ ಎಂಬುದು ಇರಲಿಲ್ಲ. ಸತ್ಯ ತ್ಯಾಗ, ಪರಾಕ್ರಮ ಎಂಬುದಕ್ಕೆ ನೀನೆ ಅಗ್ರಗಣ್ಯ, ಅಂಗರಾಜಾ, ಇಂದ್ರನು ಬೇಡಿದಾಗ ನಿನ್ನ ಸಹಜ ಕವಚವನ್ನು ಕೊಟ್ಟೆ, ಕುಂತಿ ಬೇಡಿ ಬಂದಾಗ ಅನುಮಾನಿಸದೆ ಮಂತ್ರಾಸ್ತ್ರಗಳನ್ನೇ ಕೊಟ್ಟು ನೀನು ಸಹಜ ಶೂರನೂ ಹೌದು, ಮಹಾವೀರನೂ ಹೌದು, ಎಂಬುದಾಗಿ ಕರ್ಣನ ಉದಾತ್ತ ಗುಣಗಳನ್ನು ದುರ್ಯೋಧನನು ಕೊಂಡಾಡಿದ್ದಾನೆ.


ಅಭ್ಯಾಸ

I. ಸಂದರ್ಭ ಸೂಚಿಸಿ ವಿವರಿಸಿ .

1. “ ನಿನ್ನೊಡನೆ ದೊರೆಗೆ ಗಂಡರು ಮೊಳರೇ ”

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ‘ರನ್ನ’ನು ಬರೆದ, “ಸಾಹಸ ಭೀಮ ವಿಜಯಂ” ( ರನ್ನನ ಗದಾಯುದ್ಧ ) ಎಂಬ ಕೃತಿಯಿಂದ ಆರಿಸಲ್ಪಟ್ಟ “ದುರ್ಯೋಧನನ ವಿಲಾಪ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ: ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ ತನ್ನವರನ್ನು ಕಾಣಲು ಬಂದ ದುರ್ಯೋಧನನು, ವೀರ ಅಭಿಮನ್ಯುವಿನ ಕಳೆಬರದೆಡೆಗೆ ಬಂದು ಈ ವಾಕ್ಯವನ್ನು ಅಭಿಮನ್ಯುವಿನ ಶೌರವನ್ನು ಪ್ರಶಂಸಿಸುತ್ತಾ ಹೇಳುತ್ತಿದ್ದಾನೆ.

ವಿವರಣೆ: ಅರ್ಜುನನ ಪುತ್ರನಾದ ಹೇ ವೀರ ಅಭಿಮನ್ಯು ನಿನ್ನ ಕೌರಕ್ಕೆ ಸರಿಸಾಟಿಯಾದ ವೀರರುಂಟೆ ? ಎಂಬುದು ಈ ವಾಕ್ಯದ ಭಾವಾರ್ಥವಾಗಿದೆ.

ವಿಶೇಷತೆ: ಅಭಿಮನ್ಯುವನ್ನು ಶತ್ರುವಾದರೂ ದುರ್ಯೋಧನನು ಅವನ ವೀರತೆಯನ್ನು ಪ್ರಶಂಸಿಸುತ್ತಿದ್ದಾನೆ.

2. ಜನನೀಸ್ತನ್ಯಮನುಂಡೆನಾಂ ಬಳಿಕ ನೀಂ

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ‘ರನ್ನ’ನು ಬರೆದ, “ಸಾಹಸ ಭೀಮ ವಿಜಯಂ” ( ರನ್ನನ ಗದಾಯುದ್ಧ ) ಎಂಬ ಕೃತಿಯಿಂದ ಆರಿಸಲ್ಪಟ್ಟ “ದುರ್ಯೋಧನನ ವಿಲಾಪ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ: ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ ದುರ್ಯೋಧನನು ಮಡಿದ ತನ್ನವರನ್ನೆಲ್ಲಾ ಕಾಣಲು ಬಂದಾಗ ದುಶ್ಯಾಸನನ ಶವವನ್ನು ಕಂಡು ಆತನನ್ನು ಉದ್ದೇಶಿಸಿ ಈ ಮಾತನ್ನು ಹೇಳುತ್ತಿದ್ದಾನೆ.

ವಿವರಣೆ: ತಾಯಿಯ ಎದೆ ಹಾಲನ್ನು ಮೊದಲು ಕುಡಿದವನು ನಾನು , ನಂತರನೀವು ಕುಡಿದೆ, ಇದೇ ರೀತಿ ಎಲ್ಲದರಲ್ಲೂ ಮೊದಲು ನಾನು ಬಳಿಕ ನೀನು, ಆದರೆ ಮರಣದಲ್ಲಿ ಮಾತ್ರ ನೀ ಹೇಗೆ ಮೊದಲಾದೆ. ನಾ ಮರಣಿಸಿದ ಬಳಿದ ನೀನು ಸಾಯಬೇಕಿತ್ತು. ಆದರೆ ವಿದಿ ಇಲ್ಲಿ ಕ್ರಮ ತಪ್ಪಿತು ಎಂದು ತಮ್ಮ ದುಶ್ಯಾಸನನ ಶವದ ಬಳಿ ಪಲಾಪಿಸಸುತ್ತಾನೆ.

ವಿಶೇಷತೆ: ದುರ್ಯೋಧನನಿಗೆ ತಮ್ಮನ ಮೇಲೆ ಇದ್ದ ಪ್ರೀತಿ ಕಂಡು ಬರುತ್ತದೆ . ಹಳೆಗನ್ನಡದ ಭಾಷಾಶೈಲಿಯಲ್ಲಿ ಧಾರ್ಮಿಕವಾಗಿ ಮೂಡಿ ಬಂದಿದೆ.


3. “ ಈ ಗಳ ನೀನು ಮಗಲ್ದೆತ್ತ ವೋದೆಯಂಂಗಾಧಿಪತೀ “

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ‘ರನ್ನ’ನು ಬರೆದ, “ಸಾಹಸ ಭೀಮ ವಿಜಯಂ” ( ರನ್ನನ ಗದಾಯುದ್ಧ ) ಎಂಬ ಕೃತಿಯಿಂದ ಆರಿಸಲ್ಪಟ್ಟ “ದುರ್ಯೋಧನನ ವಿಲಾಪ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ: ದುರ್ಯೋಧನನು ಕುರುಕ್ಷೇತ್ರ ಯುದ್ಧದಲ್ಲಿ ತನ್ನವರೆಲ್ಲ ಕಳೆದುಕೊಂಡು ಅವರ ಕಳೆಬರಹದೆಡೆ ಬಂದಾಗ ಕರ್ಣನು ಮಡಿದು ಬಿದ್ದಿದ್ದನ್ನು ಕಂಡು ಆತನನ್ನು ಉದ್ದೇಶಿಸಿ ದುರ್ಯೋಧನನು ಈ ಮಾತನ್ನು ಹೇಳುತ್ತಾನೆ.

ವಿವರಣೆ: ತನ್ನ ಪ್ರಿಯ ಪುತ್ರ , ತಮ್ಮ ಎಲ್ಲರನ್ನು ಕಳೆದುಕೊಂಡ ದುರ್ಯೋಧನನು ಆಪ್ತನಾದ ಕರ್ಣನನ್ನು ಕಳೆದುಕೊಂಡು , “ನೀನು ಕೂಡ ನನ್ನನ್ನು ಬಿಟ್ಟು ಹೋದೆಯೆಲ್ಲ” ಎಂದು ಪರಿತಪಿಸುತ್ತಿದ್ದಾನೆ.

ವಿಶೇಷತೆ: ಕರ್ಣನ ಬಗ್ಗೆ ದುರ್ಯೋಧನನಿಗಿದ್ದ ಅತೀವ ಪ್ರೀತಿ ಇಲ್ಲಿ ವ್ಯಕ್ತವಾಗಿದೆ.

4. “ಅನಱವೆಂ ಪೃಥೆ ಯಱವಳ್‌”

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ‘ರನ್ನ’ನು ಬರೆದ, “ಸಾಹಸ ಭೀಮ ವಿಜಯಂ” ( ರನ್ನನ ಗದಾಯುದ್ಧ ) ಎಂಬ ಕೃತಿಯಿಂದ ಆರಿಸಲ್ಪಟ್ಟ “ದುರ್ಯೋಧನನ ವಿಲಾಪ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ: ಕುರುಕ್ಷೇತ್ರ ಯುದ್ಧ ಭೂಮಿಯಲ್ಲಿ ತನ್ನ ಆಪ್ತ ಗೆಳೆಯ ಕರ್ಣನು ಸತ್ತು ಬಿದ್ದಿರುವುದನ್ನು ಕಂಡು ಆತನನ್ನು ಉದ್ದೇಶಿಸಿ ಈ ಮಾತನ್ನು ಹೇಳಿದ್ದಾನೆ.

ವಿವರಣೆ: ಕರ್ಣನ ಬಳಿ ಬಂದ ದುರ್ಯೋಧನನನು ಆತನನ್ನು ಉದ್ಧೇಸಿಸಿ “ನೀನು ಯಾರ ಮಗನೆಂದುದನ್ನು ನಾನು ಬಲ್ಲೆ” ಎಂಬುದಾಗಿ ನುಡಿಯುತ್ತ ಕರ್ಣನು ಪಾಂಡವರ ಹಿರಿಯ ಸಹೋದರ , ಕುಂತಿಯ ಹಿರಿಯ ಮತ ಎಂಬುದನ್ನು ಇಲ್ಲಿ ಸೂಚ್ಯವಾಗಿ ತಿಳಿಸಲಾಗಿದೆ.

ವಿಶೇಷತೆ: ಆಪ್ತಮಿತ್ರನಾದ ಕರ್ಣನನ್ನು ನೆನೆದು ಮಮ್ಮುಲ ಮರಗುತ್ತಾನೆ. ಇಲ್ಲಿ ಕರ್ಣನ ಜನ್ಮ ರಹಸ್ಯದ ಅರಿವು, ಅದನ್ನು ತಿಳಿಯುವ ಕುತೂಹಲ ಇಲ್ಲಿ ತಿಳಿಸಿದ್ದಾರೆ.


5. ಗಾಂಡಿವಿಯಲು ಪಿನಾಕ ಪಾಣಿಯಂ ನೇಳೆಯನ್.

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ‘ರನ್ನ’ನು ಬರೆದ, “ಸಾಹಸ ಭೀಮ ವಿಜಯಂ” ( ರನ್ನನ ಗದಾಯುದ್ಧ ) ಎಂಬ ಕೃತಿಯಿಂದ ಆರಿಸಲ್ಪಟ್ಟ “ದುರ್ಯೋಧನನ ವಿಲಾಪ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ: ಕುರುಕ್ಷೇತ್ರದ ಯುದ್ಧದಲ್ಲಿ ದುರ್ಯೋಧನನ ಕಡೆಯವರೆಲ್ಲಾ ಸಾವನಪ್ಪಿರಲು (ಯುದ್ಧ ಮೈದಾನಕ್ಕೆ ರಣರಂಗಕ್ಕೆ ಬಂದಾಗ ದ್ರೋಣರನ್ನು ಕಂಡು ಈ ವಾಕ್ಯವನ್ನು ದುರ್ಯೋಧನನು ಹೇಳುತ್ತಿದ್ದಾನೆ.

ವಿವರಣೆ: ದ್ರೋಣಾಚಾರ್ಯರ ಬಿಲ್ಲು ವಿದ್ಯೆ ಪ್ರಾವಿಣ್ಯತೆಯ ಬಗ್ಗೆ ತಿಳಿಸಲಾಗಿದೆ, ಹಳೆಗನ್ನಡ ಬಾಷಾಶೈಲಿ ಮಾರ್ಮಿಕವಾಗಿ ಮೂಡಿ ಬಂದಿದೆ.


6. ನೀಂ ಕ್ರಮವಿಪರ್ಯಯಂ ಮಾಡುವುದೇ ?

ಪ್ರಸ್ತಾವನೆ : ಪ್ರಸ್ತುತ ಈ ಸಾಲನ್ನು ‘ರನ್ನ’ನು ಬರೆದ, “ಸಾಹಸ ಭೀಮ ವಿಜಯಂ” ( ರನ್ನನ ಗದಾಯುದ್ಧ ) ಎಂಬ ಕೃತಿಯಿಂದ ಆರಿಸಲ್ಪಟ್ಟ “ದುರ್ಯೋಧನನ ವಿಲಾಪ” ಎಂಬ ಪದ್ಯಭಾಗದಿಂದ ಆರಿಸಲಾಗಿದೆ.

ಸಂದರ್ಭ: ದುರ್ಯೋಧನನು ಕುರುಕ್ಷೇತ್ರ ಯುದ್ಧದಲ್ಲಿ ತನ್ನವರನ್ನು ಕಾಣಲು ಬ೦ದಾಗ ತನ್ನ ಮಗ ಲಕ್ಷಣ ಕುಮಾರನು ಮಡಿದು ಬಿದ್ದುದ್ದನ್ನು ಕಂಡು ಆತನನ್ನು ಉದ್ದೇಶಿಸಿ ಈ ವಾಕ್ಯವನ್ನು ಹೇಳುತ್ತಿದ್ದಾನೆ.

ವಿವರಣೆ: ಮಗನು ತಂದೆ ತೀರಿ ಹೋದಾಗ ಕ್ರಿಯಾಕರ್ಮಗಳನ್ನು ಮಾಡುತ್ತಾನೆ. ಆದರೆ ಇಲ್ಲಿ ತಂದೆಯೇ ಮಗನಿಗೆ ಮಾಡಬೇಕಾದ ಸ್ಥಿತಿಯನ್ನು ನೆನೆದು ಮಗನೇ ನೀನು ಹೀಗೆ ಕ್ರಮವನ್ನು ವ್ಯತ್ಯಾಸಗೊಳಿಸಬೇಕೆ? ಎಂಬುದಾಗಿ ಲಕ್ಷಣ ಕುಮಾರನನ್ನು ಕಂಡು ದುರ್ಯೋಧನನು ಹೇಳುತ್ತಿದ್ದಾನೆ.

ವಿಶೇಷತೆ: ದುರ್ಯೋಧನನಲ್ಲಿ ಮಗನನ್ನು ಕಳೆದುಕೊಂಡ ದು:ಖ ಕಂಡುಬರುತ್ತದೆ.

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads