Most Important Notes

Breaking

Ads

Click Here to Join our Telegram Channel

Weekly Updates

Search this Blog

Edutube Kannada ಜಾಲತಾಣಕ್ಕೆ ಸ್ವಾಗತ…!! ಉದ್ಯೋಗಗಳ ಮಾಹಿತಿ, ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳ ಅಧ್ಯಯನ ಸಾಮಗ್ರಿ, ಪಿಡಿಎಫ್ ನೋಟ್ಸ್ ಸೇರಿದಂತೆ ಹಲವಾರು ಮಾಹಿತಿಗಳ ಅಪ್ಡೇಟ್ಸ್ ಪಡೆಯಲು ನಮ್ಮ Edutube Kannada ಜಾಲತಾಣಕ್ಕೆ ನಿರಂತರವಾಗಿ ಭೇಟಿ ನೀಡಿ...

Sunday 26 June 2022

Complete History of The Satavahana Dynasty in Kannada: ಶಾತವಾಹನರ ಸಂಪೂರ್ಣ ಇತಿಹಾಸ

 Complete History of The Satavahana Dynasty in Kannada: ಶಾತವಾಹನರ ಸಂಪೂರ್ಣ ಇತಿಹಾಸ

Complete History of The Satavahana Dynasty in Kannada: ಶಾತವಾಹನರ ಸಂಪೂರ್ಣ ಇತಿಹಾಸ

  • ಕರ್ನಾಟಕವನ್ನಾಳಿದ ಮೊದಲ ಹಿರಿಯ ಐತಿಹಾಸಿಕ ಸಾಮ್ರಾಜ್ಯ - ಶಾತವಾಹನರು .
  • ಆರಂಭದಲ್ಲಿ ಶಾತವಾಹನರು ಇವರ ಸಾಮಂತರಾಗಿದ್ದರು - ಮೌರ್ಯರು .
  • ಶಾತವಾಹನರ ರಾಜಧಾನಿ - ಪೈಥಾನ್ ಅಥವಾ ಪ್ರತಿಷ್ಠಾನ್.
  • ಶಾತವಾಹನರು ಸುಮಾರು - 460 ವರ್ಷ ಸಾಮ್ರಾಜ್ಯ ಆಳಿದರು.
  • ಶಾತವಾಹನರು ಈ ಮೂಲದವರು - ಆಂಧ್ರ ಮೂಲದವರು.
  • ಪ್ರಸ್ತುತ ಪೈಥಾನ್ ಈ ಪ್ರದೇಶದಲ್ಲಿದೆ - ಮಹಾರಾಷ್ಟ್ರ ಜೌರಂಗಬಾದ್ ಜಿಲ್ಲೆಯಲ್ಲಿದೆ.


ಶಾತವಾಹನರ ರಾಜಕೀಯ ಇತಿಹಾಸ

  • ಶಾತವಾಹನ ವಂಶದ ಸ್ಥಾಪಕ ದೊರೆ - ಸಿಮುಖ .
  • ಸಿಮುಖನ ರಾಜಧಾನಿ - ಪೈಥಾನ್ .
  • ಸಿಮುಖ ಮೌರ್ಯ ದೊರೆ ನಿಶಿರ್ಮನನ್ನು ಕೊಂದು ಸ್ವತಂತ್ರನಾದ.
  • ಸಿಮುಖನನ್ನು “ ರಾಜ ಸಿಮುಖ ಶಾತವಾಹನ “ ಎಂದು ವರ್ಣಿಸಿರುವ ಶಾಸನ - ನಾನಾ ಘಾಟ್ ಶಾಸನ .
  • ಸಿಮುಖನಿಗೆ “ ಶಾತವಾಹನ “ ಎಂಬ ಹೆಸರನ್ನು ಕೊಟ್ಟಿರುವ ಗ್ರಂಥ - ಜೈನ ಗ್ರಂಥ .
  • ಸಿಮುಖನ ನಂತರ ಅಧಿಕಾರಕ್ಕೆ ಬಂದವರು - ಇವನ ತಮ್ಮ ಕೃಷ್ಣ .
  • ಒಂದನೇ ಶಾತಕರ್ಣಿ ಈತ - ಸಿಮುಖನ ಮಗ.
  • ನಾನಾ ಘಾಟ್ ಶಾಸನದ ಕರ್ತೃ - ನಾಗನೀಕ .
  • “ ದಕ್ಷಿಣ ಪಥ ಸಾರ್ವಬೌಮ “ ಹಾಗೂ ಅಪ್ರತ್ರಿಹಿತ ಎಂಬ ಬಿರುದುಳ್ಳ ಅರಸ - ಒಂದನೇ ಶಾತಕರ್ಣಿ .
  • ಶಾತವಾಹನರ ಏಳನೇ ದೊರೆ - ಹಾಲ .
  • ಪ್ರಾಕೃತದ ಶೃಂಗಾರ ಕಾವ್ಯದ ಹೆಸರು - ಗಥಾಸಪ್ತಸತಿ .
  • ಗಥಾಸಪ್ತಸತಿ ಕೃತಿಯ ಕರ್ತೃ - ಹಾಲ
  • “ ಬೃಹತ್ ಕಥಾ ಅಥವಾ ವಡ್ಡ ಕಥಾ “ ಕೃತಿಯ ಕರ್ತೃ - ಗುಣಾಡ್ಯ .
  • ಹಾಲನ ಪತ್ನಿಯ ಹೆಸರು - ಲೀಲಾವತಿ .
  • ಹಾಲನ ರಾಜ್ಯ ಭಾಷೆ - ಪ್ರಾಕೃತ,
  • ಶಾತವಾಹನರ ಪ್ರಸಿದ್ಧ ದೊರೆ - ಗೌತಮೀಪುತ್ರ ಶಾತಕರ್ಣಿ
  • ಗೌತಮೀಪುತ್ರ ಶಾತಕರ್ಣಿಯ ತಾಯಿಯ ಹೆಸರು - ಗೌತಮೀ ಬಾಲಾಶ್ರೀ
  • ಗುಹಾಂತರ ನಾಸಿಕ್ ಶಾಸನದ ಕರ್ತೃ -ಗೌತಮೀ ಬಾಲಾಶ್ರೀ
  • ತ್ರೈ ಸಮುದ್ರ ತೋಯಾ ಪಿತಾವಾಹನ ಹಾಗೂ ಶಾತವಾಹನ ಕುಲ ಪ್ರತಿಷ್ಠಾಪಿತ ಎಂಬ ಬಿರುದುಳ್ಳ ಅರಸ -ಗೌತಮೀಪುತ್ರ ಶಾತಕರ್ಣಿ
  • ದಕ್ಷಿಣ ಪಥೇಶ್ವರ ಎಂಬ ಬಿರುದನ್ನು ಹೊಂದಿದ್ದ ಶಾತವಾಹನ ದೊರೆ -ಪುಲುಮಾವಿ

ಶಾತವಾಹನರ ಸಾಂಸ್ಕೃತಿಕ ಕೊಡುಗೆಗಳು

ಶಾತವಾಹನರ ಆಡಳಿತ:-

  • ಶಾತವಾಹನರ ಆಡಳಿತದ ಮುಖ್ಯಸ್ಥ -ರಾಜ
  • ಪ್ರಾಂತ್ಯದ ರಾಜ್ಯಪಾಲ - ಅಮಾತ್ಯ
  • ರಾಜನ ಆಪ್ತ ಸಲಹೆಗಾರ ಹಾಗೂ ಸಹಾಯಕ -ರಾಜಮಾತ್ಯ
  • ಮುಖ್ಯಕಾರ್ಯದ ನಿರ್ವಾಹಕ ಅಧಿಕಾರಿ -ಮಹಾಮಾತ್ಯ
  • ಸರಕು ಸರಂಜಾಮುಗಳ ಮೇಲ್ವಚಾರಕ -ಬಂಡಾರಿಕ
  • ಕೋಶಾಧ್ಯಕ್ಷ - ಹೆರಾಣಿಕ
  • ವಿದೇಶಾಂಗ ವ್ಯವಹಾರದ ರಾಯಭಾರಿ -ಮಹಾಸಂಧಿ ವಿಗ್ರಾಹಿತ
  • ರಾಜನ ಆಜ್ಞೆಗಳನ್ನು ಬರೆಯುವವನು - ಲೇಖಕ
  • ಸಾಮ್ರಾಜ್ಯವನ್ನು ಅಹರ ,ವಿಷಯ,ನಿಗಮ ಮತ್ತು ಗ್ರಾಮಗಳಾಗಿ ವಿಂಗಡಿಸಲಾಗಿತ್ತು
  • ಅಹರದ ಮುಖ್ಯಸ್ಥ -ಅಮಾತ್ಯ
  • ಪಟ್ಟಣಗಳ ಆಡಳಿತ ವ್ಯವಸ್ಥೆ -ನಿಗಮದ ಅಧೀನದಲ್ಲಿ
  • ಗ್ರಾಮದ ಮೇಲ್ವಿಚಾರಕ -ಗ್ರಾಮೀಣಿ

ಶಾತವಾಹನರ ಸಾಮಾಜಿಕ ಸ್ಥಿತಿಗತಿ

  • ಸಮಾಜದಲ್ಲಿದ್ದ ಕುಟುಂಬದ ಪದ್ದತಿ -ಅವಿಭಕ್ತ ಕುಟುಂಬ ಪದ್ದತಿ
  • ಸಮಾಜದಲ್ಲಿ ಮಹಿಳೆಯರು ಪಡೆಯುತ್ತಿದ್ದ ಬಿರುದುಗಳು - ಮಹಾಭೋಜ, ಮಹಾರತಿ,ಸೇನಾಪತಿ,
  • ಶಾತವಾಹನರ ರಾಜವಂಶ -ಮಾತೃ ಪ್ರಧಾನ
  • ಸಮಾಜದ ವಿಭಾಗಗಳು -ಮಹಾರತಿ ,ಮಹಾಭೋಜಕ , ಸೇನಾಪತಿ ,ಹಾಗೂ ಸಾಮಾನ್ಯ ವರ್ಗ

ಶಾತವಾಹನರ ಆರ್ಥಿಕ ಸ್ಥಿತಿಗತಿ

  • ಶಾತವಾಹನರ ಮುಖ್ಯ ಕಸುಬು -ಕೃಷಿ
  • ರಾಜ್ಯದ ಆದಾಯದ ಮೂಲ - ಭೂಕಂದಾಯ
  • ಜನತೆ ರಾಜ್ಯಕ್ಕೆ ಕೊಡಬೇಕಾದ ಭಾಗ - 1/6
  • ಈ ದೇಶಗಳೊಂದಿಗೆ ವ್ಯಾಪಾರ ಸಂಬಂಧವನ್ನು ಹೊಂದಿದ್ದರು, - ಯುರೋಪ್ ಹಾಗೂ ರೋಮ್
  • ಇವರ ಕಾಲದ ವೃತ್ತಿ ಸಂಘಗಳನ್ನು ಈ ಹೆಸರಿನಿಂದ ಕರೆಯಲಾಗಿದೆ. - ಶ್ರೇಣಿ .
  • ವೃತ್ತಿ ಸಂಘದ ಮುಖ್ಯಸ್ಥನನ್ನ ಈ ಹೆಸರಿನಿಂದ ಕರೆಯಲಾಗಿದೆ - ಶೇಠಿ .
  • ಶಾತವಾಹನರ ಪ್ರಮುಖ ನಾಣ್ಯಗಳು - ದಿನಾರ , ಸುವರ್ಣ ( ಚಿನ್ನ ) ಕುಷಣ ( ಬೆಳ್ಳಿ ) ಹಾಗೂ ಕರ್ಪಣ , ದ್ರಮ್ಮ , ಪಣ ಗದ್ಯಾಣ .
  • ಹಾಲನ ಗಾಥಸಪ್ತ ಸತಿಯು ಈ ದೇವರ ಸ್ತುತಿಯೊಂದಿಗೆ ಪ್ರಾರಂಭವಾಗುತ್ತದೆ - ಶಿವ .
  • ಶಾತವಾಹನರ ಪೋಷಣಿಯಲ್ಲಿದ್ದ ಭಾಷೆ - ಪ್ರಾಕೃತ ಮತ್ತು ಸಂಸ್ಕೃತ .
  • ಶಾತವಾಹನರ ಆಡಳಿತ ಭಾಷೆ - ಪ್ರಾಕೃತ .
  • ಪ್ರಭೂತಸಾರ , ರಾಯನಸಾರ , ಸಮಯಸಾರ , ಪ್ರವಚನಸಾರ ಮತ್ತು ದ್ವಾದಶನು ಪ್ರೇಕ್ಷ ಕೃತಿಗಳ ಕರ್ತೃ - ಜೈನ ಪಂಡಿತ ಕಂದಾಚಾರ್ಯ .
  • “ಕವಿ ಪುಂಗವ“ ಎಂಬ ಬಿರುದು ಪಡೆದ ದೊರೆ - ಹಾಲ .
  • ಹಾಲನ ಸಿಲೋನ್ ದಂಡೆ ಯಾತ್ರೆಗಳನ್ನು ತಿಳಿಸುವ ಕೃತಿ - ಲೀಲಾವತಿ .
  • ಗುಣಾಡ್ಯನ ಬೃಹತ್ ಕಥಾ ಈ ಭಾಷೆಯಲ್ಲಿದೆ - ಪೈಶಾಚ .
  • ಮಾಧ್ಯಮಿಕ ಸೂತ್ರ“ ಕೃತಿಯ ಕರ್ತೃ - ನಾಗಾರ್ಜುನ .
  • “ಕಾತಂತ್ರ ಸಂಸಕೃತದ“ ವ್ಯಾಕರಣ ಕೃತಿಯ ಕರ್ತೃ - ಸರ್ವವರ್ಮ.
  • “ಅಮರಾವತಿಯ ಸ್ಥೂಪ“ ಇವರ ಕಾಲಕ್ಕೆ ಸೇರಿದ್ದು - ಶಾತವಾಹನರು.
  • ಶಾತವಾಹನರ ನಿರ್ಮಿಸಿದ ಸ್ಥೂಪಗಳಲ್ಲಿ ಅತ್ಯಂತ ದೊಡ್ಡದ್ದು - ಅಮರಾವತಿ ಸ್ಥೂಪ.
  • ಅಜಂತಾ ಗುಹಾಂತರ ದೇವಾಲಯ ಇವರ ಕಾಲದಿಂದ ಆರಂಭಗೊಂಡಿತು - ಶಾತವಾಹನರು.

ಶಾತವಾಹನರ ಕುರಿತು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮಾಹಿತಿ: Extra Tips :-


  • ಶಾತವಾಹನರನ್ನು "ಕುಂತಲ ದೊರೆ" ಎಂದು ಸಂಭೋದಿಸಿದ ಕೃತಿಯ ಹೆಸರೇನು - ರಾಜ ಶೇಖರ ಕವಿಯ “ಕಾವ್ಯ ಮಿಮಾಂಸೆ".
  • ಹಾಲ ದೊರೆಯ ಇನ್ನೊಂದು ಹೆಸರು - ಹಾಲಾಯುಧ.
  • ಬನವಾಸಿಯ ಪ್ರಾಚೀನ ಹೆಸರು - ವೈಜಯಂತಿ ಪುರ (ವಿಜಯ ಪಕಾಕೆಪುರ).
  • ಪುಲುಮಾಯಿಯ ರಾಜಧಾನಿ - ಬನವಾಸಿ.
  • ಶಾತವಾಹನರ ರಾಜ್ಯದ ವಿಭಾಗಳಳು - ಜನಪದ ( ಡಿವಿಷನ್ ) ವಿಷಯ ( ಜಿಲ್ಲೆ ) ಸೀಮೆ ( ತಾಲ್ಲೂಕ್ ).
  • ಶಾತವಾಹನರ ಸಾಗರೋತ್ತರ ವ್ಯಾಪಾರದ ಕುರಿತು ಬೆಳಕು ಚೆಲ್ಲುವ ಗ್ರೀಕ್ ಕೃತಿ - ಅನಾಮದೇಯ - Periples of the Erithriyan Sea .
  • ಗುಪ್ತರು ಮತ್ತು ಚೋಳರ ಕಾಲದ "ಬೃಹತ್ ಭಾರತದ" ಸಾಧನೆಗೆ ನಾಂದಿ ಹಾಡಿದವರು - ಶಾತವಾಹನರು.
  • "ಭಾರತದ ಪ್ರಪ್ರಥಮ ಶಿವದೇವಾಲಯ" ಎಂದು ಪ್ರಸಿದ್ದಿಯನ್ನು ಪಡೆದ ದೇವಾಲಯ -ತಾಳಗುಂದದ ಏಕ ಮಂಟಪದ ಶಿವ ದೇವಾಲಯ".
  • ತಾಳಗುಂದದ ಏಕ ಮಂಟಪದ ಶಿವ ದೇವಾಲಯ ಇವರ ಕಾಲಕ್ಕೆ ಸೇರಿದೆ - ಶಾತವಾಹನರು.
  • ಶಾತವಾಹನರ ವರ್ತಕರನ್ನು ಈ ಹೆಸರಿನಿಂದ ಕರೆಯಲಾಗಿದೆ - ನೈಗಾಮ.
  • ಆಂದ್ರ ಭೃತೃಗಳು ಎಂದು ಕರೆಯಲ್ಪಟ್ಟವರು - ಶಾತವಾಹನರು.
  • ಶಾತವಾಹನ ಶಕೆಯ ಆರಂಭ - ಕ್ರಿ.ಶ.78.
  • ಶಾತವಾಹನ ಶಕೆಯನ್ನು ಆರಂಭಿಸಿದವರು - ಶಾತವಾಹನರು (ಹಾಲ).
  • ತ್ರೈಸಮುದ್ರತೋಯ ಪೀತವಾಹನದ ಅರ್ಥ - ಮೂರು ಸಮುದ್ರಗಳ ನೀರನ್ನು ಕುಡಿದು ಕುದುರೆಯನ್ನು ವಾಹನವಾಗಿ ಪಡೆದವ.
  • ಶಾತವಾಹನರ ಪ್ರಸಿದ್ದ ಕಲಾ ಕೇಂದ್ರಗಳು - ಕರ್ಲೆ , ಅಜಂತ . ಅಮರಾವತಿ , ನಾಗರ್ಜುನ ಕೊಂಡ , ಘಂಟಸಾಲಾ, ನಾಸಿಕ್, ಪೈಟಾನ್.
  • ಮೌರ್ಯರ ಪತನಾ ನಂತರ ದಖನ್ ಪ್ರಸ್ಥಭೂಮಿಯಲ್ಲಿ ಪ್ರಪ್ರಥಮ ಐತಿಹಾಸಿಕ ಹಿರಿಯ ಸಾಮ್ರಾಜ್ಯ ವನ್ನು ಸ್ಥಾಪಿಸಿದವರು - ಶಾತವಾಹನರು.
  • ಮೂರು ಸಾಗರಗಳ ಒಡೆಯರು ಎಂದು ಕರೆಯಲ್ಪಟ್ಟವರು - ಶಾತವಾಹನರು.
  • ಶಾತವಾಹನರು ಪ್ರಾರಂಭದಲ್ಲಿ - ಮೌರ್ಯರ ಸಾಮಂತರಾಗಿದ್ದರು.
  • ಎಲ್.ಡಿ.ಬಾರ್ನೆಟ್ ಪ್ರಕಾರ ಶಾತವಾಹನರ ಮೊದಲ ರಾಜಧಾನಿ ಶೀ ಕಾಕುಲು ಹಾಗೂ ನಂರದ ರಾಜಧಾನಿ - ಧನ್ಯ ಕಟಕ.
  • ಶಾತವಾಹನರ ಲಾಂಛನ - ಕುದುರೆ.

ಶಾತವಾಹನರ ಏಳಿಗೆಗೆ ಕಾರಣ :-

  • ಮೌರ್ಯರ ಸಾಮ್ರಾಜ್ಯದ ಪತನ
  • ದಖನ್ನ್ ನಲ್ಲಿ ಉಂಟಾದ ಆರ್ಥಿಕ ಸಾಮಾಜಿಕ ಬದಲಾವಣಿ.
  • ಮೌರ್ಯರ ಸಂಬಂಧದಿಂದಾಗಿ ಉಂಟಾದ ಕಬ್ಬಿಣದ ಬಳಕೆ ಹಾಗೂ ಅದರ ಪರಿಚಯ.
  • ದಕ್ಷಿಣ ಭಾರತದಲ್ಲಿ ಹೆಚ್ಚಾದ ಕೃಷಿ ವಿಸ್ತರಣಿ.
  • ಶಾತವಾಹನ ಎಂಬ ಪದವು "ಆಸ್ಟ್ರೋ ಏಷ್ಯಾಟಿಕ್" ಭಾಷೆಯ ಪದವೆಂದೂ ಪರ್ಶಿಯ ಅಥವಾ ಸಾತ ಎಂದರೆ ಕುದುರೆ ಎಂದು ಆದ್ದರಿಂದ ಅವರು ವಾಹನವಾಗುಳ್ಳವರೆಂದು ಅಭಿಪ್ರಾಯ ಪಡಲಾಗಿದೆ.
  • ಶಾತವಾಹನರ ಮೂಲ ನೆಲೆ - ಸಾತ ನಿಹಾರ ವಾಗಿತ್ತು ಎಂದು ತಿಳಿಸುವ ಶಾಸನಗಳು ಮಾಯಾಕಮೋನಿ ಮತ್ತು ಹಿರೇಹಡಗಲಿ ಶಾಸನ.
  • ಪುರಾಣಗಳಲ್ಲಿ ಸಿಮುಖನನ್ನು ಈ ಹೆಸರಿನಿಂದ ಕರೆಯಲಾಗಿದೆ - ವೃಷಲ.
  • ಸಿಮುಖನ್ನ “ಏಕ ಬ್ರಾಹ್ಮಣ “ ಎಂದು ಕರೆದ ಶಾಸನ - ನಾಸಿಕ್ ಶಾಸನ.
  • ಗೌತಮಿ ಪುತ್ರ ಶಾತಕರ್ಣಿಯ ಕಾಲಾವಧಿ - ಕ್ರಿ.ಪೂ.202 ಗಿಂದ 186 ರವರೆಗೆ.
  • ದಕ್ಷಿಣ ಪಥೇಶ್ವರ ಎಂಬ ಬಿರುದ್ದನ್ನು ತನ್ನ ಪ್ರಭುತ್ವದ ಸಂಕೇತವಾಗಿ ಧರಿಸಿದ್ದ ಶಾತವಾಹನ ದೊರೆ - ಗೌತಮಿಪುತ್ರ ಶಾತಕರ್ಣಿ.
  • ಹಾಲನ ದಂಡ ನಾಯಕನ ಹೆಸರು - ವಿಜಯಾನಂದ.
  • ತಾನೋಬ್ಬನೆ ಬ್ರಾಹ್ಮಣ ಎಂದು ಹೇಳಿಕೊಂಡ ಶಾತವಾಹನ ಅರಸ - ಗೌತಮಿ ಪುತ್ರ ಶಾತಕರ್ಣಿ.
  • ಗೋವರ್ದನ ಜಿಲ್ಲೆಯಲ್ಲಿ “ ಬೆನಕಟಕ “ ಎಂಬ ಪಟ್ಟಣಕ್ಕೆ ತಳಹದಿಯನ್ನು ಹಾಕಿದವರು - ಗೌತಮಿ ಪುತ್ರ ಶಾತಕರ್ಣಿ.
  • “ ನವನಗರ “ ಎಂಬ ಪಟ್ಟವನ್ನು ನಿರ್ಮಿಸಿದವರು - ಎರಡೆನೇ ಪುರುಮಾಯಿ.
  • ‘ ನವನಗರ ಸ್ವಾಮಿ “ ಎಂದು ಬಿರುದನ್ನು ಪಡೆದವನು - 2 ನೇ ಪುಲುಮಾಯಿ.

ಶಾತವಾಹನರ ಪತನಕ್ಕೆ ಕಾರಣಗಳು :-

  • ಶಕರ ದಾಳಿ
  • ಬುಡಕಟ್ಟಿನವರಿಂದ ಶಾತವಾಹನ ಪ್ರದೇಶಗಳ ಮೇಲೆ ಆಕ್ರಮಣ.
  • ನಾಗಾಗಳ ದಾಳಿ
  • ಪಲ್ಲವರು ಮತ್ತು ವಾಕಾಟಕರ ಪ್ರಬಲತೆ .


ಶಾತವಾಹನರ ಕುರಿತು ಎಲ್ಲ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯುಕ್ತವಾದ ಮಾಹಿತಿ: EXTRA TIPS

  • ಶಾತವಾಹನರ ಕಾಲದ ಅತ್ಯಂತ ಕಿರು ಆಡಳಿತದ ಘಟಕ - ಗ್ರಾಮ
  • ಶಾತವಾಹನರ ಕಾಲದಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದ ಸೇನಾ ನಿಯಂತ್ರಣ ವ್ಯವಸ್ಥೆ - ಗೌಲವೆಯಾ .
  • ಶಾತವಾಹನರ ಪ್ರಮುಖ ತೆರಿಗೆಗಳು - ದೆಯ , ಮೆಯ , ಭಾಗ , ಕರ
  • ರಾಜನನನ್ನು ತಾಯಿಯ ಹೆಸರಿನಿಂದ ಕರೆಯುವ ವಾಡಿಕೆಯನ್ನು ಇಟ್ಟು ಕೊಂಡಿದ್ದ ಅರಸರು - ಶಾತವಾಹನರು .
  • ಗ್ರೀಕರು ಹಾಗೂ ಶಕರಿಂದ ಪ್ರಭಾವಿತವಾದ ಶಾತವಾಹನರು ಟಂಕಿಸಿದ ಬೆಳ್ಳಿಯ ನಾಣ್ಯದ ಹೆಸರು - ಕಾರ್ಪಣ
  • ಶಾತವಾಹನರ ರಾಜಕುಮಾರ ಗುರುವಾಗಿದ್ದ ಜೈನರು - ಕಂದಕಂದಚಾರ್ಯ .
  • “ ಚತ್ಸುಸ್ಸಮಯ ಸಮುದ್ದರಣ “ ಎಂಬ ಕೀರ್ತಿಗೆ ಪಾತ್ರರಾದ ಅರಸರು - ಶಾತವಾಹನರು .
  • ತಾಳಗುಂದ ಅಗ್ರಹಾರದ ನಿರ್ಮಾತೃಗಳು - ಶಾತವಾಹನರು .
  • ಶಾತವಾಹನರ ಕಾಲದಲ್ಲಿ ಪ್ರಸಿದ್ದಿಯಲ್ಲಿದ್ದ ಲಿಪಿ - ಬ್ರಾಹ್ಮಿಲಿಪಿ .
  • ಜನಪ್ರಿಯತೆಯಲ್ಲಿ ರಾಮಯಾಣ ಮತ್ತು ಮಹಾ ಭಾರತಗಳಿಗೆ ಸರಿಸಮಾನವಾಗಿ ನಿಲ್ಲ ಬಲ್ಲ ಶಾತವಾಹನರ ಕಾಲದ ಕೃತಿ - ಬೃಹತ್ ಕಥಾ.

  • “ಕಾತಂತ್ರ “ ವ್ಯಾಕರಣ ಗ್ರಂಥದ ಕರ್ತೃ - ಸರ್ವಧರ್ಮ
  • ಶಾತವಾಹನರ ಕಾಲದ ಚೈತ್ಯಗಳು ವಿಹಾರಗಳು ಹಾಗೂ ಸ್ಥೂಪಗಳನ್ನು “ಶಿಲಾವಾಸ್ತುಶಿಲ್ಪ “ ಎಂದು ಕರೆದ ಯಾಂತ್ರಿಕ-ಪೆರ್ಸಿ ಬ್ರೌನ್ .
  • ಚೈತ್ಯ ಎಂದರೆ - ಪ್ರಾರ್ಥನಾ ಗೃಹ .
  • ಶಾತವಾಹನರ ಕಾಲದಲ್ಲಿ ಉಗಮವಾದ ಚಿತ್ರಕಲಾ ಶೈಲಿ - ಅಜಾಂತ ಚಿತ್ರ ಕಲಾ ಶೈಲಿ .
  • ವಿಹಾರ ಎಂದರೆ - ಬೌದ್ಧ ಬಿಕ್ಷುಗಳ ನಿವಾಸ .
  • ಸ್ಥೂಪ ಎಂದರೆ - ಬುದ್ಧನ ಯಾವುದಾದರೊಂದು ಅವಶೇಷಗಳ ಮೇಲೆ ನಿರ್ಮಾಣವಾದ ವೃತ್ತಾಕಾರದ ನಿರ್ಮಾಣ .
  • ಸಿಮುಖನು ಯಾವ ಸಂತತಿಯ ದೊರೆ, ಯಾರನ್ನು ಸೋಲಿಸಿ ಸಾಮ್ರಾಜ್ಯ ಸ್ಥಾಪಿಸಿದ -ಕಣ್ವ ಸಂತತಿಯ ಕೊನೆಯ ಅರಸ, ಸುಶರ್ಮ
  • ಶಾತವಾಹನರು ಈ ಜಾತಿಗೆ ಸೇರಿದವರು - ಬ್ರಾಹ್ಮಣ
  • ಶಾತವಾಹನರ ಮೂಲದ ಕುರಿತು ಮಾಹಿತಿ ನೀಡಿರುವ ಪುರಾಣಗಳು - ಮತ್ಸ್ಯ ಪುರಾಣ ವಿಷ್ಣು ಪುರಾಣ
  • ಶಾತವಾಹನರ ಕೊನೆಯ ಪ್ರಮುಖ ದೊರೆ - ಯಜ್ಞಶ್ರೀ ಶಾತಕರ್ಣಿ
  • ಶಾತವಾಹನರ ಕೊನೆಯ ದೊರೆ - ಎರಡನೇ ಪುಲಿಮಾಯಿ
  • ಸಿಮುಖನ ಆರಂಭದ ರಾಜಧಾನಿ - ಶ್ರೀ ಕಾಕುಲಂ
  • ಡಾ, ಭಂಡಾರ್ಕರ್ ರವರ ಪ್ರಕಾರ ಆಂಧ್ರದಲ್ಲಿನ ಶಾತವಾಹನರ ರಾಜಧಾನಿ - ಧಾನ್ಯಕಟಿಕಾ /ಧರಣಿಕೋಟೆ
  • ಶಾತವಾಹನರ ಸಾಹಿತಿ ದೊರೆ - ಹಾಲ
  • ದಖ್ಖನ್ ಭಾರತದಲ್ಲಿ ಮೊದಲು ನಾಣ್ಯಗಳನ್ನು ಟಂಕಿಸಿದ ಮನೆತನ - ಶಾತವಾಹನ
  • ಪ್ರೇಷ ಎಂಬ ಕೃತಿಯ ಕರ್ತೃ - ದ್ವಾದಸನ
  • ದಿ ಜಿಯೋಗ್ರಫಿ ಕೃತಿಯ ಕರ್ತೃ - ಟಾಲೆಮಿ
  • ಶಾತವಾಹನರ ಕುಲ ,ಯಶಸ್ಸು ಪ್ತತಿಷ್ಠಾಪನಾಕಾರ ಎಂಬ ಬಿರುದನ್ನು ಹೊಂದಿದ್ದ ದೊರೆ,- ಗೌತಮೀಪುತ್ರಶಾತಕರ್ಣಿ
  • ದಕ್ಷಿಣ ಪತಾಪತಿ ಎಂಬ ಬಿರುದನ್ನು ಹೊಂದಿದ್ದ ದೊರೆ - 1ನೇ ಶಾತಕರ್ಣಿ
  • ಇವರ ಮೊದಲ ಆಡಳಿತ ವಿಭಾಗ - ಆಹಾರ /ಪ್ರಾಂತ್ಯ
  • ಆಹಾರವನ್ನು ನೋಡಿಕೊಳ್ಳುತ್ತಿದ್ದವರು - ಅಮಾತ್ಯ

  • ಶಾತವಾಹನರ ಅತ್ಯಂತ ಕಿರಿಯ ಆಡಳಿತ ಘಟಕ - ಗ್ರಾಮ
  • ಇವರ ಕಾಲದ ಮುಖ್ಯ ಬಂದರುಗಳು - ಕಲ್ಯಾಣ, ಸೋಪಾರ, ಬಲಿಗಜ ,ಠಣಕ,
  • ವಿಹಾರವನ್ನು ಈ ಹೆಸರಿನಿಂದ ಕೆರೆಯುತ್ತಿದ್ದರು - ಸಂಘಾರಾಮ
  • ಕಾರ್ಲೇಯ ಚೈತ್ಯದ ನಿರ್ಮಾತೃ - ಭೂತಪಾಲಶೆಟ್ಟಿ
  • ಆಂಧ್ರದ ನಾಗಾರ್ಜುನಕೊಂಡದ ಪ್ರಸ್ತುತ ಹೆಸರು - ವಿಜಯಪುರಿ
  • ಶಾತವಾಹನ ಸಾಮ್ರಾಜ್ಯದ ಸ್ಥಾಪನೆಯಾದ ವರ್ಷ - ಕ್ರಿ.ಪೂ. 235
  • ಶಾತವಾಹನರ ನಂತರ ದ.ಭಾರತದಲ್ಲಿ ಪ್ರಸಿದ್ಧರಾದವರು - ಕದಂಬರು
  • ಇವರು ಈ ಧರ್ಮವನ್ನು ಅನುಸರಿಸಿದರು - ವೈದಿಕ ಧರ್ಮ
  • ಈ ಕಾಲದ ರಾಜ್ಯಗಳು ಇವರ ಆಡಳಿತದಲ್ಲಿತ್ತು - ಅಮಾತ್ಯ
  • ಮೊದಲ ಶಾತಕರ್ಣಿಯ ಪತ್ನಿಯ ಹೆಸರು - ನಾಗವಿಕ
  • ಮೊದಲ ಶಾತಕರ್ಣಿಯೊಂದಿಗೆ ಯುದ್ಧ ಮಾಡಿದ ಕಳಿಂಗ ಅರಸ - ಖಾರವೇಲ
  • ಗೌತಮೀಪುತ್ರ ಶಾತಕರ್ಣಿ ಶಾತವಾಹನರ - 23 ನೇ ಅರಸ
  • ಏಕಬ್ರಾಹ್ಮಣ , ಆಗಮನಿಲಯ ,ಏಕಶೂರ ,ಏಕಧನುರಾರ್ಧ ಎಂಬ ಬಿರುದನ್ನು ಹೊಂದಿದ ಶಾತವಾಹನ ದೊರೆ.- ಗೌತಮೀಪುತ್ರ ಶಾತಕರ್ಣಿ
  • ಕಾಂಬೋಜ ರಾಜ್ಯವನ್ನು ಸ್ಥಾಪಿಸಿದ ದೊರೆ - ಕೌಂಡಿನ್ಯ
  • ಮೌಕದಾನಿ ಶಾಸನದ ಕರ್ತೃ - ಮೂರನೇ ಪುಲುಮಾರು
  • ಇವರ ಕಾಲದಲ್ಲಿ ಚಿನ್ನದ ನಾಣ್ಯವನ್ನು ಈ ಹೆಸರಿನಿಂದ ಕರೆಯುತ್ತಿದ್ದರು - ಸುವರ್ಣ
  • ಕಾಮಸೂತ್ರದ ಕರ್ತೃ - ವಾತ್ಸಾಯನ ( ಸಂಸ್ಕೃತ ಕವಿ)
  • ಪ್ರಾಕೃತ ಭಾಷಾ ಇತಿಹಾಸದಲ್ಲಿ ಇವರ ಕಾಲ ಸುವರ್ಣಯುಗವಾಗಿದೆ. - ಶಾತವಾಹನರ
  • ಇವರ ಕಾಲದ ಸೇನಾ ಶಿಬಿರಗಳನ್ನು ಈ ಹೆಸರಿನಿಂದ ಕರೆಯಲಾಗಿದೆ. - ಕಟಕ
  • ಇವರ ಕಾಲದ ಪ್ರಮುಖ ಪ್ರಯಾಣಸಾಧನ - ಎತ್ತಿನಗಾಡಿ
  • ಕಾಲದಲ್ಲಿ ರಾಜ್ಯಾಡಳಿತದಲ್ಲಿ ಭಾಗವಹಿಸಿದ ಮಹಿಳೆಯರು -ಗೌತಮೀಬಾಲಶ್ರೀ, ನಾಗನಿಕ
  • ‘The Guide to Geography’ ಕೃತಿಯ ಕರ್ತೃ - ಟಾಲೆಮಿ
  • ಭಾರತದಲ್ಲಿ ಮೊಟ್ಟ ಮೊದಲ ಬಾರಿಗೆ ಭೂಮಿಯನ್ನು ದಾನವಾಗಿ ನೀಡಿದ ವಂಶ -ಶಾತವಾಹನರು
  • ಶಕಯವನ ಪಲ್ಲವ ನಿಸೂಧನ ಎಂಬ ಬಿರುದನ್ನು ಹೊಂದಿದವರು - ಗೌತಮೀಪುತ್ರ ಶಾತಕರ್ಣಿ
  • ಅಶೋಕನ ಈ ಶಾಸನದಲ್ಲಿ ಶಾತವಾಹನರು ಆಂಧ್ರ ಭೃತ್ಯರು ಎಂದು ಕರೆದಿದೆ. – 12 ನೇ ಶಾತವಾಹನ
  • ಅಶೋಕನ ಸಮಕಾಲೀನ ಶಾತವಾಹನ ದೊರೆ. - ಕೃಷಣ

  • ಇವರ ಕಾಲದ ಗ್ರಾಮಾಧಿಕಾರಿಗಳನ್ನು ಈ ಹೆಸರಿನಿಂದ ಕೆರಯುತ್ತಿದ್ದರು - ಮಹಾ ಆರ್ಯಕರು
  • ಶಾತವಾಹನ ಕಾಲದ ಉಗ್ರಾಣಾಧಿಕಾರಿಗಳು -ಭಂಡಾರಕರು
  • ಇವರ ಕಾಲದ ಹಣಕಾಸಿನ ಆಡಳಿತಾದಿಕಾರಿಗಳು - ಹಿರಣ್ಯಕರು
  • ಭೂ ದಾಖಲಾತಿ ಅಧಿಕಾರಿಗಳು -ನಿಬಂಧಕರು
  • ಇವರ ಸಮಾಜದಲ್ಲಿ ವಿಜೋತ್ತಮರೆಂದು ಕರೆಯಲ್ಪಡುತ್ತಿದ್ದವರು - ಬ್ರಾಹ್ಮಣರು .
  • ವರ್ಣ ಸಂತರ ಎಂದರೆ - ಶೂದ್ರರ ನಡುವಿನ ವಿವಾಹ ಸಂಬಧ ಶಾತವಾಹನರ ಚಿತ್ರಕಲೆಗೆ ಬೆಳಕು ಚೆಲ್ಲುವ ಕೃತಿ - ಕುಲ್ಲವಗ

No comments:

Post a Comment

If you have any doubts please let me know

ಪಿಡಿಎಫ್ ನೋಟ್ಸ್ ಗಳು ಡೌನ್‍ಲೋಡ್ ಆಗುತ್ತಿಲ್ಲವೇ? ಹಾಗಾದರೆ ಈ ವೀಡಿಯೋ ನೋಡಿ

Popular Posts

Facebook

Buy Products

ಪ್ರಚಲಿತ ಪೋಸ್ಟ್‌ಗಳು

Most Useful Notes

Labels

Buy Products

Random Posts

Buy Products

Most Useful Notes

Recent Posts

Useful PDF Notes

Important PDF Notes

Ads